ಪರಮ ಸತ್ಯದ ಒಗಟುಗಳು..!!
ಒಗಟು---3
ಸಂಖ್ಯೆಗಳ ಹಳಿಯಲ್ಲಿ
ಇವ ಚತುರ ,'1'ರಾ ಮಿತ್ರ..!
ಅಷ್ಟಕೂ ಇವ ಬಲು ದೊಡ್ಡ
ಎಣಿಸದಿರಿ,ನೋಡಿದರೆ
ಚಿಕ್ಕ ಇಲಿಮರಿಯ ಗಾತ್ರ...!!
ಯಾರೊಡನೆ ಭೇದವೆಣಿಪ
ಭಾಗಿಪರೆ ಹಂಚುವನು ಅರ್ಧ..!!
ಕರುಣಾಳು ತಾ ದಯದಿ
ಗುಣಿಸಿದರೆ ಖಾತೆಯೊಳು
'ದುಪ್ಪಟ್ಟು ' ಭದ್ರ...!!
ಸಮರೊಳಗೆ ಅಸಮಾನ್ಯನಿವ
ಜಗದೊಳಗೆ ಅವಿಭಾಜ್ಯ..!
ವರ್ಗಮೂಲವನೇ ಹೊಂದಿಲ್ಲ
ಇದು ಇವನ ದೌರ್ಭಾಗ್ಯ...!!
---ಕವಿಹೃದಯಿ,
ಪರಮೇಶ್ವರ ಹೆಗಡೆ.
On Jan 31, 2016 7:42 PM, "Parameshwar Hegde" <[email protected]> wrote:
> ಹೀಗೊಂದು ಯೋಚನೆ..
> ಗಣಿತಕ್ಕೊಂದು ಒಗಟು--''ಪರಮ ಸತ್ಯದ ಒಗಟುಗಳು''...!!
>
> ಸ್ನೇಹಿತರೆ,
> ಗಣಿತವೆಂಬುದು ನಮಗೇನು ಅಚ್ಚುಮೆಚ್ಚು...ಮಕ್ಕಳಿಗೆ?!!..ಇಷ್ಟವೇ.ಆದರೆ, ಅರ್ಥವಾಗಿ
> ತಾವೇ ಸ್ವಂತ ಬಿಡಿಸುವಂತಾದಾಗ ಮಾತ್ರ.ಇಲ್ಲವಾದಲ್ಲಿ ಗಣಿತ ಕಬ್ಬಿಣದ ಕಡಲೆ,ಬಿಡಿಸಲಾಗದ
> ಒಗಟು.!!ಇದಕ್ಕೆಲ್ಲ ಗಣಿತದ ಮೂಲಕಲ್ಪನೆಗಳ ಕುರಿತಾದ ಅಸ್ಪಷ್ಟ ಮಾಹಿತಿಗಳು ಎಂಬುದನ್ನು
> ಪ್ರತ್ಯೇಕವಾಗಿ ಹೇಳಬೇಕೆಂದೇನು ಇಲ್ಲ.ಹಾಗಾಗಿ ಗಣಿತದ ಮೂಲ ಕಲ್ಪನೆಗಳು, ಕ್ರಿಯೆಗಳು,ಮತ್ತು
> ಗಣಿತ ವಿಷಯಗಳ ಕುರಿತ ಕೆಲವು ಒಗಟುಗಳನ್ನು ಬರೆಯುವ ಚಿಕ್ಕ ಪ್ರಯತ್ನಕ್ಕೆ ಕೈ ಹಾಕಿದ್ದೇನೆ
> .ನಿಮ್ಮ ತರಗತಿಗಳ ನಡುವೆ,ವಿರಾಮದ ಅವಧಿಗಳಲ್ಲಿ ಅಥವಾ ಚಿಕ್ಕ ತರಗತಿಗಳಲ್ಲಿ(8th)
> ಉಪಯೋಗವಾದೀತು...
> ಇದು ಒಂದು ಹೊಸ ಪ್ರಯತ್ನವಷ್ಟೆ.ಮೂಲಭೂತ ಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ
> ಸರಿಪಡಿಸುವಲ್ಲಿ ತಾವಿದ್ದೀರೆಂಬ ಧೈರ್ಯ ಇದ್ದೇ ಇದೆ
> ನಿಮ್ಮವ,
> ಪರಮೇಶ್ವರ ಹೆಗಡೆ.
>
> ''ಪರಮ ಸತ್ಯದ ಒಗಟುಗಳು''
> ಒಗಟು1:
> ''ಎಲ್ಲರನೂ ಬಾಗಿಪನು
> ತಾನಾರಿಗೂ ತಲೆ ಬಾಗನು..
> ವರ್ಗ,ಘನ,ಚತುರ್ಥ..
> ...ನೀವೆಷ್ಟೇ ಏರಿಸಿದರೂ 'ಘಾತ'
> ಜಗ್ಗನಿವ ಭಂಡ...!
> ಕೇಳಿದರೆ ಪ್ರಥ್ವಿಯೇ
> ತಾನೆಂಬ ಪ್ರಚಂಡ..!!
> ಹೇಳುವೆಯಾ ನೀ ಜಾಣ
> ಸುಳ್ಳಲ್ಲ ಗಣಿತವಿದು-ಪರಮ ಸತ್ಯ..!!
> ಕವಿಹೃದಯಿ,
> ಪರಮೇಶ್ವರ ಹೆಗಡೆ
>
--
1. If a teacher wants to join STF, visit
http://karnatakaeducation.org.in/KOER/en/index.php/Become_a_STF_groups_member
2. For STF training, visit KOER -
http://karnatakaeducation.org.in/KOER/en/index.php
4. For Ubuntu 14.04 installation, visit
http://karnatakaeducation.org.in/KOER/en/index.php/Kalpavriksha
4. For doubts on Ubuntu, public software, visit
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Why_public_software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
---
You received this message because you are subscribed to the Google Groups
"Maths & Science STF" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.