On 29 Dec 2015 4:20 a.m., "Mallikarjunagouda Patil" <[email protected]> wrote:
> ಕನ್ನಡದ ಮಹಾನ್ ಚೇತನ- ಕುವೆಂಪು. > """""""""""""""""""""""""""""""""" > ಕನ್ನಡ ಎನೆ ಕುಣಿದಾಡುವುದೆನ್ನೆದೆ > ಕನ್ನಡ ಎನೆ ಕಿವಿ ನಿಮಿರುವುದು.... > ಎಲ್ಲಾದರು ಇರು ಎಂತಾದರೂ ಇರು > ಎಂದೆಂದಿಗೂ ನೀ, ಕನ್ನಡವಾಗಿರು... > ಬಾರಿಸು ಕನ್ನಡ ಡಿಂಡಿಮವ > ಓ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ... > ಜಯ ಭಾರತ ಜನನಿಯ ತನುಜಾತೇ.. > ಜಯಹೇ ಕರ್ನಾಟಕ ಮಾತೆ... > ಕುವೆಂಪು ಎಂಬ ಮೂರಕ್ಷರದಿಂದಲೇ ಕನ್ನಡಿಗರ ಮನೆ ಮಾತಾದ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ > ಪುಟ್ಟಪ್ಪ ಕನ್ನಡದ ಮಹಾನ್ ಚೇತನ. ಕನ್ನಡ- ಕರ್ನಾಟಕದ ಬಗ್ಗೆ ಅವರು ಬರೆದಿರುವ ಭಾವಗೀತೆಗಳು > ನಿತ್ಯ ನೂತನ. ಮನುಜ ಮತ ವಿಶ್ವಪಥವನ್ನು ಸಾರಿದ ಈ ಸಾಹಿತ್ಯ ಶ್ರೇಷ್ಠ > ವಿಶ್ವಮಾನವರೆನಿಸಿದವರು. > ಕುವೆಂಪು ಹೊಸಗನ್ನಡ ಸಾಹಿತ್ಯದ ಹಿರಿಯ ಕವಿ. ಕನ್ನಡ ಸಾಹಿತ್ಯವನ್ನು ವಿಶ್ವ ಸಾಹಿತ್ಯ > ವೇದಿಕೆಗೆ ಕೊಂಡೊಯ್ದ ವಿಶ್ವಮಾನವ. ಮಹಾಕಾವ್ಯ, ನಾಟಕ, ಖಂಡಕಾವ್ಯ, ಕಥನಕಾವ್ಯ, ಭಾವಗೀತೆಯೇ > ಮೊದಲಾದ ಹಲವು ಪ್ರಕಾರಗಳಲ್ಲಿ ಅತ್ಯುತ್ತಮ ಕೃತಿಗಳನ್ನು ನೀಡಿದ ಅದ್ವರ್ಯು. ಕುವೆಂಪು > ಅವರಂತೆ ಸರ್ವ ಪ್ರಕಾರಗಳಲ್ಲೂ ಏಕ ಪ್ರಕಾರವಾದ ಸಿದ್ಧಿ ಪಡೆದ ಕವಿಗಳು ಅತಿ ವಿರಳ. > ಓ ನನ್ನ ಚೇತನ > ಆಗು ನೀ ಅನಿಕೇತನ! > ರೂಪ ರೂಪಗಳನು ದಾಟಿ > ನಾಮ ಕೋಟಿಗಳನು ಮೀಟಿ > ಎದೆಯ ಬಿರಿಯೆ ಭಾವದೀಟಿ.... > ‘ಅನಿಕೇತನದ’ ವಿಶ್ವ ಮಾನವ ಗೀತೆ. ಇದು ಮಾನವನ ಬದುಕಿನ ಅರ್ಥ-ವ್ಯಾಪ್ತಿಯನ್ನು ಕೆಲವೇ > ಪದಗಳಲ್ಲಿ ಅರ್ಥಗರ್ಭಿತವಾಗಿ ತೆರೆದಿಡುತ್ತದೆ. ಅರ್ಥೈಸಿಕೊಳ್ಳಲು ಪ್ರಕೃತಿ - ಸೃಷ್ಟಿಯ > ಪರಿಕಲ್ಪನೆಗಳನ್ನು - ರಹಸ್ಯಗಳನ್ನು ಕುವೆಂಪು ತಮ್ಮ ಕೃತಿಗಳಲ್ಲಿ ಶ್ರೀಸಾಮಾನ್ಯನಿಗೂ > ಅರ್ಥವಾಗುವ ರೀತಿಯಲ್ಲಿ ತೆರೆದಿಟ್ಟಿದ್ದಾರೆ. > ‘ಕಾನೂರು ಹೆಗ್ಗಡಿತಿ’ ‘ಮಲೆಗಳಲ್ಲಿ ಮದುಮಗಳು’ (ಬೃಹತ್ ಕಾದಂಬರಿಗಳು), ‘ಶ್ರೀರಾಮಕೃಷ್ಣ > ಪರಮಹಂಸ’ ‘ಸ್ವಾಮಿ ವಿವೇಕಾನಂದ’ (ಜೀವನ ಚರಿತ್ರೆ), ‘ರಕ್ತಾಕ್ಷಿ’, ‘ಬೆರಳ್ಗೆ ಕೊರಳ್’ > ‘ಜಲಗಾರ’ ‘ಯಮನ ಸೋಲು’ ಕೃತಿಗಳಲ್ಲಿ ಬದುಕಿನ ಬವಣೆ, ಬದುಕಿನ ಸತ್ಯ - ರಹಸ್ಯಗಳ ವರ್ಣನೆ > ಹಾಸುಹೊಕ್ಕಾಗಿವೆ. > ಕುವೆಂಪು ಅವರು ಹುಟ್ಟಿದ್ದು ೨೯ ಡಿಸೆಂಬರ್ ೧೯೦೪. ಅವರೂರು ಶಿವಮೊಗ್ಗ ಜಿಲ್ಲೆಯ > ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ. ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ಆದರೆ, > ಕುವೆಂಪು ಅವರು ಹುಟ್ಟಿದ್ದು ತಾಯಿಯ ತವರಾದ ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆ > ಗ್ರಾಮದಲ್ಲಿ. ಮಲೆನಾಡಿನ ಮಡಿಲಲ್ಲಿ ಹುಟ್ಟಿ ಬೆಳೆದ ಕುವೆಂಪು ಅವರು, ಶಾಲೆ, ಕಾಲೇಜು, > ವಿಶ್ವವಿದ್ಯಾಲಯಗಳಲ್ಲಿ ಕಲಿತದ್ದಕ್ಕಿಂತ ಹೆಚ್ಚಿನ ವಿಷಯವನ್ನು ಕಲಿಸಿದ್ದು ಮಲೆನಾಡಿನ > ಪ್ರಕೃತಿ. ಹೀಗಾಗೇ ಅವರ ಎಲ್ಲ ಕೃತಿಗಳಲ್ಲಿ ಮಲೆನಾಡಿನ ಸೊಬಗು ಕಂಗೊಳಿಸುತ್ತದೆ. ಇದಕ್ಕೆ > ಕಾನೂರು ಹೆಗ್ಗಡಿತಿ ಹಾಗೂ ಮಲೆಗಳಲ್ಲಿ ಮದುಮಗಳು ಸಾಕ್ಷಿ. > ಕುವೆಂಪು ಅವರು ಮೊದಲು ಬರೆದದ್ದು (ಬಿಗಿವರ್ಸ್ ಮ್ಯೂಸ್) ಇಂಗ್ಲಿಷ್‌ನಲ್ಲಿ. ಆದರೆ, ಅವರ > ಕಣ್ಣು ತೆರೆಸಿ ಮಾತೃಭಾಷೆಯಲ್ಲಿ ಬರೆಯುವಂತೆ ಪ್ರೇರೇಪಿಸಿದವರು ಐರಿಷ್ ಕವಿ ಜೇಮ್ಸ್ > ಕಸಿನ್ಸ್. ಅಂದಿನಿಂದ ಕುವೆಂಪು ಅವರು ೭೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಈ ಪೈಕಿ > ಶ್ರೀರಾಮಾಯಣ ದರ್ಶನಂ - ಮಹಾಕಾವ್ಯ (ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ), ಮಲೆಗಳಲ್ಲಿ > ಮದುಮಗಳು, ಕಾನೂರು ಹೆಗ್ಗಡಿತಿ (ಕಾದಂಬರಿ), ಸನ್ಯಾಸಿ ಮತ್ತು ಇತರ ಕತೆಗಳು (ಕಥಾ ಸಂಕಲನ), > ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ (ಜೀವನ ಚರಿತ್ರೆ), ಶೂದ್ರ ತಪಸ್ವಿ, ರಕ್ತರಾತ್ರಿ, > ರಕ್ತಾಕ್ಷಿ, ಯಮನಸೋಲು, ಬೆರಳ್ಗೆ ಕೊರಳ್ (ನಾಟಕಗಳು), ಪಕ್ಷಿಕಾಶಿ, ಪಾಂಚಜನ್ಯ, ಅನಿಕೇತನ, > ಚಂದ್ರಮಂಚಕೆ ಬಾ ಚಕೋರಿ, ಕೊಳಲು (ಕವನಸಂಕಲನಗಳು) ಪ್ರಮುಖವಾದವು. > ಇಂತಹ ಅತ್ಯಮೂಲ್ಯ ಕೃತಿಗಳನ್ನು ನೀಡಿದ ಕವಿಗೆ ಪದ್ಮವಿಭೂಷಣ (೧೯೫೮), ರಾಜ್ಯ-ಕೇಂದ್ರ > ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಷ್ಟ್ರಕವಿ ಬಿರುದು (೧೯೬೪), ಪಂಪಪ್ರಶಸ್ತಿ, ಕರ್ನಾಟಕ > ರತ್ನ ಪುರಸ್ಕಾರಗಳನ್ನು ನೀಡಿ ಸರಕಾರ ಗೌರವಿಸಿದರೆ, ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು > ಅವರಿಗೆ ೩೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ನೀಡಿ ತನ್ನ > ಘನತೆಯನ್ನೇ ಹೆಚ್ಚಿಸಿಕೊಂಡಿತು > > ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ/ಆದರ್ಶಗಳು ಸಾರ್ವಕಾಲಿಕ. ಕನ್ನಡಕ್ಕೆ > ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಹೊಸಗನ್ನಡ ಸಾಹಿತ್ಯವನ್ನು > ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ. 'ಮನುಜ ಮತ ವಿಶ್ವಪಥ' ಸಂದೇಶ ಸಾರಿದ ಶ್ರೇಷ್ಠ > ವಿಶ್ವಮಾನವ. ಅಂತಹ ಮಹಾನ್ ಚೇತನ ಕುವೆಂಪು ಅವರ ವಿಶ್ವಮಾನವ ಸಂದೇಶ ಕುರಿತು ವಿಚಾರ ಗೋಷ್ಠಿ > ಏರ್ಪಡಿಸುವ ಮೂಲಕ ಅವರ ಜನ್ಮ ದಿನಾಚರಣೆಯನ್ನು 'ವಿಶ್ವ ಮಾನವ ದಿನಾಚರಣೆ'ಯನ್ನಾಗಿ ಆಚರಿಸಲು > ಇಂದಿನ ಘನ ಸರ್ಕಾರ ನಿರ್ಧರಿಸಿರುವುದು ನಮಗೆಲ್ಲರಿಗೂ ಸಂತೋಷದ ವಿಷಯವಾಗಿದೆ. > > ಸಂಗ್ರಹ ಲೇಖನ: > ಪೋತರಾಜ ಪೋತರದ. > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit https://groups.google.com/d/ > msgid/kannadastf/CAOM04w%2B14hkFZtpbEGMrB-YFn2METULHzeMfUngDEpJ2xv-tmg% > 40mail.gmail.com > <https://groups.google.com/d/msgid/kannadastf/CAOM04w%2B14hkFZtpbEGMrB-YFn2METULHzeMfUngDEpJ2xv-tmg%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
