ಧನ್ಯವಾದಗಳು ಸರ್ ನೀಮ್ಮ ಪ್ರಯತ್ನಕ್ಕೆ..... On Jan 23, 2017 9:06 AM, "ಮಹೇಶ್.ಎಸ್ - ಕನ್ನಡ ದೀವಿಗೆ" <[email protected]> wrote:
> ಆತ್ಮೀಯ ಶಿಕ್ಷಕ ಮಿತ್ರರೇ, > 10ನೆಯ ತರಗತಿಯ ವಾರ್ಷಿಕ ಪರೀಕ್ಷೆ ಇಂದು ಹತ್ತು-ಹಲವು ಕಾರಣಗಳಿಂದಾಗಿ ಮಹತ್ವದ ವಿಷಯವಾಗಿ > ಪರಿಣಮಿಸಿರುವುದು ನಮಗೆಲ್ಲ ಈಗಾಗಲೇ ವೇದ್ಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ, > ಶಾಲೆಯ ಫಲಿತಾಂಶದ ದೃಷ್ಟಿಯಿಂದ ಅಷ್ಟೇ ಅಲ್ಲದೇ ಕೆಲವರ ಪ್ರತಿಷ್ಠೆಯ ದೃಷ್ಟಿಯಿಂದ 10ನೆಯ > ತರಗತಿ ಫಲಿತಾಂಶ ಎಂಬ 'ಬೆದರುಬೊಂಬೆ' ಇಂದು ದೈತ್ಯಾಕಾರವಾಗಿ ಬೆಳೆದು ನಿಂತಿದ್ದು; ಯಾವ > ಪರೀಕ್ಷೆಗಳಿಗೂ ಇಲ್ಲದ ಭವ್ಯತೆಯನ್ನು ತಾನು ಪಡೆದುಕೊಂಡಿದೆ; ವಿದ್ಯಾರ್ಥಿಗಳು, ಶಿಕ್ಷಕರು, > ಮುಖ್ಯ ಶಿಕ್ಷಕರು, ಪಾಲಕರು ಅಲ್ಲದೆ ಈ ಶೈಕ್ಷಣಿಕ ವ್ಯಾಪ್ತಿಗೆ ಒಳಪಡುವ ಹಲವು ಅಧಿಕಾರಿಗಳ > ನಿದ್ದೆಗೆಡಿಸಿದೆ. > ತರಬೇತಿಗಳಲ್ಲಿ, ಕಾರ್ಯಾಗಾರಗಳಲ್ಲಿ 'ಗುಣಾತ್ಮಕ ಶಿಕ್ಷಣ'ದ ಮಂತ್ರ ಪಠಿಸುವ; > ಉದ್ದುದ್ದ ಭಾಷಣ ಮಾಡುವ ಅನೇಕರು ದುರದೃಷ್ಟವಶಾತ್ ಇಂದು ಮೂರು ಗಂಟೆಗಳಲ್ಲಿ ವಿದ್ಯಾರ್ಥಿಯ > ಭವಿಷ್ಯವನ್ನು ನಿರ್ಧರಿಸುವ 'ಪರಿಮಾಣಾತ್ಮಕ' ಪರೀಕ್ಷಾ ಪದ್ಧತಿಗೆ ಜೋತು ಬಿದ್ದಿದ್ದು > "ಎಸ್.ಎಸ್.ಎಲ್.ಸಿ. ಅಂಕಗಳಿಕೆ.... ಎಸ್.ಎಸ್.ಎಲ್.ಸಿ. ಅಂಕಗಳಿಕೆ.... ಎಸ್.ಎಸ್.ಎಲ್.ಸಿ. > ಅಂಕಗಳಿಕೆ....." ಎಂದು ಹುಯಿಲೆಬ್ಬಿಸಿದ್ದಾರೆ. ಆ ಮೂಲಕ "ಅಂಕಗಳಿಕೆಯೇ ನಮ್ಮ ಶಿಕ್ಷಣದ > ಗುರಿ" ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ. > ಪ್ರಪಂಚದ ಯಾವುದಾದರೂ ಮೂಲೆಯಲ್ಲಿ 'ತಳಪಾಯ' ಇಲ್ಲದ ಅಥವಾ 'ತಳಪಾಯ' ಇದ್ದರೂ > 'ಭದ್ರವಾದ ತಳಪಾಯ' ಇಲ್ಲದ ನೆಲದ ಮೇಲೆ 'ದೊಡ್ಡ ಕಟ್ಟಡ' ನಿರ್ಮಾಣ ಮಾಡುವ 'ಇಂಜಿನಿಯರ್' > ನೋಡಿದ್ದೀರಾ...! ಅಂತಹ 'ಇಂಜಿನಿಯರ್' ಏನಾದರೂ ಇದ್ದಲ್ಲಿ ಅದು 'ಕರ್ನಾಟಕದ ಸರ್ಕಾರಿ > ಪ್ರೌಢಶಾಲೆ'ಗಳಲ್ಲಿ...!! > "ಪ್ರೌಢಶಾಲೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಲ್ಲಿ ಶೇಕಡ 50 ಕ್ಕಿಂತ > ಹೆಚ್ಚು ವಿದ್ಯಾರ್ಥಿಗಳಿಗೆ ಸರಿಯಾಗಿ ಓದುವ, ಬರೆಯುವ, ಲೆಕ್ಕಮಾಡುವ ಸಾಮಾನ್ಯ ಸಾಮರ್ಥ್ಯವೂ > ಇಲ್ಲ" ಎಂದು ಗೋಳಾಡುತ್ತಿರುವ ಶಿಕ್ಷಕರ ಅಳಲು ಕೇವಲ 'ಅರಣ್ಯ ರೋಧನ'ವಾಗಿದೆ. > ಏಳೆಂಟು ವರ್ಷ ಏನೂ ಕಲಿಯದೇ ಬಂದ ಶೇಕಡ 50 ಕ್ಕಿಂತ ಹೆಚ್ಚು > ವಿದ್ಯಾರ್ಥಿಗಳಿಗೆ; ಒಂದು ತಿಂಗಳ ಸೇತುಬಂಧ, ನಂತರದ ಕೆಲವು ತಿಂಗಳುಗಳಲ್ಲಿ ನಿಗದಿಪಡಿಸಲಾದ > ಪಠ್ಯಬೋಧನೆಯ ನಡುವೆ ಸಮಯ ಹೊಂದಿಸಿಕೊಂಡರೆ ದೊರೆಯುವ ಕೆಲವೇ ಕೆಲವು ಅವಧಿಗಳಲ್ಲಿ ಮಾಡಬಹುದಾದ > ಪರಿಹಾರ ಬೋಧನೆಯ ಮೂಲಕ ವಿದ್ಯಾರ್ಥಿಗಳನ್ನು ಮೇಲೆ ತರಬೇಕೆಂದು ಶಿಕ್ಷಕರು ದಿನನಿತ್ಯ > ಹೆಣಗಾಡುತ್ತಿದ್ದಾರೆ. ಕಟ್ಟಪ್ಪಣೆ ಮಾಡುವವರು ವಸ್ತುಸ್ಥಿತಿಯನ್ನು ಅರಿತಿರುವರೇ? > ಅರಿತಿದ್ದೂ ಹೀಗೆ ಆಜ್ಞೆ ಮಾಡುತ್ತಿರುವರೇ? ಎಂಬ ಪ್ರಶ್ನೆಗಳು ಶಿಕ್ಷಕರನ್ನು ಕಾಡುತ್ತಿವೆ. > ಎಲ್ಲಿಯವರೆಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ವಿದ್ಯಾರ್ಥಿ ಮೇಲ್ಮಟ್ಟದ > ತರಗತಿಗೆ ಬಂದ ನಂತರ "ಅಂಕಗಳಿಕೆ" ಯ ಹುಯಿಲೆಬ್ಬಿಸುವ ಬದಲು ತಳಮಟ್ಟದಿಂದ ಸರಿಪಡಿಸುವ ಬಗ್ಗೆ > ಚಿಂತನೆ ಮಾಡುವುದಿಲ್ಲವೋ..... ಮೇಲ್ಮಟ್ಟದ ವಿದ್ಯಾರ್ಥಿ ಕನಿಷ್ಠ ಅಂಕಗಳಿಸದಿರಲು ಅವನಿಗೆ > ತಳಮಟ್ಟದಲ್ಲಿ ಸರಿಯಾದ ಬುನಾದಿ ಇಲ್ಲದಿರುವುದೇ ಪ್ರಮುಖ ಕಾರಣ ಎಂದು ಬುಡಮಟ್ಟದಿಂದ > ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ 'ಧೈರ್ಯ' ತೋರುವುದಿಲ್ಲವೋ.... ಅಲ್ಲಿಯವರೆಗೆ ಈ > ಸಮಸ್ಯೆಗೆ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯಕ್ಕೆ, ಶಿಕ್ಷಕರ ಮೇಲೆ > ಹೇರಲಾಗುತ್ತಿರುವ ಒತ್ತಡಕ್ಕೆ ಕೊನೆ ಎಂಬುದಿಲ್ಲ. > ದಿನನಿತ್ಯ 'ದೊಡ್ಡವರ ಆಜ್ಞೆ', 'ನಿಯಮಗಳ ಸಂಕೋಲೆ', 'ಕಡತಗಳ ಸಾಗರ'ದಲ್ಲಿ > ಶಿಕ್ಷಕರು ಹೈರಾಣಾಗಿದ್ದಾರೆ; ಕೆಲವರಂತು ಇಂತಹ ಒತ್ತಡಗಳಿಂದಾಗಿ ಮಾನಸಿಕ ನೆಮ್ಮದಿ/ಆರೋಗ್ಯ > ಕಳೆದುಕೊಂಡಿದ್ದಾರೆ. > ಅಲ್ಲವೇ ಮತ್ತೆ....!! ತಳಪಾಯವಿಲ್ಲದ ನೆಲದ ಮೇಲೆ ಸೌಧ ನಿರ್ಮಿಸುವುದೆಂದರೆ....!! > ಸಾಮಾನ್ಯದ ಮಾತಾಯಿತೇ...!! > ಅದೇನೇ ಇರಲಿ, ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ > 'ಅಂಕಗಳಿಕೆ' ಯ ಕಡೆ ನಮ್ಮೆಲ್ಲರ ಚಿತ್ತವಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು > 'ಉತ್ತೀರ್ಣರಾಗುವಂತೆ ಮಾಡುವ' ಆದ್ಯಕರ್ತವ್ಯ ನಮ್ಮದಾಗಿದೆ. ಎಲ್ಲ ಒತ್ತಡಗಳನ್ನು > ಹಗುರಾಗಿಸಿಕೊಂಡು; ಯಾವ ಯಾವ ವಿಧಾನಗಳ ಮೂಲಕ ವಿದ್ಯಾರ್ಥಿಗಳಿಗೆ ಅವರು ಉತ್ತೀರ್ಣರಾಗಲು > ಬೇಕಾಗುವ ಅಂಕಗಳಿಕೆಗೆ ಮಾರ್ಗದರ್ಶನ ಮಾಡಬೇಕು ಎಂಬುದರ ಕಡೆ ನಮ್ಮ ಪ್ರಯತ್ನವಿರಬೇಕು. > ಈ ನಿಟ್ಟಿನಲ್ಲಿ ನೀಲನಕ್ಷೆಯನ್ನಾಧರಿಸಿ ಕಲಿಕಾ ಕಾರ್ಡುಗಳನ್ನು > ನಿರ್ಮಿಸಲಾಗಿದ್ದು, ಅದನ್ನು 'ಕನ್ನಡ ದೀವಿಗೆ'ಯ ಮೂಲಕ ನಿಮಗೆ ತಲುಪಿಸುತ್ತಿದ್ದೇನೆ. A4 > ಅಳತೆಯ ಡ್ರಾಯಿಂಗ್ ಹಾಳೆಗಳಿಗೆ ನೇರವಾಗಿ ಮುದ್ರಿಸಿಕೊಂಡು ವಿದ್ಯಾರ್ಥಿಗಳ ಕಲಿಕೆಗೆ > ಬಳಸಿಕೊಳ್ಳಬಹುದಾಗಿದೆ. > ಶುಭ ಹಾರೈಕೆಗಳೊಂದಿಗೆ, > - ಎಸ್.ಮಹೇಶ್. 'ಕನ್ನಡ ದೀವಿಗೆ' > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send an email to [email protected]. > Visit this group at https://groups.google.com/group/kannadastf. > To view this discussion on the web, visit https://groups.google.com/d/ > msgid/kannadastf/5264cac6-ffb3-4c9c-8363-a08e0768c208%40googlegroups.com. > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CADxGXxV2Kwkv5VaNhCqO24pvgWUx%3D9yFc%2BOKYoKmDyhzXNg1sw%40mail.gmail.com. For more options, visit https://groups.google.com/d/optout.
