Congrats yakub sir On 13-Feb-2016 9:32 pm, "Gireesha HP" <[email protected]> wrote:
> ಮುಖಪುಟ > > ಗಣಿತದಲ್ಲಿ ಅಗಣಿತ ಸಾಧನೆ- ಯಾಕೂಬ್ ಮಾಸ್ಟರ್ > > ನಾಳೆ ಶ್ಯಾಮ ರಾವ್ ಪ್ರತಿಷ್ಠಾನದ ಗೌರವ ಮಂಗಳೂರು, ಫೆ.13: ಶಿಕ್ಷಣ ಕ್ಷೇತ್ರಕ್ಕೆ > ನೀಡಿರುವ ಅಪಾರ ಕೊಡುಗೆಗಳ ಹಿನ್ನೆಲೆಯಲ್ಲಿ ಶಿಕ್ಷಕ ಕೊಯ್ಯೂರು ಯಾಕುಬ್ ಅವರು ರವಿವಾರ > ಪ್ರತಿಷ್ಠಿತ ಶ್ಯಾಮರಾವ್ ಸ್ಮಾರಕ - ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು > ಸ್ವೀಕರಿಸಲಿದ್ದಾರೆ. ಬೆಳ್ತಂಗಡಿ ತಾಲೂಕಿನ ಹಿಂದುಳಿದ ಗ್ರಾಮ - ಕೊಯ್ಯೂರು ನಲ್ಲಿ > ಸಂಪ್ರದಾಯಸ್ತ ಕುಟುಂಬದಲ್ಲಿ ಜನಿಸಿ, ವಿದ್ಯಾಕ್ಷೇತ್ರದಲ್ಲಿ ಬೆಳೆದ ರೀತಿ ಬೆರಗು > ಹುಟ್ಟಿಸುವಂತಹದು. ಪ್ರಾಥಮಿಕ ವಿದ್ಯಾಭ್ಯಾಸ, ಕೊಯ್ಯೂರು ಸ.ಹಿ.ಪ್ರಾ. ಶಾಲೆಯಲ್ಲಿ ಹಾಗೂ > ಹೈಸ್ಕೂಲು ಶಿಕ್ಷಣವನ್ನು ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಪಡೆದರು. ತಮ್ಮ > ಮನೆಯಿಂದ 10 ಕಿ.ಮೀ. ದೂರದ ಪ್ರೌಢಶಾಲೆಗೆ ಕಾಲ್ನಡಿಗೆಯಲ್ಲೇ, ಕಾಡುದಾರಿಯಲ್ಲಿ ಹೋಗಬೇಕಾದ > ಅನಿವಾರ್ಯ ಪರಿಸ್ಥಿತಿ ಇತ್ತು. ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ತನ್ನ ಬಿ. ಎಸ್ಸಿ. > ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪೂರೈಸಿ ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ > ಬಿ.ಎಡ್. ಪದವಿಯನ್ನು ಪಡೆದರು. ಮಂಗಳೂರು ವಿವಿಯಲ್ಲಿ ಅತ್ಯುನ್ನತ ಶ್ರೇಣಿ (ರ್ಯಾಂಕ್) > ಗಳಿಸಿದ್ದರು. 1996 ರಲ್ಲಿ ನಡ ಸರಕಾರಿ ಪ್ರೌಢಶಾಲೆಗೆ ಶಿಕ್ಷಕರಾಗಿ ನೇಮಕಗೊಂಡರು - ಲೆಕ್ಕದ > (ಗಣಿತ) ಮಾಸ್ಟರ್ ಆಗಿದ್ದರು. ವಿದ್ಯಾರ್ಥಿಗಳ ಶ್ರೇಯಸ್ಸನ್ನು ಬಯಸಿ ಹಗಲು- ರಾತ್ರಿ ತರಗತಿ > ನಡೆಸಿ, ಉತ್ತಮ ಫಲಿತಾಂಶ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಇವರು ಬರೇ ಲೆಕ್ಕಕ್ಕೆ > ಮಾಸ್ತರಲ್ಲ. ಗಣಿತ ಪಾಠವನ್ನು ವಿನೂತನ ರೀತಿಯಲ್ಲಿ ಬೋಧನೆ ಮಾಡಿದವರು. 2012ರಲ್ಲಿ > ಗಣಿತಲೋಕಕ್ಕೆ ಅಗಣಿತವಾದ ಗಣಿತ ಪ್ರಯೋಗ ಶಾಲೆ (ಗಣಿತ ಲೋಕ) ಯನ್ನು ನಿರ್ಮಿಸಿ ಕರ್ನಾಟಕ > ರಾಜ್ಯದಲ್ಲೇ ಅಪ್ರತಿಮ ಗಣಿತ ಸಾಧಕನೆನಿಸಿಕೊಂಡವರು. ಸರಕಾರದಿಂದ ಯಾವುದೇ ಅನುದಾನ ಪಡೆಯದೆ, > ತನ್ನ ಸ್ವಂತ ಕರ್ಚಿನಿಂದ ಹಳೆವಿದ್ಯಾರ್ಥಿಗಳಿಂದ ಪ್ರಯೋಗಶಾಲೆಯ ವಿಸ್ತ್ರತ ಯೋಜನೆಯನ್ನು > ರೂಪಿಸಿ ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮಿತಿ, ಸಹಶಿಕ್ಷಕರು ಹಾಗೂ ಊರವರ ಸಹಕಾರಗಳಿಂದ > ರಾಜ್ಯ ಮಟ್ಟದ ಗಣಿತ ಪ್ರಯೋಗಾಲಯವನ್ನು ನಡ ಸರಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಲು > ಸಾಧ್ಯವಾಯ್ತು ಎನ್ನುತ್ತಾರೆ ಯಾಕೂಬ್ ಮಾಸ್ತರ್. 10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ > ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ 'ಟಾರ್ಗೆಟ್-40' ಎಂಬ > ಶೀರ್ಷಿಕೆಯಡಿ, ಪ್ರಶ್ನೆ ಪತ್ರಿಕೆ ತಯಾರಿ, ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ > ವಿಷಯದಲ್ಲಿ ಸಂಕ್ಷಿಪ್ತ ನೋಟ್ಸ್ ತಯಾರಿಕೆ ಅಲ್ಲದೇ ಇನ್ನೂ ಅನೇಕ ರಚನೆಗಳನ್ನು ಮಾಡಿ, ರಾಜ್ಯ > ಗಣಿತ ಮತ್ತು ವಿಜ್ನ ಶಿಕ್ಷಕರ ವೇದಿಕೆಯ ಮೂಲಕ ರಾಜ್ಯದ ಎಲ್ಲಾ ಶಿಕ್ಷಕರು ಹಾಗೂ > ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿ, ತನ್ನ ಮಾತ್ಸರ ರಹಿತ ಶಿಕ್ಷಕ ವೃತ್ತಿಗೆ ಕಾರಣರಾಗಿ, > ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪ್ರೀತಿಗೆ ಪಾತ್ರರಾದವರು. 2015ನೇ ಸಾಲಿನಲ್ಲಿ 10ನೇ > ತರಗತಿಯ ಗಣಿತ ಪಠ್ಯ ವಿಷಯಕ್ಕೆ 'ಎಸೆಸೆಲ್ಸಿ ಕ್ಲಾಸ್ ನೋಟ'ನ್ನು ಎಲ್ಲಾ ಅಧ್ಯಾಯಗಳಿಗೆ > ಆಕರ್ಷಕ ಶೈಲಿಯಲ್ಲಿ ರಚಿಸಿ ಎಲ್ಲರಿಗೂ ಉಚಿತವಾಗಿ ಲಭ್ಯವಾಗುವಂತೆ ಮಾಡಿದ್ದರಲ್ಲದೇ, ಗಣಿತದ > ವಿನೂತನ ಪ್ರಯೋಗಕ್ಕೆ ಪ್ರಯತ್ನ ಮಾಡಿ ಗಣಿತ ಪಾಠದ ವೀಡಿಯೋ ತಯಾರಿಸಿ, ಎಲ್ಲಾ ಶಿಕ್ಷಕರಿಗೆ > ಪೂರೈಸಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಲ್ಲದೇ ವಿಶೇಷ ಶೈಲಿಯಲ್ಲಿ ಗಣಿತ ಅಧ್ಯಾಯವಾರು > ಕ್ವಿಜ್(ಮಲ್ಟಿಪಲ್ ಕ್ವಶ್ಚನ್ಸ್) ತಯಾರಿಸುವ ಪ್ರಯತ್ನ ಮಾಡಿದ್ದಾರೆ. ಈ ತನ್ಮಧ್ಯೆ ಸರಕಾರವು > ಯಾಕೂಬ್ ರವರನ್ನು, ಬೆಳ್ತಂಗಡಿ ತಾಲೂಕಿನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾಗಿ > ನಿಯೋಜಿಸಲಾಗಿದ್ದು ಶಾಲಾ ಮಕ್ಕಳ ಬಿಸಿಯೂಟದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ > ಹೆಗ್ಗಳಿಕೆ ಇವರದು. ಉತ್ತಮ ಸಂಪನ್ಮೂಲ ವ್ಯಕ್ತಿ ಎಸೆಸೆಲ್ಸಿ ಪರೀಕ್ಷಾ ಪೂರ್ವತರಬೇತಿಗಳನ್ನು > ಅನೇಕ ಸಂಘಸಂಸ್ಥೆಗಳ ಸಹಯೋಗದೊಂದಿಗೆ, ಮುಝ್ಯವಾಗಿ ಬೆಳ್ತಂಗಡಿ ಜಮಿಯತ್ತುಲ್ ಫಲಾಹ್ > ಘಟಕದೊಂದಿಗೆ ಯಶಸ್ವಿಯಾಗಿ ನಡೆಸಿಕೊಟ್ಟು ಉತ್ತಮ ಶ್ರೇಣಿಯಲ್ಲಿ ವಿದ್ಯಾರ್ಥಿಗಳು > ಉತ್ತೀರ್ಣರಾಗಿದ್ದಾರೆ. 2002ರಲ್ಲಿ ಯಾಕೂಬ್ ಕರ್ನಾಟಕ ಸರಕಾರದ ಜನ ಮೆಚ್ಚಿದ ಶಿಕ್ಷಕ > ಪ್ರಶಸ್ತಿಗೆ ಭಾಜನಾರಾದರು, ಇದೀಗ ಕೆಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ > ಆಶ್ರಯದಲ್ಲಿರುವ ರಾಷ್ಟ್ರೀಯ ಆವಿಷ್ಕಾರ ಅಭಿಯಾನದ ರಾಜ್ಯಮಟ್ಟದ ಗಣಿತ ಸಮಿತಿಯ ಸದಸ್ಯರಾಗಿ > ಇವರನ್ನು ನೇಮಿಸಿ ಸರಕಾರ ಆದೇಶ ನೀಡಿದೆ. ಇದೀಗ ಶ್ಯಾಮ ರಾವ್ ಪ್ರತಿಷ್ಠಾನವು ದ.ಕ. ಮತ್ತು > ಉಡುಪಿ ಜಿಲ್ಲೆಯ ಪ್ರೌಢ ಶಾಲೆ-ಪದವಿ ಪೂರ್ವ ಕಾಲೇಜಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವ > ಶಿಕ್ಷಕರಿಗಾಗಿ ನೀಡುತ್ತಿರುವ ಪ್ರತಿಷ್ಠಿತ ಸ್ಯಾಮ ರಾವ್ ಸ್ಮಾರಕ ಅತ್ಯುತ್ತಮ ಶಿಕ್ಷಕ > ಪ್ರಶಸ್ತಿಗೆ ಆಯ್ಕೆಗೊಂಡಿದ್ದು ಪ್ರಶಸ್ತಿಯನ್ನು ಫೆ.14ರಂದು ವಳಚ್ಚಿಲಿನಲ್ಲಿರುವ > ಶ್ರೀನಿವಾಸ ಕಾಲೇಜಿನ ಸಂಭ್ರಮದ ಸಮಾರಂಭದಲ್ಲಿ ಸ್ವೀಕರಿಸಲಿದ್ದಾರೆ. > > ಗಣಿತದಲ್ಲಿ ಅಗಣಿತ ಸಾಧನೆ- ಯಾಕೂಬ್ ಮಾಸ್ಟರ್ > http://newshunt.com/share/49662038 > via Dailyhunt > ಗಣಿತದಲ್ಲಿ ಅಗಣಿತ ಸಾಧನೆ- ಯಾಕೂಬ್ ಮಾಸ್ಟರ್ > > Click 👉 http://bit.ly/1QdIaQQ > > 📧 Varthabharati 📧 > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
