ಚಿಂತನ
ಒಮ್ಮೆ ನಾಲ್ಕು ಮೇಣದ ಬತ್ತಿಗಳು ತಮ್ಮತಮ್ಮಲ್ಲಿ ಮಾತನಾಡುತ್ತಿರುತ್ತವೆ. ಮೊದಲನೆಯದು 'ಶಾಂತಿ' ಹೇಳುತ್ತದೆ: ಜಗತ್ತಿನಲ್ಲಿ ನನಗೆ ಬೆಲೆಯೇ ಇಲ್ಲ, ಎಲ್ಲೆಲ್ಲೂ ಜಗಳ,ದ್ವೇಷ, ನಾನು ಇರರುವುದಿಲ್ಲ ಎಂದು ಆರಿ ಹೋಗುತ್ತದೆ. ಎರಡನೆಯದು 'ನಂಬಿಕೆ' ಹೇಳುತ್ತದೆ: ಮೊದಲಿನಂತೆ ಈಗ ಜನರಲ್ಲಿ ಪರಸ್ಪರ ನಂಬಿಕೆಗಳು ಉಳಿದಿಲ್ಲ, ನನ್ನ ಅವಶ್ಯಕತೆ ಇವರಿಗೆ ಇಲ್ಲ ಎಂದು ಹೇಳಿ ಬೆಳಕು ಆರಿ ಹೋಗುತ್ತದೆ. ಮೂರನೆಯದು 'ಪ್ರೀತಿ' ', ಇದೇ ರೀತಿ ದುಃಖ ವ್ಯಕ್ತಪಡಿಸಿ, ಜನ ಪರಸ್ಪರ ಪ್ರೀತಿಸುವುದನ್ನೇ ಮರೆತಿದ್ದಾರೆ,ನನ್ನ ಅವಶ್ಯಕತೆ ಇವರಿಗೆ ಇಲ್ಲ ಎಂದು ಆರಿ ಹೋಗುತ್ತದೆ. ಆ ಕೊಠಡಿಗೆ ಬರುವ ಮಗುವೊಂದು ಉರಿಯಬೇಕಿದ್ದ ಮೇಣದ ಬತ್ತಿಗಳು ಆರಿದ್ದಕ್ಕೆ ಅಳುತ್ತದೆ. ಆಗ ನಾಲ್ಕನೆಯ ಮೇಣವು ಹೇಳುತ್ತದೆ: ಅಳಬೇಡ ಕಂದ, ನನ್ನನ್ನು ಉಪಯೋಗಿಸಿ ಆ ಮೂರನ್ನು ಮತ್ತೆ ಹತ್ತಿಸಬಹುದು ಎಂದು ಹೇಳುತ್ತದೆ. ಆ ಮಗು ಅದರಿಂದ ಆರಿ ಹೋಗಿದ್ದ ಮೇಣಗಳನ್ನು ಹಚ್ಚುತ್ತದೆ....ಅದರ ಹೆಸರೇ ''ಭರವಸೆ' . ಆದ್ದರಿಂದ ಜೀವನದಲ್ಲಿ ಎಲ್ಲಾ ಹೋದರೂ ಭರವಸೆ ಮಾತ್ರ ಕಳೆದುಕೊಳ್ಳಬಾರದು. ಇದೊಂದರಿಂದ ಮಿಕ್ಕ ಮೂರನ್ನು ಬೆಳಗಿಸಬಹುದು. ಸಮೀರ ( ಕನ್ನಡ ಭಾಷಾ ಶಿಕ್ಷಕಿ) -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
