Madam Kannada 3rd language passing package iddhare kaluhisi

On Nov 30, 2017 10:59 AM, "Sameera samee" <[email protected]> wrote:

> ಮೌನದ ಕಣಿವೆಯಲ್ಲಿ ಕವಿಯ ಮಾತಿನ ಮಂಟಪ
>
>
> ಅದೊಂದು ಸಂಜೆ.   ಬಾನಲ್ಲಿ ಭಾಸ್ಕರ ತನ್ನ ನಿಯತ್ತಿನ ಕೆಲಸ ಮುಗಿಸಿ ಇನ್ನೇನು
> ಅಸ್ತಂಗತನಾಗುವ ಸಮಯ.  ಅದೇ ಕಡಲು ಪುಳಕಿತಗೊಂಡು ತನ್ನ ಕೆನ್ನಾಲಿಗೆ ತೆರೆದು ಆಗಾಗ ದಡಕ್ಕೆ
> ಬಡಿಯುತ್ತಿತ್ತು.  ಬೋರ್ಗರೆಯುವ ನಾದದ ಮಿಳಿತ ಸುತ್ತೆಲ್ಲ ರಂಗೇರಿದ ಬಾನು ಕೆಂಪಿನುಂಡೆಯ
> ಚೆಂಡಾದ ರವಿ.
>
> ಕವಿಗೆ ಇನ್ನೇನು ಬೇಕು.  ಅರೆರೆ! ಭಾವವುಕ್ಕಿದ ಗಡಿಬಿಡಿಯಲ್ಲಿ ಅವನಿಗರಿವಿಲ್ಲದೆ ಜೋತು
> ಬಿದ್ದ ಜೋಳಿಗೆಗೆ ಕೈ ಹಾಕಿ ತಡಕಾಡಿದ.    ರವಿಯ ಪಯಣದ ಹಾಡು ಬರೆಯುವ ಉತ್ಸಾಹ, ಉದ್ವೇಗ ಅವನ
> ಹೃದಯ ಬಡಿತ ಅವನಿಗೇ ಕೇಳುವಷ್ಟು ಜೋರಾಗಿತ್ತು.
>
> ಆರು ಚೆಲ್ಲಿದರು ನಿನ್ನ ಹಾದಿಗೆ ಇಷ್ಟೊಂದು ರಂಗು
> ಆ ಬಾನು ಬಿಳಿ ಮೋಡ ನಾಚಿ ನವಿರಾಗಿದೆ ನೋಡು
> ಎತ್ತೆತ್ತ ನೋಡಿದರಾಕಾಶ ಕೆಂಪಡರಿದೆ ಸೌಂದರ್ಯದಲಿ ಮಿಂದು
> ಮಿನುಗುವ ತಾರೆಗಳು ಒಂದೊಂದೆ ಮೆಲ್ಲನೆ ಹಣುಕುತಿವೆ ನೋಡು.
>
> ಹೇಳಿ ಕೇಳಿ ಮಲ್ಪೆಯ ಆ ತೀರದ ಕಡಲು ದೃಷ್ಟಿ ಹಾಯಿಸಿದಷ್ಟೂ ದೂರ ಕಾಣುವ ಮರಳ ರಾಶಿ.
> ನಿರ್ಮಲವಾದ ಆ ಮರಳ ರಾಶಿಯೇ ತನ್ನ ಹಾಸಿಗೆ .  ತಿಂದುಂಡು ಹೊರಳಾಡಿ ಸುಃಖಿಸಿ ಗೊರಕೆ ಹೊಡೆದು
> ಮೈಮುರಿದು ಹೊರಟನೆ ಆ ರವಿ!   ಅಜ್ಜಿ ತಾ ಕಡೆದ ಬೆಣ್ಣೆಯನ್ನು ಎತ್ತರಿಸಿ ಎತ್ತರಿಸಿ ತನ್ನ
> ಕೈಗಳಲಿ ಉಂಡೆ ಮಾಡಿ ತಿಳಿ ನೀರಲಿ ತೊಳೆದು ಅಗಲ ಪಾತ್ರೆಯಲಿರಿಸಿ ಉರಿ ಹಚ್ಚಿದಾಗ ನಿಧಾನವಾಗಿ
> ಕರಗುವ ರೀತಿ ಶರಧಿಯ ಒಡಲಲ್ಲಿ ನಿನ್ನ ಬಿಂಬ ನೋಡ ನೋಡುತ್ತಿದ್ದಂತೆ ಕರಗುವ ಪರಿ ಅವರ್ಣನೀಯ
> ಅನುಭವ ಪ್ರತೀ ದಿನ ನೋಡಿದರೂ!
>
> ರಾತ್ರಿ ರಾಣಿಯರಂತೆ ದೂರದಲ್ಲಿ ಮಿನುಗುವ ದೀಪ ಅಸ್ತಂಗತನಾಗುವ ರವಿಗೆ ಇಂದು ಹೋಗಿ ನಾಳೆ
> ಮತ್ತೆ ಬಾ ಎಂದು ಹೇಳಿ ಹೋಗುವ ದಾರಿಗುಂಟ ದೀಪದಾರತಿ ಬೆಳಗುತಿರಬಹುದೆ?   ಹೆತ್ತವರು ತವರ
> ಕುಡಿಯ ಗಂಡನ ಮನೆಗೆ ಕಳಿಸುವಂತೆ ಕೆಲವೊಂದು ದೀಪ  ಹೊತ್ತಿಕೊಳ್ಳದೆ ದುಃಖದಲ್ಲಿ
> ಕಣ್ಣೀರಿಡುತ್ತ ರವಿಯ ಬಳುಗಳಿಸುತ್ತಿರಬಹುದೆ?
>
> ಕತ್ತಲಾವರಿಸುತ್ತಿದ್ದಂತೆ ಗಡಿಬಿಡಿಯಿಂದ ಮೈ ಕೊಡವಿ ಎದ್ದೇಳುವ ಜನ ಅಷ್ಟೊತ್ತೂ ತಮ್ಮಿರುವ
> ಮರೆಯುವಂತೆ ಎಲ್ಲರ ಮನಸ್ಸು ಕಟ್ಟಿ ಹಾಕಿದ್ದ ರವಿ.  ನಿಧಾನವಾಗಿ ಪೂರ್ತಿ ಕಳೆದೇ
> ಹೋಗುತ್ತಿದ್ದ ಅವನಾಟ ಕಂಡು ಪೆನ್ನು ಹಿಡಿದ ಕೈ ಬಿಳಿ ಹಾಳೆಯ ತೊಗಲಲ್ಲಿ ತನ್ನ ಕಪ್ಪು ಬಣ್ಣ
> ಬಿಡುತ್ತಾ ಸಾಗಿತ್ತು ಶಬ್ದದೋಕುಳಿಯಲ್ಲಿ.  ಪದ ಪುಂಜಗಳ ನಡುವೆ ಅವನಂದದ ಸೊಬಗ
> ಹಿಡಿದಿಡುತ್ತಿರುವ ಕವಿ ಸುತ್ತಲ ಪರಿವಿಲ್ಲದೆ ಆ ಮರಳ ಮಮಕಾರದ ಮದ್ಯ ಕುಳಿತು ಗೀಚುತ್ತಲೆ
> ಇದ್ದ.  ಹೌದು ಎಷ್ಟು ಬರೆದರೂ ಸಾಲದು.  ಬರೆದಷ್ಟೂ ಮುಗಿಯದ ಸೊಬಗು ಆ ಮನೋಹರ ದೃಶ್ಯ.
> ಕಣ್ಣು ಮನ ತಂಪಾಗಿಸಿ ಹಗಲಿನ ಪ್ರಖರತೆ ಮರೆಸಲೆಂದೆ ಹೀಗೆ ಮೈ ತಾಳಬಹುದೆ ಹೊರಡುವ
> ಗಳಿಗೆಯಲ್ಲಿ!
>
> ಮೌನದ ಖಣಿವೆಯಲ್ಲಿ ಮಾತಿನ ಮಂಟಪ ಕವಿ ಮನದ ತುಂಬಾ.   ಭಾಸ್ಕರನೊಂದಿಗೆ ಸಂಭಾಷಣೆ ಇಂದೇಕೊ
> ಅತಿಯಾದ ಭಾವೋದ್ವೇಗದಲ್ಲಿ ಎಲ್ಲವನ್ನೂ ಹೇಳಿಕೊಳ್ಳುತ್ತ ಏನೇನೊ ಕೇಳುತ್ತ ಹೃದಯ ಕವಾಟ
> ತೆರೆದಿಟ್ಟು ಮನಸ್ಸು ಹಗುರ ಮಾಡಿಕೊಳ್ಳುತ್ತ ಸಾಗುತ್ತಲೇ ಇತ್ತು.
>
> "ಏಯ್! ಹೇಳು ಸೂರ್ಯಾ ನೀನೇಕೆ ಹೀಗೆ?  ಜನರ ಜೀವನಕ್ಕೆ ಹತ್ತಿರವಾಗಿ ನೀನಿಲ್ಲದೆ ಇರಲು
> ಸಾಧ್ಯವೇ ಇಲ್ಲ ಎಂಬುದನ್ನು ಅರಿವಾಗಿಸಲು ದಿನ ನಿತ್ಯ ತಪ್ಪದೇ ಬರುವೆಯಾ?  ಹಾಗಾದರೆ
> ಮುಸ್ಸಂಜೆಯಲಿ ನೀನೆಲ್ಲಿ ಹೋಗುವೆ?  ನಖಶಿಕಾಂತ ನಿನ್ನ ಕಾವು ಹಗಲ ಬೆಳಕಲ್ಲಿ.  ಸಂಜೆ ಅದು
> ಹೇಗೆ ತಂಪಾಗುವೆ?  ನಾನು ನಿನ್ನ ಒಮ್ಮೆ ಹತ್ತಿರದಿಂದ ನೋಡಬೇಕಲ್ಲಾ.  ಸಾಧ್ಯ ಮಾಡು ಒಮ್ಮೆ.
> ನಿನ್ನಲ್ಲಿ ಇರುವ ಆ ಶಕ್ತಿ ಎಂತದು ಮಾರಾಯಾ?  ಶ್ರೀ ಕೃಷ್ಣ ಪರಮಾತ್ಮನ ದಶಾವತಾರವೆ
> ನೀನಿರಬಹುದೆ?  ಉದಯದ ಕಿರಣ ಸುತ್ತೆಲ್ಲ ಗಿಡ ಮರ ಕಟ್ಟಡಗಳ ಸೀಳಿ ಹೊರ ಬರುವಾಗ ಆ ಪ್ರಭಾವಳಿಯ
> ಕಂಡಾಗಲೆಲ್ಲ ನನ್ನ ಮನಸ್ಸು ಹೀಗೆ ನನ್ನ ಕೇಳುವುದು.  ಇದು ನಿಜವಾ?  ಆಗೆಲ್ಲ ನಾ
> ಮಂತ್ರಮುಗ್ದನಾಗಿ ನೋಡುತ್ತಲೇ ಇರುತ್ತೇನೆ.  ಎಷ್ಟು ನೋಡಿದರೂ ನನಗೆ ತೃಪ್ತಿಯಾಗದು.  ಎಷ್ಟು
> ಬರೆದರೂ ನಾ ಬಳಸಿದ ಪದಗಳು ನಿನ್ನ ಅಂದಕೆ ಕಳಪೆಯಾಗಿಯೇ ಕಾಣುವುದು.  ಇನ್ನಷ್ಟು ಮತ್ತಷ್ಟು
> ಹುಡುಕಾಟ ನಿನ್ನ ವರ್ಣಿಸಲು.  ಆದರೆ ನಾ ಎಲ್ಲಿಂದ ಬಗೆದು ತರಲಿ ಹೇಳು?  ಪ್ರತಿ ಬಾರಿ
> ಬರೆಯುವಾಗ ನಾ ಸೋತು ಹೋಗುತ್ತಿರುವೆ.  ನಿನ್ನಲ್ಲಿರುವ ಶಕ್ತಿಯ ಒಂದು ಅಣುವಿನಷ್ಟಾದರೂ
> ಶಕ್ತಿ ನನಗೆ ದೊರಕಿದ್ದರೆ ಉಸಿರಿಡಿದು ಬದುಕಿನುದ್ದಕ್ಕೂ ಸದಾ ನಿನ್ನ ಕಾವ್ಯ
> ಬರೆಯುತ್ತಿದ್ದೆ.  ಯಾಕೆ ನಗು ಬಂತಾ ಸೂರ್ಯಾ?
>
> ನನಗೆ ನಿನ್ನ ಕಂಡರೆ ತುಂಬಾ ತುಂಬಾ ಅಕ್ಕರೆ ಕಣೊ.  ಅದಕ್ಕೆ ಮನಸ್ಸಿನ ಅನಿಸಿಕೆಗಳನ್ನು
> ನಿನ್ನ ಹತ್ತಿರ ಯಾವ ಮುಚ್ಚು ಮರೆಯಿಲ್ಲದೆ ಹೇಳಿಬಿಡುತ್ತೇನೆ.  ಆಗ ಒಂಚೂರು ಸಮಾಧಾನವೂ
> ಸಿಗುತ್ತದೆ.  ನೀನುದಯಿಸುವ ಬೆಳಗು ಹಾಗೆ ಈ ಕಡಲ ಕಿನಾರೆಯಲ್ಲಿ ಅಡಗಿಕೊಳ್ಳುವ ಪರಿ
> ಪ್ರತಿನಿತ್ಯ ನಾ ತಪ್ಪದೆ ನೋಡಲು ಬರುವೆ.  ಹೀಗೆ ನಿತ್ಯವೂ ನೋಡಿ ನೋಡಿ ನನಗೆ ನೀನು ತುಂಬಾ
> ತುಂಬಾ ಹತ್ತಿರವಾಗಿದ್ದೀಯಾ.  ಮೌನವಾಗಿದ್ದ ನನ್ನೊಡಲ ದುಃಖ ಇಂದು ಕಟ್ಟೆಯೊಡೆದು ಬರುತ್ತಿದೆ
> ಗೆಳೆಯಾ!  ನೋಡು ನಿನ್ನ ಅನುಮತಿಯಿಲ್ಲದೆ ನಾನು ನಿನ್ನ ಗೆಳೆಯಾ ಎಂದು ಕರೆದೆ.  ಕೋಪವೆ
> ಹೇಳು.  ಆದರೆ ನೀನು ಬಂದು ಹೇಳುವುದು ನಾಳೆಯೆ ಅಲ್ಲವೆ?  ಇರಲಿ.  ಆದರೆ ಆ ನಾಳೆ ನನ್ನ
> ಪಾಲಿಗೆ ಇರುವುದೇ ಇಲ್ಲ.  ಅದಕ್ಕೆ ಇಂದು ಮನಃಸ್ಪೂರ್ತಿ ನನ್ನ ಭಾವೋದ್ವೇಗದ ಕ್ಷಣಗಳನ್ನೆಲ್ಲ
> ಹಿಡಿದಿಟ್ಟು ಪುಟ ಪುಟಗಳಲ್ಲಿ ದಾಖಲಿಸಿ ಇಲ್ಲೆ ಇಲ್ಲೆ ನೀನುದಯಿಸುವ ಗಳಿಗೆಯಲ್ಲಿ
> ನಾನಿಲ್ಲವಾಗುವೆ.  ಸಹಿಸಲಾಗದ ನೋವು ಕಣೋ.  ಸಹನೆ ಮೀರಿ ನನ್ನ ತಿಂದಾಕುತಿದೆ.  ಆದರೆ ಅದಾವ
> ರೀತಿಯ ನೋವು?  ನಿನಗಾವ ರೋಗ ಬಂದು ತಟ್ಟಿದೆ ಹೇಳು ಕೇಳುವೆಯಾದರೆ ನಾನೇನು ಹೇಳಲಿ ಗೆಳೆಯಾ?
> ಎಷ್ಟು ನೋವುಗಳು ಬಾಳ ಬಂಡಿಯ ತುಂಬಾ.  ಯಾವುದು ಮೊದಲು ಹೇಳಲಿ?  ಎಲ್ಲಿಂದ ಶುರು ಮಾಡಲಿ?
> ನನ್ನ ಜಂಜಾಟದ ಬದುಕಿನ ಒಂದೊಂದು ನೋವ ಕಥೆ ಕೇಳುವಷ್ಟು ತಾಳ್ಮೆ, ಪುರುಸೊತ್ತು ಇದೆಯಾ ನಿನಗೆ
> ಹೇಳು?  ಇಲ್ಲ ತಾನೆ?  ಮತ್ಯಾಕೆ ನನಗೀ ಪ್ರಶ್ನೆ?  ಸಾಕು ಮಾಡು.  ಅಷ್ಟಕ್ಕೂ ಹೇಳಿದರೆ ನನ್ನ
> ನೋವು ಕಡಿಮೆ ಆಗಬಹುದೆಂಬ ನಂಬಿಕೆ ನನಗಿಲ್ಲ.  ಕೇಳಿ ನೀನೇನಾದರೂ ಸಲಹೆ ಸೂಚನೆ ಕೊಡಬಲ್ಲೆ
> ಅಷ್ಟೆ.  ಅದು ಆಗಲೇ ಹಲವರು ಹೇಳಿಯಾಗಿದೆಯಲ್ಲ.  ಏನಿದ್ದರೂ ಯಾರಿರಲಿ ಇಲ್ಲದಿರಲಿ ನನ್ನ
> ನೋವು ನನಗೆ.  ಹತಾಷೆಯ ಕುಡಿ ಬೇಡ ಬೇಡವೆಂದರೂ ಮೊಳಕೆಯೊಡೆದು ಚಿಗುರುತ್ತಲೇ ಇರುತ್ತದೆ.
> ಚಿವುಟಿ ಚಿವುಟಿ ನೋಡು ನನ್ನ ಬೆರಳುಗಳು ಹೇಗೆ ಜಡ್ಡುಗಟ್ಟಿವೆ.  ಇದೇ ತಾನೆ ಇನ್ನು ಮುಂದೂ.
> ನೆನಪುಗಳ ಮರೆಯಲೂ ಆಗದು ಹತ್ತಿಕ್ಕಲೂ ಆಗದು.  ಆಗಾಗ ಚುಚ್ಚಿಕೊಳ್ಳುವ ಇನ್ಸುಲಿನ್
> ಇಂಜಕ್ಷಿನಿನಂತೆ ನನ್ನ ಮೆದುಳನ್ನೇ ಚುಚ್ಚುತ್ತಿವೆ ಕಣೊ.  ಅದಕ್ಕೆ ಸಹಿಸಿ ಸಹಿಸಿ
> ಸಾಕಾಗಿದೆಯಂತೆ.  ಇದರಿಂದ ಬಿಡುಗಡೆ ಪಡೆಯಲು ಇಂದು ಈ ನಿರ್ಧಾರಕ್ಕೆ ಬಂದೆ.  ಸಾಕು ನನಗೀ
> ಜನ್ಮ ಎಂದೆನಿಸಿಬಿಟ್ಟಿದೆ ಕಣೊ.  ಬೇರೆ ದಾರಿಯಿಲ್ಲದೆ ನನ್ನೇ ನಾ ಕೊಂದುಕೊಳ್ಳುತ್ತಿರುವೆ.
> ಕ್ಷಮಿಸು.  ಏನೇನೊ ಬಡಬಡಿಸುತ್ತಿಲ್ಲ.  ಇದು ದಿಟವಾದ ಮಾತು.  ಸತ್ಯಕ್ಕೆ ಹತ್ತಿರವಾದ ಮಾತು
> ........."
>
> ಬರೆಯುತ್ತ ಬರೆಯುತ್ತ ಕವಿ ಬಿಚ್ಚಿಟ್ಟ ಮರಳ ಹಾಸಿಗೆಯಲ್ಲಿ ಅಂಗಾತ ಮಲಗಿದ.  ಆಕಾಶದ
> ಹೊದಿಕೆಯ ತುಂಬ ಮಿನುಗುವ ನಕ್ಷತ್ರ ಗಳ ನೋಡು ನೋಡುತ್ತಿದ್ದಂತೆ ಆಗವನಿಗನಿಸಿತು ; ನನ್ನ
> ಗೆಳೆಯ ಸೂರ್ಯನಿಗೆ ಇವರಾರೂ ಸಾಠಿಯಲ್ಲ.  ಸೂರ್ಯ ಸೂರ್ಯನೆ.  ಓಹ್! ಸೂರ್ಯಾ ನೀನದೆಷ್ಟು
> ಚಂದ.  ಜಗತ್ತಿಗೇ ಬೆಳಕಾಗಿ ಪ್ರತಿ ದಿನ ಪ್ರತಿ ಕ್ಷಣ ಜನಜೀವನದಲ್ಲಿ ಹಾಸು ಹೊಕ್ಕಾಗಿರುವ
> ನೀನು ನಿನ್ನೊಂದಿಗೆ ನಾನಿರಲು  ಆಗುತ್ತಿಲ್ಲವಲ್ಲಾ.  ಅನವರತ ನನಗೆ ನೀನು ಬೇಕು, ನಿನ್ನಂದವ
> ಇನ್ನಷ್ಟು ಕಣ್ಣು ಮನ  ತುಂಬಿಕೊಳ್ಳಬೇಕು.  ಆದರೆ ಅದಾಗದ ಮಾತು.
>
> ಕವಿಯ ಕಣ್ಣಾಲಿಗಳು ತುಂಬಿ ಬಂದ ನೀರು ಕಪೋಲದ ಗುಂಟ ಸಾಗಿ ಮರಳಲ್ಲಿ ಉಡುಗಿ ಹೋಯಿತು.
> ನಿತ್ಯದಂತೆ ರವಿಯ ಕಿರಣ ಅವನ ದೇಹ ಸೋಕಲು ಅವ ನೋಡಲೇ ಇಲ್ಲ.  ಸುತ್ತ ನೆರೆದಿದ್ದ ಜನ "ಪಾಪ!
> ಯಾರೊ ಆಗಂತುಕ ಇಲ್ಲಿ ಹೆಣವಾಗಿದ್ದಾನೆ" ಎಂದು ಮಾತಾಡಿಕೊಳ್ಳುತ್ತಿದ್ದರು.  ಬರೆದ ಹಾಳೆಗಳು
> ಗಾಳಿಗೆ ತೂರಿ ಕಡಲೊಡಲಲ್ಲಿ ತೇಲಿ ತೇಲಿ ಇನ್ನಿಲ್ಲವಾದವು!!
>
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to