Thank u sir
On 28 Dec 2017 12:16 a.m., "honnuraswamy m" <[email protected]>
wrote:

>
> On 29 Dec 2015 4:20 a.m., "Mallikarjunagouda Patil" <[email protected]>
> wrote:
>
>> ಕನ್ನಡದ ಮಹಾನ್ ಚೇತನ- ಕುವೆಂಪು.
>> """"""""""""""""""""""""""""""""""
>> ಕನ್ನಡ ಎನೆ ಕುಣಿದಾಡುವುದೆನ್ನೆದೆ
>> ಕನ್ನಡ ಎನೆ ಕಿವಿ ನಿಮಿರುವುದು....
>> ಎಲ್ಲಾದರು ಇರು ಎಂತಾದರೂ ಇರು
>> ಎಂದೆಂದಿಗೂ ನೀ, ಕನ್ನಡವಾಗಿರು...
>> ಬಾರಿಸು ಕನ್ನಡ ಡಿಂಡಿಮವ
>> ಓ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ...
>> ಜಯ ಭಾರತ ಜನನಿಯ ತನುಜಾತೇ..
>> ಜಯಹೇ ಕರ್ನಾಟಕ ಮಾತೆ...
>> ಕುವೆಂಪು ಎಂಬ ಮೂರಕ್ಷರದಿಂದಲೇ ಕನ್ನಡಿಗರ ಮನೆ ಮಾತಾದ ರಾಷ್ಟ್ರಕವಿ ಕುಪ್ಪಳ್ಳಿ
>> ವೆಂಕಟಪ್ಪ ಪುಟ್ಟಪ್ಪ ಕನ್ನಡದ ಮಹಾನ್ ಚೇತನ. ಕನ್ನಡ- ಕರ್ನಾಟಕದ ಬಗ್ಗೆ ಅವರು ಬರೆದಿರುವ
>> ಭಾವಗೀತೆಗಳು ನಿತ್ಯ ನೂತನ. ಮನುಜ ಮತ ವಿಶ್ವಪಥವನ್ನು ಸಾರಿದ ಈ ಸಾಹಿತ್ಯ ಶ್ರೇಷ್ಠ
>> ವಿಶ್ವಮಾನವರೆನಿಸಿದವರು.
>> ಕುವೆಂಪು ಹೊಸಗನ್ನಡ ಸಾಹಿತ್ಯದ ಹಿರಿಯ ಕವಿ. ಕನ್ನಡ ಸಾಹಿತ್ಯವನ್ನು ವಿಶ್ವ ಸಾಹಿತ್ಯ
>> ವೇದಿಕೆಗೆ ಕೊಂಡೊಯ್ದ ವಿಶ್ವಮಾನವ. ಮಹಾಕಾವ್ಯ, ನಾಟಕ, ಖಂಡಕಾವ್ಯ, ಕಥನಕಾವ್ಯ, ಭಾವಗೀತೆಯೇ
>> ಮೊದಲಾದ ಹಲವು ಪ್ರಕಾರಗಳಲ್ಲಿ ಅತ್ಯುತ್ತಮ ಕೃತಿಗಳನ್ನು ನೀಡಿದ ಅದ್ವರ್ಯು. ಕುವೆಂಪು
>> ಅವರಂತೆ ಸರ್ವ ಪ್ರಕಾರಗಳಲ್ಲೂ ಏಕ ಪ್ರಕಾರವಾದ ಸಿದ್ಧಿ ಪಡೆದ ಕವಿಗಳು ಅತಿ ವಿರಳ.
>> ಓ ನನ್ನ ಚೇತನ
>> ಆಗು ನೀ ಅನಿಕೇತನ!
>> ರೂಪ ರೂಪಗಳನು ದಾಟಿ
>> ನಾಮ ಕೋಟಿಗಳನು ಮೀಟಿ
>> ಎದೆಯ ಬಿರಿಯೆ ಭಾವದೀಟಿ....
>> ‘ಅನಿಕೇತನದ’ ವಿಶ್ವ ಮಾನವ ಗೀತೆ. ಇದು ಮಾನವನ ಬದುಕಿನ ಅರ್ಥ-ವ್ಯಾಪ್ತಿಯನ್ನು ಕೆಲವೇ
>> ಪದಗಳಲ್ಲಿ ಅರ್ಥಗರ್ಭಿತವಾಗಿ ತೆರೆದಿಡುತ್ತದೆ. ಅರ್ಥೈಸಿಕೊಳ್ಳಲು ಪ್ರಕೃತಿ - ಸೃಷ್ಟಿಯ
>> ಪರಿಕಲ್ಪನೆಗಳನ್ನು - ರಹಸ್ಯಗಳನ್ನು ಕುವೆಂಪು ತಮ್ಮ ಕೃತಿಗಳಲ್ಲಿ ಶ್ರೀಸಾಮಾನ್ಯನಿಗೂ
>> ಅರ್ಥವಾಗುವ ರೀತಿಯಲ್ಲಿ ತೆರೆದಿಟ್ಟಿದ್ದಾರೆ.
>> ‘ಕಾನೂರು ಹೆಗ್ಗಡಿತಿ’ ‘ಮಲೆಗಳಲ್ಲಿ ಮದುಮಗಳು’ (ಬೃಹತ್ ಕಾದಂಬರಿಗಳು), ‘ಶ್ರೀರಾಮಕೃಷ್ಣ
>> ಪರಮಹಂಸ’ ‘ಸ್ವಾಮಿ ವಿವೇಕಾನಂದ’ (ಜೀವನ ಚರಿತ್ರೆ), ‘ರಕ್ತಾಕ್ಷಿ’, ‘ಬೆರಳ್ಗೆ ಕೊರಳ್’
>> ‘ಜಲಗಾರ’ ‘ಯಮನ ಸೋಲು’ ಕೃತಿಗಳಲ್ಲಿ ಬದುಕಿನ ಬವಣೆ, ಬದುಕಿನ ಸತ್ಯ - ರಹಸ್ಯಗಳ ವರ್ಣನೆ
>> ಹಾಸುಹೊಕ್ಕಾಗಿವೆ.
>> ಕುವೆಂಪು ಅವರು ಹುಟ್ಟಿದ್ದು ೨೯ ಡಿಸೆಂಬರ್ ೧೯೦೪. ಅವರೂರು ಶಿವಮೊಗ್ಗ ಜಿಲ್ಲೆಯ
>> ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ. ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ಆದರೆ,
>> ಕುವೆಂಪು ಅವರು ಹುಟ್ಟಿದ್ದು ತಾಯಿಯ ತವರಾದ ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆ
>> ಗ್ರಾಮದಲ್ಲಿ. ಮಲೆನಾಡಿನ ಮಡಿಲಲ್ಲಿ ಹುಟ್ಟಿ ಬೆಳೆದ ಕುವೆಂಪು ಅವರು, ಶಾಲೆ, ಕಾಲೇಜು,
>> ವಿಶ್ವವಿದ್ಯಾಲಯಗಳಲ್ಲಿ ಕಲಿತದ್ದಕ್ಕಿಂತ ಹೆಚ್ಚಿನ ವಿಷಯವನ್ನು ಕಲಿಸಿದ್ದು ಮಲೆನಾಡಿನ
>> ಪ್ರಕೃತಿ. ಹೀಗಾಗೇ ಅವರ ಎಲ್ಲ ಕೃತಿಗಳಲ್ಲಿ ಮಲೆನಾಡಿನ ಸೊಬಗು ಕಂಗೊಳಿಸುತ್ತದೆ. ಇದಕ್ಕೆ
>> ಕಾನೂರು ಹೆಗ್ಗಡಿತಿ ಹಾಗೂ ಮಲೆಗಳಲ್ಲಿ ಮದುಮಗಳು ಸಾಕ್ಷಿ.
>> ಕುವೆಂಪು ಅವರು ಮೊದಲು ಬರೆದದ್ದು (ಬಿಗಿವರ್ಸ್ ಮ್ಯೂಸ್) ಇಂಗ್ಲಿಷ್‌ನಲ್ಲಿ. ಆದರೆ, ಅವರ
>> ಕಣ್ಣು ತೆರೆಸಿ ಮಾತೃಭಾಷೆಯಲ್ಲಿ ಬರೆಯುವಂತೆ ಪ್ರೇರೇಪಿಸಿದವರು ಐರಿಷ್ ಕವಿ ಜೇಮ್ಸ್
>> ಕಸಿನ್ಸ್. ಅಂದಿನಿಂದ ಕುವೆಂಪು ಅವರು ೭೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಈ ಪೈಕಿ
>> ಶ್ರೀರಾಮಾಯಣ ದರ್ಶನಂ - ಮಹಾಕಾವ್ಯ (ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ), ಮಲೆಗಳಲ್ಲಿ
>> ಮದುಮಗಳು, ಕಾನೂರು ಹೆಗ್ಗಡಿತಿ (ಕಾದಂಬರಿ), ಸನ್ಯಾಸಿ ಮತ್ತು ಇತರ ಕತೆಗಳು (ಕಥಾ ಸಂಕಲನ),
>> ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ (ಜೀವನ ಚರಿತ್ರೆ), ಶೂದ್ರ ತಪಸ್ವಿ, ರಕ್ತರಾತ್ರಿ,
>> ರಕ್ತಾಕ್ಷಿ, ಯಮನಸೋಲು, ಬೆರಳ್ಗೆ ಕೊರಳ್ (ನಾಟಕಗಳು), ಪಕ್ಷಿಕಾಶಿ, ಪಾಂಚಜನ್ಯ, ಅನಿಕೇತನ,
>> ಚಂದ್ರಮಂಚಕೆ ಬಾ ಚಕೋರಿ, ಕೊಳಲು (ಕವನಸಂಕಲನಗಳು) ಪ್ರಮುಖವಾದವು.
>> ಇಂತಹ ಅತ್ಯಮೂಲ್ಯ ಕೃತಿಗಳನ್ನು ನೀಡಿದ ಕವಿಗೆ ಪದ್ಮವಿಭೂಷಣ (೧೯೫೮), ರಾಜ್ಯ-ಕೇಂದ್ರ
>> ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಷ್ಟ್ರಕವಿ ಬಿರುದು (೧೯೬೪), ಪಂಪಪ್ರಶಸ್ತಿ, ಕರ್ನಾಟಕ
>> ರತ್ನ ಪುರಸ್ಕಾರಗಳನ್ನು ನೀಡಿ ಸರಕಾರ ಗೌರವಿಸಿದರೆ, ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು
>> ಅವರಿಗೆ ೩೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ನೀಡಿ ತನ್ನ
>> ಘನತೆಯನ್ನೇ ಹೆಚ್ಚಿಸಿಕೊಂಡಿತು
>>
>> ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ/ಆದರ್ಶಗಳು ಸಾರ್ವಕಾಲಿಕ. ಕನ್ನಡಕ್ಕೆ
>> ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಹೊಸಗನ್ನಡ ಸಾಹಿತ್ಯವನ್ನು
>> ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ. 'ಮನುಜ ಮತ ವಿಶ್ವಪಥ' ಸಂದೇಶ ಸಾರಿದ ಶ್ರೇಷ್ಠ
>> ವಿಶ್ವಮಾನವ. ಅಂತಹ ಮಹಾನ್ ಚೇತನ ಕುವೆಂಪು ಅವರ ವಿಶ್ವಮಾನವ ಸಂದೇಶ ಕುರಿತು ವಿಚಾರ ಗೋಷ್ಠಿ
>> ಏರ್ಪಡಿಸುವ ಮೂಲಕ ಅವರ ಜನ್ಮ ದಿನಾಚರಣೆಯನ್ನು 'ವಿಶ್ವ ಮಾನವ ದಿನಾಚರಣೆ'ಯನ್ನಾಗಿ ಆಚರಿಸಲು
>> ಇಂದಿನ ಘನ ಸರ್ಕಾರ ನಿರ್ಧರಿಸಿರುವುದು ನಮಗೆಲ್ಲರಿಗೂ ಸಂತೋಷದ ವಿಷಯವಾಗಿದೆ.
>>
>> ಸಂಗ್ರಹ ಲೇಖನ:
>> ಪೋತರಾಜ ಪೋತರದ.
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit https://groups.google.com/d/ms
>> gid/kannadastf/CAOM04w%2B14hkFZtpbEGMrB-YFn2METULHzeMfUngDEp
>> J2xv-tmg%40mail.gmail.com
>> <https://groups.google.com/d/msgid/kannadastf/CAOM04w%2B14hkFZtpbEGMrB-YFn2METULHzeMfUngDEpJ2xv-tmg%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to