ನಮಸ್ಕಾರ,

 

ಕನ್ನಡ ವಿಕಿಪೀಡಿಯಕ್ಕೆ ಹೊಸದಾಗಿ ಸದಸ್ಯರಾಗುವವರಿಗೆ ಸಹಾಯ ಮಾಡಲು ಟ್ಯಟೋರಿಯಲ್  
<https://commons.wikimedia.org/wiki/File:Wikipedia_Editing_Tutorial_Kannada.pdf>
 ಫೈಲ್ ಮತ್ತು  
<https://commons.wikimedia.org/wiki/Category:Learn_to_edit_Kannada_Wikipedia> 
ವೀಡಿಯೋಗಳು ಲಭ್ಯವಿವೆ. ಕನ್ನಡ ವಿಕಿಪೀಡಿಯ ಎಂದರೆ ಏನು ಎಂದು ವಿವರಿಸುವ  
<https://commons.wikimedia.org/wiki/File:Kannada_Wikipedia_Brochure.pdf> 
ಕರಪತ್ರವೂ ಇದೆ. ಈಗಾಗಲೇ ಇರುವ ಈ ಟ್ಯುಟೋರಿಯಲ್ ವೀಡಿಯೋಗಳು ಪರಿಪೂರ್ಣವಲ್ಲ.  
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%AF%E0%B3%8B%E0%B2%9C%E0%B2%A8%E0%B3%86/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF_%E0%B2%9F%E0%B3%8D%E0%B2%AF%E0%B3%81%E0%B2%9F%E0%B3%8B%E0%B2%B0%E0%B2%BF%E0%B2%AF%E0%B2%B2%E0%B3%8D_%E0%B2%B5%E0%B3%80%E0%B2%A1%E0%B2%BF%E0%B2%AF%E0%B3%8B_%E0%B2%A4%E0%B2%AF%E0%B2%BE%E0%B2%B0%E0%B2%BF>
 ಅವುಗಳನ್ನು ಉತ್ತಮ ಪಡಿಸಬೇಕಾಗಿದೆ. ಇಂಗ್ಲಿಶ್ ಭಾಷೆಯಲ್ಲಿ ಲಭ್ಯವಿರುವ ಹಲವು ಕಡತಗಳನ್ನು 
ಕನ್ನಡೀಕರಿಸಬೇಕಾಗಿದೆ. ಈ ವಿಷಯಗಳಲ್ಲಿ ಮುಂದುವರೆಯಲು ಸಮುದಾಯದ ಸಹಯೋಗ ಬೇಕಾಗಿದೆ. ಇನ್ನೂ ಯಾವ 
ಯಾವ ಕಡತಗಳು ಮತ್ತು ವೀಡಿಯೋಗಳು ಬೇಕಾಗಿವೆ ಎಂಬುದಾಗಿ ಸಮುದಾಯವು ಸೂಚಿಸಬೇಕು.


ಮೈಸೂರಿನಲ್ಲಿ ಚರ್ಚೆ ಮಾಡೋಣ


ಮೈಸೂರಿನಲ್ಲಿ ಜನವರಿ ೧೧, ೨೦೧೬ ರಿಂದ ೧೩, ೨೦೧೬ ರ ತನಕ ಸಂಪಾದನೋತ್ಸವ ನಡೆಯಲಿದೆ. ವಿವರಗಳು ಈ  
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%8B%E0%B2%A4%E0%B3%8D%E0%B2%B8%E0%B2%B5%E0%B2%97%E0%B2%B3%E0%B3%81/%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%8B%E0%B2%A4%E0%B3%8D%E0%B2%B8%E0%B2%B5_%E0%B2%AE%E0%B3%88%E0%B2%B8%E0%B3%82%E0%B2%B0%E0%B3%81>
 ಪುಟದಲ್ಲಿವೆ. ಆ ಪ್ರಯುಕ್ತ ನಾನು ಈ ಮೂರು ದಿನಗಳಲ್ಲಿ ಮೈಸೂರಿನಲ್ಲಿರುತ್ತೇನೆ. ಈ 
ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯಕ್ಕೆ ಅಗತ್ಯ ಸಹಾಯ ಕಡತ ಮತ್ತು ವೀಡಿಯೋಗಳ ತಯಾರಿ ಬಗ್ಗೆ ಚರ್ಚೆ 
ಮಾಡೋಣ. ನಾನು ಮಾನಸ ಗಂಗೋತ್ರಿಯಲ್ಲಿರುತ್ತೇನೆ. ದಯವಿಟ್ಟು ಅಲ್ಲಿಗೆ ಬಂದು ಸಲಹೆ ನೀಡಬೇಕಾಗಿ 
ವಿನಂತಿ. ಸಾಯಂಕಾಲ ೬ ಗಂಟೆಯ ನಂತರ ಬೇರೆ ಯಾವ ಸ್ಥಳದಲ್ಲಾದರೂ ಭೇಟಿ ಮಾಡಲು ನಾನು ಸಿದ್ಧ. 
ದಯವಿಟ್ಟು ಸಂಪರ್ಕಿಸಬೇಕಾಗಿ ವಿನಂತಿ.

 

ಇತಿ,

ಪವನಜ

_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to