‍GOOD information sir

lalita
On 15/02/2016 9:58 AM, "HAREESHKUMAR K Agasanapura" <[email protected]>
wrote:

> http://m.prajavani.net/article/2016_02_15/387433
>
> *ರಾಜ್ಯ ಪಠ್ಯಕ್ರಮ : ಕ್ರೇಂದ್ರಕ್ಕಿಂತ ಕಳಪೆಯಲ್ಲ*
>
> 15 Feb, 2016
>
> ಹೇಮಾ ವೆಂಕಟ್
>
> <https://www.facebook.com/sharer/sharer.php?u=http%3A%2F%2Fgoo.gl%2F1na3KP>
> <https://twitter.com/intent/tweet?text=+%E0%B2%B0%E0%B2%BE%E0%B2%9C%E0%B3%8D%E0%B2%AF+%E0%B2%AA%E0%B2%A0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE+%3A+%E0%B2%95%E0%B3%8D%E0%B2%B0%E0%B3%87%E0%B2%82%E0%B2%A6%E0%B3%8D%E0%B2%B0%E0%B2%95%E0%B3%8D%E0%B2%95%E0%B2%BF%E0%B2%82%E0%B2%A4+%E0%B2%95%E0%B2%B3%E0%B2%AA%E0%B3%86%E0%B2%AF%E0%B2%B2%E0%B3%8D%E0%B2%B2+http%3A%2F%2Fgoo.gl%2F1na3KP>
> <https://plus.google.com/share?url=http%3A%2F%2Fgoo.gl%2F1na3KP>
> <http://www.pinterest.com/pin/find/?url=http%3A%2F%2Fgoo.gl%2F1na3KP>
> <http://www.linkedin.com/shareArticle?mini=true&title=+%E0%B2%B0%E0%B2%BE%E0%B2%9C%E0%B3%8D%E0%B2%AF+%E0%B2%AA%E0%B2%A0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE+%3A+%E0%B2%95%E0%B3%8D%E0%B2%B0%E0%B3%87%E0%B2%82%E0%B2%A6%E0%B3%8D%E0%B2%B0%E0%B2%95%E0%B3%8D%E0%B2%95%E0%B2%BF%E0%B2%82%E0%B2%A4+%E0%B2%95%E0%B2%B3%E0%B2%AA%E0%B3%86%E0%B2%AF%E0%B2%B2%E0%B3%8D%E0%B2%B2+&url=http%3A%2F%2Fgoo.gl%2F1na3KP>
>
> *ಬೆಂಗಳೂರು:  *‘ರಾಜ್ಯ ಪಠ್ಯಕ್ರಮದಲ್ಲಿ  ಶಿಕ್ಷಣ ಪಡೆಯುತ್ತಿರುವ ಮಕ್ಕಳು ಆತಂಕಪಡುವ
> ಅಗತ್ಯವಿಲ್ಲ. ರಾಜ್ಯ ಪಠ್ಯಕ್ರಮ ಕೇಂದ್ರ ಪಠ್ಯಕ್ರಮಕ್ಕಿಂತ ಕಳಪೆಯಲ್ಲ’. ಕೇಂದ್ರ ಮತ್ತು
> ರಾಜ್ಯ ಪಠ್ಯಕ್ರಮಗಳ ಗುಣಮಟ್ಟದ ತೌಲನಿಕ ಅಧ್ಯಯನ ನಡೆಸಿದ ತಜ್ಞರ ಸಮಿತಿ ಹೀಗೆ ಹೇಳಿದೆ.
>
> ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ 6ರಿಂದ 10ನೇ ತರಗತಿಯವರೆಗಿನ ವಿಜ್ಞಾನ, ಗಣಿತ, ಸಮಾಜ
> ವಿಜ್ಞಾನ ವಿಷಯಗಳನ್ನು ಹೋಲಿಸಿ ಅಧ್ಯಯನ ನಡೆಸಿದ ಸಮಿತಿಗಳು ಇತ್ತೀಚೆಗೆ  ರಾಜ್ಯ
> ಪಠ್ಯಪುಸ್ತಕ ಪರಿಷ್ಕರಣ ಸಮಿತಿಗೆ ವರದಿ ನೀಡಿವೆ. ಎರಡೂ ಪಠ್ಯಕ್ರಮಗಳಲ್ಲಿ ರಾಷ್ಟ್ರೀಯ
> ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ 2005ರಲ್ಲಿ ರೂಪಿಸಿದ ‘ರಾಷ್ಟ್ರೀಯ ಪಠ್ಯಕ್ರಮ
> ಚೌಕಟ್ಟಿನ’ ಶಿಫಾರಸುಗಳನ್ನು ಬಹುತೇಕ ಅನುಸರಿಸಲಾಗಿದೆ ಎಂದು ವರದಿ ತಿಳಿಸಿದೆ.
>
> ‘ಕೇಂದ್ರ ಪಠ್ಯಕ್ರಮಕ್ಕೆ ಹೋಲಿಸಿದರೆ ರಾಜ್ಯ ಪಠ್ಯಕ್ರಮದ ಕೆಲವು ತರಗತಿಗಳ ವಿಜ್ಞಾನ
> ಅಧ್ಯಾಯಗಳು  ಉತ್ಕೃಷ್ಟವಾಗಿದೆ. ವಿಜ್ಞಾನದ ಪರಿಕಲ್ಪನೆಗಳಲ್ಲಿರುವ ತಪ್ಪು ಗ್ರಹಿಕೆಗಳನ್ನು
> ತೆಗೆದು ಹಾಕಿ, ಕೆಲವು ಉಪಯುಕ್ತ ಅಧ್ಯಾಯಗಳನ್ನು ಸೇರ್ಪಡೆಗೊಳಿಸಿ, ಪರಿಷ್ಕರಿಸಿದರೆ ರಾಜ್ಯ
> ಪಠ್ಯಕ್ರಮ ಅತ್ಯುತ್ತಮ  ಎನಿಸಲಿದೆ’ ಎಂದು ವಿಜ್ಞಾನ ಪಠ್ಯಗಳ ಅಧ್ಯಯನ ಸಮಿತಿಯ ಅಧ್ಯಕ್ಷ
> ಪ್ರೊ.ಟಿ.ಆರ್. ಅನಂತರಾಮು ‘ಪ್ರಜಾವಾಣಿ’ಗೆ ತಿಳಿಸಿದರು.
>
> *ಖಗೋಳ ವಿಜ್ಞಾನಕ್ಕೆ ಒತ್ತು: *ರಾಜ್ಯ ಪಠ್ಯಕ್ರಮದಲ್ಲಿ 6 ರಿಂದ 10ನೇ ತರಗತಿಯವರೆಗೆ
> ಅಂತರಿಕ್ಷ ಕುರಿತು ಒಟ್ಟು ಆರು ಅಧ್ಯಾಯಗಳಿವೆ.  ಕೇಂದ್ರ ಪಠ್ಯ ಕ್ರಮದಲ್ಲಿ 8ನೇ ತರಗತಿಗೆ
> ಮಾತ್ರ ‘ಸ್ಟಾರ್ಸ್ ಅಂಡ್‌ ಸೋಲಾರ್’ ಎಂಬ ಒಂದೇ ಪಾಠ ಇದೆ. ರಾಜ್ಯ ಪಠ್ಯಕ್ರಮದಲ್ಲಿ ಖಗೋಳ
> ವಿಜ್ಞಾನದ ಜೊತೆಗೆ ಅಂತರಿಕ್ಷ ಸಂಶೋಧನೆ ಕುರಿತು ಉಪಯುಕ್ತ ಮಾಹಿತಿ ಇದೆ. ಸಮಕಾಲೀನ
> ವಿಜ್ಞಾನದ ಬೆಳವಣಿಗೆಯನ್ನು ಗ್ರಹಿಸಲು ರಾಜ್ಯ ಪಠ್ಯ ಪುಸ್ತಕಗಳು ಉತ್ತೇಜನಕಾರಿಯಾಗಿವೆ.
>
> ರಾಜ್ಯ ಪಠ್ಯಕ್ರಮದಲ್ಲಿ ಪರಿಕಲ್ಪನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕೇಂದ್ರ
> ಪಠ್ಯದಲ್ಲಿ ತಾಂತ್ರಿಕ ಪದಬಳಕೆ ಕಡಿಮೆ. ಇದರಿಂದ  ಪರೀಕ್ಷೆಗೆ ತೊಂದರೆಯಾಗದಿದ್ದರೂ,
> ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತೊಡಕಾಗುತ್ತದೆ. ಆದರೆ ರಾಜ್ಯ ಪಠ್ಯ ಪುಸ್ತಕಗಳಲ್ಲಿ
> ತಾಂತ್ರಿಕ ಪದಗಳ ಬಳಕೆ, ಪರಿಕಲ್ಪನೆಗೆ ಪೂರಕವಾದ ಮಾಹಿತಿ ಧಾರಾಳವಾಗಿದೆ.
>
> *ಗುಣಮಟ್ಟದ ಗಣಿತ :* ಗಣಿತ ಪಠ್ಯವನ್ನು ಡಾ.ಸಿ.ಎಸ್‌. ಯೋಗಾನಂದ ಅಧ್ಯಕ್ಷತೆಯ ಸಮಿತಿ
> ಅಧ್ಯಯನ ನಡೆಸಿದೆ. ‘ಕೇಂದ್ರ ಪಠ್ಯಕ್ಕೆ ಹೋಲಿಸಿದರೆ ರಾಜ್ಯದ ಆರು ಮತ್ತು ಏಳನೇ ತರಗತಿಯ
> ಗಣಿತ ಪಠ್ಯದ  ವಿಷಯ ಮತ್ತು  ಮುದ್ರಣ ಎರಡೂ ಅತ್ಯುತ್ತಮ ಗುಣಮಟ್ಟ ಹೊಂದಿದೆ. ಭಾಷೆಯೂ
> ಚೆನ್ನಾಗಿದೆ. ಆದರೆ, ಪ್ರಬುದ್ಧ ಭಾಷೆ ಬಳಸಲಾಗಿದೆ. ಸ್ವಲ್ಪ ಸರಳ ಭಾಷೆ ಬಳಸುವ ಅಗತ್ಯವಿದೆ.
> ಎಂಟು ಮತ್ತು ಒಂಬತ್ತರ ಗಣಿತ ಹೆಚ್ಚು ಪರಿಷ್ಕರಣೆಯಾಗಬೇಕಿದೆ. ಹತ್ತನೇ ತರಗತಿಯ ಗಣಿತ
> ಉತ್ತಮವಾಗಿದೆ’ ಎಂದು ಸಮಿತಿ ಹೇಳಿದೆ.
>
> *ಸಮಾಜ ವಿಜ್ಞಾನ ಅಂತರ ಹೆಚ್ಚು:* ಸಮಾಜ ವಿಜ್ಞಾನದ ವಿಷಯಗಳ ಕುರಿತು ಅಧ್ಯಯನ ನಡೆಸಿದ
> ಪ್ರೊ. ಎಂ.ಎಸ್‌. ತಳವಾರ ಅಧ್ಯಕ್ಷತೆಯ ತಂಡ,  ರಾಜ್ಯ ಮತ್ತು ಕೇಂದ್ರ ಪಠ್ಯಗಳ ಸಮಾಜ
> ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂತರವಿದೆ ಎಂದು ತಿಳಿಸಿದೆ. ‘ಕೇಂದ್ರ ಪಠ್ಯಕ್ರಮ
> ರಾಷ್ಟ್ರವ್ಯಾಪಿ ಯಾಗಿರುವ ಕಾರಣ ಅವರಿಗೆ ಹೆಚ್ಚಿನ ವಿಷಯಗಳನ್ನು ಅಳವಡಿಸಲು ಅವಕಾಶವಿದೆ.
> ರಾಜ್ಯ ಪಠ್ಯದಲ್ಲಿ ಪ್ರಾದೇಶಿಕ ಇತಿಹಾಸ, ವೈವಿಧ್ಯತೆ ಮಾತ್ರ ಅಳವಡಿಸಲಾಗುತ್ತಿದೆ. ಇದು
> ಎರಡರ ನಡುವೆ ಹೆಚ್ಚು ವ್ಯತ್ಯಾಸಕ್ಕೆ ಕಾರಣವಾಗಿದೆ.
>
> ಕೇಂದ್ರ ಪಠ್ಯದ ಕೆಲವು ಅಧ್ಯಾಯಗಳನ್ನು ರಾಜ್ಯ ಪಠ್ಯಕ್ಕೆ ಅಳವಡಿಸುವ ಅಗತ್ಯವಿದೆ’ ಎಂದು
> ಪ್ರೊ.ತಳವಾರ  ತಿಳಿಸಿದರು. ಕೇಂದ್ರ ಪಠ್ಯಕ್ರಮದಲ್ಲಿ ಪ್ರೌಢ ಶಾಲಾ ಹಂತದಲ್ಲಿಯೇ ನಿರ್ವಹಣೆ
> ಮತ್ತು ವಾಣಿಜ್ಯ ವಿಷಯಗಳನ್ನು ಅಳವಡಿಸಲಾಗಿದೆ. ಇದು ಮಕ್ಕಳ ಜ್ಞಾನವನ್ನು
> ವಿಸ್ತರಿಸುತ್ತದೆ. ರಾಜ್ಯ ಪಠ್ಯದಲ್ಲಿ 8ನೇ ತರಗತಿಯಿಂದ ಆರಂಭವಾಗುವ ವಿಷಯ ಕೇಂದ್ರ
> ಪಠ್ಯಕ್ರಮದಲ್ಲಿ 6ನೇ ತರಗತಿಯಿಂದಲೇ ಆರಂಭವಾಗಿರುತ್ತದೆ ಎಂದು ಅವರು ವಿವರಿಸಿದರು.
>
> *ಮುದ್ರಣ ಕಳಪೆ*
> ರಾಜ್ಯ ಪಠ್ಯ ಪುಸ್ತಕಗಳ ಮುದ್ರಣ ತೀರಾ ಕಳಪೆಯಾಗಿದೆ. ಗುಣಮಟ್ಟದ ಕಾಗದ ಬಳಸದ ಕಾರಣ
> ಚಿತ್ರಗಳು,  ಅಕ್ಷರಗಳು ಸ್ಪಷ್ಟವಾಗಿ ಕಾಣುತ್ತಿಲ್ಲ.  ಚಿತ್ರಗಳು ಆಕರ್ಷಕವಾಗಿಲ್ಲ.
> ಕಾಗುಣಿತ ತಪ್ಪುಗಳು ಕನ್ನಡ, ಇಂಗ್ಲಿಷ್‌ ಎರಡು ಮಾಧ್ಯಮಗಳಲ್ಲೂ ಸಾಮಾನ್ಯವಾಗಿವೆ.
>
> ರಾಜ್ಯ ಪಠ್ಯಪುಸ್ತಕಗಳನ್ನು   ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ  ಗುಣಮಟ್ಟದ ಮುದ್ರಣಕ್ಕೆ
> ಹೆಚ್ಚಿನ ಗಮನ ನೀಡಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.
>
> ***ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮಗಳಲ್ಲಿ ವಿಷಯದ ದೃಷ್ಟಿಯಿಂದ ದೊಡ್ಡ ಅಂತರವಿಲ್ಲ.
> ವಿಷಯಗಳ ಅಳವಡಿಕೆ ಏಕರೂಪದಲ್ಲಿ ಇಲ್ಲದಿದ್ದರೂ ಬೇರೊಂದು ತರಗತಿಯ ಪಠ್ಯದಲ್ಲಿ ಅಳವಡಿಸಲಾಗಿದೆ.
> *ಪ್ರೊ. ಟಿ.ಆರ್. ಅನಂತರಾಮು *ಹಿರಿಯ ವಿಜ್ಞಾನಿ
>
> ***ಈ ವರದಿಯನ್ನು ಆಧರಿಸಿ ಕೇಂದ್ರೀಯ ಪಠ್ಯಕ್ರಮದ ಗುಣಮಟ್ಟದಲ್ಲಿಯೇ ರಾಜ್ಯ
> ಪಠ್ಯಪುಸ್ತಕಗಳನ್ನು ಪರಿಷ್ಕರಿಸ ಲಾಗುವುದು.
> *ಪ್ರೊ. ಬರಗೂರು ರಾಮಚಂದ್ರಪ್ಪ *ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷ.
>
> Hareeshkumar K
> AM(PCM)
> GHS HUSKURU
> MALAVALLI TQ
> MANDYA DT 571475
> mobile no 9880328224
> email [email protected]
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to