ಪ್ರತಿಯೊಬ್ಬ ಮಾನವನಲ್ಲಿ ಒಂದು ವಿಶೇಷವಾದ ದಿವ್ಯ ಶಕ್ತಿಯು ಇರುತ್ತದೆ. ಅದನ್ನು ಆ
ವ್ಯಕ್ತಿಯು ತನ್ನ ಸ್ವಸಾಮರ್ಥ್ಯದಿಂದ ಬೆಳೆಸಿಕೊಂಡು ಹೊರಹಾಕಬೇಕು. ಇದು ಅತ್ಯಂತ
ಅಗತ್ಯವಾದುದು. ಶಿ ಏಳಿ, ಎದ್ದೇಳಿ, ಇನ್ನು ನಿದ್ರಿಸದಿರಿ. ಎಲ್ಲ ಬಯಕೆಗಳನ್ನು
ಪೂರೈಸಿಕೊಳ್ಳುವ, ಎಲ್ಲ ಕಷ್ಟಗಳನ್ನು ನಿವಾರಣೆ ಮಾಡುವ ಶಕ್ತಿ ಪ್ರತಿಯೊಬ್ಬರಲ್ಲೂ ಇದೆ.
ಇದನ್ನು ನಂಬಿ. ಆಗ ಆ ಶಕ್ತಿಯು ಪ್ರಕಟಗೊಳ್ಳುವುದು.ಷಿ ಈ ಸಂದೇಶದಂತೆ ಇಂದಿನ ಸಂದರ್ಭದಲ್ಲಿ
ಪ್ರತಿಯೊಬ್ಬ ಮಾನವನು ಜಾಗೃತಗೊಳ್ಳಬೇಕಾದ ಅವಶ್ಯಕತೆ ಇದೆ. ರಾಜಕೀಯ ದೊಂಬರಾಟ, ಬ್ರಷ್ಟಾಚಾರ,
ಬಂಡವಾಳಶಾಹಿ ಪ್ರಭುತ್ವ, ಸಾಂಸ್ಕ್ಕತಿಕ ಅಧ:ಪತನ ಮುಂತಾದ ದುಷ್ಟ ಚಟುವಟಿಕೆಗಳು ನಮ್ಮ ಮುಂದೆ
ನಿರ್ದಾಕ್ಷಿಣ್ಯವಾಗಿ ನಡೆಯುತ್ತಿವೆ. ಈ ಸ್ಥಿತಿಯಲ್ಲಿ ಪ್ರತಿಯೊಬ್ಬರು ಜಾಗೃತರಾಗಿ ಇಂಥ
ದುಷ್ಟಶಕ್ತಿಗಳ ವಿರುದ್ಧ ಸಾಮೂಹಿಕವಾಗಿ ಹೋರಾಡಬೇಕಾದ ತುರ್ತು ಒದಗಿಬಂದಿದೆ.

ನಾವು ಮೊದಲು ನಮ್ಮೊಳಗಿನ ದಿವ್ಯತೆಯನ್ನು ನಂಬಬೇಕು ಶಿ ನನ್ನಲ್ಲಿರುವ ದಿವ್ಯತೆಯನ್ನು
ಪ್ರಕಟಮಾಡಿಕೋ, ಆಗ ಎಲ್ಲವೂ ಅದರ ಸುತ್ತಲೂ ಸಾಮರಸ್ಯವಾಗಿ ಯೋಜಿತಗೊಳ್ಳುವವು. ಶಿ
ಪ್ರತಿಯೊಬ್ಬರು ತನ್ನಲ್ಲಿರುವ ಶಕ್ತಿಸಾಮರ್ಥ್ಯವನ್ನು ಅರಿತುಕೊಂಡು ಅದನ್ನು
ಸದ್ವಿನಿಯೋಗಪಡಿಸಿಕೊಳ್ಳಬೇಕು.  ತಾನು ಭ್ರಷ್ಟಾಚಾರದಿಂದ ಮುಕ್ತನಾಗಿದ್ದರೆ ಕ್ರಮೇಣ
ಸುತ್ತಲಿನ ಪರಿಸರವು ಆ ದಿಸೆಯಲ್ಲಿ ರೂಪುಗೊಳ್ಳುತ್ತದೆ.  ಯುವಶಕ್ತಿಯ ಬಗೆಗೆ
ವಿವೇಕಾನಂದರಿಗೆ ಅಪಾರ ಕಾಳಜಿ ಮತ್ತು ವಿಶ್ವಾಸ. ಶಿಭಗವದ್ಗೀತೆಯನ್ನು ಓದುವುದಕ್ಕಿಂತ
ಫುಟ್ಬಾಲ್ ಆಟದಿಂದ ನೀವು ಸ್ವರ್ಗಕ್ಕೆ ಹತ್ತಿರದವರಾಗುತ್ತೀರಿಷಿ ಎಂಬ ಸಂದೇಶ, ಯುವಶಕ್ತಿಯು
ಮೊದಲು ದೈಹಿಕವಾಗಿ ಸದೃಢರಾಬೇಕು.  ಆದರೆ ಇಂದು ಬೌದ್ದಿಕ ಬೆಳವಣಿಗೆಯೇ ಮುಖ್ಯ. ಭೌತಿಕ
ಬೆಳವಣಿಗೆಗೆ ಎರಡನೆಯ ಸ್ಥಾನ. ಎಲ್ಲಿಯವರೆಗೆ ಯುವಕರು ಭೌತಿಕವಾಗಿ ಸದೃಢಕಾಯ
ಹೊಂದುವುದಿಲ್ಲವೋ ಅಲ್ಲಿಯವರೆಗೆ ಪೂರ್ಣ ಪ್ರಮಾಣದಲ್ಲಿ ಯುವಕರು ತಮ್ಮ ವ್ಯಕ್ತಿತ್ವ
ರೂಪಿಸಿಕೊಳ್ಳಲಾರರು. ಇಂದಿನ ತಾಂತ್ರಿಕ ಮತ್ತು ವೈಜ್ಞಾನಿಕತೆಯ ಯುಗದಲ್ಲಿ ಐಟಿ ಬಿಟಿ
ಕ್ಷೇತ್ರದಲ್ಲಿ ದುಡಿಯುವ ಯುವಕರಿಗೆ ಈ ಮಾತು ಪೂರ್ಣಪ್ರಮಾಣದಲ್ಲಿ ಅನ್ವಯವಾಗುತ್ತದೆ.

ಶಿ ನಾವು ಈಗಿರುವ ಸ್ಥಿತಿಗೆ ನಾವೇ ಜವಾಬ್ದಾರರು. ನಾವು ಏನಾಗಬೇಕೆಂದು ಬಯಸುವೆವೋ ಅದನ್ನು
ಸಾಧಿಸುವ ಶಕ್ತಿ ನಮ್ಮಲ್ಲಿಯೇ ಇರುವುದು. ಹಾಗೆಯೇ ನಾವು ಈಗ ಹೇಗೆ ಇದ್ದೇವೆಯೋ ಅದು ನಮ್ಮ
ಹಿಂದಿನ ಕಾರ್ಯಗಳ ಫಲವೇ ಆಗಿದೆ ಶಿ ಈ ಮಾತುಗಳು ಪ್ರತಿಯೊಬ್ಬನಿಗೂ ಉಪಯುಕ್ತವಾದವುಗಳು.
ವರ್ತಮಾನವು ಭೂತದ ಮೇಲೆ ನಿಂತಿರುತ್ತದೆ, ಮುಂದುವರೆಯುತ್ತಿರುತ್ತದೆ. ಭವಿಷತ್ತು ವರ್ತಮಾನದ
ಮೇಲೆ ಅವಲಂಬಿತವಾಗಿರುತ್ತದೆ. ಇಂದು ಒಂದು ರಾಷ್ಟ್ತ್ರ ಹೇಗಿದೆ ಎಂಬುದಕ್ಕೆ ಅದರ ಇತಿಹಾಸವೇ
ಕಾರಣ. ಮುಂದೆ ಏನಾಗುತ್ತದೆ ಎಂಬ ತರ್ಕಕ್ಕೆ ವರ್ತಮಾನವೇ ಕಾರಣ ಹಾಗೆ ವ್ಯಕ್ತಿಗೂ ಈ ಮಾತು
ಅನ್ವಯಿಸುತ್ತದೆ. ಮುಂದೆ ನಮ್ಮ ಜೀವನವು ಸರಿಯಾದ ರೀತಿಯಲ್ಲಿ ಸಾಗಬೇಕಾದರೆ ಇಂದು ನಾವು ಆ
ನಿಟ್ಟಿನಲ್ಲಿ ಪ್ರಯತ್ನ ಮತ್ತು ಶ್ರಮವನ್ನು ಪಡಬೇಕಾದುದು ಅವಶ್ಯಕ ಮತ್ತು ಅನವಾರ್ಯ.

ಇಂದು ಎಲ್ಲೆಡೆಗೆ ಧಾರ್ಮಿಕ ಕೋಲಾಹಲ ತಾಂಡವವಾಡುತ್ತಿದೆ. ಧರ್ಮಧರ್ಮಗಳ ನಡುವೆ ತಿಕ್ಕಾಟ,
ಘರ್ಷಣೆಗಳು ಮಾನವ ಜನಾಂಗವನ್ನು ವಿನಾಶದಂಚಿಗೆ ಒಯ್ಯುತ್ತಿವೆ. ಹಾಗಾದರೆ ನಜವಾಗಿ ಧರ್ಮ
ಎಂದರೇನು? ಶಿಧರ್ಮವು ಹೊಸದೇನನ್ನೂ ನಿನಗೆ ನೀಡುವುದಿಲ್ಲ. ಅದು ನನ್ನ ಮಾರ್ಗದಲ್ಲಿಯ
ಅಡೆತಡೆಗಳನ್ನು ನಿವಾರಿಸಿ ನನ್ನ ಆತ್ಮವನ್ನು ದರ್ಶಿಸುವಂತೆ ಮಾಡುತ್ತದೆ.ಷಿ ಎಂಬ ವಿವೇಕವಾಣಿ
ಇಂದಿನ ಧಾರ್ಮಿಕ ನಾಯಕರಿಗೆ ದಾರೀದೀಪವಾಗಿದೆ.   ಶಿ ಹಿಂದಿನ ಧರ್ಮಗಳು ಹೇಳುತ್ತವೆ.
ದೇವರನ್ನು ನಂಬದವನು ನಾಸ್ತಿಕ ಎಂದು, ಆದರೆ ಹೊಸ ಧರ್ಮ ಹೇಳುತ್ತದೆ ಯಾರು ತನ್ನನ್ನು
ನಂಬುವುದಿಲ್ಲವೋ ಅವನೇ ನಾಸ್ತಿಕ ಶಿ. ಮನುಷ್ಯ ದೇವರನ್ನು ನಂಬುವುದಕ್ಕಿಂತ ಮೊದಲು ತನ್ನನ್ನು
ತಾ ನಂಬಬೇಕು. ಎಲ್ಲಿಯವರೆಗೆ ತನ್ನ ಶಕ್ತಿ ಮತ್ತು ಸಾಮರ್ಥ್ಯದ ಬಗ್ಗೆ ನಂಬಿಗೆ
ಹೊಂದುವುದಿಲ್ಲ ಅಲ್ಲಿಯವರೆಗೆ ಆತ ಏನನ್ನೂ ಸಾಧಿಸಲಾರ.

ಪ್ರತಿಯೊಬ್ಬ ವ್ಯಕ್ತಿಗೆ ಒಬ್ಬ ನಾಯಕನರುತ್ತಾನೆ. ಶಿ ನಾಯಕನಲ್ಲಿ ಚಾರಿತ್ರ್ಯ ಇಲ್ಲದೇ
ಹೋದರೆ ಅವನ ಅನುಯಾಯಿಗಳು ವಿಧೇಯರಾಗಿ ಇರುವುದು ಸಾಧ್ಯವಿಲ್ಲ. ಪರಿಪೂರ್ಣ ಪಾವಿತ್ರ್ಯ
ಮಾತ್ರವೇ ನರಂತರ ವಿಧೇಯತೆ ಮತ್ತು ಆತ್ಮ ವಿಶ್ವಾಸಗಳನ್ನು ಖಾತರಿಗೊಳಿಸಬಲ್ಲದುಷಿ ಎಂದು
ಹೇಳಿದ್ದಾರೆ. ನಾಯಕನಗೆ ಚಾರಿತ್ರ್ಯ ಮುಖ್ಯ. ಎಲ್ಲಿಯವರೆಗೆ ನಾಯಕನಲ್ಲಿ
ಚಾರಿತ್ರ್ಯವಿರುತ್ತದೆಯೋ ಅಲ್ಲಿಯವರೆಗೆ ಆತನ ಅನುಯಾಯಿಗಳು ಆತನನ್ನು ಅನುಸರಿಸುತ್ತಾರೆ.
ಇಂದಿನ ಪರಿಸ್ಥಿತಿಯಲ್ಲಿ ನಮ್ಮ ನಾಯಕರು ಹೇಗಿದ್ದಾರೆ ? ಎಂದು ಒಂದು ಕ್ಷಣ ಯೋಚಿಸಿದಾಗ ಇವರು
ಚಾರತ್ರ್ಯದಿಂದ ಬಲುದೂರ ಸರಿದಿದ್ದಾರೆ. ಇಂದು ನಮ್ಮ ನಾಯಕರಿಗೆ  ವಿವೇಕಾನಂದರ ಈ ಮಾತು
ಮುತ್ತಿನಷ್ಟೇ ಮೌಲ್ಯ ತುಂಬಿದ ನುಡಿ ಹಾಗೂ ಇವರ ಮುಂದಿನ ದಾರಿಗೆ ಕೈದೀವಿಗೆಗಳು.

ವೈಜ್ಞಾನಕತೆಯ ನಡುವೆ ಇಂದು ಜನತೆ ಮೂಢನಂಬಿಕೆ ಮತ್ತು ಪವಾಡಗಳನ್ನು ನಂಬುತ್ತಿದ್ದಾರೆ.
ಇವುಗಳಿಂದಾಗಿ ತಮ್ಮ ಬುದ್ದಿವಂತಿಕೆ ಮತ್ತು ವಿವೇಚನಾ ಶಕ್ತಿಯನ್ನು
ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಜನತೆಯು ದೌರ್ಬಲ್ಯಕ್ಕೊಳಗಾಗುತ್ತಿದ್ದಾರೆ.
 ವಿವೇಕಾನಂದರು ಇದನ್ನೇ ಹೀಗೆ ಹೇಳಿದ್ದಾರೆ ಶಿ ಪವಾಡ ಮತ್ತು ಮೂಢ ನಂಬಿಕೆಗಳು ಯಾವಾಗಲೂ
ದುರ್ಬಲತೆಯ ಲಕ್ಷಣಗಳೇ ಆಗಿವೆ. ಅವು ಯಾವಾಗಲೂ ಅಧ:ಪತನದ ಮತ್ತು ಮೃತ್ಯುವಿನ ಸಂಕೇತಗಳು.
ಆದ್ದರಿಂದ ಅವುಗಳ ಬಗ್ಗೆ ಎಚ್ಚರಿಕೆಯಿಂದ ಇರು ಶಿ ನಾವು ಯಾವಾಗಲೂ ಮೂಢನಂಬಿಕೆಗಳಿಂದ
ದೂರಿರಬೇಕು. ಆಗ ನಮ್ಮ ವ್ಯಕ್ತಿತ್ವವು ಸರಿಯಾದ ರೀತಿಯಲ್ಲಿ ರೂಪುಗೊಳ್ಳುತ್ತದೆ. ಪವಾಡ
ಯಾವಾಗಲೂ ವ್ಯಕ್ತಿಯ ಬುದ್ದಿವಂತಿಕೆಯನ್ನು ಮತ್ತು ಸೃಜನಶೀಲತೆಯನ್ನು ವಿನಾಶದ ಪಥವನ್ನು
ಹಿಡಿಯುವಂತೆ ಮಾಡುತ್ತದೆ.

ಮನುಷ್ಯನಿಗೆ ಲಿ ಸಹನೆ ಳಿಎಂಬುದು ಮುಖ್ಯವಾಗಿರಬೇಕಾದ ಗುಣ. ನಾವು ಎಲ್ಲಿಯವರೆಗೆ
ಸಹನಶೀಲ-ರಾಗಿರುತ್ತೇವೆಯೋ ಅಲ್ಲಿಯವರೆಗೆ ಆನಂದದಿಂದ ಇರುತ್ತೇವೆ. ಸಹನೆ ಮೀರಿದ ಮರುಕ್ಷಣ
ದು:ಖದಲ್ಲಿ ಮುಳುಗುತ್ತೇವೆ. ಇಂದಿನ ಪರಿಸ್ಥಿತಿಯಲ್ಲಿ ಎಲ್ಲೆಡೆಯಲ್ಲಿ ವಿವಿಧ ಕಾರಣಗಳಿಗೆ
ದ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಆನಂದಮಯ ಬದುಕು ಆತಂಕಮಯವಾಗಿದೆ. ಆದ್ದರಿಂದ
ವಿವೇಕಾನಂದರು ನಮಗೆ   ಶಿ ಸಹನೆಯಿಂದ ಇರಿ. ಪರಸ್ಪರ ಶೃದ್ದೆವುಳ್ಳವರಾಗಿ ನಿಮ್ಮ
ನಿಮ್ಮಲ್ಲಿಯೇ ಜಗಳ ಮಾಡಬೇಡಿ. ಹಣದ ವ್ಯವಹಾರಗಳಲ್ಲಿ ಸಂಪೂರ್ಣವಾಗಿ ಶುದ್ಧವಾಗಿರಿ, ನವು
ಶೃದ್ದೆ, ಪ್ರಾಮಾಣಿಕತೆ, ಭಕ್ತಿಗಳನ್ನು ಎಲ್ಲಿಯವರೆಗೆ ಹೊಂದುರುತ್ತೀರೋ ಅಲ್ಲಿಯವರೆಗೆ
ಎಲ್ಲವೂ ಸಂಪದ್ಭರಿತವಾಗುವುದುಷಿ. ಎಂದು ಹೇಳಿದ್ದಾರೆ. ಪ್ರತಿಯೊಬ್ಬರು
ಶೃದ್ದಾವಂತರಾಗಿರಬೇಕು, ಹಣದ ವ್ಯವಹಾರದಲ್ಲಿ ಪರಿಶುದ್ಧರಾಗಿರಬೇಕು ಎಂಬ ನುಡಿಗಳು ಸದಾಕಾಲವೂ
ಸಲ್ಲುವಂತಹ ನುಡಿಗಳು.

ಹೀಗೆ ವಿವೇಕಾನಂದರ ಸಂದೇಶಗಳು ಸಾರ್ವಕಾಲಿಕ ಮತ್ತು ಸಾರ್ವತ್ರಿಕತೆಯನ್ನು ಹೊಂದಿವೆ. ಕೆಲವು
ಸಂದೇಶಗಳನ್ನು ಮಾತ್ರ ಮಿತಿಯೊಳಗೆ ಇಲ್ಲಿ ವಿವೇಚಿಸಲಾಗಿದೆ. ವಿವೇಕಾನಂದರ ಎಲ್ಲ ಸಂದೇಶಗಳು
ಶ್ರದ್ದೆ, ನಿಷ್ಠೆ, ನಂಬಿಕೆ, ಪ್ರೀತಿ, ದಿವ್ಯತೆ, ಆನಂದ, ಚಾರಿತ್ರ್ಯ ಮುಂತಾದ ಅಂಶಗಳನ್ನು
ಪುನ: ಪುನ: ಪ್ರಸ್ತಾಪಿಸುತ್ತವೆ. ಸಂವೇದನಾಶೀಲ ಹೃದಯ, ಸೃಜನಾತ್ಮಕ ಮಿದುಳು ಮತ್ತು
ಕ್ರೀಯಾಶೀಲವಾದ ಕೈಗಳು ಇಡೀ ಜಗತ್ತನ್ನೇ ಸುಂದರಮಯ ಮತ್ತು ಆನಂದಮಯಗೊಳಿಸಬಲ್ಲವು ಎಂಬುದು
ವಿವೇಕಾನಂದರ ಮಹಾನ್ ಸಂದೇಶ ಮತ್ತು

ಸಮೀರ ( ಕನ್ನಡ ಭಾಷಾ ಶಿಕ್ಷಕಿ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to