ಅಂಬೇಡ್ಕರ್ ಜಯಂತಿ..... ಸಮೀಪಿಸುತ್ತಿರುವ ಸಂದರ್ಭದಲ್ಲಿ ಹೊಳೆದದ್ದು.....
ನಮ್ಮ ಜನಗಳಲ್ಲಿ ಅನೇಕರು ಹೇಗೆ ಎಂದರೆ ಅನವಶ್ಯಕವಾದ ಕಾರ್ಯಗಳಿಗೆ ಹೂವಿನ ಹಾರಗಳ ಸುರಿಮಳೆ ಸುರಿಸುತ್ತಾರೆ..... ಆದರೆ ಕೆಲವರು ಎಷ್ಟು ಜಿಗುಟು ಎಂದರೆ ಸಮಾಜದ ಉಧ್ಧಾರಕ್ಕೆ ಹೋರಾಡಿದ ಮಹನೀಯರಿಗೂ ಒಂದು ಹೂವಿನ ಹಾರ ಹಾಕಲೂ ಸಹ ರೂಪಾಯಿಗಳ ಲೆಕ್ಕ ಹಾಕುತ್ತಾರೆ.... ಹೇಗೋ ಒಂದು ಕಾರ್ಯಕ್ರಮ ಮುಗಿಸಲು ಹವಣಿಸುತ್ತಾರೆ.... ಛೇ ಏನನ್ನಬೇಕು ಇವರ ಮನೋಸ್ಥಿತಿಗೆ......... ?? ಮುಂದಿನ ಜನಾಂಗದವರಿಗೆ ನಮ್ಮ ಭಾರತೀಯ ಮಹನೀಯರ ಬಗ್ಗೆ ಗೌರವ ಮೂಡಬೇಕೆಂದರೆ ಇಂದಿನ ನಮ್ಮ ಆಚರಣಾ ವಿಧಾನಗಳು , ಮಾಹಿತಿಗಳನ್ನು ತಿಳಿಸುವುದು ..... ಮೂಲ ತಳಹದಿ ಅನ್ನೋದನ್ನು ತಿಳಿಯುವುದು ಯಾವಾಗ ........?? ನಮ್ಮ ದೇಶದ ಮಹನೀಯರ ಜಯಂತಿಗಳು ಸರ್ಕಾರಿ ಆದೇಶದ ಪಾಲನೆಗಷ್ಟೇ ಆಗಿದೆಯೇ...? ಆಚರಿಸದಿದ್ದರೇ ಯಾರಾದರೂ ಪೇಪರ್ ನಲ್ಲಿ ಹಾಕಿಸಿಬಿಟ್ಟಾರು ಎಂಬ ಭಯಕ್ಕೇ...?? ಮಹನೀಯರುಗಳಿಗೆ ಗೌರವ ಕೊಡುವಂತೆ ಚಾಟಿ ಬೀಸಬಾರದೇಕೆ .......?? ಬೇಡಿ ಪಡೆಯಬೇಕೇ...? ವಿಶ್ವ ಸಂಸ್ಥೆಯೇ ಅಂಬೇಡ್ಕರ್ ರವರಂತಹವರ ಜಯಂತಿ ಮಾಡಿ ಆದರ್ಶವಾಗಿರುವಾಗ ನಮಗೆ ನಮ್ಮ ಭಾರತೀಯ ರತ್ನಗಳ ಬಗ್ಗೆ ಗೌರವ ಬರುವುದು ಯಾವಾಗ. ...?? ದೀನ ದಲಿತರ ಉಧ್ಧಾರಕ್ಕೆ ನಿಮ್ಮ ಜೀವನವನ್ನೇ ಸವೆಸಿದಿರಿ ಅಂಬೇಡ್ಕರ್. .... ಮನುಷ್ಯನನ್ನು ಮನುಷ್ಯನಂತೆ ಕಾಣಿ ಎಂದು ನೀವು ಹೋರಾಟ ಮಾಡಬೇಕಾಯ್ತಲ್ಲ ಎಂಬುದೇ ವಿಪರ್ಯಾಸ..... ಈ ಆಧುನಿಕ ಯುಗದಲ್ಲೂ ಮಹಿಳೆಯರಿಗೂ ದೇವರ ಮೂರ್ತಿ ಮುಟ್ಟದಂತೆ ಅಟ್ಟಹಾಸ..... ಅಂಬೇಡ್ಕರ್ , ಗಾಂಧೀಜಿ , ಪಟೇಲ್, ವಿವೇಕಾನಂದ ,ಕಲಾಂ ,ಶಾಸ್ತ್ರಿ ,ತೆರೇಸಾ,ಭಗತ್ ಸಿಂಗ್, ಭೋಸ್,ಬಸವಣ್ಣರಂತ ಅನೇಕಾನೇಕ ಭಾರತರತ್ನಗಳಿಗೆ ಕೈ ಮುಗಿದು ಗೌರವಿಸುತ್ತೇವೆ.... ಆದರೂ ನಿಮ್ಮ ಜಯಂತಿ ಕೆಲವೇ ಜಾತಿಗಳಿಗೆ ಸೀಮಿತವಾಗಬಾರದು ... ಸರ್ವ ಭಾರತೀಯನದೂ ಆಗಬೇಕು..... ಅದರಂತೆಯೇ ಎಲ್ಲಾ ಭಾರತೀಯ ರತ್ನಗಳ ಜಯಂತಿಗಳು ಕೆಲವೇ ಜಾತಿಗೆ ಸೀಮಿತ ಆಗದೇ ಸರ್ವ ಭಾರತೀಯನದೂ ಆಗಬೇಕು ಅಲ್ಲವೇ.....?? ಅಂಬೇಡ್ಕರ್ ರವರೇ ಹೇಳಿದ್ದಾರೆ... " ಮೊದಲಿಗೂ ,ಕೊನೆಗೂ ನಾವು ಭಾರತೀಯರೇ ಎಂದು " ನಾವೆಲ್ಲಾ ಭಾರತೀಯರೇ....ದೇಶದ ಏಳಿಗೆಗಾಗಿ ಶ್ರಮಿಸೋಣ..... ಎಲ್ಲರ ಮಹನೀಯರ ಆದರ್ಶದ ಭಾಷಣವನ್ನು ಶಹಭ್ಬಾಸ್ ಎಂಬಂತೆ ತೋರಿಕೆಗೆ ಮಾಡುವುದಕ್ಕಷ್ಟೇ ಸೀಮಿತವಾಗಿಸದೇ ಸ್ವಲ್ಪವಾದರೂ ಅನುಸರಿಸಲು ಪ್ರಯತ್ನಿಸೋಣ.... ಅಷ್ಟಾದರೂ ಫಲಪ್ರದವಾಗಲಿ ಅಲ್ಲವೇ....?? ಇದನ್ನು ಓದಿದ ಕೂಡಲೇ ಅಂದುಕೊಳ್ಳುವರು ಹೋ ಇವನು ಮೇಲ್ವರ್ಗದ ಜಾತಿಯವನಲ್ಲವೇನೋ....? ಅದಕ್ಕೇ ಇಷ್ಟು ಪುರಾಣ ಬರೆದವನೆ ಅಂತ.... ಇಲ್ಲಾ ಸ್ವಾಮಿ .....ನನಗೆ ತಿಳಿದಿರುವಂತೆ ನಾನು ಮೇಲ್ವರ್ಗದ ಜಾತಿಯವನು ಅಂತ ಗುರುತಿಸಲ್ಪಡುವ ಜಾತಿಯೇ..... ಆದರೆ ಮೇಲ್ವರ್ಗ , ಕೆಳವರ್ಗ ಅಂತ ಜಾತಿ ವರ್ಗ ಮಾಡಿಕೊಂಡೋರು ಯಾರು ಹೇಳಿ ... ನಾವು ನಾವೇ...... ಹೇಳಬೇಕೆಂದರೆ ಎಲ್ಲರದೂ ಒಂದೇ ವರ್ಗ ......ಅದುವೇ ಮಾನವ ವರ್ಗ.... ಇವನು ಮೇಲ್ವರ್ಗ , ಕೆಳವರ್ಗ ಅಂತ ಗುರುತಿಸುವುದಕ್ಕಿಂತ ಪ್ರತಿಭೆ ಗುರುತಿಸೋಣ... ....ಎಲ್ಲಾ ಜಾತಿಯಲ್ಲೂ ಪ್ರತಿಭೆಗಳಿವೆ. ಸಂಖ್ಯೆ ಏರು ಪೇರು ಇರಬಹುದಷ್ಟೇ...... ನಾವು ಅನುಸರಿಸಬೇಕಾದ ಜಾತಿ ಮಾನವೀಯತೆಯ , ಮನುಷ್ಯತ್ವದ ಜಾತಿ ....ಇದನ್ನು ಅನುಸರಿಸಿದರೆ ಎಲ್ಲಾ ಮಹನೀಯರ ಹೋರಾಟ ಸಾರ್ಥಕ.ಏನಂತೀರಾ ಸ್ವಾಮಿ. .....??? HAPPY ....... DR.B R AMBEDKER JAYANTI..... ..... In Advance ............ 👏 -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
