Useful information On Mar 3, 2016 8:03 PM, "HAREESHKUMAR K Agasanapura" <[email protected]> wrote:
> http://m.prajavani.net/article/2016_03_03/391453 > *ಜಲಶುದ್ಧೀಕಾರಕಗಳನ್ನು ಖರೀದಿಸುವ ಮುನ್ನ* > > 3 Mar, 2016 > > ಯು.ಬಿ. ಪವನಜ > > <https://www.facebook.com/sharer/sharer.php?u=http%3A%2F%2Fgoo.gl%2FsydZP6> > <https://twitter.com/intent/tweet?text=%E0%B2%9C%E0%B2%B2%E0%B2%B6%E0%B3%81%E0%B2%A6%E0%B3%8D%E0%B2%A7%E0%B3%80%E0%B2%95%E0%B2%BE%E0%B2%B0%E0%B2%95%E0%B2%97%E0%B2%B3%E0%B2%A8%E0%B3%8D%E0%B2%A8%E0%B3%81+%E0%B2%96%E0%B2%B0%E0%B3%80%E0%B2%A6%E0%B2%BF%E0%B2%B8%E0%B3%81%E0%B2%B5+%E0%B2%AE%E0%B3%81%E0%B2%A8%E0%B3%8D%E0%B2%A8+http%3A%2F%2Fgoo.gl%2FsydZP6> > <https://plus.google.com/share?url=http%3A%2F%2Fgoo.gl%2FsydZP6> > <http://www.pinterest.com/pin/find/?url=http%3A%2F%2Fgoo.gl%2FsydZP6> > <http://www.linkedin.com/shareArticle?mini=true&title=%E0%B2%9C%E0%B2%B2%E0%B2%B6%E0%B3%81%E0%B2%A6%E0%B3%8D%E0%B2%A7%E0%B3%80%E0%B2%95%E0%B2%BE%E0%B2%B0%E0%B2%95%E0%B2%97%E0%B2%B3%E0%B2%A8%E0%B3%8D%E0%B2%A8%E0%B3%81+%E0%B2%96%E0%B2%B0%E0%B3%80%E0%B2%A6%E0%B2%BF%E0%B2%B8%E0%B3%81%E0%B2%B5+%E0%B2%AE%E0%B3%81%E0%B2%A8%E0%B3%8D%E0%B2%A8+&url=http%3A%2F%2Fgoo.gl%2FsydZP6> > > ನಾವು ವಾಸಿಸುತ್ತಿರುವ ಪರಿಸರ ಎಷ್ಟು ಕೆಟ್ಟಿದೆಯೆಂದರೆ ನೀರು, ಗಾಳಿ ಯಾವುದೂ > ಪರಿಶುದ್ಧವಾಗಿಲ್ಲ. ಈಗ ಬಾಟಲಿ ನೀರು ಸರ್ವೇಸಾಮಾನ್ಯವಾಗಿದೆ. ಒಂದು ಕಾಲದಲ್ಲಿ ನೀರಿಗೆ ಹಣ > ಕೊಡುವುದು ಎಂದರೆ ನಮ್ಮ ದೇಶದಲ್ಲಿ ಯಾರಿಗೂ ನಂಬುವುದಕ್ಕೆ ಸಾಧ್ಯವಿಲ್ಲದ ಹಾಗಿತ್ತು. ಇದೇನೂ > ಶತಮಾನಗಳ ಹಿಂದಿನ ಕಥೆಯಲ್ಲ. ಕೆಲವೇ ದಶಕಗಳ ಹಿಂದಿನ ಕಥೆ. ಮನೆಗಳಲ್ಲೂ ನಾವು ನೀರನ್ನು > ಹಾಗೆಯೇ ಕುಡಿಯುವಂತಿಲ್ಲ. ಕೇವಲ ಕುದಿಸಿ ಕುಡಿದರೆ ಸಾಕು ಎನ್ನುವ ಕಾಲವೂ ಈಗಿಲ್ಲ. > > ನೀರಿನಲ್ಲಿ ಹಲವು ನಮೂನೆಯ ಮಲಿನಕಾರಕಗಳು ತುಂಬಿರುವುದರಿಂದ ನೀರನ್ನು ಹಲವು ಹಂತಗಳಲ್ಲಿ > ಶುದ್ಧೀಕರಿಸಬೇಕಾಗಿದೆ. ಅಂತೆಯೇ ಮಾರುಕಟ್ಟೆಯಲ್ಲಿ ಹಲವು ನಮೂನೆಯ ಜಲಶುದ್ಧೀಕಾರಕಗಳು > ದೊರೆಯುತ್ತಿವೆ. ಏನು ಈ ಜಲಶುದ್ಧೀಕಾರಕಗಳು? ಅವು ಹೇಗೆ ಕೆಲಸ ಮಾಡುತ್ತವೆ? ಅವುಗಳನ್ನು > ಎಷ್ಟು ನಮೂನೆಗಳಿವೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಸಂಕ್ಷಿಪ್ತವಾಗಿ ನೀಡಲು ಈ > ಸಂಚಿಕೆಯಲ್ಲಿ ಪ್ರಯತ್ನಿಸಲಾಗುತ್ತಿದೆ. > > ಮೊತ್ತಮೊದಲನೆಯದಾಗಿ ತುಂಬ ಸರಳವಾದ ಸೋಸುಕಗಳು (filter). ಇವು ನೀರಿನಲ್ಲಿರುವ ಎಲ್ಲ > ನಮೂನೆಯ ಕಣಗಳನ್ನು ತಡೆಹಿಡಿಯುತ್ತವೆ. ಇವು ಕಡಿಮೆ ಬೆಲೆಯವು. ಇವುಗಳಲ್ಲೂ ಹಲವು > ನಮೂನೆಗಳಿವೆ. ಕೇವಲ ಸೋಸುಕಗಳು, ಅಯಾನ್ ಎಕ್ಸ್‌ಚೇಂಜ್ ಮಾಡುವವು ಇತ್ಯಾದಿ. ನಿಮ್ಮ ಮನೆಯ > ನೀರಿನಲ್ಲಿ ಮಣ್ಣು, ರಾಡಿ, ಇತ್ಯಾದಿ ಮಾತ್ರವಿದೆ, ಯಾವುದೇ ಸೂಕ್ಷ್ಮ ಜೀವಿ ಮತ್ತು > ರಾಸಾಯನಿಕಗಳಿಲ್ಲ ಎಂದಾದಲ್ಲಿ ನಿಮಗೆ ಸರಳ ಸೋಸುಕ ಸಾಕು. ಸ್ವಲ್ಪ ಹೆಚ್ಚಿನ ಎಚ್ಚರಿಕೆಗಾಗಿ > ನೀರನ್ನು ಕುದಿಸಿ, ತಣಿಸಿ ನಂತರ ಸೋಸುಕಕ್ಕೆ ಹಾಕಿ ಕುಡಿದರೆ ಒಂದು ಮಟ್ಟಿಗೆ ಸುರಕ್ಷಿತ > ಎನ್ನಬಹುದು. > > ಆದರೆ ನಗರದ ನೀರು ಈಗ ಕೇವಲ ಸಾಮಾನ್ಯ ಸೋಸುಕದಿಂದ ಶುದ್ಧವಾಗುವುದಿಲ್ಲ. ಅಂತೆಯೇ > ಮಾರುಕಟ್ಟೆಯಲ್ಲಿ ಮೂರು ಪ್ರಮುಖ ನಮೂನೆಯ ಶುದ್ಧೀಕಾರಕಗಳಿವೆ. ಕೆಲವು ಮಾದರಿಗಳಲ್ಲಿ ಈ ಮೂರೂ > ಅಳವಡಿಕೆಯಾಗಿರುತ್ತದೆ. ಅವುಗಳ ಬಗ್ಗೆ ತಿಳಿಯೋಣ. > > *ಅಲ್ಟ್ರಾ ಫಿಲ್ಟ್ರೇಶನ್ (UF)* > ಇವು ಈ ಲೇಖನದ ಪ್ರಾರಂಭದಲ್ಲಿ ತಿಳಿಸಿದ ಸೋಸುಕಗಳೇ. ಆದರೆ ಇದರಲ್ಲಿ ಬಳಕೆಯಾಗುತ್ತಿರುವ > ಸೋಸುಕ ಅತಿ ಚಿಕ್ಕ ಗಾತ್ರದ್ದು. ಅಂದರೆ ಅತಿ ಚಿಕ್ಕ ಗಾತ್ರದ ವಸ್ತುಗಳನ್ನೂ ಇದು > ತಡೆಹಿಡಿಯುತ್ತದೆ. ನೀರಿನಲ್ಲಿರುವ ಮಣ್ಣು, ಕೆಸರು, ರಾಡಿ, ಚಿಕ್ಕಪುಟ್ಟ ಜೀವಿಗಳು, > ಇತ್ಯಾದಿಗಳನ್ನೆಲ್ಲ ಇದು ತಡೆಹಿಡಿಯುತ್ತದೆ. ಇವು ಕೆಲಸ ಮಾಡಲು ವಿದ್ಯುತ್ ಶಕ್ತಿ ಬೇಡ. > ಇವುಗಳ ಪ್ರಮುಖ ಕೊರತೆ ಎಂದರೆ ಇವು ನೀರಿನಲ್ಲಿ ಕರಗಿರುವ ಲವಣ, ರಾಸಾಯನಿಕಗಳನ್ನು > ತೆಗೆಯಲಾರವು. > > *ಅತಿನೇರಳೆ* > *(ultraviolet –UV)* > ಈ ನಮೂನೆಯಲ್ಲಿ ನೀರಿನ ಮೇಲೆ ಅತಿನೇರಳೆ ಕಿರಣಗಳನ್ನು ಹಾಯಿಸಲಾಗುತ್ತದೆ. ಅತಿನೇರಳೆ > ಕಿರಣಗಳು ನೀರಿನಲ್ಲಿರುವ ಎಲ್ಲ ನಮೂನೆಯ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾಗಳನ್ನು > ಕೊಲ್ಲುತ್ತವೆ. ಅತಿನೇರಳೆ ದೀಪವು ಇರುವ ನಳಿಕೆಯೊಳಗೆ ನೀರನ್ನು ಹರಿಬಿಡಲಾಗುತ್ತದೆ. ನೀರು > ಸಾಮಾನ್ಯವಾಗಿ ಕೆಳಗಿನಿಂದ ಮೇಲೆ ಹೋಗುತ್ತದೆ. ಈ ನಳಿಕೆಯೊಳಗೆ ಗಾಳಿಯ ಗುಳ್ಳೆಗಳಿರಬಾರದು. > ಅತಿನೇರಳೆ ಕಿರಣಗಳು ನೀರಿನಲ್ಲಿರುವ ಬ್ಯಾಕ್ಟೀರಿಯಾ, ವೈರಸ್ ಮತ್ತು ಇತರೆ > ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತವೆ. ಅತಿನೇರಳೆ ಕಿರಣಗಳು ಸೂಕ್ಷ್ಮಜೀವಿಗಳನ್ನೇನೋ > ಕೊಲ್ಲುತ್ತವೆ. ಆದರೆ ಅವುಗಳು ಸತ್ತು ಅದೇ ನೀರಿನಲ್ಲಿರುತ್ತವೆ. ಅಂದರೆ ಅತಿನೇರಳೆ ಕಿರಣಗಳ > ಮೂಲಕ ಹಾಯಿಸಿದ ನಂತರ ನೀರನ್ನು ಸೋಸುವುದು ಅಗತ್ಯ. > > *ವಿಪರ್ಯಯ ಪರಾಸರಣ* > *(Reverse Osmosis –RO)* > ಇವು ತುಂಬ ಜನಪ್ರಿಯವಾದವುಗಳು. ಮೊದಲಿಗೆ ಆಸ್ಮೋಸಿಸ್ ಎಂದರೆ ಏನು ಎಂದು ತಿಳಿಯೋಣ. > ಇದರಲ್ಲಿ ಒಂದು ಅರೆಪಾರಕ ಪರದೆ (semipermeable membrane) ಇರುತ್ತದೆ. ಇದರ ಒಂದು > ಬದಿಯಲ್ಲಿ ನೀರಿನ ಅಧಿಕ ಸಾರೀಕೃತ ದ್ರಾವಣ ಇದ್ದು ಇನ್ನೊಂದು ಬದಿಯಲ್ಲಿ ಕಡಿಮೆ ಸಾರೀಕೃತ > ದ್ರಾವಣ ಇರುತ್ತದೆ. ಈ ಅರೆಪಾರಕ ಪರದೆ ನೀರನ್ನು ಕಡಿಮೆ ಸಾರೀಕೃತ ಬದಿಯಿಂದ ಅಧಿಕ ಸಾರೀಕೃತ > ಬದಿಗೆ ಹರಿಯಲು ಬಿಡುತ್ತದೆ. > > ಸರಳವಾಗಿ ಹೇಳುವುದಾದರೆ ಹೆಚ್ಚು ಲವಣಗಳು ಇರುವ ನೀರಿನ ಬದಿಗೆ ಕಡಿಮೆ ಲವಣಗಳು ಇರುವ ನೀರು > ಹರಿದು ಎರಡೂ ಕಡೆಯಲ್ಲಿ ಲವಣಗಳ ಪರಿಮಾಣ ಒಂದೇ ಆಗುವಂತೆ ಮಾಡುತ್ತದೆ. ಇದು ಪರಾಸರಣ ಕ್ರಿಯೆ > ಅರ್ಥಾತ್ ಆಸ್ಮೋಸಿಸ್. ವಿಪರ್ಯಯ ಪರಾಸರಣ ಅರ್ಥಾತ್ ರಿವರ್ಸ್ ಆಸ್ಮೋಸಿಸ್ ಎಂದರೆ ಇದಕ್ಕೆ > ವಿರುದ್ಧವಾದುದು. ಇಲ್ಲಿ ಅರೆಪಾರಕ ಪರದೆಯ ಒಂದು ಬದಿಯಲ್ಲಿರುವ ಅಧಿಕ ಸಾರೀಕೃತ (ಅಂದರೆ > ಹೆಚ್ಚಿನ ಲವಣಗಳು, ರಾಸಾಯನಿಕಗಳು, ಕಣಗಳು, ಇತ್ಯಾದಿ ಇರುವ) ನೀರಿನಿಂದ ಕಡಿಮೆ ಸಾರೀಕೃತ > ಬದಿಗೆ ಶುದ್ಧ ನೀರು ಹರಿದು ಬರುತ್ತದೆ. > > ಹಾಗೆ ಮಾಡಲು ಈ ಅರೆಪಾರಕ ಪರದೆಯ ಅಧಿಕ ಸಾರೀಕೃತ ನೀರು ಇರುವ ಬದಿಗೆ ತುಂಬ ಒತ್ತಡ > ಹಾಕಬೇಕು. ಕಲುಷಿತ ನೀರಿನಿಂದ ಶುದ್ಧ ನೀರಿನ ಬದಿಗೆ ನೀರು ಹರಿದು ಹೋದ ನಂತರ ಈ ಭಾಗದ > ನೀರಿನಲ್ಲಿ ಎಲ್ಲ ಕಲ್ಮಷಗಳು ಉಳಿದಿರುತ್ತವೆ. ಈ ನೀರನ್ನು ಚೆಲ್ಲಬೇಕು. ಅದಕ್ಕೇ ಈ ಆರ್‌ಓ > ಶುದ್ಧೀಕಾರಕಗಳಲ್ಲಿ ಒಂದು ಚಿಕ್ಕ ಪೈಪ್ ಮೂಲಕ ಹೆಚ್ಚಿಗೆ ನೀರು ಹರಿದು > ಬರುತ್ತಿರುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ಈ ನೀರನ್ನು ಪಾತ್ರೆ ತೊಳೆಯಲು ಬಳಸುತ್ತಾರೆ. > ಈ ವಿಧಾನದಲ್ಲಿ ಒಂದು ಲೀಟರ್ ಶುದ್ಧ ನೀರು ಪಡೆಯುವಾಗ ಇನ್ನೊಂದು ಲೀಟರ್ ನೀರು > ವ್ಯರ್ಥವಾಗಿರುತ್ತದೆ. > > ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುವ ಕೆಲವು ಮಾದರಿಗಳಲ್ಲಿ ಈ ಮೂರೂ ವಿಧಾನಗಳಿರುತ್ತವೆ. > ಇವಲ್ಲದೆ ಇನ್ನೂ ಒಂದು ವಿಧಾನದಲ್ಲಿ ನೀರನ್ನು ಶುದ್ಧೀಕರಿಸಲಾಗುತ್ತದೆ. ಅದು ಸಂಪೂರ್ಣ > ಕರಗಿದ ಘನವಸ್ತುಗಳ (Total Dissolved Solids –TDS) ನಿವಾರಣೆ. ನೀರು ಮೊದಲು > ಅಲ್ಟ್ರಾಫೈನ್ ಫಿಲ್ಟರ್, ನಂತರ ಆರ್‌ಓ, ನಂತರ ಅತಿನೇರಳೆ (ಅಲ್ಟ್ರಾವಯೊಲೆಟ್) ಮೂಲಕ ಹಾದು > ಕೊನೆಗೆ ಟಿಡಿಎಸ್‌ಗಳನ್ನೂ ತೆಗೆಯುವ ಸೋಸುಕದ ಮೂಲಕ ಹಾದು ಸಂಪೂರ್ಣ ಶುದ್ಧ ನೀರು ಕುಡಿಯಲು > ದೊರೆಯುತ್ತದೆ. > > ಜಲಶುದ್ಧೀಕಾರಕಗಳನ್ನು ವರ್ಷಕ್ಕೊಮ್ಮೆ ಸರ್ವೀಸ್ ಮಾಡಿಸಿ ಅದರ ಕೆಲವು ಅಂಗಗಳನ್ನು > ಬದಲಿಸುತ್ತಿರಬೇಕು. ಉದಾಹರಣೆಗೆ ಸೋಸುಕ ಮತ್ತು ಅರೆಪಾರಕ ಪರದೆ. ಸಾಮಾನ್ಯವಾಗಿ ಮೇಲೆ > ತಿಳಿಸಿದ ಈ ಮೂರೂ ವಿಧಾನದಲ್ಲಿ ನೀರನ್ನು ಶುದ್ಧೀಕರಿಸುವ ಶುದ್ಧೀಕಾರಕಗಳಿಗೆ ಅಂದಾಜು > ₹20,000 ಬೆಲೆಯಿದೆ. > > Hareeshkumar K > AM(PCM) > GHS HUSKURU > MALAVALLI TQ > MANDYA DT 571475 > mobile no 9880328224 > email [email protected] > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
