Nice
On Mar 2, 2016 9:06 PM, "sangeeta patil" <[email protected]>
wrote:

> Thank u sir
> On 28 Feb 2016 19:39, "Sandhya CR" <[email protected]> wrote:
>
>> ಒಳ್ಳೆಯ ಮಾಹಿತಿ.  ಅಭಿನಂದನೆಗಳು
>> On Feb 28, 2016 10:51 AM, "Ramachandra BK" <[email protected]>
>> wrote:
>>
>>> ತುಂಬಾ ಚೆನ್ನಾಗಿದೆ. ಅಭಿನಂದನೆಗಳು .
>>> On Feb 28, 2016 8:44 AM, "HAREESHKUMAR K Agasanapura" <
>>> [email protected]> wrote:
>>>
>>>> http://m.prajavani.net/article/2016_02_28/390604
>>>>
>>>> *ಆಕಾಶವೇಕೆ ನೀಲಿಯಾಗಿದೆ?*
>>>>
>>>> ಪ್ರಜಾವಾಣಿ ಆರ್ಕ್ಸೈವ್ಸ್‌ / ಟಿ.ಎಲ್. ರಾಮಸ್ವಾಮಿ
>>>>
>>>> ಪ್ರಿಸಂ ಮೂಲಕ ಹಾಯುವಾಗ ಬೆಳಕು ವಿಸರಣವಾಗುವುದು (ಡಿಸ್ಪರ್ಶನ್)
>>>>
>>>> Previous <http://m.prajavani.net/article/2016_02_28/390604#>Next
>>>> <http://m.prajavani.net/article/2016_02_28/390604#>
>>>>
>>>> 28 Feb, 2016
>>>>
>>>> ಟಿ.ಆರ್. ಅನಂತರಾಮು
>>>>
>>>>
>>>> <https://www.facebook.com/sharer/sharer.php?u=http%3A%2F%2Fgoo.gl%2FY9wMpb>
>>>> <https://twitter.com/intent/tweet?text=%E0%B2%86%E0%B2%95%E0%B2%BE%E0%B2%B6%E0%B2%B5%E0%B3%87%E0%B2%95%E0%B3%86+%E0%B2%A8%E0%B3%80%E0%B2%B2%E0%B2%BF%E0%B2%AF%E0%B2%BE%E0%B2%97%E0%B2%BF%E0%B2%A6%E0%B3%86%3F+http%3A%2F%2Fgoo.gl%2FY9wMpb>
>>>> <https://plus.google.com/share?url=http%3A%2F%2Fgoo.gl%2FY9wMpb>
>>>> <http://www.pinterest.com/pin/find/?url=http%3A%2F%2Fgoo.gl%2FY9wMpb>
>>>> <http://www.linkedin.com/shareArticle?mini=true&title=%E0%B2%86%E0%B2%95%E0%B2%BE%E0%B2%B6%E0%B2%B5%E0%B3%87%E0%B2%95%E0%B3%86+%E0%B2%A8%E0%B3%80%E0%B2%B2%E0%B2%BF%E0%B2%AF%E0%B2%BE%E0%B2%97%E0%B2%BF%E0%B2%A6%E0%B3%86%3F+&url=http%3A%2F%2Fgoo.gl%2FY9wMpb>
>>>>
>>>> ‘ಆಕಾಶವೇಕೆ ನೀಲಿಯಾಗಿದೆ?’ ಎಂಬುದು ಅಹಮದಾಬಾದಿನ ಸಮುದಾಯ ವಿಜ್ಞಾನ ಕೇಂದ್ರಕ್ಕೆ
>>>> ಅಡಿಪಾಯ ಹಾಕುವ ಸಂದರ್ಭದಲ್ಲಿ (ಡಿಸೆಂಬರ್ 22, 1968) ಅವರು ನೀಡಿದ ಉಪನ್ಯಾಸ.
>>>> ವಿಜ್ಞಾನವನ್ನು ಹೇಗೆ ಸರಳವಾಗಿ, ಪರಿಣಾಮಕಾರಿಯಾಗಿ ಹೇಳಬಹುದು ಎಂಬುದಕ್ಕೆ ಈ ಉಪನ್ಯಾಸ
>>>> ಮಾದರಿಯಾಗಿದೆ. ಮೂಲ ಉಪನ್ಯಾಸದ ಸಾರ ಸಂಗ್ರಹ ಮಾಡಿಕೊಟ್ಟಿದ್ದಾರೆ ಹಿರಿಯ ಲೇಖಕ
>>>> ಟಿ.ಆರ್. ಅನಂತರಾಮು.
>>>> ಎಲ್ಲ ವಿದ್ಯಾರ್ಥಿಗಳೂ ಶಿಕ್ಷಕರೂ ಓದಬೇಕಾದ ಬರಹವಿದು.
>>>>
>>>> ನಾನು ವಿಜ್ಞಾನದ ಯಾವ ವಿಚಾರವಾಗಿ ಉಪನ್ಯಾಸ ಕೊಡಬೇಕು ಎಂಬುದನ್ನು ನನಗೇ ಬಿಟ್ಟಾಗ ನಾನು
>>>> ಆಯ್ಕೆ ಮಾಡಿಕೊಂಡದ್ದು ‘ಆಕಾಶವೇಕೆ ನೀಲಿಯಾಗಿದೆ?’ ಎಂಬ ವಿಷಯ. ನಿಸರ್ಗ ಈ ದಿನ ಕರುಣೆ
>>>> ತೋರಿದೆ; ಆಕಾಶ ನೀಲಿಯಾಗಿದೆ. ಆದರೆ ಎಲ್ಲೆಡೆಯೂ ಅಲ್ಲ. ಬಹಳಷ್ಟು ಭಾಗದಲ್ಲಿ ಮೋಡಗಳಿವೆ. ಈ
>>>> ವಿಷಯ ಆಯ್ಕೆಮಾಡಿಕೊಂಡದ್ದು ಏಕೆ ಎಂದರೆ ಇದನ್ನು ನೋಡಲು ಪ್ರಯೋಗಾಲಯಕ್ಕೇನೂ ಹೋಗಬೇಕಾಗಿಲ್ಲ;
>>>> ತಲೆಯೆತ್ತಿ ಮೇಲೆ ನೋಡಿದರೆ ಸಾಕು. ಅಷ್ಟೇ ಅಲ್ಲ, ಇದರಲ್ಲಿ ವಿಜ್ಞಾನದ ಚೈತನ್ಯವಿದೆ.
>>>>
>>>> ಕಣ್ಣು ಬಿಟ್ಟು, ತೆರೆದ ಕಿವಿಗಳಿಂದ ಆಲಿಸಿ ಸುತ್ತಣ ಜಗತ್ತನ್ನು ನೋಡಿದರೆ ಅದೇ
>>>> ವಿಜ್ಞಾನದ ಕಲಿಕೆ. ನನ್ನ ಮಟ್ಟಿಗೆ ವಿಜ್ಞಾನ ಕೊಟ್ಟಿರುವ ಸ್ಫೂರ್ತಿಯೆಂದರೆ ಪ್ರಕೃತಿಯ
>>>> ಬಗೆಗಿನ ಪ್ರೀತಿ. ನೀವು ಜಗತ್ತನ್ನು ಎಲ್ಲೇ ನೋಡಲಿ, ಪ್ರಕೃತಿಯಲ್ಲಿ ಎಲ್ಲ ಬಗೆಯ
>>>> ಚಮತ್ಕಾರಗಳನ್ನೂ ಕಾಣುತ್ತೀರಿ. ನನಗೆ ಅವು ಸದಾ ಚೋದ್ಯವುಂಟುಮಾಡಿವೆ. ಸಾಮಾನ್ಯವಾಗಿ ಅದೆಲ್ಲ
>>>> ಹಾಗೆಯೇ ಎನ್ನುವ ಮನೋಭಾವ ನಮ್ಮದು. ವೈಜ್ಞಾನಿಕ ಚೈತನ್ಯದ ಹೂರಣವೆಂದರೆ ಹಿಂತಿರುಗಿ
>>>> ನೋಡಬೇಕು, ಮುನ್ನೋಟ ಹರಿಸಬೇಕು. ನಮ್ಮೆದುರಿಗಿರುವುದು ಎಂಥ ಅದ್ಭುತ ಜಗತ್ತು ಎನ್ನುವುದನ್ನು
>>>> ನಮ್ಮ ಒಳಮನಸ್ಸಿಗೆ ತಂದುಕೊಳ್ಳಬೇಕು. ನಾವು ನೋಡುವುದೆಲ್ಲ ಬರಿ
>>>> ವಿಸ್ಮಯಕಾರಿಯಾಗಿರುವುದಿಲ್ಲ, ಬದಲು ಮನುಷ್ಯನಿಗೆ ಸವಾಲೆಸೆಯುತ್ತವೆ. ನಮ್ಮ ಸುತ್ತ
>>>> ಆವರಿಸಿರುವ ದೊಡ್ಡ ನಿಗೂಢವನ್ನು ಬೆದಕಲು ಪ್ರೇರೇಪಿಸುತ್ತವೆ.
>>>>
>>>> ಇಂಥ ಸವಾಲನ್ನು ‘ವಿಜ್ಞಾನ ಸಮುದಾಯ’ ಸವಾಲೆಂದೇ ಸ್ವೀಕರಿಸುತ್ತದೆ, ಪರಿಹಾರ ಹುಡುಕಲು
>>>> ಪ್ರಯತ್ನಿಸುತ್ತದೆ. ಡಾ. ವಿಕ್ರಂ ಸಾರಾಭಾಯಿ ಅವರು ಈಗಾಗಲೇ ನುಡಿದಂತೆ– ನಮ್ಮ ದೇಶದ ಯುವ
>>>> ಜನಾಂಗ ಇಂಥ ಸವಾಲನ್ನು ಸ್ವೀಕರಿಸಲು ಯಾವ ರೀತಿಯಲ್ಲಿ ಸಿದ್ಧವಾಗಿದೆ? ಅವರನ್ನು
>>>> ಎಚ್ಚರಿಸುವುದು ಹೇಗೆ? ಮತ್ತೆ ಭಾರತವನ್ನು ಜ್ಞಾನಕೇಂದ್ರವಾಗಿ ಬೆಳಗಬೇಕಲ್ಲ! ಈಗ ಮೊದಲು
>>>> ಎತ್ತಿದ ಪ್ರಶ್ನೆಗೆ ಮರಳುತ್ತೇನೆ.
>>>>
>>>> ಆಕಾಶವೇಕೆ ನೀಲಿಯಾಗಿದೆ? ಕುತೂಹಲಕಾರಿ ಅಂಶವೆಂದರೆ ಈ ಪ್ರಶ್ನೆಗೆ ಉಡಾಫೆಯ ಉತ್ತರ
>>>> ಕೊಡುವುದು ಸುಲಭ. ಬೇಕಾದರೆ ‘ಎಲೆಗಳೇಕೆ ಹಸಿರಾಗಿವೆ?’ ಎಂದು ಸಸ್ಯ ವಿಜ್ಞಾನಿಯನ್ನು ಕೇಳಿ,
>>>> ಆತ ಗೊಣಗುತ್ತ ‘ಕ್ಲೋರೋಫಿಲ್‌ನಿಂದ’ ಎಂಬ ಚುಟಕು ಉತ್ತರಕೊಟ್ಟು ತೆಪ್ಪಗಾಗುತ್ತಾನೆ. ಎಲ್ಲ
>>>> ವೈಜ್ಞಾನಿಕ ಪ್ರಶ್ನೆಗಳಿಗೂ ಇದೇ ಧಾಟಿಯಲ್ಲಿ ಎರಡು ಮೂರು ಪದಗಳಲ್ಲಿ ಉತ್ತರಕೊಟ್ಟು ಕೈ
>>>> ತೊಳೆದುಕೊಳ್ಳುವುದಕ್ಕೆ ಆಗುವುದಿಲ್ಲ. ಇಂಥ ಉತ್ತರದಿಂದ ಪರೀಕ್ಷೆಯಲ್ಲಿ ಪಾಸಾಗಬಹುದು ನಿಜ.
>>>> ಆದರೆ ಅದು ಸಮರ್ಪಕ ಉತ್ತರ ಅಲ್ಲ.ನಿಸರ್ಗ ಎಸೆಯುವ ವೈಜ್ಞಾನಿಕ ಸವಾಲೆಂದರೆ ಅದಕ್ಕೆ
>>>> ಉತ್ತರವಾಗಿ ಬರಿ ಆವಿಷ್ಕಾರ ಮಾಡುವುದಲ್ಲ, ಮತ್ತೆ ಮತ್ತೆ ಸುದೀರ್ಘವಾಗಿ ಚಿಂತನೆ
>>>> ಮಾಡುತ್ತಿರುವುದು, ನಿಗೂಢವನ್ನು ಒಡೆಯಲು ಗಾಢವಾಗಿ ತೊಡಗುವುದು.
>>>>
>>>> ‘ಆಕಾಶವೇಕೆ ನೀಲಿ’ ಎಂಬುದು ಕುತೂಹಲಕರ ಪ್ರಶ್ನೆ. ಇದರಲ್ಲಿ ಎರಡು ಅಂಶಗಳಿವೆ. ಅಲ್ಲಿ
>>>> ಆಕಾಶವಿದೆ– ಇಲ್ಲಿ ನಾನಿದ್ದೇನೆ. ನನಗೆ ಅದು ಕಾಣುವುದು ನೀಲಿಯಾಗಿ. ಮನುಷ್ಯನ ಮಿದುಳು
>>>> ಮತ್ತು ಮನಸ್ಸು ಎರಡರ ಪಾತ್ರವೂ ಇದರಲ್ಲಿದೆ. ಹಿಂದೆ ಯಾರೂ ತಲೆ ಕೆಡಿಸಿಕೊಂಡಿರದ ಪ್ರಶ್ನೆ
>>>> ಇದೆಂದು ಭಾವಿಸಿ, ನಿಮಗೆ ನೀವೇ ಈ ಪ್ರಶ್ನೆ ಹಾಕಿಕೊಳ್ಳಿ. ಆಗ ಅದೊಂದು ಭಾವೋದ್ರೇಕಗೊಳಿಸುವ
>>>> ಪ್ರಶ್ನೆ ಎಂದು ನಿಮಗೆ ಅನ್ನಿಸುತ್ತದೆ. ಅದಕ್ಕೆ ಸ್ವತಃ ನೀವೇ ಉತ್ತರಿಸಬಹುದೇ ನೋಡಿ.
>>>>
>>>> ನಿರಭ್ರ ರಾತ್ರಿಯಲ್ಲಿ ನಕ್ಷತ್ರಗಳು ಮಿನುಗುವುದನ್ನು ಕಾಣುತ್ತೇವೆ. ಹಾಗಿದ್ದಲ್ಲಿ,
>>>> ಹಗಲು ಹೊತ್ತಿನಲ್ಲೇಕೆ ಮಿನುಗುವುದು ಕಾಣುವುದಿಲ್ಲ? ಪ್ರಶ್ನಿಸಿಕೊಳ್ಳಿ. ಉತ್ತರ ಕಂಡ ಹಾಗೇ
>>>> ಇದೆ. ಭೂದೇವಿ ಪರದೆಯ ಹಿಂದೆ ಬಚ್ಚಿಟ್ಟುಕೊಂಡಿದ್ದಾಳೆ. ಈ ಪರದೆ ಬೇರೆ ಯಾವುದೂ ಅಲ್ಲ,
>>>> ವಾಯುಗೋಳ. ತಿಳಿರಾತ್ರಿಯಲ್ಲಿ ನಾವು ಕ್ಷೀಣವಾಗಿ ಕಾಣುವ ನಕ್ಷತ್ರವನ್ನು, ಕ್ಷೀರಪಥವನ್ನು
>>>> ಅದೇ ವಾಯುಗೋಳದಲ್ಲಿ ಕಾಣುತ್ತೇವಲ್ಲ. ಆಕಾಶ ನಿಜಕ್ಕೂ ನೀಲಿ ಆಗಿರಬೇಕೆಂದರೆ ಅಲ್ಲಿ
>>>> ಮೋಡಗಳಿರಬಾರದು, ದೂಳಿನ ಕಣಗಳು ಇರಬಾರದು.
>>>>
>>>> ವಾಯುಗೋಳದ ಸ್ಥಿತಿ ಆಧರಿಸಿ, ಕೆಲವೊಮ್ಮೆ ಆಕಾಶ ನೀಲಿಯಾಗಿ ಕಾಣುತ್ತದೆ, ಕೆಲವೊಮ್ಮೆ
>>>> ನೀಲಿ ಇರುವುದಿಲ್ಲ. ನೋಡಿದ ಮಾತ್ರಕ್ಕೇ ಇದನ್ನು ಹೇಳಬಹುದು. ಆಕಾಶ ಮತ್ತು ವಾಯುಗೋಳ ಸೂರ್ಯನ
>>>> ಬೆಳಕಿನಲ್ಲಿ ಝಗಮಗಿಸುತ್ತವೆ. ಬೆಳಕು ವಾಯುವಿನಿಂದ ಕೂಡಿರುವ ದಟ್ಟ ವಾಯುಗೋಳದ ಪದರದ ಮೂಲಕವೇ
>>>> ಹಾಯ್ದುಬರಬೇಕು. ಕೆಲವೊಮ್ಮೆ ಅದು ಪಾರದರ್ಶಕ, ಇರುಳಿನಲ್ಲಿ ಗೋಚರಿಸುವುದಿಲ್ಲ. ಎಂದಾದರೂ
>>>> ಪೂರ್ಣ ಚಂದ್ರ ಇರುವ ರಾತ್ರಿಯನ್ನು ಕುತೂಹಲಕಾರಿಯಾಗಿ ನೀವು ಗಮನಿಸಿದ್ದೀರಾ? ಚಂದ್ರನ ಮೇಲೆ
>>>> ಸೂರ್ಯನ ಬೆಳಕು ವಿಸರಣವಾದರೆ (ಡಿಫ್ಯೂಸ್) ಅಥವಾ ಪ್ರತಿಫಲಿಸಿದರೆ ಅದೇ ನಾವು ಕಾಣುವ
>>>> ಬೆಳದಿಂಗಳು.
>>>>
>>>> ಬೆಳದಿಂಗಳ ರಾತ್ರಿಯಲ್ಲಿ ಆಕಾಶವೇನೂ ನೀಲಿಯಾಗಿರುವುದಿಲ್ಲ. ಪೇಲವ ಬಣ್ಣ, ಸ್ವಲ್ಪ
>>>> ಬೆಳಕಿರುತ್ತದೆ. ಪೂರ್ಣಚಂದ್ರನ ರಾತ್ರಿಯಲ್ಲೂ ಮಿನುಗುವ ನಕ್ಷತ್ರಗಳನ್ನು ನೋಡಬಹುದು.
>>>> ಹಗಲಿನಲ್ಲಿ ಪ್ರಕಾಶವಿದ್ದಾಗ, ಆಕಾಶ ನೀಲಿಯಾಗಿ ಕಾಣುತ್ತದೆ, ಬೆಳದಿಂಗಳ ದಿನಗಳಲ್ಲಿ
>>>> ಏಕಿಲ್ಲ? ಕಾರಣವಿಷ್ಟೇ, ಬೆಳದಿಂಗಳು ಶಕ್ತಿಯುತವಾದದ್ದಲ್ಲ. ಇದನ್ನು ಅರ್ಥಮಾಡಿಕೊಳ್ಳಲು
>>>> ನೀವು ದೊಡ್ಡ ಗಣಿತ ವಿಶಾರದರಾಗಬೇಕಾಗಿಲ್ಲ. ಯಾರಾದರೂ ಉತ್ಸಾಹಿ ತರುಣರು ಲೆಕ್ಕಹಾಕಬಹುದು.
>>>> ಬೆಳದಿಂಗಳ ಬೆಳಕೆಂದರೆ ಸೂರ್ಯನ ಪ್ರಜ್ವಲತೆಯ ದಶಲಕ್ಷದ ಒಂದು ಭಾಗ. ಅಬ್ಬಬ್ಬಾ, ಅಷ್ಟು
>>>> ಕಡಿಮೆಯೇ ಎಂದು ನೀವು ಉದ್ಗಾರ ತೆಗೆಯಬಹುದು.
>>>>
>>>> ಆದರೂ ಬೆಳದಿಂಗಳು ಉಜ್ವಲವಾಗಿಯೇ ಕಾಣುತ್ತದೆ. ಎಲ್ಲ ತಾರೆಗಳನ್ನು ಅದು
>>>> ಮಸುಕುಗೊಳಿಸುವಷ್ಟಲ್ಲ, ಆಕಾಶವಂತೂ ಆಗ ನೀಲಿಯಾಗಿರುವುದಿಲ್ಲ. ಮನುಷ್ಯನ ದೃಷ್ಟಿ ಇಲ್ಲಿ
>>>> ಕೆಲಸ ಮಾಡುತ್ತದೆ. ಬಣ್ಣ ನಿಚ್ಚಳವಾಗಿ ನಮಗೆ ಕಾಣಬೇಕೆಂದರೆ ದೀಪ್ತಿ ಹೆಚ್ಚಿನ
>>>> ಮಟ್ಟದಲ್ಲಿರಬೇಕು. ಆಕಾಶ ನೀಲಿಯಾಗಿ ಕಾಣುತ್ತದೆ ಏಕೆಂದರೆ ಸೂರ್ಯನ ಬೆಳಕು ಹೆಚ್ಚು ಪ್ರಖರ.
>>>> ಬೆಳದಿಂಗಳ ಬೆಳಕು ಅಷ್ಟು ತೀಕ್ಷ್ಣವಲ್ಲ. ನಮ್ಮ ಮಿದುಳು ಈ ಬಣ್ಣವನ್ನು ಗ್ರಹಿಸದು. ಬೆಳಕಿನ
>>>> ಪ್ರಖರತೆ ಕಡಿಮೆಯಾದಷ್ಟೂ ನಾವು ಬಣ್ಣವನ್ನು ಗ್ರಹಿಸುವುದು ಕಷ್ಟವಾಗಿ ಕೊನೆಗೆ ಶೂನ್ಯವನ್ನು
>>>> ಕಾಣುತ್ತೇವೆ.
>>>>
>>>> ಒಂದು ಪುಟ್ಟ ದೂರದರ್ಶಕವನ್ನು ಬಳಸಿ ನಕ್ಷತ್ರಗಳನ್ನೋ ಅಥವಾ ‘ಮಹಾವ್ಯಾಧ’
>>>> ನೀಹಾರಿಕೆಯನ್ನೋ ವೀಕ್ಷಿಸಿ. ನಾನು ಮತ್ತೆ ಮತ್ತೆ ಹೇಳುವುದಿಷ್ಟು. ಖಗೋಳವಿಜ್ಞಾನದಂತಹ
>>>> ಭವ್ಯವಿಜ್ಞಾನ ಬೇರೊಂದಿಲ್ಲ. ಮನಸ್ಸನ್ನು ಪುಟಿಸುತ್ತದೆ. ಎಷ್ಟು ಮಂದಿ ಮೇಲುಸ್ತರದವರು
>>>> ದೂರದರ್ಶಕ ಬಳಸಿದ್ದಾರೋ ತಿಳಿಯದು. ಅಂತಹವರಿಗೆ ಹೇಳುವುದಿಷ್ಟು. ಒಂದು ಜೊತೆ ಬೈನಾಕ್ಯುಲರ್
>>>> ಬಳಸಿ ಆಕಾಶವನ್ನು ವೀಕ್ಷಿಸಿ. ಅದು ನಿಮ್ಮ ಅಧ್ಯಯನಕ್ಕೆ ನೆಲೆಯಾಗುತ್ತದೆ. ಬೈನಾಕ್ಯುಲರ್
>>>> ಬಳಸದ ವಿದ್ಯಾವಂತರನ್ನು ನಾನು ಒಪ್ಪಲಾರೆ. ನಾವು ಬಾಳುತ್ತಿರುವ ವಿಶ್ವದ ಅತ್ಯದ್ಭುತದಿಂದ
>>>> ಅಂತಹವರು ವಂಚಿತರಾಗುತ್ತಾರೆ.
>>>>
>>>> ಆಗಸದ ಸ್ವಲ್ಪ ಭಾಗವನ್ನು ವೀಕ್ಷಿಸಿದರೂ ಸಾಕು, ಸಂತೋಷದ ಔನ್ನತ್ಯಕ್ಕೆ ಅದು ನಮ್ಮನ್ನು
>>>> ಒಯ್ಯುತ್ತದೆ. ಈಗ ಒಂದು ಕಠಿಣ ಪ್ರಶ್ನೆ ಹಾಕುತ್ತೇನೆ. ಏಕೆ ಬೆಳಕು ಪ್ರಖರವಾಗಿದ್ದಾಗ ಮಾತ್ರ
>>>> ಆಕಾಶ ನೀಲಿಯಾಗಿ ಕಾಣುತ್ತದೆ? ಬಿಳಿ ಬೆಳಕಿನಲ್ಲಿ ರೋಹಿತದ (spectrum) ಎಲ್ಲ ಬೆಳಕೂ
>>>> ಅಡಕವಾಗಿರುತ್ತದೆ. ಬಣ್ಣವನ್ನು ಪ್ರತ್ಯೇಕಿಸುತ್ತ ಹೋಗಿ, ಗಾಢ ಕೆಂಪಿನಿಂದ ನೇರಿಳೆಯವರೆಗೆ
>>>> ಅದರ ವ್ಯಾಪ್ತಿ ಉಂಟು. ಆಕಾಶ ನೋಡಿದಾಗ ನನಗೆ ಬರಿ ನೀಲಿ ಬಣ್ಣ ಮಾತ್ರ ಏಕೆ ಕಾಣಬೇಕು?
>>>> ರೋಹಿತದ ಉಳಿದ ಬಣ್ಣಗಳೇನಾದವು? ಇದು ಅತ್ಯಂತ ಮೂಲ ಪ್ರಶ್ನೆ. ರೋಹಿತದಲ್ಲಿ ಎಲ್ಲಕ್ಕಿಂತ
>>>> ಕಡಿಮೆ ತೀವ್ರತೆಯದೆಂದರೆ ಅದು ನೀಲಿ.
>>>> ಬೆಳಕಿನ ಉಜ್ವಲತೆಯ ೪೦ರಲ್ಲಿ ಒಂದು ಭಾಗದಷ್ಟು. ನೀಲಿ ಆಕಾಶದಲ್ಲಿ ಉಳಿದ ಬಣ್ಣಗಳನ್ನು
>>>> ತುಸು ಶ್ರಮದಿಂದಲೇ ಗುರುತಿಸಬೇಕಾಗುತ್ತದೆ.
>>>>
>>>> ಇದರರ್ಥ ರೋಹಿತದ ಉಳಿದ ಬಣ್ಣಗಳನ್ನು ನೀಲಿ ಮಸುಕುಗೊಳಿಸುತ್ತದೆ. ನೀಲಿ ಆಕಾಶ, ಅದರ
>>>> ಮಧ್ಯೆ ತೇಲುವ ಕುಂತಲ ಮೋಡಗಳು (ಕ್ಯುಮುಲಸ್) ಎಂಥ ಮನಮೋಹಕ ದೃಶ್ಯ ನೀಡುತ್ತವೆ. ಅದರಲ್ಲೂ
>>>> ಮೋಡಗಳು ಚಲಿಸುತ್ತಿದ್ದರೆ ಆಕಾಶ ಇನ್ನಷ್ಟು ನೀಲಿಯಾಗಿ ಕಾಣುತ್ತದೆ. ನಾನು ಎಷ್ಟೋ ಕಾಲ
>>>> ತನ್ಮಯನಾಗಿ ವೀಕ್ಷಣೆ ಮಾಡಿ ಆನಂದಿಸಿದ್ದೇನೆ. ವಿಚಾರವೇನೆಂದರೆ ಈ ಕುಂತಲ ಮೋಡಗಳು
>>>> ಹುಟ್ಟುವಾಗ ಸುತ್ತಲಿನ ದೂಳನ್ನೆಲ್ಲ ಬಾಚಿಕೊಳ್ಳುತ್ತವೆ.
>>>>
>>>> ಇದೆಲ್ಲ ಸರ್ವಸಾಮಾನ್ಯ ಎಂದು ನೀವು ಅಂದುಕೊಂಡರೆ ಇವೆಲ್ಲ ನಿಮ್ಮ ಗಮನಕ್ಕೆ ಬರದೇ
>>>> ಹೋಗಬಹುದು. ಅದು ಸರಿ, ಸ್ವಚ್ಛತೆಯಾಗುವುದು ಹೇಗೆ? ಕೆಲವೊಮ್ಮೆ ನಾನು ತರುಣರನ್ನು ‘ಮೋಡ
>>>> ಎಂದರೆ ಏನು’ ಎಂದು ಕೇಳುತ್ತೇನೆ. ‘ಅದಾ ಸರ್, ಅದು ಹಬೆಯ ಸಾಂದ್ರೀಕರಣ’ ಎಂದುಬಿಡುತ್ತಾರೆ.
>>>>
>>>> ನಿಜವಾಗಲೂ ಅಂಥದ್ದು ಏನೂ ಇಲ್ಲ. ಮೋಡವೆಂದರೆ ಕಣಗಳ ದೊಡ್ಡ ರಾಶಿ. ಬಿಳಿ ಮೋಡವೆಂದರೆ
>>>> ನೀರ ಹನಿಗಳ ಸಂಗ್ರಹ. ನೀರು ಭಾರ ತಾನೆ? ಹಾಗಿದ್ದರೆ ಮೋಡಗಳು ಏಕೆ ಕುಸಿದುಬೀಳುವುದಿಲ್ಲ? ಈ
>>>> ಪ್ರಶ್ನೆ ಎತ್ತಿಕೊಂಡರೆ ಅದು ನಮ್ಮನ್ನು ಇನ್ನೆಲ್ಲಿಗೋ ಒಯ್ಯುತ್ತದೆ. ಇಷ್ಟಂತೂ ನಿಜ. ಕಣಗಳು
>>>> ಇರಲೇಬೇಕು ಬೀಜದಂತೆ. ಅದರ ಸುತ್ತ ಮೋಡ ಕಟ್ಟುತ್ತದೆ. ದೂಳು ಕಣಗಳು ಇಲ್ಲವೆಂದಾಗ ವಾಯುಗೋಳ
>>>> ಸ್ವಚ್ಛವಾಗುತ್ತದೆ, ಅಂದರೆ ಆಕಾಶ ನೀಲಿಯಾಗುತ್ತದೆ.
>>>>
>>>> ಸೂರ್ಯನ ಬೆಳಕಿನ ಒಂದು ಭಾಗ ನೀಲಿ. ಹಾಗಾದರೆ ಉಳಿದ ಭಾಗ ಏನಾಯಿತು? ಇದನ್ನು
>>>> ಅರ್ಥಮಾಡಿಕೊಳ್ಳಲು ಉದಾಹರಣೆಯೊಂದನ್ನು ಪರಿಗಣಿಸಬೇಕಾಗುತ್ತದೆ. ಬಿಳಿಮೋಡ ಮತ್ತು ನೀಲಿ
>>>> ಆಕಾಶವನ್ನು, ಪಾಕೆಟ್ಟಿನಲ್ಲಿಡಬಹುದಾದ ರೋಹಿತ ದರ್ಶನದ (ಸ್ಪೆಕ್ರ್ಟೋಸ್ಕೋಪ್) ಮೂಲಕ
>>>> ಗಮನಿಸಿ, ತೋರಿಕೆಗೆ ಅಂಥ ವ್ಯತ್ಯಾಸವೇನೂ ಕಾಣದು. ಈಗ ನೀಲಿ ಆಕಾಶದ ಬಗ್ಗೆ– ರೋಹಿತದಲ್ಲಿ
>>>> ನೀಲಿಗಿಂತಲೂ ಹತ್ತುಪಟ್ಟು ಹೆಚ್ಚು ಉಜ್ವಲವಾಗಿ ಕಾಣುವುದು ಹಸುರು, ಹಳದಿ ಮತ್ತು ಕೆಂಪು.
>>>> ಆದರೂ ಆಕಾಶ ಏಕೆ ನೀಲಿಯಾಗಿ ಕಾಣಬೇಕು? ಕೆಲವು ನಿರ್ದಿಷ್ಟ ಸ್ಥಿತಿಯಲ್ಲಿ ರೋಹಿತದ ನೀಲಿ
>>>> ದುರ್ಬಲವಾಗಿರುತ್ತದೆ, ಅದು ಇರಬೇಕಾದ ತೀವ್ರತೆಗಿಂತ ಹೆಚ್ಚು ತೀವ್ರವಾಗಿರುತ್ತದೆ.
>>>>
>>>> ಇದು ಸಾಧ್ಯವಾಗುವುದು ಚದರಿಕೆಯಿಂದಾಗಿ. ನೀಲಿಯ ತರಂಗಾಂತರ ಉಳಿದ ಬಣ್ಣಗಳಿಗಿಂತ ಕಡಿಮೆ.
>>>> ಹೀಗಾಗಿ ಅದು ಹೆಚ್ಚು ಚದುರುತ್ತದೆ. ನಮ್ಮ ಕಣ್ಣು ನೀಲಿ ಬಣ್ಣವನ್ನು ಸುಲಭವಾಗಿ
>>>> ಗ್ರಹಿಸುವಂತೆ ರೂಪಿತವಾಗಿದೆ.
>>>>
>>>> ಈಗ ಇನ್ನೊಂದು ಪ್ರಶ್ನೆ. ವಾಯುಗೋಳದಲ್ಲಿ ಗಾಳಿಯ ಅನಿಲಗಳೇಕೆ ಬೆಳಕನ್ನು ಚದರಿಸಬೇಕು.
>>>> ರೋಹಿತದಲ್ಲಿನ ಕೆಂಪು, ಹಳದಿ ಮತ್ತು ಹಸುರುಗಳ ಅಲೆಯುದ್ದ ಹೆಚ್ಚು. ಹಾಗಾಗಿ ಅವು
>>>> ಚದರುವುದಿಲ್ಲ. ಇದನ್ನು ಒಂದು ಉದಾಹರಣೆಯಿಂದ ಅರ್ಥಮಾಡಿಕೊಳ್ಳಬಹುದು. ವಾಯುಗೋಳದಲ್ಲಿನ
>>>> ಅಣುಗಳ ಗಾತ್ರ ತುಂಬ ಚಿಕ್ಕದು. ಒಂದು ದೊಡ್ಡ ಕೊಳ ನೋಡುತ್ತಿದ್ದೀರಿ ಎನ್ನೋಣ. ಅದರಲ್ಲಿ
>>>> ಒಂದು ಬಿರುಡೆ ತೇಲುತ್ತಿದೆ ಎನ್ನೋಣ.
>>>>
>>>> ಗಾಳಿ ಬೀಸಿದಾಗ ಆ ಬಿರುಡೆ ಅಲೆಯ ಹೊಡೆತಕ್ಕೆ ಅಲುಗಾಡುತ್ತದೆ. ಏಕೆಂದರೆ ಬಿರುಡೆ ಮತ್ತು
>>>> ಅಲೆಗಳ ಗಾತ್ರವನ್ನು ಹೋಲಿಸಬಹುದು. ಇದರ ಬದಲು ಅದೇ ಕೊಳದಲ್ಲಿ ದೊಡ್ಡ ದೋಣಿಯೊಂದು
>>>> ಸಾಗುತ್ತಿದೆ ಎನ್ನಿ. ಆಗ ಅವೇ ಅಲೆಗಳು ಅದನ್ನು ಅಲುಗಾಡಿಸುವುದಿಲ್ಲ. ಇದರ ಅರ್ಥವಿಷ್ಟು.
>>>> ಅಲೆಯ ಗಾತ್ರ ಮತ್ತು ವಸ್ತುವಿನ ಗಾತ್ರ ಇಲ್ಲಿ ಮುಖ್ಯವಾಗುತ್ತದೆ. ಕಡಿಮೆ ಅಲೆಯುದ್ದದವು ಬೇಗ
>>>> ಚದರುತ್ತವೆ ಎಂಬುದಕ್ಕೆ ಇದೊಂದು ಹೋಲಿಕೆ ಅಷ್ಟೇ. ನಿಜವಾದ ಗಾಢ ನೀಲಿ ಆಕಾಶವನ್ನು
>>>> ನೋಡಬೇಕೆಂದರೆ ಅಣುಗಳ ಗಾತ್ರ ಅತಿ ಚಿಕ್ಕದಾಗಿರಬೇಕು. ಆಗ ಹೆಚ್ಚು ಚದರಿಕೆಯಾಗುತ್ತದೆ.
>>>> ಇದಕ್ಕಿಂತಲೂ ಮುಖ್ಯ ಬೆಳಕಿನ ಪ್ರಖರತೆ ಕೂಡ ಹೆಚ್ಚಾಗಿರಬೇಕು. ವಾಸ್ತವವಾಗಿ ಆಕಾಶವೇಕೆ
>>>> ನೀಲಿಯಾಗಿರುತ್ತದೆ ಎಂಬುದಕ್ಕೆ ಮೊದಲು ಸಮರ್ಪಕವಾದ ವೈಜ್ಞಾನಿಕ ಉತ್ತರವನ್ನು ಕೊಟ್ಟವನು
>>>> ಲಾರ್ಡ್ ರ್‍್ಯಾಲಿ.
>>>>
>>>> ಕನಸುಗಳಿರಬೇಕು. ಅವು ನನಸಾಗುತ್ತವೋ ಇಲ್ಲವೋ ಅದು ಬೇರೆ ಮಾತು. ಅವನ್ನು
>>>> ನಿರೀಕ್ಷಿಸಬಹುದಲ್ಲ. ನಾನು ನಾಳೆ ಏನೋ ಒಂದನ್ನು ಆವಿಷ್ಕರಿಸುತ್ತೇನೆ, ಅದನ್ನು ಬೆಂಬತ್ತಿದ
>>>> ವ್ಯಕ್ತಿ ಹೊಸತಾಗಿ ಇನ್ನೇನನ್ನಾದರೂ ಆವಿಸ್ಕರಿಸುತ್ತಾನೋ ಇಲ್ಲವೋ ಶ್ರಮವನ್ನಂತೂ
>>>> ಪಡುತ್ತಾನೆ. ಇದನ್ನು ಮತ್ತೆ ಹೇಳುತ್ತೇನೆ. ವಿಜ್ಞಾನ ಮುಖ್ಯವಾಗಿ ಮನುಷ್ಯನ ಆಂತರ್ಯದ
>>>> ಚೈತನ್ಯ. ಕವಿ ಮಾಡುವುದೇನು? ಕಲಾವಿದ ಮಾಡುವುದೇನು? ಮಹಾಶಿಲ್ಪಿ ಮಾಡುವುದೇನು? ಶಿಲ್ಪಿ
>>>> ದೊಡ್ಡ ಅಮೃತಶಿಲೆಯ ತುಂಡನ್ನು ಆಯ್ದುಕೊಳ್ಳುತ್ತಾನೆ, ಕೆತ್ತುತ್ತಾ ಹೋಗುತ್ತಾನೆ.
>>>>
>>>> ಅಂತಿಮವಾಗಿ ಮೂರ್ತಿ ಸಿದ್ಧವಾದಾಗ ಅವನ ಕನಸು ನನಸಾಗುತ್ತದೆ. ಅದೆಷ್ಟು ಶ್ರಮ ಅದಕ್ಕಾಗಿ
>>>> ಹಾಕಿರುತ್ತಾನೆನ್ನುವುದನ್ನು ನಾವು ಮರೆಯಬಾರದು. ಇದನ್ನು ಮಾಡೇ ಮಾಡುತ್ತೇನೆ ಎಂಬ
>>>> ಭರವಸೆಯಿಂದ ತಾನೆ ಅವನು ಶ್ರಮಹಾಕುವುದು? ವಿಜ್ಞಾನ ಕ್ಷೇತ್ರದಲ್ಲೂ ಅಷ್ಟೇ. ಇಲ್ಲಿ ಜ್ಞಾನದ
>>>> ಅನ್ವೇಷಣೆಯೇ ಗುರಿ. ಸಾಧಿಸಬೇಕೆಂಬ ಛಲವಿಲ್ಲದಿದ್ದರೆ ಅವನು ವಿಜ್ಞಾನಿಯಾಗಲಾರ. ಯಾವುದೋ
>>>> ಇಲಾಖೆಯಲ್ಲಿ ಕೆಲಸ ಸಿಗುತ್ತದೆ, ತಿಂಗಳ ಪಗಾರ ಸಿಗುತ್ತದೆ. ಆದರೆ ಅದು ವಿಜ್ಞಾನವಲ್ಲ.
>>>> ವಾಸ್ತವವಾಗಿ ಆಕಾಶವೇಕೆ ನೀಲಿ ಎಂಬುದನ್ನು ಕುರಿತು ನಾನು ಮಾತನಾಡಿದೆನಾದರೂ ಅದು ನನ್ನ
>>>> ನಿಜವಾದ ಉದ್ದೇಶವಾಗಿರಲಿಲ್ಲ.
>>>>
>>>> ವಿಜ್ಞಾನದ ಚೈತನ್ಯ ಸ್ವರೂಪವನ್ನು ನಿಮಗೆ ತಿಳಿಸುವುದು ನನ್ನ ಮುಖ್ಯ ಉದ್ದೇಶವಾಗಿತ್ತು.
>>>> ವಿಜ್ಞಾನದಲ್ಲಿ ಈ ದೇಶದಲ್ಲಿ ನಾವು ಹೇಗೆ ಮುಂದುವರಿಯಬೇಕು, ನಮ್ಮ ಹಿಂದಿನವರ ಸಮಸಮಕ್ಕೆ
>>>> ಬರಲು ನಾವು ಮಾಡಬೇಕಾದ್ದೇನು? ಅದು ನನ್ನ ಉಪನ್ಯಾಸದ ಆಂತರ್ಯ. ಬೆಳಕು ಅಣುಗಳೊಂದಿಗೆ
>>>> ವರ್ತಿಸುವುದು ಹೇಗೆ? ಅಣುಗಳಿಗೆ ಏನಾಗುತ್ತದೆ? ಅಣುಗಳೆಂದರೆ ಏನು? ಇವು ನಿಖರವಾಗಿ
>>>> ಚರ್ಚಿಸಬೇಕಾದ ವಿಚಾರ. ವಿಜ್ಞಾನ ಇಲ್ಲಿಗೇ ಸ್ಥಗಿತವಾಗುವುದಿಲ್ಲ.
>>>>
>>>> ಬೆದಕಿದಷ್ಟೂ ಇನ್ನೂ ಬೆಂಬತ್ತಿಹೋಗುವಂತೆ ಪ್ರೇರೇಪಿಸುತ್ತದೆ. ವಿಜ್ಞಾನದ ಆಕರ್ಷಣೆ
>>>> ಇರುವುದೇ ಇಲ್ಲಿ. ಇತರರೊಡನೆ ನೀವು ಎಂದೂ ಹೋಲಿಸಿಕೊಳ್ಳಬಾರದು. ಹೊಸ ಪ್ರಶ್ನೆಗಳು
>>>> ಹುಟ್ಟುತ್ತವೆ, ಅವಕ್ಕೆ ಹೊಸ ಉತ್ತರಗಳೂ ಬರಬೇಕು.
>>>>
>>>> ನನ್ನ ಉಪನ್ಯಾಸದಲ್ಲಿ ಪ್ರಸ್ತಾಪಿಸಿದ ಅಂಶಗಳು ಪವನವಿಜ್ಞಾನಕ್ಕೆ (ಮೀಟಿಯೊರಾಲಜಿ)
>>>> ಸಂಬಂಧಿಸಿವೆ ಎಂಬ ವಿಚಾರವನ್ನು ಹೇಳದೆ ಮುಂದುವರಿಯಲು ಆಗುವುದಿಲ್ಲ. ಆದರೆ ನನ್ನ ನಿಜವಾದ
>>>> ಆಸಕ್ತಿ ಪವನವಿಜ್ಞಾನವೂ ಅಲ್ಲ, ಅದು ಬೆಳಕಿನ ಚದರಿಕೆಯ ಬಗ್ಗೆ. ಗಾಳಿಯಲ್ಲಿ ಅಣುಗಳ ಅಂತಿಮ
>>>> ಸ್ವಭಾವ ಕುರಿತು. ಇದು ಇಂದಿನ ಸಂದರ್ಭದಲ್ಲಿ ನಮಗೆ ಸಿಕ್ಕಿರುವ ಪ್ರಬಲ ಅಸ್ತ್ರ. ಅಣುಗಳನ್ನು
>>>> ನೀವು ಎಣಿಸಬಹುದು. ಪ್ರಯೋಗಾಲಯದಲ್ಲಿ ಪರೀಕ್ಷಿಸಬಹುದು. ಪ್ರತಿ ವಿದ್ಯಾರ್ಥಿಯೂ ಈ
>>>> ಪ್ರಯೋಗವನ್ನು ನೋಡಿರಲೇಬೇಕು. ಒಂದು ಬಾಟಲಿಯನ್ನೋ ಅಥವಾ ಪ್ಲಾಸ್ಕನ್ನೋ ತೆಗೆದುಕೊಳ್ಳಿ.
>>>> ಅದಕ್ಕೆ ಬಿರುಡೆ ಇರಲಿ.
>>>>
>>>> ಅದರಲ್ಲಿರುವ ದೂಳನ್ನೆಲ್ಲ ಕೊಡವಿಬಿಡಿ. ಅದರ ಆಳಕ್ಕೆ ಬೆಳಕಿನ ದಂಡ ಬೀಳುವಂತೆ ಮಾಡಿ.
>>>> ಅದು ಗಾಳಿಯನ್ನು ತೂರಿಹೋಗುವಂತಿರಬೇಕು. ಗಾಳಿಯನ್ನು ನೀವು ಕಾಣಬಹುದು. ಗಾಳಿಯೇನೂ
>>>> ಪಾರದರ್ಶಕ, ನಿರ್ವರ್ಣದ ಅನಿಲವಲ್ಲ. ಕಾಣದೆ ಇರುವಂಥದ್ದೂ ಅಲ್ಲ. ಬೆಳಕಿನ ಚದರಿಕೆಯಿಂದ ಗಾಳಿ
>>>> ಕಾಣುವಂತಾಗುತ್ತದೆ. ಈ ಸರಳ ಪ್ರಯೋಗವನ್ನು ವಿದ್ಯಾರ್ಥಿಗಳು ತಮ್ಮ ಜೀವಮಾನದಲ್ಲಿ
>>>> ಒಮ್ಮೆಯಾದರೂ ನೋಡಿರಬೇಕು. ಯಾವ ಅನಿಲವಾದರೂ ಸರಿ, ಬಾಷ್ಪವಾದರೂ ಸರಿ, ಕಣಗಳಿಂದ ಬೆಳಕು ಯಾವ
>>>> ಮಟ್ಟದಲ್ಲಿ ವಿಸರಣವಾಗುತ್ತದೆ ಎಂಬುದು ಮುಖ್ಯ. ಹೆಚ್ಚು ಕಣಗಳಿದ್ದರೆ ವಿಸರಣವೂ ಹೆಚ್ಚು.
>>>>
>>>> ಇದನ್ನಾಧರಿಸಿ ಅಣುಗಳ ಸಂಖ್ಯೆಯನ್ನು ಲೆಕ್ಕಹಾಕಬಹುದು. ಇಲ್ಲಿ ನಾನು ಸಂಖ್ಯೆ ಎಂದದ್ದು
>>>> 1, 2, 3ಇತ್ಯಾದಿ ಅಲ್ಲ. ಅದಕ್ಕೆ ಬೇರೆಯದೇ ಆದ ಅರ್ಥವುಂಟು. ನಾನು ಕರೆನ್ಸಿ
>>>> ಕಚೇರಿಯಲ್ಲಿದ್ದಾಗ ಅಲ್ಲಿ ರೂಪಾಯಿ ಎಣಿಸಬೇಕಾಗಿತ್ತು, ಅಂದರೆ ಬಿಡಿ ಬಿಡಿ ರೂಪಾಯಿ ಅಲ್ಲ,
>>>> ರೂಪಾಯಿ ತುಂಬಿದ ಚೀಲವನ್ನು ಎಣಿಸುವುದು. ಪ್ರತಿ ಚೀಲದಲ್ಲೂ ಸುಮಾರು ೨,೦೦೦ ರೂಪಾಯಿ
>>>> ಇರುತ್ತಿತ್ತು– ಅದು ನಂಬಿಕೆಯ ಪ್ರಶ್ನೆ. ಚೀಲಗಳ ಗುಣಾಕಾರ ಮಾಡಿದರೆ ಸಾಕು, ಎಷ್ಟು ಕೋಟಿ
>>>> ರುಪಾಯಿ ಇದೆ ಎನ್ನುವುದನ್ನು ಹೇಳಬಹುದಾಗಿತ್ತು. ಈ ಲೆಕ್ಕದಲ್ಲಿ ವಾಯುಗೋಳದ ಅಣುಗಳನ್ನು
>>>> ಎಣಿಸಬೇಕು– ಒಂದು ಅಂದಾಜು ಎನ್ನಿ.
>>>>
>>>> ಇದಕ್ಕಿಂತಲೂ ಮುಖ್ಯ ಉಪಕರಣದ ಮೂಲಕ ವಿಸರಣವನ್ನು ನೀವೂ ಗಮನಿಸಬಹುದು. ಅಣು ಚಿಕ್ಕದೇ
>>>> ದೊಡ್ಡದೇ, ಗುಂಡಾಗಿದೆಯೇ, ಚೌಕವಾಗಿದೆಯೇ ಎಂಬುದೂ ಕಾಣುತ್ತದೆ. ನೀಲಿ ಆಕಾಶವನ್ನು ಅಧ್ಯಯನ
>>>> ಮಾಡುವುದು ಸಂಶೋಧನೆಯ ದೊಡ್ಡ ಕ್ಷೇತ್ರ. ಅದಕ್ಕೆ ಮಿತಿ ಎಂಬುದಿಲ್ಲ. ಈಗಲೂ ಅಲ್ಲಿ
>>>> ಕೆಲಸವಾಗುತ್ತಿದೆ. ಕಣ್ಣು ತೆರೆದಿರಲಿ, ಆಸಕ್ತಿ ಇಂಗದಿರಲಿ, ಸಮಸ್ಯೆಯನ್ನು ಬಿಡಿಸುವ ಬಗ್ಗೆ
>>>> ನಿರಂತರ ಆಸ್ಥೆ ಇರಬೇಕು.
>>>>
>>>> ಇದನ್ನೇ ತರುಣರಿಗೆ ನಾನು ಹೇಳುವುದು. ಅದು ಸರಿ, ಇದರಿಂದ ಏನು ಪ್ರಯೋಜನ? ನಾನು
>>>> ನಂಬಿರುವ ತತ್ತ್ವವನ್ನು ಹೇಳುತ್ತೇನೆ. ಇವೆಲ್ಲದರಿಂದ ಏನು ಪ್ರಯೋಜನ ಎಂಬುದನ್ನು ಮಾತ್ರ
>>>> ಯಾವಾಗಲೂ ಕೇಳಬಾರದು; ಬದಲು ಕಾರ್ಯೋನ್ಮುಖವಾಗುವುದು ಒಳ್ಳೆಯದು. ಏಕೆಂದರೆ ಮನುಷ್ಯ
>>>> ಸ್ವಭಾವಕ್ಕೆ ಸಹಜವಾಗಿ ಬಂದಿರುವ ಎರಡು ಗುಣಗಳೆಂದರೆ ವೀಕ್ಷಣೆ ಮತ್ತು ಚಿಂತನೆ. ಅವನ್ನು
>>>> ನಾವು ಬಳಸಿಕೊಳ್ಳಬೇಕು. ಬಳಸಿದಷ್ಟೂ ಬುದ್ಧಿ ತೀಕ್ಷ್ಣವಾಗುತ್ತದೆ.
>>>>
>>>> ಅದರಿಂದ ಹೊಸತು ಹುಟ್ಟಿ ಕೊನೆಗೆ ಅದು ಮನುಕುಲಕ್ಕೆ ನೆರವಾಗಬಹುದು. ವಿಜ್ಞಾನಕ್ಕೂ
>>>> ಒಳ್ಳೆಯದಾಗಬಹುದು. ವಾಸ್ತವವಾಗಿ ನಿಜವಾದ ವಿಜ್ಞಾನದ ಗುರಿ ಇದೇ. ನಾವು ಬಗೆಹರಿಸಬಲ್ಲ
>>>> ಸಮಸ್ಯೆಗಳು ನಮಗೆ ಎಂದೂ ಸನಿಹದಲ್ಲೇ ಇರುತ್ತವೆ. ಅವು ನಮ್ಮ ಬದುಕಿಗೆ ಸಂಬಂಧಿಸಿದ
>>>> ಸಮಸ್ಯೆಗಳು. ನಮ್ಮ ಸುತ್ತಣ ಜಗತ್ತಿನ ಸಮಸ್ಯೆಗಳೂ ಅವು ಆಗಿರುವುದರಿಂದ ಅವನ್ನು ಅಪ್ರಯೋಜನ
>>>> ಎಂದು ಜರಿಯಲಾಗದು.
>>>>
>>>> ಬಹು ಮುಖ್ಯವಾಗಿ ಮೂಲಭೂತ ಶೋಧನೆ ಮಾಡುವ ವಸ್ತು ಪ್ರಕೃತಿಯಲ್ಲಿ ಅಮೂರ್ತವಾಗಿರಬಹುದು.
>>>> ಅವೇ ಮುಂದೆ ಮನುಷ್ಯನ ಜೀವನವನ್ನೂ ಚಟುವಟಿಕೆಯನ್ನೂ ದೊಡ್ಡದಾಗಿ ಬಾಧಿಸುತ್ತವೆ. ವೈಜ್ಞಾನಿಕ
>>>> ಕೆಲಸಗಳು ಎಂದೂ ಮೌಲ್ಯಯುತವಾಗಿಯೇ ಇರುತ್ತವೆ. ಇದನ್ನು ಆಧುನಿಕ ವಿಜ್ಞಾನ ಚರಿತ್ರೆಯೇ
>>>> ಸಾರುತ್ತದೆ. ವಿಜ್ಞಾನ ನಮ್ಮ ಸುತ್ತಣ ಜಗತ್ತನ್ನು ಬದಲಾಯಿಸಿದೆ. ಯಾವ ನಿಶ್ಚಿತ ಗುರಿಯೂ
>>>> ಇಲ್ಲದೆ ಸಾಗುವುದು ವಿಜ್ಞಾನಿಗಳ ಕೆಲಸದ ಪರಿ ಅಲ್ಲ. ಕೇವಲ ಜ್ಞಾನ ಪಡೆಯಲೆಂದೇ ಕೆಲಸ ಮಾಡುವ
>>>> ಏಕೈಕ ಗುರಿ ಇರುವ ವಿಜ್ಞಾನಿಗಳಿಂದ ಮನುಕುಲಕ್ಕೆ ಎಂದೂ ಉಪಕಾರವೇ ಆಗುತ್ತದೆ.
>>>>
>>>> Hareeshkumar K
>>>> AM(PCM)
>>>> GHS HUSKURU
>>>> MALAVALLI TQ
>>>> MANDYA DT 571475
>>>> mobile no 9880328224
>>>> email [email protected]
>>>>
>>>> --
>>>> 1. If a teacher wants to join STF, visit
>>>> http://karnatakaeducation.org.in/KOER/en/index.php/Become_a_STF_groups_member
>>>> 2. For STF training, visit KOER -
>>>> http://karnatakaeducation.org.in/KOER/en/index.php
>>>> 4. For Ubuntu 14.04 installation, visit
>>>> http://karnatakaeducation.org.in/KOER/en/index.php/Kalpavriksha
>>>> 4. For doubts on Ubuntu, public software, visit
>>>> http://karnatakaeducation.org.in/KOER/en/index.php/Frequently_Asked_Questions
>>>> 5. Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Why_public_software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ---
>>>> You received this message because you are subscribed to the Google
>>>> Groups "Maths & Science STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/mathssciencestf.
>>>> For more options, visit https://groups.google.com/d/optout.
>>>>
>>> --
>>> 1. If a teacher wants to join STF, visit
>>> http://karnatakaeducation.org.in/KOER/en/index.php/Become_a_STF_groups_member
>>> 2. For STF training, visit KOER -
>>> http://karnatakaeducation.org.in/KOER/en/index.php
>>> 4. For Ubuntu 14.04 installation, visit
>>> http://karnatakaeducation.org.in/KOER/en/index.php/Kalpavriksha
>>> 4. For doubts on Ubuntu, public software, visit
>>> http://karnatakaeducation.org.in/KOER/en/index.php/Frequently_Asked_Questions
>>> 5. Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Why_public_software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/mathssciencestf.
>>> For more options, visit https://groups.google.com/d/optout.
>>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to