😿ಚಿಂತೆಯಾಕೆ

ಲೈಫಲ್ಲಿ ಯಾರಿಗೆ ಪ್ರಾಬ್ಲಮ್ಸ್ ಇಲ್ಲಾ ಹೇಳಿ...?
ಎಲ್ರಿಗೂ ಇರುತ್ವೆ ಅಲ್ವಾ....?
ನಮ್ಮ ಸಮಸ್ಯೆಗಳು ಚಿಕ್ಕದೋ-ದೊಡ್ಡದೋ, ನಾವಂತೂ ದಿನವೂ ಅದರ ಬಗ್ಗೆನೇ ಚಿಂತೆ ಮಾಡ್ತಾನೆ

😃 ನಿಮ್ಮ ಸಮಸ್ಯೆಗಳಿಗೆ ಕೊಂಚ ರಿಲೀಫ್ ಸಿಗಲೆಂದೆ ನಿಮಗೊಂದು ಸಣ್ಣ ಕಥೆ ಹೇಳ್ತೀನಿ. ಓದಿ.,
ಈ ಸಣ್ಣ ಕಥೆ ನಿಮ್ಮಲ್ಲಿ ದೊಡ್ಡ ಬದಲಾವಣೆ ತರಬಹುದು

ಆ ದಿನ ಕಾಲೇಜೊಂದರ ಪ್ರೊಫೆಸರ್ ಒಬ್ಬರು ತಮ್ಮ ಉಪನ್ಯಾಸ ಪ್ರಾರಂಭಿಸುವ ಪೀಠಿಕೆ ಹಾಕಿದರು.

ಅವರು ತಮ್ಮ ಕೈಯಲ್ಲಿ  ನೀರು ತುಂಬಿದ ಗ್ಲಾಸನ್ನು ಹಿಡಿದು ವಿದ್ಯಾರ್ಥಿಗಳಿಗೆ ಪ್ರಶ್ನೆ
ಕೇಳಿದರು.
👉🏼ಪ್ರೊಫೆಸರ್:-  ಈ ಗ್ಲಾಸಿನ ತೂಕ ಎಷ್ಟಿರಬಹುದು?

👉🏼ವಿದ್ಯಾರ್ಥಿಗಳು;- ಬಹುಶಃ  500gms, 200gms, ಅಥವಾ 125gms? (ಹೀಗೆ ಎಲ್ಲರೂ ಊಹಿಸಿ
ಹೇಳಿದರು),

👉🏼ಪ್ರೋ:-  ಇರಬಹುದು, ಈ ಗ್ಲಾಸನ್ನು ನಾನು ಹೀಗೆ ನನ್ನ ಕೈಯಲ್ಲಿ ಒಂದೆರೆಡು ನಿಮಿಷ
ಹಿಡಿದುಕೊಂಡರೆ ಏನಾಗುತ್ತೆ?
👉🏼ವಿ.ಗಳು:-ಏನೂ ಆಗಲ್ಲ ಸರ್.
👉🏼ಪ್ರೋ:- ಓಕೆ .ಒಂದುಗಂಟೆಯವರೆಗೆ  ಹಿಡಿದುಕೊಂಡ್ರೆ?
👉🏼ಒಬ್ಬ ವಿದ್ಯಾರ್ಥಿ :- ನಿಮ್ಮ ಕೈ ನೋಯುತ್ತೆ ಸರ್,

👉🏼ಪ್ರೊ:- ನಿಜ,  ಒಂದಿಡಿ ದಿನ ಈ ಗ್ಲಾಸನ್ನು ಹಿಡಿದುಕೊಂಡು ನಿಂತ್ರೆ ಏನಾಗುತ್ತೆ?

👉🏼ವಿ.1:--ಸರ್ ನಿಮ್ಮ ಕೈ ತುಂಬಾ ನೋಯುತ್ತೆ,
👉🏼ವಿ.2:-ಸರ್ ನಿಮ್ಮ ಕೈಯಲ್ಲಿನ ಸ್ನಾಯುಗಳ ಸೆಳೆತ ಉಂಟಾಗಿ ನಿಮ್ಮ ಕೈ
ಮರಕಟ್ಟಿದಂತಾಗುತ್ತೆ.
👉🏼ವಿ.3:- ಸರ್ ನಿಮ್ಮ ಕೈಗೆ ಪ್ಯಾರಲಾಸಿಸ್ ಆಗ್ಬಹುದು. ಆಗ  ನೀವು ಗ್ಯಾರಂಟಿ ಆಸ್ಪತ್ರೆ
ಸೇರಬೇಕಾಗುತ್ತದೆ.

👉🏼ಪ್ರೊ:- ವೆರೀ ಗುಡ್, ನೀವು ಹೇಳಿದ್ದೆಲ್ಲಾ ಆಗುತ್ತೆ  ನಿಜ, ಆದ್ರೆ ಹಾಗಾದ ಮೇಲೆ ನಾನು
ಹಿಡಿದುಕೊಂಡಿದ್ದ ಗ್ಲಾಸಿನ ತೂಕದಲ್ಲಿ ಏನಾದರೂ ಬದಲಾವಣೆ ಆಗುತ್ತಾ?

👉🏼ವಿ.ಗಳು:- ಇಲ್ಲಾ ಸರ್..!

👉🏼ಪ್ರೊ:- ಹಾಗಾದರೆ ನನ್ನ ಕೈ ನೋವಾಗಲು ಏನು ಕಾರಣ?
👉🏼ವಿ.ಗಳು:- ನಿರುತ್ತರ (ಗೊಂದಲ)

👉🏼ಪ್ರೊ:- ನನ್ನ ಕೈ ನೋಯಬಾರದೆಂದರೆ ಏನು ಮಾಡಬೇಕು?

👉🏼ಒಬ್ಬ ವಿದ್ಯಾರ್ಥಿ :- ನಿಮ್ಮ ಕೈಯಲ್ಲಿರುವ ಗ್ಲಾಸ್ ಕೆಳಗಿಡಬೇಕು ಸರ್,

👉🏼ಪ್ರೊ:- ""EXACTLY! !
ನಿಮ್ಮ ಜೀವನದಲ್ಲಿ ಬರುವ ಸಮಸ್ಯೆಗಳು ಹೀಗೆ, ಕೆಲವೊಂದಿಷ್ಟು ಸಮಯ ಮಾತ್ರ ಅವನ್ನು ನಿಮ್ಮ
ತಲೆಯಲ್ಲಿಟ್ಟುಕೊಳ್ಳಿ. ಸ್ವಲ್ಪ ಚಿಂತಿಸಿ,  ಆಮೇಲೆ ಅವನ್ನು ತಲೆಯಿಂದ ತೆಗೆದು ನಿಮ್ಮ
ಮುಂದಿನ ಕೆಲಸದಲ್ಲಿ ತೊಡಗಿ.
ಒಂದು ವೇಳೆ ನೀವು ದೀರ್ಘಕಾಲದ ವರೆಗೆ ನಿಮ್ಮ ಸಮಸ್ಯೆಗಳ ಕುರಿತು ಚಿಂತಿಸುತ್ತಾ ಕೂತರೆ
ನಿಮ್ಮ ಮುಂದಿನ ಜೀವನ ಕಷ್ಟಕರವಾದೀತು. ಇದರಿಂದ ನೀವೂ ಆಸ್ಪತ್ರೆ ಸೇರೋದು ಗ್ಯಾರಂಟಿ,
-------------------------------------

👆🏼ಅರ್ಥವಾಯ್ತಾ......👇🏼

ನೀವು ಪ್ರಾಬ್ಲಮ್ಸ್ ಗಳನ್ನು ನಿಮ್ಮ ತಲೆಗೇರಿಸಿಕೊಂಡು stress, pain ಮಾಡ್ಕೋಬೇಡಿ,
 ಸುಮ್ನೆ ತಲೆಯಿಂದ ಕೆಳಗಿಳಿಸಿ,ಆರಾಮವಾಗಿರಿ.

ನಿಮ್ಮ ಪ್ರತಿ ಮುಂಜಾವು ಆರಂಭಿಸುವಾಗ ""PUT THE GLASS DOWN ""
ಅಂತಂದೆ ಆರಂಭಿಸಿ..

ಹೊಸ  ಹೊಸ ಬದಲಾವಣೆ ನಿಮ್ಮಲ್ಲಾಗಲಿ.

🙏🏻ನಿಮಗೆಲ್ಲರಿಗೂ ಶುಭವಾಗಲಿ🙏🏻

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAOqaUt%3D5akak_M9duYU31JHYr1yEnx2upd1aaN1Ks4K3x2227A%40mail.gmail.com.
For more options, visit https://groups.google.com/d/optout.

Reply via email to