http://m.prajavani.net/article/2016_02_15/387433
*ರಾಜ್ಯ ಪಠ್ಯಕ್ರಮ : ಕ್ರೇಂದ್ರಕ್ಕಿಂತ ಕಳಪೆಯಲ್ಲ* 15 Feb, 2016 ಹೇಮಾ ವೆಂಕಟ್ <https://www.facebook.com/sharer/sharer.php?u=http%3A%2F%2Fgoo.gl%2F1na3KP> <https://twitter.com/intent/tweet?text=+%E0%B2%B0%E0%B2%BE%E0%B2%9C%E0%B3%8D%E0%B2%AF+%E0%B2%AA%E0%B2%A0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE+%3A+%E0%B2%95%E0%B3%8D%E0%B2%B0%E0%B3%87%E0%B2%82%E0%B2%A6%E0%B3%8D%E0%B2%B0%E0%B2%95%E0%B3%8D%E0%B2%95%E0%B2%BF%E0%B2%82%E0%B2%A4+%E0%B2%95%E0%B2%B3%E0%B2%AA%E0%B3%86%E0%B2%AF%E0%B2%B2%E0%B3%8D%E0%B2%B2+http%3A%2F%2Fgoo.gl%2F1na3KP> <whatsapp://send?text=%E2%80%98%E0%B2%B0%E0%B2%BE%E0%B2%9C%E0%B3%8D%E0%B2%AF+%E0%B2%AA%E0%B2%A0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE%E0%B2%A6%E0%B2%B2%E0%B3%8D%E0%B2%B2%E0%B2%BF%26nbsp%3B+%E0%B2%B6%E0%B2%BF%E0%B2%95%E0%B3%8D%E0%B2%B7%E0%B2%A3+%E0%B2%AA%E0%B2%A1%E0%B3%86%E0%B2%AF%E0%B3%81%E0%B2%A4%E0%B3%8D%E0%B2%A4%E0%B2%BF%E0%B2%B0%E0%B3%81%E0%B2%B5+%E0%B2%AE%E0%B2%95%E0%B3%8D%E0%B2%95%E0%B2%B3%E0%B3%81+%E0%B2%86%E0%B2%A4%E0%B2%82%E0%B2%95%E0%B2%AA%E0%B2%A1%E0%B3%81%E0%B2%B5+%E0%B2%85%E0%B2%97%E0%B2%A4%E0%B3%8D%E0%B2%AF%E0%B2%B5%E0%B2%BF%E0%B2%B2%E0%B3%8D%E0%B2%B2.+%E0%B2%B0%E0%B2%BE%E0%B2%9C%E0%B3%8D%E0%B2%AF+%E0%B2%AA%E0%B2%A0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE+%E0%B2%95%E0%B3%87%E0%B2%82%E0%B2%A6%E0%B3%8D%E0%B2%B0+%E0%B2%AA%E0%B2%A0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE%E0%B2%95%E0%B3%8D%E0%B2%95%E0%B2%BF%E0%B2%82%E0%B2%A4+%E0%B2%95%E0%B2%B3%E0%B2%AA%E0%B3%86%E0%B2%AF%E0%B2%B2%E0%B3%8D%E0%B2%B2%E2%80%99.+%E0%B2%95%E0%B3%87%E0%B2%82%E0%B2%A6%E0%B3%8D%E0%B2%B0+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%B0%E0%B2%BE%E0%B2%9C%E0%B3%8D%E0%B2%AF+%E0%B2%AA%E0%B2%A0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE%E0%B2%97%E0%B2%B3+%E0%B2%97%E0%B3%81%E0%B2%A3%E0%B2%AE%E0%B2%9F%E0%B3%8D%E0%B2%9F%E0%B2%A6+%E0%B2%A4%E0%B3%8C%E0%B2%B2%E0%B2%A8%E0%B2%BF%E0%B2%95+%E0%B2%85%E0%B2%A7%E0%B3%8D%E0%B2%AF%E0%B2%AF%E0%B2%A8+%E0%B2%A8%E0%B2%A1%E0%B3%86%E0%B2%B8%E0%B2%BF%E0%B2%A6+%E0%B2%A4%E0%B2%9C%E0%B3%8D%E0%B2%9E%E0%B2%B0+%E0%B2%B8%E0%B2%AE%E0%B2%BF%E0%B2%A4%E0%B2%BF+%E0%B2%B9%E0%B3%80%E0%B2%97%E0%B3%86+%E0%B2%B9%E0%B3%87%E0%B2%B3%E0%B2%BF%E0%B2%A6%E0%B3%86.%0D%0Ahttp%3A%2F%2Fgoo.gl%2F1na3KP> <https://plus.google.com/share?url=http%3A%2F%2Fgoo.gl%2F1na3KP> <http://www.pinterest.com/pin/find/?url=http%3A%2F%2Fgoo.gl%2F1na3KP> <http://www.linkedin.com/shareArticle?mini=true&title=+%E0%B2%B0%E0%B2%BE%E0%B2%9C%E0%B3%8D%E0%B2%AF+%E0%B2%AA%E0%B2%A0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE+%3A+%E0%B2%95%E0%B3%8D%E0%B2%B0%E0%B3%87%E0%B2%82%E0%B2%A6%E0%B3%8D%E0%B2%B0%E0%B2%95%E0%B3%8D%E0%B2%95%E0%B2%BF%E0%B2%82%E0%B2%A4+%E0%B2%95%E0%B2%B3%E0%B2%AA%E0%B3%86%E0%B2%AF%E0%B2%B2%E0%B3%8D%E0%B2%B2+&url=http%3A%2F%2Fgoo.gl%2F1na3KP> *ಬೆಂಗಳೂರು: *‘ರಾಜ್ಯ ಪಠ್ಯಕ್ರಮದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಆತಂಕಪಡುವ ಅಗತ್ಯವಿಲ್ಲ. ರಾಜ್ಯ ಪಠ್ಯಕ್ರಮ ಕೇಂದ್ರ ಪಠ್ಯಕ್ರಮಕ್ಕಿಂತ ಕಳಪೆಯಲ್ಲ’. ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮಗಳ ಗುಣಮಟ್ಟದ ತೌಲನಿಕ ಅಧ್ಯಯನ ನಡೆಸಿದ ತಜ್ಞರ ಸಮಿತಿ ಹೀಗೆ ಹೇಳಿದೆ. ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ 6ರಿಂದ 10ನೇ ತರಗತಿಯವರೆಗಿನ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ವಿಷಯಗಳನ್ನು ಹೋಲಿಸಿ ಅಧ್ಯಯನ ನಡೆಸಿದ ಸಮಿತಿಗಳು ಇತ್ತೀಚೆಗೆ ರಾಜ್ಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿಗೆ ವರದಿ ನೀಡಿವೆ. ಎರಡೂ ಪಠ್ಯಕ್ರಮಗಳಲ್ಲಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ 2005ರಲ್ಲಿ ರೂಪಿಸಿದ ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ’ ಶಿಫಾರಸುಗಳನ್ನು ಬಹುತೇಕ ಅನುಸರಿಸಲಾಗಿದೆ ಎಂದು ವರದಿ ತಿಳಿಸಿದೆ. ‘ಕೇಂದ್ರ ಪಠ್ಯಕ್ರಮಕ್ಕೆ ಹೋಲಿಸಿದರೆ ರಾಜ್ಯ ಪಠ್ಯಕ್ರಮದ ಕೆಲವು ತರಗತಿಗಳ ವಿಜ್ಞಾನ ಅಧ್ಯಾಯಗಳು ಉತ್ಕೃಷ್ಟವಾಗಿದೆ. ವಿಜ್ಞಾನದ ಪರಿಕಲ್ಪನೆಗಳಲ್ಲಿರುವ ತಪ್ಪು ಗ್ರಹಿಕೆಗಳನ್ನು ತೆಗೆದು ಹಾಕಿ, ಕೆಲವು ಉಪಯುಕ್ತ ಅಧ್ಯಾಯಗಳನ್ನು ಸೇರ್ಪಡೆಗೊಳಿಸಿ, ಪರಿಷ್ಕರಿಸಿದರೆ ರಾಜ್ಯ ಪಠ್ಯಕ್ರಮ ಅತ್ಯುತ್ತಮ ಎನಿಸಲಿದೆ’ ಎಂದು ವಿಜ್ಞಾನ ಪಠ್ಯಗಳ ಅಧ್ಯಯನ ಸಮಿತಿಯ ಅಧ್ಯಕ್ಷ ಪ್ರೊ.ಟಿ.ಆರ್. ಅನಂತರಾಮು ‘ಪ್ರಜಾವಾಣಿ’ಗೆ ತಿಳಿಸಿದರು. *ಖಗೋಳ ವಿಜ್ಞಾನಕ್ಕೆ ಒತ್ತು: *ರಾಜ್ಯ ಪಠ್ಯಕ್ರಮದಲ್ಲಿ 6 ರಿಂದ 10ನೇ ತರಗತಿಯವರೆಗೆ ಅಂತರಿಕ್ಷ ಕುರಿತು ಒಟ್ಟು ಆರು ಅಧ್ಯಾಯಗಳಿವೆ. ಕೇಂದ್ರ ಪಠ್ಯ ಕ್ರಮದಲ್ಲಿ 8ನೇ ತರಗತಿಗೆ ಮಾತ್ರ ‘ಸ್ಟಾರ್ಸ್ ಅಂಡ್ ಸೋಲಾರ್’ ಎಂಬ ಒಂದೇ ಪಾಠ ಇದೆ. ರಾಜ್ಯ ಪಠ್ಯಕ್ರಮದಲ್ಲಿ ಖಗೋಳ ವಿಜ್ಞಾನದ ಜೊತೆಗೆ ಅಂತರಿಕ್ಷ ಸಂಶೋಧನೆ ಕುರಿತು ಉಪಯುಕ್ತ ಮಾಹಿತಿ ಇದೆ. ಸಮಕಾಲೀನ ವಿಜ್ಞಾನದ ಬೆಳವಣಿಗೆಯನ್ನು ಗ್ರಹಿಸಲು ರಾಜ್ಯ ಪಠ್ಯ ಪುಸ್ತಕಗಳು ಉತ್ತೇಜನಕಾರಿಯಾಗಿವೆ. ರಾಜ್ಯ ಪಠ್ಯಕ್ರಮದಲ್ಲಿ ಪರಿಕಲ್ಪನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕೇಂದ್ರ ಪಠ್ಯದಲ್ಲಿ ತಾಂತ್ರಿಕ ಪದಬಳಕೆ ಕಡಿಮೆ. ಇದರಿಂದ ಪರೀಕ್ಷೆಗೆ ತೊಂದರೆಯಾಗದಿದ್ದರೂ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತೊಡಕಾಗುತ್ತದೆ. ಆದರೆ ರಾಜ್ಯ ಪಠ್ಯ ಪುಸ್ತಕಗಳಲ್ಲಿ ತಾಂತ್ರಿಕ ಪದಗಳ ಬಳಕೆ, ಪರಿಕಲ್ಪನೆಗೆ ಪೂರಕವಾದ ಮಾಹಿತಿ ಧಾರಾಳವಾಗಿದೆ. *ಗುಣಮಟ್ಟದ ಗಣಿತ :* ಗಣಿತ ಪಠ್ಯವನ್ನು ಡಾ.ಸಿ.ಎಸ್. ಯೋಗಾನಂದ ಅಧ್ಯಕ್ಷತೆಯ ಸಮಿತಿ ಅಧ್ಯಯನ ನಡೆಸಿದೆ. ‘ಕೇಂದ್ರ ಪಠ್ಯಕ್ಕೆ ಹೋಲಿಸಿದರೆ ರಾಜ್ಯದ ಆರು ಮತ್ತು ಏಳನೇ ತರಗತಿಯ ಗಣಿತ ಪಠ್ಯದ ವಿಷಯ ಮತ್ತು ಮುದ್ರಣ ಎರಡೂ ಅತ್ಯುತ್ತಮ ಗುಣಮಟ್ಟ ಹೊಂದಿದೆ. ಭಾಷೆಯೂ ಚೆನ್ನಾಗಿದೆ. ಆದರೆ, ಪ್ರಬುದ್ಧ ಭಾಷೆ ಬಳಸಲಾಗಿದೆ. ಸ್ವಲ್ಪ ಸರಳ ಭಾಷೆ ಬಳಸುವ ಅಗತ್ಯವಿದೆ. ಎಂಟು ಮತ್ತು ಒಂಬತ್ತರ ಗಣಿತ ಹೆಚ್ಚು ಪರಿಷ್ಕರಣೆಯಾಗಬೇಕಿದೆ. ಹತ್ತನೇ ತರಗತಿಯ ಗಣಿತ ಉತ್ತಮವಾಗಿದೆ’ ಎಂದು ಸಮಿತಿ ಹೇಳಿದೆ. *ಸಮಾಜ ವಿಜ್ಞಾನ ಅಂತರ ಹೆಚ್ಚು:* ಸಮಾಜ ವಿಜ್ಞಾನದ ವಿಷಯಗಳ ಕುರಿತು ಅಧ್ಯಯನ ನಡೆಸಿದ ಪ್ರೊ. ಎಂ.ಎಸ್. ತಳವಾರ ಅಧ್ಯಕ್ಷತೆಯ ತಂಡ, ರಾಜ್ಯ ಮತ್ತು ಕೇಂದ್ರ ಪಠ್ಯಗಳ ಸಮಾಜ ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂತರವಿದೆ ಎಂದು ತಿಳಿಸಿದೆ. ‘ಕೇಂದ್ರ ಪಠ್ಯಕ್ರಮ ರಾಷ್ಟ್ರವ್ಯಾಪಿ ಯಾಗಿರುವ ಕಾರಣ ಅವರಿಗೆ ಹೆಚ್ಚಿನ ವಿಷಯಗಳನ್ನು ಅಳವಡಿಸಲು ಅವಕಾಶವಿದೆ. ರಾಜ್ಯ ಪಠ್ಯದಲ್ಲಿ ಪ್ರಾದೇಶಿಕ ಇತಿಹಾಸ, ವೈವಿಧ್ಯತೆ ಮಾತ್ರ ಅಳವಡಿಸಲಾಗುತ್ತಿದೆ. ಇದು ಎರಡರ ನಡುವೆ ಹೆಚ್ಚು ವ್ಯತ್ಯಾಸಕ್ಕೆ ಕಾರಣವಾಗಿದೆ. ಕೇಂದ್ರ ಪಠ್ಯದ ಕೆಲವು ಅಧ್ಯಾಯಗಳನ್ನು ರಾಜ್ಯ ಪಠ್ಯಕ್ಕೆ ಅಳವಡಿಸುವ ಅಗತ್ಯವಿದೆ’ ಎಂದು ಪ್ರೊ.ತಳವಾರ ತಿಳಿಸಿದರು. ಕೇಂದ್ರ ಪಠ್ಯಕ್ರಮದಲ್ಲಿ ಪ್ರೌಢ ಶಾಲಾ ಹಂತದಲ್ಲಿಯೇ ನಿರ್ವಹಣೆ ಮತ್ತು ವಾಣಿಜ್ಯ ವಿಷಯಗಳನ್ನು ಅಳವಡಿಸಲಾಗಿದೆ. ಇದು ಮಕ್ಕಳ ಜ್ಞಾನವನ್ನು ವಿಸ್ತರಿಸುತ್ತದೆ. ರಾಜ್ಯ ಪಠ್ಯದಲ್ಲಿ 8ನೇ ತರಗತಿಯಿಂದ ಆರಂಭವಾಗುವ ವಿಷಯ ಕೇಂದ್ರ ಪಠ್ಯಕ್ರಮದಲ್ಲಿ 6ನೇ ತರಗತಿಯಿಂದಲೇ ಆರಂಭವಾಗಿರುತ್ತದೆ ಎಂದು ಅವರು ವಿವರಿಸಿದರು. *ಮುದ್ರಣ ಕಳಪೆ* ರಾಜ್ಯ ಪಠ್ಯ ಪುಸ್ತಕಗಳ ಮುದ್ರಣ ತೀರಾ ಕಳಪೆಯಾಗಿದೆ. ಗುಣಮಟ್ಟದ ಕಾಗದ ಬಳಸದ ಕಾರಣ ಚಿತ್ರಗಳು, ಅಕ್ಷರಗಳು ಸ್ಪಷ್ಟವಾಗಿ ಕಾಣುತ್ತಿಲ್ಲ. ಚಿತ್ರಗಳು ಆಕರ್ಷಕವಾಗಿಲ್ಲ. ಕಾಗುಣಿತ ತಪ್ಪುಗಳು ಕನ್ನಡ, ಇಂಗ್ಲಿಷ್ ಎರಡು ಮಾಧ್ಯಮಗಳಲ್ಲೂ ಸಾಮಾನ್ಯವಾಗಿವೆ. ರಾಜ್ಯ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ಗುಣಮಟ್ಟದ ಮುದ್ರಣಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ. ***ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮಗಳಲ್ಲಿ ವಿಷಯದ ದೃಷ್ಟಿಯಿಂದ ದೊಡ್ಡ ಅಂತರವಿಲ್ಲ. ವಿಷಯಗಳ ಅಳವಡಿಕೆ ಏಕರೂಪದಲ್ಲಿ ಇಲ್ಲದಿದ್ದರೂ ಬೇರೊಂದು ತರಗತಿಯ ಪಠ್ಯದಲ್ಲಿ ಅಳವಡಿಸಲಾಗಿದೆ. *ಪ್ರೊ. ಟಿ.ಆರ್. ಅನಂತರಾಮು *ಹಿರಿಯ ವಿಜ್ಞಾನಿ ***ಈ ವರದಿಯನ್ನು ಆಧರಿಸಿ ಕೇಂದ್ರೀಯ ಪಠ್ಯಕ್ರಮದ ಗುಣಮಟ್ಟದಲ್ಲಿಯೇ ರಾಜ್ಯ ಪಠ್ಯಪುಸ್ತಕಗಳನ್ನು ಪರಿಷ್ಕರಿಸ ಲಾಗುವುದು. *ಪ್ರೊ. ಬರಗೂರು ರಾಮಚಂದ್ರಪ್ಪ *ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷ. Hareeshkumar K AM(PCM) GHS HUSKURU MALAVALLI TQ MANDYA DT 571475 mobile no 9880328224 email [email protected] -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
