*ಮುನ್ನುಡಿ*
ಪ್ರಿಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಮಿತ್ರರೇ,
        10ನೆಯ ತರಗತಿಯ ವಾರ್ಷಿಕ ಪರೀಕ್ಷೆ ಇಂದು ಹತ್ತು-ಹಲವು ಕಾರಣಗಳಿಂದಾಗಿ ಮಹತ್ವದ
ವಿಷಯವಾಗಿ ಪರಿಣಮಿಸಿರುವುದು ನಮಗೆಲ್ಲ ಈಗಾಗಲೇ ವೇದ್ಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ
ದೃಷ್ಟಿಯಿಂದ, ಶಾಲೆಯ ಫಲಿತಾಂಶದ ದೃಷ್ಟಿಯಿಂದ  ಅಷ್ಟೇ ಅಲ್ಲದೇ ಕೆಲವರ ಪ್ರತಿಷ್ಠೆಯ
ದೃಷ್ಟಿಯಿಂದ *10ನೆಯ ತರಗತಿ ಫಲಿತಾಂಶ *ಎಂಬ* 'ಬೆದರುಬೊಂಬೆ' *ಇಂದು ದೈತ್ಯಾಕಾರವಾಗಿ
ಬೆಳೆದು ನಿಂತಿದ್ದು; ಯಾವ ಪರೀಕ್ಷೆಗಳಿಗೂ ಇಲ್ಲದ ಭವ್ಯತೆಯನ್ನು ಪಡೆದುಕೊಂಡಿದೆ;
ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯ ಶಿಕ್ಷಕರು, ಪಾಲಕರು ಅಲ್ಲದೆ ಈ ಶೈಕ್ಷಣಿಕ
ವ್ಯಾಪ್ತಿಗೆ ಒಳಪಡುವ ಹಲವು ಅಧಿಕಾರಿಗಳ ನಿದ್ದೆಗೆಡಿಸಿದೆ.
          ತರಬೇತಿಗಳಲ್ಲಿ, ಕಾರ್ಯಾಗಾರಗಳಲ್ಲಿ *'ಗುಣಾತ್ಮಕ ಶಿಕ್ಷಣ'*ದ ಮಂತ್ರ ಪಠಿಸುವ;
ಉದ್ದುದ್ದ ಭಾಷಣ ಮಾಡುವ ಅನೇಕರು ದುರದೃಷ್ಟವಶಾತ್ ಇಂದು ಮೂರು ಗಂಟೆಗಳಲ್ಲಿ ವಿದ್ಯಾರ್ಥಿಯ
ಭವಿಷ್ಯವನ್ನು ನಿರ್ಧರಿಸುವ *'ಪರಿಮಾಣಾತ್ಮಕ' *ಪರೀಕ್ಷಾ ಪದ್ಧತಿಗೆ ಜೋತು
ಬಿದ್ದಿದ್ದು *"ಎಸ್.ಎಸ್.ಎಲ್.ಸಿ.
ಅಂಕಗಳಿಕೆ.... **ಎಸ್.ಎಸ್.ಎಲ್.ಸಿ. ಅಂಕಗಳಿಕೆ.... **ಎಸ್.ಎಸ್.ಎಲ್.ಸಿ.
ಅಂಕಗಳಿಕೆ....."* ಎಂದು ಹುಯಿಲೆಬ್ಬಿಸಿದ್ದಾರೆ. ಆ ಮೂಲಕ *"ಅಂಕಗಳಿಕೆಯೇ ನಮ್ಮ ಶಿಕ್ಷಣದ
ಗುರಿ" *ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ.
         ಪ್ರಪಂಚದ ಯಾವುದಾದರೂ ಮೂಲೆಯಲ್ಲಿ *'ತಳಪಾಯ' *ಇಲ್ಲದ ಅಥವಾ *'ತಳಪಾಯ'
*ಇದ್ದರೂ *'ಭದ್ರವಾದ
ತಳಪಾಯ' *ಇಲ್ಲದ ನೆಲದ ಮೇಲೆ *'ದೊಡ್ಡ ಕಟ್ಟಡ*' ನಿರ್ಮಾಣ ಮಾಡುವ* 'ಇಂಜಿನಿಯರ್'
*ನೋಡಿದ್ದೀರಾ...!
ಅಂತಹ  *'ಇಂಜಿನಿಯರ್' *ಏನಾದರೂ ಇದ್ದಲ್ಲಿ ಅದು *'ಕರ್ನಾಟಕದ ಸರ್ಕಾರಿ ಪ್ರೌಢಶಾಲೆ'*
ಗಳಲ್ಲಿ...!!
            *"ಪ್ರೌಢಶಾಲೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಲ್ಲಿ ಶೇಕಡ 50 ಕ್ಕಿಂತ
ಹೆಚ್ಚು ವಿದ್ಯಾರ್ಥಿಗಳಿಗೆ ಸರಿಯಾಗಿ ಓದುವ, ಬರೆಯುವ, ಲೆಕ್ಕಮಾಡುವ ಸಾಮಾನ್ಯ ಸಾಮರ್ಥ್ಯವೂ
ಇಲ್ಲ"* ಎಂದು ಗೋಳಾಡುತ್ತಿರುವ ಶಿಕ್ಷಕರ ಅಳಲು ಕೇವಲ 'ಅರಣ್ಯ ರೋಧನ'ವಾಗಿದೆ.
           ಏಳೆಂಟು ವರ್ಷ ಏನೂ ಕಲಿಯದೇ ಬಂದ ಶೇಕಡ 50 ಕ್ಕಿಂತ ಹೆಚ್ಚು
ವಿದ್ಯಾರ್ಥಿಗಳಿಗೆ; ಒಂದು ತಿಂಗಳ ಸೇತುಬಂಧ, ನಂತರದ ಕೆಲವು ತಿಂಗಳುಗಳಲ್ಲಿ ನಿಗದಿಪಡಿಸಲಾದ
ಪಠ್ಯಬೋಧನೆಯ ನಡುವೆ ಸಮಯ ಹೊಂದಿಸಿಕೊಂಡರೆ ದೊರೆಯುವ ಕೆಲವೇ ಕೆಲವು ಅವಧಿಗಳಲ್ಲಿ ಮಾಡಬಹುದಾದ
ಪರಿಹಾರ ಬೋಧನೆಯ ಮೂಲಕ ವಿದ್ಯಾರ್ಥಿಗಳನ್ನು ಮೇಲೆ ತರಬೇಕೆಂದು ಶಿಕ್ಷಕರು ದಿನನಿತ್ಯ
ಹೆಣಗಾಡುತ್ತಿದ್ದಾರೆ. ಕಟ್ಟಪ್ಪಣೆ ಮಾಡುವವರು ವಸ್ತುಸ್ಥಿತಿಯನ್ನು ಅರಿತಿರುವರೇ?
ಅರಿತಿದ್ದೂ ಹೀಗೆ ಆಜ್ಞೆ ಮಾಡುತ್ತಿರುವರೇ? ಎಂಬ ಪ್ರಶ್ನೆಗಳು ಶಿಕ್ಷಕರನ್ನು ಕಾಡುತ್ತಿವೆ.
        ಎಲ್ಲಿಯವರೆಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ವಿದ್ಯಾರ್ಥಿ ಮೇಲ್ಮಟ್ಟದ
ತರಗತಿಗೆ ಬಂದ ನಂತರ "ಅಂಕಗಳಿಕೆ" ಯ ಹುಯಿಲೆಬ್ಬಿಸುವ ಬದಲು ತಳಮಟ್ಟದಿಂದ ಸರಿಪಡಿಸುವ ಬಗ್ಗೆ
ಚಿಂತನೆ ಮಾಡುವುದಿಲ್ಲವೋ: *ಮೇಲ್ಮಟ್ಟದ ವಿದ್ಯಾರ್ಥಿ ಕನಿಷ್ಠ ಅಂಕಗಳಿಸದಿರಲು ಅವನಿಗೆ
ತಳಮಟ್ಟದಲ್ಲಿ ಸರಿಯಾದ ಬುನಾದಿ ಇಲ್ಲದಿರುವುದೇ ಪ್ರಮುಖ ಕಾರಣ *ಎಂದು ಬುಡಮಟ್ಟದಿಂದ
ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ *'ಧೈರ್ಯ'* ತೋರುವುದಿಲ್ಲವೋ ಅಲ್ಲಿಯವರೆಗೆ ಈ ಸಮಸ್ಯೆಗೆ,
ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯಕ್ಕೆ, ಶಿಕ್ಷಕರ ಮೇಲೆ ಹೇರಲಾಗುತ್ತಿರುವ
ಒತ್ತಡಕ್ಕೆ ಕೊನೆ ಎಂಬುದಿಲ್ಲ.
       ದಿನನಿತ್ಯ *'ದೊಡ್ಡವರ ಆಜ್ಞೆ', 'ನಿಯಮಗಳ ಸಂಕೋಲೆ', 'ಕಡತಗಳ ಸಾಗರ'*ದಲ್ಲಿ
ಶಿಕ್ಷಕರು ಹೈರಾಣಾಗಿದ್ದಾರೆ; ಕೆಲವರಂತು ಇಂತಹ ಒತ್ತಡಗಳಿಂದ ಮಾನಸಿಕ ನೆಮ್ಮದಿ/ಆರೋಗ್ಯ
ಕಳೆದುಕೊಂಡಿದ್ದಾರೆ.
*ಅಲ್ಲವೇ ಮತ್ತೆ....!! ತಳಪಾಯವಿಲ್ಲದ ನೆಲದ ಮೇಲೆ ಸೌಧ ನಿರ್ಮಿಸುವುದೆಂದರೆ....!!
ಸಾಮಾನ್ಯದ ಮಾತಾಯಿತೇ...!!*
           ಅದೇನೇ ಇರಲಿ, ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ
'ಅಂಕಗಳಿಕೆ' ಯ ಕಡೆ ನಮ್ಮೆಲ್ಲರ ಚಿತ್ತವಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು
ಉತ್ತೀರ್ಣರಾಗುವಂತೆ ಮಾಡುವ ಕರ್ತವ್ಯ ನಮ್ಮದಾಗಿದೆ. ಎಲ್ಲ ಒತ್ತಡಗಳನ್ನು ಹಗುರಾಗಿಸಿಕೊಂಡು;
ಯಾವ ಯಾವ ವಿಧಾನಗಳ ಮೂಲಕ, ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಬೇಕಾಗುವ ಅಂಕಗಳಿಕೆಗೆ
ಮಾರ್ಗದರ್ಶನ ಮಾಡಬೇಕು. ಎಂಬುದರ ಕಡೆ ನಮ್ಮ ಪ್ರಯತ್ನವಿರಬೇಕು.
           ಈ ನಿಟ್ಟಿನಲ್ಲಿ ನೀಲನಕ್ಷೆಯನ್ನಾಧರಿಸಿ ಕಲಿಕಾ ಕಾರ್ಡುಗಳನ್ನು
ನಿರ್ಮಿಸಲಾಗಿದ್ದು, ಅದನ್ನು *'ಕನ್ನಡ ದೀವಿಗೆ'*ಯ ಮೂಲಕ ನಿಮಗೆ ತಲುಪಿಸುತ್ತಿದ್ದೇನೆ. A4
ಅಳತೆಯ ಡ್ರಾಯಿಂಗ್ ಹಾಳೆಗಳಿಗೆ ನೇರವಾಗಿ ಮುದ್ರಿಸಿಕೊಂಡು ವಿದ್ಯಾರ್ಥಿಗಳ ಕಲಿಕೆಗೆ
ಬಳಸಿಕೊಳ್ಳಬಹುದಾಗಿದೆ.

**ಕಲಿಕಾ ಕಾರ್ಡುಗಳ ಡೌನ್ ಲೋಡ್ ಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್ ಮಾಡಿ **
<https://kannadadeevige.blogspot.in/2016/12/10th-kannada-passing-package.html>
ಧನ್ಯವಾದಗಳು,
-- 
   *ಮಹೇಶ್.ಎಸ್*
    ಕನ್ನಡ ಭಾಷಾ ಶಿಕ್ಷಕರು,
    ಸರ್ಕಾರಿ ಪ್ರೌಢಶಾಲೆ,ನಿಡುವಣಿ,
    ಹೊಳೆನರಸೀಪುರ ತಾ. ಹಾಸನ ಜಿಲ್ಲೆ.
    ಮೊಬೈಲ್: 9743316629
    ವೆಬ್ ಸೈಟ್: www.kannadadeevige.blogspot.in



******************************

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CANaCK5aUfbfqOHo54KFtBmeqh7yt0HTKQkRvSOGsu9So-BweYg%40mail.gmail.com.
For more options, visit https://groups.google.com/d/optout.

Reply via email to