On 12 Jan 2018 7:04 pm, "Sameera samee" <[email protected]> wrote:
> ಪ್ರತಿಯೊಬ್ಬ ಮಾನವನಲ್ಲಿ ಒಂದು ವಿಶೇಷವಾದ ದಿವ್ಯ ಶಕ್ತಿಯು ಇರುತ್ತದೆ. ಅದನ್ನು ಆ > ವ್ಯಕ್ತಿಯು ತನ್ನ ಸ್ವಸಾಮರ್ಥ್ಯದಿಂದ ಬೆಳೆಸಿಕೊಂಡು ಹೊರಹಾಕಬೇಕು. ಇದು ಅತ್ಯಂತ > ಅಗತ್ಯವಾದುದು. ಶಿ ಏಳಿ, ಎದ್ದೇಳಿ, ಇನ್ನು ನಿದ್ರಿಸದಿರಿ. ಎಲ್ಲ ಬಯಕೆಗಳನ್ನು > ಪೂರೈಸಿಕೊಳ್ಳುವ, ಎಲ್ಲ ಕಷ್ಟಗಳನ್ನು ನಿವಾರಣೆ ಮಾಡುವ ಶಕ್ತಿ ಪ್ರತಿಯೊಬ್ಬರಲ್ಲೂ ಇದೆ. > ಇದನ್ನು ನಂಬಿ. ಆಗ ಆ ಶಕ್ತಿಯು ಪ್ರಕಟಗೊಳ್ಳುವುದು.ಷಿ ಈ ಸಂದೇಶದಂತೆ ಇಂದಿನ ಸಂದರ್ಭದಲ್ಲಿ > ಪ್ರತಿಯೊಬ್ಬ ಮಾನವನು ಜಾಗೃತಗೊಳ್ಳಬೇಕಾದ ಅವಶ್ಯಕತೆ ಇದೆ. ರಾಜಕೀಯ ದೊಂಬರಾಟ, ಬ್ರಷ್ಟಾಚಾರ, > ಬಂಡವಾಳಶಾಹಿ ಪ್ರಭುತ್ವ, ಸಾಂಸ್ಕ್ಕತಿಕ ಅಧ:ಪತನ ಮುಂತಾದ ದುಷ್ಟ ಚಟುವಟಿಕೆಗಳು ನಮ್ಮ ಮುಂದೆ > ನಿರ್ದಾಕ್ಷಿಣ್ಯವಾಗಿ ನಡೆಯುತ್ತಿವೆ. ಈ ಸ್ಥಿತಿಯಲ್ಲಿ ಪ್ರತಿಯೊಬ್ಬರು ಜಾಗೃತರಾಗಿ ಇಂಥ > ದುಷ್ಟಶಕ್ತಿಗಳ ವಿರುದ್ಧ ಸಾಮೂಹಿಕವಾಗಿ ಹೋರಾಡಬೇಕಾದ ತುರ್ತು ಒದಗಿಬಂದಿದೆ. > > ನಾವು ಮೊದಲು ನಮ್ಮೊಳಗಿನ ದಿವ್ಯತೆಯನ್ನು ನಂಬಬೇಕು ಶಿ ನನ್ನಲ್ಲಿರುವ ದಿವ್ಯತೆಯನ್ನು > ಪ್ರಕಟಮಾಡಿಕೋ, ಆಗ ಎಲ್ಲವೂ ಅದರ ಸುತ್ತಲೂ ಸಾಮರಸ್ಯವಾಗಿ ಯೋಜಿತಗೊಳ್ಳುವವು. ಶಿ > ಪ್ರತಿಯೊಬ್ಬರು ತನ್ನಲ್ಲಿರುವ ಶಕ್ತಿಸಾಮರ್ಥ್ಯವನ್ನು ಅರಿತುಕೊಂಡು ಅದನ್ನು > ಸದ್ವಿನಿಯೋಗಪಡಿಸಿಕೊಳ್ಳಬೇಕು. ತಾನು ಭ್ರಷ್ಟಾಚಾರದಿಂದ ಮುಕ್ತನಾಗಿದ್ದರೆ ಕ್ರಮೇಣ > ಸುತ್ತಲಿನ ಪರಿಸರವು ಆ ದಿಸೆಯಲ್ಲಿ ರೂಪುಗೊಳ್ಳುತ್ತದೆ. ಯುವಶಕ್ತಿಯ ಬಗೆಗೆ > ವಿವೇಕಾನಂದರಿಗೆ ಅಪಾರ ಕಾಳಜಿ ಮತ್ತು ವಿಶ್ವಾಸ. ಶಿಭಗವದ್ಗೀತೆಯನ್ನು ಓದುವುದಕ್ಕಿಂತ > ಫುಟ್ಬಾಲ್ ಆಟದಿಂದ ನೀವು ಸ್ವರ್ಗಕ್ಕೆ ಹತ್ತಿರದವರಾಗುತ್ತೀರಿಷಿ ಎಂಬ ಸಂದೇಶ, ಯುವಶಕ್ತಿಯು > ಮೊದಲು ದೈಹಿಕವಾಗಿ ಸದೃಢರಾಬೇಕು. ಆದರೆ ಇಂದು ಬೌದ್ದಿಕ ಬೆಳವಣಿಗೆಯೇ ಮುಖ್ಯ. ಭೌತಿಕ > ಬೆಳವಣಿಗೆಗೆ ಎರಡನೆಯ ಸ್ಥಾನ. ಎಲ್ಲಿಯವರೆಗೆ ಯುವಕರು ಭೌತಿಕವಾಗಿ ಸದೃಢಕಾಯ > ಹೊಂದುವುದಿಲ್ಲವೋ ಅಲ್ಲಿಯವರೆಗೆ ಪೂರ್ಣ ಪ್ರಮಾಣದಲ್ಲಿ ಯುವಕರು ತಮ್ಮ ವ್ಯಕ್ತಿತ್ವ > ರೂಪಿಸಿಕೊಳ್ಳಲಾರರು. ಇಂದಿನ ತಾಂತ್ರಿಕ ಮತ್ತು ವೈಜ್ಞಾನಿಕತೆಯ ಯುಗದಲ್ಲಿ ಐಟಿ ಬಿಟಿ > ಕ್ಷೇತ್ರದಲ್ಲಿ ದುಡಿಯುವ ಯುವಕರಿಗೆ ಈ ಮಾತು ಪೂರ್ಣಪ್ರಮಾಣದಲ್ಲಿ ಅನ್ವಯವಾಗುತ್ತದೆ. > > ಶಿ ನಾವು ಈಗಿರುವ ಸ್ಥಿತಿಗೆ ನಾವೇ ಜವಾಬ್ದಾರರು. ನಾವು ಏನಾಗಬೇಕೆಂದು ಬಯಸುವೆವೋ ಅದನ್ನು > ಸಾಧಿಸುವ ಶಕ್ತಿ ನಮ್ಮಲ್ಲಿಯೇ ಇರುವುದು. ಹಾಗೆಯೇ ನಾವು ಈಗ ಹೇಗೆ ಇದ್ದೇವೆಯೋ ಅದು ನಮ್ಮ > ಹಿಂದಿನ ಕಾರ್ಯಗಳ ಫಲವೇ ಆಗಿದೆ ಶಿ ಈ ಮಾತುಗಳು ಪ್ರತಿಯೊಬ್ಬನಿಗೂ ಉಪಯುಕ್ತವಾದವುಗಳು. > ವರ್ತಮಾನವು ಭೂತದ ಮೇಲೆ ನಿಂತಿರುತ್ತದೆ, ಮುಂದುವರೆಯುತ್ತಿರುತ್ತದೆ. ಭವಿಷತ್ತು ವರ್ತಮಾನದ > ಮೇಲೆ ಅವಲಂಬಿತವಾಗಿರುತ್ತದೆ. ಇಂದು ಒಂದು ರಾಷ್ಟ್ತ್ರ ಹೇಗಿದೆ ಎಂಬುದಕ್ಕೆ ಅದರ ಇತಿಹಾಸವೇ > ಕಾರಣ. ಮುಂದೆ ಏನಾಗುತ್ತದೆ ಎಂಬ ತರ್ಕಕ್ಕೆ ವರ್ತಮಾನವೇ ಕಾರಣ ಹಾಗೆ ವ್ಯಕ್ತಿಗೂ ಈ ಮಾತು > ಅನ್ವಯಿಸುತ್ತದೆ. ಮುಂದೆ ನಮ್ಮ ಜೀವನವು ಸರಿಯಾದ ರೀತಿಯಲ್ಲಿ ಸಾಗಬೇಕಾದರೆ ಇಂದು ನಾವು ಆ > ನಿಟ್ಟಿನಲ್ಲಿ ಪ್ರಯತ್ನ ಮತ್ತು ಶ್ರಮವನ್ನು ಪಡಬೇಕಾದುದು ಅವಶ್ಯಕ ಮತ್ತು ಅನವಾರ್ಯ. > > ಇಂದು ಎಲ್ಲೆಡೆಗೆ ಧಾರ್ಮಿಕ ಕೋಲಾಹಲ ತಾಂಡವವಾಡುತ್ತಿದೆ. ಧರ್ಮಧರ್ಮಗಳ ನಡುವೆ ತಿಕ್ಕಾಟ, > ಘರ್ಷಣೆಗಳು ಮಾನವ ಜನಾಂಗವನ್ನು ವಿನಾಶದಂಚಿಗೆ ಒಯ್ಯುತ್ತಿವೆ. ಹಾಗಾದರೆ ನಜವಾಗಿ ಧರ್ಮ > ಎಂದರೇನು? ಶಿಧರ್ಮವು ಹೊಸದೇನನ್ನೂ ನಿನಗೆ ನೀಡುವುದಿಲ್ಲ. ಅದು ನನ್ನ ಮಾರ್ಗದಲ್ಲಿಯ > ಅಡೆತಡೆಗಳನ್ನು ನಿವಾರಿಸಿ ನನ್ನ ಆತ್ಮವನ್ನು ದರ್ಶಿಸುವಂತೆ ಮಾಡುತ್ತದೆ.ಷಿ ಎಂಬ ವಿವೇಕವಾಣಿ > ಇಂದಿನ ಧಾರ್ಮಿಕ ನಾಯಕರಿಗೆ ದಾರೀದೀಪವಾಗಿದೆ. ಶಿ ಹಿಂದಿನ ಧರ್ಮಗಳು ಹೇಳುತ್ತವೆ. > ದೇವರನ್ನು ನಂಬದವನು ನಾಸ್ತಿಕ ಎಂದು, ಆದರೆ ಹೊಸ ಧರ್ಮ ಹೇಳುತ್ತದೆ ಯಾರು ತನ್ನನ್ನು > ನಂಬುವುದಿಲ್ಲವೋ ಅವನೇ ನಾಸ್ತಿಕ ಶಿ. ಮನುಷ್ಯ ದೇವರನ್ನು ನಂಬುವುದಕ್ಕಿಂತ ಮೊದಲು ತನ್ನನ್ನು > ತಾ ನಂಬಬೇಕು. ಎಲ್ಲಿಯವರೆಗೆ ತನ್ನ ಶಕ್ತಿ ಮತ್ತು ಸಾಮರ್ಥ್ಯದ ಬಗ್ಗೆ ನಂಬಿಗೆ > ಹೊಂದುವುದಿಲ್ಲ ಅಲ್ಲಿಯವರೆಗೆ ಆತ ಏನನ್ನೂ ಸಾಧಿಸಲಾರ. > > ಪ್ರತಿಯೊಬ್ಬ ವ್ಯಕ್ತಿಗೆ ಒಬ್ಬ ನಾಯಕನರುತ್ತಾನೆ. ಶಿ ನಾಯಕನಲ್ಲಿ ಚಾರಿತ್ರ್ಯ ಇಲ್ಲದೇ > ಹೋದರೆ ಅವನ ಅನುಯಾಯಿಗಳು ವಿಧೇಯರಾಗಿ ಇರುವುದು ಸಾಧ್ಯವಿಲ್ಲ. ಪರಿಪೂರ್ಣ ಪಾವಿತ್ರ್ಯ > ಮಾತ್ರವೇ ನರಂತರ ವಿಧೇಯತೆ ಮತ್ತು ಆತ್ಮ ವಿಶ್ವಾಸಗಳನ್ನು ಖಾತರಿಗೊಳಿಸಬಲ್ಲದುಷಿ ಎಂದು > ಹೇಳಿದ್ದಾರೆ. ನಾಯಕನಗೆ ಚಾರಿತ್ರ್ಯ ಮುಖ್ಯ. ಎಲ್ಲಿಯವರೆಗೆ ನಾಯಕನಲ್ಲಿ > ಚಾರಿತ್ರ್ಯವಿರುತ್ತದೆಯೋ ಅಲ್ಲಿಯವರೆಗೆ ಆತನ ಅನುಯಾಯಿಗಳು ಆತನನ್ನು ಅನುಸರಿಸುತ್ತಾರೆ. > ಇಂದಿನ ಪರಿಸ್ಥಿತಿಯಲ್ಲಿ ನಮ್ಮ ನಾಯಕರು ಹೇಗಿದ್ದಾರೆ ? ಎಂದು ಒಂದು ಕ್ಷಣ ಯೋಚಿಸಿದಾಗ ಇವರು > ಚಾರತ್ರ್ಯದಿಂದ ಬಲುದೂರ ಸರಿದಿದ್ದಾರೆ. ಇಂದು ನಮ್ಮ ನಾಯಕರಿಗೆ ವಿವೇಕಾನಂದರ ಈ ಮಾತು > ಮುತ್ತಿನಷ್ಟೇ ಮೌಲ್ಯ ತುಂಬಿದ ನುಡಿ ಹಾಗೂ ಇವರ ಮುಂದಿನ ದಾರಿಗೆ ಕೈದೀವಿಗೆಗಳು. > > ವೈಜ್ಞಾನಕತೆಯ ನಡುವೆ ಇಂದು ಜನತೆ ಮೂಢನಂಬಿಕೆ ಮತ್ತು ಪವಾಡಗಳನ್ನು ನಂಬುತ್ತಿದ್ದಾರೆ. > ಇವುಗಳಿಂದಾಗಿ ತಮ್ಮ ಬುದ್ದಿವಂತಿಕೆ ಮತ್ತು ವಿವೇಚನಾ ಶಕ್ತಿಯನ್ನು > ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಜನತೆಯು ದೌರ್ಬಲ್ಯಕ್ಕೊಳಗಾಗುತ್ತಿದ್ದಾರೆ. > ವಿವೇಕಾನಂದರು ಇದನ್ನೇ ಹೀಗೆ ಹೇಳಿದ್ದಾರೆ ಶಿ ಪವಾಡ ಮತ್ತು ಮೂಢ ನಂಬಿಕೆಗಳು ಯಾವಾಗಲೂ > ದುರ್ಬಲತೆಯ ಲಕ್ಷಣಗಳೇ ಆಗಿವೆ. ಅವು ಯಾವಾಗಲೂ ಅಧ:ಪತನದ ಮತ್ತು ಮೃತ್ಯುವಿನ ಸಂಕೇತಗಳು. > ಆದ್ದರಿಂದ ಅವುಗಳ ಬಗ್ಗೆ ಎಚ್ಚರಿಕೆಯಿಂದ ಇರು ಶಿ ನಾವು ಯಾವಾಗಲೂ ಮೂಢನಂಬಿಕೆಗಳಿಂದ > ದೂರಿರಬೇಕು. ಆಗ ನಮ್ಮ ವ್ಯಕ್ತಿತ್ವವು ಸರಿಯಾದ ರೀತಿಯಲ್ಲಿ ರೂಪುಗೊಳ್ಳುತ್ತದೆ. ಪವಾಡ > ಯಾವಾಗಲೂ ವ್ಯಕ್ತಿಯ ಬುದ್ದಿವಂತಿಕೆಯನ್ನು ಮತ್ತು ಸೃಜನಶೀಲತೆಯನ್ನು ವಿನಾಶದ ಪಥವನ್ನು > ಹಿಡಿಯುವಂತೆ ಮಾಡುತ್ತದೆ. > > ಮನುಷ್ಯನಿಗೆ ಲಿ ಸಹನೆ ಳಿಎಂಬುದು ಮುಖ್ಯವಾಗಿರಬೇಕಾದ ಗುಣ. ನಾವು ಎಲ್ಲಿಯವರೆಗೆ > ಸಹನಶೀಲ-ರಾಗಿರುತ್ತೇವೆಯೋ ಅಲ್ಲಿಯವರೆಗೆ ಆನಂದದಿಂದ ಇರುತ್ತೇವೆ. ಸಹನೆ ಮೀರಿದ ಮರುಕ್ಷಣ > ದು:ಖದಲ್ಲಿ ಮುಳುಗುತ್ತೇವೆ. ಇಂದಿನ ಪರಿಸ್ಥಿತಿಯಲ್ಲಿ ಎಲ್ಲೆಡೆಯಲ್ಲಿ ವಿವಿಧ ಕಾರಣಗಳಿಗೆ > ದ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಆನಂದಮಯ ಬದುಕು ಆತಂಕಮಯವಾಗಿದೆ. ಆದ್ದರಿಂದ > ವಿವೇಕಾನಂದರು ನಮಗೆ ಶಿ ಸಹನೆಯಿಂದ ಇರಿ. ಪರಸ್ಪರ ಶೃದ್ದೆವುಳ್ಳವರಾಗಿ ನಿಮ್ಮ > ನಿಮ್ಮಲ್ಲಿಯೇ ಜಗಳ ಮಾಡಬೇಡಿ. ಹಣದ ವ್ಯವಹಾರಗಳಲ್ಲಿ ಸಂಪೂರ್ಣವಾಗಿ ಶುದ್ಧವಾಗಿರಿ, ನವು > ಶೃದ್ದೆ, ಪ್ರಾಮಾಣಿಕತೆ, ಭಕ್ತಿಗಳನ್ನು ಎಲ್ಲಿಯವರೆಗೆ ಹೊಂದುರುತ್ತೀರೋ ಅಲ್ಲಿಯವರೆಗೆ > ಎಲ್ಲವೂ ಸಂಪದ್ಭರಿತವಾಗುವುದುಷಿ. ಎಂದು ಹೇಳಿದ್ದಾರೆ. ಪ್ರತಿಯೊಬ್ಬರು > ಶೃದ್ದಾವಂತರಾಗಿರಬೇಕು, ಹಣದ ವ್ಯವಹಾರದಲ್ಲಿ ಪರಿಶುದ್ಧರಾಗಿರಬೇಕು ಎಂಬ ನುಡಿಗಳು ಸದಾಕಾಲವೂ > ಸಲ್ಲುವಂತಹ ನುಡಿಗಳು. > > ಹೀಗೆ ವಿವೇಕಾನಂದರ ಸಂದೇಶಗಳು ಸಾರ್ವಕಾಲಿಕ ಮತ್ತು ಸಾರ್ವತ್ರಿಕತೆಯನ್ನು ಹೊಂದಿವೆ. ಕೆಲವು > ಸಂದೇಶಗಳನ್ನು ಮಾತ್ರ ಮಿತಿಯೊಳಗೆ ಇಲ್ಲಿ ವಿವೇಚಿಸಲಾಗಿದೆ. ವಿವೇಕಾನಂದರ ಎಲ್ಲ ಸಂದೇಶಗಳು > ಶ್ರದ್ದೆ, ನಿಷ್ಠೆ, ನಂಬಿಕೆ, ಪ್ರೀತಿ, ದಿವ್ಯತೆ, ಆನಂದ, ಚಾರಿತ್ರ್ಯ ಮುಂತಾದ ಅಂಶಗಳನ್ನು > ಪುನ: ಪುನ: ಪ್ರಸ್ತಾಪಿಸುತ್ತವೆ. ಸಂವೇದನಾಶೀಲ ಹೃದಯ, ಸೃಜನಾತ್ಮಕ ಮಿದುಳು ಮತ್ತು > ಕ್ರೀಯಾಶೀಲವಾದ ಕೈಗಳು ಇಡೀ ಜಗತ್ತನ್ನೇ ಸುಂದರಮಯ ಮತ್ತು ಆನಂದಮಯಗೊಳಿಸಬಲ್ಲವು ಎಂಬುದು > ವಿವೇಕಾನಂದರ ಮಹಾನ್ ಸಂದೇಶ ಮತ್ತು > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
