ಜಯಗೀತ

    ಯಾರು ಕೊಟ್ಟರು? ಯಾರು ತಂದರು ?
     ಸ್ವತಂತ್ರವನು ದೇಶಕೆ !
      ಯಾರು ಹಚ್ಚಿದ ನಂದಾ ದೀಪವು ?
      ಬೆಳಗುತಿಹುದೀ ನಾಡನು? !//೧//

     ಭರತ ಮಾತೆಯ ಕಣ್ಣ ನೀರನು
     ಒರೆಸಿದವರು ಯಾರು?
     ಕಬಂಧ-ದಾಸ್ಯದ ಹಿಡಿತ ಸಡಿಲಿಸಿ
     ಬಿಡುಗಡೆ ಯಾರು ತಂದರು ?//೨//

      ಯಾರ ತ್ಯಾಗದ ಫಲಸ್ವರೂಪವೋ
      ಹೆಗಲಿನ ನೊಗ ಕಳಚಿತು
      ಯಾರು ಪಡೆದ ಕರಿ-ನೀರ ಶಿಕ್ಷೆಯೋ
       ನಮ್ಮೆಲ್ಲರ ಸೆರೆ ತಪ್ಪಿತು //೩//

        ಯಾರ ಬಂಧನಕೆ ಸಂದ ಬೆಲೆಯಿದೊ
         ನಮ್ಮ ಬಾಳುವೆ ಸುಂದರ
        ಯಾವ ಮಹಿಮರ ಬಲಿದಾನವೋ ಇದು
        ಆ  ಮಹಾತ್ಮರ ನೆನೆಯುವಾ//೪//

         ಮಸಾಲೆವಸ್ತುಗೆ ಮನವ ಸೋತು
         ಕಡಲು ದಾಟಿ ಬಂದರು
         ಅರಿವೆ ಮಾರುತ,ಸುಳಿವು ಅರಿಯುತಾ
         ದಾಳ ಉರುಳಿಸಿ ಗೆದ್ದರು // ೫//


          'ನೆರವು ಸೈನ್ಯ'ದ ನೆಪವ ಒಡ್ಡುತಾ
           ನುಂಗಿಬಿಟ್ಟರು  ದೇಶವ
         ' ದತ್ತುಮಕ್ಕಳಹಕ್ಕು' ಕೀಳುತಾ
           ಕಬಳಿಸಿದರು ಖಂಡವ //೬//

          ತಾತ್ಯಾ,ನಾನಾ,ಪಾಂಡೆ,ಲಕ್ಷ್ಮಿಬಾಯಿ
          ಹಚ್ಚಿದಂತ ಕಿಡಿಯಿದು !
          ಭರತ ಖಂಡವೇ ಹೊತ್ತಿ ಉರಿಯಿತು
           ಜಲಿಯನ್,ದಂಡಿ,ಅಸಹಕಾರದಿ.....//೭//

         ಗಾಂಧಿ,ನೆಹರು,ಪಟೇಲ್,ಸುಭಾಸರು
         ಧುಮುಕಿದರು ಮುಂಚೂಣಿಗೆ
         ಬಿಪಿನ ,ಲಜಪತ, ಸಾವರ್ಕರ್,ತಿಲಕರು
          ಮಾಡಿಮಡಿದ ಮಹಾತ್ಮರು  //೮//

          ಮದನ,ಆಜಾದ,ಸುಖದೇವ,ಭಗತರು
          ಹರಣ ತೊರೆದ ಧೀರರು
          ಪರಂಗಿ ಜನರ ಫಿರಂಗಿ ಗುಂಡಿಗೆ
          ಎದೆಯನೊಡ್ಡಿದ ವೀರರು//೯//

          ಅಹಿಂಸೆಯೆ ಹೋರಾಟ ಮಂತ್ರವು,
          ಸತ್ಯಾಗ್ರಹವೇ  ತಂತ್ರವು
          ತ್ಯಜಿಸಿ  ಶಸ್ತ್ರವ ,ಮಣಿಸೆ ಶತ್ರುವ
          ರಾಷ್ಟ್ರ ಜಿಗಿಯಿತು ಸಂಗ್ರಾಮಕೆ //೧೦//

          ನಾಡೇ ಕೂಗಿತು ;ಮುಗಿಲು ಮುಟ್ಟಿತು
          ಸ್ವಾಯತ್ತತೆಯ ಬೇಡಿಕೆ .!
         ದಿಗಿಲು ಹುಟ್ಟಿತು, ಓಟ ಕಿತ್ತಿತು
         ಕಂಪನಿ ಜನ ಸ್ವದೇಶಕೆ ! //೧೧//

           ನಾಲ್ವತ್ತೇಳರ ಆಗಸ್ಟ್ ಮಾಸದಿ
           ಗಗನಗಾಮಿ ತಿರಂಗವು
           ಹದಿನಾಲ್ಕರ ನಡು ರಾತ್ರಿಯಲ್ಲಿ
           ಧರೆಗಿಳಿದ ಒಕ್ಕೂಟಪತಾಕೆಯು //೧೨//

              ಉರಿಯಲಿ ನಿತ್ಯ ಸ್ವತಂತ್ರ ಹಣತೆಯು
              ಹುತಾತ್ಮರನೆನಪೇ ಬತ್ತಿಯು
              ಮೆರೆಸಲು ಎಲ್ಲೆಡೆ ನಾಡ ಘನತೆಯಾ
               ನಮ್ಮ ದುಡಿಮೆಯೇ ತೈಲವು //೧೩//

         # ಚಂದ್ರೇಗೌಡನಾರಮ್ನಳ್ಳಿ ,  8722199344
    ಸ/ಶಿ,ಸರ್ಕಾರಿ ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ/ ತಾ/
Chandregowda m.d. pin 573119. mo 8722199344

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to