ಅಣ್ಣ ನರಿ ಕೂಗು ಗಿರಿ ಮುಟ್ಟಿ ಲ್ಲ ನಮ್ಮ

On Jan 23, 2017 2:04 PM, "manjaiah sakshi" <[email protected]> wrote:

> Thanks sir
> On Jan 23, 2017 1:45 PM, "Sharadabai Angadi" <[email protected]>
> wrote:
>
>> ಒಳ್ಳೆಯ ಆಲೋಚನೆಗಳನ್ನು ಹಂಚಿದ್ದಕ್ಕೆ ಕನ್ನಡ ಭಾಷಾ ಶಿಕ್ಷಕರ ಪರವಾಗಿ ತುಂಬು ಹೃದಯದ
>> ಧನ್ಯವಾದಗಳು ಸರ್. ಎಲ್ಲಿಯವರೆಗೆ ಪ್ರಾಥಮಿಕ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ನೇಮಕಾತಿ
>> ನಡೆಯುವುದಿಲ್ಲವೋ ಅಲ್ಲಿಯವರೆಗೂ ಪ್ರೌಢಶಾಲೆ ಯಲ್ಲಿನ ಸಮಸ್ಯೆಗಳು ಪರಿಹಾರವಾಗುವುದು
>> ಕಷ್ಟಸಾಧ್ಯ.
>>
>> On Jan 23, 2017 9:06 AM, "ಮಹೇಶ್.ಎಸ್ - ಕನ್ನಡ ದೀವಿಗೆ" <
>> [email protected]> wrote:
>>
>>> ಆತ್ಮೀಯ ಶಿಕ್ಷಕ ಮಿತ್ರರೇ,
>>> 10ನೆಯ ತರಗತಿಯ ವಾರ್ಷಿಕ ಪರೀಕ್ಷೆ ಇಂದು ಹತ್ತು-ಹಲವು ಕಾರಣಗಳಿಂದಾಗಿ ಮಹತ್ವದ
>>> ವಿಷಯವಾಗಿ ಪರಿಣಮಿಸಿರುವುದು ನಮಗೆಲ್ಲ ಈಗಾಗಲೇ ವೇದ್ಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ
>>> ದೃಷ್ಟಿಯಿಂದ, ಶಾಲೆಯ ಫಲಿತಾಂಶದ ದೃಷ್ಟಿಯಿಂದ  ಅಷ್ಟೇ ಅಲ್ಲದೇ ಕೆಲವರ ಪ್ರತಿಷ್ಠೆಯ
>>> ದೃಷ್ಟಿಯಿಂದ 10ನೆಯ ತರಗತಿ ಫಲಿತಾಂಶ ಎಂಬ 'ಬೆದರುಬೊಂಬೆ' ಇಂದು ದೈತ್ಯಾಕಾರವಾಗಿ ಬೆಳೆದು
>>> ನಿಂತಿದ್ದು; ಯಾವ ಪರೀಕ್ಷೆಗಳಿಗೂ ಇಲ್ಲದ ಭವ್ಯತೆಯನ್ನು ತಾನು ಪಡೆದುಕೊಂಡಿದೆ;
>>> ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯ ಶಿಕ್ಷಕರು, ಪಾಲಕರು ಅಲ್ಲದೆ ಈ ಶೈಕ್ಷಣಿಕ
>>> ವ್ಯಾಪ್ತಿಗೆ ಒಳಪಡುವ ಹಲವು ಅಧಿಕಾರಿಗಳ ನಿದ್ದೆಗೆಡಿಸಿದೆ.
>>>           ತರಬೇತಿಗಳಲ್ಲಿ, ಕಾರ್ಯಾಗಾರಗಳಲ್ಲಿ 'ಗುಣಾತ್ಮಕ ಶಿಕ್ಷಣ'ದ ಮಂತ್ರ ಪಠಿಸುವ;
>>> ಉದ್ದುದ್ದ ಭಾಷಣ ಮಾಡುವ ಅನೇಕರು ದುರದೃಷ್ಟವಶಾತ್ ಇಂದು ಮೂರು ಗಂಟೆಗಳಲ್ಲಿ ವಿದ್ಯಾರ್ಥಿಯ
>>> ಭವಿಷ್ಯವನ್ನು ನಿರ್ಧರಿಸುವ 'ಪರಿಮಾಣಾತ್ಮಕ' ಪರೀಕ್ಷಾ ಪದ್ಧತಿಗೆ ಜೋತು ಬಿದ್ದಿದ್ದು
>>> "ಎಸ್.ಎಸ್.ಎಲ್.ಸಿ. ಅಂಕಗಳಿಕೆ.... ಎಸ್.ಎಸ್.ಎಲ್.ಸಿ. ಅಂಕಗಳಿಕೆ.... ಎಸ್.ಎಸ್.ಎಲ್.ಸಿ.
>>> ಅಂಕಗಳಿಕೆ....." ಎಂದು ಹುಯಿಲೆಬ್ಬಿಸಿದ್ದಾರೆ. ಆ ಮೂಲಕ "ಅಂಕಗಳಿಕೆಯೇ ನಮ್ಮ ಶಿಕ್ಷಣದ
>>> ಗುರಿ" ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ.
>>>          ಪ್ರಪಂಚದ ಯಾವುದಾದರೂ ಮೂಲೆಯಲ್ಲಿ 'ತಳಪಾಯ' ಇಲ್ಲದ ಅಥವಾ 'ತಳಪಾಯ' ಇದ್ದರೂ
>>> 'ಭದ್ರವಾದ ತಳಪಾಯ' ಇಲ್ಲದ ನೆಲದ ಮೇಲೆ 'ದೊಡ್ಡ ಕಟ್ಟಡ' ನಿರ್ಮಾಣ ಮಾಡುವ 'ಇಂಜಿನಿಯರ್'
>>> ನೋಡಿದ್ದೀರಾ...! ಅಂತಹ  'ಇಂಜಿನಿಯರ್' ಏನಾದರೂ ಇದ್ದಲ್ಲಿ ಅದು 'ಕರ್ನಾಟಕದ ಸರ್ಕಾರಿ
>>> ಪ್ರೌಢಶಾಲೆ'ಗಳಲ್ಲಿ...!!
>>>             "ಪ್ರೌಢಶಾಲೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಲ್ಲಿ ಶೇಕಡ 50 ಕ್ಕಿಂತ
>>> ಹೆಚ್ಚು ವಿದ್ಯಾರ್ಥಿಗಳಿಗೆ ಸರಿಯಾಗಿ ಓದುವ, ಬರೆಯುವ, ಲೆಕ್ಕಮಾಡುವ ಸಾಮಾನ್ಯ ಸಾಮರ್ಥ್ಯವೂ
>>> ಇಲ್ಲ" ಎಂದು ಗೋಳಾಡುತ್ತಿರುವ ಶಿಕ್ಷಕರ ಅಳಲು ಕೇವಲ 'ಅರಣ್ಯ ರೋಧನ'ವಾಗಿದೆ.
>>>            ಏಳೆಂಟು ವರ್ಷ ಏನೂ ಕಲಿಯದೇ ಬಂದ ಶೇಕಡ 50 ಕ್ಕಿಂತ ಹೆಚ್ಚು
>>> ವಿದ್ಯಾರ್ಥಿಗಳಿಗೆ; ಒಂದು ತಿಂಗಳ ಸೇತುಬಂಧ, ನಂತರದ ಕೆಲವು ತಿಂಗಳುಗಳಲ್ಲಿ ನಿಗದಿಪಡಿಸಲಾದ
>>> ಪಠ್ಯಬೋಧನೆಯ ನಡುವೆ ಸಮಯ ಹೊಂದಿಸಿಕೊಂಡರೆ ದೊರೆಯುವ ಕೆಲವೇ ಕೆಲವು ಅವಧಿಗಳಲ್ಲಿ ಮಾಡಬಹುದಾದ
>>> ಪರಿಹಾರ ಬೋಧನೆಯ ಮೂಲಕ ವಿದ್ಯಾರ್ಥಿಗಳನ್ನು ಮೇಲೆ ತರಬೇಕೆಂದು ಶಿಕ್ಷಕರು ದಿನನಿತ್ಯ
>>> ಹೆಣಗಾಡುತ್ತಿದ್ದಾರೆ. ಕಟ್ಟಪ್ಪಣೆ ಮಾಡುವವರು ವಸ್ತುಸ್ಥಿತಿಯನ್ನು ಅರಿತಿರುವರೇ?
>>> ಅರಿತಿದ್ದೂ ಹೀಗೆ ಆಜ್ಞೆ ಮಾಡುತ್ತಿರುವರೇ? ಎಂಬ ಪ್ರಶ್ನೆಗಳು ಶಿಕ್ಷಕರನ್ನು ಕಾಡುತ್ತಿವೆ.
>>>         ಎಲ್ಲಿಯವರೆಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ವಿದ್ಯಾರ್ಥಿ ಮೇಲ್ಮಟ್ಟದ
>>> ತರಗತಿಗೆ ಬಂದ ನಂತರ "ಅಂಕಗಳಿಕೆ" ಯ ಹುಯಿಲೆಬ್ಬಿಸುವ ಬದಲು ತಳಮಟ್ಟದಿಂದ ಸರಿಪಡಿಸುವ ಬಗ್ಗೆ
>>> ಚಿಂತನೆ ಮಾಡುವುದಿಲ್ಲವೋ..... ಮೇಲ್ಮಟ್ಟದ ವಿದ್ಯಾರ್ಥಿ ಕನಿಷ್ಠ ಅಂಕಗಳಿಸದಿರಲು ಅವನಿಗೆ
>>> ತಳಮಟ್ಟದಲ್ಲಿ ಸರಿಯಾದ ಬುನಾದಿ ಇಲ್ಲದಿರುವುದೇ ಪ್ರಮುಖ ಕಾರಣ ಎಂದು ಬುಡಮಟ್ಟದಿಂದ
>>> ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ 'ಧೈರ್ಯ' ತೋರುವುದಿಲ್ಲವೋ.... ಅಲ್ಲಿಯವರೆಗೆ ಈ
>>> ಸಮಸ್ಯೆಗೆ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯಕ್ಕೆ, ಶಿಕ್ಷಕರ ಮೇಲೆ
>>> ಹೇರಲಾಗುತ್ತಿರುವ ಒತ್ತಡಕ್ಕೆ ಕೊನೆ ಎಂಬುದಿಲ್ಲ.
>>>        ದಿನನಿತ್ಯ 'ದೊಡ್ಡವರ ಆಜ್ಞೆ', 'ನಿಯಮಗಳ ಸಂಕೋಲೆ', 'ಕಡತಗಳ ಸಾಗರ'ದಲ್ಲಿ
>>> ಶಿಕ್ಷಕರು ಹೈರಾಣಾಗಿದ್ದಾರೆ; ಕೆಲವರಂತು ಇಂತಹ ಒತ್ತಡಗಳಿಂದಾಗಿ ಮಾನಸಿಕ ನೆಮ್ಮದಿ/ಆರೋಗ್ಯ
>>> ಕಳೆದುಕೊಂಡಿದ್ದಾರೆ.
>>> ಅಲ್ಲವೇ ಮತ್ತೆ....!! ತಳಪಾಯವಿಲ್ಲದ ನೆಲದ ಮೇಲೆ ಸೌಧ ನಿರ್ಮಿಸುವುದೆಂದರೆ....!!
>>> ಸಾಮಾನ್ಯದ ಮಾತಾಯಿತೇ...!!
>>>            ಅದೇನೇ ಇರಲಿ, ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ
>>> 'ಅಂಕಗಳಿಕೆ' ಯ ಕಡೆ ನಮ್ಮೆಲ್ಲರ ಚಿತ್ತವಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು
>>> 'ಉತ್ತೀರ್ಣರಾಗುವಂತೆ ಮಾಡುವ' ಆದ್ಯಕರ್ತವ್ಯ ನಮ್ಮದಾಗಿದೆ. ಎಲ್ಲ ಒತ್ತಡಗಳನ್ನು
>>> ಹಗುರಾಗಿಸಿಕೊಂಡು; ಯಾವ ಯಾವ ವಿಧಾನಗಳ ಮೂಲಕ ವಿದ್ಯಾರ್ಥಿಗಳಿಗೆ ಅವರು ಉತ್ತೀರ್ಣರಾಗಲು
>>> ಬೇಕಾಗುವ ಅಂಕಗಳಿಕೆಗೆ ಮಾರ್ಗದರ್ಶನ ಮಾಡಬೇಕು ಎಂಬುದರ ಕಡೆ ನಮ್ಮ ಪ್ರಯತ್ನವಿರಬೇಕು.
>>>            ಈ ನಿಟ್ಟಿನಲ್ಲಿ ನೀಲನಕ್ಷೆಯನ್ನಾಧರಿಸಿ ಕಲಿಕಾ ಕಾರ್ಡುಗಳನ್ನು
>>> ನಿರ್ಮಿಸಲಾಗಿದ್ದು, ಅದನ್ನು 'ಕನ್ನಡ ದೀವಿಗೆ'ಯ ಮೂಲಕ ನಿಮಗೆ ತಲುಪಿಸುತ್ತಿದ್ದೇನೆ. A4
>>> ಅಳತೆಯ ಡ್ರಾಯಿಂಗ್ ಹಾಳೆಗಳಿಗೆ ನೇರವಾಗಿ ಮುದ್ರಿಸಿಕೊಂಡು ವಿದ್ಯಾರ್ಥಿಗಳ ಕಲಿಕೆಗೆ
>>> ಬಳಸಿಕೊಳ್ಳಬಹುದಾಗಿದೆ.
>>>                       ಶುಭ ಹಾರೈಕೆಗಳೊಂದಿಗೆ,
>>>                                             - ಎಸ್.ಮಹೇಶ್. 'ಕನ್ನಡ ದೀವಿಗೆ'
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send an email to [email protected].
>>> Visit this group at https://groups.google.com/group/kannadastf.
>>> To view this discussion on the web, visit https://groups.google.com/d/ms
>>> gid/kannadastf/5264cac6-ffb3-4c9c-8363-a08e0768c208%40googlegroups.com.
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit https://groups.google.com/d/ms
>> gid/kannadastf/CABGueMLcdmEY5T0ooEbMJ%3DiG24RkvUhStv_
>> H2pLcig4N6R%2BnCg%40mail.gmail.com
>> <https://groups.google.com/d/msgid/kannadastf/CABGueMLcdmEY5T0ooEbMJ%3DiG24RkvUhStv_H2pLcig4N6R%2BnCg%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAFxdJf5xhF4jsV34Evf%3DXJHbcqbYd1_
> jqnhD9y65K6q87Yzfog%40mail.gmail.com
> <https://groups.google.com/d/msgid/kannadastf/CAFxdJf5xhF4jsV34Evf%3DXJHbcqbYd1_jqnhD9y65K6q87Yzfog%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAPdHKRjxhB_oLrXSLqq-OYhNZX4dBiMRABSS4RgedxeaxoxPbQ%40mail.gmail.com.
For more options, visit https://groups.google.com/d/optout.
  • [Kannada ... ಮಹೇಶ್ . ಎಸ್ - ಕನ್ನಡ ದೀವಿಗೆ
    • Re: ... Basavaraj Basu
      • ... Vasanthappa K
    • Re: ... Sharadabai Angadi
      • ... manjaiah sakshi
        • ... Umesh H V
      • ... SAMPATH KUMAR G P
        • ... anupama desai
    • Re: ... MAHANTESH KONNUR

Reply via email to