http://m.prajavani.net/article/2016_03_03/391453 *ಜಲಶುದ್ಧೀಕಾರಕಗಳನ್ನು ಖರೀದಿಸುವ ಮುನ್ನ*
3 Mar, 2016 ಯು.ಬಿ. ಪವನಜ <https://www.facebook.com/sharer/sharer.php?u=http%3A%2F%2Fgoo.gl%2FsydZP6> <https://twitter.com/intent/tweet?text=%E0%B2%9C%E0%B2%B2%E0%B2%B6%E0%B3%81%E0%B2%A6%E0%B3%8D%E0%B2%A7%E0%B3%80%E0%B2%95%E0%B2%BE%E0%B2%B0%E0%B2%95%E0%B2%97%E0%B2%B3%E0%B2%A8%E0%B3%8D%E0%B2%A8%E0%B3%81+%E0%B2%96%E0%B2%B0%E0%B3%80%E0%B2%A6%E0%B2%BF%E0%B2%B8%E0%B3%81%E0%B2%B5+%E0%B2%AE%E0%B3%81%E0%B2%A8%E0%B3%8D%E0%B2%A8+http%3A%2F%2Fgoo.gl%2FsydZP6> <whatsapp://send?text=%E0%B2%A8%E0%B2%BE%E0%B2%B5%E0%B3%81+%E0%B2%B5%E0%B2%BE%E0%B2%B8%E0%B2%BF%E0%B2%B8%E0%B3%81%E0%B2%A4%E0%B3%8D%E0%B2%A4%E0%B2%BF%E0%B2%B0%E0%B3%81%E0%B2%B5+%E0%B2%AA%E0%B2%B0%E0%B2%BF%E0%B2%B8%E0%B2%B0+%E0%B2%8E%E0%B2%B7%E0%B3%8D%E0%B2%9F%E0%B3%81+%E0%B2%95%E0%B3%86%E0%B2%9F%E0%B3%8D%E0%B2%9F%E0%B2%BF%E0%B2%A6%E0%B3%86%E0%B2%AF%E0%B3%86%E0%B2%82%E0%B2%A6%E0%B2%B0%E0%B3%86+%E0%B2%A8%E0%B3%80%E0%B2%B0%E0%B3%81%2C+%E0%B2%97%E0%B2%BE%E0%B2%B3%E0%B2%BF+%E0%B2%AF%E0%B2%BE%E0%B2%B5%E0%B3%81%E0%B2%A6%E0%B3%82+%E0%B2%AA%E0%B2%B0%E0%B2%BF%E0%B2%B6%E0%B3%81%E0%B2%A6%E0%B3%8D%E0%B2%A7%E0%B2%B5%E0%B2%BE%E0%B2%97%E0%B2%BF%E0%B2%B2%E0%B3%8D%E0%B2%B2.+%E0%B2%88%E0%B2%97+%E0%B2%AC%E0%B2%BE%E0%B2%9F%E0%B2%B2%E0%B2%BF+%E0%B2%A8%E0%B3%80%E0%B2%B0%E0%B3%81+%E0%B2%B8%E0%B2%B0%E0%B3%8D%E0%B2%B5%E0%B3%87%E0%B2%B8%E0%B2%BE%E0%B2%AE%E0%B2%BE%E0%B2%A8%E0%B3%8D%E0%B2%AF%E0%B2%B5%E0%B2%BE%E0%B2%97%E0%B2%BF%E0%B2%A6%E0%B3%86.+%E0%B2%92%E0%B2%82%E0%B2%A6%E0%B3%81+%E0%B2%95%E0%B2%BE%E0%B2%B2%E0%B2%A6%E0%B2%B2%E0%B3%8D%E0%B2%B2%E0%B2%BF+%E0%B2%A8%E0%B3%80%E0%B2%B0%E0%B2%BF%E0%B2%97%E0%B3%86+%E0%B2%B9%E0%B2%A3+%E0%B2%95%E0%B3%8A%E0%B2%A1%E0%B3%81%E0%B2%B5%E0%B3%81%E0%B2%A6%E0%B3%81+%E0%B2%8E%E0%B2%82%E0%B2%A6%E0%B2%B0%E0%B3%86+%E0%B2%A8%E0%B2%AE%E0%B3%8D%E0%B2%AE+%E0%B2%A6%E0%B3%87%E0%B2%B6%E0%B2%A6%E0%B2%B2%E0%B3%8D%E0%B2%B2%E0%B2%BF+%E0%B2%AF%E0%B2%BE%E0%B2%B0%E0%B2%BF%E0%B2%97%E0%B3%82+%E0%B2%A8%E0%B2%82%E0%B2%AC%E0%B3%81%E0%B2%B5%E0%B3%81%E0%B2%A6%E0%B2%95%E0%B3%8D%E0%B2%95%E0%B3%86+%E0%B2%B8%E0%B2%BE%E0%B2%A7%E0%B3%8D%E0%B2%AF%E0%B2%B5%E0%B2%BF%E0%B2%B2%E0%B3%8D%E0%B2%B2%E0%B2%A6+%E0%B2%B9%E0%B2%BE%E0%B2%97%E0%B2%BF%E0%B2%A4%E0%B3%8D%E0%B2%A4%E0%B3%81.+%E0%B2%87%E0%B2%A6%E0%B3%87%E0%B2%A8%E0%B3%82+%E0%B2%B6%E0%B2%A4%E0%B2%AE%E0%B2%BE%E0%B2%A8%E0%B2%97%E0%B2%B3+%E0%B2%B9%E0%B2%BF%E0%B2%82%E0%B2%A6%E0%B2%BF%E0%B2%A8+%E0%B2%95%E0%B2%A5%E0%B3%86%E0%B2%AF%E0%B2%B2%E0%B3%8D%E0%B2%B2.+%E0%B2%95%E0%B3%86%E0%B2%B2%E0%B2%B5%E0%B3%87+%E0%B2%A6%E0%B2%B6%E0%B2%95%E0%B2%97%E0%B2%B3+%E0%B2%B9%E0%B2%BF%E0%B2%82%E0%B2%A6%E0%B2%BF%E0%B2%A8+%E0%B2%95%E0%B2%A5%E0%B3%86.+%E0%B2%AE%E0%B2%A8%E0%B3%86%E0%B2%97%E0%B2%B3%E0%B2%B2%E0%B3%8D%E0%B2%B2%E0%B3%82+%E0%B2%A8%E0%B2%BE%E0%B2%B5%E0%B3%81+%E0%B2%A8%E0%B3%80%E0%B2%B0%E0%B2%A8%E0%B3%8D%E0%B2%A8%E0%B3%81+%E0%B2%B9%E0%B2%BE%E0%B2%97%E0%B3%86%E0%B2%AF%E0%B3%87+%E0%B2%95%E0%B3%81%E0%B2%A1%E0%B2%BF%E0%B2%AF%E0%B3%81%E0%B2%B5%E0%B2%82%E0%B2%A4%E0%B2%BF%E0%B2%B2%E0%B3%8D%E0%B2%B2.+%E0%B2%95%E0%B3%87%E0%B2%B5%E0%B2%B2+%E0%B2%95%E0%B3%81%E0%B2%A6%E0%B2%BF%E0%B2%B8%E0%B2%BF+%E0%B2%95%E0%B3%81%E0%B2%A1%E0%B2%BF%E0%B2%A6%E0%B2%B0%E0%B3%86+%E0%B2%B8%E0%B2%BE%E0%B2%95%E0%B3%81+%E0%B2%8E%E0%B2%A8%E0%B3%8D%E0%B2%A8%E0%B3%81%E0%B2%B5+%E0%B2%95%E0%B2%BE%E0%B2%B2%E0%B2%B5%E0%B3%82+%E0%B2%88%E0%B2%97%E0%B2%BF%E0%B2%B2%E0%B3%8D%E0%B2%B2.%0D%0Ahttp%3A%2F%2Fgoo.gl%2FsydZP6> <https://plus.google.com/share?url=http%3A%2F%2Fgoo.gl%2FsydZP6> <http://www.pinterest.com/pin/find/?url=http%3A%2F%2Fgoo.gl%2FsydZP6> <http://www.linkedin.com/shareArticle?mini=true&title=%E0%B2%9C%E0%B2%B2%E0%B2%B6%E0%B3%81%E0%B2%A6%E0%B3%8D%E0%B2%A7%E0%B3%80%E0%B2%95%E0%B2%BE%E0%B2%B0%E0%B2%95%E0%B2%97%E0%B2%B3%E0%B2%A8%E0%B3%8D%E0%B2%A8%E0%B3%81+%E0%B2%96%E0%B2%B0%E0%B3%80%E0%B2%A6%E0%B2%BF%E0%B2%B8%E0%B3%81%E0%B2%B5+%E0%B2%AE%E0%B3%81%E0%B2%A8%E0%B3%8D%E0%B2%A8+&url=http%3A%2F%2Fgoo.gl%2FsydZP6> ನಾವು ವಾಸಿಸುತ್ತಿರುವ ಪರಿಸರ ಎಷ್ಟು ಕೆಟ್ಟಿದೆಯೆಂದರೆ ನೀರು, ಗಾಳಿ ಯಾವುದೂ ಪರಿಶುದ್ಧವಾಗಿಲ್ಲ. ಈಗ ಬಾಟಲಿ ನೀರು ಸರ್ವೇಸಾಮಾನ್ಯವಾಗಿದೆ. ಒಂದು ಕಾಲದಲ್ಲಿ ನೀರಿಗೆ ಹಣ ಕೊಡುವುದು ಎಂದರೆ ನಮ್ಮ ದೇಶದಲ್ಲಿ ಯಾರಿಗೂ ನಂಬುವುದಕ್ಕೆ ಸಾಧ್ಯವಿಲ್ಲದ ಹಾಗಿತ್ತು. ಇದೇನೂ ಶತಮಾನಗಳ ಹಿಂದಿನ ಕಥೆಯಲ್ಲ. ಕೆಲವೇ ದಶಕಗಳ ಹಿಂದಿನ ಕಥೆ. ಮನೆಗಳಲ್ಲೂ ನಾವು ನೀರನ್ನು ಹಾಗೆಯೇ ಕುಡಿಯುವಂತಿಲ್ಲ. ಕೇವಲ ಕುದಿಸಿ ಕುಡಿದರೆ ಸಾಕು ಎನ್ನುವ ಕಾಲವೂ ಈಗಿಲ್ಲ. ನೀರಿನಲ್ಲಿ ಹಲವು ನಮೂನೆಯ ಮಲಿನಕಾರಕಗಳು ತುಂಬಿರುವುದರಿಂದ ನೀರನ್ನು ಹಲವು ಹಂತಗಳಲ್ಲಿ ಶುದ್ಧೀಕರಿಸಬೇಕಾಗಿದೆ. ಅಂತೆಯೇ ಮಾರುಕಟ್ಟೆಯಲ್ಲಿ ಹಲವು ನಮೂನೆಯ ಜಲಶುದ್ಧೀಕಾರಕಗಳು ದೊರೆಯುತ್ತಿವೆ. ಏನು ಈ ಜಲಶುದ್ಧೀಕಾರಕಗಳು? ಅವು ಹೇಗೆ ಕೆಲಸ ಮಾಡುತ್ತವೆ? ಅವುಗಳನ್ನು ಎಷ್ಟು ನಮೂನೆಗಳಿವೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಸಂಕ್ಷಿಪ್ತವಾಗಿ ನೀಡಲು ಈ ಸಂಚಿಕೆಯಲ್ಲಿ ಪ್ರಯತ್ನಿಸಲಾಗುತ್ತಿದೆ. ಮೊತ್ತಮೊದಲನೆಯದಾಗಿ ತುಂಬ ಸರಳವಾದ ಸೋಸುಕಗಳು (filter). ಇವು ನೀರಿನಲ್ಲಿರುವ ಎಲ್ಲ ನಮೂನೆಯ ಕಣಗಳನ್ನು ತಡೆಹಿಡಿಯುತ್ತವೆ. ಇವು ಕಡಿಮೆ ಬೆಲೆಯವು. ಇವುಗಳಲ್ಲೂ ಹಲವು ನಮೂನೆಗಳಿವೆ. ಕೇವಲ ಸೋಸುಕಗಳು, ಅಯಾನ್ ಎಕ್ಸ್‌ಚೇಂಜ್ ಮಾಡುವವು ಇತ್ಯಾದಿ. ನಿಮ್ಮ ಮನೆಯ ನೀರಿನಲ್ಲಿ ಮಣ್ಣು, ರಾಡಿ, ಇತ್ಯಾದಿ ಮಾತ್ರವಿದೆ, ಯಾವುದೇ ಸೂಕ್ಷ್ಮ ಜೀವಿ ಮತ್ತು ರಾಸಾಯನಿಕಗಳಿಲ್ಲ ಎಂದಾದಲ್ಲಿ ನಿಮಗೆ ಸರಳ ಸೋಸುಕ ಸಾಕು. ಸ್ವಲ್ಪ ಹೆಚ್ಚಿನ ಎಚ್ಚರಿಕೆಗಾಗಿ ನೀರನ್ನು ಕುದಿಸಿ, ತಣಿಸಿ ನಂತರ ಸೋಸುಕಕ್ಕೆ ಹಾಕಿ ಕುಡಿದರೆ ಒಂದು ಮಟ್ಟಿಗೆ ಸುರಕ್ಷಿತ ಎನ್ನಬಹುದು. ಆದರೆ ನಗರದ ನೀರು ಈಗ ಕೇವಲ ಸಾಮಾನ್ಯ ಸೋಸುಕದಿಂದ ಶುದ್ಧವಾಗುವುದಿಲ್ಲ. ಅಂತೆಯೇ ಮಾರುಕಟ್ಟೆಯಲ್ಲಿ ಮೂರು ಪ್ರಮುಖ ನಮೂನೆಯ ಶುದ್ಧೀಕಾರಕಗಳಿವೆ. ಕೆಲವು ಮಾದರಿಗಳಲ್ಲಿ ಈ ಮೂರೂ ಅಳವಡಿಕೆಯಾಗಿರುತ್ತದೆ. ಅವುಗಳ ಬಗ್ಗೆ ತಿಳಿಯೋಣ. *ಅಲ್ಟ್ರಾ ಫಿಲ್ಟ್ರೇಶನ್ (UF)* ಇವು ಈ ಲೇಖನದ ಪ್ರಾರಂಭದಲ್ಲಿ ತಿಳಿಸಿದ ಸೋಸುಕಗಳೇ. ಆದರೆ ಇದರಲ್ಲಿ ಬಳಕೆಯಾಗುತ್ತಿರುವ ಸೋಸುಕ ಅತಿ ಚಿಕ್ಕ ಗಾತ್ರದ್ದು. ಅಂದರೆ ಅತಿ ಚಿಕ್ಕ ಗಾತ್ರದ ವಸ್ತುಗಳನ್ನೂ ಇದು ತಡೆಹಿಡಿಯುತ್ತದೆ. ನೀರಿನಲ್ಲಿರುವ ಮಣ್ಣು, ಕೆಸರು, ರಾಡಿ, ಚಿಕ್ಕಪುಟ್ಟ ಜೀವಿಗಳು, ಇತ್ಯಾದಿಗಳನ್ನೆಲ್ಲ ಇದು ತಡೆಹಿಡಿಯುತ್ತದೆ. ಇವು ಕೆಲಸ ಮಾಡಲು ವಿದ್ಯುತ್ ಶಕ್ತಿ ಬೇಡ. ಇವುಗಳ ಪ್ರಮುಖ ಕೊರತೆ ಎಂದರೆ ಇವು ನೀರಿನಲ್ಲಿ ಕರಗಿರುವ ಲವಣ, ರಾಸಾಯನಿಕಗಳನ್ನು ತೆಗೆಯಲಾರವು. *ಅತಿನೇರಳೆ* *(ultraviolet –UV)* ಈ ನಮೂನೆಯಲ್ಲಿ ನೀರಿನ ಮೇಲೆ ಅತಿನೇರಳೆ ಕಿರಣಗಳನ್ನು ಹಾಯಿಸಲಾಗುತ್ತದೆ. ಅತಿನೇರಳೆ ಕಿರಣಗಳು ನೀರಿನಲ್ಲಿರುವ ಎಲ್ಲ ನಮೂನೆಯ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ಅತಿನೇರಳೆ ದೀಪವು ಇರುವ ನಳಿಕೆಯೊಳಗೆ ನೀರನ್ನು ಹರಿಬಿಡಲಾಗುತ್ತದೆ. ನೀರು ಸಾಮಾನ್ಯವಾಗಿ ಕೆಳಗಿನಿಂದ ಮೇಲೆ ಹೋಗುತ್ತದೆ. ಈ ನಳಿಕೆಯೊಳಗೆ ಗಾಳಿಯ ಗುಳ್ಳೆಗಳಿರಬಾರದು. ಅತಿನೇರಳೆ ಕಿರಣಗಳು ನೀರಿನಲ್ಲಿರುವ ಬ್ಯಾಕ್ಟೀರಿಯಾ, ವೈರಸ್ ಮತ್ತು ಇತರೆ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತವೆ. ಅತಿನೇರಳೆ ಕಿರಣಗಳು ಸೂಕ್ಷ್ಮಜೀವಿಗಳನ್ನೇನೋ ಕೊಲ್ಲುತ್ತವೆ. ಆದರೆ ಅವುಗಳು ಸತ್ತು ಅದೇ ನೀರಿನಲ್ಲಿರುತ್ತವೆ. ಅಂದರೆ ಅತಿನೇರಳೆ ಕಿರಣಗಳ ಮೂಲಕ ಹಾಯಿಸಿದ ನಂತರ ನೀರನ್ನು ಸೋಸುವುದು ಅಗತ್ಯ. *ವಿಪರ್ಯಯ ಪರಾಸರಣ* *(Reverse Osmosis –RO)* ಇವು ತುಂಬ ಜನಪ್ರಿಯವಾದವುಗಳು. ಮೊದಲಿಗೆ ಆಸ್ಮೋಸಿಸ್ ಎಂದರೆ ಏನು ಎಂದು ತಿಳಿಯೋಣ. ಇದರಲ್ಲಿ ಒಂದು ಅರೆಪಾರಕ ಪರದೆ (semipermeable membrane) ಇರುತ್ತದೆ. ಇದರ ಒಂದು ಬದಿಯಲ್ಲಿ ನೀರಿನ ಅಧಿಕ ಸಾರೀಕೃತ ದ್ರಾವಣ ಇದ್ದು ಇನ್ನೊಂದು ಬದಿಯಲ್ಲಿ ಕಡಿಮೆ ಸಾರೀಕೃತ ದ್ರಾವಣ ಇರುತ್ತದೆ. ಈ ಅರೆಪಾರಕ ಪರದೆ ನೀರನ್ನು ಕಡಿಮೆ ಸಾರೀಕೃತ ಬದಿಯಿಂದ ಅಧಿಕ ಸಾರೀಕೃತ ಬದಿಗೆ ಹರಿಯಲು ಬಿಡುತ್ತದೆ. ಸರಳವಾಗಿ ಹೇಳುವುದಾದರೆ ಹೆಚ್ಚು ಲವಣಗಳು ಇರುವ ನೀರಿನ ಬದಿಗೆ ಕಡಿಮೆ ಲವಣಗಳು ಇರುವ ನೀರು ಹರಿದು ಎರಡೂ ಕಡೆಯಲ್ಲಿ ಲವಣಗಳ ಪರಿಮಾಣ ಒಂದೇ ಆಗುವಂತೆ ಮಾಡುತ್ತದೆ. ಇದು ಪರಾಸರಣ ಕ್ರಿಯೆ ಅರ್ಥಾತ್ ಆಸ್ಮೋಸಿಸ್. ವಿಪರ್ಯಯ ಪರಾಸರಣ ಅರ್ಥಾತ್ ರಿವರ್ಸ್ ಆಸ್ಮೋಸಿಸ್ ಎಂದರೆ ಇದಕ್ಕೆ ವಿರುದ್ಧವಾದುದು. ಇಲ್ಲಿ ಅರೆಪಾರಕ ಪರದೆಯ ಒಂದು ಬದಿಯಲ್ಲಿರುವ ಅಧಿಕ ಸಾರೀಕೃತ (ಅಂದರೆ ಹೆಚ್ಚಿನ ಲವಣಗಳು, ರಾಸಾಯನಿಕಗಳು, ಕಣಗಳು, ಇತ್ಯಾದಿ ಇರುವ) ನೀರಿನಿಂದ ಕಡಿಮೆ ಸಾರೀಕೃತ ಬದಿಗೆ ಶುದ್ಧ ನೀರು ಹರಿದು ಬರುತ್ತದೆ. ಹಾಗೆ ಮಾಡಲು ಈ ಅರೆಪಾರಕ ಪರದೆಯ ಅಧಿಕ ಸಾರೀಕೃತ ನೀರು ಇರುವ ಬದಿಗೆ ತುಂಬ ಒತ್ತಡ ಹಾಕಬೇಕು. ಕಲುಷಿತ ನೀರಿನಿಂದ ಶುದ್ಧ ನೀರಿನ ಬದಿಗೆ ನೀರು ಹರಿದು ಹೋದ ನಂತರ ಈ ಭಾಗದ ನೀರಿನಲ್ಲಿ ಎಲ್ಲ ಕಲ್ಮಷಗಳು ಉಳಿದಿರುತ್ತವೆ. ಈ ನೀರನ್ನು ಚೆಲ್ಲಬೇಕು. ಅದಕ್ಕೇ ಈ ಆರ್‌ಓ ಶುದ್ಧೀಕಾರಕಗಳಲ್ಲಿ ಒಂದು ಚಿಕ್ಕ ಪೈಪ್ ಮೂಲಕ ಹೆಚ್ಚಿಗೆ ನೀರು ಹರಿದು ಬರುತ್ತಿರುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ಈ ನೀರನ್ನು ಪಾತ್ರೆ ತೊಳೆಯಲು ಬಳಸುತ್ತಾರೆ. ಈ ವಿಧಾನದಲ್ಲಿ ಒಂದು ಲೀಟರ್ ಶುದ್ಧ ನೀರು ಪಡೆಯುವಾಗ ಇನ್ನೊಂದು ಲೀಟರ್ ನೀರು ವ್ಯರ್ಥವಾಗಿರುತ್ತದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುವ ಕೆಲವು ಮಾದರಿಗಳಲ್ಲಿ ಈ ಮೂರೂ ವಿಧಾನಗಳಿರುತ್ತವೆ. ಇವಲ್ಲದೆ ಇನ್ನೂ ಒಂದು ವಿಧಾನದಲ್ಲಿ ನೀರನ್ನು ಶುದ್ಧೀಕರಿಸಲಾಗುತ್ತದೆ. ಅದು ಸಂಪೂರ್ಣ ಕರಗಿದ ಘನವಸ್ತುಗಳ (Total Dissolved Solids –TDS) ನಿವಾರಣೆ. ನೀರು ಮೊದಲು ಅಲ್ಟ್ರಾಫೈನ್ ಫಿಲ್ಟರ್, ನಂತರ ಆರ್‌ಓ, ನಂತರ ಅತಿನೇರಳೆ (ಅಲ್ಟ್ರಾವಯೊಲೆಟ್) ಮೂಲಕ ಹಾದು ಕೊನೆಗೆ ಟಿಡಿಎಸ್‌ಗಳನ್ನೂ ತೆಗೆಯುವ ಸೋಸುಕದ ಮೂಲಕ ಹಾದು ಸಂಪೂರ್ಣ ಶುದ್ಧ ನೀರು ಕುಡಿಯಲು ದೊರೆಯುತ್ತದೆ. ಜಲಶುದ್ಧೀಕಾರಕಗಳನ್ನು ವರ್ಷಕ್ಕೊಮ್ಮೆ ಸರ್ವೀಸ್ ಮಾಡಿಸಿ ಅದರ ಕೆಲವು ಅಂಗಗಳನ್ನು ಬದಲಿಸುತ್ತಿರಬೇಕು. ಉದಾಹರಣೆಗೆ ಸೋಸುಕ ಮತ್ತು ಅರೆಪಾರಕ ಪರದೆ. ಸಾಮಾನ್ಯವಾಗಿ ಮೇಲೆ ತಿಳಿಸಿದ ಈ ಮೂರೂ ವಿಧಾನದಲ್ಲಿ ನೀರನ್ನು ಶುದ್ಧೀಕರಿಸುವ ಶುದ್ಧೀಕಾರಕಗಳಿಗೆ ಅಂದಾಜು ₹20,000 ಬೆಲೆಯಿದೆ. Hareeshkumar K AM(PCM) GHS HUSKURU MALAVALLI TQ MANDYA DT 571475 mobile no 9880328224 email [email protected] -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
