Aitjiyaa Hareeshkumar K AM(PCM) GHS HUSKURU MALAVALLI TQ MANDYA DT 571475 mobile no 9880328224 email [email protected] On Apr 13, 2016 6:55 AM, "Harsha" <[email protected]> wrote:
> Nice article sir > > Sent from my iPhone > > > On 12-Apr-2016, at 11:51 PM, HAREESHKUMAR K Agasanapura < > [email protected]> wrote: > > http://m.prajavani.net/article/2016_04_12/401109 > > *ಮಹಾನಗರದಲ್ಲೊಂದು ಪುಟ್ಟ ಅರಣ್ಯ’* > > ಕಿರು ಅರಣ್ಯದ ಸಂಪೂರ್ಣ ಮಾಹಿತಿಯುಳ್ಳ ಫಲಕ > > ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಮರ > > ಐಐಎಸ್‌ಸಿ ಸಂಸ್ಥೆಗೆ ನೂರು ವರ್ಷ ತುಂಬಿದಾಗ ನಿರ್ಮಿಸಿದ ಕೊಳ > > ಹಾಲೇಕಾಯಿ ಬಳ್ಳಿ > > ಟಿ.ವಿ. ರಾಮಚಂದ್ರ > > Previous <http://m.prajavani.net/article/2016_04_12/401109#>Next > <http://m.prajavani.net/article/2016_04_12/401109#> > > 12 Apr, 2016 > > ಅನಿತಾ ಈ. > > <https://www.facebook.com/sharer/sharer.php?u=http%3A%2F%2Fgoo.gl%2Fxjp8pr> > <https://twitter.com/intent/tweet?text=%E0%B2%AE%E0%B2%B9%E0%B2%BE%E0%B2%A8%E0%B2%97%E0%B2%B0%E0%B2%A6%E0%B2%B2%E0%B3%8D%E0%B2%B2%E0%B3%8A%E0%B2%82%E0%B2%A6%E0%B3%81+%E0%B2%AA%E0%B3%81%E0%B2%9F%E0%B3%8D%E0%B2%9F+%E0%B2%85%E0%B2%B0%E0%B2%A3%E0%B3%8D%E0%B2%AF%E2%80%99+http%3A%2F%2Fgoo.gl%2Fxjp8pr> > <https://plus.google.com/share?url=http%3A%2F%2Fgoo.gl%2Fxjp8pr> > <http://www.pinterest.com/pin/find/?url=http%3A%2F%2Fgoo.gl%2Fxjp8pr> > <http://www.linkedin.com/shareArticle?mini=true&title=%E0%B2%AE%E0%B2%B9%E0%B2%BE%E0%B2%A8%E0%B2%97%E0%B2%B0%E0%B2%A6%E0%B2%B2%E0%B3%8D%E0%B2%B2%E0%B3%8A%E0%B2%82%E0%B2%A6%E0%B3%81+%E0%B2%AA%E0%B3%81%E0%B2%9F%E0%B3%8D%E0%B2%9F+%E0%B2%85%E0%B2%B0%E0%B2%A3%E0%B3%8D%E0%B2%AF%E2%80%99+&url=http%3A%2F%2Fgoo.gl%2Fxjp8pr> > > ಸೂರ್ಯ ನೆತ್ತಿಗೇರುವ ಮೊದಲೇ ಬಿಸಿಲ ತಾಪ. ಎಲ್ಲಿಯಾದರೂ ಚಿಕ್ಕ ಮರ ಕಂಡರೂ ತುಸು ಹೊತ್ತು > ನಿಂತು ದಣಿವಾರಿಸಿಕೊಳ್ಳುವ ಪ್ರಯತ್ನ. ಸಿಗ್ನಲ್ ಬಿಡುವ ಮೊದಲೇ ವಾಹನ ನುಗ್ಗಿಸುವ ಜನರು > ಸಿಗ್ನಲ್‌ನಲ್ಲಿ ಮರದ ನೆರಳಿಗಾಗಿ ಹುಡುಕಾಡುತ್ತಾರೆ. ಸದ್ಯ ಮರಗಳಿಲ್ಲದೆ ಬೋಳಾಗಿರುವ > ಪ್ರತಿಯೊಂದು ನಗರಗಳ ಪರಿಸ್ಥಿತಿ ಇದು. > > ನೆತ್ತಿಗೇರಿದ ಸೂರ್ಯನ ಉರಿ ಬಿಸಿಲಿನಲ್ಲೇ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಭಾರತೀಯ > ವಿಜ್ಞಾನ ಸಂಸ್ಥೆಯತ್ತ (ಐಐಎಸ್‌ಸಿ) ಬೆಳೆಸಿದ ಪಯಣ. ಗಿಜಿಗುಡುವ ವಾಹನ, ಅವುಗಳು ಹೊರ ಹಾಕುವ > ಕೆಟ್ಟ ಹೊಗೆಯನ್ನೇ ಉಸಿರಾಡುತ್ತಾ ಐಐಎಸ್‌ಸಿ ತಲುಪುವಷ್ಟರಲ್ಲಿ ಜೀವನವೇ ಸಾಕೆನಿಸಿತ್ತು. > ಆದರೆ ಎಲೆಮರೆ ಕಾಯಿಯಂತೆ ಬೆಳೆದಿರುವ ಕಿರು ಅರಣ್ಯವನ್ನು ನೋಡುವ ತವಕ ಇದನ್ನೆಲ್ಲ ಸಹಿಸುವ > ಶಕ್ತಿ ನೀಡಿತ್ತು. > > ಐಐಎಸ್‌ಸಿ ಆವರಣದೊಳಗೆ ಕಾಲಿಡುತ್ತಿದ್ದಂತೆಯೇ ಮರಗಳ ನೆರಳು, ತಂಪಾದ ಗಾಳಿ, ಉದುರಿರುವ ಹೂ, > ಎಲೆಗಳು ಮೆಲ್ಲನೆ ಹಾರುತ್ತ ಕಾಲ ಬಳಿ ಬಂದು ಕೋರಿದ ಸ್ವಾಗತ ಒಮ್ಮೆಲೆ ಎಲ್ಲವನ್ನೂ > ಮರೆಸುವಂತೆ ಮಾಡಿತ್ತು. ಮಾರ್ಗದುದ್ದಕ್ಕೂ ಸಾಲು ಮರಗಳ ನೆರಳಿನಲ್ಲಿ ಸುಮಾರು ಎರಡೂವರೆ > ಕಿ.ಮೀ. ನಡೆದರೂ ಸ್ವಲ್ಪವೂ ಬೆವರಿಳಿಯಲಿಲ್ಲ. ರಸ್ತೆ ಬದಿ ಜೊತೆಯಲ್ಲೇ ಹೆಜ್ಜೆ ಹಾಕಿದ > ಬೆಳ್ಳಕ್ಕಿಗಳ ಜೊತೆಗೆ ಇಂಪಾದ ಹಕ್ಕಿಗಳ ಕಲರವ ಮನಸ್ಸು ಬೇರೆಡೆ ಹೋಗದಂತೆ ಮಾಡಿತ್ತು. > > ಸುಮಾರು 400 ಎಕರೆ ಪ್ರದೇಶದಲ್ಲಿರುವ ಐಐಎಸ್‌ಸಿ ಆವರಣದಲ್ಲಿ ‘ಕಿರು ಅರಣ್ಯ’ > ಸಮೀಪಿಸುತ್ತಿದ್ದಂತೆಯೇ ತಂಪಾದ ಗಾಳಿ ಮೈಸೋಕುವ ಅನುಭವ. ಎತ್ತರದ ಮರಗಳು, ಪೊದೆಗಳು, > ಬಿದಿರಿನ ಗುಂಪು, ಬಳ್ಳಿಗಳಿಂದ ಕೂಡಿದ ಗಿಡಗಂಟೆಗಳು. ಅರಣ್ಯದೊಳಗೆ ಕಾಲಿಡಲು ಭಯವಾಗುವ > ವಾತಾವರಣ. ನಿಜಕ್ಕೂ ನಗರ ಹೃದಯ ಭಾಗದಲ್ಲಿ ಇಂತಹ ಅನುಭವ ಇದೇ ಮೊದಲು. 22 ಸಾವಿರ ಮರಗಳಿರುವ > ಐಐಎಸ್‌ಸಿಯಲ್ಲಿ 500 ಉತ್ತರ ಕನ್ನಡದ ಮರಗಳಿವೆ. ಈ ಪ್ರದೇಶ ಶೇಕಡ 55ರಷ್ಟು ಹಸಿರಿನಿಂದ > ಕೂಡಿದ್ದು, ಇಲ್ಲಿನ ಉಷ್ಣಾಂಶ ನಗರದ ಬೇರೆ ಪ್ರದೇಶಕ್ಕೆ ಹೋಲಿಸಿದರೆ ಎರಡು ಡಿಗ್ರಿಯಷ್ಟು > ಕಡಿಮೆ. > > *ಕಿರು ಅರಣ್ಯದ ಹುಟ್ಟು* > ದೇಶದಲ್ಲಿನ ಸಸ್ಯ ವರ್ಗದಲ್ಲಿ ತುಂಬಾ ವೈವಿಧ್ಯವಿದೆ. ಸಣ್ಣ, ದೊಡ್ಡ ಗಿಡಗಳು, ಎಲೆ > ಉದುರಿಸುವ ಗಿಡಗಳು, ವರ್ಷ ಪೂರ್ತಿ ಹಸಿರಾಗಿರುವ ನಿತ್ಯ ಹರಿದ್ವರ್ಣ ಸೇರಿದಂತೆ ವಿವಿಧ > ಪ್ರಭೇದಗಳ ಸಸ್ಯ ವರ್ಗವಿದೆ. ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ಸ್ಥಳೀಯ ಸಸ್ಯ > ಪ್ರಭೇದಗಳ ಮರು ಹುಟ್ಟು ಪ್ರಕ್ರಿಯೆಗೆ ಅಡಚಣೆಯಾಗಿ ಸಸ್ಯಗಳ ವಿವಿಧತೆಗೆ ಕುಂದು > ಉಂಟಾಗುತ್ತಿತ್ತು. > > ಈ ಹಿನ್ನೆಲೆಯಲ್ಲಿ ವನ್ಯ ಮತ್ತು ಸ್ಥಳೀಯ ಪ್ರಭೇದಗಳನ್ನು ದೇಶದ ಬೇರೆ ಬೇರೆ ಭಾಗಗಳಲ್ಲಿ > ಬೆಳೆಸುವ ಅಗತ್ಯ ತಲೆದೋರಿತ್ತು. ಈ ವಿಷಯವನ್ನು ಗಮನದಲ್ಲಿ ಇರಿಸಿಕೊಂಡು ಐಐಎಸ್‌ಸಿಯ ಪರಿಸರ > ವಿಜ್ಞಾನ ವಿಭಾಗ ಈ ‘ಕಿರು ಅರಣ್ಯ’ ಯೋಜನೆ ಕೈಗೆತ್ತಿಕೊಂಡಿತ್ತು. 30 ವರ್ಷಗಳ ಹಿಂದೆ > ಐಐಎಸ್‌ಸಿಯ ಆವರಣದಲ್ಲಿ ಅಧ್ಯಯನಕ್ಕಾಗಿ 1.5 ಹೆಕ್ಟೇರ್ ಪ್ರದೇಶದಲ್ಲಿ ಈ ಮಿನಿ ಫಾರೆಸ್ಟ್ > ನಿರ್ಮಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ‘ಸಿ ಇಎಸ್ ಫೀಲ್ಡ್ ಸೇಷ್ಟನ್ > ನರ್ಸರಿ’ಯಿಂದ ಪಶ್ಚಿಮಘಟ್ಟದಲ್ಲಿ ಬೆಳೆಯುವ 49 ಪ್ರಭೇದಗಳ 500 ವನ್ಯ ಗಿಡಗಳನ್ನು ತಂದು > ನೆಡಲಾಗಿತ್ತು. > > ಪಶ್ಚಿಮ ಘಟ್ಟದಲ್ಲಿ ಬೆಳೆಯುವ ಸಸ್ಯ ಪ್ರಭೇದಗಳು ದಖ್ಖನ್ ಪ್ರಸ್ಥಭೂಮಿಯ ವಾತಾವರಣದಲ್ಲಿ > ಬೆಳೆಯಬಲ್ಲವೇ ಎಂದು ಅಧ್ಯಯನ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆಗ > ಪರಿಸರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನಿ ಸಿ.ಎನ್.ಆರ್. ರಾವ್ ಅವರ > ನೇತೃತ್ವದಲ್ಲಿ ಈ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಆಗಿನ ಸಮಯದಲ್ಲಿ ಕೇವಲ > ಪಾರ್ಥೇನಿಯಂನಿಂದ ಕೂಡಿದ್ದ ಈ ಸ್ಥಳದಲ್ಲಿ ಗಿಡಗಳು ಬೆಳೆಯುತ್ತಿದ್ದಂತೆಯೇ ಪಾರ್ಥೇನಿಯಂ > ಸಂಪೂರ್ಣವಾಗಿ ಮಾಯವಾಗಿತ್ತು. > > ‘ಪಶ್ಚಿಮ ಘಟ್ಟಗಳು ಯುನೈಟೆಡ್ ನೇಷನ್ಸ್ ಗುರುತಿಸಿರುವ 34 ‘ಬಯೊ ಡೈವರ್ಸಿಟಿ ಹಾಟ್ > ಸ್ಪಾಟ್’ಗಳಲ್ಲಿ ಒಂದು. ಅತೀ ಸೂಕ್ಷ್ಮ ಪರಿಸರ ಹೊಂದಿರುವ ಈ ಪ್ರದೇಶದಲ್ಲಿ ನಿತ್ಯ > ಹರಿದ್ವರ್ಣ, ಎಲೆ ಉದುರುವ ಕಾಡು, ಗಿಡಗಂಟೆ ಪೊದೆಗಳ ರೀತಿ ಸಸ್ಯಗಳು, ಶೋಲಾ ಕಾಡು, > ಹುಲ್ಲುಗಾವಲು, ವರ್ಷದಲ್ಲಿ ಕೆಲ ಕಾಲ ಮಾತ್ರ ಹಸಿರಾಗಿರುವ ಸಸ್ಯ ಪ್ರಭೇದಗಳಿವೆ. ಇಲ್ಲಿ > ಬಿಸಿಲು, ಮಳೆ, ಆರ್ದ್ರತೆ, ಸಮುದ್ರ ಮಟ್ಟಕ್ಕಿಂತ ಎತ್ತರ, ಟೊಪೊಗ್ರಫಿಯ ಅನನ್ಯ ಸಂಯೋಜನೆ > ಇರುವುದರಿಂದ ಜೀವ ಹಾಗೂ ಸಸ್ಯಗಳಲ್ಲಿ ವೈವಿಧ್ಯ ಇದೆ. ಈ ಕಾರಣದಿಂದಲೇ ಇಂತಹ ಪರಿಸರದಲ್ಲಿ > ಬೆಳೆಯುವ ಸಸ್ಯ ವರ್ಗ ತದ್ವಿರುದ್ಧವಾಗಿರುವ ಪರಿಸರದಲ್ಲಿ ಜೀವಿಸಬಲ್ಲದೇ ಎಂದು ಪರೀಕ್ಷಿಸಲು > ಆಗ 49 ಪ್ರಭೇದದ ಸಸಿಗಳನ್ನು ನೆಡಲಾಗಿತ್ತು’ ಎನ್ನುತ್ತಾರೆ ಆಗ ಐಐಎಸ್‌ಸಿಯ ಪರಿಸರ ವಿಜ್ಞಾನ > ವಿಭಾಗದಲ್ಲಿ ವಿದ್ಯಾರ್ಥಿಯಾಗಿದ್ದ ಟಿ.ವಿ ರಾಮಚಂದ್ರ. > > ‘ಸುಮಾರು 30 ವರ್ಷಗಳ ಹಿಂದೆ ಹಾಕಿದ್ದ ಗಿಡಗಳು ಈಗ ಕಾಡಾಗಿದೆ. ಮೊದಲು ದಖ್ಖನ್ > ಪ್ರಸ್ಥಭೂಮಿಯ ಪೊದೆಗಳಿದ್ದ ಜಾಗದಲ್ಲಿ ಈಗ ಕಾಡಿದೆ. ಆಗ ಮಾಡಿದ ಪ್ರಯೋಗದಿಂದ ಪಶ್ಚಿಮ ಘಟ್ಟದ > ಸಸ್ಯ ಪ್ರಭೇದಗಳಲ್ಲಿ ಯಾವ ವಾತಾವರಣಕ್ಕಾದರೂ ಹೊಂದಿಕೊಳ್ಳುವ ಗುಣವಿರುವುದು ಸಾಬೀತಾಗಿದೆ. > ಅದರಲ್ಲೂ ಇಲ್ಲಿನ ಸ್ಥಳೀಯ ಸಸ್ಯ ವರ್ಗದೊಂದಿಗೆ ಸಹಬಾಳ್ವೆಯಿಂದ ವನ್ಯ ಸಸ್ಯ ವರ್ಗ > ಬೆಳೆಯುತ್ತಿವೆ. ಮಳೆಯ ಪ್ರಮಾಣ, ತೇವಾಂಶ, ಮಣ್ಣಿನ ಗುಣ ಸೇರಿದಂತೆ ಎಲ್ಲದರಲ್ಲೂ ಬಹಳ > ವ್ಯತ್ಯಾಸವಿದೆ. ಆದರೂ ಎರಡೂ ಪ್ರಭೇದಗಳು ಸಂಪೂರ್ಣವಾಗಿ ಹೊಂದಾಣಿಕೆ ಮಾಡಿಕೊಂಡು ಬೆಳೆದಿವೆ. > > ಕಿರು ಅರಣ್ಯದಲ್ಲಿನ ಮರ ಮತ್ತು ಗಿಡಗಳ ಬೆಳವಣಿಗೆ, ಹೂ ಬಿಡುವುದು ಸೇರಿದಂತೆ ಎಲ್ಲವೂ > ಪಶ್ಚಿಮ ಘಟ್ಟದಲ್ಲಿ ಬೆಳೆಯುವ ರೀತಿಯಲ್ಲೇ ಇದೆ. ಹೀಗಾಗಿಯೇ ಪಶ್ಚಿಮ ಘಟ್ಟದ ಸಸ್ಯ ಪ್ರಭೇದ > ಅವಕಾಶವಾದಿ ಸ್ವಭಾವ ಹೊಂದಿರುವುದು ತಿಳಿಯುತ್ತದೆ’ ಎನ್ನುತ್ತಾರೆ ಅವರು. ನಿತ್ಯ ಹರಿದ್ವರ್ಣ > ಕಾಡುಗಳ ಮರಗಳು ಎತ್ತರವಾಗಿ ಬೆಳೆದು ನೆರಳು ನೀಡುತ್ತವೆ. > > ಇದರಿಂದಾಗಿ ಈ ಕಾಡಿನಲ್ಲಿ ನಗರ ಪ್ರದೇಶಕ್ಕಿಂತ ಸುಮಾರು 4 ಡಿಗ್ರಿಯಷ್ಟು ಉಷ್ಣತೆ ಕಡಿಮೆ > ಇರುತ್ತದೆ. ಜೊತೆಗೆ ಈ ಮರಗಳಿಂದಾಗಿ ಕಿರು ಅರಣ್ಯದಲ್ಲಿ ಆರ್ದ್ರತೆ ಹೆಚ್ಚಿದೆ. ಹಣ್ಣಾಗಿ > ಉದುರುವ ಎಲೆಗಳು ಕೊಳೆತು ಆಗುವ ಗೊಬ್ಬರದಿಂದ ಇಲ್ಲಿನ ಮಣ್ಣು ಹೆಚ್ಚು ಫಲವತ್ತಾಗಿದೆ. ಈ > ಕಿರು ಅರಣ್ಯ ಬೇರೆಲ್ಲ ಅರಣ್ಯಗಳಂತೆಯೇ ಮಾನವ ಪ್ರವೇಶವಿಲ್ಲದೆ ನೈಸರ್ಗಿಕವಾಗಿ > ಬೆಳೆಯುತ್ತಿದೆ. ಇಲ್ಲಿ ನಾನಾ ರೀತಿಯ ಆಲ್ಗೆ, ಪಾಚಿ, ಫಂಗೈ, ಜರಿ ಗಿಡ, ಕೆಲವೊಂದು > ಗಿಡಮೂಲಿಕೆ ಗಿಡ–ಬಳ್ಳಿಗಳು ಚೆನ್ನಾಗಿ ಬೆಳೆದಿವೆ. ನಾನಾ ಜಾತಿಯ ಕೀಟಗಳು, ಕಪ್ಪೆ, ವೈಪರ್, > ಕೋಬ್ರಾ, ವಿವಿಧ ಸಸ್ತನಿಗಳು ಹಾಗೂ ಕಾಡುಪಾಪದ ನಾಲ್ಕು ಕುಟುಂಬಗಳು ಇಲ್ಲಿ ಆಶ್ರಯ ಪಡೆದಿವೆ. > > ಈ ಪ್ರದೇಶ ಈಗ ಬಹುಪಾಲು ಪಶ್ಚಿಮ ಘಟ್ಟದಂತೆಯೇ ಆಗಿದೆ. ವಿಜ್ಞಾನಿ ಪ್ರೊ. ಟಿ.ವಿ. > ರಾಮಚಂದ್ರ ಹೇಳುವುದು ಹೀಗೆ: ‘ಅಂರ್ತಜಲದ ಮಟ್ಟ ಹೆಚ್ಚಿಸುವಲ್ಲಿ ಮರಗಳ ಪಾತ್ರ ಬಹಳ ಮುಖ್ಯ. > ಮರದ ಬೇರುಗಳು ನೀರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತವೆ. ಸೂಕ್ಷ್ಮಾಣು ಜೀವಿಗಳು > ಮಣ್ಣು ಹಾಗೂ ಮರದ ಬೇರುಗಳ ಮಧ್ಯೆ ಮಧ್ಯವರ್ತಿಯ ರೀತಿ ಸಂಬಂಧ ಸೃಷ್ಟಿಸುತ್ತದೆ. > > ನೀರು ಸುಲಭವಾಗಿ ಮಣ್ಣಿನಲ್ಲಿ ಇಳಿಯುವಂತೆ ಹಾಗೂ ಗಾಳಿ ಮತ್ತು ನೀರನ್ನು ಭೂಮಿಯೊಳಗೆ > ಪ್ರವೇಶಿಸುವಂತೆ(ಪೋರಸ್) ಮಣ್ಣನ್ನು ತಯಾರು ಮಾಡುತ್ತವೆ. ಇದರಿಂದ ನೆಲದ ಮೇಲೆ ಬಿದ್ದ ಬೀರು > ಸುಲಭವಾಗಿ ಇಂಗುತ್ತದೆ. ನಂತರ ಅದು ಭೂಮಿಯೊಳಗಿನ ಮತ್ತೊಂದು ಪದರವಾದ ‘ಸಬ್ ಸರ್ಫೇಸ್’ > ಪ್ರವೇಶಿಸುತ್ತದೆ. ಮಳೆಯಿಂದ ಮರಗಳು ಹೀರಿಕೊಂಡು ಉಳಿದ ನೀರು ನದಿ ಅಥವಾ ಕೆರೆಗಳಿಗೆ > ಹರಿಯುತ್ತದೆ. ನಂತರ ಬೇಸಿಗೆ ಮುಗಿಯುತ್ತಿದ್ದಂತೆ ಸಬ್ ಸರ್ಫೇಸ್‌ನಲ್ಲಿ ಸಂಗ್ರಹವಾಗಿರುವ > ನೀರು ನಿಧಾನವಾಗಿ ಕೆರೆಗಳಿಗೆ ಹಾಗೂ ನದಿಗಳಿಗೆ ಹರಿಯುತ್ತದೆ. ಇದನ್ನೇ ‘ಬೇಸ್ ಫ್ಲೋ’ > ಎನ್ನುತ್ತೇವೆ. ಮರಗಳಿದ್ದರೆ ವರ್ಷವಿಡೀ ಕೆರೆ ಮತ್ತು ನದಿಗಳಲ್ಲಿ ನೀರಿರುತ್ತದೆ. ಆದರೆ > ಕೆರೆ ಮತ್ತು ಅದರ ಸುತ್ತಮುತ್ತಲ ಜೌಗು ಪ್ರದೇಶಗಳಲ್ಲಿರುವ ಮರ ಮತ್ತು ಗಿಡಗಳ ನಾಶದಿಂದಾಗಿ > ಇಂದು ಕೆರೆಗಳು ಬತ್ತಿವೆ ವಿನಃ ಕೆರೆಗಳು ಸತ್ತಿಲ್ಲ." > > ಕೆರೆಗಳು ಎಂದಿಗೂ ಸಾಯುವುದಿಲ್ಲ. ಅದಕ್ಕೆ ನೀರನ್ನು ಒದಗಿಸುವ ಮೂಲಗಳನ್ನು ನಾಶ ಮಾಡಿರುವ > ಕಾರಣ ಅವು ನೀರಿಲ್ಲದಂತಾಗಿವೆ. ಭೂಮಿಯನ್ನು ನುಂಗುವ ಹುನ್ನಾರದಿಂದ ಜೀವಂತ ಇರುವ > ಕೆರೆಗಳನ್ನು ಸತ್ತಿದೆ ಎಂಬ ಹೇಳಿಕೆ ನೀಡಲಾಗುತ್ತಿದೆ. ಮರಗಳು ಕೆರೆಗಳಿಗೆ ಹರಿಯುವ > ನೀರಿನಲ್ಲಿರುವ ಕಲ್ಮಶ ತೆಗೆಯುತ್ತವೆ. ನೀರಿನಲ್ಲಿರುವ ಸಾರಜನಕ ಹಾಗೂ ರಂಜಕದ ಅಂಶಗಳನ್ನು > ಮರ–ಗಿಡಗಳು ತೆಗೆಯುತ್ತವೆ. > > ಎಲ್ಲಿ ನೀರು ನೈಸರ್ಗಿಕವಾಗಿ ಶುದ್ಧೀಕರಣಗೊಳ್ಳುವುದಿಲ್ಲವೋ ಅಲ್ಲಿ ಕ್ಯಾನ್ಸರ್ ಹಾಗೂ > ಇತರೆ ರೋಗಗಳು ಬರುತ್ತವೆ. ಜಕ್ಕೂರು ಕೆರೆಯಲ್ಲಿ ಜೌಗು ಪ್ರದೇಶ ನಾಶದಿಂದ ಸುತ್ತಮುತ್ತಲ > ಪ್ರದೇಶದಲ್ಲಿ ದೊರೆಯುತ್ತಿದ್ದ ನೀರಿನಲ್ಲಿ ನೈಟ್ರೇಟ್ ಅಂಶ ಹೆಚ್ಚಾಗಿತ್ತು. ಈಗ ಆ > ಕೆರೆಯನ್ನು ಪುನರುಜ್ಜೀವನಗೊಳಿಸಿ, ಅಲ್ಲಿನ ಜೌಗು ಪ್ರದೇಶದಲ್ಲಿ ನೀರನ್ನು ಶುದ್ಧೀಕರಿಸುವ > ಗಿಡಗಳನ್ನು ನೆಡಲಾಗಿದೆ. ಇದರಿಂದಾಗಿ ಸುತ್ತಮುತ್ತಲಿರುವ 300 ಬಾವಿಗಳ ನೀರಿನಲ್ಲಿ > ನೈಟ್ರೇಟ್ ಅಂಶ ಇಲ್ಲದಂತಾಗಿದೆ. ಜನರಿಗೆ ಗಿಡಗಳಿಂದಾಗುವ ಪ್ರಯೋಜನಗಳು > ತಿಳಿದಿಲ್ಲ. ಇದರಿಂದಾಗಿಯೇ ಮರಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಯಾರೂ > ತಲೆಕೆಡಿಸಿಕೊಳ್ಳುತ್ತಿಲ್ಲ. ಮೊದಲು ಜನರಿಗೆ ಮರಗಳ ಮಹತ್ವದ ಬಗ್ಗೆ ತಿಳಿಹೇಳಬೇಕಿದೆ. > > ಕಿರು ಅರಣ್ಯದಲ್ಲಿ ‘ಲ್ಯಾಂಡ್ ಸ್ಯಾಟ್ ಇಟಿಎಂ’ ಬಳಸಿ ಉಷ್ಣತೆ ಅಳೆದಾಗ ಐಐಎಸ್‌ಸಿ > ಆವರಣದೊಳಗಿರುವ ಉಷ್ಣತೆಗಿಂತ 2 ಡಿಗ್ರಿ ಕಡಿಮೆ ಉಷ್ಣಾಂಶ ಇರುವುದು ತಿಳಿದು ಬಂದಿದೆ. ಈ > ಕಿರು ಅರಣ್ಯದ ಸುತ್ತಮುತ್ತಲ ಪ್ರದೇಶದಲ್ಲಿರುವ ಮೂರು ಬಾವಿಗಳಲ್ಲಿ 10–15 ಅಡಿ ಆಳದಲ್ಲಿ > ನೀರು ಸಿಗುತ್ತದೆ. ಯಾವ ಪ್ರದೇಶದಲ್ಲಿ ಹಸಿರು ಹೆಚ್ಚಾಗಿರುತ್ತದೆಯೋ ಅಲ್ಲಿ ಅಂತರ್ಜಲದ ಮಟ್ಟ > ಹೆಚ್ಚಾಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಅಷ್ಟೇ ಅಲ್ಲದೆ ವಾತಾವರಣದಲ್ಲಿರುವ ಇಂಗಾಲದ ಡೈ > ಆಕ್ಸೈಡ್ ಅನ್ನು ಹೀರಿಕೊಳ್ಳುವ ಕೇಂದ್ರವಾಗಿ ಕೆಲಸ ಮಾಡುತ್ತಿದೆ. > > ಇದರಿಂದಾಗಿ ವಾತಾವರಣದಲ್ಲಿನ ಉಷ್ಣತೆ ಕಡಿಮೆಯಾಗುತ್ತದೆ. ಇಂತಹ ‘ಕಿರು ಅರಣ್ಯ’ > ಪರಿಕಲ್ಪನೆಯನ್ನು ದೇಶ ಸೇರಿದಂತೆ ಯಾವುದೇ ರಾಜ್ಯ, ಮರಗಳಿಲ್ಲದೆ ಬೋಳಾಗುತ್ತಿರುವ > ನಗರಗಳಲ್ಲಿ ಅಳವಡಿಸಿಕೊಳ್ಳಬಹುದು. ಇದರಿಂದ ಉಷ್ಣತೆ ಕಡಿಮೆಯಾಗಿ ಹಾಗೂ ಅಂತರ್ಜಲದ ಮಟ್ಟ > ಹೆಚ್ಚುತ್ತದೆ. ಜೊತೆಗೆ ಹವಾಮಾನದಲ್ಲಾಗುತ್ತಿರುವ ಬದಲಾವಣೆಯನ್ನು ತಕ್ಕಮಟ್ಟಿಗೆ > ನಿಲ್ಲಿಸಬಹುದು. ಅಷ್ಟೇ ಅಲ್ಲದೆ ವಿನಾಶದ ಅಂಚಿನಲ್ಲಿರುವ ಜೀವಿ ಹಾಗೂ ಸಸ್ಯ ವೈವಿಧ್ಯವನ್ನು > ಉಳಿಸಿಕೊಳ್ಳಬಹುದು. > > Hareeshkumar K > AM(PCM) > GHS HUSKURU > MALAVALLI TQ > MANDYA DT 571475 > mobile no 9880328224 > email [email protected] > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
