wonderful article
ಇವರಿಗೆ,
ಮಾನ್ಯರೆ,
ಬಸವರಾಜ.ಡಿ.ಆರ್..
ವಿಜ್ಞಾನ ಶಿಕ್ಷಕರು ಜಿಜಾಮಾತ ಪ್ರೌಢ ಶಾಲೆ ಬೀದರ
ಮ.ನಂ 17-4-76, ಸಿದ್ಧಾರೂಢ ಮಠ ಎದರು
ಅಗ್ರೀಕಲ್ಚರ್ ಕಾಲೋನಿ ಮನ್ನಳ್ಳಿ ರಸ್ತೇ
ಬೀದರ -585403
ಮೂ. : 8861731984, 9886665974
2016-04-25 15:19 GMT+05:30 HR Hanumanth Hanumanth <[email protected]>:
> Superb article sir
> Thank you so much sir
> On Jan 13, 2016 6:14 PM, "HAREESHKUMAR K huskuru" <[email protected]>
> wrote:
>
>>
>> http://m.vijaykarnataka.com/edit/columns/Net-nota-by-Sudhindra-Haldodderi-Innovation-science-are-basis-of-long-term-economic-health-V-Ramakrishnan/articleshow/50550760.cms
>> *ನೆಟ್ ನೋಟ: ವಿವೇಚನೆಯೊಂದಿಗೆ ‘ವಿವೇಕ’ ಬೆರೆತ ಜ್ಞಾನವೇ ವಿಜ್ಞಾನ*
>>
>> Jan 13, 2016, 04.00 AM IST
>>
>> Venkatraman-Ramakrishnan
>>
>> AAA
>>
>> * ಸುಧೀಂದ್ರ ಹಾಲ್ದೊಡ್ಡೇರಿ
>>
>> ಬಹುಶಃ ಇಪ್ಪತ್ತು ವರ್ಷಗಳ ಹಿಂದಿನ ಮಾತಿದು. ಇಷ್ಟೆಲ್ಲಾ ಅಗಾಧವಾಗಿ ಇಂಟರ್‌ನೆಟ್ ಅಥವಾ
>> ಟೀವಿ ಚಾನೆಲ್‌ಗಳು ನಮ್ಮನ್ನು ಆವರಿಸಿಕೊಂಡಿರಲಿಲ್ಲ. ಬೆಳಗ್ಗೆ ಕಾಫಿಯೊಂದಿಗೆ ಕಣ್ಣು
>> ಹಾಯಿಸುತ್ತಿದ್ದ ಪತ್ರಿಕೆಗಳೇ ನಮಗೆ ರೋಚಕ ಹಾಗೂ ಸ್ವಾರಸ್ಯಕರ ಸುದ್ದಿಗಳನ್ನು
>> ತಲುಪಿಸುತ್ತಿದ್ದವು. ನಮ್ಮ ಕಣ್ಣಿಗೆ ಬೀಳದಿದ್ದ 'ರಸ ವಾರ್ತೆ'ಗಳನ್ನು ಆಕಾಶವಾಣಿ
>> ವಿಶೇಷವಾಗಿ ಬಿತ್ತರಿಸುತ್ತಿತ್ತು. ಹೀಗೊಂದು ದಿನ 'ನಲ್ಲಿ ನೀರು ಕ್ಯಾನ್ಸರ್ ತರಬಹುದೆ?'
>> ಎಂಬ ಸುದ್ದಿ ಪ್ರಕಟವಾಯಿತು. ಅಮೆರಿಕದಲ್ಲಿ ಜರುಗಿದ ಸಂಶೋಧನೆಯೊಂದರ ಸುದ್ದಿ ಸಾರಾಂಶ ನಮ್ಮ
>> ನ್ಯೂಸ್ ಏಜೆನ್ಸಿಗಳ ಮೂಲಕ ಕನ್ನಡ ಪತ್ರಿಕೆಗಳನ್ನೂ ತಲುಪಿತ್ತು. ಮೂತ್ರಕೋಶ ಹಾಗೂ ಗುದದ್ವಾರ
>> ಕ್ಯಾನ್ಸರ್‌ಗಳಿಂದ ಬಳಲುತ್ತಿದ್ದವರಲ್ಲಿ ಅನೇಕರು ತಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳಲು
>> ಮಳಿಗೆಗಳಲ್ಲಿ ಲಭ್ಯವಿರುವ ಶುದ್ಧ ಕುಡಿಯುವ ನೀರಿನ ಪೀಪಾಯಿಗಳ ಬದಲು ಕೊಳವೆಗಳ ಮೂಲಕ ಮನೆಗೆ
>> ನೀರು ಹರಿದು ಬರುವ ನಳವನ್ನು ಆಶ್ರಯಿಸಿದ್ದರು. ಸಾಮಾನ್ಯವಾಗಿ ನೀರನ್ನು ಶುದ್ಧೀಕರಿಸಲು
>> ಎಲ್ಲೆಡೆಯಂತೆ ಅಮೆರಿಕದಲ್ಲೂ ಕ್ಲೋರಿನ್ ಅನ್ನು ಬಳಸುತ್ತಾರೆ. ಈ ವಿಜ್ಞಾನಿಗಳು ತಮ್ಮ
>> ಅಧ್ಯಯನದಲ್ಲಿ ಕಂಡುಕೊಂಡ ಹೊಸ ವಿಷಯವೇನೆಂದರೆ ನೀರಿನ ಕೊಳವೆಗಳ ತಿರುವು, ಜೋಡಣಾ ಭಾಗ,
>> ಉಬ್ಬು-ತಗ್ಗುಗಳಲ್ಲಿ ಇರಬಹುದಾದ ಜೈವಿಕ ಅಂಶಗಳೊಡನೆ ಕ್ಲೋರಿನ್ ಬೆರೆತು ಕ್ಯಾನ್ಸರ್-ಕಾರಕ
>> ರಾಸಾಯನಿಕಗಳನ್ನು ಉತ್ಪಾದಿಸುವ ಸಾಧ್ಯತೆ ಹೆಚ್ಚು. ಇಲ್ಲಿ ಎಷ್ಟು ಮಂದಿ ಈ ಅಧ್ಯಯನದಲ್ಲಿ
>> ಭಾಗಿಯಾಗಿದ್ದರು, ನಳದ ನೀರನ್ನೇ ಸೇವಿಸುತ್ತಿದ್ದವರ ದೇಹದಲ್ಲಿ ಮತ್ಯಾವ
>> ಕ್ಯಾನ್ಸರ್-ಕಾರಕಗಳು ಪತ್ತೆಯಾಗಿದ್ದವು, ಮತ್ತಿತರ ಅಂಶಗಳು ಪ್ರಕಟವಾದ ಆ ಕನ್ನಡ
>> ಸುದ್ದಿಯಲ್ಲಿ ಇರಲಿಲ್ಲ.
>>
>> ನಳದ ನೀರಿನ ಹಳೆಯ ಸುದ್ದಿ ಇಂದು ನೆನಪಿಗೆ ಬರಲು ಕಾರಣ -ಕಳೆದ ಗುರುವಾರವಷ್ಟೇ
>> ಮೈಸೂರಿನಲ್ಲಿ ಮುಕ್ತಾಯಗೊಂಡ ಇಂಡಿಯನ್ ಸೈನ್ಸ್ ಕಾಂಗ್ರೆಸ್. ಈ ಸಂದರ್ಭದಲ್ಲಿ ನೊಬೆಲ್
>> ಪುರಸ್ಕತ ವಿಜ್ಞಾನಿ ವೆಂಕಟರಾಮನ್ ರಾಮಕಷ್ಣನ್ ಅವರು ಹೋಮಿಯೋಪತಿ ವೈದ್ಯಪದ್ಧತಿಯ ಕುರಿತು
>> ಹೇಳಿದ ಮಾತು ಮಾಧ್ಯಮಗಳಲ್ಲಿ ತಿರು ತಿರುಚಿ ಚರ್ಚೆಯಾಯಿತು. ಹೋಮಿಯೋಪತಿಯನ್ನು ನಳದ ನೀರಿಗೆ
>> ಅವರು ಹೋಲಿಸಿದ್ದಾರೆ, ನಳದ ನೀರೇ ಹೋಮಿಯೋಪತಿ ಮದ್ದಿಗಿಂತ ಉತ್ತಮ... ಎಂಬಂತೆ
>> ಬಿಂಬಿತವಾಯಿತು. ಅಸಲಿಗೆ, ಅವರು ಹೇಳಿದ್ದೇನೆಂದರೆ ''ಹೋಮಿಯೋಪತಿ ವೈದ್ಯಪದ್ಧತಿಯಲ್ಲಿ
>> ಅತ್ಯಂತ ದುರ್ಬಲಗೊಳಿಸಿದ ಆರ್ಸೆನಿಕ್ ವಿಷವನ್ನು ಔಷಧವಾಗಿ ನೀಡಲಾಗುತ್ತದೆ. ಅದನ್ನೆಷ್ಟು
>> ದುರ್ಬಲಗೊಳಿಸಲಾಗಿರುತ್ತದೆಂದರೆ ಆರ್ಸೆನಿಕ್ ನ ಒಂದು ಅಣು ಆ ಔಷಧದಲ್ಲಿರಬಹುದು. ನಮ್ಮ
>> ನಲ್ಲಿ ನೀರಿನಲ್ಲಿಯೇ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಆರ್ಸೆನಿಕ್ ಅಂಶವಿರುತ್ತದೆ. ರಸಾಯನ
>> ವಿಜ್ಞಾನದಲ್ಲಿ ತೊಡಗಿಕೊಂಡವರಲ್ಲಿ ಯಾರೂ ಹೋಮಿಯೋಪತಿಯ ಪರಿಣಾಮಗಳನ್ನು ನಂಬುವುದಿಲ್ಲ''.
>>
>> ಮೊದಲು ಉಲ್ಲೇಖಿಸಿದ ಸಂಶೋಧನಾ ವರದಿಗೂ ಮತ್ತು ನಮ್ಮ ನೊಬೆಲ್ ವಿಜ್ಞಾನಿಯ ಹೇಳಿಕೆಗೂ
>> ಸಾಮ್ಯತೆಗಳಿವೆ. ವಿಜ್ಞಾನ
>>
>> ಆಧಾರ ಸಹಿತವಾದ ವಿಶ್ವಾಸಾರ್ಹ ಫಲಿತಾಂಶಗಳನ್ನು ನಿರೀಕ್ಷಿಸುತ್ತದೆ. ಜತೆಗೆ, ಬಲವಾಗಿ
>> ನಂಬಿದ ಒಂದು ಪದ್ಧತಿಯನ್ನು ನಲ್ಲಿಯ ಮೂಲಕ ಬರುವ ಕುಡಿಯುವ ನೀರು ಆರೋಗ್ಯಕ್ಕೆ ಹಾನಿಕರವಲ್ಲ
>> ಅಥವಾ ಆಲೋಪತಿಯ ಮೂಲಕ ಗುಣ ಕಾಣದ ದೀರ್ಘಕಾಲದ ರೋಗರುಜಿನಗಳಿಗೆ ಹೋಮಿಯೋಪತಿಯಲ್ಲಿ
>> ಪರಿಹಾರವಿದೆ. ರೋಗವನ್ನು ಬುಡ ಸಹಿತ ಕಿತ್ತೊಗೆಯಬೇಕಾದರೆ, ಕೇವಲ ಕೆಲವೇ ಜನರ ಮೇಲೆ ನಡೆಸಿದ
>> ಪ್ರಯೋಗಗಳಾಗಲೀ ಈ ಬಗೆಯ ಘೋಷಣೆಗಳನ್ನು ಮಾಡುವ ಮೊದಲು ವಿವೇಚನೆಯಿಂದ 'ವಿವೇಕ'ವನ್ನು
>> ಬಳಸಬೇಕಾಗುತ್ತದೆ.
>>
>> ನಿನ್ನೆ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವವನ್ನು ಸಂಭ್ರಮದಿಂದ ಆಚರಣೆ
>> ಮಾಡಿದ್ದಾಗಿದೆ. ಈ ಹೊತ್ತಿನಲ್ಲಿ ಅವರು ಬೇರೊಂದು ಕಾರಣಕ್ಕೆ ನೆನಪಿಗೆ ಬರುತ್ತಿದ್ದಾರೆ.
>> ಬಹುಶಃ ಐವತ್ತು ಅಥವಾ ನೂರು ವರ್ಷಗಳ ಹಿಂದೆ ನಮ್ಮ ಬೆಂಗಳೂರು ಸುಂದರ ನಗರವಾಗಿತ್ತು. ಇನ್ನೂ
>> ಹಿಂದೆ ಸ್ವಾಮಿ ವಿವೇಕಾನಂದರು ಬೆಂಗಳೂರಿಗೆ ಬಂದ ಸಮಯದಲ್ಲಿ ಇಡೀ ಬೆಂಗಳೂರೇ
>> ಚಂದದೂರಾಗಿತ್ತು. ಇಂದು ಜಗತ್ಪ್ರಸಿದ್ಧವಾಗಿರುವ ಬೆಂಗಳೂರು ಐ.ಟಿ.-ಬಿ.ಟಿ.
>> ನಗರವಾಗುವುದಕ್ಕೂ ಮುನ್ನ ದೇಶದ ಬಾಹ್ಯಾಕಾಶ ರಾಜಧಾನಿಯಾಗಿತ್ತು. ಇನ್ನೂ ಸ್ವಲ್ಪ ಹಿಂದಕ್ಕೆ
>> ಹೊರಳಿದರೆ ಇದು ದೇಶದ ವಿಮಾನ ನಗರವಾಗಿತ್ತು. ಹಾಗೆಯೇ ತಂತ್ರಜ್ಞಾನ ನಗರವಾಗಿತ್ತು. ಅದಕ್ಕೂ
>> ಹಿಂದೆ ವಿಜ್ಞಾನ ನಗರವಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ಬೆಂಗಳೂರು ಉದ್ಯಾನ ನಗರವಾಗಿ ಹಿರಿಮೆ
>> ಹೊಂದಿತ್ತು.
>>
>> ಬೆಂಗಳೂರೆಂಬ ಬ್ರಿಟಿಷರ ಕಂಟೋನ್ಮೆಂಟ್ ಮುಂದೆ ಪ್ರಮುಖ ಔದ್ಯಮಿಕ ಕೇಂದ್ರವಾಗುತ್ತದೆಂಬ
>> ಕಲ್ಪನೆ ಯಾರಿಗೂ ಇರಲಿಲ್ಲ. ಆದರೆ ಮೈಸೂರನ್ನು ಮಾದರಿ ಸಂಸ್ಥಾನವನ್ನಾಗಿಸಿ, ಬೆಂಗಳೂರನ್ನು
>> ಉನ್ನತ ಸ್ಥಾನಕ್ಕೇರಿಸಬೇಕೆಂಬ ಹಂಬಲ ಆಳರಸರಲ್ಲೂ, ಅವರ ದಿವಾನರಲ್ಲೂ ಇತ್ತು. ಅಂದು ಅವರೆಲ್ಲ
>> ಕಂಡ ಕನಸಿನ ಫಲದಿಂದ ಇಂದು ಬೆಂಗಳೂರಿಗೆ ಇನ್ನಿಲ್ಲದ ಗರಿಮೆ ಸಿಕ್ಕಿದೆ. ಬೆಂಗಳೂರಿನ ಕೀರ್ತಿ
>> ಜಗದಗಲ ವಿಸ್ತರಿಸುವುದರಲ್ಲಿ ಆ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವುದರಲ್ಲಿ
>> ಸ್ವಾಮಿ ವಿವೇಕಾನಂದರ ಪಾತ್ರ ಮಹತ್ತರವಾದದ್ದು. ವಿಶೇಷವಾಗಿ ಇಲ್ಲಿ ಉಲ್ಲೇಖಿಸಬಹುದಾದ ವಿಷಯ
>> ಸ್ವಾಮಿ ವಿವೇಕಾನಂದರ ಬೆಂಗಳೂರಿನ ಭೇಟಿ, ಹಾಗೆಯೇ ಅದಕ್ಕೂ ಮುನ್ನ ಅವರು ಜಪಾನಿನಿಂದ
>> ಅಮೆರಿಕಕ್ಕೆ ಹಡಗಿನಲ್ಲಿ ಪಯಣಿಸುತ್ತಿದ್ದಾಗ ಅಚಾನಕ್ಕಾಗಿ ಟಾಟಾ ಅವರನ್ನು ಭೇಟಿಯಾದ
>> ಸಂದರ್ಭಗಳು. ಕ್ರಿ.ಶ.1893ರ ಈ ಹಡಗು ಪಯಣದಲ್ಲಿ ಟಾಟಾ ಅವರ ಉದ್ದಿಶ್ಯದ ಬಗ್ಗೆ
>> ವಿವೇಕಾನಂದರು ವಿಚಾರಿಸುತ್ತಾರೆ. ಉಕ್ಕಿನ ಉದ್ದಿಮೆಯನ್ನು ಭಾರತಕ್ಕೆ ತರುವ ಹಂಬಲವನ್ನು
>> ಟಾಟಾ ಅವರು ವಿವೇಕಾನಂದರೊಂದಿಗೆ ಹಂಚಿಕೊಳ್ಳುತ್ತಾರೆ. ವಿವೇಕಾನಂದರ ದೂರದರ್ಶಿತ್ವವನ್ನು
>> ಇಲ್ಲಿ ಗಮನಿಸಬೇಕು. 'ನೀವು ಕೇವಲ ಉಕ್ಕಿನ ತಂತ್ರಜ್ಞಾನವನ್ನಷ್ಟೇ ಭಾರತಕ್ಕೆ ತಂದರೆ ಸಾಲದು,
>> ಉಕ್ಕು ತಯಾರಿಕೆಯ ಹಿಂದಿನ ವಿಜ್ಞಾನವನ್ನೂ ಭಾರತಕ್ಕೆ ತನ್ನಿ' ಎಂದು ಟಾಟಾ ಅವರನ್ನು
>> ಒತ್ತಾಯಿಸುತ್ತಾರೆ. ಇದು ಟಾಟಾ ಅವರಲ್ಲಿ ಚಿಂತನೆಯ ತುಮುಲಗಳನ್ನೆಬ್ಬಿಸುತ್ತವೆ. ಈ ಹಿಂದೆ
>> ಟಾಟಾ ಅವರು ಲಂಡನ್ನಿಗೆ ಹೋಗಿದ್ದ ಘಟನೆಯ ನೆನಪು ಮರುಕಳಿಸುತ್ತದೆ. ಉಕ್ಕು ಕಾರ್ಖಾನೆಯ
>> ತಂತ್ರಜ್ಞಾನ ವರ್ಗಾವಣೆಯ ಬಗ್ಗೆ ಅಲ್ಲಿನ ಉದ್ದಿಮೆದಾರರನ್ನು ಟಾಟಾ ಅವರು ವಿಚಾರಿಸಿದಾಗ
>> ಲೇವಡಿಗೆ ಒಳಗಾಗಿದ್ದ ನೋವು ನೆನಪಿಗೆ ಬರುತ್ತದೆ. 'ಭಾರತೀಯರು ಉಕ್ಕು ತಯಾರಿಸಲು
>> ಸಾಧ್ಯವಾದರೆ, ಅದು ಬ್ರಿಟಿಷರು ಹಲ್ಲಿನಿಂದ ಜಗಿಯುವಂತೆ ಇರುತ್ತದೆ, ಬಿಡಿ' ಎಂದಿದ್ದರಂತೆ ಆ
>> ಉದ್ಯಮಿಗಳು. ಇದು ಟಾಟಾ ಅವರಲ್ಲಿ ಅದೆಂಥಾ ಛಲ ಹುಟ್ಟಿಸಿತೆಂದರೆ ಅಟ್ಲಾಂಟಿಕ್ ಸಾಗರ ದಾಟಿ,
>> ಅಮೆರಿಕ ಮುಟ್ಟಿ, ಉಕ್ಕು ತಯಾರಿಕಾ ತಂತ್ರಜ್ಞಾನವನ್ನು ಭಾರತಕ್ಕೆ ತರುತ್ತಾರೆ. ಆಗಸ್ಟ್ 25,
>> 1907ರಂದು ಕಾರ್ಖಾನೆ ಆರಂಭವಾಗುತ್ತದೆ. ಇಂದು ಜಮ್‌ಶೆಟ್‌ಪುರದಲ್ಲಿ ವರ್ಷಕ್ಕೆ ಸುಮಾರು
>> ಒಂದು ಕೋಟಿ ಟನ್ ಉಕ್ಕು ತಯಾರಿಸುವ ಟಾಟಾ ಉದ್ದಿಮೆ, ವಿಮಾನದ ಎಂಜಿನ್‌ಗಳಿಗೆ, ಇಳಿಯುವ
>> ಗಾಲಿಗಳಿಗೆ, ಅತಿ ತಾಪಮಾನದ ಜೋಡಣೆಗಳಿಗೆ ಅಗತ್ಯವಾದ ವಿಶಿಷ್ಟ ಉಕ್ಕನ್ನು ತಯಾರಿಸುತ್ತಿದೆ,
>> ಲೇವಡಿ ಮಾಡಿ ನಕ್ಕ ದೇಶಕ್ಕೂ ಅಂಥ ಉತ್ತಮೋತ್ತಮ ಉಕ್ಕನ್ನು ರಫ್ತು ಮಾಡುತ್ತಿದೆ.
>>
>> ವಿವೇಕಾನಂದರು ನೀಡಿದ ಸ್ಫೂರ್ತಿಯನ್ನು ಮತ್ತೆ ನೆನೆಸಿಕೊಳ್ಳಬೇಕೆಂದರೆ ಬೆಂಗಳೂರಿನ
>> ಮಲ್ಲೇಶ್ವರ-ಯಶವಂತಪುರದತ್ತ ಹೊರಡಬೇಕು. ವಿವೇಕಾನಂದರೇನೋ ಅಂದು ಟಾಟಾ ಅವರನ್ನು ಹಡಗಿನಲ್ಲಿ
>> ಚಿಂತನೆಗೆ ಹಚ್ಚಿಬಿಟ್ಟರು. ಅಂದಿನಿಂದ ಟಾಟಾ ಅವರಿಗೆ ಬಹುಶಃ ನಿದ್ದೆ ಹತ್ತಿರಲಾರದು.
>> ಭಾರತಕ್ಕೆ ಹಿಂದಿರುಗಿದ ನಂತರ ದಿನಾಂಕ 23ನೇ ನವೆಂಬರ್ 1898ರಲ್ಲಿ ಅವರು
>> ವಿವೇಕಾನಂದರಿಗೊಂದು ಪತ್ರ ಬರೆಯುತ್ತಾರೆ. ತಾವು ಭಾರತದಲ್ಲಿ ವಿಜ್ಞಾನ ಸಂಸ್ಥೆಯೊಂದನ್ನು
>> ಸ್ಥಾಪಿಸುವ ಕನಸನ್ನು ಆ ಪತ್ರದಲ್ಲಿ ಹಂಚಿಕೊಳ್ಳುತ್ತಾರೆ. ಆ ಸಂಸ್ಥೆಯ ನೇತತ್ವವನ್ನು
>> ವಿವೇಕಾನಂದರೇ ವಹಿಸಿಕೊಳ್ಳಬೇಕೆಂದು ಟಾಟಾ ಅವರು ಒತ್ತಾಯಿಸುತ್ತಾರೆ. ಇದಕ್ಕೆ
>> ಉತ್ತರವೆಂಬಂತೆ ಬೆಂಗಳೂರಿಗೆ ವಿವೇಕಾನಂದರು ಆಗಮಿಸಿದ ಸಂದರ್ಭದಲ್ಲಿ ಯುವರಾಜ ನಾಲ್ವಡಿ
>> ಕೃಷ್ಣರಾಜ ಒಡೆಯರ್ ಹಾಗೂ ಅವರ ತಾಯಿ ಮಹಾರಾಣಿ ವಾಣೀವಿಲಾಸರವರ ಆತಿಥ್ಯದಲ್ಲಿರುತ್ತಾರೆ.
>> ಜಮ್‌ಶೇಟ್ಚಿ ಟಾಟಾ ಅವರ ಸಮ್ಮುಖದಲ್ಲಿ ವಿಜ್ಞಾನ ಸಂಶೋಧನಾ ಕೇಂದ್ರದ ಬಗ್ಗೆ ಅಲ್ಲಿ
>> ಸಮಾಲೋಚನೆ ನಡೆಯುತ್ತದೆ. ಮೈಸೂರು ಸಂಸ್ಥಾನವು 400 ಎಕರೆ ಜಾಗವನ್ನು ಉಚಿತವಾಗಿ ಕೊಡಲು
>> ನಿರ್ಧರಿಸುತ್ತದೆ. ಈ ಪ್ರಸ್ತಾವನೆ ಅನುಮತಿಗೆಂದು 1898ರಲ್ಲಿ ಬ್ರಿಟಿಷರಿಗೆ ಹೋಗುತ್ತದೆ.
>> ಏತನ್ಮಧ್ಯೆ ಟಾಟಾ ಅವರು ಹಠಾತ್ತಾಗಿ 1904ರಲ್ಲಿ ವಿಧಿವಶರಾಗುತ್ತಾರೆ. ಕೊನೆಗೆ 'ಭಾರತೀಯ
>> ವಿಜ್ಞಾನ ಮಂದಿರ' 1909ರಲ್ಲಿ ಆರಂಭವಾಗುತ್ತದೆ. ಭಾರತದ ಮೊದಲ ಖಾಸಗಿ-ಸರ್ಕಾರ ಭಾಗಿಯಾದ
>> ಜಂಟಿ ಯೋಜನೆಯಿದು. ಮುಂದಿನದು ಇತಿಹಾಸ.
>>
>> ವಿವೇಕಾನಂದರ ನೂರನೆಯ ಜನ್ಮ ದಿನೋತ್ಸವ ವರ್ಷದಲ್ಲೇ (1963) ತಿರುವನಂತಪುರದ ಸಮೀಪದ ಹಳ್ಳಿ
>> ತುಂಬಾದಲ್ಲಿ ದೇಶದ ಮೊದಲ ರಾಕೆಟ್ ಉಡ್ಡಯಣೆಯಾಗುತ್ತದೆ. ದೇಶದ ಹೆಮ್ಮೆಯ ವಿಜ್ಞಾನಿ ಅಬ್ದುಲ್
>> ಕಲಾಂ ಅವರು ಆ ರಾಕೆಟ್ ಹಾರಾಟದ ಹಿಂದಿನ ಯುವ ಸ್ಫೂರ್ತಿಯಾಗಿರುತ್ತಾರೆ. ಹೋಮಿ ಭಾಭಾ-ವಿಕ್ರಂ
>> ಸಾರಾಭಾಯ್-ರಾಜಾರಾಮಣ್ಣ ಅವರ ಮಾರ್ಗದರ್ಶನದಲ್ಲಿ ಭಾರತ ಬಾಹ್ಯಾಕಾಶ ಸಂಶೋಧನಾ ಜಗತ್ತಿಗೆ
>> ಅಂಬೆಗಾಲಿಡುತ್ತದೆ. ಐವತ್ತು ವರ್ಷಗಳಲ್ಲಿ ಮಂಗಳಗ್ರಹ ಮುಟ್ಟುವ ತ್ರಿವಿಕ್ರಮ ಹೆಜ್ಜೆಯಾಗಿ
>> ಅದು ಬೆಳೆಯುತ್ತದೆ. ಈ ಹನುಮ ಲಂಘನದ ನಡುವೆ ಬೆಂಗಳೂರು ಮುಂಚೂಣಿ
>> ವಿಜ್ಞಾನ-ತಂತ್ರಜ್ಞಾನಗಳನ್ನು ಪೊರೆಯುತ್ತದೆ. ಉದ್ದಿಮೆದಾರರನ್ನು ಸೆಳೆಯುತ್ತದೆ. ಈ ಸೆಳೆತ
>> ತಿರುಗಣಿ ಮಡುವಾಗಿ ಬೆಂಗಳೂರನ್ನು ಭಾರತದ ವಿಜ್ಞಾನ-ತಂತ್ರಜ್ಞಾನ ರಾಜಧಾನಿಯಾಗಿ
>> ನಿಲ್ಲಿಸುತ್ತದೆ. ವಿಮಾನ ಹಾಗೂ ಬಾಹ್ಯಾಕಾಶ ಸಂಶೋಧನೆಗಳಿಗೆ ಬೆಂಗಳೂರು ಪ್ರಧಾನ
>> ನೆಲೆಯಾಗುತ್ತದೆ. ಇಂದಿನ ಬೆಂಗಳೂರು ವಿವೇಕಾನಂದರ ಕನಸನ್ನು ಸಾಕಾರಗೊಳಿಸುತ್ತಿದೆ. ಬಹುಶಃ
>> ವಿವೇಕಾನಂದರು ಬದುಕಿದ್ದಿದ್ದರೆ ನಮ್ಮೆಲ್ಲರಿಗಿಂತಲೂ ಹೆಚ್ಚು ಪುಳಕಿತಗೊಳ್ಳುತ್ತಿದ್ದರು.
>> ಅವರು ನೀಡಿದ ಸ್ಫೂರ್ತಿ ದೇಶಾದ್ಯಂತ ಇಂಥ ಸಹಸ್ರ ಸಂಸ್ಥೆಗಳ ಹುಟ್ಟಿಗೆ ಕಾರಣವಾಗಿದೆ. ಇದು
>> ಚಿರಂತನವಾಗಿ ಮುನ್ನಡೆದು ದೇಶವನ್ನು ಮತ್ತಷ್ಟು ಸದೃಢ ಹಾಗೂ ಸಮೃದ್ಧಗೊಳಿಸಲಿದೆ.
>>
>>
>> Hareeshkumar K
>> AM(PCM)
>> GHS HUSKURU
>> MALAVALLI TQ
>> MANDYA DT 571475
>> mobile no 9880328224
>> email [email protected]
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>
--
1. If a teacher wants to join STF, visit
http://karnatakaeducation.org.in/KOER/en/index.php/Become_a_STF_groups_member
2. For STF training, visit KOER -
http://karnatakaeducation.org.in/KOER/en/index.php
4. For Ubuntu 14.04 installation, visit
http://karnatakaeducation.org.in/KOER/en/index.php/Kalpavriksha
4. For doubts on Ubuntu, public software, visit
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Why_public_software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
---
You received this message because you are subscribed to the Google Groups
"Maths & Science STF" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.