IT@ school? ? ? ? ? ? ? Bari hesrige aste. 2016-03-19 11:25 GMT+05:30 DORA CARMINE D'SILVA <[email protected]>:
> Thank u for d information sir > On Mar 19, 2016 6:30 AM, "HAREESHKUMAR K Agasanapura" < > [email protected]> wrote: > >> >> http://m.vijaykarnataka.com/state/State-budget-Digital-Education-to-highschool-students/articleshow/51463798.cms >> >> *ಹೈಸ್ಕೂಲ್ ಹೈಕ್ಳುಗಳಿಗೆ ಡಿಜಿಟಲ್ ಶಿಕ್ಷಣ* >> >> Mar 19, 2016, 04.00 AM IST >> >> WhatsappFacebookGoogle PlusTwitterEmail >> >> state-budget-2 >> >> AAA >> >> ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ಕೆ ಅನುಮತಿ ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ >> 'ನಲಿ-ಕಲಿ' ಕಾರ್ಯಕ್ರಮ ಪುನರ್‌ರೂಪಿಸಿ ಜಾರಿ ಗಣಿತ ವಿಷಯದ ಚಟುವಟಿಕೆ ಆಧರಿತ ಕಲಿಕೆ 4, >> 5ನೇ ತರಗತಿಗಳಿಗೂ ವಿಸ್ತರಣೆ >> >> * ಈ ವರ್ಷದೊಳಗೆ ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ. >> >> * ಬಿಸಿಯೂಟ ಅಡಿಗೆಯವರ ಮಾಸಿಕ ಗೌರವಧನ 300 ರೂ. ಹೆಚ್ಚಳ. >> >> * 'ನಲಿ-ಕಲಿ' ಕಾರ್ಯಕ್ರಮ ಪುನರ್‌ರೂಪಿಸಿ ಜಾರಿ. >> >> * ಗಣಿತ ವಿಷಯದ ಚಟುವಟಿಕೆ ಆಧರಿತ ಕಲಿಕೆ 4,5ನೇ ತರಗತಿಗಳಿಗೂ ವಿಸ್ತರಣೆ. >> >> * ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಶಿಕ್ಷಕರ 6 ತರಬೇತಿ ಕಾಲೇಜುಗಳು. >> >> * ಕನಿಷ್ಠ 5 ವರ್ಷಗಳಿಗೆ ಶಾಲೆ ಮತ್ತು ಕಾಲೇಜುಗಳ ಮಾನ್ಯತೆ ನವೀಕರಣ. >> >> * ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮ ಅಳವಡಿಸಲು ಅನುಮತಿ. >> >> ಸರಕಾರಿ ಪ್ರೌಢಶಾಲೆಗಳಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ ಒದಗಿಸಲು >> ಪ್ರೌಢಶಾಲಾ ಶಿಕ್ಷಕರ ಮೂಲಕ ಸಮಗ್ರವಾದ ಇ-ವಿಷಯಾಧರಿತ 'ಐಟಿ ಅಟ್ ಸ್ಕೂಲ್ಸ್ ಇನ್ ಕರ್ನಾಟಕ' >> ಎಂಬ ಕಾರ್ಯಕ್ರಮ ಪ್ರಾರಂಭಿಸಲು ಸರಕಾರ ನಿರ್ಧರಿಸಿದೆ. >> >> ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಪ್ರಸ್ತುತ ಜಾರಿಯಲ್ಲಿರುವ >> ಯೋಜನೆಗಳನ್ನು ತಾರ್ಕಿಕವಾಗಿ ಸಮನ್ವಯಗೊಳಿಸಿ, ಐದು ಹೊಸ ಕಾರ್ಯಕ್ರಮಗಳಡಿ ಜಾರಿಗೆ ತರಲು >> ಉದ್ದೇಶಿಸಲಾಗಿದೆ. ಅವುಗಳೆಂದರೆ ಶಿಕ್ಷಣ ಗುಣಮಟ್ಟ ಸುಧಾರಣೆ ಕಾರ್ಯಕ್ರಮ, ಗುಣಮಟ್ಟ ಖಾತರಿಯ >> ಉಪ ಕ್ರಮಗಳು, ತಂತ್ರಜ್ಞಾನ ಆಧರಿತ ಕಲಿಕೆ, ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ >> ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಕಾರ್ಯಕ್ರಮಗಳು. >> >> ಸಮಂಜಸವಾದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ನೆರವಿನಿಂದ ಸರಕಾರಿ ಶಾಲೆಗಳಲ್ಲಿರುವ >> ವಿದ್ಯಾರ್ಥಿಗಳ ಹಾಗೂ ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಿಗೆ ದಾಖಲಾದ >> ವಿದ್ಯಾರ್ಥಿಗಳ ಕಲಿಕೆಯಲ್ಲಿನ ಸಾಧನೆಯ ಬಗ್ಗೆ ಮೇಲ್ವಿಚಾರಣೆ ನಡೆಸಲು ಉದ್ದೇಶಿಸಲಾಗಿದೆ. >> >> 'ನಲಿ-ಕಲಿ' ಪುನರ್‌ರೂಪಿಸಿ ಜಾರಿ >> >> ಇನ್ನು, ಸರಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಉತ್ತಮಪಡಿಸಲು ವಸ್ತುನಿಷ್ಠ >> ಮೌಲ್ಯಮಾಪನದಿಂದ ಯಶಸ್ವಿ ಕಲಿಕೆಯ ವಿಧಾನ ಎಂದು ಗುರುತಿಸಲಾಗಿರುವ ಚಟುವಟಿಕೆ ಆಧರಿತ >> 'ನಲಿ-ಕಲಿ' ವಿಧಾನವನ್ನು ಪುನರ್ ರೂಪಿಸಿ ಸಮಗ್ರವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. >> ಗಣಿತ ವಿಷಯದ ಚಟುವಟಿಕೆ ಆಧಾರಿತ ಕಲಿಕೆಯನ್ನು 4 ಮತ್ತು 5ನೇ ತರಗತಿಗಳಿಗೂ >> ವಿಸ್ತರಿಸಲಾಗುತ್ತಿದೆ. >> >> ಶಿಕ್ಷಣ ಗುಣಮಟ್ಟ ಹಾಗೂ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ಮೂಡಿಸುವ ಯಶಸ್ವಿ ಉಪ >> ಕ್ರಮಗಳನ್ನು ಕೈಗೊಂಡು ಲಾಭದ ನಿರೀಕ್ಷೆ ಹೊಂದಿಲ್ಲದ ಸಂಸ್ಥೆಗಳ ಚಟುವಟಿಕೆಗಳನ್ನು >> ವಿಸ್ತರಿಸಲು ಉದ್ದೇಶಿಸಿರುವ ಸರಕಾರ, 3 ವರ್ಷಗಳ ಅವಧಿಯಲ್ಲಿ ವೆಚ್ಚದ ಶೇ.50ರಷ್ಟನ್ನು >> ಭರಿಸಲಿದೆ. ಸರಕಾರಿ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ರಜೆಯಲ್ಲಿ >> ಪೂರಕ ಬೋಧನೆಯ ವ್ಯವಸ್ಥೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. >> >> ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ >> >> 2016ರೊಳಗೆ ಖಾಸಗಿ ಶಾಲೆ-ಕಾಲೇಜುಗಳೂ ಸೇರಿದಂತೆ ಶಾಲೆ-ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳ >> ಆಧಾರ್ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಸರಕಾರ ತೀರ್ಮಾನಿಸಿದೆ. ಎಲ್ಲ ಸರಕಾರಿ >> ಶಾಲೆಗಳಲ್ಲಿ ಯೋಗ ಶಿಕ್ಷಣವನ್ನು ಆರಂಭಿಸುವುದಕ್ಕೆ ಪ್ರೋತ್ಸಾಹ ನೀಡುವುದಾಗಿ ಸರಕಾರ >> ಪ್ರಕಟಿಸಿದೆ. >> >> ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಡಿಗೆಯವರ ಗೌರವಧನವನ್ನು >> ಮಾಸಿಕ 300 ರೂ. ಹೆಚ್ಚಿಸಲಾಗಿದೆ. ಶಿಕ್ಷಕರ 6 ತರಬೇತಿ ಕಾಲೇಜುಗಳನ್ನು ಉನ್ನತ ಶಿಕ್ಷಣ >> ಇಲಾಖೆಯ ವ್ಯಾಪ್ತಿಗೆ ತರಲಾಗುತ್ತಿದೆ. ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಒಂದೇ >> ಆಡಳಿತ ಹಾಗೂ ಕಾರ್ಯವ್ಯವಸ್ಥೆಯಡಿ ತರಲು ಮೂರು ವರ್ಷದ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. >> >> 5 ವರ್ಷಗಳಿಗೆ ಮಾನ್ಯತೆ ನವೀಕರಣ >> >> ಕನಿಷ್ಠ 5 ವರ್ಷಗಳಿಗೆ ಶಾಲೆ ಮತ್ತು ಕಾಲೇಜುಗಳ ಮಾನ್ಯತೆ ನವೀಕರಣ. ಸಿಬಿಎಸ್‌ಇ ಮತ್ತು >> ಐಸಿಎಸ್‌ಇ ಪಠ್ಯಕ್ರಮ ಅಳವಡಿಸಲು ಅನುಮತಿ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ >> ಸ್ಥಾನಮಾನಕ್ಕಾಗಿ ಮಾನ್ಯತೆ ಅಥವಾ ನಿರಾಕ್ಷೇಪಣೆ ಪತ್ರ ನೀಡುವುದು. ಶಿಕ್ಷಣ ಹಕ್ಕು >> ಕಾಯಿದೆಯಡಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಖಾಸಗಿ ಶಾಲೆಗಳಿಗೆ ಶಿಕ್ಷಣ ವೆಚ್ಚ >> ಮರುಪಾವತಿ ಪ್ರಕ್ರಿಯೆ ಮುಂದುವರಿಕೆ. ಎಲ್ಲ ಖಾಸಗಿ ಶಾಲೆ ಹಾಗೂ ಕಾಲೇಜುಗಳಲ್ಲಿರುವ ಬೋಧಕ >> ಮತ್ತು ಮೂಲಸೌಕರ್ಯ ಸಂಪನ್ಮೂಲಗಳ ವಿವರವನ್ನು ಸಾರ್ವಜನಿಕ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ >> ವ್ಯವಸ್ಥೆ ಮಾಡುವುದಾಗಿ ಸರಕಾರ ಪ್ರಕಟಿಸಿದೆ. ಒಟ್ಟಾರೆ, 2016-17ನೇ ಸಾಲಿನಲ್ಲಿ ಪ್ರಾಥಮಿಕ >> ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ 13,373 ಕೋಟಿ ರೂ.ಗಳನ್ನು ಒದಗಿಸಲಾಗಿದೆ. >> >> ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ನಿರ್ಧಾರ >> >> -ಕಲಬುರ್ಗಿ ಹೆಸರಿನಲ್ಲಿ ಸಂಶೋಧನಾ ಕೇಂದ್ರ, ಪ್ರಶಸ್ತಿ- >> >> * ಕಲಬುರ್ಗಿ ಹೆಸರಿನಲ್ಲಿ ಅತ್ಯುತ್ತಮ ಸಂಶೋಧನಾ ಸಾಹಿತ್ಯಕ್ಕೆ ಪ್ರತಿ ವರ್ಷ ಪ್ರಶಸ್ತಿ >> >> * ಬೀದರ್‌ನಲ್ಲಿ ಸರಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ >> >> * ಕರ್ನಾಟಕ ಚಿತ್ರಕಲಾ ಪರಿಷತ್‌ನ ಕಾರ್ಯಕ್ರಮಗಳಿಗೆ 1.5 ಕೋಟಿ ರೂ. ಅನುದಾನ >> >> * ಕರ್ನಾಟಕ ಜಾನಪದ ವಿವಿ ವ್ಯಾಪ್ತಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಪಾರಂಪರಿಕ >> ಕೇಂದ್ರ ಸ್ಥಾಪನೆ >> >> * ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ಸಂಸ್ಥೆಗಳಿಗೂ 'ಜ್ಞಾನ ಸಂಗಮ' ಯೋಜನೆ >> ವಿಸ್ತರಣೆ >> >> * ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ತುಮಕೂರು ವಿವಿಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ >> ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ >> >> ರಾಜ್ಯದಲ್ಲಿ ಜ್ಞಾನ ಮತ್ತು ಆರ್ಥಿಕ ಅಗತ್ಯಗಳಿಗೆ ಒತ್ತು ನೀಡುವ ಮಾನವ ಸಂಪನ್ಮೂಲ >> ಕೇಂದ್ರಿತ ಪ್ರಗತಿದಾಯಕ ಕರ್ನಾಟಕ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದೆ. >> >> ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎಲ್ಲಾ ಸಂಸ್ಥೆಗಳಲ್ಲಿ 'ಜ್ಞಾನ ಸಂಗಮ' ಯೋಜನೆ >> ವಿಸ್ತರಿಸುವುದರ ಜತೆಗೆ, ಸರಕಾರಿ ಕಾಲೇಜುಗಳು ಎನ್‌ಎಎಸಿ ಮಾನ್ಯತೆ ಪಡೆದು ಯುಜಿಸಿ ಅನುದಾನ >> ಪಡೆಯಲು ಅನುವಾಗುವಂತೆ 10 ಕೋಟಿ ರೂ.ಗಳ ಅನುದಾನ ಒದಗಿಸಲಾಗುತ್ತದೆ. ಸಾಂಪ್ರದಾಯಿಕ ಪದವಿ >> ಕೋರ್ಸ್‌ಗಳ ಜತೆಗೆ, ಉತ್ತಮ ಉದ್ಯೋಗವಕಾಶಗಳಿರುವ ಕ್ಷೇತ್ರಗಳಾದ ಮಾಹಿತಿ ತಂತ್ರಜ್ಞಾನ, >> ದೂರಸಂಪರ್ಕ, ರೀಟೇಲ್, ಪ್ರವಾಸೋದ್ಯಮ, ಮಾಧ್ಯಮ ಮತ್ತು ಮನೋರಂಜನೆ, ಎಲೆಕ್ಟ್ರಾನಿಕ್ಸ್ >> ಮತ್ತು ಆರೋಗ್ಯ ಪಾಲನೆ, ಮೆಕ್ಯಾನಿಕಲ್, ಸೈಬರ್ ಭದ್ರತೆ ಇತ್ಯಾದಿ ಕೋರ್ಸ್‌ಗಳನ್ನು 5 ಕೋಟಿ >> ರೂ.ಗಳ ವೆಚ್ಚದೊಂದಿಗೆ ಇಂಡೋ-ಜರ್ಮನ್ ಸಹಭಾಗಿತ್ವದಲ್ಲಿ ಐದು ಸರಕಾರಿ ಎಂಜಿನಿಯರಿಂಗ್ >> ಕಾಲೇಜುಗಳಲ್ಲಿ ಪ್ರಾರಂಭಿಸಲಾಗುತ್ತದೆ. >> >> ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ >> >> ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ತುಮಕೂರು ವಿವಿಗಳಲ್ಲಿ >> ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು 10 ಕೋಟಿ ರೂ. ವೆಚ್ಚದಲ್ಲಿ >> ಶ್ರೇಷ್ಠತಾ ಕೇಂದ್ರಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. >> >> ಕರ್ನಾಟಕ ಜಾನಪದ ವಿವಿ ಕಾರ್ಯವ್ಯಾಪ್ತಿಯಲ್ಲಿ ರಾಜ್ಯದ ಶ್ರೀಮಂತ ಹಾಗೂ ಸಾಂಸ್ಕೃತಿಕ >> ಮತ್ತು ಶೈಕ್ಷಣಿಕ ಪರಂಪರೆ ಬಿಂಬಿಸಲು ಕರ್ನಾಟಕ ಪಾರಂಪರಿಕ ಕೇಂದ್ರವನ್ನು 2 ಕೋಟಿ ರೂ. >> ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಬೀದರ್‌ನಲ್ಲಿ ಸರಕಾರಿ ಎಂಜಿನಿಯರಿಂಗ್ ಕಾಲೇಜು >> ಪ್ರಾರಂಭಿಸಲು ತೀರ್ಮಾನಿಸಲಾಗಿದೆ. >> >> ಅಂಗನವಾಡಿ ಮಕ್ಕಳಿಗೆ ಕೆನೆಸಹಿತ ಹಾಲು >> >> ಈ ವರ್ಷದಿಂದ ಅಂಗನವಾಡಿ ಮಕ್ಕಳಿಗೆ ಕೆನೆಸಹಿತ ಹಾಲು ನೀಡಲು 'ಕ್ಷೀರಭಾಗ್ಯ ಯೋಜನೆ'ಯಡಿ >> 42.50 ಕೋಟಿ ರೂ. ಅನುದಾನ ಮೀಸಲಿಟ್ಟರೆ, ಹಿಂದುಳಿದ ತಾಲೂಕುಗಳಲ್ಲಿರುವ ಗರ್ಭಿಣಿ ಮತ್ತು >> ಬಾಣಂತಿಯರಿಗೆ ಮೈಕ್ರೊ ನ್ಯೂಟ್ರಿಯಂಟ್ಸ್ ಒದಗಿಸಲು 'ಮಾತೃಪುಷ್ಟಿವರ್ಧಿನಿ' ಯೋಜನೆಗಾಗಿ 42 >> ಕೋಟಿ ರೂ. ಅನುದಾನ ಘೋಷಿಸಲಾಗಿದೆ. >> >> ವಿಶೇಷ ಚೇತನರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಈವರೆಗೆ ಇದ್ದ ಮಹಿಳಾ >> ಅಭಿವೃದ್ಧಿ ನಿಗಮವನ್ನು 'ಮಹಿಳಾ ಮತ್ತು ವಿಶೇಷಚೇತನರ ಅಭಿವೃದ್ಧಿ ನಿಗಮ'ಎಂದು ಮರುನಾಮಕರಣ >> ಮಾಡಲು ಬಜೆಟ್‌ನಲ್ಲಿ ನಿರ್ಧರಿಸಲಾಗಿದೆ. >> >> ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 25 ಸಾವಿರ ಮಕ್ಕಳಿಗೆ ಬಾಲ ಪೋಷಕ ಯೋಜನೆಯಡಿ >> ಪ್ರತಿದಿನ (180 ದಿನ) 2 ಗ್ರಾಂ ಸ್ಪಿರುಲಿನಾ ನೀಡಲು 3.6 ಕೋಟಿ ವೆಚ್ಚದ 'ಬಾಲ ಪೋಷಕ >> ಯೋಜನೆ'ಯನ್ನು ರೂಪಿಸಲಾಗಿದೆ. ಬಹು ಅಪೌಷ್ಟಿಕ ಆಹಾರ ಕೊರತೆಯುಳ್ಳ ಮಕ್ಕಳ ಹಿತದೃಷ್ಟಿಯಿಂದ >> 3.12 ಕೋಟಿ ರೂ. ಮೀಸಲಿಟ್ಟಿದ್ದು, ಪ್ರಸ್ತುತ ಪ್ರತಿ ಮಗುವಿಗೆ ನೀಡುತ್ತಿರುವ 750 ರೂ.ಗಳ >> ಬದಲಿಗೆ 2 ಸಾವಿರ ರೂ.ಗೆ ಏರಿಸಲಾಗಿದೆ. >> >> 4 ಸಾವಿರ ಅಂಗನವಾಡಿ ಕಟ್ಟಡಗಳು >> >> ಪರಿಶಿಷ್ಟ ಜಾತಿ/ಪಂಗಡದ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ 500 >> ಸ್ಥಳಗಳಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ನಿಧಿಗಳಿಂದ 3 ಸಾವಿರ ಅಂಗನವಾಡಿ ಕಟ್ಟಡಗಳು, >> ಎಸ್‌ಡಿಪಿ ಅಡಿಯಲ್ಲಿ 500 ಕಟ್ಟಡಗಳು ಸೇರಿದಂತೆ ಒಟ್ಟಾರೆ 4 ಸಾವಿರ ಅಂಗನವಾಡಿ >> ಕಟ್ಟಡಗಳನ್ನು ನಿರ್ಮಿಸಲಾಗುವುದು. ಅಂಗನವಾಡಿ ಮಕ್ಕಳಿಗೆ ಕೆನೆಭರಿತ ಹಾಲು ನೀಡಲು ಬಾಲ >> ಸ್ನೇಹಿ ಕೇಂದ್ರಗಳ ಯೋಜನೆಯಡಿ 10 ಸಾವಿರ ಅಂಗನವಾಡಿ ಕೇಂದ್ರಗಳನ್ನು 'ಶಿಶು ಸ್ನೇಹಿ >> ಕೇಂದ್ರ'ಗಳನ್ನಾಗಿ ಪರಿವರ್ತಿಸಲಾಗುವುದು. ಇದಕ್ಕಾಗಿ ಪ್ರತಿ ಕೇಂದ್ರಕ್ಕೆ ತಲಾ 10 ಸಾವಿರ >> ರೂ. ಅನುದಾನ ಘೋಷಣೆಯಾಗಿದೆ. >> >> ಸ್ಪರ್ಧಾಚೇತನ ಯೋಜನೆ >> >> ಸ್ತ್ರೀಶಕ್ತಿ ಗುಂಪುಗಳ ನೋಂದಣಿಗಾಗಿ 30 ಲಕ್ಷ ರೂ., ಮಹಿಳಾ ಸಬಲೀಕರಣ ಕಾರ್ಯನೀತಿ ಜಾರಿ, >> ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಪ್ರಾರಂಭ, ಐಎಎಸ್/ಕೆಎಎಸ್ ಆಕಾಂಕ್ಷಿಗಳ ತರಬೇತಿಗಾಗಿ >> 'ಸ್ಪರ್ಧಾ ಚೇತನ ಯೋಜನೆ'ಯಡಿ 1 ಕೋಟಿ ರೂ. ಸಹಾಯಧನ ಮೀಸಲು. 1.50 ಕೊಟಿ ರೂ.ವೆಚ್ಚದಲ್ಲಿ >> ವಿಶೇಷಚೇತನ ಪೋಷಕರಿಗೆ ಅರಿವು ಮೂಡಿಸಲು 'ಅರಿವಿನ ಸಿಂಚನ' ಯೋಜನೆ ಜಾರಿ ಹಾಗೂ ನಿರಾಶ್ರಿತ >> ಬುದ್ಧಿಮಾಂದ್ಯರ ಸಂರಕ್ಷಣೆಗಾಗಿ 'ಅನುಪಾಲನಾ ಗೃಹ'ಗಳನ್ನು ತೆರೆಯಲು 4 ಕೋಟಿ ರೂ. ಅನುದಾನ >> ಘೋಷಣೆಯಾಗಿದೆ. >> >> ವಿಶೇಷಚೇತನರಿಗೆ ನಿರಾಳ >> >> ವಿಶೇಷಚೇತನರಿಗೆ 'ಸಾಧನಾ ಸಲಕರಣಾ ಯೋಜನೆ'ಯಡಿ ನೀಡುವ ಮೊತ್ತ 15 ಸಾವಿರ ರೂ.ಗೆ >> ಏರಿಕೆಯಾಗಿದೆ. ಜತೆಗೆ ಈ ವರ್ಷದಿಂದ ತೀವ್ರ ಅಂಗವಿಕಲತೆಯುಳ್ಳ 2 ಸಾವಿರ ಮಂದಿಗೆ >> ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಒದಗಿಸಲಾಗುವುದು. ಜಿಲ್ಲಾ ಪುನರ್ವಸತಿ ಕೇಂದ್ರಗಳ >> ಸಹಾಯಧನವನ್ನು ಇನ್ನೂ 16 ಜಿಲ್ಲೆಗಳಿಗೆ ವಿಸ್ತರಿಸಿ, ಪ್ರತಿ ಕೇಂದ್ರಕ್ಕೆ 28 ಲಕ್ಷದ >> ಬದಲಿಗೆ 36 ಲಕ್ಷ ರೂ. ನೀಡಲಾಗುವುದು. ವಿಶೇಷಚೇತನರ ಶಾಲಾ ಕಟ್ಟಡಗಳ ನಿರ್ಮಾಣ ಮತ್ತು >> ದುರಸ್ತಿಗಾಗಿ 10 ಕೋಟಿ ರೂ. ಮೀಸಲಿಡಲಾಗಿದೆ. >> >> ಬುದ್ಧಿಮಾಂದ್ಯ ಮಕ್ಕಳ ಶಾಲೆಗಳಿಗೆ ಪ್ರತಿ ಮಗುವಿಗೆ ನೀಡುತ್ತಿರುವ ಅನುದಾನವನ್ನು ವಸತಿ >> ಶಾಲೆಗಳಲ್ಲಿ 5 ಸಾವಿರವಿದ್ದುದು 5,600 ರೂ.ಗೆ ಮತ್ತು ವಸತಿ ರಹಿತ ಶಾಲೆಗಳಿಗೆ 4 ಸಾವಿರ >> ರೂ. ಇದ್ದುದು 4,800 ರೂ.ಗೆ ಪರಿಷ್ಕರಿಸಲಾಗಿದೆ. ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರಿಗೆ >> 'ಸ್ತ್ರೀ ಶಕ್ತಿ ಕೌಶಲ್ಯ' ಯೋಜನೆಯಡಿ ತರಬೇತಿ ನೀಡಲು 2.50 ಕೋಟಿ ರೂ., ಎಚ್‌ಐವಿ >> ಪೀಡಿತರಿಗೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸಾಲದ ರೂಪದಲ್ಲಿ 40 ಸಾವಿರ ಹಾಗೂ >> ಸಹಾಯಧನವಾಗಿ 10 ಸಾವಿರ ರೂ. ನೀಡಲು 'ಧನಶ್ರೀ' ಯೋಜನೆಗಾಗಿ 5 ಕೋಟಿ ಅನುದಾನ >> ಮೀಸಲಿಡಲಾಗಿದೆ. ಈ ಬಾರಿ ಈ ಇಲಾಖೆಗೆ ಒಟ್ಟಾರೆ 4,497 ಕೋಟಿ ರೂ. ಅನುದಾನ ನೀಡಲಾಗಿದೆ. >> >> Hareeshkumar K >> AM(PCM) >> GHS HUSKURU >> MALAVALLI TQ >> MANDYA DT 571475 >> mobile no 9880328224 >> email [email protected] >> >> -- >> 1. If a teacher wants to join STF, visit >> http://karnatakaeducation.org.in/KOER/en/index.php/Become_a_STF_groups_member >> 2. For STF training, visit KOER - >> http://karnatakaeducation.org.in/KOER/en/index.php >> 4. For Ubuntu 14.04 installation, visit >> http://karnatakaeducation.org.in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequently_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- Mohan K R. Bio teacher GHS hiremarli. Pandavapura. Mandya. mobile: 9901815471 -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
