Super

On Mon, Nov 4, 2019, 10:52 AM chandregowda m d <mdchandrego...@gmail.com
wrote:

> ಚೆನ್ನಾಗಿದೆ
>
> On Sun 3 Nov, 2019, 4:57 PM nanda pur, <nandapur...@gmail.com> wrote:
>
>> *                     ಕತ್ತೆ ಮಹಿಮೆ  (ಪ್ರಬಂಧ)*
>>                   ----------------------------------------
>> ಬದುಕಿದ್ದಾಗ ಕೂಡಿರ್ಲಿಲ್ಲ ಸತ್ತಾಗಾದ್ರು ಕೂಡಿರ್ರಿ ಎಂದು ಒಂದು ಮಾಡಿದ ಕತ್ತೆಯ ನೀತಿಗೆ
>> ನಾವಿಂದು ತಲೆ ಬಾಗಲೆಬೇಕು ಎಂದು ಊರಿನ ಹಿರಿಯನೊಬ್ಬ ಕತ್ತೆ ಕುರಿತು ಮಾತನಾಡಿದ
>> ಮನುಷ್ಯರಂತೂ ಕೂಡ್ಲಿಲ್ಲ ನಮ್ಮೂರ ಹೆಣಗಳಾದ್ರು ಕೂಡಿದ್ವಲ್ಲ ಎಂಬ ಹೆಮ್ಮೆ ನನ್ನದು ಎಂದು
>> ಪೂಜಾರಿ ಕತ್ತೆಯ ಗುಣಗಾನ ಮಾಡಿದ,ಇಂತಹ ಘನಕಾರ್ಯ ಮಾಡಿದ ಕತ್ತೆಯನ್ನು ಬಡಿದು ಸಾಯಿಸಿದ್ದು
>> ತರವಲ್ಲ ಇದು ತೀರ ಅಮಾನವೀಯ ಇದನ್ನು ಖಂಡಿಸುತ್ತೆನೆಂದು ಹೋರಾಟಗಾರನೊಬ್ಬ ಬಂಡಾಯವೆದ್ದ.
>>     ಕತ್ತೆ ಕೊಲೆ ಮಾಡಿದ ಘಾತುಕರನ್ನು ಬಂಧಿಸಿ ಶಿಕ್ಷೆ ನೀಡಿದರೆ ಕತ್ತೆಯ ಆತ್ಮಕ್ಕೆ
>> ಶಾಂತಿ ಲಭಿಸುತ್ತದೆಂದು ಕತ್ತೆ ಪ್ರೀಯರು ಫರ್ಮಾನು ಹೊರಡಿಸಿದ್ರು,ಸತ್ತ ಕತ್ತೆಗೆ
>> ಪ್ರತಿವರ್ಷ ಪುಣ್ಯತಿಥಿ ಮಾಡಿ ಸಂತಾಪ ಸೂಚಿಸಿ ಪುಣ್ಯವಂತರಾಗಬೇಕೆಂದು ಗಣ್ಯರೆಲ್ಲ ಕತ್ತೆಯ
>> ಏಕತೆಯನ್ನು ಕೊಂಡಾಡಿದ್ರು,ಆ ಊರಿನಲ್ಲಿ ಎರಡು ಮಸಣಗಳಿದ್ದವು ಎಡಕ್ಕೆ ತಿಮ್ಮನ ಕುಲದವರಿಗೆ
>> ಮೀಸಲು,ಬಲಕ್ಕೆ ಬುಲ್ಡಿ ಕುಲದವರಿಗಾಗಿ ಎಂದು ಮದ್ಯೆ ಬೇಲಿ ಬಿಗಿದಿದ್ರು ಒಂದು ವೇಳೆ
>> ನಡುರಾತ್ರಿ ಹೆಣಗಳೆದ್ದು ಬೇತಾಳಗಳಾಗಿ ಬಡಿದಾಡದಂತೆ ನಡವೆ ಬೇಲಿ ಹಚ್ಚಿದ್ರು, ಬದುಕಿದ್ದಾಗ
>> ಸುತ್ತ ಬೇಲಿ ಹಾಕ್ಕೊಂಡಂತೆ ಸತ್ತಾಗೂ ಕೂಡಿರಬಾರದೆಂದು ತಂತಿ ಬಿಗಿದು ಕೊಂಡಿದ್ರು.
>>  ಆ ಊರಿನ ಕತ್ತೆಯೊಂದು ಬೇಲಿ ಕಿತ್ತಿ ಸುಡುಗಾಡಿ ಒಂದು ಮಾಡಿತ್ತು,ಎರಡು ಬಣದ ಹೆಣಗಳು
>> ಒಂದುಗೂಡಿದವು ಆಯಾ ಕುಲದವರು ಕಿತ್ತಿದ ಬೇಲಿ ನೋಡಿ ಕತ್ತೆಯನ್ನು ಚೆನ್ನಾಗಿ ಒದ್ದರು
>> ಹೊಡೆತಕ್ಕೆ ತತ್ತರಿಸಿದ ಕತ್ತೆ ಸತ್ತಿತು.
>>  ಕತ್ತೆ ಕಳೆದು ಕೊಂಡು ಕಂಗಾಲಾದ ಅದರ ಮಾಲೀಕ ಪಂಚಾಯ್ತಿ ಮುಂದೆ ಕತ್ತೆ ಇಟ್ಟು ಹೋರಾಟ
>> ಮಾಡಿದ ಸತ್ತ ನನ್ನ ಕತ್ತೆಗೆ ನ್ಯಾಯ ಸಿಗುವವರೆಗೆ ಅನ್ನ ಮುಟ್ಟುವದಿಲ್ಲವೆಂದು ಪ್ರಮಾಣ
>> ಮಾಡಿದ,ಸುಡುಗಾಡಿ ಒಂದು ಮಾಡಿದ ಕತ್ತೆಗೆ ಬಿರುದು ಕೊಟ್ಟು ಗೌರವಿಸುವದು ಬಿಟ್ಟು ಹೊಡೆದು
>> ಸಾಯಿಸಿದ್ದು ಅನ್ಯಾಯ ಎಂದು ಪಂಚಾಯ್ತಿ ಮುಂದೆ ಉಪವಾಸ ಕುಳಿತ,ಊರು ಜನ ಮಾಲೀಕನಿಗೆ
>> ಬೆಂಬಲಿಸಿದ್ರು,ಕತ್ತೆಗೆ ಹೊಡೆದದ್ದು ಅವಮಾನ ಕತ್ತೆಗೆ ನ್ಯಾಯ ಸಿಗಲೆಬೇಕು ಎಂದು ಘೋಷಣೆ
>> ಕೂಗಿದ್ರು, ಶಾಲಾ ಕಾಲೇಜುಗಳು ಬಂದ್ ಮಾಡಿದ್ರು,ಯುವಕರು ಸಂಘ ಸಂಸ್ಥೆಗಳು, ಗಣ್ಯರು ಪಂಡಿತ
>> ಪಾಮರರು ಬೆಂಬಲಿಸಿದ್ರು, ಟೀವಿ ಮಾದ್ಯಮದವರಂತೂ "ಕತ್ತೆ ಕೊಲೆ ಎಷ್ಟು ಸರಿ" ಎಂಬ ತಲೆ
>> ಬರಹದಡಿ ಚರ್ಚೆಗಿಟ್ಟರು, ಸಾಹಿತಿಗಳು ವಿಚಾರವಾದಿಗಳು ಚರ್ಚೆಯಲ್ಲಿ  ಭಾಗವಹಿಸಿ ಕತ್ತೆಗೆ
>> ನ್ಯಾಯ ಒದಗಿಸಲು ಒತ್ತಾಯಿಸಿದ್ರು,ಇದೊಂದು ಅಪರೂಪದ ಕತ್ತೆ ಇಂತದ್ದು ನಮ್ಮೂರಲ್ಲಿರುವದು
>> ನಮ್ಮೆಲ್ಲರ ಭಾಗ್ಯ ಎಂದೊಬ್ಬ ಸಾಹಿತಿ,ಕುಲಗಳನ್ನು ಒಂದುಗೂಡಿಸಲು ಪ್ರಯತ್ನಿಸಿದ ಕತ್ತೆ
>> ನಮ್ಮೂರಿನ ಸಂತ ಎಂದ ಮತ್ತೊಬ್ಬ ವಿಚಾರವಾದಿ,ಒಬ್ಬ ರಾಜಕಾರಣಿಯಂತೂ ಒಂದು ಹೆಜ್ಜೆ ಮುಂದೆ
>> ಹೋಗಿ ನಮ್ಮಲ್ಲಿಲ್ಲದ ಏಕತೆ ಕತ್ತೆಯಲ್ಲಿದೆ ಎಂದು ಬಣ್ಣಿಸಿ ಪಂಚಾಯ್ತಿ ಪಕ್ಕ ಸಮಾಧಿ
>> ಮಾಡಬೇಕೆಂದನು ಇವನ ಮಾತು ಕೇಳಿ ಎದುರು ಕುಳಿತವನೊಬ್ಬ ಜನರ ಅನುಕಂಪ ಗಿಟ್ಟಿಸಲು ಗಳಗಳನೆ
>> ಅತ್ತು ಕಣ್ಣೀರಿಟ್ಟ.
>> ಹೋರಾಟ ಮುಂದುವರೆಯಿತು ಕತ್ತೆಯ ಮಾಲೀಕ ಊಟವಿಲ್ಲದೆ ಸೊರಗಿದ "ತರ್ಲೆ ತಿಮ್ಮ" ತನ್ನ
>> ಕುಲದವರು ಮಾಡಿದ ಪಾಪ ವಿಮೋಚನೆ ಗೊಳಿಸಲು ಮಾಲಿಕನ ಉಪವಾಸ ಬೆಂಬಲಿಸಿದ ಸ್ವಂತ ಹಣದಲ್ಲಿ
>> ಕತ್ತೆಗೊಂದು ಸಮಾಧಿ ಕಟ್ಟುವ ಭರವಸೆ ನೀಡಿದ.ಕತ್ತೆಗಾಗಿ ಊರಿಗೆ ಊರೆ ಒಂದಾಗಿದ್ದು ಕಂಡು
>> ತಿಮ್ಮ ಮಮ್ಮಲ ಮರುಗಿದ ಟೀವಿ,ಪೇಪರ್ ನಲ್ಲಿ ಅಳುವದನ್ನು ನೋಡಿದ ತಿಮ್ಮ ಸತ್ತ ಕತ್ತೆಯ ಮುಂದೆ
>> ನಿಜವಾಗ್ಲು ಅತ್ತಂತೆ ನಾಟಕ ಮಾಡಿದ, ಯಜಮಾನನಿಗೆ ಪರಿಹಾರ ಕೊಟ್ಟು ಉಪವಾಸ ಬಿಡಿಸಿದ ಕೈ
>> ತುಂಬ ಕೊಟ್ಟು ತನ್ನಕಡೆ ಸೆಳೆದು ಸುಮ್ಮನಿರಿಸಿದ ಆದರೆ ತಿಮ್ಮ ಮಾತ್ರ ಕತ್ತೆ ಪುರಾಣ
>> ಮುಂದುವರೆಸಿದ ತನ್ನ ಓಟಿನ ತೀಟೆಗಾಗಿ ಬಳಸಿದ,ಕತ್ತೆಯ ಸಾವಿಗಾಗಿ ಮಿಡಿದ ಅದರ ಕಾರ್ಯ
>> ಶ್ಲಾಘಿಸಿದ,ಸಮಾಜಕ್ಕೆ ಕತ್ತೆಯಂತೆ ದುಡಿದವರನ್ನು,ಮಡಿದವರನ್ನು,ಮಹನಿಯರನ್ನು ,ಕತ್ತೆಯ
>> ತಾಳ್ಮೆ ರೂಢಿಸಿಕೊಂಡವರನ್ನು ಕತ್ತೆ ಎಂದು ಬಿರುದು ಕೊಟ್ಟು ಸನ್ಮಾನಿಸಿ ಜನ ಮೆಚ್ಚುಗೆ
>> ಗಳಿಸಿದ ಊರು ಜನ್ರಿಂದ ಪಟ್ಟಿ ಎತ್ತಿ ಸಮಾಧಿ ಕಟ್ಟಿದ ಪ್ರತಿವರ್ಷ ಪರಿಸೆ ಮಾಡಿದ, ಕತ್ತೆ
>> ಪುರಾಣ ಹಚ್ಚಿ ಪ್ರಚಾರ ಮಾಡಿದ "ಕತ್ತೆ" ಚಿಹ್ನೆಯಡಿ ಚುನಾವಣೆಗೆ ನಿಂತ ತಾನು ಗೆದ್ದರೆ
>> ಕತ್ತೆ ಸಮಾಧಿಯನ್ನು ಸದ್ಭಾವನಾ ಕೇಂದ್ರ ಮಾಡುವೆನೆಂದು ಊರು ಜನ್ರಿಗೆ ಮಾತು ಕೊಟ್ಟ ಕತ್ತೆಯ
>> ಕಟೌಟ್ ನೊಂದಿಗೆ  ನಿಂತು ಕೈಮುಗಿದು ಓಟು ಕೇಳಿದ, ಕತ್ತೆಯ ಮಹಿಮೆ ತಿಳಿಸಿ ಮತ ಪಡೆದ ಕತ್ತೆ
>> ಸಮಾಧಿ ಕಟ್ಟಲು ಅಡ್ಡಿ ಪಡಿಸಿದ ಬುಲ್ಡಿಯನ್ನು ಸೋಲಿಸಿದ 'ನಾಯಿ" ಗುರುತಿನಡಿ ಮತ ಕೇಳಲು
>> ಹೋಗಿ ಬುಲ್ಡಿ ಈರ ಮುಗ್ಗರಿಸಿದ.
>>        ಗೆದ್ದ ಖುಷಿಯಲ್ಲಿ "ತರ್ಲೆ" ಸಮಾಧಿವರೆಗೆ ದೀಡು ನಮಸ್ಕಾರ ಹಾಕಿದ
>> ಅನುಯಾಯಿಗಳಿಗೆ  ಬಿರ್ಯಾನಿ ತಿನಿಸಿ ಕುಣಿಸಿದ ಕೊಟ್ಟ ಮಾತಿನಂತೆ ಕತ್ತೆ ಸಮಾಧಿಯನ್ನು
>> ಸದ್ಭಾವನಾ ಕೇಂದ್ರ ಮಾಡಿದ,ಸುತ್ತ ಹತ್ತೂರಿಗೆ ಡಂಗ್ರ ಸಾರಿ ತೇರು ಎಳೆದ,ಕತ್ತೆಯ
>> ಕಿಮ್ಮತ್ತಿನಿಂದ ತಿಮ್ಮ ದೊಡ್ಡವನಾಗಿ ಬೆಳೆದ ತಮಗೊಂದು ದೇವರಿಲ್ಲವೆಂಬ ಕೊರಗು
>> ತೀರಿಸಿದ್ದಾನೆಂದು ಊರಿನ "ಬಿ" ಗ್ರೇಡ್ ಭಕ್ತರೆಲ್ಲ ತಿಮ್ಮನನ್ನು ಕೊಂಡಾಡಿದ್ರು ಕತ್ತೆಯ
>> ರೂಪದಲ್ಲಿ ದೇವರು ಊರು ಉದ್ದರಿಸುವನೆಂದು ತಿಮ್ಮ ಸುದ್ದಿ ಮಾಡಿದ,ಕತ್ತೆಯ ಹೆಸರಲ್ಲಿ ಕಾಲೋನಿ
>> ನಿರ್ಮಿಸಿ ಬಡವರಿಗೆ ಮನೆ ಹಂಚಿದ,ವಸತಿ ಗೃಹ ಕಟ್ಟಿಸಿ "ಗಾರ್ಧಬ ಗೆಸ್ಟಹೌಸ್" ಎಂದು
>> ಹೆಸರಿಟ್ಟ ಕುಡಿಯುವ ನೀರು ಒದಗಿಸಿ ತರ್ಲೆ ತಿಮ್ಮನ ಕೃಪೆ ಎಂದು ಬರೆಸಿದ,ತನ್ನದೊಂದು
>> ಸರ್ಕಲ್ ನಿರ್ಮಿಸಿ ಪೋಟೊ ನೇತು ಬಿಟ್ಟ ಗಾರ್ಧಬಾಲಯವನ್ನು ಸ್ಥಾಪಿಸಿ ಊರಿನ ತಬ್ಬಲಿ
>> ತಾಯಂದಿರಿಗೆ ಆಶ್ರಯ ನೀಡಿ ಅನುಕಂಪ ಗಿಟ್ಟಿಸಿದ, ಮಕ್ಕಳಿಂದ ದೂರಾದವರು,ತಾಯಿಗೆ ಕೂಳು
>> ಹಾಕದವರು,ಮಕ್ಕಳ ಉಪಟಳಕ್ಕೆ ಬೇಸತ್ತವರು,ವಯಸ್ಸಾದವರಿಗೆ ಗಾರ್ಧಬಾಲಯದಲ್ಲಿ ಉಚಿತ ಪ್ರಸಾದ
>> ವ್ಯವಸ್ಥೆ ಮಾಡಿದ.
>>  ಮಾನವಂತರೆಂದು ಕರೆಸಿಕೊಂಡವರು,ಸಿರಿವಂತರು,ಗಣ್ಯಾತೀಗಣ್ಯರು, ತಮ್ಮ ತಾಯಂದಿರನ್ನು
>> ಗಾರ್ಧಬಾಲಯದಲ್ಲಿ ಸೇರಿಸಿ ದೇಣಿಗೆ ನೀಡಿ ತಿಮ್ಮನ ಕೈ ಕುಲಕಿ ಹೋಗುತ್ತಿದ್ದರು, ಹೆಂಡತಿಗೆ
>> ಹೆದರುವ ಗಂಡಂದಿರು ಕೂಡ ತಿಮ್ಮನ ಆಶ್ರಯದಲ್ಲಿ ಬಿಟ್ಟು ನೆಮ್ಮದಿ ಜ್ಯಾಲಿ
>> ಮಾಡಿದ್ದರು,ಸತ್ತರೂ ಸೇವೆಯಲ್ಲಿರುವ ಕತ್ತೆಯ ಮಹಿಮೆ ಕೇಳಿ ಭಕ್ತರ ಸಂಖ್ಯೆ ಹೆಚ್ಚಿತು,ಮೊದಲ
>> ಸಲ ಪರೀಕ್ಷೆ ಬರೆಯುವ ವಿದ್ಯಾರ್ಥಿ ಕತ್ತೆಯ ದರ್ಶನವಿಲ್ಲದೆ ಹೋಗುತ್ತಿರಲಿಲ್ಲ, ಮದುವೆಯಾದ
>> ಜೋಡಿಗಳೆಲ್ಲ ಕತ್ತೆಯ ಸಮಾಧಿ ಮುಂದೆ ಹತ್ತು ನಿಮಿಷ ನಿಂತು ತಲೆ ಬಾಗಿಸಿ ಜೋಡು ಕಾಯಿ
>> ಹೊಡ್ಸಿ ಧನ್ಯರಾಗುತ್ತಿದ್ರು
>>    ತಿಮ್ಮ ಕತ್ತೆಯ ಪ್ರತಿಮೆ ಸ್ಥಾಪಿಸಲು ಊರು ಮಂದಿ ಸಹಕಾರ ಕೇಳಿದ ಅದಕ್ಕೊಂದು ಸಮಿತಿ
>> ರಚಿಸಿದ ಉದಾರ ದೇಣಿಗೆ ನೀಡಿದವರಿಗೆ ಪ್ರತಿಮೆಯ ಮುಂದೆ ಸತ್ಕರಿಸಿ ಪ್ರಶಸ್ತಿ ನೀಡುವ ಆಸೆ
>> ತೋರಿಸಿದ "ಕತ್ತೆ" ಪ್ರಶಸ್ತಿ ಪಡೆದವರಿಗೆ ಸಮಾಜದಲ್ಲಿ ವಿಶೇಷ ಗೌರವವಿತ್ತು.
>> ಊರಿನ ಗಣ್ಯಾತಿಗಣ್ಯರು,ಸುಧಾರಕರು ಪ್ರಚಾರದ ಚಾಳಿಯಿದ್ದವರೆಲ್ಲ ತಿಮ್ಮನ ಹುಂಡಿಗೆ ದುಡ್ಡು
>> ಸುರುವಿದ್ರು "ಕತ್ತೆ" ಪ್ರತಿಮೆ ಸಿದ್ದವಾಯಿತು ಪಕ್ಕದಲ್ಲಿ ಅದರ ನೇತಾರ ತಿಮ್ಮನ ಭಾವ ಚಿತ್ರ
>> ಪಿಕ್ಷಾಯಿತು ಕತ್ತೆ ಗುರುತಿಲ್ಲದೆ ಓಟು ಪಡೆಯುವದು ಕಷ್ಟವಾಗಿದ್ದರಿಂದ ಊರಿನ ಪುಡಿ
>> ರಾಜಕಾರಣಿಗಳು ತಮ್ಮ ತಮ್ಮ ಮನೆ ಮುಂದೆ ಕತ್ತೆ ಚಿತ್ರ ಬರೆಸಿ ನಿಷ್ಠೆ ಮೆರೆದಿದ್ರು ಇನ್ನು
>> ಕೆಲವರು ಕತ್ತೆಯ ಶಿಷ್ಟಾಚಾರ ಬಾಳಿನಲ್ಲಿ ರೂಢಿಸಿಕೊಳ್ಳಲು ಪ್ರಯತ್ನ ಮಾಡಿದರು ಅದರಂತೆ
>> ಬದುಕಲು ತಯಾರಿ ನಡೆಸಿದ್ರು,ಪ್ರತಿಮೆ ಮುಂದೆ ಊರು ಜನ್ರನ್ನ ಕರೆಸಿ ಅನ್ನ ಸಂತರ್ಪಣೆ ಮಾಡಿ
>> ತಾವು ಕತ್ತೆ ಪ್ರೀಯರೆಂದು ರುಜುವಾತು ಮಾಡಿದ್ರು,ಇದ್ದಕ್ಕಿದ್ದಂತೆ ಕತ್ತೆಯ ಪ್ರತಿಮೆಯ
>> ಮುಂದೆ ದೊಡ್ಡ ಗದ್ದಲವಾಯಿತು ಅಂಗಿ ಅಂಗಿ ಹಿಡಿದು ಬಡಿದಾಡಿದ್ರು, ಕಲ್ಲು ತೂರಾಡಿ ಗ್ಲಾಸು
>> ಒಗೆದ್ರು ಗುಂಡಿನ ಸಪ್ಪಳವಾಯಿತು ಒಂದೆರಡು ಹೆಣಗಳು ಬಿದ್ದವು ಊರು ಬಿಕೊ ಎಂದಿತು,ಪೋಲಿಸ್ರು
>> ಗಸ್ತು ತಿರುಗಿದರು ಕತ್ತೆ ಸಮಾಧಿಗೆ ಬೇಲಿ ಬಿಗಿದ್ರು,ಪ್ರತಿಮೆ ಸುತ್ತ ಪೋಲಿಸ್ರು ಕಾವುಲು
>> ನಿಂತ್ರು ಊರು ಶಾಂತವಾಯಿತು, ಊರಿನ ತುಂಟ ನಾಯಿಯೊಂದು" ಕತ್ತೆ ಪ್ರತಿಮೆ"ಯ ಮೇಲೆ ಕಾಲೆತ್ತಿ
>> ಅಭಿಷೇಕ ಮಾಡುತ್ತಿತ್ತು ಇದನ್ನು ಕಂಡು ಕೆಂಡಮಂಡಲವಾದ ಕತ್ತೆ ಪ್ರೀಯನೊಬ್ಬ ನಾಯಿಗೆ
>> ಕಲ್ಲೊಡೆದು ಸಾಯಿಸಿದ ನಡು ಬೀದಿಯಲ್ಲಿ ಸತ್ತ ನಾಯಿ ಸುದ್ದಿ ಊರಲ್ಲಿ ಮಿಂಚಿನಂತೆ
>> ಹಬ್ಬಿತು,ಶ್ವಾನ ದಯಾಳು ಬುಲ್ಡಿ ಈರನ ಕಾವುಲು ನಾಯಿ ಕೊಲೆಯಾಗಿದ್ದು ಆತನ ಅನುಯಾಯಿಗಳಿಗೆ
>> ಸಿಟ್ಟು ತರಿಸಿತ್ತು "ನಾಯಿ" ಗುರುತಿನಡಿ ಸೋತು ಸುಣ್ಣವಾಗಿದ್ದ ಈರನಿಗೂ ಅವಮಾನವಾಗಿತ್ತು
>> ಕೂಡಲೆ ಕತ್ತೆ ಪ್ರತಿಮೆಯನ್ನು ದ್ವಂಸಗೊಳಿಸಿ ಸತ್ತ ನಾಯಿಯ ಸೇಡು ತೀರಿಸಿಕೊಂಡರು,ಬೇಲಿ
>> ಕಿತ್ತಿ ಒಂದುಗೂಡಿಸಿದ ಕತ್ತೆಯ ಪ್ರತಿಕಾರ ತೀರಿಸಲು "ಹೆಣಗಳ ವಾರಸುದಾರರು" ಕಂಡಲ್ಲಿ ಕಲ್ಲು
>> ತೂರಿದ್ರು ಎರಡು ಬಣಗಳ ನಡುವೆ ವೈರತ್ವ ವೆರ್ಪಟ್ಟು "ಕತ್ತೆ ಸಮಾಧಿಗೆ" ತಂತಿ ಬಿಗಿದ್ರು
>> ವಿವಾದ ಮುಗಿಯುವರೆಗೆ ಭಕ್ತರಿಗೆ ಕಟ್ಟಾಜ್ಞೆ ಮಾಡಿದರು,
>> ಶ್ವಾನ ದಯಾಳು ಬುಲ್ಡಿ ಈರ" ಸತ್ತನಾಯಿ" ರಸ್ತೆ ಗಿಟ್ಟು ನ್ಯಾಯ ಕೇಳಿದ "ನಾಯಿಗೊಂದು
>> ನ್ಯಾಯ,ಕತ್ತೆಗೊಂದು ನ್ಯಾಯವೇ" ಎಂದು ಪಟ್ಟು ಹಿಡಿದ, ಕತ್ತೆಗೆ ಸಿಕ್ಕ ಕಿಮ್ಮತ್ತು ನನ್ನ
>> ಕಾವುಲು ನಾಯಿಗೂ ಸಿಗಬೇಕು, ಎಷ್ಟೋ ಬಾರಿ ಕಳ್ಳರ ಬೆನ್ನತ್ತಿ ಊರಿನ ಮಾನ ಉಳಿಸಿದೆ ಎಂದು
>> ಭಾಷಣ ಬಿಗಿದ ಊರಿನ ಕುರಿಗಳು ಹೌದೌದು ಎಂದವು, ತಿಮ್ಮ ಬುಲ್ಡಿ ಈರನ ಕಿವಿಯಲ್ಲಿ ಏನೋ ಉಸಿರಿದ
>> ಇಬ್ಬರು ವೈಮನಸ್ಸು ಮರೆತು ಒಂದಾದರು ಕತ್ತೆ ಪುರಾಣ ತಿಪ್ಪೆಗೆ ತಳ್ಳಿ ಶ್ವಾನ ಸಂದೇಶ ಸಾರಲು
>> ಊರ ಜನ್ರ ಸಭೆ ಕರೆದ್ರು,ನಾಯಿ ಪುರಾಣ ಹಚ್ಚಲು ಜಾಗ ಹುಡುಕಿದ್ರು.
>>
>> *                             ( ಅಜಮೀರ ನಂದಾಪುರ)*
>> *                            ಮುಖ್ಯೋಪಾಧ್ಯಾಯರು ಪ್ರೌಢ ಶಾಲೆ ಗಂಗಾವತಿ*
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To view this discussion on the web, visit
>> https://groups.google.com/d/msgid/kannadastf/CAPHu_VagDi14maVx9dZw2mz2kUR8GRD2A3r_59wdZPypRm0E8Q%40mail.gmail.com
>> <https://groups.google.com/d/msgid/kannadastf/CAPHu_VagDi14maVx9dZw2mz2kUR8GRD2A3r_59wdZPypRm0E8Q%40mail.gmail.com?utm_medium=email&utm_source=footer>
>> .
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To view this discussion on the web, visit
> https://groups.google.com/d/msgid/kannadastf/CAE6Pbrnu6KAh%2Ba6gEpdw4oAxjsf73fRZsMTBY-8083Fcj71SVg%40mail.gmail.com
> <https://groups.google.com/d/msgid/kannadastf/CAE6Pbrnu6KAh%2Ba6gEpdw4oAxjsf73fRZsMTBY-8083Fcj71SVg%40mail.gmail.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To view this discussion on the web, visit 
https://groups.google.com/d/msgid/kannadastf/CAK%2BniF_H-svfrYpWUfpU-xTW-EUTgSqvo%3DKCuSr-Q6h3k0FuHw%40mail.gmail.com.

Reply via email to