*ತಾಯಿ ನಾಡು *

    ನಾಡು ನಮ್ಮದು
    ಕರುನಾಡು ನಮ್ಮದು
    ದಾಸ,ಶರಣ,ಕವಿ,ಸಂತರ
    ಗುಡಿಯು ನಮ್ಮದು // ಪ//

   ಕೃಷ್ಣೆ,ತುಂಗೆ,ಕಾವೇರಿ,ಭೀಮೆ
   ಹರಿವ ಸೊಬಗು ನೋಡಿರಿ
   ಶಾರದೆ,ಚಾಮುಂಡಿ,ದುರ್ಗೆ
    ಹರಸೊ ವರವ ಬೇಡಿರಿ //೧//

    ಗೀತ,ನಾಟ್ಯ,ಸಾಹಿತ್ಯ,ಶಿಲ್ಪ
    ವಿಜ್ಞಾನ,ಶಿಕ್ಷಣಕಾಶಿಯು
    ತಾಯ ಮಡಿಲು ತುಂಬಿಹುದು
    ಅನ್ನ ,ಹೊನ್ನ ರಾಶಿಯು//೨//

    ದೂರ ಹಬ್ಬಿ ನೀಲ ತೀರ
    ಪಡುವಣದಾಳ ಸಾಗರ
    ತೆಂಗು,ಕಂಗು,ನಂದಿ,ಸುರಗಿ
    ಸಿರಿಗಂಧ,ಹೊನ್ನೆಯಾಗರ //೩//

    ಗಂಗ,ಕದಂಬ,ರಾಷ್ಟ್ರಕೂಟ
    ವಿಜಯನಗರ ವೈಭವ
    ಚಾಲುಕ್ಯ,ಹೊಯ್ಸಳ,ಕಲಚೂರ್ಯ
    ಕೆಳದಿ,ಮೈಸೂರ ಹೊಗಳುವ //೪//

     ಚೆನ್ನಮ್ಮ,ರಾಯಣ್ಣ ಹೊತ್ತಿಸಿದ
     ಸ್ವತಂತ್ರ್ಯಹೋರಾಟ ಕಿಡಿಯು
     ಡೆಪ್ಯೂಟಿ,ದೇಶಪಾಂಡೆ,ಆಲೂರರ
     ಏಕೀಕರಣ ಕಹಳೆಯು //೫//

    ಹಸಿರನುಟ್ಟ ಘಟ್ಟ ಬೆಟ್ಟ
    ಬಯಲು,ಮಲೆಯನಾಡು
    ಆನೆ,ಜಿಂಕೆ,ಚಿರತೆ,ಹುಲಿ
    ಪಕ್ಷಿ ಮೆರೆವ ಕಾಡು //೬//

      ಭಿನ್ನ-ವಿಭಿನ್ನ ಭೂಪ್ರದೇಶ
      ಕನ್ನಡನಾಡೇ ಚೆಂದವು
      ಚೆನ್ನ ಭಿನ್ನ ಆಡುಭಾಷೆ
       ನಮ್ಮ  ಬೆಸೆವ ಬಂಧವು ! //೭//

        ಬನ್ನಿರೆಲ್ಲಾ ಸೇರಿ ನಾವು
        ತಾಯ ಅಡಿಗೆ ನಮಿಸುವಾ
        ಕನ್ನಡದ ಕಸ್ತೂರಿ ಕಂಪು
        ದಶ ದಿಕ್ಕಿಗೆ ಹರಡುವಾ //೮//

           # ಚಂದ್ರೇಗೌಡನಾರಮ್ನಳ್ಳಿ , 8722199344 .

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to