Nice article sir 

Sent from my iPhone


> On 12-Apr-2016, at 11:51 PM, HAREESHKUMAR K Agasanapura 
> <[email protected]> wrote:
> 
> http://m.prajavani.net/article/2016_04_12/401109
> 
> ಮಹಾನಗರದಲ್ಲೊಂದು ಪುಟ್ಟ ಅರಣ್ಯ’
> 
> 
> 
> ಕಿರು ಅರಣ್ಯದ ಸಂಪೂರ್ಣ ಮಾಹಿತಿಯುಳ್ಳ ಫಲಕ
> 
> 
> 
> ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಮರ
> 
> 
> 
> ಐಐಎಸ್‌ಸಿ ಸಂಸ್ಥೆಗೆ ನೂರು ವರ್ಷ ತುಂಬಿದಾಗ ನಿರ್ಮಿಸಿದ ಕೊಳ
> 
> 
> 
> ಹಾಲೇಕಾಯಿ ಬಳ್ಳಿ
> 
> 
> 
> ಟಿ.ವಿ. ರಾಮಚಂದ್ರ
> 
> PreviousNext
> 
> 12 Apr, 2016
> 
> ಅನಿತಾ ಈ.
> 
> 
> 
> ಸೂರ್ಯ ನೆತ್ತಿಗೇರುವ ಮೊದಲೇ ಬಿಸಿಲ ತಾಪ. ಎಲ್ಲಿಯಾದರೂ ಚಿಕ್ಕ ಮರ ಕಂಡರೂ ತುಸು ಹೊತ್ತು 
> ನಿಂತು ದಣಿವಾರಿಸಿಕೊಳ್ಳುವ ಪ್ರಯತ್ನ. ಸಿಗ್ನಲ್‌ ಬಿಡುವ ಮೊದಲೇ ವಾಹನ ನುಗ್ಗಿಸುವ ಜನರು 
> ಸಿಗ್ನಲ್‌ನಲ್ಲಿ ಮರದ ನೆರಳಿಗಾಗಿ ಹುಡುಕಾಡುತ್ತಾರೆ.  ಸದ್ಯ ಮರಗಳಿಲ್ಲದೆ ಬೋಳಾಗಿರುವ 
> ಪ್ರತಿಯೊಂದು ನಗರಗಳ ಪರಿಸ್ಥಿತಿ ಇದು.
> 
> ನೆತ್ತಿಗೇರಿದ ಸೂರ್ಯನ ಉರಿ ಬಿಸಿಲಿನಲ್ಲೇ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಭಾರತೀಯ ವಿಜ್ಞಾನ 
> ಸಂಸ್ಥೆಯತ್ತ (ಐಐಎಸ್‌ಸಿ) ಬೆಳೆಸಿದ ಪಯಣ. ಗಿಜಿಗುಡುವ ವಾಹನ, ಅವುಗಳು ಹೊರ ಹಾಕುವ ಕೆಟ್ಟ 
> ಹೊಗೆಯನ್ನೇ ಉಸಿರಾಡುತ್ತಾ  ಐಐಎಸ್‌ಸಿ ತಲುಪುವಷ್ಟರಲ್ಲಿ ಜೀವನವೇ ಸಾಕೆನಿಸಿತ್ತು. ಆದರೆ 
> ಎಲೆಮರೆ ಕಾಯಿಯಂತೆ ಬೆಳೆದಿರುವ ಕಿರು ಅರಣ್ಯವನ್ನು ನೋಡುವ ತವಕ ಇದನ್ನೆಲ್ಲ ಸಹಿಸುವ ಶಕ್ತಿ 
> ನೀಡಿತ್ತು.
> 
> ಐಐಎಸ್‌ಸಿ ಆವರಣದೊಳಗೆ ಕಾಲಿಡುತ್ತಿದ್ದಂತೆಯೇ ಮರಗಳ ನೆರಳು, ತಂಪಾದ ಗಾಳಿ, ಉದುರಿರುವ ಹೂ, 
> ಎಲೆಗಳು ಮೆಲ್ಲನೆ ಹಾರುತ್ತ ಕಾಲ ಬಳಿ ಬಂದು ಕೋರಿದ ಸ್ವಾಗತ ಒಮ್ಮೆಲೆ ಎಲ್ಲವನ್ನೂ ಮರೆಸುವಂತೆ 
> ಮಾಡಿತ್ತು. ಮಾರ್ಗದುದ್ದಕ್ಕೂ ಸಾಲು ಮರಗಳ ನೆರಳಿನಲ್ಲಿ ಸುಮಾರು ಎರಡೂವರೆ ಕಿ.ಮೀ. ನಡೆದರೂ 
> ಸ್ವಲ್ಪವೂ ಬೆವರಿಳಿಯಲಿಲ್ಲ. ರಸ್ತೆ ಬದಿ ಜೊತೆಯಲ್ಲೇ ಹೆಜ್ಜೆ ಹಾಕಿದ ಬೆಳ್ಳಕ್ಕಿಗಳ ಜೊತೆಗೆ 
> ಇಂಪಾದ ಹಕ್ಕಿಗಳ ಕಲರವ ಮನಸ್ಸು ಬೇರೆಡೆ ಹೋಗದಂತೆ ಮಾಡಿತ್ತು. 
> 
> ಸುಮಾರು 400 ಎಕರೆ ಪ್ರದೇಶದಲ್ಲಿರುವ ಐಐಎಸ್‌ಸಿ ಆವರಣದಲ್ಲಿ ‘ಕಿರು ಅರಣ್ಯ’ 
> ಸಮೀಪಿಸುತ್ತಿದ್ದಂತೆಯೇ ತಂಪಾದ ಗಾಳಿ ಮೈಸೋಕುವ ಅನುಭವ. ಎತ್ತರದ ಮರಗಳು, ಪೊದೆಗಳು, ಬಿದಿರಿನ 
> ಗುಂಪು, ಬಳ್ಳಿಗಳಿಂದ ಕೂಡಿದ ಗಿಡಗಂಟೆಗಳು. ಅರಣ್ಯದೊಳಗೆ ಕಾಲಿಡಲು ಭಯವಾಗುವ ವಾತಾವರಣ. 
> ನಿಜಕ್ಕೂ ನಗರ ಹೃದಯ ಭಾಗದಲ್ಲಿ ಇಂತಹ ಅನುಭವ ಇದೇ ಮೊದಲು. 22 ಸಾವಿರ ಮರಗಳಿರುವ 
> ಐಐಎಸ್‌ಸಿಯಲ್ಲಿ 500 ಉತ್ತರ ಕನ್ನಡದ ಮರಗಳಿವೆ. ಈ ಪ್ರದೇಶ ಶೇಕಡ 55ರಷ್ಟು ಹಸಿರಿನಿಂದ 
> ಕೂಡಿದ್ದು, ಇಲ್ಲಿನ ಉಷ್ಣಾಂಶ ನಗರದ ಬೇರೆ ಪ್ರದೇಶಕ್ಕೆ ಹೋಲಿಸಿದರೆ ಎರಡು ಡಿಗ್ರಿಯಷ್ಟು 
> ಕಡಿಮೆ.
> 
> ಕಿರು ಅರಣ್ಯದ ಹುಟ್ಟು
> ದೇಶದಲ್ಲಿನ ಸಸ್ಯ ವರ್ಗದಲ್ಲಿ ತುಂಬಾ ವೈವಿಧ್ಯವಿದೆ. ಸಣ್ಣ, ದೊಡ್ಡ ಗಿಡಗಳು, ಎಲೆ ಉದುರಿಸುವ 
> ಗಿಡಗಳು, ವರ್ಷ ಪೂರ್ತಿ ಹಸಿರಾಗಿರುವ ನಿತ್ಯ ಹರಿದ್ವರ್ಣ ಸೇರಿದಂತೆ ವಿವಿಧ ಪ್ರಭೇದಗಳ ಸಸ್ಯ 
> ವರ್ಗವಿದೆ. ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ಸ್ಥಳೀಯ ಸಸ್ಯ ಪ್ರಭೇದಗಳ ಮರು 
> ಹುಟ್ಟು ಪ್ರಕ್ರಿಯೆಗೆ ಅಡಚಣೆಯಾಗಿ ಸಸ್ಯಗಳ ವಿವಿಧತೆಗೆ ಕುಂದು ಉಂಟಾಗುತ್ತಿತ್ತು.
> 
> ಈ ಹಿನ್ನೆಲೆಯಲ್ಲಿ ವನ್ಯ ಮತ್ತು ಸ್ಥಳೀಯ ಪ್ರಭೇದಗಳನ್ನು ದೇಶದ ಬೇರೆ ಬೇರೆ ಭಾಗಗಳಲ್ಲಿ 
> ಬೆಳೆಸುವ ಅಗತ್ಯ ತಲೆದೋರಿತ್ತು. ಈ ವಿಷಯವನ್ನು ಗಮನದಲ್ಲಿ ಇರಿಸಿಕೊಂಡು ಐಐಎಸ್‌ಸಿಯ ಪರಿಸರ 
> ವಿಜ್ಞಾನ ವಿಭಾಗ ಈ ‘ಕಿರು ಅರಣ್ಯ’ ಯೋಜನೆ ಕೈಗೆತ್ತಿಕೊಂಡಿತ್ತು. 30 ವರ್ಷಗಳ ಹಿಂದೆ 
> ಐಐಎಸ್‌ಸಿಯ ಆವರಣದಲ್ಲಿ ಅಧ್ಯಯನಕ್ಕಾಗಿ 1.5 ಹೆಕ್ಟೇರ್‌ ಪ್ರದೇಶದಲ್ಲಿ ಈ ಮಿನಿ ಫಾರೆಸ್ಟ್‌ 
> ನಿರ್ಮಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ‘ಸಿ ಇಎಸ್ ಫೀಲ್ಡ್‌ ಸೇಷ್ಟನ್‌ 
> ನರ್ಸರಿ’ಯಿಂದ ಪಶ್ಚಿಮಘಟ್ಟದಲ್ಲಿ ಬೆಳೆಯುವ 49 ಪ್ರಭೇದಗಳ 500 ವನ್ಯ ಗಿಡಗಳನ್ನು ತಂದು 
> ನೆಡಲಾಗಿತ್ತು.
> 
> ಪಶ್ಚಿಮ ಘಟ್ಟದಲ್ಲಿ ಬೆಳೆಯುವ ಸಸ್ಯ ಪ್ರಭೇದಗಳು ದಖ್ಖನ್‌ ಪ್ರಸ್ಥಭೂಮಿಯ ವಾತಾವರಣದಲ್ಲಿ 
> ಬೆಳೆಯಬಲ್ಲವೇ ಎಂದು ಅಧ್ಯಯನ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆಗ 
> ಪರಿಸರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನಿ ಸಿ.ಎನ್‌.ಆರ್‌. ರಾವ್‌ ಅವರ 
> ನೇತೃತ್ವದಲ್ಲಿ ಈ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಆಗಿನ ಸಮಯದಲ್ಲಿ ಕೇವಲ ಪಾರ್ಥೇನಿಯಂನಿಂದ 
> ಕೂಡಿದ್ದ ಈ ಸ್ಥಳದಲ್ಲಿ ಗಿಡಗಳು ಬೆಳೆಯುತ್ತಿದ್ದಂತೆಯೇ ಪಾರ್ಥೇನಿಯಂ ಸಂಪೂರ್ಣವಾಗಿ 
> ಮಾಯವಾಗಿತ್ತು.
> 
> ‘ಪಶ್ಚಿಮ ಘಟ್ಟಗಳು ಯುನೈಟೆಡ್‌ ನೇಷನ್ಸ್‌ ಗುರುತಿಸಿರುವ 34 ‘ಬಯೊ ಡೈವರ್ಸಿಟಿ ಹಾಟ್‌ 
> ಸ್ಪಾಟ್‌’ಗಳಲ್ಲಿ ಒಂದು. ಅತೀ ಸೂಕ್ಷ್ಮ ಪರಿಸರ ಹೊಂದಿರುವ ಈ ಪ್ರದೇಶದಲ್ಲಿ ನಿತ್ಯ 
> ಹರಿದ್ವರ್ಣ, ಎಲೆ ಉದುರುವ ಕಾಡು, ಗಿಡಗಂಟೆ ಪೊದೆಗಳ ರೀತಿ ಸಸ್ಯಗಳು, ಶೋಲಾ ಕಾಡು, 
> ಹುಲ್ಲುಗಾವಲು, ವರ್ಷದಲ್ಲಿ ಕೆಲ ಕಾಲ ಮಾತ್ರ ಹಸಿರಾಗಿರುವ ಸಸ್ಯ ಪ್ರಭೇದಗಳಿವೆ. ಇಲ್ಲಿ 
> ಬಿಸಿಲು, ಮಳೆ, ಆರ್ದ್ರತೆ, ಸಮುದ್ರ ಮಟ್ಟಕ್ಕಿಂತ ಎತ್ತರ, ಟೊಪೊಗ್ರಫಿಯ ಅನನ್ಯ ಸಂಯೋಜನೆ 
> ಇರುವುದರಿಂದ ಜೀವ ಹಾಗೂ ಸಸ್ಯಗಳಲ್ಲಿ ವೈವಿಧ್ಯ ಇದೆ. ಈ ಕಾರಣದಿಂದಲೇ ಇಂತಹ ಪರಿಸರದಲ್ಲಿ 
> ಬೆಳೆಯುವ ಸಸ್ಯ ವರ್ಗ ತದ್ವಿರುದ್ಧವಾಗಿರುವ ಪರಿಸರದಲ್ಲಿ ಜೀವಿಸಬಲ್ಲದೇ ಎಂದು ಪರೀಕ್ಷಿಸಲು ಆಗ 
> 49 ಪ್ರಭೇದದ ಸಸಿಗಳನ್ನು ನೆಡಲಾಗಿತ್ತು’ ಎನ್ನುತ್ತಾರೆ ಆಗ ಐಐಎಸ್‌ಸಿಯ ಪರಿಸರ ವಿಜ್ಞಾನ 
> ವಿಭಾಗದಲ್ಲಿ ವಿದ್ಯಾರ್ಥಿಯಾಗಿದ್ದ ಟಿ.ವಿ ರಾಮಚಂದ್ರ. 
> 
> ‘ಸುಮಾರು 30 ವರ್ಷಗಳ ಹಿಂದೆ ಹಾಕಿದ್ದ ಗಿಡಗಳು ಈಗ ಕಾಡಾಗಿದೆ. ಮೊದಲು ದಖ್ಖನ್‌ ಪ್ರಸ್ಥಭೂಮಿಯ 
> ಪೊದೆಗಳಿದ್ದ ಜಾಗದಲ್ಲಿ ಈಗ ಕಾಡಿದೆ. ಆಗ ಮಾಡಿದ ಪ್ರಯೋಗದಿಂದ ಪಶ್ಚಿಮ ಘಟ್ಟದ ಸಸ್ಯ 
> ಪ್ರಭೇದಗಳಲ್ಲಿ ಯಾವ ವಾತಾವರಣಕ್ಕಾದರೂ ಹೊಂದಿಕೊಳ್ಳುವ ಗುಣವಿರುವುದು ಸಾಬೀತಾಗಿದೆ. ಅದರಲ್ಲೂ 
> ಇಲ್ಲಿನ ಸ್ಥಳೀಯ ಸಸ್ಯ ವರ್ಗದೊಂದಿಗೆ ಸಹಬಾಳ್ವೆಯಿಂದ ವನ್ಯ ಸಸ್ಯ ವರ್ಗ ಬೆಳೆಯುತ್ತಿವೆ. ಮಳೆಯ 
> ಪ್ರಮಾಣ, ತೇವಾಂಶ, ಮಣ್ಣಿನ ಗುಣ ಸೇರಿದಂತೆ ಎಲ್ಲದರಲ್ಲೂ ಬಹಳ ವ್ಯತ್ಯಾಸವಿದೆ. ಆದರೂ ಎರಡೂ 
> ಪ್ರಭೇದಗಳು ಸಂಪೂರ್ಣವಾಗಿ ಹೊಂದಾಣಿಕೆ ಮಾಡಿಕೊಂಡು ಬೆಳೆದಿವೆ.
> 
> ಕಿರು ಅರಣ್ಯದಲ್ಲಿನ ಮರ ಮತ್ತು ಗಿಡಗಳ ಬೆಳವಣಿಗೆ, ಹೂ ಬಿಡುವುದು ಸೇರಿದಂತೆ ಎಲ್ಲವೂ ಪಶ್ಚಿಮ 
> ಘಟ್ಟದಲ್ಲಿ ಬೆಳೆಯುವ ರೀತಿಯಲ್ಲೇ ಇದೆ. ಹೀಗಾಗಿಯೇ ಪಶ್ಚಿಮ ಘಟ್ಟದ ಸಸ್ಯ ಪ್ರಭೇದ ಅವಕಾಶವಾದಿ 
> ಸ್ವಭಾವ ಹೊಂದಿರುವುದು ತಿಳಿಯುತ್ತದೆ’ ಎನ್ನುತ್ತಾರೆ ಅವರು. ನಿತ್ಯ ಹರಿದ್ವರ್ಣ ಕಾಡುಗಳ 
> ಮರಗಳು ಎತ್ತರವಾಗಿ ಬೆಳೆದು ನೆರಳು ನೀಡುತ್ತವೆ.
> 
> ಇದರಿಂದಾಗಿ ಈ ಕಾಡಿನಲ್ಲಿ ನಗರ ಪ್ರದೇಶಕ್ಕಿಂತ ಸುಮಾರು 4 ಡಿಗ್ರಿಯಷ್ಟು ಉಷ್ಣತೆ ಕಡಿಮೆ 
> ಇರುತ್ತದೆ. ಜೊತೆಗೆ ಈ ಮರಗಳಿಂದಾಗಿ ಕಿರು ಅರಣ್ಯದಲ್ಲಿ ಆರ್ದ್ರತೆ ಹೆಚ್ಚಿದೆ. ಹಣ್ಣಾಗಿ 
> ಉದುರುವ ಎಲೆಗಳು ಕೊಳೆತು ಆಗುವ ಗೊಬ್ಬರದಿಂದ ಇಲ್ಲಿನ ಮಣ್ಣು ಹೆಚ್ಚು ಫಲವತ್ತಾಗಿದೆ. ಈ ಕಿರು 
> ಅರಣ್ಯ ಬೇರೆಲ್ಲ ಅರಣ್ಯಗಳಂತೆಯೇ ಮಾನವ ಪ್ರವೇಶವಿಲ್ಲದೆ ನೈಸರ್ಗಿಕವಾಗಿ ಬೆಳೆಯುತ್ತಿದೆ. 
> ಇಲ್ಲಿ ನಾನಾ ರೀತಿಯ ಆಲ್ಗೆ, ಪಾಚಿ, ಫಂಗೈ, ಜರಿ ಗಿಡ, ಕೆಲವೊಂದು ಗಿಡಮೂಲಿಕೆ ಗಿಡ–ಬಳ್ಳಿಗಳು 
> ಚೆನ್ನಾಗಿ ಬೆಳೆದಿವೆ. ನಾನಾ ಜಾತಿಯ ಕೀಟಗಳು, ಕಪ್ಪೆ, ವೈಪರ್‌, ಕೋಬ್ರಾ, ವಿವಿಧ ಸಸ್ತನಿಗಳು 
> ಹಾಗೂ ಕಾಡುಪಾಪದ ನಾಲ್ಕು ಕುಟುಂಬಗಳು ಇಲ್ಲಿ ಆಶ್ರಯ ಪಡೆದಿವೆ.
> 
> ಈ ಪ್ರದೇಶ ಈಗ ಬಹುಪಾಲು ಪಶ್ಚಿಮ ಘಟ್ಟದಂತೆಯೇ ಆಗಿದೆ.   ವಿಜ್ಞಾನಿ ಪ್ರೊ. ಟಿ.ವಿ. ರಾಮಚಂದ್ರ 
> ಹೇಳುವುದು ಹೀಗೆ: ‘ಅಂರ್ತಜಲದ ಮಟ್ಟ ಹೆಚ್ಚಿಸುವಲ್ಲಿ ಮರಗಳ ಪಾತ್ರ ಬಹಳ ಮುಖ್ಯ. ಮರದ ಬೇರುಗಳು 
> ನೀರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತವೆ. ಸೂಕ್ಷ್ಮಾಣು ಜೀವಿಗಳು ಮಣ್ಣು ಹಾಗೂ ಮರದ 
> ಬೇರುಗಳ ಮಧ್ಯೆ ಮಧ್ಯವರ್ತಿಯ ರೀತಿ ಸಂಬಂಧ ಸೃಷ್ಟಿಸುತ್ತದೆ.
> 
> ನೀರು ಸುಲಭವಾಗಿ ಮಣ್ಣಿನಲ್ಲಿ ಇಳಿಯುವಂತೆ ಹಾಗೂ ಗಾಳಿ ಮತ್ತು ನೀರನ್ನು ಭೂಮಿಯೊಳಗೆ 
> ಪ್ರವೇಶಿಸುವಂತೆ(ಪೋರಸ್‌) ಮಣ್ಣನ್ನು ತಯಾರು ಮಾಡುತ್ತವೆ. ಇದರಿಂದ ನೆಲದ ಮೇಲೆ ಬಿದ್ದ ಬೀರು 
> ಸುಲಭವಾಗಿ ಇಂಗುತ್ತದೆ. ನಂತರ ಅದು ಭೂಮಿಯೊಳಗಿನ ಮತ್ತೊಂದು ಪದರವಾದ ‘ಸಬ್‌ ಸರ್ಫೇಸ್‌’ 
> ಪ್ರವೇಶಿಸುತ್ತದೆ. ಮಳೆಯಿಂದ ಮರಗಳು ಹೀರಿಕೊಂಡು ಉಳಿದ ನೀರು ನದಿ ಅಥವಾ ಕೆರೆಗಳಿಗೆ 
> ಹರಿಯುತ್ತದೆ. ನಂತರ ಬೇಸಿಗೆ ಮುಗಿಯುತ್ತಿದ್ದಂತೆ ಸಬ್‌ ಸರ್ಫೇಸ್‌ನಲ್ಲಿ ಸಂಗ್ರಹವಾಗಿರುವ 
> ನೀರು ನಿಧಾನವಾಗಿ ಕೆರೆಗಳಿಗೆ ಹಾಗೂ ನದಿಗಳಿಗೆ ಹರಿಯುತ್ತದೆ. ಇದನ್ನೇ ‘ಬೇಸ್‌ ಫ್ಲೋ’ 
> ಎನ್ನುತ್ತೇವೆ. ಮರಗಳಿದ್ದರೆ ವರ್ಷವಿಡೀ ಕೆರೆ ಮತ್ತು ನದಿಗಳಲ್ಲಿ ನೀರಿರುತ್ತದೆ. ಆದರೆ ಕೆರೆ 
> ಮತ್ತು ಅದರ ಸುತ್ತಮುತ್ತಲ ಜೌಗು ಪ್ರದೇಶಗಳಲ್ಲಿರುವ ಮರ ಮತ್ತು ಗಿಡಗಳ ನಾಶದಿಂದಾಗಿ ಇಂದು 
> ಕೆರೆಗಳು ಬತ್ತಿವೆ ವಿನಃ ಕೆರೆಗಳು ಸತ್ತಿಲ್ಲ."
> 
> ಕೆರೆಗಳು ಎಂದಿಗೂ ಸಾಯುವುದಿಲ್ಲ. ಅದಕ್ಕೆ ನೀರನ್ನು ಒದಗಿಸುವ ಮೂಲಗಳನ್ನು ನಾಶ ಮಾಡಿರುವ ಕಾರಣ 
> ಅವು ನೀರಿಲ್ಲದಂತಾಗಿವೆ. ಭೂಮಿಯನ್ನು ನುಂಗುವ ಹುನ್ನಾರದಿಂದ ಜೀವಂತ ಇರುವ ಕೆರೆಗಳನ್ನು 
> ಸತ್ತಿದೆ ಎಂಬ ಹೇಳಿಕೆ ನೀಡಲಾಗುತ್ತಿದೆ. ಮರಗಳು ಕೆರೆಗಳಿಗೆ ಹರಿಯುವ ನೀರಿನಲ್ಲಿರುವ ಕಲ್ಮಶ 
> ತೆಗೆಯುತ್ತವೆ. ನೀರಿನಲ್ಲಿರುವ ಸಾರಜನಕ ಹಾಗೂ ರಂಜಕದ ಅಂಶಗಳನ್ನು ಮರ–ಗಿಡಗಳು ತೆಗೆಯುತ್ತವೆ.
> 
> ಎಲ್ಲಿ ನೀರು ನೈಸರ್ಗಿಕವಾಗಿ ಶುದ್ಧೀಕರಣಗೊಳ್ಳುವುದಿಲ್ಲವೋ ಅಲ್ಲಿ ಕ್ಯಾನ್ಸರ್‌ ಹಾಗೂ ಇತರೆ 
> ರೋಗಗಳು ಬರುತ್ತವೆ. ಜಕ್ಕೂರು ಕೆರೆಯಲ್ಲಿ ಜೌಗು ಪ್ರದೇಶ ನಾಶದಿಂದ ಸುತ್ತಮುತ್ತಲ 
> ಪ್ರದೇಶದಲ್ಲಿ ದೊರೆಯುತ್ತಿದ್ದ ನೀರಿನಲ್ಲಿ ನೈಟ್ರೇಟ್‌ ಅಂಶ ಹೆಚ್ಚಾಗಿತ್ತು. ಈಗ ಆ 
> ಕೆರೆಯನ್ನು ಪುನರುಜ್ಜೀವನಗೊಳಿಸಿ, ಅಲ್ಲಿನ ಜೌಗು ಪ್ರದೇಶದಲ್ಲಿ ನೀರನ್ನು ಶುದ್ಧೀಕರಿಸುವ 
> ಗಿಡಗಳನ್ನು ನೆಡಲಾಗಿದೆ. ಇದರಿಂದಾಗಿ ಸುತ್ತಮುತ್ತಲಿರುವ 300 ಬಾವಿಗಳ ನೀರಿನಲ್ಲಿ ನೈಟ್ರೇಟ್‌ 
> ಅಂಶ ಇಲ್ಲದಂತಾಗಿದೆ. ಜನರಿಗೆ ಗಿಡಗಳಿಂದಾಗುವ ಪ್ರಯೋಜನಗಳು ತಿಳಿದಿಲ್ಲ. ಇದರಿಂದಾಗಿಯೇ ಮರಗಳ 
> ಸಂಖ್ಯೆ ಕಡಿಮೆಯಾಗುತ್ತಿದ್ದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮೊದಲು ಜನರಿಗೆ ಮರಗಳ 
> ಮಹತ್ವದ ಬಗ್ಗೆ ತಿಳಿಹೇಳಬೇಕಿದೆ.
> 
> ಕಿರು ಅರಣ್ಯದಲ್ಲಿ ‘ಲ್ಯಾಂಡ್‌ ಸ್ಯಾಟ್‌ ಇಟಿಎಂ’ ಬಳಸಿ ಉಷ್ಣತೆ ಅಳೆದಾಗ ಐಐಎಸ್‌ಸಿ 
> ಆವರಣದೊಳಗಿರುವ ಉಷ್ಣತೆಗಿಂತ 2 ಡಿಗ್ರಿ ಕಡಿಮೆ ಉಷ್ಣಾಂಶ ಇರುವುದು ತಿಳಿದು ಬಂದಿದೆ. ಈ ಕಿರು 
> ಅರಣ್ಯದ ಸುತ್ತಮುತ್ತಲ ಪ್ರದೇಶದಲ್ಲಿರುವ ಮೂರು ಬಾವಿಗಳಲ್ಲಿ 10–15 ಅಡಿ ಆಳದಲ್ಲಿ ನೀರು 
> ಸಿಗುತ್ತದೆ. ಯಾವ ಪ್ರದೇಶದಲ್ಲಿ ಹಸಿರು ಹೆಚ್ಚಾಗಿರುತ್ತದೆಯೋ ಅಲ್ಲಿ ಅಂತರ್ಜಲದ ಮಟ್ಟ 
> ಹೆಚ್ಚಾಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಅಷ್ಟೇ ಅಲ್ಲದೆ ವಾತಾವರಣದಲ್ಲಿರುವ ಇಂಗಾಲದ ಡೈ 
> ಆಕ್ಸೈಡ್‌ ಅನ್ನು ಹೀರಿಕೊಳ್ಳುವ ಕೇಂದ್ರವಾಗಿ ಕೆಲಸ ಮಾಡುತ್ತಿದೆ.
> 
> ಇದರಿಂದಾಗಿ ವಾತಾವರಣದಲ್ಲಿನ ಉಷ್ಣತೆ ಕಡಿಮೆಯಾಗುತ್ತದೆ. ಇಂತಹ ‘ಕಿರು ಅರಣ್ಯ’ 
> ಪರಿಕಲ್ಪನೆಯನ್ನು ದೇಶ ಸೇರಿದಂತೆ ಯಾವುದೇ ರಾಜ್ಯ, ಮರಗಳಿಲ್ಲದೆ ಬೋಳಾಗುತ್ತಿರುವ ನಗರಗಳಲ್ಲಿ 
> ಅಳವಡಿಸಿಕೊಳ್ಳಬಹುದು. ಇದರಿಂದ ಉಷ್ಣತೆ ಕಡಿಮೆಯಾಗಿ ಹಾಗೂ ಅಂತರ್ಜಲದ ಮಟ್ಟ ಹೆಚ್ಚುತ್ತದೆ. 
> ಜೊತೆಗೆ ಹವಾಮಾನದಲ್ಲಾಗುತ್ತಿರುವ ಬದಲಾವಣೆಯನ್ನು ತಕ್ಕಮಟ್ಟಿಗೆ ನಿಲ್ಲಿಸಬಹುದು. ಅಷ್ಟೇ 
> ಅಲ್ಲದೆ ವಿನಾಶದ ಅಂಚಿನಲ್ಲಿರುವ ಜೀವಿ ಹಾಗೂ ಸಸ್ಯ ವೈವಿಧ್ಯವನ್ನು ಉಳಿಸಿಕೊಳ್ಳಬಹುದು. 
> 
> 
> Hareeshkumar K
> AM(PCM)
> GHS HUSKURU 
> MALAVALLI TQ 
> MANDYA DT 571475
> mobile no 9880328224
> email [email protected]
> 
> -- 
> 1. If a teacher wants to join STF, visit 
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER - 
> http://karnatakaeducation.org.in/KOER/en/index.php
> 4. For Ubuntu 14.04 installation, visit 
> http://karnatakaeducation.org.in/KOER/en/index.php/Kalpavriksha 
> 4. For doubts on Ubuntu, public software, visit 
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see 
> http://karnatakaeducation.org.in/KOER/en/index.php/Why_public_software 
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> --- 
> You received this message because you are subscribed to the Google Groups 
> "Maths & Science STF" group.
> To unsubscribe from this group and stop receiving emails from it, send an 
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to