ಡಿಸೆಂಬರ್ ನಿಂದ ಇಲ್ಲಿಯವರೆಗೆ ಏನಿಲ್ಲವೆಂದರೂ ಸರಿಸುಮಾರು 1000ಕ್ಕೂ ಹೆಚ್ಚಿನ ಗಣಿತ ಶಿಕ್ಷಕರನ್ನು ಸಂಪರ್ಕಿಸಿದ್ದೇನೆ. ಅವರೆಲ್ಲರಿಗೂ ಬಹಳ ಆಸ್ಥೆಯಿಂದ 'ಅನಂತದೆಡೆಗೆ' ಗಣಿತ ಪತ್ರಿಕೆಯ ಮಹತ್ವ ಹಾಗೂ ಅದರ ಚಟುವಟಿಕೆಗಳನ್ನು ವಿವರಿಸಿದ್ದೇನೆ. ದುರದೃಷ್ಟವಷಾತ್ ಅವರೆಲ್ಲರು ನಮ್ಮ ಕೈ ಹಿಡಿಯಲಿಲ್ಲ.
ನಮ್ಮ ಯೋಜನೆ ಇದ್ದದ್ದು 48 ಪುಟಗಳ ಪತ್ರಿಕೆ ರೂಪಿಸಬೇಕೆನ್ನುವುದು. ನಮ್ಮ ಗಣಿತ ಶಿಕ್ಷಕರ ಪ್ರೋತ್ಸಾಹವನ್ನು ನೋಡಿ 48 ಪುಟಕ್ಕೆ ವಿಸ್ತರಿಸೋಣವೆಂದು 16 ಪುಟಕ್ಕೆ ಸೀಮಿತಗೊಳಿಸಿಕೊಂಡೆವು. ಪತ್ರಿಕೆ ಪ್ರಾರಂಭವಾಗಿ 4 ತಿಂಗಳುಗಳೇ ಕಳೆದಿವೆ. ಆದರೂ ನಾವು ನಿರೀಕ್ಷಿಸಿದಷ್ಟು ಉತ್ತೇಜನ ನಮಗೆ ಸಿಗಲಿಲ್ಲ. ವಾರ್ಷಿಕ ಚಂದಾ ರೂ. 200 ನೀಡಲು ಮುಖ್ಯಶಿಕ್ಷಕರತ್ತ ಬೊಟ್ಟು ಮಾಡಿದವರೇ ಹೆಚ್ಚು. ಸಮಯದ ಅಭಾವದ ನೆಪ ಹೇಳಿದವರು ಮತ್ತೊಂದಷ್ಟು ಜನ. ಸ್ವಯಂ ಪ್ರೇರಿತರಾಗಿ ಸುಮಾರು 200 ಜನ ಗಣಿತ ಶಿಕ್ಷಕರು ಚಂದಾದಾರರಾಗಿರುವುದೇ ಗಣಿತ ಪತ್ರಿಕೆಯು ಉಸಿರಾಡಲು ಕಾರಣ. ಸರಿಸುಮಾರು 5000 ಗಣಿತ ಶಿಕ್ಷಕರನ್ನು ಒಳಗೊಂಡ ಕರ್ನಾಟಕದಲ್ಲಿ ಅರ್ಧದಷ್ಟು ಶಿಕ್ಷಕರು ಮನಸ್ಸು ಮಾಡಿದರೂ ನಮ್ಮ ಪತ್ರಿಕೆ ಕನ್ನಡ ಪತ್ರಿಕಾ ಇತಿಹಾಸದಲ್ಲೇ ಒಂದು ಮೈಲುಗಲ್ಲಾಗುವುದರಲ್ಲಿ ಎರಡು ಮಾತಿಲ್ಲ. ಇನ್ನೂ ಕಾಲ ಮಿಂಚಿಲ್ಲ ಈಗಲಾದರೂ ಚಂದಾದಾರರಾಗುವರೆಂಬ ಅದಮ್ಯ ನಂಬಿಕೆಯಿದೆ. ಗಣಿತ ಶಿಕ್ಷಕರು ಯಾರಿಗೂ ಕಡಿಮೆಯಿಲ್ಲ. - ಶ್ರೀನಿವಾಸ ಡಿ. ಶೆಟ್ಟಿ (ಬರೆಯಬಾರದ ಮನಸ್ಸಿನಲ್ಲಿ ಬರೆದಿದ್ದೇನೆ. ಕ್ಷಮೆ ಇರಲಿ) -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
