* ಕನ್ನಡ ಕವಿ-ಕಿವಿಗಳಿಗೆ ಕಬ್ಬದ ಹಬ್ಬಕೆ ಸ್ವಾಗತ *

* ಆತ್ಮೀಯ ಕನ್ನಡ ಕವಿ ಕವಯಿತ್ರಿ ಸಹೃದಯಿ ಬಂಧುಗಳಿಗೆ ಶುಭವಂದನೆಗಳು. ನಮ್ಮ
'ಗ್ರಂಥಸರಸ್ವತಿ  ಪ್ರತಿಭಾರಂಗ' ವು ವರ್ಷಂಪೂರ್ತಿ  ಹಮ್ಮಿಕೊಂಡಿರುವ "ಕನ್ನಡಕಬ್ಬ
ಉಗಾದಿಹಬ್ಬ" ಎಂಬ ‌ವಿನೂತ‌ನ ಕಾರ್ಯ ಯೋಜನೆಯನ್ನು   ನಿರಂತರವಾಗಿ ಪ್ರತಿ ಭಾನುವಾರ ಸಂಜೆ
೬.೩೦ ಕ್ಜೆ ನಡೆಸಲು ಸರ್ವಸಿದ್ಧತೆ ಮಾಡಿಕೊಂಡಿದೆ.

* ಇದು ವಿಶೇಷವಾಗಿ ಸದುಪಯೋಗವಾಗುವುದು ಕಾವ್ಯ ಬರೆಯುವ  ಸೃಜನಶಿಲ ಕವಿಗಳಿಗೆ ಆನಂತರ
ಪ್ರಜ್ಞಾವಂತ ಕಾವ್ಯ ಓದುವ ಸಹೃದಯಿಗಳಿಗೆ. ಇವರಿಬ್ಬರ ಸಂಖ್ಯೆ ದಾವಣಗೆರೆಯಲ್ಲಿ ಹೇರಳವಾಗಿ
ಇರುವುದು ಒಂದು ಹೆಮ್ಮೆಯ ಸಂಗತಿ.

* ಯಾವುದೇ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಯಾವದೇ ಪ್ರತಿಷ್ಠೆ  ಬಿಗುಮಾನ ಮುಜುಗರ ಪೂರ್ವಗ್ರಹ
ಪೀಡನೆಗಳಿಲ್ಲದೆ ಭಾಗವಹಿಸುವುದು ನಾವೆಲ್ಲರೂ ಕನ್ನಡ ಕಾವ್ಯಕ್ಷೇತ್ರಕ್ಕೆ ಸಲ್ಲಿಸುವ
ಗೌರವವಾಗುತ್ತದೆ. ಅಲ್ಲದೆ ವೈಯಕ್ತಿಕವಾಗಿ ಕಾವ್ಯಕುರಿತ ಸುಜ್ಞಾನ ಸುವಿಚಾರ ಸುಜನರ  ಸಂಪರ್ಕ
ಪ್ರಾಪ್ತಿಯಾಗುತ್ತದೆ.

*  ದುರಂತವೆಂದರೆ ಕೆಲವರು ಸ್ವಯಂ ಘೋಷಿತ ಪಥ ಪಂಥಗಳ ಸೋಗು ಹಾಕಿಕೊಂಡು  'ಸಾಹಿತ್ಯಕ
ರಾಜಕಾರಣ '  ನಡೆದುತ್ತಿದ್ದಾರೆ. ಇದರಿಂದ ಕನ್ನಡಕಾವ್ಯ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತದೆ.
ಈ ಸಂಕುಚಿತ ತನವನ್ನು ಹೊಡೆದು ಹಾಕಲು ಹಿರಿ ಕಿರಿ ಕಾವ್ಯಪ್ರೇಮಿಗಳೆಲ್ಲಾ ಅಲ್ಲಲ್ಲಿ ಆಗಾಗ
ನಡೆವ ಸೃಜನಶೀಲ  ಚಟುವಟಿಕೆಗಳಲ್ಲಿ ಅರಿತು ಬೆರೆತು ಆರೋಗ್ಯಪೂರ್ಣ ಚಿಂತನೆ ನಡೆಸಬೇಕಿದೆ.

  * ಯಾವುದೋ ಕಾರಣವಲ್ಲದ ಕಾರಣಕ್ಕೆ ಕಾವ್ಯ ಕುರಿತ ಕಾರ್ಯಕ್ರಮ, ಸಮಾರಂಭ,  ಶಿಬಿರ, ಕಮ್ಮಟ,
ಕವಿಗೋಷ್ಠಿಗಳನ್ನು  ಆಯೋಜಿಸುವ ಕ್ರಿಯಾಶೀಲ ಸಂಘಟಕರ ಅಥವಾ ಸಂಘಟನೆಗಳ ಕುರಿತು ನಮ್ಮಲ್ಲಿ
ಎಂತಹದೇ ಭಿನ್ನಾಭಿಪ್ರಾಯ ವೈರುಧ್ಯ ಅಸಮಾಧಾನ ಅಸಹನೆಗಳಿದ್ದರೂ ಆ ಋಣಾತ್ಮಕ ಅಪಮೌಲ್ಯಗಳನ್ನು
ಬದಿಗೊತ್ತಿ  ಅಂತಹ ಸಭೆ ಸಮಾರಂಭಗಳಲ್ಲಿ  ಪಾಲ್ಗೊಂಡು  ಕನ್ನಡ ಕಟ್ಟುವ ಬೆಳಗಿಸುವ ಸಂಜೆದೀಪ
ಹಚ್ಚುವ  ಸಮಯವನ್ನು ನಮ್ಮದಾಗಿಸಿಕೊಳ್ಳಬೇಕಿದೆ.

* ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನಮ್ಮ ಬಳಿಯೇ ತಂದುಕೊಡಬೇಕು, ಅದರಲ್ಲಿ ನಮ್ಮ ಹೆಸರು
ಇರಲೇಬೇಕು, ಈ ಮೊದಲೇ ನಮ್ಮನ್ನು ಖುದ್ದು ಸಂರ್ಕಿಸಿ ಒಪ್ಪಿಗೆ ಪಡೆಯಬೇಕು ಮುಂತಾದ
ಹಳಸಲುತನವನ್ನು ಕೈಬಿಟ್ಟು  ಸುದ್ಧಿ ಮಾದ್ಯಮ,  ಅಂತರ್ಜಾಲ ಮೊಬೈಲ್ ಸಂದೇಶದ ಮೂಲಕ ಬರುವ
ಆತ್ಮೀಯ ಸಾರ್ವಜನಿಕ ಕರೆಗಳಿಗೂ ಮನ್ನಣೆ ನೀಡಿ ಅಲ್ಲಿಗೆ ಹೋಗಿ ಭಾಗವಹಿಸುವ ಕರ್ತವ್ಯವನ್ನು
 ಮೈಗೂಡಿಸಿಕೊಳ್ಳಬೇಕಿದೆ. . ಅಲ್ಲದೆ ಕೈಲಾದ ತನುಮನಧನ ಸೇವೆ ಸಹಕಾರ ನೀಡಲು  ಮುಂದಾಗಬೇಕಿದೆ.

*  ಇದು ಆಗದೆ ಹೊದಲ್ಲಿ ತೊಡರುಗಾಲು ಹಾಕುವುದು ವ್ಯಂಗ್ಯ ವ್ಯರ್ಥಾಲಪ ಅಪಪ್ರಚಾರ ಅಪನಿಂಧನೆ
ಮಾಡುವವರಿಗೆ ತಿದ್ದಿ ತಿಳುವಳಿಕೆ ಹೇಳುವ ನಡೆಜಾಗೃತಿ ಕಾಯಕವನ್ನು ಆ ಕ್ಷಣವೇ ಮಾಡುವ ಸಂಕಲ್ಪ
ತೊಡಬೇಕಿದೆ.

* ಬನ್ನಿ ಕನ್ನಡನಾಡು ನುಡಿಯ  ಮೈ ಮನ ಮನೆಗಳಿಗೆ ಹೊಸ ಕಂಕಣ ತೋರಣ ಕಟ್ಟಿಕೊಳ್ಳೋಣ. ಕನ್ನಡ
ಕಬ್ಬದ ಹಬ್ಬದಲ್ಲಿ ಮಿಂದೇಳೋಣ. ಹೊಸ ಮನ್ವಂತರಕೆ ಮುನ್ನುಡಿ ಬರೆಯೋಣ. ಕನ್ನಡವೇ ನಮ್ಮ ಮತಿ
ಮತ ಪಥ ಧರ್ಮ ಸರ್ವಸ್ವ ಎನ್ನೋಣ .

* ಏಳಿ ಎದ್ದೇಳಿ
ಬಾರಿಸಿ ಕನ್ನಡ ಡಿಂಡಿಮವ,
ಓ! ಕರ್ನಾಟಕ ಹೃದಯ ಶಿವ !
 ಸತ್ತಂತಿಹರನು ಬಡಿದೆಚ್ಚರಿಸು,
ಕಚ್ಚಾಡುವರನು ಕೂಡಿಸಿ ನಲಿಸು ....

* ನಿಮ್ಮ ಸಲಹೆ ಸಂದೇಶಕ್ಕಾಗಿ ಕಾಯುವ ಕನ್ನಡ ನಾಡುನುಡಿ ಸೇವಕ
. . . .ಆರ್. ಶಿವಕುಮಾರಸ್ವಾಮಿ ಕುರ್ಕಿ, ಅಧ್ಯಕ್ಷರು, ಗ್ತಂಥಸರಸ್ವತಿ ಪ್ರತಿಭಾರಂಗ,
ದಾವಣಗೆರೆ.
ಮೊ:8970948221 [email protected]

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to