ಹನಿ ಹನಿ

೧
ಬೆನ್ ಬಿದ್ ಭೂತ
ಎದುರಿಗೂ ಬಾ
ಕಣ್ಣಾಗ್ ಕಣ್ಣಿಟ್
ನಾಕ್ ಮಾತಾಡನ 
ಸತ್ ಪ್ರೀತಿ - ಗೋರಿ
ನ ಕೆದಕಿ 
ಬದುಕ್ಸೋ
ಯತ್ನ ಮಾಡನ!
೨
ಆಹಾ
ಖಬರಸ್ತಾನದ ತುಂಬೆಲ್ಲಾ
ಘಮಗುಡುವ ಗಂಧ
ಛೆ...ನೀನಿಲ್ಲದೆಯೂ
ಉಳಿಸಿಹೋದೆ ಒಲವ;
ಅದೇ ಸಾವ ಜತೆಗಿನ ಬಂಧ!
೩
ಅಕ್ಷರಗಳಿಂದ
ಆದ ಗಾಯಕ್ಕೆ
ಅಕ್ಷರಗಳೇ ಮುಲಾಮು
ಹೃದಯವಿದು
ತೂತು ಬಿದ್ದಿದೆ
ಸಿಕ್ರೆ ದವಾ ಸಾವಿರ ಸಲಾಮು!
೪
ನೀನೆಂಬುದು
ಬೇರು ಕಾಯ್ವ ಮಣ್ಣು
ನಾನೆಂಬುದು
ಮುಗಿಲ ಕಾಣ್ವ ಬರಿದೆ
ರೆಂಬೆ- ಕಣ್ಣು
ತೇವ ತೇವ ಸದಾ ನೀನು
ನಾ
ಎಂದರೆ ಎಂದು ಮುರಿವೆನೋ
ಮತ್ತೆ ನಿನ್ನ ಬುಡದ ಪಾದದಿ
ಸಣ್ಣ ಸಮಾಧಿ!

ಸಂತೆಬೆನ್ನೂರು ಫೈಜ್ನಟ್ರಾಜ್

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to