🏓🏓🏓🏓🏓🏓🏓🏓💐ದಿನಕ್ಕೊಂದು ಮಾತು💐

🌷ತಾಳ್ಮೆ ಮತ್ತು ಪರಿಶ್ರಮದ ಬೆಲೆ🌷

ಪ್ರಿಯ ಸ್ನೇಹಿತರೇ.. 
ನಾನೀಗ ಹೇಳಹೊರಟ ಮಾತು ದುಡಿಮೆ ಯಾವುದಾದರೇನು ಆದರೆ ಅದರಲ್ಲಿ ಶ್ರದ್ಧೆ. ನಂಬಿಕೆ 
ವಿಶ್ವಾಸಗಳನ್ನಿಟ್ಟು ಮಾಡಿದಾಗ ಸಿಗುವ ಪ್ರತಿಫಲ ಎಂತಹ ಮಟ್ಟದ್ದಾಗಿರುತ್ತದೆ ಎಂಬುದನ್ನು 
ತಿಳಿಯಲು ಈ ಕಥೆಯನ್ನು ಓದಿ... 
   
💐ಹದ್ರತ್ ಅಬ್ದುಲ್ ಖಾದಿರ್ ಇರಾಕಿನ ಬಾಗ್ದಾದ್‌ನಲ್ಲಿ ಹನ್ನೆರಡನೇ ಶತ­ಮಾನದಲ್ಲಿ ಬದುಕಿದ್ದ 
ಮಹಾನ್ ಸೂಫೀ ಸಂತ. ಆತನ ದೈವಭಕ್ತಿ, ಆಳ­ವಾದ ಆಧ್ಯಾತ್ಮ ಚಿಂತನೆಗಳು ಅವನನ್ನು ಪವಾಡ 
ಪುರುಷನನ್ನಾಗಿ ಮಾಡಿದ್ದವು.  ಅವನ ಬಗ್ಗೆ ದಂತಕಥೆಗಳೇ ಬಂದಿದ್ದವು. ಅವನ ನಂತರ ಅವನ ಶಿಷ್ಯರ 
ಪಡೆಗೆ ಖಾದಿರೀ ಪಂಥ ಎಂದೇ ಹೆಸರಾಯಿತು.  ಖಾದಿರ್ ಸಣ್ಣ ಸಣ್ಣ ಕಥೆಗಳಲ್ಲಿ ಅತ್ಯಂತ ಮೌಲಿಕವಾದ 
ಚಿಂತನೆಗಳನ್ನು ತಿಳಿಸುವುದರಲ್ಲಿ ನಿಷ್ಣಾತ. ಒಂದು ಕಥೆ ಹೀಗಿದೆ.

ಒಂದು ಬಾರಿ ತರುಣ ರಾಜನೊಬ್ಬ  ಪರಿವಾರದೊಂದಿಗೆ ಹೋಗುತ್ತಿರುವಾಗ ರಸ್ತೆಯ ಬದಿಯಲ್ಲಿ 
ವಿಸ್ತಾರವಾಗಿ ಹರಡಿದ ದ್ರಾಕ್ಷಿ ತೋಟವನ್ನು ಕಂಡ. ಅದು ತುಂಬ ಸೊಂಪಾಗಿ ಹರಡಿತ್ತು. ಆದರೆ ಇದು 
ಹಣ್ಣು ಬಿಡುವ ಕಾಲವಾದರೂ ಅದ­ರಲ್ಲಿ ಒಂದು ಹಣ್ಣೂ ಇರಲಿಲ್ಲ.  ಇದೇಕೆ ಹೀಗೆ ಎಂದು ಮಂತ್ರಿಗಳನ್ನು 
ಕೇಳಿ­ದರೆ ಅವರು ನಕ್ಕು, ‘ಪ್ರಭೂ, ಈ ತೋಟದ ಒಡೆಯ ಮೂರ್ಖ. ಅದು ಯಾವುದೋ ತಳಿ ಹಾಕಿದ್ದಾನೆ, ತುಂಬ 
ಪರಿಶ್ರಮ ಪಡುತ್ತಾನೆ. ಈ ಬಳ್ಳಿ ಮೂವತ್ತು ವರ್ಷದ ನಂತರ ಫಲ ಕೊಡುತ್ತದಂತೆ. ಅದನ್ನೇ ನಂಬಿ ಆತ 
ದುಡಿಯುತ್ತಿ­ದ್ದಾನೆ’ ಎಂದರು. ರಾಜ ರೈತನನ್ನು ಕರೆಸಿ ಕೇಳಿದ. ಆಗ ರೈತ, ‘ಹೌದು ಪ್ರಭೂ, ಇದೊಂದು 
ವಿಶೇಷ ತಳಿ. ಮೂವತ್ತು ವರ್ಷದ ನಂತರ ಹಣ್ಣು ನೀಡುತ್ತದೆ. ಆದರೆ ಆ ಹಣ್ಣಿಗೆ ಇರುವ ರುಚಿ ಮತ್ತೆ 
ಯಾವ ಹಣ್ಣಿಗೂ ಇರು­ವುದು ಸಾಧ್ಯವಿಲ್ಲ. ಅದಕ್ಕೇ ಶ್ರದ್ಧೆಯಿಂದ ದುಡಿಯುತ್ತಿದ್ದೇನೆ. ಈಗಾಗಲೇ 
ಇಪ್ಪತ್ತು ವರ್ಷ ಕಳೆದು ಹೋಗಿದೆ’ ಎಂದ. ರಾಜ ಮೆಚ್ಚಿ ಒಂದಷ್ಟು ಹಣ ಕೊಟ್ಟು, ‘ಈ ಬಳ್ಳಿಗಳಿಂದ 
ಯಾವಾಗಲಾದರೂ ಹಣ್ಣು ಬಂದರೆ, ಅಲ್ಲಿಯವರೆಗೂ ನಾವಿಬ್ಬರೂ ಸಾವಿನ ದವಡೆಯಿಂದ ತಪ್ಪಿಸಿಕೊಂಡಿದ್ದರೆ, 
ದಯವಿಟ್ಟು ನನಗೆ ಇದರ ಹಣ್ಣು ತಂದು ಕೊಡು’ ಎಂದು ಹೇಳಿ ನಡೆದ.

ಮುಂದೆ ಕೆಲವರ್ಷಗಳು ಉರುಳಿದವು. ರೈತನ ತೋಟದ ದ್ರಾಕ್ಷಿ ಬಳ್ಳಿಗಳಲ್ಲಿ ರಸಪೂರಿತ ಹಣ್ಣುಗಳು 
ಮೂಡತೊಡಗಿದವು. ಅದೇನು ಅಪೂರ್ವ ರುಚಿ ಅವುಗಳಿಗೆ! ರೈತ ಚೆನ್ನಾಗಿ ಬೆಳೆದ ರಸವತ್ತಾದ 
ಹಣ್ಣುಗಳನ್ನು ದೊಡ್ಡ ಬುಟ್ಟಿ­ಯಲ್ಲಿ ತುಂಬಿಸಿಕೊಂಡು ತಾನು ಹಿಂದೆ ಮಾತು ಕೊಟ್ಟಂತೆ ಅರಮನೆಗೆ 
ನಡೆದ.  ಕಾವಲುಗಾರರಿಗೆ ವಿಷಯವನ್ನೆಲ್ಲ ತಿಳಿಸಿದ. ಅವರು ರಾಜನಿಗೆ ಹೇಳಿದೊಡನೆ ಅರಮನೆ­ಯೊಳಗೆ 
ಬರಲು ಆಜ್ಞೆ ಬಂದಿತು. ರಾಜ ರೈತ ತಂದಿದ್ದ ಹಣ್ಣುಗಳಲ್ಲಿ  ಕೆಲವನ್ನು ಬಾಯಿಗೆ ಹಾಕಿಕೊಂಡು ಅವುಗಳ 
ರುಚಿಗೆ ಸಂತೋಷಪಟ್ಟ. ತನ್ನ ಹೆಂಡಂದಿರಿಗೂ, ಪರಿವಾರದವರಿಗೂ ಹಂಚಿದ. ನಂತರ ರೈತನನ್ನು ಕರೆದು 
ಕೆಲವು ಬೆಲೆಬಾಳುವ ರತ್ನಾಭರಣಗಳನ್ನು ಕೊಡುವುದರೊಂದಿಗೆ ರೈತ ಬದುಕಿದ್ದ ಹಳ್ಳಿಯನ್ನೇ ಅವನಿಗೆ 
ಉಂಬಳಿಯಾಗಿ ನೀಡಿಬಿಟ್ಟ. ಅರಮನೆಯಲ್ಲಿ ಎಲ್ಲರಿಗೂ ಆಶ್ಚರ್ಯ! ಒಂದು ಬುಟ್ಟಿ ಹಣ್ಣಿಗೆ ಇಷ್ಟೊಂದು 
ಮರ್ಯಾದೆಯೇ? ಈ ಸುದ್ದಿ  ರಾಜ್ಯದಲ್ಲೆಲ್ಲ ಹರಡಿತು.

ಮುಂದೆ ಒಂದು ವಾರದಲ್ಲಿ ನೂರಾರು ಜನ ರೈತರು ಬುಟ್ಟಿಗಳಲ್ಲಿ ದ್ರಾಕ್ಷಿ ಹಣ್ಣುಗಳನ್ನು 
ತುಂಬಿಕೊಂಡು ಬಂದು ರಾಜನನ್ನು ಕಾಣಲು ದುಂಬಾಲು ಬಿದ್ದರು. ಆದರೆ ರಾಜ ಮಾತ್ರ ಯಾರನ್ನೂ ಕಾಣದೇ ಆಗ 
ಮಾರುಕಟ್ಟೆಯಲ್ಲಿದ್ದ ದರವನ್ನೇ ಅವರಿಗೆಲ್ಲ ಕೊಡುವಂತೆ ಆಜ್ಞೆ ಮಾಡಿ ಕಳುಹಿಸಿಬಿಟ್ಟ. 
ರೈತರಿಗೆಲ್ಲ ಕೋಪ ಬಂದಿತು. ಒಬ್ಬ ರೈತನಿಗೆ ಒಂದು ಊರನ್ನೇ ಉಂಬಳಿ ಹಾಕಿ ಕೊಡುವು­ದಾದರೆ ತಮಗೇಕೆ 
ಈ ಕಡಿಮೆ ಬೆಲೆ ದೊರೆಯಬೇಕು? ತಾವು ತಂದದ್ದೂ ದ್ರಾಕ್ಷಿ ಹಣ್ಣೇ ತಾನೇ? ಅವರು ಮಂತ್ರಿಗಳ ಜೊತೆಗೆ 
ವಾಗ್ವಾದ ಮಾಡಿ ರಾಜನನ್ನು ನೋಡುವ ಅವಕಾಶ ಗಿಟ್ಟಿಸಿಕೊಂಡರು. ರಾಜನ ಮುಂದೆ ಒಬ್ಬ ರೈತ ಇದರ ಬಗ್ಗೆ 
ಕೇಳಿಯೇ ಬಿಟ್ಟ.  ಆಗ ರಾಜ ಹೇಳಿದ, ‘ನಿಮಗೆ ಹೊಟ್ಟೆಕಿಚ್ಚು ಬೇಡ. ಆ ರೈತನ ಹಣ್ಣಿನ ರುಚಿಯೇ 
ಬೇರೆ. ನಾನು ಉಂಬಳಿ ಹಾಕಿಕೊಟ್ಟು ಮರ್ಯಾದೆ ಮಾಡಿದ್ದು ಹಣ್ಣಿನ ಬೆಲೆಯಲ್ಲ, ಅವನ ಶ್ರದ್ಧೆಯ, 
ಪರಿಶ್ರಮದ, ತಾಳ್ಮೆಯ ಬೆಲೆ. ಮೂವತ್ತು ವರ್ಷಗಳ ನಂತರ ವಿಶೇಷ ಬೆಳೆ ಬಂದೀತೆಂಬ ನಂಬಿಕೆಯಲ್ಲಿ ಆತ 
ಯಾರ ಟೀಕೆಗೂ ಬಗ್ಗದೇ, ಬೇಗ ಹಣ ಗಳಿಸುವ ಆಮಿಷಕ್ಕೆ ಬೀಳದೆ, ಪರಿಶ್ರಮ­ವನ್ನು ಬಿಡದೇ ಹಾಕಿ ತನ್ನ 
ಗುರಿಯನ್ನು ತಲುಪಿಯೇ ಬಿಟ್ಟ. ಈ ಶ್ರದ್ಧಾಪೂರ್ವಕ­ವಾದ ಪರಿಶ್ರಮದ ಬೆಲೆ ರಾಜ್ಯಕ್ಕೆಲ್ಲ 
ತಿಳಿಯಲೆಂದೇ ನಾನು ಆತನಿಗೆ ಮರ್ಯಾದೆ ಮಾಡಿದೆ’. ಜನ ಅವನ ಮಾತನ್ನು ಒಪ್ಪಿದರು.

ಯಾವುದೋ ಒಂದು ಘನತತ್ವಕ್ಕೆ, ಆದರ್ಶಕ್ಕೆ ಮನತೆತ್ತು, ಅದರ ಮೇಲಿನ ಕಣ್ಣು ತೆಗೆಯದೇ, ಅದರಲ್ಲಿ 
ನಂಬಿಕೆಯನ್ನು ಕಳೆದುಕೊಳ್ಳದೇ, ಬಹುಕಾಲ ಶ್ರದ್ಧೆಯಿಂದ ದುಡಿದದ್ದರ ಫಲ ಖಂಡಿತ ದೊರೆಯುತ್ತದೆ. 
ಆದರೆ ಫಲ ಪಡೆಯು­ವಲ್ಲಿ ಆತುರ ಬೇಡ, ಅಸಹನೆ ಬೇಡ, ನಿರಾಸೆ ಬೇಡ. ಅವಸರದ ಅನುಕರಣೆಗಿಂತ ತಾಳ್ಮೆಯ, 
ಶ್ರದ್ಧೆಯ, ದೀರ್ಘಕಾಲದ ಪರಿಶ್ರಮದ ಸ್ವಂತಿಕೆಯ ಪ್ರತಿಫಲ ದೊಡ್ಡದು ಮತ್ತು ಶಾಶ್ವತ.

ನೋಡಿದ್ರಲ್ಲ ಸ್ನೇಹಿತರೆ ಮೇಲಿನ ಕಥೆಯ ಸಾರಾಂಶವನ್ನು ನಾವು ನಮ್ಮ ಜೀವನದಲ್ಲಿ ಆದಷ್ಟೂ 
ಅಳವಡಿಸಿಕೊಂಡು ಪರಿಶ್ರಮದಿಂದ ಸಿಗುವ ಸ್ವಂತಿಕೆಯ ಪ್ರತಿಫಲವನ್ನು ಅನುಭವಿಸೋಣ.. 
ಏನಂತೀರಿ ಸ್ನೇಹಿತರೆ..?
      ☀ಶುಭದಿನ☀
💥ಶರತ್.ಕೆ.ಲಕ್ಕವಳ್ಳಿ💥

 H D Basavaraj Naik <[email protected]> wrote:

>😿ಚಿಂತೆಯಾಕೆಲೈಫಲ್ಲಿಯಾರಿಗೆಪ್ರಾಬ್ಲಮ್ಸ್ಇಲ್ಲಾಹೇಳಿ...?ಎಲ್ರಿಗೂಇರುತ್ವೆಅಲ್ವಾ....?ನಮ್ಮಸಮಸ್ಯೆಗಳುಚಿಕ್ಕದೋ-ದೊಡ್ಡದೋ,ನಾವಂತೂದಿನವೂಅದರಬಗ್ಗೆನೇಚಿಂತೆಮಾಡ್ತಾನೆ😃ನಿಮ್ಮಸಮಸ್ಯೆಗಳಿಗೆಕೊಂಚರಿಲೀಫ್ಸಿಗಲೆಂದೆನಿಮಗೊಂದುಸಣ್ಣಕಥೆಹೇಳ್ತೀನಿ.ಓದಿ.,ಈಸಣ್ಣಕಥೆನಿಮ್ಮಲ್ಲಿದೊಡ್ಡಬದಲಾವಣೆತರಬಹುದುಆದಿನಕಾಲೇಜೊಂದರಪ್ರೊಫೆಸರ್ಒಬ್ಬರುತಮ್ಮಉಪನ್ಯಾಸಪ್ರಾರಂಭಿಸುವಪೀಠಿಕೆಹಾಕಿದರು.ಅವರುತಮ್ಮಕೈಯಲ್ಲಿ
> ನೀರುತುಂಬಿದಗ್ಲಾಸನ್ನುಹಿಡಿದುವಿದ್ಯಾರ್ಥಿಗಳಿಗೆಪ್ರಶ್ನೆಕೇಳಿದರು.👉🏼ಪ್ರೊಫೆಸರ್:- 
>ಈಗ್ಲಾಸಿನತೂಕಎಷ್ಟಿರಬಹುದು?👉🏼ವಿದ್ಯಾರ್ಥಿಗಳು;-ಬಹುಶಃ 
>500gms,200gms,ಅಥವಾ125gms?(ಹೀಗೆಎಲ್ಲರೂಊಹಿಸಿಹೇಳಿದರು),👉🏼ಪ್ರೋ:- 
>ಇರಬಹುದು,ಈಗ್ಲಾಸನ್ನುನಾನುಹೀಗೆನನ್ನಕೈಯಲ್ಲಿಒಂದೆರೆಡುನಿಮಿಷಹಿಡಿದುಕೊಂಡರೆಏನಾಗುತ್ತೆ?👉🏼ವಿ.ಗಳು:-ಏನೂಆಗಲ್ಲಸರ್.👉🏼ಪ್ರೋ:-ಓಕೆ.ಒಂದುಗಂಟೆಯವರೆಗೆ
> ಹಿಡಿದುಕೊಂಡ್ರೆ?👉🏼ಒಬ್ಬವಿದ್ಯಾರ್ಥಿ:-ನಿಮ್ಮಕೈನೋಯುತ್ತೆಸರ್,👉🏼ಪ್ರೊ:-ನಿಜ, 
>ಒಂದಿಡಿದಿನಈಗ್ಲಾಸನ್ನುಹಿಡಿದುಕೊಂಡುನಿಂತ್ರೆಏನಾಗುತ್ತೆ?👉🏼ವಿ.1:--ಸರ್ನಿಮ್ಮಕೈತುಂಬಾನೋಯುತ್ತೆ,👉🏼ವಿ.2:-ಸರ್ನಿಮ್ಮಕೈಯಲ್ಲಿನಸ್ನಾಯುಗಳಸೆಳೆತಉಂಟಾಗಿನಿಮ್ಮಕೈಮರಕಟ್ಟಿದಂತಾಗುತ್ತೆ.👉🏼ವಿ.3:-ಸರ್ನಿಮ್ಮಕೈಗೆಪ್ಯಾರಲಾಸಿಸ್ಆಗ್ಬಹುದು.ಆಗ
> ನೀವುಗ್ಯಾರಂಟಿಆಸ್ಪತ್ರೆಸೇರಬೇಕಾಗುತ್ತದೆ.👉🏼ಪ್ರೊ:-ವೆರೀಗುಡ್,ನೀವುಹೇಳಿದ್ದೆಲ್ಲಾಆಗುತ್ತೆ 
>ನಿಜ,ಆದ್ರೆಹಾಗಾದಮೇಲೆನಾನುಹಿಡಿದುಕೊಂಡಿದ್ದಗ್ಲಾಸಿನತೂಕದಲ್ಲಿಏನಾದರೂಬದಲಾವಣೆಆಗುತ್ತಾ?👉🏼ವಿ.ಗಳು:-ಇಲ್ಲಾಸರ್..!👉🏼ಪ್ರೊ:-ಹಾಗಾದರೆನನ್ನಕೈನೋವಾಗಲುಏನುಕಾರಣ?👉🏼ವಿ.ಗಳು:-ನಿರುತ್ತರ(ಗೊಂದಲ)👉🏼ಪ್ರೊ:-ನನ್ನಕೈನೋಯಬಾರದೆಂದರೆಏನುಮಾಡಬೇಕು?👉🏼ಒಬ್ಬವಿದ್ಯಾರ್ಥಿ:-ನಿಮ್ಮಕೈಯಲ್ಲಿರುವಗ್ಲಾಸ್ಕೆಳಗಿಡಬೇಕುಸರ್,👉🏼ಪ್ರೊ:-EXACTLY!!ನಿಮ್ಮಜೀವನದಲ್ಲಿಬರುವಸಮಸ್ಯೆಗಳುಹೀಗೆ,ಕೆಲವೊಂದಿಷ್ಟುಸಮಯಮಾತ್ರಅವನ್ನುನಿಮ್ಮತಲೆಯಲ್ಲಿಟ್ಟುಕೊಳ್ಳಿ.ಸ್ವಲ್ಪಚಿಂತಿಸಿ,
> 
>ಆಮೇಲೆಅವನ್ನುತಲೆಯಿಂದತೆಗೆದುನಿಮ್ಮಮುಂದಿನಕೆಲಸದಲ್ಲಿತೊಡಗಿ.ಒಂದುವೇಳೆನೀವುದೀರ್ಘಕಾಲದವರೆಗೆನಿಮ್ಮಸಮಸ್ಯೆಗಳಕುರಿತುಚಿಂತಿಸುತ್ತಾಕೂತರೆನಿಮ್ಮಮುಂದಿನಜೀವನಕಷ್ಟಕರವಾದೀತು.ಇದರಿಂದನೀವೂಆಸ್ಪತ್ರೆಸೇರೋದುಗ್ಯಾರಂಟಿ,
> 
>-------------------------------------👆🏼ಅರ್ಥವಾಯ್ತಾ......👇🏼ನೀವುಪ್ರಾಬ್ಲಮ್ಸ್ಗಳನ್ನುನಿಮ್ಮತಲೆಗೇರಿಸಿಕೊಂಡುstress,painಮಾಡ್ಕೋಬೇಡಿ,
> 
>ಸುಮ್ನೆತಲೆಯಿಂದಕೆಳಗಿಳಿಸಿ,ಆರಾಮವಾಗಿರಿ.ನಿಮ್ಮಪ್ರತಿಮುಂಜಾವುಆರಂಭಿಸುವಾಗPUTTHEGLASSDOWNಅಂತಂದೆಆರಂಭಿಸಿ..ಹೊಸ
> 
>ಹೊಸಬದಲಾವಣೆನಿಮ್ಮಲ್ಲಾಗಲಿ.🙏🏻ನಿಮಗೆಲ್ಲರಿಗೂಶುಭವಾಗಲಿ🙏🏻--*FordoubtsonUbuntuandotherpublicsoftware,visithttp://karnatakaeducation.org.in/KOER/en/index.php/Frequently_Asked_Questions**Areyouusingpiratedsoftware?UseSarvajanikaTantramsha,seehttp://karnatakaeducation.org.in/KOER/en/index.php/Public_Softwareಸಾರ್ವಜನಿಕಇಲಾಖೆಗೆಸಾರ್ವಜನಿಕತಂತ್ರಾಂಶ***IfateacherwantstojoinSTF-readhttp://karnatakaeducation.org.in/KOER/en/index.php/Become_a_STF_groups_member---YoureceivedthismessagebecauseyouaresubscribedtotheGoogleGroupsKannadaSTF-ಕನ್ನಡಭಾಷಾಶಿಕ್ಷಕರವೇದಿಕೆgroup.Tounsubscribefromthisgroupandstopreceivingemailsfromit,sendanemailtokannadastf+unsubscr...@googlegroups.com.Toposttothisgroup,[email protected]://groups.google.com/group/kannadastf.Toviewthisdiscussionontheweb,visithttps://groups.google.com/d/msgid/kannadastf/CAOqaUt%3D5akak_M9duYU31JHYr1yEnx2upd1aaN1Ks4K3x2227A%40mail.gmail.com.Formoreoptions,visithttps://groups.google.com/d/optout.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/53l64dobqj1i3auk3gaub93s.1461225369808%40email.android.com.
For more options, visit https://groups.google.com/d/optout.

Reply via email to