Superb article sir Thank you so much sir On Jan 13, 2016 6:14 PM, "HAREESHKUMAR K huskuru" <[email protected]> wrote:
> > http://m.vijaykarnataka.com/edit/columns/Net-nota-by-Sudhindra-Haldodderi-Innovation-science-are-basis-of-long-term-economic-health-V-Ramakrishnan/articleshow/50550760.cms > *ನೆಟ್ ನೋಟ: ವಿವೇಚನೆಯೊಂದಿಗೆ ‘ವಿವೇಕ’ ಬೆರೆತ ಜ್ಞಾನವೇ ವಿಜ್ಞಾನ* > > Jan 13, 2016, 04.00 AM IST > > Venkatraman-Ramakrishnan > > AAA > > * ಸುಧೀಂದ್ರ ಹಾಲ್ದೊಡ್ಡೇರಿ > > ಬಹುಶಃ ಇಪ್ಪತ್ತು ವರ್ಷಗಳ ಹಿಂದಿನ ಮಾತಿದು. ಇಷ್ಟೆಲ್ಲಾ ಅಗಾಧವಾಗಿ ಇಂಟರ್‌ನೆಟ್ ಅಥವಾ > ಟೀವಿ ಚಾನೆಲ್‌ಗಳು ನಮ್ಮನ್ನು ಆವರಿಸಿಕೊಂಡಿರಲಿಲ್ಲ. ಬೆಳಗ್ಗೆ ಕಾಫಿಯೊಂದಿಗೆ ಕಣ್ಣು > ಹಾಯಿಸುತ್ತಿದ್ದ ಪತ್ರಿಕೆಗಳೇ ನಮಗೆ ರೋಚಕ ಹಾಗೂ ಸ್ವಾರಸ್ಯಕರ ಸುದ್ದಿಗಳನ್ನು > ತಲುಪಿಸುತ್ತಿದ್ದವು. ನಮ್ಮ ಕಣ್ಣಿಗೆ ಬೀಳದಿದ್ದ 'ರಸ ವಾರ್ತೆ'ಗಳನ್ನು ಆಕಾಶವಾಣಿ > ವಿಶೇಷವಾಗಿ ಬಿತ್ತರಿಸುತ್ತಿತ್ತು. ಹೀಗೊಂದು ದಿನ 'ನಲ್ಲಿ ನೀರು ಕ್ಯಾನ್ಸರ್ ತರಬಹುದೆ?' > ಎಂಬ ಸುದ್ದಿ ಪ್ರಕಟವಾಯಿತು. ಅಮೆರಿಕದಲ್ಲಿ ಜರುಗಿದ ಸಂಶೋಧನೆಯೊಂದರ ಸುದ್ದಿ ಸಾರಾಂಶ ನಮ್ಮ > ನ್ಯೂಸ್ ಏಜೆನ್ಸಿಗಳ ಮೂಲಕ ಕನ್ನಡ ಪತ್ರಿಕೆಗಳನ್ನೂ ತಲುಪಿತ್ತು. ಮೂತ್ರಕೋಶ ಹಾಗೂ ಗುದದ್ವಾರ > ಕ್ಯಾನ್ಸರ್‌ಗಳಿಂದ ಬಳಲುತ್ತಿದ್ದವರಲ್ಲಿ ಅನೇಕರು ತಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳಲು > ಮಳಿಗೆಗಳಲ್ಲಿ ಲಭ್ಯವಿರುವ ಶುದ್ಧ ಕುಡಿಯುವ ನೀರಿನ ಪೀಪಾಯಿಗಳ ಬದಲು ಕೊಳವೆಗಳ ಮೂಲಕ ಮನೆಗೆ > ನೀರು ಹರಿದು ಬರುವ ನಳವನ್ನು ಆಶ್ರಯಿಸಿದ್ದರು. ಸಾಮಾನ್ಯವಾಗಿ ನೀರನ್ನು ಶುದ್ಧೀಕರಿಸಲು > ಎಲ್ಲೆಡೆಯಂತೆ ಅಮೆರಿಕದಲ್ಲೂ ಕ್ಲೋರಿನ್ ಅನ್ನು ಬಳಸುತ್ತಾರೆ. ಈ ವಿಜ್ಞಾನಿಗಳು ತಮ್ಮ > ಅಧ್ಯಯನದಲ್ಲಿ ಕಂಡುಕೊಂಡ ಹೊಸ ವಿಷಯವೇನೆಂದರೆ ನೀರಿನ ಕೊಳವೆಗಳ ತಿರುವು, ಜೋಡಣಾ ಭಾಗ, > ಉಬ್ಬು-ತಗ್ಗುಗಳಲ್ಲಿ ಇರಬಹುದಾದ ಜೈವಿಕ ಅಂಶಗಳೊಡನೆ ಕ್ಲೋರಿನ್ ಬೆರೆತು ಕ್ಯಾನ್ಸರ್-ಕಾರಕ > ರಾಸಾಯನಿಕಗಳನ್ನು ಉತ್ಪಾದಿಸುವ ಸಾಧ್ಯತೆ ಹೆಚ್ಚು. ಇಲ್ಲಿ ಎಷ್ಟು ಮಂದಿ ಈ ಅಧ್ಯಯನದಲ್ಲಿ > ಭಾಗಿಯಾಗಿದ್ದರು, ನಳದ ನೀರನ್ನೇ ಸೇವಿಸುತ್ತಿದ್ದವರ ದೇಹದಲ್ಲಿ ಮತ್ಯಾವ > ಕ್ಯಾನ್ಸರ್-ಕಾರಕಗಳು ಪತ್ತೆಯಾಗಿದ್ದವು, ಮತ್ತಿತರ ಅಂಶಗಳು ಪ್ರಕಟವಾದ ಆ ಕನ್ನಡ > ಸುದ್ದಿಯಲ್ಲಿ ಇರಲಿಲ್ಲ. > > ನಳದ ನೀರಿನ ಹಳೆಯ ಸುದ್ದಿ ಇಂದು ನೆನಪಿಗೆ ಬರಲು ಕಾರಣ -ಕಳೆದ ಗುರುವಾರವಷ್ಟೇ > ಮೈಸೂರಿನಲ್ಲಿ ಮುಕ್ತಾಯಗೊಂಡ ಇಂಡಿಯನ್ ಸೈನ್ಸ್ ಕಾಂಗ್ರೆಸ್. ಈ ಸಂದರ್ಭದಲ್ಲಿ ನೊಬೆಲ್ > ಪುರಸ್ಕತ ವಿಜ್ಞಾನಿ ವೆಂಕಟರಾಮನ್ ರಾಮಕಷ್ಣನ್ ಅವರು ಹೋಮಿಯೋಪತಿ ವೈದ್ಯಪದ್ಧತಿಯ ಕುರಿತು > ಹೇಳಿದ ಮಾತು ಮಾಧ್ಯಮಗಳಲ್ಲಿ ತಿರು ತಿರುಚಿ ಚರ್ಚೆಯಾಯಿತು. ಹೋಮಿಯೋಪತಿಯನ್ನು ನಳದ ನೀರಿಗೆ > ಅವರು ಹೋಲಿಸಿದ್ದಾರೆ, ನಳದ ನೀರೇ ಹೋಮಿಯೋಪತಿ ಮದ್ದಿಗಿಂತ ಉತ್ತಮ... ಎಂಬಂತೆ > ಬಿಂಬಿತವಾಯಿತು. ಅಸಲಿಗೆ, ಅವರು ಹೇಳಿದ್ದೇನೆಂದರೆ ''ಹೋಮಿಯೋಪತಿ ವೈದ್ಯಪದ್ಧತಿಯಲ್ಲಿ > ಅತ್ಯಂತ ದುರ್ಬಲಗೊಳಿಸಿದ ಆರ್ಸೆನಿಕ್ ವಿಷವನ್ನು ಔಷಧವಾಗಿ ನೀಡಲಾಗುತ್ತದೆ. ಅದನ್ನೆಷ್ಟು > ದುರ್ಬಲಗೊಳಿಸಲಾಗಿರುತ್ತದೆಂದರೆ ಆರ್ಸೆನಿಕ್ ನ ಒಂದು ಅಣು ಆ ಔಷಧದಲ್ಲಿರಬಹುದು. ನಮ್ಮ > ನಲ್ಲಿ ನೀರಿನಲ್ಲಿಯೇ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಆರ್ಸೆನಿಕ್ ಅಂಶವಿರುತ್ತದೆ. ರಸಾಯನ > ವಿಜ್ಞಾನದಲ್ಲಿ ತೊಡಗಿಕೊಂಡವರಲ್ಲಿ ಯಾರೂ ಹೋಮಿಯೋಪತಿಯ ಪರಿಣಾಮಗಳನ್ನು ನಂಬುವುದಿಲ್ಲ''. > > ಮೊದಲು ಉಲ್ಲೇಖಿಸಿದ ಸಂಶೋಧನಾ ವರದಿಗೂ ಮತ್ತು ನಮ್ಮ ನೊಬೆಲ್ ವಿಜ್ಞಾನಿಯ ಹೇಳಿಕೆಗೂ > ಸಾಮ್ಯತೆಗಳಿವೆ. ವಿಜ್ಞಾನ > > ಆಧಾರ ಸಹಿತವಾದ ವಿಶ್ವಾಸಾರ್ಹ ಫಲಿತಾಂಶಗಳನ್ನು ನಿರೀಕ್ಷಿಸುತ್ತದೆ. ಜತೆಗೆ, ಬಲವಾಗಿ > ನಂಬಿದ ಒಂದು ಪದ್ಧತಿಯನ್ನು ನಲ್ಲಿಯ ಮೂಲಕ ಬರುವ ಕುಡಿಯುವ ನೀರು ಆರೋಗ್ಯಕ್ಕೆ ಹಾನಿಕರವಲ್ಲ > ಅಥವಾ ಆಲೋಪತಿಯ ಮೂಲಕ ಗುಣ ಕಾಣದ ದೀರ್ಘಕಾಲದ ರೋಗರುಜಿನಗಳಿಗೆ ಹೋಮಿಯೋಪತಿಯಲ್ಲಿ > ಪರಿಹಾರವಿದೆ. ರೋಗವನ್ನು ಬುಡ ಸಹಿತ ಕಿತ್ತೊಗೆಯಬೇಕಾದರೆ, ಕೇವಲ ಕೆಲವೇ ಜನರ ಮೇಲೆ ನಡೆಸಿದ > ಪ್ರಯೋಗಗಳಾಗಲೀ ಈ ಬಗೆಯ ಘೋಷಣೆಗಳನ್ನು ಮಾಡುವ ಮೊದಲು ವಿವೇಚನೆಯಿಂದ 'ವಿವೇಕ'ವನ್ನು > ಬಳಸಬೇಕಾಗುತ್ತದೆ. > > ನಿನ್ನೆ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವವನ್ನು ಸಂಭ್ರಮದಿಂದ ಆಚರಣೆ > ಮಾಡಿದ್ದಾಗಿದೆ. ಈ ಹೊತ್ತಿನಲ್ಲಿ ಅವರು ಬೇರೊಂದು ಕಾರಣಕ್ಕೆ ನೆನಪಿಗೆ ಬರುತ್ತಿದ್ದಾರೆ. > ಬಹುಶಃ ಐವತ್ತು ಅಥವಾ ನೂರು ವರ್ಷಗಳ ಹಿಂದೆ ನಮ್ಮ ಬೆಂಗಳೂರು ಸುಂದರ ನಗರವಾಗಿತ್ತು. ಇನ್ನೂ > ಹಿಂದೆ ಸ್ವಾಮಿ ವಿವೇಕಾನಂದರು ಬೆಂಗಳೂರಿಗೆ ಬಂದ ಸಮಯದಲ್ಲಿ ಇಡೀ ಬೆಂಗಳೂರೇ > ಚಂದದೂರಾಗಿತ್ತು. ಇಂದು ಜಗತ್ಪ್ರಸಿದ್ಧವಾಗಿರುವ ಬೆಂಗಳೂರು ಐ.ಟಿ.-ಬಿ.ಟಿ. > ನಗರವಾಗುವುದಕ್ಕೂ ಮುನ್ನ ದೇಶದ ಬಾಹ್ಯಾಕಾಶ ರಾಜಧಾನಿಯಾಗಿತ್ತು. ಇನ್ನೂ ಸ್ವಲ್ಪ ಹಿಂದಕ್ಕೆ > ಹೊರಳಿದರೆ ಇದು ದೇಶದ ವಿಮಾನ ನಗರವಾಗಿತ್ತು. ಹಾಗೆಯೇ ತಂತ್ರಜ್ಞಾನ ನಗರವಾಗಿತ್ತು. ಅದಕ್ಕೂ > ಹಿಂದೆ ವಿಜ್ಞಾನ ನಗರವಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ಬೆಂಗಳೂರು ಉದ್ಯಾನ ನಗರವಾಗಿ ಹಿರಿಮೆ > ಹೊಂದಿತ್ತು. > > ಬೆಂಗಳೂರೆಂಬ ಬ್ರಿಟಿಷರ ಕಂಟೋನ್ಮೆಂಟ್ ಮುಂದೆ ಪ್ರಮುಖ ಔದ್ಯಮಿಕ ಕೇಂದ್ರವಾಗುತ್ತದೆಂಬ > ಕಲ್ಪನೆ ಯಾರಿಗೂ ಇರಲಿಲ್ಲ. ಆದರೆ ಮೈಸೂರನ್ನು ಮಾದರಿ ಸಂಸ್ಥಾನವನ್ನಾಗಿಸಿ, ಬೆಂಗಳೂರನ್ನು > ಉನ್ನತ ಸ್ಥಾನಕ್ಕೇರಿಸಬೇಕೆಂಬ ಹಂಬಲ ಆಳರಸರಲ್ಲೂ, ಅವರ ದಿವಾನರಲ್ಲೂ ಇತ್ತು. ಅಂದು ಅವರೆಲ್ಲ > ಕಂಡ ಕನಸಿನ ಫಲದಿಂದ ಇಂದು ಬೆಂಗಳೂರಿಗೆ ಇನ್ನಿಲ್ಲದ ಗರಿಮೆ ಸಿಕ್ಕಿದೆ. ಬೆಂಗಳೂರಿನ ಕೀರ್ತಿ > ಜಗದಗಲ ವಿಸ್ತರಿಸುವುದರಲ್ಲಿ ಆ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವುದರಲ್ಲಿ > ಸ್ವಾಮಿ ವಿವೇಕಾನಂದರ ಪಾತ್ರ ಮಹತ್ತರವಾದದ್ದು. ವಿಶೇಷವಾಗಿ ಇಲ್ಲಿ ಉಲ್ಲೇಖಿಸಬಹುದಾದ ವಿಷಯ > ಸ್ವಾಮಿ ವಿವೇಕಾನಂದರ ಬೆಂಗಳೂರಿನ ಭೇಟಿ, ಹಾಗೆಯೇ ಅದಕ್ಕೂ ಮುನ್ನ ಅವರು ಜಪಾನಿನಿಂದ > ಅಮೆರಿಕಕ್ಕೆ ಹಡಗಿನಲ್ಲಿ ಪಯಣಿಸುತ್ತಿದ್ದಾಗ ಅಚಾನಕ್ಕಾಗಿ ಟಾಟಾ ಅವರನ್ನು ಭೇಟಿಯಾದ > ಸಂದರ್ಭಗಳು. ಕ್ರಿ.ಶ.1893ರ ಈ ಹಡಗು ಪಯಣದಲ್ಲಿ ಟಾಟಾ ಅವರ ಉದ್ದಿಶ್ಯದ ಬಗ್ಗೆ > ವಿವೇಕಾನಂದರು ವಿಚಾರಿಸುತ್ತಾರೆ. ಉಕ್ಕಿನ ಉದ್ದಿಮೆಯನ್ನು ಭಾರತಕ್ಕೆ ತರುವ ಹಂಬಲವನ್ನು > ಟಾಟಾ ಅವರು ವಿವೇಕಾನಂದರೊಂದಿಗೆ ಹಂಚಿಕೊಳ್ಳುತ್ತಾರೆ. ವಿವೇಕಾನಂದರ ದೂರದರ್ಶಿತ್ವವನ್ನು > ಇಲ್ಲಿ ಗಮನಿಸಬೇಕು. 'ನೀವು ಕೇವಲ ಉಕ್ಕಿನ ತಂತ್ರಜ್ಞಾನವನ್ನಷ್ಟೇ ಭಾರತಕ್ಕೆ ತಂದರೆ ಸಾಲದು, > ಉಕ್ಕು ತಯಾರಿಕೆಯ ಹಿಂದಿನ ವಿಜ್ಞಾನವನ್ನೂ ಭಾರತಕ್ಕೆ ತನ್ನಿ' ಎಂದು ಟಾಟಾ ಅವರನ್ನು > ಒತ್ತಾಯಿಸುತ್ತಾರೆ. ಇದು ಟಾಟಾ ಅವರಲ್ಲಿ ಚಿಂತನೆಯ ತುಮುಲಗಳನ್ನೆಬ್ಬಿಸುತ್ತವೆ. ಈ ಹಿಂದೆ > ಟಾಟಾ ಅವರು ಲಂಡನ್ನಿಗೆ ಹೋಗಿದ್ದ ಘಟನೆಯ ನೆನಪು ಮರುಕಳಿಸುತ್ತದೆ. ಉಕ್ಕು ಕಾರ್ಖಾನೆಯ > ತಂತ್ರಜ್ಞಾನ ವರ್ಗಾವಣೆಯ ಬಗ್ಗೆ ಅಲ್ಲಿನ ಉದ್ದಿಮೆದಾರರನ್ನು ಟಾಟಾ ಅವರು ವಿಚಾರಿಸಿದಾಗ > ಲೇವಡಿಗೆ ಒಳಗಾಗಿದ್ದ ನೋವು ನೆನಪಿಗೆ ಬರುತ್ತದೆ. 'ಭಾರತೀಯರು ಉಕ್ಕು ತಯಾರಿಸಲು > ಸಾಧ್ಯವಾದರೆ, ಅದು ಬ್ರಿಟಿಷರು ಹಲ್ಲಿನಿಂದ ಜಗಿಯುವಂತೆ ಇರುತ್ತದೆ, ಬಿಡಿ' ಎಂದಿದ್ದರಂತೆ ಆ > ಉದ್ಯಮಿಗಳು. ಇದು ಟಾಟಾ ಅವರಲ್ಲಿ ಅದೆಂಥಾ ಛಲ ಹುಟ್ಟಿಸಿತೆಂದರೆ ಅಟ್ಲಾಂಟಿಕ್ ಸಾಗರ ದಾಟಿ, > ಅಮೆರಿಕ ಮುಟ್ಟಿ, ಉಕ್ಕು ತಯಾರಿಕಾ ತಂತ್ರಜ್ಞಾನವನ್ನು ಭಾರತಕ್ಕೆ ತರುತ್ತಾರೆ. ಆಗಸ್ಟ್ 25, > 1907ರಂದು ಕಾರ್ಖಾನೆ ಆರಂಭವಾಗುತ್ತದೆ. ಇಂದು ಜಮ್‌ಶೆಟ್‌ಪುರದಲ್ಲಿ ವರ್ಷಕ್ಕೆ ಸುಮಾರು > ಒಂದು ಕೋಟಿ ಟನ್ ಉಕ್ಕು ತಯಾರಿಸುವ ಟಾಟಾ ಉದ್ದಿಮೆ, ವಿಮಾನದ ಎಂಜಿನ್‌ಗಳಿಗೆ, ಇಳಿಯುವ > ಗಾಲಿಗಳಿಗೆ, ಅತಿ ತಾಪಮಾನದ ಜೋಡಣೆಗಳಿಗೆ ಅಗತ್ಯವಾದ ವಿಶಿಷ್ಟ ಉಕ್ಕನ್ನು ತಯಾರಿಸುತ್ತಿದೆ, > ಲೇವಡಿ ಮಾಡಿ ನಕ್ಕ ದೇಶಕ್ಕೂ ಅಂಥ ಉತ್ತಮೋತ್ತಮ ಉಕ್ಕನ್ನು ರಫ್ತು ಮಾಡುತ್ತಿದೆ. > > ವಿವೇಕಾನಂದರು ನೀಡಿದ ಸ್ಫೂರ್ತಿಯನ್ನು ಮತ್ತೆ ನೆನೆಸಿಕೊಳ್ಳಬೇಕೆಂದರೆ ಬೆಂಗಳೂರಿನ > ಮಲ್ಲೇಶ್ವರ-ಯಶವಂತಪುರದತ್ತ ಹೊರಡಬೇಕು. ವಿವೇಕಾನಂದರೇನೋ ಅಂದು ಟಾಟಾ ಅವರನ್ನು ಹಡಗಿನಲ್ಲಿ > ಚಿಂತನೆಗೆ ಹಚ್ಚಿಬಿಟ್ಟರು. ಅಂದಿನಿಂದ ಟಾಟಾ ಅವರಿಗೆ ಬಹುಶಃ ನಿದ್ದೆ ಹತ್ತಿರಲಾರದು. > ಭಾರತಕ್ಕೆ ಹಿಂದಿರುಗಿದ ನಂತರ ದಿನಾಂಕ 23ನೇ ನವೆಂಬರ್ 1898ರಲ್ಲಿ ಅವರು > ವಿವೇಕಾನಂದರಿಗೊಂದು ಪತ್ರ ಬರೆಯುತ್ತಾರೆ. ತಾವು ಭಾರತದಲ್ಲಿ ವಿಜ್ಞಾನ ಸಂಸ್ಥೆಯೊಂದನ್ನು > ಸ್ಥಾಪಿಸುವ ಕನಸನ್ನು ಆ ಪತ್ರದಲ್ಲಿ ಹಂಚಿಕೊಳ್ಳುತ್ತಾರೆ. ಆ ಸಂಸ್ಥೆಯ ನೇತತ್ವವನ್ನು > ವಿವೇಕಾನಂದರೇ ವಹಿಸಿಕೊಳ್ಳಬೇಕೆಂದು ಟಾಟಾ ಅವರು ಒತ್ತಾಯಿಸುತ್ತಾರೆ. ಇದಕ್ಕೆ > ಉತ್ತರವೆಂಬಂತೆ ಬೆಂಗಳೂರಿಗೆ ವಿವೇಕಾನಂದರು ಆಗಮಿಸಿದ ಸಂದರ್ಭದಲ್ಲಿ ಯುವರಾಜ ನಾಲ್ವಡಿ > ಕೃಷ್ಣರಾಜ ಒಡೆಯರ್ ಹಾಗೂ ಅವರ ತಾಯಿ ಮಹಾರಾಣಿ ವಾಣೀವಿಲಾಸರವರ ಆತಿಥ್ಯದಲ್ಲಿರುತ್ತಾರೆ. > ಜಮ್‌ಶೇಟ್ಚಿ ಟಾಟಾ ಅವರ ಸಮ್ಮುಖದಲ್ಲಿ ವಿಜ್ಞಾನ ಸಂಶೋಧನಾ ಕೇಂದ್ರದ ಬಗ್ಗೆ ಅಲ್ಲಿ > ಸಮಾಲೋಚನೆ ನಡೆಯುತ್ತದೆ. ಮೈಸೂರು ಸಂಸ್ಥಾನವು 400 ಎಕರೆ ಜಾಗವನ್ನು ಉಚಿತವಾಗಿ ಕೊಡಲು > ನಿರ್ಧರಿಸುತ್ತದೆ. ಈ ಪ್ರಸ್ತಾವನೆ ಅನುಮತಿಗೆಂದು 1898ರಲ್ಲಿ ಬ್ರಿಟಿಷರಿಗೆ ಹೋಗುತ್ತದೆ. > ಏತನ್ಮಧ್ಯೆ ಟಾಟಾ ಅವರು ಹಠಾತ್ತಾಗಿ 1904ರಲ್ಲಿ ವಿಧಿವಶರಾಗುತ್ತಾರೆ. ಕೊನೆಗೆ 'ಭಾರತೀಯ > ವಿಜ್ಞಾನ ಮಂದಿರ' 1909ರಲ್ಲಿ ಆರಂಭವಾಗುತ್ತದೆ. ಭಾರತದ ಮೊದಲ ಖಾಸಗಿ-ಸರ್ಕಾರ ಭಾಗಿಯಾದ > ಜಂಟಿ ಯೋಜನೆಯಿದು. ಮುಂದಿನದು ಇತಿಹಾಸ. > > ವಿವೇಕಾನಂದರ ನೂರನೆಯ ಜನ್ಮ ದಿನೋತ್ಸವ ವರ್ಷದಲ್ಲೇ (1963) ತಿರುವನಂತಪುರದ ಸಮೀಪದ ಹಳ್ಳಿ > ತುಂಬಾದಲ್ಲಿ ದೇಶದ ಮೊದಲ ರಾಕೆಟ್ ಉಡ್ಡಯಣೆಯಾಗುತ್ತದೆ. ದೇಶದ ಹೆಮ್ಮೆಯ ವಿಜ್ಞಾನಿ ಅಬ್ದುಲ್ > ಕಲಾಂ ಅವರು ಆ ರಾಕೆಟ್ ಹಾರಾಟದ ಹಿಂದಿನ ಯುವ ಸ್ಫೂರ್ತಿಯಾಗಿರುತ್ತಾರೆ. ಹೋಮಿ ಭಾಭಾ-ವಿಕ್ರಂ > ಸಾರಾಭಾಯ್-ರಾಜಾರಾಮಣ್ಣ ಅವರ ಮಾರ್ಗದರ್ಶನದಲ್ಲಿ ಭಾರತ ಬಾಹ್ಯಾಕಾಶ ಸಂಶೋಧನಾ ಜಗತ್ತಿಗೆ > ಅಂಬೆಗಾಲಿಡುತ್ತದೆ. ಐವತ್ತು ವರ್ಷಗಳಲ್ಲಿ ಮಂಗಳಗ್ರಹ ಮುಟ್ಟುವ ತ್ರಿವಿಕ್ರಮ ಹೆಜ್ಜೆಯಾಗಿ > ಅದು ಬೆಳೆಯುತ್ತದೆ. ಈ ಹನುಮ ಲಂಘನದ ನಡುವೆ ಬೆಂಗಳೂರು ಮುಂಚೂಣಿ > ವಿಜ್ಞಾನ-ತಂತ್ರಜ್ಞಾನಗಳನ್ನು ಪೊರೆಯುತ್ತದೆ. ಉದ್ದಿಮೆದಾರರನ್ನು ಸೆಳೆಯುತ್ತದೆ. ಈ ಸೆಳೆತ > ತಿರುಗಣಿ ಮಡುವಾಗಿ ಬೆಂಗಳೂರನ್ನು ಭಾರತದ ವಿಜ್ಞಾನ-ತಂತ್ರಜ್ಞಾನ ರಾಜಧಾನಿಯಾಗಿ > ನಿಲ್ಲಿಸುತ್ತದೆ. ವಿಮಾನ ಹಾಗೂ ಬಾಹ್ಯಾಕಾಶ ಸಂಶೋಧನೆಗಳಿಗೆ ಬೆಂಗಳೂರು ಪ್ರಧಾನ > ನೆಲೆಯಾಗುತ್ತದೆ. ಇಂದಿನ ಬೆಂಗಳೂರು ವಿವೇಕಾನಂದರ ಕನಸನ್ನು ಸಾಕಾರಗೊಳಿಸುತ್ತಿದೆ. ಬಹುಶಃ > ವಿವೇಕಾನಂದರು ಬದುಕಿದ್ದಿದ್ದರೆ ನಮ್ಮೆಲ್ಲರಿಗಿಂತಲೂ ಹೆಚ್ಚು ಪುಳಕಿತಗೊಳ್ಳುತ್ತಿದ್ದರು. > ಅವರು ನೀಡಿದ ಸ್ಫೂರ್ತಿ ದೇಶಾದ್ಯಂತ ಇಂಥ ಸಹಸ್ರ ಸಂಸ್ಥೆಗಳ ಹುಟ್ಟಿಗೆ ಕಾರಣವಾಗಿದೆ. ಇದು > ಚಿರಂತನವಾಗಿ ಮುನ್ನಡೆದು ದೇಶವನ್ನು ಮತ್ತಷ್ಟು ಸದೃಢ ಹಾಗೂ ಸಮೃದ್ಧಗೊಳಿಸಲಿದೆ. > > > Hareeshkumar K > AM(PCM) > GHS HUSKURU > MALAVALLI TQ > MANDYA DT 571475 > mobile no 9880328224 > email [email protected] > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
