ಧನ್ಯವಾದಗಳು ಮೇಡಂ.
On 3 May 2017 15:31, "Sameera samee" <[email protected]> wrote:

> *🌻ದಿನಕ್ಕೊಂದು ಕಥೆ🌻
> ನನ್ನ ಗಂಡ ನನಗಿಂತ ಮೊದಲೇ ಸಾಯಲಿ!*
>
> ನಂಬಲು ಕಷ್ಟವಾಗುತ್ತದಲ್ಲವೇ? ನನ್ನ ಗಂಡ ನನಗಿಂತ ಮೊದಲೇ ಸಾಯಲಿ ಎಂದು ಹಾರೈಸುವ ಹೆಂಡತಿ
> ಇದ್ದಾರೆಂದರೆ ನಂಬಲು ಕಷ್ಟವಾಗುತ್ತದಲ್ಲವೇ? ಆದರೆ ಹಾಗೆ ಹಾರೈಸಿದ, ಯಶಸ್ವಿಯೂ ಆದ
> ಹೆಂಡತಿಯೊಬ್ಬರನ್ನು ತಾವು ಕಂಡಿದ್ದೇವೆಂದು ‘ಕನ್ನಡದ ಆಸ್ತಿ’ಎಂದೇ ಹೆಸರುವಾಸಿಯಾಗಿದ್ದ
> ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರೊಮ್ಮೆ ಹೇಳಿದ್ದರು. ಅಂಥ ಹೆಂಡತಿಯನ್ನು
> ಕಂಡಿದ್ದಷ್ಟೇ ಅಲ್ಲ, ಆಕೆಯ ಕಾಲಿಗೆ ಎರಗಿ ನಮಸ್ಕರಿಸಿದ್ದಾಗಿಯೂ ಹೇಳಿದ್ದರು. ಅವರು
> ಹೇಳಿದ್ದ ಘಟನೆ ಹೀಗಿತ್ತು.
>
> ನಾನು ಮೈಸೂರು ಸಂಸ್ಥಾನದ ವಿಭಾಗವೊಂದರಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಸೇವೆ
> ಸಲ್ಲಿಸುತ್ತಿದ್ದ ಸಂದರ್ಭ. ಒಮ್ಮೆ ಪ್ರವಾಸದಲ್ಲಿದ್ದಾಗ ಯಾವುದೋ ಹಳ್ಳಿಯಲ್ಲಿ ಬಿಡಾರ
> ಹೂಡಿದ್ದೆ. ಆಗ ನನ್ನ ಸಹಾಯಕರು ಬಂದು ವಿಶೇಷ ಸುದ್ದಿಯೊಂದನ್ನು ನನ್ನ ಗಮನಕ್ಕೆ ತಂದರು.
> ಅದೇನೆಂದರೆ ಈ ಹಳ್ಳಿಯಲ್ಲಿದ್ದ ಎಂಬತ್ತು ವರ್ಷ ದಾಟಿದ್ದ ವೃದ್ಧರೊಬ್ಬರು ಇಂದು
> ತೀರಿಕೊಂಡಿದ್ದಾರೆ. ಆ ವೃದ್ಧರ ಹೆಂಡತಿಗೂ ಎಂಬತ್ತರ ಆಸುಪಾಸು ವಯಸ್ಸಾಗಿದೆ. ಸರಿಸುಮಾರು 65
> ವರ್ಷಗಳಿಗೂ ಹೆಚ್ಚು ಕಾಲ ಸಂಸಾರ ನಡೆಸಿದ್ದ ಮುತ್ತೈದೆ. ಆದರೆ ತಮ್ಮ ಗಂಡ ತೀರಿಕೊಂಡಿದ್ದರೂ
> ಆಕೆ ಒಂದು ತೊಟ್ಟು ಕಣ್ಣೀರೂ ಸುರಿಸದೆ ಗಂಭೀರವಾಗಿ ಗಂಡನ ಕಳೇಬರದ ಪಕ್ಕದಲ್ಲಿ
> ಕುಳಿತಿದ್ದಾರೆ. ಸಾಧ್ಯವಿದ್ದರೆ ಸಾಹೇಬರು ಆ ವೃದ್ಧ ದಂಪತಿ ಮನೆಗೆ ಹೋಗಿ, ವೃದ್ಧರಿಗೆ
> ಅಂತಿಮ ನಮನ ಸಲ್ಲಿಸಬಹುದು ಮತ್ತು ಆ ವೃದ್ಧೆಗೆ ಸಾಂತ್ವನ ಹೇಳಬಹುದು ಎಂಬ ಸಲಹೆಯನ್ನಿತ್ತರು.
>
> ನಾನು ನನ್ನ ಸಿಬ್ಬಂದಿಯೊಡನೆ ಅವರ ಮನೆಗೆ ಹೋದೆ. ವೃದ್ಧರ ಕಳೇಬರಕ್ಕೆ ಗೌರವ ಸಲ್ಲಿಸಿದೆ.
> ಆನಂತರ ಅಲ್ಲೇ ಪಕ್ಕದಲ್ಲಿ ಗಂಭೀರವಾಗಿ ಕುಳಿತಿದ್ದ ಆ ವೃದ್ಧೆಗೆ ‘ತಾಯಿ! ಆರೇಳು ದಶಕಗಳ ಕಾಲ
> ಸಂಸಾರ ಮಾಡಿದ್ದ ತಮಗೆ ತಮ್ಮ ಪತಿಯ ಸಾವು ತೀವ್ರ ಆಘಾತವನ್ನುಂಟು ಮಾಡಿರುವುದು ಸಹಜ. ಆದರೆ
> ತಾವು ದುಃಖ ದುಮ್ಮಾನವನ್ನು ಅದುಮಿಟ್ಟುಕೊಳ್ಳಬಾರದು. ಅದನ್ನು ಹೊರಗೆ ಚೆಲ್ಲಬೇಕು. ಹೀಗೆ
> ಸುಮ್ಮನೆ ಕೂರಬಾರದು’ ಎಂದು ಸಮಯೋಚಿತವಾದ ಮಾತುಗಳನ್ನು ಹೇಳಿದೆ. ಆ ತಾಯಿ ಕೆಲಕಾನ
> ಸುಮ್ಮನಾಗಿ, ನಂತರ ನಿಟ್ಟುಸಿರು ಬಿಟ್ಟು ‘ನಾವು ಅರವತ್ತೈದು ವರ್ಷಗಳಿಗೂ ಹೆಚ್ಚು ಕಾಲ
> ಸಂಸಾರ ನಡೆಸಿದ್ದೆವು.
>
> ಮದುವೆಯಾದ ಮೊದಲನೆಯ ದಿನದಿಂದಲೂ ಅವರ ಸ್ನಾನಕ್ಕೆ ನೀರು ಸಿದ್ಧ ಪಡಿಸಿಕೊಡುವುದರಿಂದ
> ಹಿಡಿದು, ಅವರ ಊಟ- ಉಪಚಾರಗಳನ್ನೂ, ಅವರ ಎಲ್ಲ ಕಾರ್ಯಗಳನ್ನೂ ನಾನೇ ಮಾಡುತ್ತಿದ್ದೆ.
> ಇತ್ತೀಚೆಗೆ ಅವರಿಗೆ ವಯೋಭಾರದಿಂದಾಗಿ ಎಲ್ಲ ಕಾರ್ಯಗಳಿಗೂ ನನ್ನನ್ನೇ ಅವಲಂಬಿಸಿದ್ದರು.
> ಆಕಸ್ಮಿಕವಾಗಿ ನನಗೇ ಮೊದಲು ಸಾವು ಬಂದರೆ ಅವರ ಯೋಗಕ್ಷೇಮ ನೋಡಿಕೊಳ್ಳುವವರು ಯಾರೆಂಬ ಚಿಂತೆ
> ನನ್ನನ್ನು ಬಹುವಾಗಿ ಕಾಡುತ್ತಿತ್ತು ಹಾಗಾಗಿ ಅವರು ನನಗಿಂತ ಮೊದಲೇ ಸಾಯಲಿ, ಅವರು ಬೇರೆ ಯಾರ
> ಆಸರೆಗೂ ಕೈಚಾಚದಂತಾಗಲಿ ಎಂದು ನಾನು ದೇವರಲ್ಲಿ ಪ್ರತಿದಿನವೂ ಪ್ರಾರ್ಥಿಸುತ್ತಿದ್ದೆ. ಇದೀಗ
> ನನ್ನ ಪ್ರಾರ್ಥನೆಯನ್ನು ದೇವರು ಈಡೇರಿಸಿದ್ದಾನೆ. ಅವರು ನಿರಾಯಾಸ ಮರಣವನ್ನಪ್ಪಿದ್ದಾರೆ.
>
> ನನಗಿದ್ದ ದೊಡ್ಡ ಚಿಂತೆ, ಆತಂಕ ದೂರವಾಗಿದೆ. ಇನ್ನು ನನ್ನ ಬದುಕು ಹಾಗೋ ಹೇಗೋ ಸಾಗುತ್ತದೆ.
> ಇಂಥ ಸಂದರ್ಭದಲ್ಲಿ ದೇವರಿಗೆ ಕೃತಜ್ಞತೆಗಳನ್ನು ಸಮರ್ಪಿಸುವ ಬದಲು ನಾನು ಅಳುತ್ತ ಕೂರಬೇಕೇ?
> ನೀವೇ ಹೇಳಿ ಸ್ವಾಮಿ!’ಎಂದಾಗ, ನನಗೆ ಒಂದು ನಿಮಿಷ ಏನು ಮಾತನಾಡಬೇಕೆಂದು ತೋಚಲಿಲ್ಲ. ಆದರೆ
> ನನಗೇ ಅರಿವಿಲ್ಲ ದಂತೆ ಆಕೆಯ ಕಾಲಿಗೆ ಬಗ್ಗಿ ನಮಸ್ಕರಿಸಿ ಅಲ್ಲಿಂದ ಹೊರಟೆ. ಆದರೆ ಕೊಂಚ
> ಹೊತ್ತಿನಲ್ಲಿ ನನಗೊಂದು ಸುದ್ದಿ ಬಂದಿತು. ಅದೇನೆಂದರೆ ಆ ವೃದ್ಧೆಯೂ ತೀರಿಕೊಂಡರೆಂದೂ, ಅವರ
> ಅಂತಿಮ ಸಂಸ್ಕಾರವನ್ನೂ ಅವರ ಗಂಡನ ಅಂತಿಮ ಸಂಸ್ಕಾರದೊಟ್ಟಿಗೆ ಮಾಡಲಾಯಿತೆಂಬ ಸುದ್ದಿ!
>
> ಬಹಳ ದಿನಗಳ ಕಾಲ ಆ ತಾಯಿ, ಮತ್ತವರ ಮಾತುಗಳು ನನ್ನ ಸ್ಮತಿಪಟಲದಿಂದ ಮರೆಯಾಗಲೇ ಇಲ್ಲ
> ಎಂದಿದ್ದರು. ಮಾಸ್ತಿ ವೆಂಕಟೇಶ ಅಯ್ಯಂಗಾರರ ಪುಣ್ಯಸ್ಮರಣೆಗೆ ಪ್ರಣಾಮಗಳು. ಅಂಥ ಧೀಮಂತ
> ಮಹಿಳೆಯರು ಇನ್ನೂ ಇದ್ದಾರೆ ಅಲ್ಲವೇ? ಅಂಥವರು ನಮಗೆ ಕಂಡರೆ, ನಾವೂ ಅವರ ಕಾಲಿಗೆ ಬಿದ್ದು
> ನಮಸ್ಕರಿಸುತ್ತೇವಲ್ಲವೇ?
>
> *ಕೃಪೆ ಷಡಕ್ಷರಿ*.                                       ಸಂಗ್ರಹ: ವೀರೇಶ್
> ಅರಸಿಕೆರೆ. ದಾವಣಗೆರೆ.
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to