ಧನ್ಯವಾದಗಳು ಸಾರ್



*ಎನ್ ನಾಗರಾಜು ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ರೈಲ್ವೆಕಾರ್ಯಾಗಾರ
ಕಾಲೋನಿ.ದಕ್ಷಿಣ ವಲಯ  ಮೈಸೂರು -೦೮ಮೊ ೯೪೪೮೭೫೩೫೬೫*

2016-12-21 20:21 GMT+05:30 Mahesh S <[email protected]>:

> *ಮುನ್ನುಡಿ*
> ಪ್ರಿಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಮಿತ್ರರೇ,
>         10ನೆಯ ತರಗತಿಯ ವಾರ್ಷಿಕ ಪರೀಕ್ಷೆ ಇಂದು ಹತ್ತು-ಹಲವು ಕಾರಣಗಳಿಂದಾಗಿ ಮಹತ್ವದ
> ವಿಷಯವಾಗಿ ಪರಿಣಮಿಸಿರುವುದು ನಮಗೆಲ್ಲ ಈಗಾಗಲೇ ವೇದ್ಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ
> ದೃಷ್ಟಿಯಿಂದ, ಶಾಲೆಯ ಫಲಿತಾಂಶದ ದೃಷ್ಟಿಯಿಂದ  ಅಷ್ಟೇ ಅಲ್ಲದೇ ಕೆಲವರ ಪ್ರತಿಷ್ಠೆಯ
> ದೃಷ್ಟಿಯಿಂದ *10ನೆಯ ತರಗತಿ ಫಲಿತಾಂಶ *ಎಂಬ* 'ಬೆದರುಬೊಂಬೆ' *ಇಂದು ದೈತ್ಯಾಕಾರವಾಗಿ
> ಬೆಳೆದು ನಿಂತಿದ್ದು; ಯಾವ ಪರೀಕ್ಷೆಗಳಿಗೂ ಇಲ್ಲದ ಭವ್ಯತೆಯನ್ನು ಪಡೆದುಕೊಂಡಿದೆ;
> ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯ ಶಿಕ್ಷಕರು, ಪಾಲಕರು ಅಲ್ಲದೆ ಈ ಶೈಕ್ಷಣಿಕ
> ವ್ಯಾಪ್ತಿಗೆ ಒಳಪಡುವ ಹಲವು ಅಧಿಕಾರಿಗಳ ನಿದ್ದೆಗೆಡಿಸಿದೆ.
>           ತರಬೇತಿಗಳಲ್ಲಿ, ಕಾರ್ಯಾಗಾರಗಳಲ್ಲಿ *'ಗುಣಾತ್ಮಕ ಶಿಕ್ಷಣ'*ದ ಮಂತ್ರ
> ಪಠಿಸುವ; ಉದ್ದುದ್ದ ಭಾಷಣ ಮಾಡುವ ಅನೇಕರು ದುರದೃಷ್ಟವಶಾತ್ ಇಂದು ಮೂರು ಗಂಟೆಗಳಲ್ಲಿ
> ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವ *'ಪರಿಮಾಣಾತ್ಮಕ' *ಪರೀಕ್ಷಾ ಪದ್ಧತಿಗೆ ಜೋತು
> ಬಿದ್ದಿದ್ದು *"ಎಸ್.ಎಸ್.ಎಲ್.ಸಿ. ಅಂಕಗಳಿಕೆ.... **ಎಸ್.ಎಸ್.ಎಲ್.ಸಿ. ಅಂಕಗಳಿಕೆ.... 
> **ಎಸ್.ಎಸ್.ಎಲ್.ಸಿ.
> ಅಂಕಗಳಿಕೆ....."* ಎಂದು ಹುಯಿಲೆಬ್ಬಿಸಿದ್ದಾರೆ. ಆ ಮೂಲಕ *"ಅಂಕಗಳಿಕೆಯೇ ನಮ್ಮ ಶಿಕ್ಷಣದ
> ಗುರಿ" *ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ.
>          ಪ್ರಪಂಚದ ಯಾವುದಾದರೂ ಮೂಲೆಯಲ್ಲಿ *'ತಳಪಾಯ' *ಇಲ್ಲದ ಅಥವಾ *'ತಳಪಾಯ' *ಇದ್ದರೂ
> *'ಭದ್ರವಾದ ತಳಪಾಯ' *ಇಲ್ಲದ ನೆಲದ ಮೇಲೆ *'ದೊಡ್ಡ ಕಟ್ಟಡ*' ನಿರ್ಮಾಣ ಮಾಡುವ*
> 'ಇಂಜಿನಿಯರ್' *ನೋಡಿದ್ದೀರಾ...! ಅಂತಹ  *'ಇಂಜಿನಿಯರ್' *ಏನಾದರೂ ಇದ್ದಲ್ಲಿ ಅದು *'ಕರ್ನಾಟಕದ
> ಸರ್ಕಾರಿ ಪ್ರೌಢಶಾಲೆ'*ಗಳಲ್ಲಿ...!!
>             *"ಪ್ರೌಢಶಾಲೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಲ್ಲಿ ಶೇಕಡ 50 ಕ್ಕಿಂತ
> ಹೆಚ್ಚು ವಿದ್ಯಾರ್ಥಿಗಳಿಗೆ ಸರಿಯಾಗಿ ಓದುವ, ಬರೆಯುವ, ಲೆಕ್ಕಮಾಡುವ ಸಾಮಾನ್ಯ ಸಾಮರ್ಥ್ಯವೂ
> ಇಲ್ಲ"* ಎಂದು ಗೋಳಾಡುತ್ತಿರುವ ಶಿಕ್ಷಕರ ಅಳಲು ಕೇವಲ 'ಅರಣ್ಯ ರೋಧನ'ವಾಗಿದೆ.
>            ಏಳೆಂಟು ವರ್ಷ ಏನೂ ಕಲಿಯದೇ ಬಂದ ಶೇಕಡ 50 ಕ್ಕಿಂತ ಹೆಚ್ಚು
> ವಿದ್ಯಾರ್ಥಿಗಳಿಗೆ; ಒಂದು ತಿಂಗಳ ಸೇತುಬಂಧ, ನಂತರದ ಕೆಲವು ತಿಂಗಳುಗಳಲ್ಲಿ ನಿಗದಿಪಡಿಸಲಾದ
> ಪಠ್ಯಬೋಧನೆಯ ನಡುವೆ ಸಮಯ ಹೊಂದಿಸಿಕೊಂಡರೆ ದೊರೆಯುವ ಕೆಲವೇ ಕೆಲವು ಅವಧಿಗಳಲ್ಲಿ ಮಾಡಬಹುದಾದ
> ಪರಿಹಾರ ಬೋಧನೆಯ ಮೂಲಕ ವಿದ್ಯಾರ್ಥಿಗಳನ್ನು ಮೇಲೆ ತರಬೇಕೆಂದು ಶಿಕ್ಷಕರು ದಿನನಿತ್ಯ
> ಹೆಣಗಾಡುತ್ತಿದ್ದಾರೆ. ಕಟ್ಟಪ್ಪಣೆ ಮಾಡುವವರು ವಸ್ತುಸ್ಥಿತಿಯನ್ನು ಅರಿತಿರುವರೇ?
> ಅರಿತಿದ್ದೂ ಹೀಗೆ ಆಜ್ಞೆ ಮಾಡುತ್ತಿರುವರೇ? ಎಂಬ ಪ್ರಶ್ನೆಗಳು ಶಿಕ್ಷಕರನ್ನು ಕಾಡುತ್ತಿವೆ.
>         ಎಲ್ಲಿಯವರೆಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ವಿದ್ಯಾರ್ಥಿ ಮೇಲ್ಮಟ್ಟದ
> ತರಗತಿಗೆ ಬಂದ ನಂತರ "ಅಂಕಗಳಿಕೆ" ಯ ಹುಯಿಲೆಬ್ಬಿಸುವ ಬದಲು ತಳಮಟ್ಟದಿಂದ ಸರಿಪಡಿಸುವ ಬಗ್ಗೆ
> ಚಿಂತನೆ ಮಾಡುವುದಿಲ್ಲವೋ: *ಮೇಲ್ಮಟ್ಟದ ವಿದ್ಯಾರ್ಥಿ ಕನಿಷ್ಠ ಅಂಕಗಳಿಸದಿರಲು ಅವನಿಗೆ
> ತಳಮಟ್ಟದಲ್ಲಿ ಸರಿಯಾದ ಬುನಾದಿ ಇಲ್ಲದಿರುವುದೇ ಪ್ರಮುಖ ಕಾರಣ *ಎಂದು ಬುಡಮಟ್ಟದಿಂದ
> ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ *'ಧೈರ್ಯ'* ತೋರುವುದಿಲ್ಲವೋ ಅಲ್ಲಿಯವರೆಗೆ ಈ
> ಸಮಸ್ಯೆಗೆ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯಕ್ಕೆ, ಶಿಕ್ಷಕರ ಮೇಲೆ
> ಹೇರಲಾಗುತ್ತಿರುವ ಒತ್ತಡಕ್ಕೆ ಕೊನೆ ಎಂಬುದಿಲ್ಲ.
>        ದಿನನಿತ್ಯ *'ದೊಡ್ಡವರ ಆಜ್ಞೆ', 'ನಿಯಮಗಳ ಸಂಕೋಲೆ', 'ಕಡತಗಳ ಸಾಗರ'*ದಲ್ಲಿ
> ಶಿಕ್ಷಕರು ಹೈರಾಣಾಗಿದ್ದಾರೆ; ಕೆಲವರಂತು ಇಂತಹ ಒತ್ತಡಗಳಿಂದ ಮಾನಸಿಕ ನೆಮ್ಮದಿ/ಆರೋಗ್ಯ
> ಕಳೆದುಕೊಂಡಿದ್ದಾರೆ.
> *ಅಲ್ಲವೇ ಮತ್ತೆ....!! ತಳಪಾಯವಿಲ್ಲದ ನೆಲದ ಮೇಲೆ ಸೌಧ ನಿರ್ಮಿಸುವುದೆಂದರೆ....!!
> ಸಾಮಾನ್ಯದ ಮಾತಾಯಿತೇ...!!*
>            ಅದೇನೇ ಇರಲಿ, ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ
> 'ಅಂಕಗಳಿಕೆ' ಯ ಕಡೆ ನಮ್ಮೆಲ್ಲರ ಚಿತ್ತವಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು
> ಉತ್ತೀರ್ಣರಾಗುವಂತೆ ಮಾಡುವ ಕರ್ತವ್ಯ ನಮ್ಮದಾಗಿದೆ. ಎಲ್ಲ ಒತ್ತಡಗಳನ್ನು ಹಗುರಾಗಿಸಿಕೊಂಡು;
> ಯಾವ ಯಾವ ವಿಧಾನಗಳ ಮೂಲಕ, ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಬೇಕಾಗುವ ಅಂಕಗಳಿಕೆಗೆ
> ಮಾರ್ಗದರ್ಶನ ಮಾಡಬೇಕು. ಎಂಬುದರ ಕಡೆ ನಮ್ಮ ಪ್ರಯತ್ನವಿರಬೇಕು.
>            ಈ ನಿಟ್ಟಿನಲ್ಲಿ ನೀಲನಕ್ಷೆಯನ್ನಾಧರಿಸಿ ಕಲಿಕಾ ಕಾರ್ಡುಗಳನ್ನು
> ನಿರ್ಮಿಸಲಾಗಿದ್ದು, ಅದನ್ನು *'ಕನ್ನಡ ದೀವಿಗೆ'*ಯ ಮೂಲಕ ನಿಮಗೆ ತಲುಪಿಸುತ್ತಿದ್ದೇನೆ.
> A4 ಅಳತೆಯ ಡ್ರಾಯಿಂಗ್ ಹಾಳೆಗಳಿಗೆ ನೇರವಾಗಿ ಮುದ್ರಿಸಿಕೊಂಡು ವಿದ್ಯಾರ್ಥಿಗಳ ಕಲಿಕೆಗೆ
> ಬಳಸಿಕೊಳ್ಳಬಹುದಾಗಿದೆ.
>
> **ಕಲಿಕಾ ಕಾರ್ಡುಗಳ ಡೌನ್ ಲೋಡ್ ಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್ ಮಾಡಿ **
> <https://kannadadeevige.blogspot.in/2016/12/10th-kannada-passing-package.html>
> ಧನ್ಯವಾದಗಳು,
> --
>    *ಮಹೇಶ್.ಎಸ್*
>     ಕನ್ನಡ ಭಾಷಾ ಶಿಕ್ಷಕರು,
>     ಸರ್ಕಾರಿ ಪ್ರೌಢಶಾಲೆ,ನಿಡುವಣಿ,
>     ಹೊಳೆನರಸೀಪುರ ತಾ. ಹಾಸನ ಜಿಲ್ಲೆ.
>     ಮೊಬೈಲ್: 9743316629
>     ವೆಬ್ ಸೈಟ್: www.kannadadeevige.blogspot.in
>
>
>
> ******************************
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CANaCK5aUfbfqOHo54KFtBmeqh7yt0
> HTKQkRvSOGsu9So-BweYg%40mail.gmail.com
> <https://groups.google.com/d/msgid/kannadastf/CANaCK5aUfbfqOHo54KFtBmeqh7yt0HTKQkRvSOGsu9So-BweYg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAM3YhEoxE14wZe6iKfhJXq3CfQ%3D4f-%2BagYFHgNKvpOwWBepxpQ%40mail.gmail.com.
For more options, visit https://groups.google.com/d/optout.

Reply via email to