On 30 Nov 2017 10:59 am, "Sameera samee" <[email protected]> wrote:
> ಮೌನದ ಕಣಿವೆಯಲ್ಲಿ ಕವಿಯ ಮಾತಿನ ಮಂಟಪ > > > ಅದೊಂದು ಸಂಜೆ. ಬಾನಲ್ಲಿ ಭಾಸ್ಕರ ತನ್ನ ನಿಯತ್ತಿನ ಕೆಲಸ ಮುಗಿಸಿ ಇನ್ನೇನು > ಅಸ್ತಂಗತನಾಗುವ ಸಮಯ. ಅದೇ ಕಡಲು ಪುಳಕಿತಗೊಂಡು ತನ್ನ ಕೆನ್ನಾಲಿಗೆ ತೆರೆದು ಆಗಾಗ ದಡಕ್ಕೆ > ಬಡಿಯುತ್ತಿತ್ತು. ಬೋರ್ಗರೆಯುವ ನಾದದ ಮಿಳಿತ ಸುತ್ತೆಲ್ಲ ರಂಗೇರಿದ ಬಾನು ಕೆಂಪಿನುಂಡೆಯ > ಚೆಂಡಾದ ರವಿ. > > ಕವಿಗೆ ಇನ್ನೇನು ಬೇಕು. ಅರೆರೆ! ಭಾವವುಕ್ಕಿದ ಗಡಿಬಿಡಿಯಲ್ಲಿ ಅವನಿಗರಿವಿಲ್ಲದೆ ಜೋತು > ಬಿದ್ದ ಜೋಳಿಗೆಗೆ ಕೈ ಹಾಕಿ ತಡಕಾಡಿದ. ರವಿಯ ಪಯಣದ ಹಾಡು ಬರೆಯುವ ಉತ್ಸಾಹ, ಉದ್ವೇಗ ಅವನ > ಹೃದಯ ಬಡಿತ ಅವನಿಗೇ ಕೇಳುವಷ್ಟು ಜೋರಾಗಿತ್ತು. > > ಆರು ಚೆಲ್ಲಿದರು ನಿನ್ನ ಹಾದಿಗೆ ಇಷ್ಟೊಂದು ರಂಗು > ಆ ಬಾನು ಬಿಳಿ ಮೋಡ ನಾಚಿ ನವಿರಾಗಿದೆ ನೋಡು > ಎತ್ತೆತ್ತ ನೋಡಿದರಾಕಾಶ ಕೆಂಪಡರಿದೆ ಸೌಂದರ್ಯದಲಿ ಮಿಂದು > ಮಿನುಗುವ ತಾರೆಗಳು ಒಂದೊಂದೆ ಮೆಲ್ಲನೆ ಹಣುಕುತಿವೆ ನೋಡು. > > ಹೇಳಿ ಕೇಳಿ ಮಲ್ಪೆಯ ಆ ತೀರದ ಕಡಲು ದೃಷ್ಟಿ ಹಾಯಿಸಿದಷ್ಟೂ ದೂರ ಕಾಣುವ ಮರಳ ರಾಶಿ. > ನಿರ್ಮಲವಾದ ಆ ಮರಳ ರಾಶಿಯೇ ತನ್ನ ಹಾಸಿಗೆ . ತಿಂದುಂಡು ಹೊರಳಾಡಿ ಸುಃಖಿಸಿ ಗೊರಕೆ ಹೊಡೆದು > ಮೈಮುರಿದು ಹೊರಟನೆ ಆ ರವಿ! ಅಜ್ಜಿ ತಾ ಕಡೆದ ಬೆಣ್ಣೆಯನ್ನು ಎತ್ತರಿಸಿ ಎತ್ತರಿಸಿ ತನ್ನ > ಕೈಗಳಲಿ ಉಂಡೆ ಮಾಡಿ ತಿಳಿ ನೀರಲಿ ತೊಳೆದು ಅಗಲ ಪಾತ್ರೆಯಲಿರಿಸಿ ಉರಿ ಹಚ್ಚಿದಾಗ ನಿಧಾನವಾಗಿ > ಕರಗುವ ರೀತಿ ಶರಧಿಯ ಒಡಲಲ್ಲಿ ನಿನ್ನ ಬಿಂಬ ನೋಡ ನೋಡುತ್ತಿದ್ದಂತೆ ಕರಗುವ ಪರಿ ಅವರ್ಣನೀಯ > ಅನುಭವ ಪ್ರತೀ ದಿನ ನೋಡಿದರೂ! > > ರಾತ್ರಿ ರಾಣಿಯರಂತೆ ದೂರದಲ್ಲಿ ಮಿನುಗುವ ದೀಪ ಅಸ್ತಂಗತನಾಗುವ ರವಿಗೆ ಇಂದು ಹೋಗಿ ನಾಳೆ > ಮತ್ತೆ ಬಾ ಎಂದು ಹೇಳಿ ಹೋಗುವ ದಾರಿಗುಂಟ ದೀಪದಾರತಿ ಬೆಳಗುತಿರಬಹುದೆ? ಹೆತ್ತವರು ತವರ > ಕುಡಿಯ ಗಂಡನ ಮನೆಗೆ ಕಳಿಸುವಂತೆ ಕೆಲವೊಂದು ದೀಪ ಹೊತ್ತಿಕೊಳ್ಳದೆ ದುಃಖದಲ್ಲಿ > ಕಣ್ಣೀರಿಡುತ್ತ ರವಿಯ ಬಳುಗಳಿಸುತ್ತಿರಬಹುದೆ? > > ಕತ್ತಲಾವರಿಸುತ್ತಿದ್ದಂತೆ ಗಡಿಬಿಡಿಯಿಂದ ಮೈ ಕೊಡವಿ ಎದ್ದೇಳುವ ಜನ ಅಷ್ಟೊತ್ತೂ ತಮ್ಮಿರುವ > ಮರೆಯುವಂತೆ ಎಲ್ಲರ ಮನಸ್ಸು ಕಟ್ಟಿ ಹಾಕಿದ್ದ ರವಿ. ನಿಧಾನವಾಗಿ ಪೂರ್ತಿ ಕಳೆದೇ > ಹೋಗುತ್ತಿದ್ದ ಅವನಾಟ ಕಂಡು ಪೆನ್ನು ಹಿಡಿದ ಕೈ ಬಿಳಿ ಹಾಳೆಯ ತೊಗಲಲ್ಲಿ ತನ್ನ ಕಪ್ಪು ಬಣ್ಣ > ಬಿಡುತ್ತಾ ಸಾಗಿತ್ತು ಶಬ್ದದೋಕುಳಿಯಲ್ಲಿ. ಪದ ಪುಂಜಗಳ ನಡುವೆ ಅವನಂದದ ಸೊಬಗ > ಹಿಡಿದಿಡುತ್ತಿರುವ ಕವಿ ಸುತ್ತಲ ಪರಿವಿಲ್ಲದೆ ಆ ಮರಳ ಮಮಕಾರದ ಮದ್ಯ ಕುಳಿತು ಗೀಚುತ್ತಲೆ > ಇದ್ದ. ಹೌದು ಎಷ್ಟು ಬರೆದರೂ ಸಾಲದು. ಬರೆದಷ್ಟೂ ಮುಗಿಯದ ಸೊಬಗು ಆ ಮನೋಹರ ದೃಶ್ಯ. > ಕಣ್ಣು ಮನ ತಂಪಾಗಿಸಿ ಹಗಲಿನ ಪ್ರಖರತೆ ಮರೆಸಲೆಂದೆ ಹೀಗೆ ಮೈ ತಾಳಬಹುದೆ ಹೊರಡುವ > ಗಳಿಗೆಯಲ್ಲಿ! > > ಮೌನದ ಖಣಿವೆಯಲ್ಲಿ ಮಾತಿನ ಮಂಟಪ ಕವಿ ಮನದ ತುಂಬಾ. ಭಾಸ್ಕರನೊಂದಿಗೆ ಸಂಭಾಷಣೆ ಇಂದೇಕೊ > ಅತಿಯಾದ ಭಾವೋದ್ವೇಗದಲ್ಲಿ ಎಲ್ಲವನ್ನೂ ಹೇಳಿಕೊಳ್ಳುತ್ತ ಏನೇನೊ ಕೇಳುತ್ತ ಹೃದಯ ಕವಾಟ > ತೆರೆದಿಟ್ಟು ಮನಸ್ಸು ಹಗುರ ಮಾಡಿಕೊಳ್ಳುತ್ತ ಸಾಗುತ್ತಲೇ ಇತ್ತು. > > "ಏಯ್! ಹೇಳು ಸೂರ್ಯಾ ನೀನೇಕೆ ಹೀಗೆ? ಜನರ ಜೀವನಕ್ಕೆ ಹತ್ತಿರವಾಗಿ ನೀನಿಲ್ಲದೆ ಇರಲು > ಸಾಧ್ಯವೇ ಇಲ್ಲ ಎಂಬುದನ್ನು ಅರಿವಾಗಿಸಲು ದಿನ ನಿತ್ಯ ತಪ್ಪದೇ ಬರುವೆಯಾ? ಹಾಗಾದರೆ > ಮುಸ್ಸಂಜೆಯಲಿ ನೀನೆಲ್ಲಿ ಹೋಗುವೆ? ನಖಶಿಕಾಂತ ನಿನ್ನ ಕಾವು ಹಗಲ ಬೆಳಕಲ್ಲಿ. ಸಂಜೆ ಅದು > ಹೇಗೆ ತಂಪಾಗುವೆ? ನಾನು ನಿನ್ನ ಒಮ್ಮೆ ಹತ್ತಿರದಿಂದ ನೋಡಬೇಕಲ್ಲಾ. ಸಾಧ್ಯ ಮಾಡು ಒಮ್ಮೆ. > ನಿನ್ನಲ್ಲಿ ಇರುವ ಆ ಶಕ್ತಿ ಎಂತದು ಮಾರಾಯಾ? ಶ್ರೀ ಕೃಷ್ಣ ಪರಮಾತ್ಮನ ದಶಾವತಾರವೆ > ನೀನಿರಬಹುದೆ? ಉದಯದ ಕಿರಣ ಸುತ್ತೆಲ್ಲ ಗಿಡ ಮರ ಕಟ್ಟಡಗಳ ಸೀಳಿ ಹೊರ ಬರುವಾಗ ಆ ಪ್ರಭಾವಳಿಯ > ಕಂಡಾಗಲೆಲ್ಲ ನನ್ನ ಮನಸ್ಸು ಹೀಗೆ ನನ್ನ ಕೇಳುವುದು. ಇದು ನಿಜವಾ? ಆಗೆಲ್ಲ ನಾ > ಮಂತ್ರಮುಗ್ದನಾಗಿ ನೋಡುತ್ತಲೇ ಇರುತ್ತೇನೆ. ಎಷ್ಟು ನೋಡಿದರೂ ನನಗೆ ತೃಪ್ತಿಯಾಗದು. ಎಷ್ಟು > ಬರೆದರೂ ನಾ ಬಳಸಿದ ಪದಗಳು ನಿನ್ನ ಅಂದಕೆ ಕಳಪೆಯಾಗಿಯೇ ಕಾಣುವುದು. ಇನ್ನಷ್ಟು ಮತ್ತಷ್ಟು > ಹುಡುಕಾಟ ನಿನ್ನ ವರ್ಣಿಸಲು. ಆದರೆ ನಾ ಎಲ್ಲಿಂದ ಬಗೆದು ತರಲಿ ಹೇಳು? ಪ್ರತಿ ಬಾರಿ > ಬರೆಯುವಾಗ ನಾ ಸೋತು ಹೋಗುತ್ತಿರುವೆ. ನಿನ್ನಲ್ಲಿರುವ ಶಕ್ತಿಯ ಒಂದು ಅಣುವಿನಷ್ಟಾದರೂ > ಶಕ್ತಿ ನನಗೆ ದೊರಕಿದ್ದರೆ ಉಸಿರಿಡಿದು ಬದುಕಿನುದ್ದಕ್ಕೂ ಸದಾ ನಿನ್ನ ಕಾವ್ಯ > ಬರೆಯುತ್ತಿದ್ದೆ. ಯಾಕೆ ನಗು ಬಂತಾ ಸೂರ್ಯಾ? > > ನನಗೆ ನಿನ್ನ ಕಂಡರೆ ತುಂಬಾ ತುಂಬಾ ಅಕ್ಕರೆ ಕಣೊ. ಅದಕ್ಕೆ ಮನಸ್ಸಿನ ಅನಿಸಿಕೆಗಳನ್ನು > ನಿನ್ನ ಹತ್ತಿರ ಯಾವ ಮುಚ್ಚು ಮರೆಯಿಲ್ಲದೆ ಹೇಳಿಬಿಡುತ್ತೇನೆ. ಆಗ ಒಂಚೂರು ಸಮಾಧಾನವೂ > ಸಿಗುತ್ತದೆ. ನೀನುದಯಿಸುವ ಬೆಳಗು ಹಾಗೆ ಈ ಕಡಲ ಕಿನಾರೆಯಲ್ಲಿ ಅಡಗಿಕೊಳ್ಳುವ ಪರಿ > ಪ್ರತಿನಿತ್ಯ ನಾ ತಪ್ಪದೆ ನೋಡಲು ಬರುವೆ. ಹೀಗೆ ನಿತ್ಯವೂ ನೋಡಿ ನೋಡಿ ನನಗೆ ನೀನು ತುಂಬಾ > ತುಂಬಾ ಹತ್ತಿರವಾಗಿದ್ದೀಯಾ. ಮೌನವಾಗಿದ್ದ ನನ್ನೊಡಲ ದುಃಖ ಇಂದು ಕಟ್ಟೆಯೊಡೆದು ಬರುತ್ತಿದೆ > ಗೆಳೆಯಾ! ನೋಡು ನಿನ್ನ ಅನುಮತಿಯಿಲ್ಲದೆ ನಾನು ನಿನ್ನ ಗೆಳೆಯಾ ಎಂದು ಕರೆದೆ. ಕೋಪವೆ > ಹೇಳು. ಆದರೆ ನೀನು ಬಂದು ಹೇಳುವುದು ನಾಳೆಯೆ ಅಲ್ಲವೆ? ಇರಲಿ. ಆದರೆ ಆ ನಾಳೆ ನನ್ನ > ಪಾಲಿಗೆ ಇರುವುದೇ ಇಲ್ಲ. ಅದಕ್ಕೆ ಇಂದು ಮನಃಸ್ಪೂರ್ತಿ ನನ್ನ ಭಾವೋದ್ವೇಗದ ಕ್ಷಣಗಳನ್ನೆಲ್ಲ > ಹಿಡಿದಿಟ್ಟು ಪುಟ ಪುಟಗಳಲ್ಲಿ ದಾಖಲಿಸಿ ಇಲ್ಲೆ ಇಲ್ಲೆ ನೀನುದಯಿಸುವ ಗಳಿಗೆಯಲ್ಲಿ > ನಾನಿಲ್ಲವಾಗುವೆ. ಸಹಿಸಲಾಗದ ನೋವು ಕಣೋ. ಸಹನೆ ಮೀರಿ ನನ್ನ ತಿಂದಾಕುತಿದೆ. ಆದರೆ ಅದಾವ > ರೀತಿಯ ನೋವು? ನಿನಗಾವ ರೋಗ ಬಂದು ತಟ್ಟಿದೆ ಹೇಳು ಕೇಳುವೆಯಾದರೆ ನಾನೇನು ಹೇಳಲಿ ಗೆಳೆಯಾ? > ಎಷ್ಟು ನೋವುಗಳು ಬಾಳ ಬಂಡಿಯ ತುಂಬಾ. ಯಾವುದು ಮೊದಲು ಹೇಳಲಿ? ಎಲ್ಲಿಂದ ಶುರು ಮಾಡಲಿ? > ನನ್ನ ಜಂಜಾಟದ ಬದುಕಿನ ಒಂದೊಂದು ನೋವ ಕಥೆ ಕೇಳುವಷ್ಟು ತಾಳ್ಮೆ, ಪುರುಸೊತ್ತು ಇದೆಯಾ ನಿನಗೆ > ಹೇಳು? ಇಲ್ಲ ತಾನೆ? ಮತ್ಯಾಕೆ ನನಗೀ ಪ್ರಶ್ನೆ? ಸಾಕು ಮಾಡು. ಅಷ್ಟಕ್ಕೂ ಹೇಳಿದರೆ ನನ್ನ > ನೋವು ಕಡಿಮೆ ಆಗಬಹುದೆಂಬ ನಂಬಿಕೆ ನನಗಿಲ್ಲ. ಕೇಳಿ ನೀನೇನಾದರೂ ಸಲಹೆ ಸೂಚನೆ ಕೊಡಬಲ್ಲೆ > ಅಷ್ಟೆ. ಅದು ಆಗಲೇ ಹಲವರು ಹೇಳಿಯಾಗಿದೆಯಲ್ಲ. ಏನಿದ್ದರೂ ಯಾರಿರಲಿ ಇಲ್ಲದಿರಲಿ ನನ್ನ > ನೋವು ನನಗೆ. ಹತಾಷೆಯ ಕುಡಿ ಬೇಡ ಬೇಡವೆಂದರೂ ಮೊಳಕೆಯೊಡೆದು ಚಿಗುರುತ್ತಲೇ ಇರುತ್ತದೆ. > ಚಿವುಟಿ ಚಿವುಟಿ ನೋಡು ನನ್ನ ಬೆರಳುಗಳು ಹೇಗೆ ಜಡ್ಡುಗಟ್ಟಿವೆ. ಇದೇ ತಾನೆ ಇನ್ನು ಮುಂದೂ. > ನೆನಪುಗಳ ಮರೆಯಲೂ ಆಗದು ಹತ್ತಿಕ್ಕಲೂ ಆಗದು. ಆಗಾಗ ಚುಚ್ಚಿಕೊಳ್ಳುವ ಇನ್ಸುಲಿನ್ > ಇಂಜಕ್ಷಿನಿನಂತೆ ನನ್ನ ಮೆದುಳನ್ನೇ ಚುಚ್ಚುತ್ತಿವೆ ಕಣೊ. ಅದಕ್ಕೆ ಸಹಿಸಿ ಸಹಿಸಿ > ಸಾಕಾಗಿದೆಯಂತೆ. ಇದರಿಂದ ಬಿಡುಗಡೆ ಪಡೆಯಲು ಇಂದು ಈ ನಿರ್ಧಾರಕ್ಕೆ ಬಂದೆ. ಸಾಕು ನನಗೀ > ಜನ್ಮ ಎಂದೆನಿಸಿಬಿಟ್ಟಿದೆ ಕಣೊ. ಬೇರೆ ದಾರಿಯಿಲ್ಲದೆ ನನ್ನೇ ನಾ ಕೊಂದುಕೊಳ್ಳುತ್ತಿರುವೆ. > ಕ್ಷಮಿಸು. ಏನೇನೊ ಬಡಬಡಿಸುತ್ತಿಲ್ಲ. ಇದು ದಿಟವಾದ ಮಾತು. ಸತ್ಯಕ್ಕೆ ಹತ್ತಿರವಾದ ಮಾತು > ........." > > ಬರೆಯುತ್ತ ಬರೆಯುತ್ತ ಕವಿ ಬಿಚ್ಚಿಟ್ಟ ಮರಳ ಹಾಸಿಗೆಯಲ್ಲಿ ಅಂಗಾತ ಮಲಗಿದ. ಆಕಾಶದ > ಹೊದಿಕೆಯ ತುಂಬ ಮಿನುಗುವ ನಕ್ಷತ್ರ ಗಳ ನೋಡು ನೋಡುತ್ತಿದ್ದಂತೆ ಆಗವನಿಗನಿಸಿತು ; ನನ್ನ > ಗೆಳೆಯ ಸೂರ್ಯನಿಗೆ ಇವರಾರೂ ಸಾಠಿಯಲ್ಲ. ಸೂರ್ಯ ಸೂರ್ಯನೆ. ಓಹ್! ಸೂರ್ಯಾ ನೀನದೆಷ್ಟು > ಚಂದ. ಜಗತ್ತಿಗೇ ಬೆಳಕಾಗಿ ಪ್ರತಿ ದಿನ ಪ್ರತಿ ಕ್ಷಣ ಜನಜೀವನದಲ್ಲಿ ಹಾಸು ಹೊಕ್ಕಾಗಿರುವ > ನೀನು ನಿನ್ನೊಂದಿಗೆ ನಾನಿರಲು ಆಗುತ್ತಿಲ್ಲವಲ್ಲಾ. ಅನವರತ ನನಗೆ ನೀನು ಬೇಕು, ನಿನ್ನಂದವ > ಇನ್ನಷ್ಟು ಕಣ್ಣು ಮನ ತುಂಬಿಕೊಳ್ಳಬೇಕು. ಆದರೆ ಅದಾಗದ ಮಾತು. > > ಕವಿಯ ಕಣ್ಣಾಲಿಗಳು ತುಂಬಿ ಬಂದ ನೀರು ಕಪೋಲದ ಗುಂಟ ಸಾಗಿ ಮರಳಲ್ಲಿ ಉಡುಗಿ ಹೋಯಿತು. > ನಿತ್ಯದಂತೆ ರವಿಯ ಕಿರಣ ಅವನ ದೇಹ ಸೋಕಲು ಅವ ನೋಡಲೇ ಇಲ್ಲ. ಸುತ್ತ ನೆರೆದಿದ್ದ ಜನ "ಪಾಪ! > ಯಾರೊ ಆಗಂತುಕ ಇಲ್ಲಿ ಹೆಣವಾಗಿದ್ದಾನೆ" ಎಂದು ಮಾತಾಡಿಕೊಳ್ಳುತ್ತಿದ್ದರು. ಬರೆದ ಹಾಳೆಗಳು > ಗಾಳಿಗೆ ತೂರಿ ಕಡಲೊಡಲಲ್ಲಿ ತೇಲಿ ತೇಲಿ ಇನ್ನಿಲ್ಲವಾದವು!! > > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
