ಜೈ ಭಗತ್ On Feb 6, 2016 4:36 PM, "guruiv naik" <[email protected]> wrote:
> ನಿಮ್ಮ ಶ್ರಮಕ್ಕೆ ನಮಸ್ಕಾರ > On 5 Feb 2016 11:00 a.m., "Mallikarjunagouda Patil" <[email protected]> > wrote: > >> ಭಗತ್ ಸಿಂಗ್ ನಾಟಕ (No Copyrights! You have Right to copy!) >> >> ಪೊಲೀಸ್ ಅಧಿಕಾರಿ - ಭಗತ್ ಸಿಂಗ್ ಸಮಯ ಬಂತು >> >> ಭಗತ್ - ಒಂದ್ ನಿಮಿಷ ಜೈಲರ್ ಸಾಬ್, ಪುಸ್ತಕ ಒದ್ತಾ ಇದ್ದೀನಿ. ಒಬ್ಬ ಕ್ರಾಂತಿಕಾರಿ >> ಇನ್ನೊಬ್ಬ ಕ್ರಾಂತಿಕಾರಿ ಬಗ್ಗೆ. >> >> ರಾಜಗುರು - ಓ ಭಗತ್ >> >> ಭಗತ್ - ರಾಜಗುರು >> >> ರಾಜಗುರು - ಭಗತ್ ನಾಳೆ ಕೊಡಬೇಕಾಗಿರೋ ಗಲ್ಲು ಶಿಕ್ಷೆನಾ ಇವತ್ತೇ ಕೊಡ್ತಾ ಇದ್ದಾರೆ! >> >> ಸುಖದೇವ್ - ನಮ್ಮನ್ನ ಇನ್ನು ಒಂದು ದಿನ ಇಟ್ಟುಕೊಳ್ಳೋ ತಾಕತ್ತು ಈ ಬ್ರಿಟೀಷರಿಗೆ ಇಲ್ಲಾ >> ಅಂತ ಕಾಣತ್ತೆ ಭಗತ್! >> >> ರಾಜಗುರು, ಸುಖದೇವ್ ಮತ್ತು ಭಗತ್ - ಹ ಹ ಹ. >> >> ಭಗತ್ - ಹುತಾತ್ಮರಾಗೋದಿಕ್ಕೆ ಅಂತಾ ಹೊರಟೋರಿಗೆ ನಾಳೆ ಆದ್ರೇನು ಇವತ್ತಾದ್ರೇನು? ಎರಡೂ >> ಒಂದೇ. ನಡೀರಿ ನಡೀರಿ. ಚಿನ್ನದ ಕುಣಿಕೆಗಳು ನಮಗೋಸ್ಕರ ಕಾಯ್ತಾ ಇದ್ದಾವೆ. >> >> ಸುಖದೇವ್ ರಾಜಗುರು - ನಡೀ ಭಗತ್. >> >> ಪೊಲೀಸ್ ಆಧಿಕಾರಿ - ಒಂದು ನಿಮಿಷ.... ಕೈಕೋಳ ಹಾಕಿ. >> >> ರಾಜಗುರು ಸುಖದೇವ್ - ಏನು ಕೈಕೋಳನಾ? ಇವತ್ ಕೈಕೋಳ ಹಾಕ್ಕೊಳಲ್ಲ. ಇವತ್ ನಾವು ಸಂಪೂರ್ಣ >> ಸ್ವತಂತ್ರವಾಗಿರಬೇಕು. >> >> ಭಗತ್ - ರಾಜಗುರು ಸುಖದೇವ್ ಇನ್ನು ಹತ್ತು ನಿಮಿಷ ಕಳೆದರೆ ನಮ್ ದೇಹದಿಂದ ಆತ್ಮಾನೇ ಬೇರೆ >> ಆಗಿಬಿಡತ್ತಂತೆ ಅಂಥಾದ್ರಲ್ಲಿ ಇದ್ರಲ್ಲೆಲ್ಲಾ ಏನಿದೆ? ಹಾಕಿಸ್ಕೊಳ್ಳಿ ಹಾಕಿಸ್ಕೊಳ್ಳಿ. >> >> ರಾಜಗುರು ಸುಖದೇವ್ - ಹೂಂ ಹಾಕಿ ಹಾಕಿ.. >> >> ಪೊಲಿಸ್ ಅಧಿಕಾರಿ - ಹೂಂ. ಹೋಗ್ಲಿ ಬಿಡಿ. 310 320 ನಡಿರಿ... >> >> ಪೊಲೀಸರು - ಎಸ್ ಸಾರ್. >> >> ಭಗತ್ ರಾಜಗುರು ಸುಖದೇವ್ ಮೂವರೂ - ತುಂಬಾ ಸಂತೋಷ ಆಯ್ತು ಜೈಲರ್ ಸಾಬ್. >> >> ಭಗತ್ - ರಾಜಗುರು ಸುಖದೇವ್. ಇವತ್ತು ನಾವು ಮೂವರು ನಮ್ಮ ದೇಶಕ್ಕೆ ರಂಗು ಕೊಡ್ಲಿಕ್ಕೆ >> ಹೋಗ್ತಿದ್ದೀವಿ. ನಮ್ಮ ಭೂಮಿ ತಾಯಿಗೆ ಬಣ್ಣ ಕೊಡೋದಿಕ್ಕೆ ಹೋಗ್ತಾ ಇದ್ದೀವಿ. ಕ್ರಾಂತಿಕಾರಿ >> ರಾಂ ಪ್ರಸಾದ್ ಬಿಸ್ಮಿಲ್ ಬರೆದಿರೋ ಕ್ರಾಂತಿಗೀತೆ ನಿಮಗೆ ಜ್ಞಾಪಕ ಇದೆ ಅಲ್ವಾ? ಮೇರಾ ರಂಗ್ >> ದೇ ಬಸಂತಿ ಚೋಲಾ. >> >> ಭಗತ್ ರಾಜಗುರು ಸುಖದೇವ್ ಮೂವರೂ - ಮೇರಾ ರಂಗ್ ದೇ ಬಸಂತಿ ಚೋಲಾ. >> ( ಹಾಡು - ಮೇರಾ ರಂಗ್ ದೇ ಬಸಂತಿ ಚೋಲಾ.) >> >> ಭಗತ್ - ಜೈಲರ್ ಸಾಬ್ ನೀವು ತುಂಬಾ ಅದೃಷ್ಟವಂತರು! >> >> ಸುಖದೇವ್ - ಲಕ್ಕಿ! >> >> ರಾಜಗುರು - ವೆರಿ ಲಕ್ಕಿ!! >> >> ಪೊಲೀಸ್ ಅಧಿಕಾರಿ - ಯಾಕೆ? ನಾವ್ ಯಾಕೆ ಅದೃಷ್ಟವಂತರು? >> >> ಭಗತ್ ಸಿಂಗ್ - ಜೈಲರ್ ಸಾಬ್ ಜೈಲಿನ ಹೊರಗಡೆ ಸಾವಿರಾರು ಜನ, ದೇಶದಾದ್ಯಂತ ಲಕ್ಷಾಂತರ ಜನ >> ನಾವು ಮೂರು ಜನ ದೇಶಕ್ಕೋಸ್ಕರ ಹೇಗೆ ನಗುನಗುತ್ತಾ ಪ್ರಾಣ ಕೊಡ್ತೀವಿ ಅಂತಾ ನೋಡೋದಕ್ಕೆ >> ಕಾತರದಿಂದ ಕಾಯ್ತಾ ಇದ್ದಾರೆ. ಆದ್ರೆ ಅವರ್ಯಾರಿಗೂ ಆ ಭಾಗ್ಯ ಇಲ್ಲ. ನಿಮಗೆ ಮಾತ್ರ ನಾವು >> ಮೂರು ಜನ ಕ್ರಾಂತಿಕಾರಿಗಳು ದೇಶಕ್ಕೋಸ್ಕರ ನಗು ನಗುತ್ತಾ ಉರುಳನ್ನ ಚುಂಬಿಸಿ ಕೊರಳಿಗೆ >> ಹಾಕಿಕೊಳ್ಳೊದನ್ನ ಕಣ್ತುಂಬಾ ನೋಡೋ ಭಾಗ್ಯ ಸಿಕ್ಕಿದೆ. ಹೀಗಾಗಿ ನೀವು ಅದೃಷ್ಟವಂತರು! >> >> ಬ್ರಿಟೀಷ್ ಅಧಿಕಾರಿ - ಯು ಆಸ್ಕ್ ದೆಮ್. ವಾಟ್ ಈಸ್ ದೇಯರ್ ಅಲ್ಟಿಮೆಟ್ ಡಿಸೈರ್. >> >> ಪೊಲಿಸ್ ಅಧಿಕಾರಿ - ಭಗತ್ ಸಿಂಗ್ ರಾಜಗುರು ಸುಖದೇವ್ ನಿಮ್ ಕೊನೇ ಆಸೆ ಏನು ಅಂತಾ >> ಕೇಳ್ಕೊಳ್ಳಿ. >> >> ಭಗತ್ ಸಿಂಗ್ - ಜೈಲರ್ ಸಾಬ್ ನಮ್ಮ ಮೊದಲ ಮತ್ತು ಕೊನೇ ಆಸೆ ಎರಡೂ ಒಂದೇ! >> >> ಸುಖದೇವ್ - ಅದು ನಮ್ ದೇಶಕ್ಕೆ ಸ್ವಾತಂತ್ರ್ಯ ಕೊಡಿಸೋದು. >> >> ರಾಜಗುರು - ಈ ಕೆಂಪು ಮೂತಿಯ ಕೋತಿಗಳನ್ನ ನಮ್ ದೇಶ ಬಿಟ್ಟು ಓಡಿಸೋದು! >> >> ಬ್ರಿಟೀಷ್ ಅಧಿಕಾರಿ - ವಾಟ್? ವಾಟ್ ದೆ ಟೆಲ್ಲಿಂಗ್? >> >> ಪೊಲೀಸ್ ಅಧಿಕಾರಿ - ನಥಿಂಗ್ ಸಾರ್ ನಥಿಂಗ್. ಭಗತ್ ಸಿಂಗ್ ಈ ರೀತಿಯ ಆಸೆಗಳನ್ನೆಲ್ಲಾ >> ಈಡೇರಿಸೋಕಾಗಲ್ಲ. ಇದನ್ನ ಬಿಟ್ಟು ಬೇರೆ ಏನಾದ್ರೂ ಇದ್ರೆ ಕೇಳ್ಕೊಳ್ಳಿ! >> >> ಭಗತ್ - ಜೈಲರ್ ಸಾಬ್. ನೀವಿಷ್ಟೋಂದ್ ಪ್ರೀತಿಯಿಂದ ಕೊನೇ ಆಸೆ ಕೇಳ್ಕೊಳ್ಳಿ ಕೊನೇ ಆಸೆ >> ಕೇಳ್ಕೊಳ್ಳಿ ಅಂತಾ ಕೇಳೋದ್ ನೋಡಿದ್ರೆ ನಂಗೆ ಕೊನೇ ಆಸೆ ಕೇಳ್ಕೊಳ್ಳಲೇ ಬೇಕು ಅನ್ನಿಸ್ತಿದೆ! >> ಜೈಲರ್ ಸಾಬ್ ನಿಮ್ಮ ಬ್ರಿಟೀಷ್ ನ್ಯಾಯಾಲಯದ ಪ್ರಕಾರ ನಮ್ಮ ಮೂವರ ಮೇಲಿರೋದು ರಾಜದ್ರೋಹದ >> ಆರೋಪ. ರಾಜದ್ರೋಹದ ಅಪರಾಧಕ್ಕೆ ಬ್ರಿಟನ್ ನಲ್ಲಿ ಕೊಡೋ ಶಿಕ್ಷೆ ಏನು? >> >> ರಾಜಗುರು - ಗುಂಡಿಟ್ಟು ಕೊಲ್ಲೋದು. >> >> ಭಗತ್ - ನಿಮಗೆ ತಾಕತ್ ಇದ್ರೆ ನಮಗೆ ಗುಂಡಿಟ್ಟು ಸಾಯಿಸಿ!! >> >> ಪೊಲೀಸ್ ಅಧಿಕಾರಿ - ಅಬ್ಭಾ! ಎಂಥಾ ದೇಶಭಕ್ತರು. ನಾನೂ ಬಾರತೀಯ ಇವರೂ ಭಾರತೀಯರು. ಆದ್ರೆ >> ಎಂಥಾ ವ್ಯತ್ಯಾಸ? ದೇಶಕ್ಕೋಸ್ಕರ ಇವ್ರು ಗುಂಡು ಹೊಡೆಸಿಕೊಳ್ಳೋಕೂ ಸಿಧ್ಧರಾಗಿದ್ದಾರೆ. >> ಆದ್ರೆ ನಾನು ಈ ಬ್ರಿಟೀಷರು ಕೊಡೋ ಸಂಬಳಕ್ಕೆ ಆಸೆ ಪಟ್ಟು ಇವರ ಗುಲಾಮಗಿರಿ ಮಾಡ್ತಾ ಇದೀನಿ. >> ಛೇ ಛೇ. >> >> ಸುಖದೇವ್ - ಯೋಚನೆ ಮಾಡಬೇಡಿ ಜೈಲರ್ ಸಾಬ್. ನೀವು ನಿಮ್ಮ ಉಪ್ಪಿನ ಋಣ ತೀರ್ಸಿ. ನಾವ್ >> ನಮ್ಮ ಮಣ್ಣಿನ ಋಣ ತೀರಿಸ್ತೀವಿ. >> >> ಪೊಲೀಸ್ ಅಧಿಕಾರಿ - ಭಗತ್ ಸಿಂಗ್ ರಾಜಗುರು ಸುಖದೇವ್. ದಯವಿಟ್ಟು ಈ ಆಸೆ ಒಂದು ಬಿಟ್ಟು >> ಬೇರೆ ಏನಾದ್ರೂ ಕೇಳ್ಕೊಳ್ಳಿ. ಅದನ್ನಾದ್ರೂ ಈಡೇರಿಸಿ ನನ್ ಪಾಪ ನಾನ್ ಕಡಿಮೆ ಮಾಡ್ಕೋತೀನಿ. >> >> ರಾಜಗುರು - ಭಗತ್. ನಾವ್ ಮೂವರು ಒಟ್ಟಿಗೆ ಒಂದೇ ತಟ್ಟೆಲಿ ಊಟ ಮಾಡ್ತಾ ಇದ್ವಿ. ಒಟ್ಟಿಗೆ >> ದೇಶದ್ ಕೆಲಸ ಮಾಡಿದ್ವಿ. ಈವತ್ತು ಸಾಯೋವಾಗ್ಲೂ ಒಟ್ಟಿಗೆ ಇದ್ದೀವಿ. ಆದ್ರೆ ಭಗತ್ ಸಾಯೋ >> ಮೊದ್ಲು ನಿನ್ನ ಒಂದೇ ಒಂದ್ ಸಾರಿ ತಬ್ಬಿಕೊಳ್ಳಬೇಕು ಅನ್ನಿಸ್ತಿದೆ ಕಣೋ. >> >> ಸುಖದೇವ್ - ಜೈಲರ್ ಸಾಬ್. ನಾವು ಮೂವರೂ ಒಬ್ಬರನ್ನೊಬ್ಬರು ಅಪ್ಪಿಕೊಳ್ಳಬೇಕು. >> >> ಪೊಲೀಸ್ ಅಧಿಕಾರಿ - ಹೂಂ >> >> (ಮೂವರೂ ತಬ್ಬಿಕೊಳ್ಳುತ್ತಾರೆ) >> >> ಭಗತ್ - ರಾಜಗುರು ನಿನ್ ಕಣ್ಣಲ್ಲಿ ನೀರು? >> >> ಸುಖದೇವ್ - ಸಾವಿಗೆ ಇಷ್ಟೋಂದ್ ಹೆದ್ರುಕೊಳ್ಳೋನು ದೇಶದ ಕೆಲಸಕ್ಕೆ ಯಾಕೋ ಬರಬೇಕಿತ್ತು? >> >> ರಾಜಗುರು - ಸುಖದೇವ್ ದುಡುಕಬೇಡ. ಇದು ಸಾವಿಗೆ ಹೆದರಿಕೊಂಡು ಬರ್ತಾ ಇರೋ ಕಣ್ಣೀರಲ್ಲಾ. >> ದೇಶಕ್ಕೋಸ್ಕರ ಪ್ರಾಣ ಕೊಡ್ತಾ ಇದ್ದೀನಲ್ಲಾ ಅಂತಾ ಆನಂದಕ್ಕೆ ಬರ್ತಾ ಇರೋ ಕಣ್ಣೀರು. >> ನಿನ್ನಂತಾ ಸ್ನೇಹಿತನ ಭಗತ್ ಸಿಂಗ್ ನಂಥಾ ದೇಶಭಕ್ತನ ಜೊತೆ ಒಟ್ಟಿಗೆ ಸಾಯೋ ಭಾಗ್ಯ >> ಸಿಕ್ಕಿದಿಯಲ್ಲಾ ಆ ಸಂತೋಷಕ್ಕೆ ಬರ್ತಾ ಇರೋ ಕಣ್ಣೀರು. >> >> ಸುಖದೇವ್ - ರಾಜಗುರು! ನಂಗೊತ್ತು. ನೀನು ಸಾವಿಗೆ ಯಾವತ್ತೂ ಭಯ ಪಡಲ್ಲ ಅಂತ. ನೀನು ಸಿಂಹ >> ಕಣೋ ನೀ ಸಿಂಹ. ಆದ್ರೆ ಗೆಳೆಯ ಸಾಯೋ ಕೊನೇ ಕ್ಷಣದಲ್ಲಿ ನಿನ್ ಕಣ್ಣಲ್ಲಿ ಕಣ್ಣೀರು ನೋಡಿ >> ತಪ್ಪು ತಿಳಿದುಕೊಂಡು ಬಿಟ್ಟೆ. ನನ್ನ ಕ್ಷಮಿಸು ಗೆಳೆಯಾ. >> >> ಭಗತ್ - ಸುಖದೇವ್ ರಾಜಗುರು. ದೇಶಕ್ಕೋಸ್ಕರ ಪ್ರಾಣ ಕೊಡ್ಲಿಕ್ಕೆ ಅಂತ ಹೊರಟಿರೋ >> ಕ್ರಾಂತಿಕಾರಿಗಳು ಯಾವತ್ತೂ ಕಣ್ಣೀರು ಹಾಕಬಾರದು. ಕಣ್ಣೀರ್ ಹಾಕಕೂಡದು. >> >> ರಾಜಗುರು - ಭಗತ್ ನಾವೇನೋ ಸತ್ ಹೋಗಿಬಿಡ್ತೀವಿ. ಸರಿ. ಆದ್ರೆ ನೀ ಸತ್ ಹೋದ್ರೆ, ನಮ್ >> ದೇಶಕ್ಕೆ ಸ್ವಾತಂತ್ರ್ಯ ಕೊಡಿಸೋದು ಯಾರು? >> >> ಭಗತ್ - ಹ್ಹ ಹ್ಹ ಹ್ಹ. ರಾಜಗುರು. ನಾನೊಬ್ಬ ಸತ್ತ ಮಾತ್ರಕ್ಕೆ ಈ ದೇಶಕ್ಕೆ >> ಸ್ವಾತಂತ್ರ್ಯ ಸಿಕ್ಕೋದಿಲ್ಲ ಅಂತ ತಿಳಿದುಕೊಂಡಿದ್ದೀಯೇನು? ಇಲ್ಲ. ನಮ್ಮ ಮೂವರನ್ನ >> ನೇಣಿಗೇರಿಸಿ ಈ ಬ್ರಿಟೀಷ್ ಸಕರ್ಾರ ಸಾಧಿಸೋದೇನು ಇಲ್ಲ. ಬದಲಾಗಿ ನಾವು ಮೂರು ಜನ >> ನಗುನಗುತ್ತಾ ಉರುಳನ್ನು ಚುಂಬಿಸಿ ಕೊರಳಿಗೆ ಹಾಕಿಕೊಳ್ಳೋದನ್ನ ನೋಡಿದ ಈ ದೇಶದ ತಾಯಂದಿರು >> ಅವರ ಹೊಟ್ಟೆಯಲ್ಲಿ ಭಗತ್ ಸಿಂಗ್ ನಂಥಾ ಮಕ್ಕಳು ಹುಟ್ಟಲಿ, ರಾಜಗುರು ನಂಥಾ ಮಕ್ಕಳು >> ಹುಟ್ಟಲಿ, ಸುಖದೇವ್ ನಂಥಾ ಮಕ್ಕಳು ಹುಟ್ಟಲಿ, ಅಂತಾ ಬಯಸುತ್ತಾರೆ. ಆನಂತರ ಅವರ ಹೊಟೇಲಿ >> ಹುಟ್ಟೋ ಪ್ರತಿಯೊಂದು ಮಗು ಕೂಡಾ ಈ ಬ್ರಿಟೀಷರ ವಿರುದ್ಧ ಸಿಂಹದ ಥರಾ ಹೋರಾಡಿ ನಮ್ ದೇಶಕ್ಕೆ >> ಸ್ವಾತಂತ್ರ್ಯ ಕೊಡಿಸುತ್ತೆ. ಸುಖದೇವ್, ಇವತ್ತು ನಮ್ ದೇಶದ ಜನರಿಗೆ ದೇಸಕ್ಕೋಸ್ಕರ ಹೇಗೆ >> ಬದುಕಬೇಕು ಅಂತಾ ಗೊತ್ತಿಲ್ಲ. ದೇಶಕ್ಕೋಸ್ಕರ ಹೇಗೆ ಕೆಲಸ ಮಾಡಬೇಕು ಅಂತಾ ಗೊತ್ತಿಲ್ಲ. >> ದೇಶಕ್ಕೋಸ್ಕರ ಹೇಗೆ ಪ್ರಾಣ ತ್ಯಾಗ ಮಾಡಬೇಕು ಅಂತ ಗೊತ್ತಿಲ್ಲ. ಎಲ್ಲರೂ ತಮ್ಮ ತಮ್ಮ >> ಸ್ವಾರ್ಥದಲ್ಲಿ ಮುಳುಗಿ ಈ ಬ್ರಿಟೀಷರ ಪಾದಸೇವಕರಾಗಿ ಕೆಲಸ ಮಾಡ್ತಾ ಇದಾರೆ. ಸುಖದೇವ್ >> ಇವತ್ತು ಇವತ್ತು ನಾವು ಆ ಜನರಿಗೆ ದೇಶಕ್ಕೋಸ್ಕರ ಹೇಗೆ ನಗುನಗುತ್ತಾ ಪ್ರಾಣತ್ಯಾಗ ಮಾಡೋದು >> ಆಂತ ತೋರಿಸಿಕೊಡೋಣ. ಒಂದ್ ಸಾರಿ ಈ ದೇಶದ ಜನ ಸಾವಿನ ಭಯವನ್ನು ಗೆದ್ರು ಅಂತ ಹೇಳಿದ್ರೆ >> ಆನಂತರ ಈ ಬ್ರಿಟೀಷರನ್ನ ಎರಡು ನಿಮಿಷ ಕೂಡಾ ಈ ದೇಶದಲ್ಲಿ ಉಳಿಸಲ್ಲ. ಈ ಉದಾತ್ತ >> ಉದ್ದೇಶಕ್ಕೋಸ್ಕರ ನಾವ್ ಪ್ರಾಣತ್ಯಾಗ ಮಾಡ್ಲೇಬೇಕು ಸುಖದೇವ್. ಮಾಡಲೇಬೇಕು ರಾಜಗುರು. >> >> ಸುಖದೇವ್ - ಭಗತ್ ನೀ ಹೇಳಿದ್ದು ನಿಜ. ಈವತ್ತು ನಾವು ದೇಶಕ್ಕೋಸ್ಕರ ಪ್ರಾನ ಕೊಡ್ತಾ ಒಂದು >> ಒಳ್ಳೇ ಕೆಲಸ ಮಾಡ್ತಾ ಇದ್ದೀವಿ ನಿಜ. ಆದ್ರೆ ಮುಂದಿನ ಜನ್ಮ ಅಂತ ಒಂದಿದ್ರೆ ಮತ್ತೆ ಇದೇ >> ಮಣ್ಣಲ್ಲಿ ಹುಟ್ಟಿ ಈ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ನಮ್ ದೇಶಕ್ಕೆ ಸ್ವಾತಂತ್ರ್ಯ >> ಕೊಡಿಸೋಣ. >> >> ಬ್ರಿಟೀಷ್ ಅಧಿಕಾರಿ - ಓಕೆ ಓಕೆ ಟೈಮ್ ಅಪ್ ಟೈಮ್ ಅಪ್. >> >> ಪೊಲೀಸ್ ಅಧಿಕಾರಿ - 310 320. >> >> ಬ್ರಿಟೀಷ್ ಅಧಿಕಾರಿ - ಟೂ ಮಿನಿಟ್ಸ್ ಮೋರ್ >> >> ಸುಖದೇವ್ - ಭಗತ್ ನೆನ್ನೆ ನಿಮ್ ತಾಯಿ ಹೇಳಿದ್ ಮಾತು ಜ್ಞಾಪಕದಲ್ಲಿದಿಯಾ? >> >> ಭಗತ್ - ಅದ್ ಹ್ಯಾಗ್ ಮರಿಯಕಾಗತ್ತೆ ಸುಖದೇವ್. ನೆನ್ನೆ ನಮ್ ತಾಯಿ ನನ್ನ ನೋಡೋಕೆ ಅಂತ >> ಜೈಲಿಗೆ ಬಂದಿದ್ದರು. ಆಕೆ ನನ್ನನ್ನ ನೋಡಿದ್ ತಕ್ಷಣ ಕಣ್ಣಲ್ಲಿ ನೀರ್ ತುಂಬಿಕೊಂಡು >> ಹೇಳಿದ್ಲು. "ಮಗೂ ಭಗತ್. ಇಷ್ಟು ಚಿಕ್ಕ ವಯಸ್ಸಿಗೇ ದೇಶ ದೇಶ ಅಂತ ಹೇಳ್ತಾ ಪ್ರಾನ ಕೊಡೋ >> ಸ್ಥಿತಿಗೆ ಬಂದ್ ಬಿಟ್ಯಲ್ಲೋ. ನಿನ್ನನ್ನ ನಾನು ಮದುವೆ ಮಾಡಿ ಮದುವೆ ದಿಬ್ಬಣದಲ್ಲಿ ನೋಡಬೇಕು >> ಅಂತ ಅಸೆಪಟ್ಟಿದ್ದೆ ಆದ್ರೆ ಇವತ್ತು ನೀನು ಸಾಯೋದನ್ನ ನೋಡಬೇಕಾದ ಪರಿಸ್ಥಿತಿ >> ಬಂದುಬಿಡ್ತಲ್ಲೋ" ಅಂತ ಕಣ್ಣಿರು ಹಾಕಿದ್ಲು. ಆಗ ನಾನು ನನ್ ತಾಯಿಗೆ ಹೇಳಿದೆ. " ಅಮ್ಮಾ. >> ನಿನ್ ಮಗ ಭಗತ್ ಸಿಂಗ್ ಯಾವ್ದೋ ಕಳ್ಳತನ ಮಾಡಿ ಯಾವ್ದೋ ದರೋಡೆ ಮಾಡಿ ನೇಣು ಶಿಕ್ಷೆಗೆ ಗುರು >> ಆಗಿಲ್ಲ. ನಿನ್ ಮಗ ಭಗತ್ ಸಿಂಗ್ ದೇಶದ ಸ್ವಾತಂತ್ರ್ಯಕ್ಕೋಸ್ಕರ ಬ್ರಿಟೀಷರನ್ನ ಈ ದೇಶದಿಂದ >> ಹೊರಗೆ ಓಡಿಸಬೇಕು ಅನ್ನೋ ಉದಾತ್ತ ಉದ್ದೇಶಕ್ಕೋಸ್ಕರ ಪ್ರಾಣ ಕೊಡ್ತಾ ಇದ್ದಾನೆ. ಸತ್ತ ನಂತರ >> ನಿನ್ನ ಮಗ ಜನರ ಕಣ್ಣಲ್ಲಿ ಹುತಾತ್ಮ. ಅಮ್ಮಾನಾನ್ ನಿಧರ್ಾರ ಮಾಡಿಕೊಂಡಿದ್ದೀನಿ ಸಾಯೋ ಕೊನೇ >> ಕ್ಷಣದಲ್ಲೂ ನನ್ನ ಕಣ್ಣಲ್ಲಿ ಕಿಂಚಿತ್ತೂ ಭಯವನ್ನು ಈ ಆಂಗ್ಲರು ನೋಡಲಾರರು. ಆದ್ರೆ ಅಮ್ಮಾ >> ನೀನು ಹೀಗೆ ಕಣ್ಣಿರು ಹಾಕ್ತಾ ಇರೋದನ್ನ ನೋಡಿ ಈವಾಗ್ಲೇನೋ ನಾ ತಡೆದುಕೊಂಡುಬಿಡಬಲ್ಲೆ. >> ಆದ್ರೆ ನಾಳೆ ಗಲ್ಲಿಗೇರೋ ಕೊನೇ ಕ್ಷಣದಲ್ಲಿ ಕಣ್ಣಿರು ತುಂಬಿದ ನಿನ್ನ ಮುಖ ನನ್ನ >> ನೆನಪಿಗೇನಾದ್ರೂ ಬಂದುಬಿಟ್ರೆ ಆಗ ನನ್ನ ಕೈಲಿ ತಡೆದುಕೊಳ್ಳೋಕಾಗಲ್ಲ ಅಮ್ಮಾ. ಒಂದ್ ವೇಳೆ ನಾ >> ಆಗ ಕಣ್ಣಿರ್ ಹಾಕಿಬಿಟ್ರೆ ಈ ಪಾಫಿ ಬ್ರಿಟೀಷರು ಹೇಳ್ತಾರೆ. ನೋಡ್ರೀ. ಭಗತ್ ಸಿಂಗ್ ಸಾವಿಗೆ >> ಭಯಪಟ್ಟು ಕಣ್ಣಿರು ಹಾಕ್ತಾ ಇದ್ದಾನೆ. ಸಾಯೋ ಕಾಲಕ್ಕೆ ಈ ಕ್ರಾಂತಿಕಾರಿ ಹೇಡಿ ಆಗ್ಬಿಟ್ಟ >> ಅಂತ. ಅಮ್ಮಾ ಹುತಾತ್ಮನಾಗಲಿಕ್ಕೆ ಅಂತ ಹೊರಟಿರೋ ನಿನ್ನ ಮಗ ಹೇಡಿ ಅನ್ನಿಸಿಕೊಳ್ಳೊದು ನಿಂಗೆ >> ಇಷ್ಟ ಏನಮ್ಮಾ ?" ಅಂತ. ನನ್ ತಾಯಿ ಹೇಳಿದ್ಲು " ಮಗೂ ಭಗತ್ ನಾ ನಿನ್ನ ತುಂಬಾ ಚಿಕ್ ಹುಡುಗ >> ಅನ್ಕೊಂಬಿಟ್ಟಿದ್ದೆ. ಆದ್ರೆ ನೀ ಚಿಕ್ ಹುಡುಗ ಅಲ್ಲ ದೇಶಕ್ಕೋಸ್ಕರ ಪ್ರಾನತ್ಯಾಗ >> ಮಾಡೋದಿಕ್ಕೆ ಅಂತ ಹೊರಟಿರೋ ಹುತಾತ್ಮ. ನಾನು ಕಣ್ಣಿರು ಹಾಕಿ ನಿನ್ನ ಹುತಾತ್ಮ ಪಟ್ಟಕ್ಕೆ >> ಅಡ್ಡಿಬರಲ್ಲ. ನಾನು ನಿನಗೆ ಮಾತು ಕೊಡ್ತೀನಿ ನೀನು ಸತ್ತ ನಂತರವೂ ನನ್ನ ಕಣ್ಣಲ್ಲಿ ಒಂದು >> ತೊಟ್ಟು ನೀರು ಬರಲ್ಲ. ಆದ್ರೆ ನೀ ನಂಗೊಂದು ಮಾತು ಕೊಡಬೇಕು. ನಾಳೆ ಸಾಯೊ ಕೊನೇ ಕ್ಷಣದಲ್ಲಿ >> ನೀವು ಮೂವರ ಬಾಯಲ್ಲಿ ಬರಬೇಕಾದ ಕಡೆಯ ಶಬ್ದ .. ವಂದೇ ಮಾತರಂ ಆಗಿರಬೇಕು. >> >> ರಾಜಗುರು - ಇನ್ಕಿಲಾಬ್ ಜಿಂದಾಬಾದ್ >> >> ಸುಖದೇವ್ - ಭಾರತ್ ಮಾತಾ ಕೀ ಜೈ >> >> ಭಗತ್ - ವಂದೇ ಮಾತರಂ. >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/kannadastf. >> To view this discussion on the web, visit >> https://groups.google.com/d/msgid/kannadastf/CAOM04w%2BpnwLpYD%3D_UkmP5vw%2BWenADYVhWN5%3Dif3fE%3DERqf9K_A%40mail.gmail.com >> <https://groups.google.com/d/msgid/kannadastf/CAOM04w%2BpnwLpYD%3D_UkmP5vw%2BWenADYVhWN5%3Dif3fE%3DERqf9K_A%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAK3w_BOKUAZasNQ5%2BfJ4tV8WP4xwTSjE-H0ZiG7PLMHU4cr%2BzQ%40mail.gmail.com > <https://groups.google.com/d/msgid/kannadastf/CAK3w_BOKUAZasNQ5%2BfJ4tV8WP4xwTSjE-H0ZiG7PLMHU4cr%2BzQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CABJr6PPKC73Zke-EiWkcQS%3DBFLmB_nqdj09WtyAgGtk0UhyWmg%40mail.gmail.com. For more options, visit https://groups.google.com/d/optout.
