ಆ ಕಾಲದಲ್ಲೇ ನಾವು ಹುಟ್ಟಬೇಕಾಗಿತ್ತು! ಈಗ ಸಹ ನಾವು ಮಾಡುವುದು ಬಹಳ ಇದೆ. ಮೊದಲು ಸ್ವಾರ್ಥ
ಬಿಡಬೇಕು !
On Feb 5, 2016 6:40 PM, "SUMA D S" <[email protected]> wrote:
>
> Amogavagide
>
> On Feb 5, 2016 5:20 PM, "Sowbhagya Ningaiah" <[email protected]>
wrote:
>>
>> Adbhutha amogha romanchana..... Dhanyavadagalu ......
>>
>> On Feb 5, 2016 11:32 AM, "vasu shyagoti" <[email protected]> wrote:
>>>
>>> ಅದ್ಭುತವಾಗಿದೆ ಸರ್...
>>> ತುಂಬಾ ಧನ್ಯವಾದಗಳು...
>>> ಓದುವಾಗಲೇ ರೋಮಾಂಚನವಾಗುತ್ತದೆ...
>>> ಇನ್ನು ನಾಟಕ ಮಾಡಿಸಿದರೆ,
>>> ತುಂಬಾ ಚೆನ್ನಾಗಿರುತ್ತದೆ....
>>> ಒಂದು ಅನುಮಾನ, ಆವಾಗ ಪೋಲೀಸರಿಗೆ ನಂಬರ್ ಕೊಡಲಾಗುತ್ತಿತ್ತಾ...?
>>>
>>> On 05-Feb-2016 11:00 am, "Mallikarjunagouda Patil" <[email protected]>
wrote:
>>>>
>>>> ಭಗತ್ ಸಿಂಗ್ ನಾಟಕ (No Copyrights! You have Right to copy!)
>>>>
>>>> ಪೊಲೀಸ್ ಅಧಿಕಾರಿ - ಭಗತ್ ಸಿಂಗ್ ಸಮಯ ಬಂತು
>>>>
>>>> ಭಗತ್ - ಒಂದ್ ನಿಮಿಷ ಜೈಲರ್ ಸಾಬ್, ಪುಸ್ತಕ ಒದ್ತಾ ಇದ್ದೀನಿ. ಒಬ್ಬ ಕ್ರಾಂತಿಕಾರಿ
ಇನ್ನೊಬ್ಬ ಕ್ರಾಂತಿಕಾರಿ ಬಗ್ಗೆ.
>>>>
>>>> ರಾಜಗುರು - ಓ ಭಗತ್
>>>>
>>>> ಭಗತ್ - ರಾಜಗುರು
>>>>
>>>> ರಾಜಗುರು - ಭಗತ್ ನಾಳೆ ಕೊಡಬೇಕಾಗಿರೋ ಗಲ್ಲು ಶಿಕ್ಷೆನಾ ಇವತ್ತೇ ಕೊಡ್ತಾ ಇದ್ದಾರೆ!
>>>>
>>>> ಸುಖದೇವ್ - ನಮ್ಮನ್ನ ಇನ್ನು ಒಂದು ದಿನ ಇಟ್ಟುಕೊಳ್ಳೋ ತಾಕತ್ತು ಈ ಬ್ರಿಟೀಷರಿಗೆ
ಇಲ್ಲಾ ಅಂತ ಕಾಣತ್ತೆ ಭಗತ್!
>>>>
>>>> ರಾಜಗುರು, ಸುಖದೇವ್ ಮತ್ತು ಭಗತ್ - ಹ ಹ ಹ.
>>>>
>>>> ಭಗತ್ - ಹುತಾತ್ಮರಾಗೋದಿಕ್ಕೆ ಅಂತಾ ಹೊರಟೋರಿಗೆ ನಾಳೆ ಆದ್ರೇನು ಇವತ್ತಾದ್ರೇನು?
ಎರಡೂ ಒಂದೇ. ನಡೀರಿ ನಡೀರಿ. ಚಿನ್ನದ ಕುಣಿಕೆಗಳು ನಮಗೋಸ್ಕರ ಕಾಯ್ತಾ ಇದ್ದಾವೆ.
>>>>
>>>> ಸುಖದೇವ್ ರಾಜಗುರು - ನಡೀ ಭಗತ್.
>>>>
>>>> ಪೊಲೀಸ್ ಆಧಿಕಾರಿ - ಒಂದು ನಿಮಿಷ.... ಕೈಕೋಳ ಹಾಕಿ.
>>>>
>>>> ರಾಜಗುರು ಸುಖದೇವ್ - ಏನು ಕೈಕೋಳನಾ? ಇವತ್ ಕೈಕೋಳ ಹಾಕ್ಕೊಳಲ್ಲ. ಇವತ್ ನಾವು
ಸಂಪೂರ್ಣ ಸ್ವತಂತ್ರವಾಗಿರಬೇಕು.
>>>>
>>>> ಭಗತ್ - ರಾಜಗುರು ಸುಖದೇವ್ ಇನ್ನು ಹತ್ತು ನಿಮಿಷ ಕಳೆದರೆ ನಮ್ ದೇಹದಿಂದ ಆತ್ಮಾನೇ
ಬೇರೆ ಆಗಿಬಿಡತ್ತಂತೆ ಅಂಥಾದ್ರಲ್ಲಿ ಇದ್ರಲ್ಲೆಲ್ಲಾ ಏನಿದೆ? ಹಾಕಿಸ್ಕೊಳ್ಳಿ ಹಾಕಿಸ್ಕೊಳ್ಳಿ.
>>>>
>>>> ರಾಜಗುರು ಸುಖದೇವ್ - ಹೂಂ ಹಾಕಿ ಹಾಕಿ..
>>>>
>>>> ಪೊಲಿಸ್ ಅಧಿಕಾರಿ - ಹೂಂ. ಹೋಗ್ಲಿ ಬಿಡಿ.  310 320 ನಡಿರಿ...
>>>>
>>>> ಪೊಲೀಸರು - ಎಸ್ ಸಾರ್.
>>>>
>>>> ಭಗತ್ ರಾಜಗುರು ಸುಖದೇವ್ ಮೂವರೂ - ತುಂಬಾ ಸಂತೋಷ ಆಯ್ತು ಜೈಲರ್ ಸಾಬ್.
>>>>
>>>> ಭಗತ್ - ರಾಜಗುರು ಸುಖದೇವ್. ಇವತ್ತು ನಾವು ಮೂವರು ನಮ್ಮ ದೇಶಕ್ಕೆ ರಂಗು ಕೊಡ್ಲಿಕ್ಕೆ
ಹೋಗ್ತಿದ್ದೀವಿ. ನಮ್ಮ ಭೂಮಿ ತಾಯಿಗೆ ಬಣ್ಣ ಕೊಡೋದಿಕ್ಕೆ ಹೋಗ್ತಾ ಇದ್ದೀವಿ. ಕ್ರಾಂತಿಕಾರಿ
ರಾಂ ಪ್ರಸಾದ್ ಬಿಸ್ಮಿಲ್ ಬರೆದಿರೋ ಕ್ರಾಂತಿಗೀತೆ ನಿಮಗೆ ಜ್ಞಾಪಕ ಇದೆ ಅಲ್ವಾ? ಮೇರಾ ರಂಗ್
ದೇ ಬಸಂತಿ ಚೋಲಾ.
>>>>
>>>> ಭಗತ್ ರಾಜಗುರು ಸುಖದೇವ್ ಮೂವರೂ - ಮೇರಾ ರಂಗ್ ದೇ ಬಸಂತಿ ಚೋಲಾ.
>>>> ( ಹಾಡು - ಮೇರಾ ರಂಗ್ ದೇ ಬಸಂತಿ ಚೋಲಾ.)
>>>>
>>>> ಭಗತ್ - ಜೈಲರ್ ಸಾಬ್ ನೀವು ತುಂಬಾ ಅದೃಷ್ಟವಂತರು!
>>>>
>>>> ಸುಖದೇವ್ - ಲಕ್ಕಿ!
>>>>
>>>> ರಾಜಗುರು - ವೆರಿ ಲಕ್ಕಿ!!
>>>>
>>>> ಪೊಲೀಸ್ ಅಧಿಕಾರಿ - ಯಾಕೆ? ನಾವ್ ಯಾಕೆ ಅದೃಷ್ಟವಂತರು?
>>>>
>>>> ಭಗತ್ ಸಿಂಗ್ - ಜೈಲರ್ ಸಾಬ್ ಜೈಲಿನ ಹೊರಗಡೆ ಸಾವಿರಾರು ಜನ, ದೇಶದಾದ್ಯಂತ ಲಕ್ಷಾಂತರ
ಜನ ನಾವು ಮೂರು ಜನ ದೇಶಕ್ಕೋಸ್ಕರ ಹೇಗೆ ನಗುನಗುತ್ತಾ ಪ್ರಾಣ ಕೊಡ್ತೀವಿ ಅಂತಾ ನೋಡೋದಕ್ಕೆ
ಕಾತರದಿಂದ ಕಾಯ್ತಾ ಇದ್ದಾರೆ. ಆದ್ರೆ ಅವರ್ಯಾರಿಗೂ ಆ ಭಾಗ್ಯ ಇಲ್ಲ. ನಿಮಗೆ ಮಾತ್ರ ನಾವು
ಮೂರು ಜನ ಕ್ರಾಂತಿಕಾರಿಗಳು ದೇಶಕ್ಕೋಸ್ಕರ ನಗು ನಗುತ್ತಾ ಉರುಳನ್ನ ಚುಂಬಿಸಿ ಕೊರಳಿಗೆ
ಹಾಕಿಕೊಳ್ಳೊದನ್ನ ಕಣ್ತುಂಬಾ ನೋಡೋ ಭಾಗ್ಯ ಸಿಕ್ಕಿದೆ. ಹೀಗಾಗಿ ನೀವು ಅದೃಷ್ಟವಂತರು!
>>>>
>>>> ಬ್ರಿಟೀಷ್ ಅಧಿಕಾರಿ - ಯು ಆಸ್ಕ್ ದೆಮ್. ವಾಟ್ ಈಸ್ ದೇಯರ್ ಅಲ್ಟಿಮೆಟ್ ಡಿಸೈರ್.
>>>>
>>>> ಪೊಲಿಸ್ ಅಧಿಕಾರಿ - ಭಗತ್ ಸಿಂಗ್ ರಾಜಗುರು ಸುಖದೇವ್ ನಿಮ್ ಕೊನೇ ಆಸೆ ಏನು ಅಂತಾ
ಕೇಳ್ಕೊಳ್ಳಿ.
>>>>
>>>> ಭಗತ್ ಸಿಂಗ್ - ಜೈಲರ್ ಸಾಬ್ ನಮ್ಮ ಮೊದಲ ಮತ್ತು ಕೊನೇ ಆಸೆ ಎರಡೂ ಒಂದೇ!
>>>>
>>>> ಸುಖದೇವ್ - ಅದು ನಮ್ ದೇಶಕ್ಕೆ ಸ್ವಾತಂತ್ರ್ಯ ಕೊಡಿಸೋದು.
>>>>
>>>> ರಾಜಗುರು - ಈ ಕೆಂಪು ಮೂತಿಯ ಕೋತಿಗಳನ್ನ ನಮ್ ದೇಶ ಬಿಟ್ಟು ಓಡಿಸೋದು!
>>>>
>>>> ಬ್ರಿಟೀಷ್ ಅಧಿಕಾರಿ - ವಾಟ್? ವಾಟ್ ದೆ ಟೆಲ್ಲಿಂಗ್?
>>>>
>>>> ಪೊಲೀಸ್ ಅಧಿಕಾರಿ - ನಥಿಂಗ್ ಸಾರ್ ನಥಿಂಗ್. ಭಗತ್ ಸಿಂಗ್ ಈ ರೀತಿಯ ಆಸೆಗಳನ್ನೆಲ್ಲಾ
ಈಡೇರಿಸೋಕಾಗಲ್ಲ. ಇದನ್ನ ಬಿಟ್ಟು ಬೇರೆ ಏನಾದ್ರೂ ಇದ್ರೆ ಕೇಳ್ಕೊಳ್ಳಿ!
>>>>
>>>> ಭಗತ್ - ಜೈಲರ್ ಸಾಬ್. ನೀವಿಷ್ಟೋಂದ್ ಪ್ರೀತಿಯಿಂದ ಕೊನೇ ಆಸೆ ಕೇಳ್ಕೊಳ್ಳಿ ಕೊನೇ ಆಸೆ
ಕೇಳ್ಕೊಳ್ಳಿ ಅಂತಾ ಕೇಳೋದ್ ನೋಡಿದ್ರೆ ನಂಗೆ ಕೊನೇ ಆಸೆ ಕೇಳ್ಕೊಳ್ಳಲೇ ಬೇಕು ಅನ್ನಿಸ್ತಿದೆ!
ಜೈಲರ್ ಸಾಬ್ ನಿಮ್ಮ ಬ್ರಿಟೀಷ್ ನ್ಯಾಯಾಲಯದ ಪ್ರಕಾರ ನಮ್ಮ ಮೂವರ ಮೇಲಿರೋದು ರಾಜದ್ರೋಹದ
ಆರೋಪ. ರಾಜದ್ರೋಹದ ಅಪರಾಧಕ್ಕೆ ಬ್ರಿಟನ್ ನಲ್ಲಿ ಕೊಡೋ ಶಿಕ್ಷೆ ಏನು?
>>>>
>>>> ರಾಜಗುರು - ಗುಂಡಿಟ್ಟು ಕೊಲ್ಲೋದು.
>>>>
>>>> ಭಗತ್ - ನಿಮಗೆ ತಾಕತ್ ಇದ್ರೆ ನಮಗೆ ಗುಂಡಿಟ್ಟು ಸಾಯಿಸಿ!!
>>>>
>>>> ಪೊಲೀಸ್ ಅಧಿಕಾರಿ - ಅಬ್ಭಾ! ಎಂಥಾ ದೇಶಭಕ್ತರು. ನಾನೂ ಬಾರತೀಯ ಇವರೂ ಭಾರತೀಯರು.
ಆದ್ರೆ ಎಂಥಾ ವ್ಯತ್ಯಾಸ? ದೇಶಕ್ಕೋಸ್ಕರ ಇವ್ರು ಗುಂಡು ಹೊಡೆಸಿಕೊಳ್ಳೋಕೂ
ಸಿಧ್ಧರಾಗಿದ್ದಾರೆ. ಆದ್ರೆ ನಾನು ಈ ಬ್ರಿಟೀಷರು ಕೊಡೋ ಸಂಬಳಕ್ಕೆ ಆಸೆ ಪಟ್ಟು ಇವರ
ಗುಲಾಮಗಿರಿ ಮಾಡ್ತಾ ಇದೀನಿ. ಛೇ ಛೇ.
>>>>
>>>> ಸುಖದೇವ್ - ಯೋಚನೆ ಮಾಡಬೇಡಿ ಜೈಲರ್ ಸಾಬ್. ನೀವು ನಿಮ್ಮ ಉಪ್ಪಿನ ಋಣ ತೀರ್ಸಿ. ನಾವ್
ನಮ್ಮ ಮಣ್ಣಿನ ಋಣ ತೀರಿಸ್ತೀವಿ.
>>>>
>>>> ಪೊಲೀಸ್ ಅಧಿಕಾರಿ - ಭಗತ್ ಸಿಂಗ್ ರಾಜಗುರು ಸುಖದೇವ್. ದಯವಿಟ್ಟು ಈ ಆಸೆ ಒಂದು
ಬಿಟ್ಟು ಬೇರೆ ಏನಾದ್ರೂ ಕೇಳ್ಕೊಳ್ಳಿ. ಅದನ್ನಾದ್ರೂ ಈಡೇರಿಸಿ ನನ್ ಪಾಪ ನಾನ್ ಕಡಿಮೆ
ಮಾಡ್ಕೋತೀನಿ.
>>>>
>>>> ರಾಜಗುರು - ಭಗತ್. ನಾವ್ ಮೂವರು ಒಟ್ಟಿಗೆ ಒಂದೇ ತಟ್ಟೆಲಿ ಊಟ ಮಾಡ್ತಾ ಇದ್ವಿ.
ಒಟ್ಟಿಗೆ ದೇಶದ್ ಕೆಲಸ ಮಾಡಿದ್ವಿ. ಈವತ್ತು ಸಾಯೋವಾಗ್ಲೂ ಒಟ್ಟಿಗೆ ಇದ್ದೀವಿ. ಆದ್ರೆ ಭಗತ್
ಸಾಯೋ ಮೊದ್ಲು ನಿನ್ನ ಒಂದೇ ಒಂದ್ ಸಾರಿ ತಬ್ಬಿಕೊಳ್ಳಬೇಕು ಅನ್ನಿಸ್ತಿದೆ ಕಣೋ.
>>>>
>>>> ಸುಖದೇವ್ - ಜೈಲರ್ ಸಾಬ್. ನಾವು ಮೂವರೂ ಒಬ್ಬರನ್ನೊಬ್ಬರು ಅಪ್ಪಿಕೊಳ್ಳಬೇಕು.
>>>>
>>>> ಪೊಲೀಸ್ ಅಧಿಕಾರಿ - ಹೂಂ
>>>>
>>>> (ಮೂವರೂ ತಬ್ಬಿಕೊಳ್ಳುತ್ತಾರೆ)
>>>>
>>>> ಭಗತ್ - ರಾಜಗುರು ನಿನ್ ಕಣ್ಣಲ್ಲಿ ನೀರು?
>>>>
>>>> ಸುಖದೇವ್ - ಸಾವಿಗೆ ಇಷ್ಟೋಂದ್ ಹೆದ್ರುಕೊಳ್ಳೋನು ದೇಶದ ಕೆಲಸಕ್ಕೆ ಯಾಕೋ ಬರಬೇಕಿತ್ತು?
>>>>
>>>> ರಾಜಗುರು - ಸುಖದೇವ್ ದುಡುಕಬೇಡ. ಇದು ಸಾವಿಗೆ ಹೆದರಿಕೊಂಡು ಬರ್ತಾ ಇರೋ
ಕಣ್ಣೀರಲ್ಲಾ. ದೇಶಕ್ಕೋಸ್ಕರ ಪ್ರಾಣ ಕೊಡ್ತಾ ಇದ್ದೀನಲ್ಲಾ ಅಂತಾ ಆನಂದಕ್ಕೆ ಬರ್ತಾ ಇರೋ
ಕಣ್ಣೀರು. ನಿನ್ನಂತಾ ಸ್ನೇಹಿತನ ಭಗತ್ ಸಿಂಗ್ ನಂಥಾ ದೇಶಭಕ್ತನ ಜೊತೆ ಒಟ್ಟಿಗೆ ಸಾಯೋ ಭಾಗ್ಯ
ಸಿಕ್ಕಿದಿಯಲ್ಲಾ ಆ ಸಂತೋಷಕ್ಕೆ ಬರ್ತಾ ಇರೋ ಕಣ್ಣೀರು.
>>>>
>>>> ಸುಖದೇವ್ - ರಾಜಗುರು! ನಂಗೊತ್ತು. ನೀನು ಸಾವಿಗೆ ಯಾವತ್ತೂ ಭಯ ಪಡಲ್ಲ ಅಂತ. ನೀನು
ಸಿಂಹ ಕಣೋ ನೀ ಸಿಂಹ. ಆದ್ರೆ ಗೆಳೆಯ ಸಾಯೋ ಕೊನೇ ಕ್ಷಣದಲ್ಲಿ ನಿನ್ ಕಣ್ಣಲ್ಲಿ ಕಣ್ಣೀರು
ನೋಡಿ ತಪ್ಪು ತಿಳಿದುಕೊಂಡು ಬಿಟ್ಟೆ. ನನ್ನ ಕ್ಷಮಿಸು ಗೆಳೆಯಾ.
>>>>
>>>> ಭಗತ್ - ಸುಖದೇವ್ ರಾಜಗುರು. ದೇಶಕ್ಕೋಸ್ಕರ ಪ್ರಾಣ ಕೊಡ್ಲಿಕ್ಕೆ ಅಂತ ಹೊರಟಿರೋ
ಕ್ರಾಂತಿಕಾರಿಗಳು ಯಾವತ್ತೂ ಕಣ್ಣೀರು ಹಾಕಬಾರದು. ಕಣ್ಣೀರ್ ಹಾಕಕೂಡದು.
>>>>
>>>> ರಾಜಗುರು - ಭಗತ್ ನಾವೇನೋ ಸತ್ ಹೋಗಿಬಿಡ್ತೀವಿ. ಸರಿ. ಆದ್ರೆ ನೀ ಸತ್ ಹೋದ್ರೆ, ನಮ್
ದೇಶಕ್ಕೆ ಸ್ವಾತಂತ್ರ್ಯ ಕೊಡಿಸೋದು ಯಾರು?
>>>>
>>>> ಭಗತ್ -  ಹ್ಹ ಹ್ಹ ಹ್ಹ. ರಾಜಗುರು. ನಾನೊಬ್ಬ ಸತ್ತ ಮಾತ್ರಕ್ಕೆ ಈ ದೇಶಕ್ಕೆ
ಸ್ವಾತಂತ್ರ್ಯ ಸಿಕ್ಕೋದಿಲ್ಲ ಅಂತ ತಿಳಿದುಕೊಂಡಿದ್ದೀಯೇನು? ಇಲ್ಲ. ನಮ್ಮ ಮೂವರನ್ನ
ನೇಣಿಗೇರಿಸಿ ಈ ಬ್ರಿಟೀಷ್ ಸಕರ್ಾರ ಸಾಧಿಸೋದೇನು ಇಲ್ಲ. ಬದಲಾಗಿ ನಾವು ಮೂರು ಜನ
ನಗುನಗುತ್ತಾ ಉರುಳನ್ನು ಚುಂಬಿಸಿ ಕೊರಳಿಗೆ ಹಾಕಿಕೊಳ್ಳೋದನ್ನ ನೋಡಿದ ಈ ದೇಶದ ತಾಯಂದಿರು
ಅವರ ಹೊಟ್ಟೆಯಲ್ಲಿ ಭಗತ್ ಸಿಂಗ್ ನಂಥಾ ಮಕ್ಕಳು ಹುಟ್ಟಲಿ, ರಾಜಗುರು ನಂಥಾ ಮಕ್ಕಳು
ಹುಟ್ಟಲಿ, ಸುಖದೇವ್ ನಂಥಾ ಮಕ್ಕಳು ಹುಟ್ಟಲಿ, ಅಂತಾ ಬಯಸುತ್ತಾರೆ. ಆನಂತರ ಅವರ ಹೊಟೇಲಿ
ಹುಟ್ಟೋ ಪ್ರತಿಯೊಂದು ಮಗು ಕೂಡಾ ಈ ಬ್ರಿಟೀಷರ ವಿರುದ್ಧ ಸಿಂಹದ ಥರಾ ಹೋರಾಡಿ ನಮ್ ದೇಶಕ್ಕೆ
ಸ್ವಾತಂತ್ರ್ಯ ಕೊಡಿಸುತ್ತೆ. ಸುಖದೇವ್, ಇವತ್ತು ನಮ್ ದೇಶದ ಜನರಿಗೆ ದೇಸಕ್ಕೋಸ್ಕರ ಹೇಗೆ
ಬದುಕಬೇಕು ಅಂತಾ ಗೊತ್ತಿಲ್ಲ. ದೇಶಕ್ಕೋಸ್ಕರ ಹೇಗೆ ಕೆಲಸ ಮಾಡಬೇಕು ಅಂತಾ ಗೊತ್ತಿಲ್ಲ.
ದೇಶಕ್ಕೋಸ್ಕರ ಹೇಗೆ ಪ್ರಾಣ ತ್ಯಾಗ ಮಾಡಬೇಕು ಅಂತ ಗೊತ್ತಿಲ್ಲ. ಎಲ್ಲರೂ ತಮ್ಮ ತಮ್ಮ
ಸ್ವಾರ್ಥದಲ್ಲಿ ಮುಳುಗಿ ಈ ಬ್ರಿಟೀಷರ ಪಾದಸೇವಕರಾಗಿ ಕೆಲಸ ಮಾಡ್ತಾ ಇದಾರೆ. ಸುಖದೇವ್
ಇವತ್ತು ಇವತ್ತು ನಾವು ಆ ಜನರಿಗೆ ದೇಶಕ್ಕೋಸ್ಕರ ಹೇಗೆ ನಗುನಗುತ್ತಾ ಪ್ರಾಣತ್ಯಾಗ ಮಾಡೋದು
ಆಂತ ತೋರಿಸಿಕೊಡೋಣ. ಒಂದ್ ಸಾರಿ ಈ ದೇಶದ ಜನ ಸಾವಿನ ಭಯವನ್ನು ಗೆದ್ರು ಅಂತ ಹೇಳಿದ್ರೆ
ಆನಂತರ ಈ ಬ್ರಿಟೀಷರನ್ನ ಎರಡು ನಿಮಿಷ ಕೂಡಾ ಈ ದೇಶದಲ್ಲಿ ಉಳಿಸಲ್ಲ. ಈ ಉದಾತ್ತ
ಉದ್ದೇಶಕ್ಕೋಸ್ಕರ ನಾವ್ ಪ್ರಾಣತ್ಯಾಗ ಮಾಡ್ಲೇಬೇಕು ಸುಖದೇವ್. ಮಾಡಲೇಬೇಕು ರಾಜಗುರು.
>>>>
>>>> ಸುಖದೇವ್ - ಭಗತ್ ನೀ ಹೇಳಿದ್ದು ನಿಜ. ಈವತ್ತು ನಾವು ದೇಶಕ್ಕೋಸ್ಕರ ಪ್ರಾನ ಕೊಡ್ತಾ
ಒಂದು ಒಳ್ಳೇ ಕೆಲಸ ಮಾಡ್ತಾ ಇದ್ದೀವಿ ನಿಜ. ಆದ್ರೆ ಮುಂದಿನ ಜನ್ಮ ಅಂತ ಒಂದಿದ್ರೆ ಮತ್ತೆ
ಇದೇ ಮಣ್ಣಲ್ಲಿ ಹುಟ್ಟಿ ಈ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ನಮ್ ದೇಶಕ್ಕೆ ಸ್ವಾತಂತ್ರ್ಯ
ಕೊಡಿಸೋಣ.
>>>>
>>>> ಬ್ರಿಟೀಷ್ ಅಧಿಕಾರಿ - ಓಕೆ ಓಕೆ ಟೈಮ್ ಅಪ್ ಟೈಮ್ ಅಪ್.
>>>>
>>>> ಪೊಲೀಸ್ ಅಧಿಕಾರಿ - 310 320.
>>>>
>>>> ಬ್ರಿಟೀಷ್ ಅಧಿಕಾರಿ - ಟೂ ಮಿನಿಟ್ಸ್ ಮೋರ್
>>>>
>>>> ಸುಖದೇವ್ - ಭಗತ್ ನೆನ್ನೆ ನಿಮ್ ತಾಯಿ ಹೇಳಿದ್ ಮಾತು ಜ್ಞಾಪಕದಲ್ಲಿದಿಯಾ?
>>>>
>>>> ಭಗತ್ - ಅದ್ ಹ್ಯಾಗ್ ಮರಿಯಕಾಗತ್ತೆ ಸುಖದೇವ್. ನೆನ್ನೆ ನಮ್ ತಾಯಿ ನನ್ನ ನೋಡೋಕೆ ಅಂತ
ಜೈಲಿಗೆ ಬಂದಿದ್ದರು. ಆಕೆ ನನ್ನನ್ನ ನೋಡಿದ್ ತಕ್ಷಣ ಕಣ್ಣಲ್ಲಿ ನೀರ್ ತುಂಬಿಕೊಂಡು
ಹೇಳಿದ್ಲು. "ಮಗೂ ಭಗತ್. ಇಷ್ಟು ಚಿಕ್ಕ ವಯಸ್ಸಿಗೇ ದೇಶ ದೇಶ ಅಂತ ಹೇಳ್ತಾ ಪ್ರಾನ ಕೊಡೋ
ಸ್ಥಿತಿಗೆ ಬಂದ್ ಬಿಟ್ಯಲ್ಲೋ. ನಿನ್ನನ್ನ ನಾನು ಮದುವೆ ಮಾಡಿ ಮದುವೆ ದಿಬ್ಬಣದಲ್ಲಿ ನೋಡಬೇಕು
ಅಂತ ಅಸೆಪಟ್ಟಿದ್ದೆ ಆದ್ರೆ ಇವತ್ತು ನೀನು ಸಾಯೋದನ್ನ ನೋಡಬೇಕಾದ ಪರಿಸ್ಥಿತಿ
ಬಂದುಬಿಡ್ತಲ್ಲೋ" ಅಂತ ಕಣ್ಣಿರು ಹಾಕಿದ್ಲು. ಆಗ ನಾನು ನನ್ ತಾಯಿಗೆ ಹೇಳಿದೆ. " ಅಮ್ಮಾ.
ನಿನ್ ಮಗ ಭಗತ್ ಸಿಂಗ್ ಯಾವ್ದೋ ಕಳ್ಳತನ ಮಾಡಿ ಯಾವ್ದೋ ದರೋಡೆ ಮಾಡಿ ನೇಣು ಶಿಕ್ಷೆಗೆ ಗುರು
ಆಗಿಲ್ಲ. ನಿನ್ ಮಗ ಭಗತ್ ಸಿಂಗ್ ದೇಶದ ಸ್ವಾತಂತ್ರ್ಯಕ್ಕೋಸ್ಕರ ಬ್ರಿಟೀಷರನ್ನ ಈ ದೇಶದಿಂದ
ಹೊರಗೆ ಓಡಿಸಬೇಕು ಅನ್ನೋ ಉದಾತ್ತ ಉದ್ದೇಶಕ್ಕೋಸ್ಕರ ಪ್ರಾಣ ಕೊಡ್ತಾ ಇದ್ದಾನೆ. ಸತ್ತ ನಂತರ
ನಿನ್ನ ಮಗ ಜನರ ಕಣ್ಣಲ್ಲಿ ಹುತಾತ್ಮ. ಅಮ್ಮಾನಾನ್ ನಿಧರ್ಾರ ಮಾಡಿಕೊಂಡಿದ್ದೀನಿ ಸಾಯೋ ಕೊನೇ
ಕ್ಷಣದಲ್ಲೂ ನನ್ನ ಕಣ್ಣಲ್ಲಿ ಕಿಂಚಿತ್ತೂ ಭಯವನ್ನು ಈ ಆಂಗ್ಲರು ನೋಡಲಾರರು. ಆದ್ರೆ ಅಮ್ಮಾ
ನೀನು ಹೀಗೆ ಕಣ್ಣಿರು ಹಾಕ್ತಾ ಇರೋದನ್ನ ನೋಡಿ ಈವಾಗ್ಲೇನೋ ನಾ ತಡೆದುಕೊಂಡುಬಿಡಬಲ್ಲೆ.
ಆದ್ರೆ ನಾಳೆ ಗಲ್ಲಿಗೇರೋ ಕೊನೇ ಕ್ಷಣದಲ್ಲಿ ಕಣ್ಣಿರು ತುಂಬಿದ ನಿನ್ನ ಮುಖ ನನ್ನ
ನೆನಪಿಗೇನಾದ್ರೂ ಬಂದುಬಿಟ್ರೆ ಆಗ ನನ್ನ ಕೈಲಿ ತಡೆದುಕೊಳ್ಳೋಕಾಗಲ್ಲ ಅಮ್ಮಾ. ಒಂದ್ ವೇಳೆ ನಾ
ಆಗ ಕಣ್ಣಿರ್ ಹಾಕಿಬಿಟ್ರೆ ಈ ಪಾಫಿ ಬ್ರಿಟೀಷರು ಹೇಳ್ತಾರೆ. ನೋಡ್ರೀ. ಭಗತ್ ಸಿಂಗ್ ಸಾವಿಗೆ
ಭಯಪಟ್ಟು ಕಣ್ಣಿರು ಹಾಕ್ತಾ ಇದ್ದಾನೆ. ಸಾಯೋ ಕಾಲಕ್ಕೆ ಈ ಕ್ರಾಂತಿಕಾರಿ ಹೇಡಿ ಆಗ್ಬಿಟ್ಟ
ಅಂತ. ಅಮ್ಮಾ ಹುತಾತ್ಮನಾಗಲಿಕ್ಕೆ ಅಂತ ಹೊರಟಿರೋ ನಿನ್ನ ಮಗ ಹೇಡಿ ಅನ್ನಿಸಿಕೊಳ್ಳೊದು ನಿಂಗೆ
ಇಷ್ಟ ಏನಮ್ಮಾ ?" ಅಂತ. ನನ್ ತಾಯಿ ಹೇಳಿದ್ಲು " ಮಗೂ ಭಗತ್ ನಾ ನಿನ್ನ ತುಂಬಾ ಚಿಕ್ ಹುಡುಗ
ಅನ್ಕೊಂಬಿಟ್ಟಿದ್ದೆ. ಆದ್ರೆ ನೀ ಚಿಕ್ ಹುಡುಗ ಅಲ್ಲ ದೇಶಕ್ಕೋಸ್ಕರ ಪ್ರಾನತ್ಯಾಗ
ಮಾಡೋದಿಕ್ಕೆ ಅಂತ ಹೊರಟಿರೋ ಹುತಾತ್ಮ. ನಾನು ಕಣ್ಣಿರು ಹಾಕಿ ನಿನ್ನ ಹುತಾತ್ಮ ಪಟ್ಟಕ್ಕೆ
ಅಡ್ಡಿಬರಲ್ಲ. ನಾನು ನಿನಗೆ ಮಾತು ಕೊಡ್ತೀನಿ ನೀನು ಸತ್ತ ನಂತರವೂ ನನ್ನ ಕಣ್ಣಲ್ಲಿ ಒಂದು
ತೊಟ್ಟು ನೀರು ಬರಲ್ಲ. ಆದ್ರೆ ನೀ ನಂಗೊಂದು ಮಾತು ಕೊಡಬೇಕು. ನಾಳೆ ಸಾಯೊ ಕೊನೇ ಕ್ಷಣದಲ್ಲಿ
ನೀವು ಮೂವರ ಬಾಯಲ್ಲಿ ಬರಬೇಕಾದ ಕಡೆಯ ಶಬ್ದ .. ವಂದೇ ಮಾತರಂ ಆಗಿರಬೇಕು.
>>>>
>>>> ರಾಜಗುರು - ಇನ್ಕಿಲಾಬ್ ಜಿಂದಾಬಾದ್
>>>>
>>>> ಸುಖದೇವ್ - ಭಾರತ್ ಮಾತಾ ಕೀ ಜೈ
>>>>
>>>> ಭಗತ್ - ವಂದೇ ಮಾತರಂ.
>>>>
>>>> --
>>>> *For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
an email to [email protected].
>>>> To post to this group, send email to [email protected].
>>>> Visit this group at https://groups.google.com/group/kannadastf.
>>>> To view this discussion on the web, visit
https://groups.google.com/d/msgid/kannadastf/CAOM04w%2BpnwLpYD%3D_UkmP5vw%2BWenADYVhWN5%3Dif3fE%3DERqf9K_A%40mail.gmail.com
.
>>>> For more options, visit https://groups.google.com/d/optout.
>>>
>>> --
>>> *For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
an email to [email protected].
>>> To post to this group, send email to [email protected].
>>> Visit this group at https://groups.google.com/group/kannadastf.
>>> To view this discussion on the web, visit
https://groups.google.com/d/msgid/kannadastf/CALEc3K%3D9bLMytp6Q%2B39cLX4xO2JhJkYqa_6yEX1U5sDSttciCg%40mail.gmail.com
.
>>> For more options, visit https://groups.google.com/d/optout.
>>
>> --
>> *For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google
Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send
an email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit
https://groups.google.com/d/msgid/kannadastf/CALp-oSvf-OpFNkS-p4ueZ8JVGNO-R_%3DE6nKJ13wk%2BiKOMGZe4g%40mail.gmail.com
.
>> For more options, visit https://groups.google.com/d/optout.
>
> --
> *For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
https://groups.google.com/d/msgid/kannadastf/CAHaa2KOfDspJC%3DsxKT0oaEerrTDPr_wmrYzup9Pyb3KgUrTcaw%40mail.gmail.com
.
>
> For more options, visit https://groups.google.com/d/optout.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAK671iTLAfK%3DjkDpuFVpHqS7T9-Bf-1nfieajnjVFMBSMT3-%3DQ%40mail.gmail.com.
For more options, visit https://groups.google.com/d/optout.

Reply via email to