*ಹಿರಿಮೆ*
ನಾಡು ನಮ್ಮದು.....
ಕರುನಾಡು ನಮ್ಮದು ..
ದಾಸ,ಶರಣ,ಕವಿ,ಸಂತರ
ಗುಡಿಯು ನಮ್ಮದು // ಪ//
ಕೃಷ್ಣ ತುಂಗೆ ಕಾವೇರಿ ...
ಹಸಿರ ಸೊಬಗು ಮೂಡಿಸೆ
ಶಾರದೆ,ಚಾಮುಂಡಿ,ದುರ್ಗೆ
ವರವ ನೀಡಿ ಹರಸೆ //೧//
ಗೀತ,ನಾಟ್ಯ,ಸಾಹಿತ್ಯ,ಶಿಲ್ಪ
ಬಿನ್ನಣ,ಶಿಕ್ಷಣಕಾಶಿಯು
ತಾಯ ಮಡಿಲುತುಂಬಿಹುದು
ಅನ್ನ ,ಹೊನ್ನ ರಾಶಿಯು//೨//
ದೂರ ಹಬ್ಬಿ ನೀಲ ತೀರ
ಪಡುವಣದ ಆಳ ಸಾಗರ
ತೆಂಗು,ಕಂಗು,ನಂದಿ,ಸುರಗಿ
ಸಿರಿಗಂಧ,ಹೊನ್ನೆಯಾಗರ //೩//
ಗಂಗ,ಕದಂಬ,ರಾಷ್ಟ್ರಕೂಟ
ವಿಜಯನಗರ ವೈಭವ
ಚಾಲುಕ್ಯ,ಹೊಯ್ಸಳ,ಕಲಚೂರ್ಯ
ಕೆಳದಿ,ಮೈಸೂರ ನೆನೆಯುವ //೪//
ಚೆನ್ನಮ್ಮ,ರಾಯಣ್ಣ ಅಬ್ಬಕ್ಕರ
ಸ್ವಾತಂತ್ರ್ಯದ ಕಿಡಿಯು
ಡೆಪ್ಯೂಟಿ ದೇಶ್ಪಾಂಡೆ ಆಲೂರರ
ಏಕೀಕರಣದ ನುಡಿಯು//೫//
ಹಸಿರನುಟ್ಟ ಘಟ್ಟ ಬೆಟ್ಟ
ಬಯಲು ಮಲೆಯನಾಡು
ಆನೆ,ಜಿಂಕೆ,ಚಿರತೆ,ಹುಲಿ
ಪಕ್ಷಿ ಮೆರೆವ ಕಾಡು //೬//
ಭಿನ್ನ-ವಿಭಿನ್ನ ಭೂಪ್ರದೇಶ
ಕನ್ನಡನಾಡೇ ಚೆಂದವು
ಚೆನ್ನ ಭಿನ್ನ ಆಡುಭಾಷೆ
ನಮ್ಮ ಬೆಸೆವ ಬಂಧವು ! //೭//
ಕನ್ನಡಿಗರು ಸೇರಿ ನಾವು
ತಾಯಕೀರ್ತಿ ಹೊಗಳುವಾ
ಕನ್ನಡ ಕಸ್ತೂರಿ ಕಂಪು
ದಿಕ್ಕು ದಿಕ್ಕಿಗೆ ಹರಡುವಾ //೮//
*ಎಂ.ಡಿ.ಚಂದ್ರೇಗೌಡನಾರಮ್ನಳ್ಳಿ*
೮೭೨೨೧೯೯೩೪೪
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
-http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
For more options, visit https://groups.google.com/d/optout.