shivakumar sir you make good work ದಿನಾಂಕ 2/4/17, shivakumarswamy. R kurki <[email protected]> ಹೀಗೆ ಬರೆದರು: > * ಕನ್ನಡ ಕವಿ-ಕಿವಿಗಳಿಗೆ ಕಬ್ಬದ ಹಬ್ಬಕೆ ಸ್ವಾಗತ * > > * ಆತ್ಮೀಯ ಕನ್ನಡ ಕವಿ ಕವಯಿತ್ರಿ ಸಹೃದಯಿ ಬಂಧುಗಳಿಗೆ ಶುಭವಂದನೆಗಳು. ನಮ್ಮ > 'ಗ್ರಂಥಸರಸ್ವತಿ ಪ್ರತಿಭಾರಂಗ' ವು ವರ್ಷಂಪೂರ್ತಿ ಹಮ್ಮಿಕೊಂಡಿರುವ "ಕನ್ನಡಕಬ್ಬ > ಉಗಾದಿಹಬ್ಬ" ಎಂಬ ವಿನೂತನ ಕಾರ್ಯ ಯೋಜನೆಯನ್ನು ನಿರಂತರವಾಗಿ ಪ್ರತಿ ಭಾನುವಾರ ಸಂಜೆ > ೬.೩೦ ಕ್ಜೆ ನಡೆಸಲು ಸರ್ವಸಿದ್ಧತೆ ಮಾಡಿಕೊಂಡಿದೆ. > > * ಇದು ವಿಶೇಷವಾಗಿ ಸದುಪಯೋಗವಾಗುವುದು ಕಾವ್ಯ ಬರೆಯುವ ಸೃಜನಶಿಲ ಕವಿಗಳಿಗೆ ಆನಂತರ > ಪ್ರಜ್ಞಾವಂತ ಕಾವ್ಯ ಓದುವ ಸಹೃದಯಿಗಳಿಗೆ. ಇವರಿಬ್ಬರ ಸಂಖ್ಯೆ ದಾವಣಗೆರೆಯಲ್ಲಿ ಹೇರಳವಾಗಿ > ಇರುವುದು ಒಂದು ಹೆಮ್ಮೆಯ ಸಂಗತಿ. > > * ಯಾವುದೇ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಯಾವದೇ ಪ್ರತಿಷ್ಠೆ ಬಿಗುಮಾನ ಮುಜುಗರ ಪೂರ್ವಗ್ರಹ > ಪೀಡನೆಗಳಿಲ್ಲದೆ ಭಾಗವಹಿಸುವುದು ನಾವೆಲ್ಲರೂ ಕನ್ನಡ ಕಾವ್ಯಕ್ಷೇತ್ರಕ್ಕೆ ಸಲ್ಲಿಸುವ > ಗೌರವವಾಗುತ್ತದೆ. ಅಲ್ಲದೆ ವೈಯಕ್ತಿಕವಾಗಿ ಕಾವ್ಯಕುರಿತ ಸುಜ್ಞಾನ ಸುವಿಚಾರ ಸುಜನರ ಸಂಪರ್ಕ > ಪ್ರಾಪ್ತಿಯಾಗುತ್ತದೆ. > > * ದುರಂತವೆಂದರೆ ಕೆಲವರು ಸ್ವಯಂ ಘೋಷಿತ ಪಥ ಪಂಥಗಳ ಸೋಗು ಹಾಕಿಕೊಂಡು 'ಸಾಹಿತ್ಯಕ > ರಾಜಕಾರಣ ' ನಡೆದುತ್ತಿದ್ದಾರೆ. ಇದರಿಂದ ಕನ್ನಡಕಾವ್ಯ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತದೆ. > ಈ ಸಂಕುಚಿತ ತನವನ್ನು ಹೊಡೆದು ಹಾಕಲು ಹಿರಿ ಕಿರಿ ಕಾವ್ಯಪ್ರೇಮಿಗಳೆಲ್ಲಾ ಅಲ್ಲಲ್ಲಿ ಆಗಾಗ > ನಡೆವ ಸೃಜನಶೀಲ ಚಟುವಟಿಕೆಗಳಲ್ಲಿ ಅರಿತು ಬೆರೆತು ಆರೋಗ್ಯಪೂರ್ಣ ಚಿಂತನೆ ನಡೆಸಬೇಕಿದೆ. > > * ಯಾವುದೋ ಕಾರಣವಲ್ಲದ ಕಾರಣಕ್ಕೆ ಕಾವ್ಯ ಕುರಿತ ಕಾರ್ಯಕ್ರಮ, ಸಮಾರಂಭ, ಶಿಬಿರ, ಕಮ್ಮಟ, > ಕವಿಗೋಷ್ಠಿಗಳನ್ನು ಆಯೋಜಿಸುವ ಕ್ರಿಯಾಶೀಲ ಸಂಘಟಕರ ಅಥವಾ ಸಂಘಟನೆಗಳ ಕುರಿತು ನಮ್ಮಲ್ಲಿ > ಎಂತಹದೇ ಭಿನ್ನಾಭಿಪ್ರಾಯ ವೈರುಧ್ಯ ಅಸಮಾಧಾನ ಅಸಹನೆಗಳಿದ್ದರೂ ಆ ಋಣಾತ್ಮಕ ಅಪಮೌಲ್ಯಗಳನ್ನು > ಬದಿಗೊತ್ತಿ ಅಂತಹ ಸಭೆ ಸಮಾರಂಭಗಳಲ್ಲಿ ಪಾಲ್ಗೊಂಡು ಕನ್ನಡ ಕಟ್ಟುವ ಬೆಳಗಿಸುವ ಸಂಜೆದೀಪ > ಹಚ್ಚುವ ಸಮಯವನ್ನು ನಮ್ಮದಾಗಿಸಿಕೊಳ್ಳಬೇಕಿದೆ. > > * ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನಮ್ಮ ಬಳಿಯೇ ತಂದುಕೊಡಬೇಕು, ಅದರಲ್ಲಿ ನಮ್ಮ ಹೆಸರು > ಇರಲೇಬೇಕು, ಈ ಮೊದಲೇ ನಮ್ಮನ್ನು ಖುದ್ದು ಸಂರ್ಕಿಸಿ ಒಪ್ಪಿಗೆ ಪಡೆಯಬೇಕು ಮುಂತಾದ > ಹಳಸಲುತನವನ್ನು ಕೈಬಿಟ್ಟು ಸುದ್ಧಿ ಮಾದ್ಯಮ, ಅಂತರ್ಜಾಲ ಮೊಬೈಲ್ ಸಂದೇಶದ ಮೂಲಕ ಬರುವ > ಆತ್ಮೀಯ ಸಾರ್ವಜನಿಕ ಕರೆಗಳಿಗೂ ಮನ್ನಣೆ ನೀಡಿ ಅಲ್ಲಿಗೆ ಹೋಗಿ ಭಾಗವಹಿಸುವ ಕರ್ತವ್ಯವನ್ನು > ಮೈಗೂಡಿಸಿಕೊಳ್ಳಬೇಕಿದೆ. . ಅಲ್ಲದೆ ಕೈಲಾದ ತನುಮನಧನ ಸೇವೆ ಸಹಕಾರ ನೀಡಲು > ಮುಂದಾಗಬೇಕಿದೆ. > > * ಇದು ಆಗದೆ ಹೊದಲ್ಲಿ ತೊಡರುಗಾಲು ಹಾಕುವುದು ವ್ಯಂಗ್ಯ ವ್ಯರ್ಥಾಲಪ ಅಪಪ್ರಚಾರ ಅಪನಿಂಧನೆ > ಮಾಡುವವರಿಗೆ ತಿದ್ದಿ ತಿಳುವಳಿಕೆ ಹೇಳುವ ನಡೆಜಾಗೃತಿ ಕಾಯಕವನ್ನು ಆ ಕ್ಷಣವೇ ಮಾಡುವ ಸಂಕಲ್ಪ > ತೊಡಬೇಕಿದೆ. > > * ಬನ್ನಿ ಕನ್ನಡನಾಡು ನುಡಿಯ ಮೈ ಮನ ಮನೆಗಳಿಗೆ ಹೊಸ ಕಂಕಣ ತೋರಣ ಕಟ್ಟಿಕೊಳ್ಳೋಣ. ಕನ್ನಡ > ಕಬ್ಬದ ಹಬ್ಬದಲ್ಲಿ ಮಿಂದೇಳೋಣ. ಹೊಸ ಮನ್ವಂತರಕೆ ಮುನ್ನುಡಿ ಬರೆಯೋಣ. ಕನ್ನಡವೇ ನಮ್ಮ ಮತಿ > ಮತ ಪಥ ಧರ್ಮ ಸರ್ವಸ್ವ ಎನ್ನೋಣ . > > * ಏಳಿ ಎದ್ದೇಳಿ > ಬಾರಿಸಿ ಕನ್ನಡ ಡಿಂಡಿಮವ, > ಓ! ಕರ್ನಾಟಕ ಹೃದಯ ಶಿವ ! > ಸತ್ತಂತಿಹರನು ಬಡಿದೆಚ್ಚರಿಸು, > ಕಚ್ಚಾಡುವರನು ಕೂಡಿಸಿ ನಲಿಸು .... > > * ನಿಮ್ಮ ಸಲಹೆ ಸಂದೇಶಕ್ಕಾಗಿ ಕಾಯುವ ಕನ್ನಡ ನಾಡುನುಡಿ ಸೇವಕ > . . . .ಆರ್. ಶಿವಕುಮಾರಸ್ವಾಮಿ ಕುರ್ಕಿ, ಅಧ್ಯಕ್ಷರು, ಗ್ತಂಥಸರಸ್ವತಿ ಪ್ರತಿಭಾರಂಗ, > ದಾವಣಗೆರೆ. > ಮೊ:8970948221 [email protected] > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ > - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು > -http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send an email to [email protected]. > For more options, visit https://groups.google.com/d/optout. >
-- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
