Thank u for d information sir
On Mar 19, 2016 6:30 AM, "HAREESHKUMAR K Agasanapura" <[email protected]>
wrote:

>
> http://m.vijaykarnataka.com/state/State-budget-Digital-Education-to-highschool-students/articleshow/51463798.cms
>
> *ಹೈಸ್ಕೂಲ್ ಹೈಕ್ಳುಗಳಿಗೆ ಡಿಜಿಟಲ್ ಶಿಕ್ಷಣ*
>
> Mar 19, 2016, 04.00 AM IST
>
> WhatsappFacebookGoogle PlusTwitterEmail
>
> state-budget-2
>
> AAA
>
> ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ಕೆ ಅನುಮತಿ ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ
> 'ನಲಿ-ಕಲಿ' ಕಾರ್ಯಕ್ರಮ ಪುನರ್‌ರೂಪಿಸಿ ಜಾರಿ ಗಣಿತ ವಿಷಯದ ಚಟುವಟಿಕೆ ಆಧರಿತ ಕಲಿಕೆ 4,
> 5ನೇ ತರಗತಿಗಳಿಗೂ ವಿಸ್ತರಣೆ
>
> * ಈ ವರ್ಷದೊಳಗೆ ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ.
>
> * ಬಿಸಿಯೂಟ ಅಡಿಗೆಯವರ ಮಾಸಿಕ ಗೌರವಧನ 300 ರೂ. ಹೆಚ್ಚಳ.
>
> * 'ನಲಿ-ಕಲಿ' ಕಾರ್ಯಕ್ರಮ ಪುನರ್‌ರೂಪಿಸಿ ಜಾರಿ.
>
> * ಗಣಿತ ವಿಷಯದ ಚಟುವಟಿಕೆ ಆಧರಿತ ಕಲಿಕೆ 4,5ನೇ ತರಗತಿಗಳಿಗೂ ವಿಸ್ತರಣೆ.
>
> * ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಶಿಕ್ಷಕರ 6 ತರಬೇತಿ ಕಾಲೇಜುಗಳು.
>
> * ಕನಿಷ್ಠ 5 ವರ್ಷಗಳಿಗೆ ಶಾಲೆ ಮತ್ತು ಕಾಲೇಜುಗಳ ಮಾನ್ಯತೆ ನವೀಕರಣ.
>
> * ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮ ಅಳವಡಿಸಲು ಅನುಮತಿ.
>
> ಸರಕಾರಿ ಪ್ರೌಢಶಾಲೆಗಳಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ ಒದಗಿಸಲು
> ಪ್ರೌಢಶಾಲಾ ಶಿಕ್ಷಕರ ಮೂಲಕ ಸಮಗ್ರವಾದ ಇ-ವಿಷಯಾಧರಿತ 'ಐಟಿ ಅಟ್ ಸ್ಕೂಲ್ಸ್ ಇನ್ ಕರ್ನಾಟಕ'
> ಎಂಬ ಕಾರ್ಯಕ್ರಮ ಪ್ರಾರಂಭಿಸಲು ಸರಕಾರ ನಿರ್ಧರಿಸಿದೆ.
>
> ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಪ್ರಸ್ತುತ ಜಾರಿಯಲ್ಲಿರುವ
> ಯೋಜನೆಗಳನ್ನು ತಾರ್ಕಿಕವಾಗಿ ಸಮನ್ವಯಗೊಳಿಸಿ, ಐದು ಹೊಸ ಕಾರ್ಯಕ್ರಮಗಳಡಿ ಜಾರಿಗೆ ತರಲು
> ಉದ್ದೇಶಿಸಲಾಗಿದೆ. ಅವುಗಳೆಂದರೆ ಶಿಕ್ಷಣ ಗುಣಮಟ್ಟ ಸುಧಾರಣೆ ಕಾರ್ಯಕ್ರಮ, ಗುಣಮಟ್ಟ ಖಾತರಿಯ
> ಉಪ ಕ್ರಮಗಳು, ತಂತ್ರಜ್ಞಾನ ಆಧರಿತ ಕಲಿಕೆ, ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ
> ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಕಾರ್ಯಕ್ರಮಗಳು.
>
> ಸಮಂಜಸವಾದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ನೆರವಿನಿಂದ ಸರಕಾರಿ ಶಾಲೆಗಳಲ್ಲಿರುವ
> ವಿದ್ಯಾರ್ಥಿಗಳ ಹಾಗೂ ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಿಗೆ ದಾಖಲಾದ
> ವಿದ್ಯಾರ್ಥಿಗಳ ಕಲಿಕೆಯಲ್ಲಿನ ಸಾಧನೆಯ ಬಗ್ಗೆ ಮೇಲ್ವಿಚಾರಣೆ ನಡೆಸಲು ಉದ್ದೇಶಿಸಲಾಗಿದೆ.
>
> 'ನಲಿ-ಕಲಿ' ಪುನರ್‌ರೂಪಿಸಿ ಜಾರಿ
>
> ಇನ್ನು, ಸರಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಉತ್ತಮಪಡಿಸಲು ವಸ್ತುನಿಷ್ಠ
> ಮೌಲ್ಯಮಾಪನದಿಂದ ಯಶಸ್ವಿ ಕಲಿಕೆಯ ವಿಧಾನ ಎಂದು ಗುರುತಿಸಲಾಗಿರುವ ಚಟುವಟಿಕೆ ಆಧರಿತ
> 'ನಲಿ-ಕಲಿ' ವಿಧಾನವನ್ನು ಪುನರ್ ರೂಪಿಸಿ ಸಮಗ್ರವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.
> ಗಣಿತ ವಿಷಯದ ಚಟುವಟಿಕೆ ಆಧಾರಿತ ಕಲಿಕೆಯನ್ನು 4 ಮತ್ತು 5ನೇ ತರಗತಿಗಳಿಗೂ
> ವಿಸ್ತರಿಸಲಾಗುತ್ತಿದೆ.
>
> ಶಿಕ್ಷಣ ಗುಣಮಟ್ಟ ಹಾಗೂ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ಮೂಡಿಸುವ ಯಶಸ್ವಿ ಉಪ ಕ್ರಮಗಳನ್ನು
> ಕೈಗೊಂಡು ಲಾಭದ ನಿರೀಕ್ಷೆ ಹೊಂದಿಲ್ಲದ ಸಂಸ್ಥೆಗಳ ಚಟುವಟಿಕೆಗಳನ್ನು ವಿಸ್ತರಿಸಲು
> ಉದ್ದೇಶಿಸಿರುವ ಸರಕಾರ, 3 ವರ್ಷಗಳ ಅವಧಿಯಲ್ಲಿ ವೆಚ್ಚದ ಶೇ.50ರಷ್ಟನ್ನು ಭರಿಸಲಿದೆ.
> ಸರಕಾರಿ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ರಜೆಯಲ್ಲಿ ಪೂರಕ ಬೋಧನೆಯ
> ವ್ಯವಸ್ಥೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ.
>
> ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ
>
> 2016ರೊಳಗೆ ಖಾಸಗಿ ಶಾಲೆ-ಕಾಲೇಜುಗಳೂ ಸೇರಿದಂತೆ ಶಾಲೆ-ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳ
> ಆಧಾರ್ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಸರಕಾರ ತೀರ್ಮಾನಿಸಿದೆ. ಎಲ್ಲ ಸರಕಾರಿ
> ಶಾಲೆಗಳಲ್ಲಿ ಯೋಗ ಶಿಕ್ಷಣವನ್ನು ಆರಂಭಿಸುವುದಕ್ಕೆ ಪ್ರೋತ್ಸಾಹ ನೀಡುವುದಾಗಿ ಸರಕಾರ
> ಪ್ರಕಟಿಸಿದೆ.
>
> ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಡಿಗೆಯವರ ಗೌರವಧನವನ್ನು
> ಮಾಸಿಕ 300 ರೂ. ಹೆಚ್ಚಿಸಲಾಗಿದೆ. ಶಿಕ್ಷಕರ 6 ತರಬೇತಿ ಕಾಲೇಜುಗಳನ್ನು ಉನ್ನತ ಶಿಕ್ಷಣ
> ಇಲಾಖೆಯ ವ್ಯಾಪ್ತಿಗೆ ತರಲಾಗುತ್ತಿದೆ. ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಒಂದೇ
> ಆಡಳಿತ ಹಾಗೂ ಕಾರ್ಯವ್ಯವಸ್ಥೆಯಡಿ ತರಲು ಮೂರು ವರ್ಷದ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ.
>
> 5 ವರ್ಷಗಳಿಗೆ ಮಾನ್ಯತೆ ನವೀಕರಣ
>
> ಕನಿಷ್ಠ 5 ವರ್ಷಗಳಿಗೆ ಶಾಲೆ ಮತ್ತು ಕಾಲೇಜುಗಳ ಮಾನ್ಯತೆ ನವೀಕರಣ. ಸಿಬಿಎಸ್‌ಇ ಮತ್ತು
> ಐಸಿಎಸ್‌ಇ ಪಠ್ಯಕ್ರಮ ಅಳವಡಿಸಲು ಅನುಮತಿ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ
> ಸ್ಥಾನಮಾನಕ್ಕಾಗಿ ಮಾನ್ಯತೆ ಅಥವಾ ನಿರಾಕ್ಷೇಪಣೆ ಪತ್ರ ನೀಡುವುದು. ಶಿಕ್ಷಣ ಹಕ್ಕು
> ಕಾಯಿದೆಯಡಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಖಾಸಗಿ ಶಾಲೆಗಳಿಗೆ ಶಿಕ್ಷಣ ವೆಚ್ಚ
> ಮರುಪಾವತಿ ಪ್ರಕ್ರಿಯೆ ಮುಂದುವರಿಕೆ. ಎಲ್ಲ ಖಾಸಗಿ ಶಾಲೆ ಹಾಗೂ ಕಾಲೇಜುಗಳಲ್ಲಿರುವ ಬೋಧಕ
> ಮತ್ತು ಮೂಲಸೌಕರ್ಯ ಸಂಪನ್ಮೂಲಗಳ ವಿವರವನ್ನು ಸಾರ್ವಜನಿಕ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ
> ವ್ಯವಸ್ಥೆ ಮಾಡುವುದಾಗಿ ಸರಕಾರ ಪ್ರಕಟಿಸಿದೆ. ಒಟ್ಟಾರೆ, 2016-17ನೇ ಸಾಲಿನಲ್ಲಿ ಪ್ರಾಥಮಿಕ
> ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ 13,373 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
>
> ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ನಿರ್ಧಾರ
>
> -ಕಲಬುರ್ಗಿ ಹೆಸರಿನಲ್ಲಿ ಸಂಶೋಧನಾ ಕೇಂದ್ರ, ಪ್ರಶಸ್ತಿ-
>
> * ಕಲಬುರ್ಗಿ ಹೆಸರಿನಲ್ಲಿ ಅತ್ಯುತ್ತಮ ಸಂಶೋಧನಾ ಸಾಹಿತ್ಯಕ್ಕೆ ಪ್ರತಿ ವರ್ಷ ಪ್ರಶಸ್ತಿ
>
> * ಬೀದರ್‌ನಲ್ಲಿ ಸರಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ
>
> * ಕರ್ನಾಟಕ ಚಿತ್ರಕಲಾ ಪರಿಷತ್‌ನ ಕಾರ್ಯಕ್ರಮಗಳಿಗೆ 1.5 ಕೋಟಿ ರೂ. ಅನುದಾನ
>
> * ಕರ್ನಾಟಕ ಜಾನಪದ ವಿವಿ ವ್ಯಾಪ್ತಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಪಾರಂಪರಿಕ
> ಕೇಂದ್ರ ಸ್ಥಾಪನೆ
>
> * ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ಸಂಸ್ಥೆಗಳಿಗೂ 'ಜ್ಞಾನ ಸಂಗಮ' ಯೋಜನೆ
> ವಿಸ್ತರಣೆ
>
> * ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ತುಮಕೂರು ವಿವಿಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ
> ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ
>
> ರಾಜ್ಯದಲ್ಲಿ ಜ್ಞಾನ ಮತ್ತು ಆರ್ಥಿಕ ಅಗತ್ಯಗಳಿಗೆ ಒತ್ತು ನೀಡುವ ಮಾನವ ಸಂಪನ್ಮೂಲ
> ಕೇಂದ್ರಿತ ಪ್ರಗತಿದಾಯಕ ಕರ್ನಾಟಕ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದೆ.
>
> ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎಲ್ಲಾ ಸಂಸ್ಥೆಗಳಲ್ಲಿ 'ಜ್ಞಾನ ಸಂಗಮ' ಯೋಜನೆ
> ವಿಸ್ತರಿಸುವುದರ ಜತೆಗೆ, ಸರಕಾರಿ ಕಾಲೇಜುಗಳು ಎನ್‌ಎಎಸಿ ಮಾನ್ಯತೆ ಪಡೆದು ಯುಜಿಸಿ ಅನುದಾನ
> ಪಡೆಯಲು ಅನುವಾಗುವಂತೆ 10 ಕೋಟಿ ರೂ.ಗಳ ಅನುದಾನ ಒದಗಿಸಲಾಗುತ್ತದೆ. ಸಾಂಪ್ರದಾಯಿಕ ಪದವಿ
> ಕೋರ್ಸ್‌ಗಳ ಜತೆಗೆ, ಉತ್ತಮ ಉದ್ಯೋಗವಕಾಶಗಳಿರುವ ಕ್ಷೇತ್ರಗಳಾದ ಮಾಹಿತಿ ತಂತ್ರಜ್ಞಾನ,
> ದೂರಸಂಪರ್ಕ, ರೀಟೇಲ್, ಪ್ರವಾಸೋದ್ಯಮ, ಮಾಧ್ಯಮ ಮತ್ತು ಮನೋರಂಜನೆ, ಎಲೆಕ್ಟ್ರಾನಿಕ್ಸ್
> ಮತ್ತು ಆರೋಗ್ಯ ಪಾಲನೆ, ಮೆಕ್ಯಾನಿಕಲ್, ಸೈಬರ್ ಭದ್ರತೆ ಇತ್ಯಾದಿ ಕೋರ್ಸ್‌ಗಳನ್ನು 5 ಕೋಟಿ
> ರೂ.ಗಳ ವೆಚ್ಚದೊಂದಿಗೆ ಇಂಡೋ-ಜರ್ಮನ್ ಸಹಭಾಗಿತ್ವದಲ್ಲಿ ಐದು ಸರಕಾರಿ ಎಂಜಿನಿಯರಿಂಗ್
> ಕಾಲೇಜುಗಳಲ್ಲಿ ಪ್ರಾರಂಭಿಸಲಾಗುತ್ತದೆ.
>
> ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ
>
> ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ತುಮಕೂರು ವಿವಿಗಳಲ್ಲಿ
> ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು 10 ಕೋಟಿ ರೂ. ವೆಚ್ಚದಲ್ಲಿ
> ಶ್ರೇಷ್ಠತಾ ಕೇಂದ್ರಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.
>
> ಕರ್ನಾಟಕ ಜಾನಪದ ವಿವಿ ಕಾರ್ಯವ್ಯಾಪ್ತಿಯಲ್ಲಿ ರಾಜ್ಯದ ಶ್ರೀಮಂತ ಹಾಗೂ ಸಾಂಸ್ಕೃತಿಕ ಮತ್ತು
> ಶೈಕ್ಷಣಿಕ ಪರಂಪರೆ ಬಿಂಬಿಸಲು ಕರ್ನಾಟಕ ಪಾರಂಪರಿಕ ಕೇಂದ್ರವನ್ನು 2 ಕೋಟಿ ರೂ. ವೆಚ್ಚದಲ್ಲಿ
> ಸ್ಥಾಪಿಸಲಾಗುತ್ತಿದೆ. ಬೀದರ್‌ನಲ್ಲಿ ಸರಕಾರಿ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲು
> ತೀರ್ಮಾನಿಸಲಾಗಿದೆ.
>
> ಅಂಗನವಾಡಿ ಮಕ್ಕಳಿಗೆ ಕೆನೆಸಹಿತ ಹಾಲು
>
> ಈ ವರ್ಷದಿಂದ ಅಂಗನವಾಡಿ ಮಕ್ಕಳಿಗೆ ಕೆನೆಸಹಿತ ಹಾಲು ನೀಡಲು 'ಕ್ಷೀರಭಾಗ್ಯ ಯೋಜನೆ'ಯಡಿ
> 42.50 ಕೋಟಿ ರೂ. ಅನುದಾನ ಮೀಸಲಿಟ್ಟರೆ, ಹಿಂದುಳಿದ ತಾಲೂಕುಗಳಲ್ಲಿರುವ ಗರ್ಭಿಣಿ ಮತ್ತು
> ಬಾಣಂತಿಯರಿಗೆ ಮೈಕ್ರೊ ನ್ಯೂಟ್ರಿಯಂಟ್ಸ್ ಒದಗಿಸಲು 'ಮಾತೃಪುಷ್ಟಿವರ್ಧಿನಿ' ಯೋಜನೆಗಾಗಿ 42
> ಕೋಟಿ ರೂ. ಅನುದಾನ ಘೋಷಿಸಲಾಗಿದೆ.
>
> ವಿಶೇಷ ಚೇತನರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಈವರೆಗೆ ಇದ್ದ ಮಹಿಳಾ
> ಅಭಿವೃದ್ಧಿ ನಿಗಮವನ್ನು 'ಮಹಿಳಾ ಮತ್ತು ವಿಶೇಷಚೇತನರ ಅಭಿವೃದ್ಧಿ ನಿಗಮ'ಎಂದು ಮರುನಾಮಕರಣ
> ಮಾಡಲು ಬಜೆಟ್‌ನಲ್ಲಿ ನಿರ್ಧರಿಸಲಾಗಿದೆ.
>
> ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 25 ಸಾವಿರ ಮಕ್ಕಳಿಗೆ ಬಾಲ ಪೋಷಕ ಯೋಜನೆಯಡಿ
> ಪ್ರತಿದಿನ (180 ದಿನ) 2 ಗ್ರಾಂ ಸ್ಪಿರುಲಿನಾ ನೀಡಲು 3.6 ಕೋಟಿ ವೆಚ್ಚದ 'ಬಾಲ ಪೋಷಕ
> ಯೋಜನೆ'ಯನ್ನು ರೂಪಿಸಲಾಗಿದೆ. ಬಹು ಅಪೌಷ್ಟಿಕ ಆಹಾರ ಕೊರತೆಯುಳ್ಳ ಮಕ್ಕಳ ಹಿತದೃಷ್ಟಿಯಿಂದ
> 3.12 ಕೋಟಿ ರೂ. ಮೀಸಲಿಟ್ಟಿದ್ದು, ಪ್ರಸ್ತುತ ಪ್ರತಿ ಮಗುವಿಗೆ ನೀಡುತ್ತಿರುವ 750 ರೂ.ಗಳ
> ಬದಲಿಗೆ 2 ಸಾವಿರ ರೂ.ಗೆ ಏರಿಸಲಾಗಿದೆ.
>
> 4 ಸಾವಿರ ಅಂಗನವಾಡಿ ಕಟ್ಟಡಗಳು
>
> ಪರಿಶಿಷ್ಟ ಜಾತಿ/ಪಂಗಡದ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ 500
> ಸ್ಥಳಗಳಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ನಿಧಿಗಳಿಂದ 3 ಸಾವಿರ ಅಂಗನವಾಡಿ ಕಟ್ಟಡಗಳು,
> ಎಸ್‌ಡಿಪಿ ಅಡಿಯಲ್ಲಿ 500 ಕಟ್ಟಡಗಳು ಸೇರಿದಂತೆ ಒಟ್ಟಾರೆ 4 ಸಾವಿರ ಅಂಗನವಾಡಿ
> ಕಟ್ಟಡಗಳನ್ನು ನಿರ್ಮಿಸಲಾಗುವುದು. ಅಂಗನವಾಡಿ ಮಕ್ಕಳಿಗೆ ಕೆನೆಭರಿತ ಹಾಲು ನೀಡಲು ಬಾಲ
> ಸ್ನೇಹಿ ಕೇಂದ್ರಗಳ ಯೋಜನೆಯಡಿ 10 ಸಾವಿರ ಅಂಗನವಾಡಿ ಕೇಂದ್ರಗಳನ್ನು 'ಶಿಶು ಸ್ನೇಹಿ
> ಕೇಂದ್ರ'ಗಳನ್ನಾಗಿ ಪರಿವರ್ತಿಸಲಾಗುವುದು. ಇದಕ್ಕಾಗಿ ಪ್ರತಿ ಕೇಂದ್ರಕ್ಕೆ ತಲಾ 10 ಸಾವಿರ
> ರೂ. ಅನುದಾನ ಘೋಷಣೆಯಾಗಿದೆ.
>
> ಸ್ಪರ್ಧಾಚೇತನ ಯೋಜನೆ
>
> ಸ್ತ್ರೀಶಕ್ತಿ ಗುಂಪುಗಳ ನೋಂದಣಿಗಾಗಿ 30 ಲಕ್ಷ ರೂ., ಮಹಿಳಾ ಸಬಲೀಕರಣ ಕಾರ್ಯನೀತಿ ಜಾರಿ,
> ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಪ್ರಾರಂಭ, ಐಎಎಸ್/ಕೆಎಎಸ್ ಆಕಾಂಕ್ಷಿಗಳ ತರಬೇತಿಗಾಗಿ
> 'ಸ್ಪರ್ಧಾ ಚೇತನ ಯೋಜನೆ'ಯಡಿ 1 ಕೋಟಿ ರೂ. ಸಹಾಯಧನ ಮೀಸಲು. 1.50 ಕೊಟಿ ರೂ.ವೆಚ್ಚದಲ್ಲಿ
> ವಿಶೇಷಚೇತನ ಪೋಷಕರಿಗೆ ಅರಿವು ಮೂಡಿಸಲು 'ಅರಿವಿನ ಸಿಂಚನ' ಯೋಜನೆ ಜಾರಿ ಹಾಗೂ ನಿರಾಶ್ರಿತ
> ಬುದ್ಧಿಮಾಂದ್ಯರ ಸಂರಕ್ಷಣೆಗಾಗಿ 'ಅನುಪಾಲನಾ ಗೃಹ'ಗಳನ್ನು ತೆರೆಯಲು 4 ಕೋಟಿ ರೂ. ಅನುದಾನ
> ಘೋಷಣೆಯಾಗಿದೆ.
>
> ವಿಶೇಷಚೇತನರಿಗೆ ನಿರಾಳ
>
> ವಿಶೇಷಚೇತನರಿಗೆ 'ಸಾಧನಾ ಸಲಕರಣಾ ಯೋಜನೆ'ಯಡಿ ನೀಡುವ ಮೊತ್ತ 15 ಸಾವಿರ ರೂ.ಗೆ
> ಏರಿಕೆಯಾಗಿದೆ. ಜತೆಗೆ ಈ ವರ್ಷದಿಂದ ತೀವ್ರ ಅಂಗವಿಕಲತೆಯುಳ್ಳ 2 ಸಾವಿರ ಮಂದಿಗೆ
> ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಒದಗಿಸಲಾಗುವುದು. ಜಿಲ್ಲಾ ಪುನರ್ವಸತಿ ಕೇಂದ್ರಗಳ
> ಸಹಾಯಧನವನ್ನು ಇನ್ನೂ 16 ಜಿಲ್ಲೆಗಳಿಗೆ ವಿಸ್ತರಿಸಿ, ಪ್ರತಿ ಕೇಂದ್ರಕ್ಕೆ 28 ಲಕ್ಷದ
> ಬದಲಿಗೆ 36 ಲಕ್ಷ ರೂ. ನೀಡಲಾಗುವುದು. ವಿಶೇಷಚೇತನರ ಶಾಲಾ ಕಟ್ಟಡಗಳ ನಿರ್ಮಾಣ ಮತ್ತು
> ದುರಸ್ತಿಗಾಗಿ 10 ಕೋಟಿ ರೂ. ಮೀಸಲಿಡಲಾಗಿದೆ.
>
> ಬುದ್ಧಿಮಾಂದ್ಯ ಮಕ್ಕಳ ಶಾಲೆಗಳಿಗೆ ಪ್ರತಿ ಮಗುವಿಗೆ ನೀಡುತ್ತಿರುವ ಅನುದಾನವನ್ನು ವಸತಿ
> ಶಾಲೆಗಳಲ್ಲಿ 5 ಸಾವಿರವಿದ್ದುದು 5,600 ರೂ.ಗೆ ಮತ್ತು ವಸತಿ ರಹಿತ ಶಾಲೆಗಳಿಗೆ 4 ಸಾವಿರ
> ರೂ. ಇದ್ದುದು 4,800 ರೂ.ಗೆ ಪರಿಷ್ಕರಿಸಲಾಗಿದೆ. ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರಿಗೆ
> 'ಸ್ತ್ರೀ ಶಕ್ತಿ ಕೌಶಲ್ಯ' ಯೋಜನೆಯಡಿ ತರಬೇತಿ ನೀಡಲು 2.50 ಕೋಟಿ ರೂ., ಎಚ್‌ಐವಿ
> ಪೀಡಿತರಿಗೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸಾಲದ ರೂಪದಲ್ಲಿ 40 ಸಾವಿರ ಹಾಗೂ
> ಸಹಾಯಧನವಾಗಿ 10 ಸಾವಿರ ರೂ. ನೀಡಲು 'ಧನಶ್ರೀ' ಯೋಜನೆಗಾಗಿ 5 ಕೋಟಿ ಅನುದಾನ
> ಮೀಸಲಿಡಲಾಗಿದೆ. ಈ ಬಾರಿ ಈ ಇಲಾಖೆಗೆ ಒಟ್ಟಾರೆ 4,497 ಕೋಟಿ ರೂ. ಅನುದಾನ ನೀಡಲಾಗಿದೆ.
>
> Hareeshkumar K
> AM(PCM)
> GHS HUSKURU
> MALAVALLI TQ
> MANDYA DT 571475
> mobile no 9880328224
> email [email protected]
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to