ಬರುವ ಶೈಕ್ಷಣಿಕ ವರ್ಷ 2017--2018ನೇ ಸಾಲಿಗೆ ಎಸ್ ಎಸ್ ಎಲ್ ಸಿ ಗೆ ಪ್ರಥಮ ಭಾಷೆ ಕನ್ನಡ 
ಪಠ್ಯಪುಸ್ತಕದ ಪದ್ಯ ವಿಭಾಗದಲ್ಲಿ ಕುವೆ೦ಪುರವರ ' ಪಕ್ಷಿಕಾಶಿ ' ಕವನ ಸ೦ಕಲನದಿ೦ದ 
ಆಯ್ದುಕೊ೦ಡಿರುವ  " ಹಸುರು" ಪದ್ಯವು ಆಯ್ಕೆಯಾಗಿದೆ.

ಕುವೆ೦ಪುರವರು ಅಶ್ವಿಜಮಾಸದ 11-10-1937ರ೦ದು ಕವಿಶೈಲದ ನೆತ್ತಿಯಲ್ಲಿ ಕುಳಿತುಕೊ೦ಡು ಅಲ್ಲಿನ 
ಸೌ೦ದರ್ಯವನ್ನು ಸವಿಯುತ್ತಾ ಹಸುರಿನ ರಸಾನುಭೂತಿಯನ್ನು ನಮ್ಮೆಲ್ಲರಿಗೆ ಉಣಬಡಿಸಿದ್ದಾರೆ.
             
              " ಹಸುರು "

ನವರಾತ್ರಿಯ ನವಧಾತ್ರಿರಯ
      ಈ ಶ್ಯಾಮಲ ವನಧಿಯಲಿ
ಹಸುರಾದುದೊ ಕವಿಯಾತ್ಮ೦
      ರಸಪಾನ ಸ್ನಾನದಲಿ !     ||೧||

ಹಸುರಾಗಸ; ಹಸುರು ಮುಗಿಲು;
      ಹಸುರು ಗದ್ದೆಯಾ ಬಯಲು;
ಹಸುರಿನ ಮಲೆ; ಹಸುರು ಕಣಿವೆ ;
      ಹಸುರು ಸ೦ಜೆಯಿ ಬಿಸಿಲೂ !  ||೨||

ಅಶ್ವಿಜದ ಶಾಲಿವನದ
       ಗಿಳಿಯದೆ ಬಣ್ಣದ ನೋಟ;
ಅದರಡೆಯಲಿ ಬನದ೦ಚಲಿ
       ಕೊನೆವೆತ್ತಡಕೆಯ ತೋಟ ! ||೩||

ಅದೊ ಹುಲ್ಲಿನ ಮಕಮಲ್ಲಿನ
        ಪೊಸಪಚ್ಚೆಯ ಜಮಖಾನೆ
ಪಸರಿಸಿ ತಿರೆ ಮೈ ಮುಚ್ಚಿರೆ
        ಬೇರೆ ಬಣ್ಣವನೆ ಕಾಣೆ !  ||೪||

ಹೊಸ ಹೂವಿನ ಕ೦ಪು ಹಸುರು,
       ಎಲರಿನ ತ೦ಪೂ ಹಸುರು !
ಹಕ್ಕಿಯ ಕೊರಲಿ೦ಪು ಹಸುರು ;
       ಹಸುರು ಹಸುರಿಳೆಯುಸಿರೂ ! ||೫||

ಹಸುರತ್ತಲ್ ! ಹಸುರಿತ್ತಲ್ !
       ಹಸುರೆತ್ತಲ್ ಕಡಲಿನಲಿ
ಹಸುರ್ಗಟ್ಟಿತೊ ಕವಿಯಾತ್ಮ೦
        ಹಸುರ್ ನೆತ್ತರ್ ಒಡಲಿನಲಿ !' ||೬||

                                        ಕುವೆ೦ಪು

Sent from my Intex Smartphone

13 ಏಪ್ರಿ. 2017 08:12 AM ರಂದು, LALEBASHA MY <lalebasha...@gmail.com> ಅವರು ಬರೆದರು:
>
> ಮೇಡಂ ಹೊಸ ಪಠ್ಯಪುಸ್ತಕದ ಪಾಠಗಳೇ
>
>
> On Apr 11, 2017 8:22 PM, "M N Rajeshwari" <rajeshwarim...@gmail.com> wrote:
>>
>> -- 
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ 
>> -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
>> -http://karnatakaeducation.org.in/KOER/en/index.php/Public_Software
>> -----------
>> --- 
>> You received this message because you are subscribed to the Google Groups 
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an 
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>
> -- 
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದ�

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.
  • ... ಬಸವರಾಜ . ಟಿ . ಎಂ ಕನ್ನಡ ಭಾಷಾ ಶಿಕ್ಷಕರು
    • ... Basavaraj S.
      • ... Chinna Reddy

Reply via email to