ಮೋಸವಾಯಿತೋ...ಅನ್ನದಾತ --------------------------------------------- ಮೋಸವಾಯಿತೋ ಅನ್ನದಾತ ನಿನಗ ಮತ್ತೇ ಮೋಸವಾಯಿತು ಜಗವೆ ಉಣ್ಣುವ ಅನ್ನಕ್ಕಿಲ್ಲದ ಬೆಲೆ ಮಂಸ ಮದ್ಯಕೆ ಬಂತು ಇಗ ನೆಲೆ ಚಿನ್ನ ಕಬ್ಬಿಣಕ್ಕಿಂತ ಹೀನವಾದ ಬಾಳು ಬಡವನ ಕಥೆ ಮುಗಿಸಿದರು ಬಿಳಿಯಂಗಿಯವರು ಮೋಸವಾಯಿತೋ ಅನ್ನದಾತ.....!!!
ಅನ್ನದಾತಗೊಂದು ಬೆಲೆ ತಮಗೊಂದು ಬೇರೆ ಬೆಲೆ ರೈತ ಸತ್ತರೆ ದೂರ ಹೋಗುವರು ತಾವು ಸತ್ತರೆ ನಾಡ ಕೂಡಿಸುವರು ಎತ್ತು ಸತ್ತರೆ ಮಣ್ಣು ಕೊಡುವರು ತಮ್ಮ ಕಾರು ಸುಟ್ಟರೆ ಬಾಯಿ ಬಡಿವರು ಮೋಸವಾಯಿತೋ ಅನ್ನದಾತ.....!!! ರೈತನಿಗೆ ಕುಡಿಯಲು ಎಳ್ಳಷ್ಟೂ ನಿರಿಲ್ಲ ಬೀರು ದಾರು ಕೈ ಮಾಡಿದಲ್ಲಿ ದೊರಿತೈತಲ್ಲ ಗುಡಿ ಗುಂಡಾರಗಳಿಗೆ ಹಣ ಎಲ್ಲಿಂದ ಬರತೈತಿ ರೈತರ ಸಾಲ ಮನ್ನಾ ಅಂದ್ರ ಹಣ ಎಲ್ಲ ಹೋಗೈತಿ ದಿನಕ್ಕೆ ಎರಡು ತಾಸು ಕರೆಂಟ್ ಕೊಡತಿರಿ ನಿಮ್ಮ ಮನಿ ಮನ್ಯಾಗ ಹಗಲು ದೀಪ ಉರಿತಿರಿ ಮೋಸವಾಯಿತೋ ಅನ್ನದಾತ.....!!! ತಿಳಿದು ತೂಗಿ ನೋಡೋ ರೈತ ಹೆಂಡ ಖಂಡಕ ಮಾರದಿರು ಮತ ಇಡಬೇಡ ಇಂತವರಿಗೆ ಮಮತ ನಂಬಬೇಡ ಇವರ ಕಣ್ಣಿರು ಕಥಾ ಮೋಸವಾಯಿತೋ ಅನ್ನದಾತ.....!!! -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
