ಸಹೋದರಿ ಈಗ ನಾನು ನನ್ನ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕಾಶಿ ಯಲ್ಲಿ ಪ್ರವಾಸಕ್ಕೆ ಹೊಗೆದ್ದೇವೆ ಅಲ್ಲಿ ಗಂಗಾ ನದಿಯಲ್ಲಿ ದೋಣಿ ವಿಹಾರ ದಲ್ಲಿ ನಾನು ಯಲ್ಲರಿಗೂ ನಿಮ್ಮ ಕಥೆ ಹೇಳಿದೆ ತುಂಬಾ ಧನ್ಯವಾದಗಳು On May 3, 2017 3:31 PM, "Sameera samee" <[email protected]> wrote:
*🌻ದಿನಕ್ಕೊಂದು ಕಥೆ🌻 ನನ್ನ ಗಂಡ ನನಗಿಂತ ಮೊದಲೇ ಸಾಯಲಿ!* ನಂಬಲು ಕಷ್ಟವಾಗುತ್ತದಲ್ಲವೇ? ನನ್ನ ಗಂಡ ನನಗಿಂತ ಮೊದಲೇ ಸಾಯಲಿ ಎಂದು ಹಾರೈಸುವ ಹೆಂಡತಿ ಇದ್ದಾರೆಂದರೆ ನಂಬಲು ಕಷ್ಟವಾಗುತ್ತದಲ್ಲವೇ? ಆದರೆ ಹಾಗೆ ಹಾರೈಸಿದ, ಯಶಸ್ವಿಯೂ ಆದ ಹೆಂಡತಿಯೊಬ್ಬರನ್ನು ತಾವು ಕಂಡಿದ್ದೇವೆಂದು ‘ಕನ್ನಡದ ಆಸ್ತಿ’ಎಂದೇ ಹೆಸರುವಾಸಿಯಾಗಿದ್ದ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರೊಮ್ಮೆ ಹೇಳಿದ್ದರು. ಅಂಥ ಹೆಂಡತಿಯನ್ನು ಕಂಡಿದ್ದಷ್ಟೇ ಅಲ್ಲ, ಆಕೆಯ ಕಾಲಿಗೆ ಎರಗಿ ನಮಸ್ಕರಿಸಿದ್ದಾಗಿಯೂ ಹೇಳಿದ್ದರು. ಅವರು ಹೇಳಿದ್ದ ಘಟನೆ ಹೀಗಿತ್ತು. ನಾನು ಮೈಸೂರು ಸಂಸ್ಥಾನದ ವಿಭಾಗವೊಂದರಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ. ಒಮ್ಮೆ ಪ್ರವಾಸದಲ್ಲಿದ್ದಾಗ ಯಾವುದೋ ಹಳ್ಳಿಯಲ್ಲಿ ಬಿಡಾರ ಹೂಡಿದ್ದೆ. ಆಗ ನನ್ನ ಸಹಾಯಕರು ಬಂದು ವಿಶೇಷ ಸುದ್ದಿಯೊಂದನ್ನು ನನ್ನ ಗಮನಕ್ಕೆ ತಂದರು. ಅದೇನೆಂದರೆ ಈ ಹಳ್ಳಿಯಲ್ಲಿದ್ದ ಎಂಬತ್ತು ವರ್ಷ ದಾಟಿದ್ದ ವೃದ್ಧರೊಬ್ಬರು ಇಂದು ತೀರಿಕೊಂಡಿದ್ದಾರೆ. ಆ ವೃದ್ಧರ ಹೆಂಡತಿಗೂ ಎಂಬತ್ತರ ಆಸುಪಾಸು ವಯಸ್ಸಾಗಿದೆ. ಸರಿಸುಮಾರು 65 ವರ್ಷಗಳಿಗೂ ಹೆಚ್ಚು ಕಾಲ ಸಂಸಾರ ನಡೆಸಿದ್ದ ಮುತ್ತೈದೆ. ಆದರೆ ತಮ್ಮ ಗಂಡ ತೀರಿಕೊಂಡಿದ್ದರೂ ಆಕೆ ಒಂದು ತೊಟ್ಟು ಕಣ್ಣೀರೂ ಸುರಿಸದೆ ಗಂಭೀರವಾಗಿ ಗಂಡನ ಕಳೇಬರದ ಪಕ್ಕದಲ್ಲಿ ಕುಳಿತಿದ್ದಾರೆ. ಸಾಧ್ಯವಿದ್ದರೆ ಸಾಹೇಬರು ಆ ವೃದ್ಧ ದಂಪತಿ ಮನೆಗೆ ಹೋಗಿ, ವೃದ್ಧರಿಗೆ ಅಂತಿಮ ನಮನ ಸಲ್ಲಿಸಬಹುದು ಮತ್ತು ಆ ವೃದ್ಧೆಗೆ ಸಾಂತ್ವನ ಹೇಳಬಹುದು ಎಂಬ ಸಲಹೆಯನ್ನಿತ್ತರು. ನಾನು ನನ್ನ ಸಿಬ್ಬಂದಿಯೊಡನೆ ಅವರ ಮನೆಗೆ ಹೋದೆ. ವೃದ್ಧರ ಕಳೇಬರಕ್ಕೆ ಗೌರವ ಸಲ್ಲಿಸಿದೆ. ಆನಂತರ ಅಲ್ಲೇ ಪಕ್ಕದಲ್ಲಿ ಗಂಭೀರವಾಗಿ ಕುಳಿತಿದ್ದ ಆ ವೃದ್ಧೆಗೆ ‘ತಾಯಿ! ಆರೇಳು ದಶಕಗಳ ಕಾಲ ಸಂಸಾರ ಮಾಡಿದ್ದ ತಮಗೆ ತಮ್ಮ ಪತಿಯ ಸಾವು ತೀವ್ರ ಆಘಾತವನ್ನುಂಟು ಮಾಡಿರುವುದು ಸಹಜ. ಆದರೆ ತಾವು ದುಃಖ ದುಮ್ಮಾನವನ್ನು ಅದುಮಿಟ್ಟುಕೊಳ್ಳಬಾರದು. ಅದನ್ನು ಹೊರಗೆ ಚೆಲ್ಲಬೇಕು. ಹೀಗೆ ಸುಮ್ಮನೆ ಕೂರಬಾರದು’ ಎಂದು ಸಮಯೋಚಿತವಾದ ಮಾತುಗಳನ್ನು ಹೇಳಿದೆ. ಆ ತಾಯಿ ಕೆಲಕಾನ ಸುಮ್ಮನಾಗಿ, ನಂತರ ನಿಟ್ಟುಸಿರು ಬಿಟ್ಟು ‘ನಾವು ಅರವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಸಂಸಾರ ನಡೆಸಿದ್ದೆವು. ಮದುವೆಯಾದ ಮೊದಲನೆಯ ದಿನದಿಂದಲೂ ಅವರ ಸ್ನಾನಕ್ಕೆ ನೀರು ಸಿದ್ಧ ಪಡಿಸಿಕೊಡುವುದರಿಂದ ಹಿಡಿದು, ಅವರ ಊಟ- ಉಪಚಾರಗಳನ್ನೂ, ಅವರ ಎಲ್ಲ ಕಾರ್ಯಗಳನ್ನೂ ನಾನೇ ಮಾಡುತ್ತಿದ್ದೆ. ಇತ್ತೀಚೆಗೆ ಅವರಿಗೆ ವಯೋಭಾರದಿಂದಾಗಿ ಎಲ್ಲ ಕಾರ್ಯಗಳಿಗೂ ನನ್ನನ್ನೇ ಅವಲಂಬಿಸಿದ್ದರು. ಆಕಸ್ಮಿಕವಾಗಿ ನನಗೇ ಮೊದಲು ಸಾವು ಬಂದರೆ ಅವರ ಯೋಗಕ್ಷೇಮ ನೋಡಿಕೊಳ್ಳುವವರು ಯಾರೆಂಬ ಚಿಂತೆ ನನ್ನನ್ನು ಬಹುವಾಗಿ ಕಾಡುತ್ತಿತ್ತು ಹಾಗಾಗಿ ಅವರು ನನಗಿಂತ ಮೊದಲೇ ಸಾಯಲಿ, ಅವರು ಬೇರೆ ಯಾರ ಆಸರೆಗೂ ಕೈಚಾಚದಂತಾಗಲಿ ಎಂದು ನಾನು ದೇವರಲ್ಲಿ ಪ್ರತಿದಿನವೂ ಪ್ರಾರ್ಥಿಸುತ್ತಿದ್ದೆ. ಇದೀಗ ನನ್ನ ಪ್ರಾರ್ಥನೆಯನ್ನು ದೇವರು ಈಡೇರಿಸಿದ್ದಾನೆ. ಅವರು ನಿರಾಯಾಸ ಮರಣವನ್ನಪ್ಪಿದ್ದಾರೆ. ನನಗಿದ್ದ ದೊಡ್ಡ ಚಿಂತೆ, ಆತಂಕ ದೂರವಾಗಿದೆ. ಇನ್ನು ನನ್ನ ಬದುಕು ಹಾಗೋ ಹೇಗೋ ಸಾಗುತ್ತದೆ. ಇಂಥ ಸಂದರ್ಭದಲ್ಲಿ ದೇವರಿಗೆ ಕೃತಜ್ಞತೆಗಳನ್ನು ಸಮರ್ಪಿಸುವ ಬದಲು ನಾನು ಅಳುತ್ತ ಕೂರಬೇಕೇ? ನೀವೇ ಹೇಳಿ ಸ್ವಾಮಿ!’ಎಂದಾಗ, ನನಗೆ ಒಂದು ನಿಮಿಷ ಏನು ಮಾತನಾಡಬೇಕೆಂದು ತೋಚಲಿಲ್ಲ. ಆದರೆ ನನಗೇ ಅರಿವಿಲ್ಲ ದಂತೆ ಆಕೆಯ ಕಾಲಿಗೆ ಬಗ್ಗಿ ನಮಸ್ಕರಿಸಿ ಅಲ್ಲಿಂದ ಹೊರಟೆ. ಆದರೆ ಕೊಂಚ ಹೊತ್ತಿನಲ್ಲಿ ನನಗೊಂದು ಸುದ್ದಿ ಬಂದಿತು. ಅದೇನೆಂದರೆ ಆ ವೃದ್ಧೆಯೂ ತೀರಿಕೊಂಡರೆಂದೂ, ಅವರ ಅಂತಿಮ ಸಂಸ್ಕಾರವನ್ನೂ ಅವರ ಗಂಡನ ಅಂತಿಮ ಸಂಸ್ಕಾರದೊಟ್ಟಿಗೆ ಮಾಡಲಾಯಿತೆಂಬ ಸುದ್ದಿ! ಬಹಳ ದಿನಗಳ ಕಾಲ ಆ ತಾಯಿ, ಮತ್ತವರ ಮಾತುಗಳು ನನ್ನ ಸ್ಮತಿಪಟಲದಿಂದ ಮರೆಯಾಗಲೇ ಇಲ್ಲ ಎಂದಿದ್ದರು. ಮಾಸ್ತಿ ವೆಂಕಟೇಶ ಅಯ್ಯಂಗಾರರ ಪುಣ್ಯಸ್ಮರಣೆಗೆ ಪ್ರಣಾಮಗಳು. ಅಂಥ ಧೀಮಂತ ಮಹಿಳೆಯರು ಇನ್ನೂ ಇದ್ದಾರೆ ಅಲ್ಲವೇ? ಅಂಥವರು ನಮಗೆ ಕಂಡರೆ, ನಾವೂ ಅವರ ಕಾಲಿಗೆ ಬಿದ್ದು ನಮಸ್ಕರಿಸುತ್ತೇವಲ್ಲವೇ? *ಕೃಪೆ ಷಡಕ್ಷರಿ*. ಸಂಗ್ರಹ: ವೀರೇಶ್ ಅರಸಿಕೆರೆ. ದಾವಣಗೆರೆ. ಸಮೀರ ( ಕನ್ನಡ ಭಾಷಾ ಶಿಕ್ಷಕಿ -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL 8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
