nice sir........
2016-06-02 17:34 GMT+05:30 shalini robert <[email protected]>: > Nice article > On 12 May 2016 8:33 pm, "HAREESHKUMAR K Agasanapura" < > [email protected]> wrote: > >> >> http://googleweblight.com/?lite_url=http://www.ejnana.com/2016/05/blog-post_12.html%3Fm%3D1&lc=en-IN&s=1&m=534&host=www.google.co.in&ts=1463065227&sig=APY536zCHqAiyayUFeOhwe6wufTwP3Rm9A >> >> *ಇಜ್ಞಾನ ವಿಶೇಷ ಲೇಖನ: 'ವಸುಧೈವ ಕುಟುಂಬಕಮ್'* >> >> *ರೋಹಿತ್ ಚಕ್ರತೀರ್ಥ* >> >> >> <https://googleweblight.com/?lite_url=https://3.bp.blogspot.com/-E8ciGELy7nI/VzQ0IldkGQI/AAAAAAAAepo/cYC9yiowpsQZ8c3jr3V_1EZgNdLS7seBACLcB/s1600/world-1081793_960_720.jpg&lc=en-IN&s=1&m=534&host=www.google.co.in&ts=1463065232&sig=APY536xzFvbpxOjtZH6SjaJ2dJnhB_l4Zg> >> >> ಕೆಲವು ವರ್ಷಗಳ ಹಿಂದೆ ರಾಮಕೃಷ್ಣ ಬೆಳ್ಳೂರು ಎಂಬವರು ಒಂದು ಚಿತ್ರಸರಣಿ ಮಾಡಿದ್ದರು. >> ಮಹಾವಿಜ್ಞಾನಿ ಐನ್‌ಸ್ಟೈನ್‌ರನ್ನೂ ಕನ್ನಡದ ಸಾಹಿತ್ಯಮೇರು ಶಿವರಾಮ ಕಾರಂತರನ್ನೂ >> ಅಕ್ಕಪಕ್ಕದಲ್ಲಿಟ್ಟು ನೋಡಿದರೆ ಅವರೇ ಇವರಾ ಎಂದು ಗೊಂದಲವಾಗುವಷ್ಟು ಅವರಿಬ್ಬರ ಚಹರೆಗಳೂ >> ಹೋಲುವುದನ್ನು ತೋರಿಸಿ "ಎಷ್ಟೊಂದು ಸೇಮ್ ಇದ್ದಾರಲ್ವಾ?" ಎಂದು ಕೇಳಿದ್ದರು. ಗಡ್ಡ-ಮೀಸೆ >> ಬಿಟ್ಟ ಕೆ.ಎಸ್. ಅಶ್ವಥ್‌ರನ್ನು ಗೆಲಿಲಿಯೋ ಪಕ್ಕದಲ್ಲಿ ಕೂರಿಸಿದರೂ ಇದೇ ಗೊಂದಲ. ಕರ್ನಾಟಕದ >> ರಾಜ್ಯಪಾಲರಾಗಿದ್ದ ಖುರ್ಷಿದ್ ಆಲಂ ಖಾನ್ ಮತ್ತು ಚಿತ್ರನಟ ಬ್ರಹ್ಮಾವರ ಸದಾಶಿವ ರಾವ್ ನೋಡಲು >> ಒಂದೇ ರೀತಿ ಇದ್ದರು. ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿದ್ದ ಸುಬ್ಬಾ ರಾವ್‌ರನ್ನು ನಮ್ಮ >> "ಥಟ್ ಅಂತ ಹೇಳಿ" ಖ್ಯಾತಿಯ ಡಾ. ನಾ. ಸೋಮೇಶ್ವರ ಪಕ್ಕದಲ್ಲಿ ನಿಲ್ಲಿಸಿದರೆ >> ನಿಜವ್ಯಕ್ತಿಯೊಬ್ಬರು ತನ್ನ ಮೇಣದ ಪ್ರತಿಮೆಯೊಂದಿಗೆ ನಿಂತಿದ್ದಾರೋ ಎಂದು ಭಾಸವಾಗುತ್ತದೆ. >> ನಿತಿನ್ ಮುಖೇಶ್ ಎಂಬ ಹಾಡುಗಾರನನ್ನು ಟಿ.ಎಂ. ಕೃಷ್ಣ ಎಂಬ ಕರ್ನಾಟಕ ಸಂಗೀತಗಾರರ ಪಕ್ಕದಲ್ಲಿ >> ಕೂರಿಸಿದರೆ ಇವರೇನು ಅವಳಿ-ಜವಳೀನಾ ಅಂತ ಕೇಳುವಷ್ಟು ಅವರಿಬ್ಬರೂ ಸೇಮ್‌ಸೇಮ್. ನಮ್ಮ ನಡುವಿನ >> ಹೆಮ್ಮೆಯ ವಿಜ್ಞಾನಿ ರೊದ್ದಂ ನರಸಿಂಹ ತಮ್ಮ ಎಂದಿನ ಕೋಟು ಪ್ಯಾಂಟಿನ ಪೋಷಾಕು ತೆಗೆದು ಪಟ್ಟೆ >> ಪೀತಾಂಬರ ಉಟ್ಟುಕೊಂಡರೆ ಯಾರಾದರೂ "ವಿದ್ಯಾಭೂಷಣರೇ, ಒಂದು ಹಾಡು ಹಾಡಿ" ಅಂತ ಪೀಡಿಸಿಯಾರು! >> ಹಾಗೇನೇ ಭಯೋತ್ಪಾದಕರ ಜೊತೆಗಿನ ಸಮರದಲ್ಲಿ ಮಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್‌ರಿಗೂ >> ತಮಿಳು ನಟ ವಿಕ್ರಂಗೂ ಅದೇನು ಹೋಲಿಕೆ ಅಂತೀರಿ! ಕ್ರಾಂತಿಕಾರಿ ಕ್ಯೂಬಾ ನಾಯಕ ಚೆಗೆವಾರನ >> ಮೇಲೆ ಸಿನೆಮಾ ತೆಗೆಯುವುದಾದರೆ ಅದಕ್ಕೆ ಕನ್ನಡ ಚಿತ್ರನಟ ಮುರಳಿಯಷ್ಟು ಪರ್‌ಫೆಕ್ಟ್ ಆಗಿ >> ಹೋಲುವ ಮುಖ ಬೇರೆ ಇಲ್ಲ. ಹಾಗೇನೇ ಆಂಧ್ರದ ರಾಜಕಾರಣಿ ಜಗನ್‌ಮೋಹನ ರೆಡ್ಡಿ ಮತ್ತು >> ಲೀಲಾವತಿಯವರ ಮಗ, ಕನ್ನಡ ನಟ ವಿನೋದ್ ನಿಮ್ಮನ್ನು ಸಖತ್ ಗೊಂದಲದಲ್ಲಿ ಮುಳುಗಿಸಿಬಿಡುತ್ತಾರೆ >> ಒಂದು ಕ್ಷಣ. >> >> ಜಗತ್ತಿನಲ್ಲಿ ನಮ್ಮನ್ನು ಹೋಲುವ ಕನಿಷ್ಠ ಆರು ಜನ ಇರುತ್ತಾರೆಂಬ ನಂಬಿಕೆ ಇದೆ. ನಮ್ಮ >> ಚಹರೆ, ವರ್ತನೆಗಳನ್ನು ಹೋಲುವ ವ್ಯಕ್ತಿಗಳು ಗುರುತು-ಪರಿಚಯವಿಲ್ಲದ ಜಾಗದಲ್ಲಿ ನಮಗೆದುರಾದಾಗ >> ಈ ಮಾತನ್ನು ನೆನಪಿಸಿಕೊಳ್ಳಬೇಕು. ಯಾಕೆಂದರೆ ಇಂಥದೊಂದು ತರ್ಕಕ್ಕೆ ಮೀರಿದ ಮಾತಿನ ಬಲವನ್ನು >> ಬಿಟ್ಟರೆ ಮತ್ಯಾವ ರೀತಿಯಲ್ಲೂ ಈ ಹೋಲಿಕೆಯನ್ನು ಸಮರ್ಥಿಸಿಕೊಳ್ಳುವ ದಾರಿಯಿಲ್ಲ. ಇದೇನೋ >> ಬಾಹ್ಯ ಚಹರೆಯ ಹೋಲಿಕೆಯ ಮಾತಾಯಿತು. ಬರಾಕ್ ಒಬಾಮನಿಗೂ ನರೇಂದ್ರ ಮೋದಿಗೂ ಏನಾದರೂ ಸಂಬಂಧ >> ಇದೆಯಾ? ಅವರಿಬ್ಬರೂ ಒಂದೇ ಕುಟುಂಬದ ಸದಸ್ಯರಾಗಿರುವ ಸಾಧ್ಯತೆ ಇದೆಯಾ? ಎಂದು ಕೇಳಿದರೆ ಏನು >> ಹೇಳುತ್ತೀರಿ? ವಾಟ್ ರಬ್ಬಿಷ್! ಮೋದಿ ಎಲ್ಲಿ ಒಬಾಮಾ ಎಲ್ಲಿ! ಮುಖಗಳೂ ಹೋಲುವುದಿಲ್ಲ; >> ಎತ್ನಿಸಿಟಿಯೂ ಹೋಲುವುದಿಲ್ಲ. ಇನ್ನು ಅವರಿಬ್ಬರೂ ಒಂದೇ ಕುಟುಂಬದಿಂದ ಬರೋದಕ್ಕೆ ಅದ್ಯಾವ >> ಸೀಮೆ ಸಿದ್ಧಾಂತದ ಮೂಲಕ ಸಾಧ್ಯ ಎಂದು ಪ್ರಶ್ನೆ ಮಾಡುತ್ತೀರಿ ತಾನೆ? ಆದರೆ ಕೊಂಚ >> ಯೋಚಿಸಿನೋಡಿ. ಈ ಜಗತ್ತಿನಲ್ಲಿ ಈಗ ನಡೆದಾಡುತ್ತಿರುವ ವ್ಯಕ್ತಿಗೆ ಇರುವ ತಂದೆತಾಯಿಗಳು >> ಇಬ್ಬರು, ಅಜ್ಜ ಅಜ್ಜಿಯರು ನಾಲ್ಕು ಜನ, ಮುತ್ತಜ್ಜ-ಮುತ್ತಜ್ಜಿಯರು ಒಟ್ಟು ಎಂಟು ಮಂದಿ. >> ಹೀಗೆ ಪ್ರತಿ ಜನರೇಷನ್ನಿಗೂ ಸಂಖ್ಯೆ ದುಪ್ಪಟ್ಟಾಗುತ್ತಾ ಹೋಗುವುದರಿಂದ ೬೪ >> ಜನರೇಶನ್ನುಗಳಲ್ಲಿ ಬಂದುಹೋದ ಒಟ್ಟು ಜನರ ಸಂಖ್ಯೆ ಒಂದು ಕ್ವಿಂಟಿಲಿಯನ್ ಅನ್ನು ಮೀರುತ್ತದೆ. >> ಅಷ್ಟೆಂದರೆ ಎಷ್ಟು? ಒಂದರ ಮುಂದೆ ಹದಿನೆಂಟು ಸೊನ್ನೆಗಳಾಗುವಷ್ಟು ಬೃಹತ್ ಸಂಖ್ಯೆ! >> ಭೂಮಿಯಲ್ಲಿ ಕಳೆದ ಹಲವು ಸಹಸ್ರಾರು ವರ್ಷಗಳಿಂದ ಹುಟ್ಟಿ ನಡೆದಾಡಿ ಮಡಿದ ಒಟ್ಟು ಮಾನವರ >> ಸಂಖ್ಯೆಗಿಂತಲೂ ಇದು ದೊಡ್ಡದು. ಹಾಗಾದರೆ ೬೪ ವಂಶಾವಳಿಗಳನ್ನು ದಾಟಿ ಹಿಂದೆ ಹೋದರೆ ಸಿಗುವ >> ರೋಮನ್ ಚಕ್ರಾಧಿಪತ್ಯದ ಸಮಯದಲ್ಲಿ ನಮ್ಮೆಲ್ಲರ ಪ್ರಪಿತಾಮಹರೂ ಒಂದೇ ಕುಟುಂಬಕ್ಕೆ >> ಸೇರಿರಬೇಕಲ್ಲ? ಹೌದು ಎನ್ನುತ್ತದೆ ಗಣಿತ. ಕ್ರಿಸ್ತಪೂರ್ವ ೩೦೦ರಲ್ಲಿ ಬದುಕಿದ್ದ ಕನಿಷ್ಠ >> ಒಬ್ಬ ವ್ಯಕ್ತಿ, ಈಗ ಜಗತ್ತಿನಲ್ಲಿರುವ ಎಲ್ಲ ೭೦೦ ಕೋಟಿ ಜನರಿಗೂ ಸಂಬಂಧಿಕನಾಗಿದ್ದ >> ಎನ್ನುತ್ತದದು! ಅಷ್ಟೆಲ್ಲ ಬೇಡ, ನೀವು ಒಂದುವೇಳೆ ನಿಮ್ಮದೇ ದೇಶದ ನಿಮ್ಮದೇ ಜನಾಂಗದಲ್ಲಿ >> ಒಬ್ಬರನ್ನು ಮದುವೆಯಾಗಿದ್ದರೆ, ಇಬ್ಬರ ವಂಶಾವಳಿಯಲ್ಲೂ ಹತ್ತು ಹೆಜ್ಜೆ ಹಿಂದೆ ಹೋದರೆ >> ಅಲ್ಲೆಲ್ಲೋ ಇಬ್ಬರ ಕುಟುಂಬಗಳಲ್ಲೂ ಬಂದುಹೋದ ಸಾಮಾನ್ಯ ಸಂಬಂಧಿ ಸಿಕ್ಕೇ ಸಿಗುತ್ತಾನೆ ಎಂಬ >> ಸಿದ್ಧಾಂತವೇ ಇದೆ! ಇಷ್ಟೆಲ್ಲ ಗಣಿತ ತರದೆ ನೇರವಾಗಿ ಹೇಳುವುದಾದರೆ, ವಿಷಯ ಇಷ್ಟೆ: >> ಜಗತ್ತಿನಲ್ಲಿ ಕುಲ, ಗೋತ್ರ ಎಲ್ಲವೂ ಭಿನ್ನವಾಗಿರುವ ಇಬ್ಬರು ವ್ಯಕ್ತಿಗಳಿರಲು ಸಾಧ್ಯವಿಲ್ಲ. >> ಯಾವುದೋ ಎರಡು ಮೂಲೆಗಳಿಂದ ಇಬ್ಬರನ್ನು ಆಯ್ದು ತೆಗೆದರೂ, ಅವರಿಬ್ಬರೂ ಸಂಬಂಧಿಗಳೇ >> ಆಗಿರುತ್ತಾರೆ! ಹಸಿರೆಲೆಗೂ ಮಣ್ಣಂಟಿಸಿಕೊಂಡ ಬೇರಿಗೂ ರೂಪದಲ್ಲಿ ವ್ಯತ್ಯಾಸವಿದ್ದೀತೇನೋ, >> ಆದರೆ ಎರಡಕ್ಕೂ ಸಂಬಂಧವಿದೆಯಲ್ಲ, ಹಾಗೇನೇ ಇದೂ. ಹಾಗಾಗಿ ಒಬಾಮಾನಿಗೂ ಮೋದಿಗೂ ಸಂಬಂಧವಿದೆ! >> ಬ್ರಿಟನ್ ರಾಣಿ ಎಲಿಜಬೆತ್‌ಳೂ ನಮ್ಮ ಬೀದಿಯಲ್ಲಿ ಸೊಪ್ಪು ನಿಂಬೇಕಾಯಿ ಮಾರುವ ಸುಬ್ಬಮ್ಮನೂ >> ಸಂಬಂಧಿಗಳೇ ಹೌದು! ಇದನ್ನೇ ವಿಜ್ಞಾನಿ ಬಿಲ್ ಬ್ರೈಸನ್ ಸೂಕ್ಷ್ಮವಾಗಿ ಹೀಗೆ ಹೇಳುತ್ತಾನೆ: ಈ >> ಜಗತ್ತಿನಲ್ಲಿ ಬಹಳಷ್ಟು ಇನ್‌ಸೆಸ್ಟ್ (ಅಂದರೆ ರಕ್ತಸಂಬಂಧಿಗಳೊಳಗೆ ಲೈಂಗಿಕ ಸಂಪರ್ಕ) >> ನಡೆದಿದೆ. ಸ್ವಲ್ಪವಲ್ಲ, ದೊಡ್ಡ ಪ್ರಮಾಣದಲ್ಲೇ ನಡೆದಿದೆ, ನಡೆಯುತ್ತಿದೆ. ಯಾಕೆಂದರೆ >> ನಾವೆಲ್ಲ ಒಂದಿಲ್ಲೊಂದು ರೀತಿಯಲ್ಲಿ ರಕ್ತಸಂಬಂಧಿಗಳೇ ಆಗಿದ್ದೇವೆ. >> >> ಹಿಂದೆ ಜೆಂಗಿಸ್ ಖಾನ್ ಎಂಬ ಮಂಗೋಲಿಯನ್ ರಾಜನಿದ್ದ ಕತೆ ಓದಿರಬಹುದು ನೀವು. ಈತ >> ಮಂಗೋಲಿಯದಿಂದ ಹೊರಟು ಏಷ್ಯಾದ ಬಹುತೇಕ ಭಾಗಗಳನ್ನೆಲ್ಲ ಆಕ್ರಮಣ ಮಾಡಿ ಗೆದ್ದ ಭೂಭಾಗದಲ್ಲಿ >> ವ್ಯಾಪಕವಾದ ಅತ್ಯಾಚಾರ ನಡೆಸಿದನಂತೆ. ಅದೆಷ್ಟು ಸಾವಿರ ಹೆಂಗಸರ ಬಸಿರಿಗೆ ಕಾರಣನಾದನೋ >> ಲೆಕ್ಕವಿಲ್ಲ. ಹಾಗಾಗಿ, ಜಗತ್ತಿನಲ್ಲಿ ಹುಟ್ಟಿದ ಮೂರನೇ ಎರಡರಷ್ಟು ಮಕ್ಕಳ ವಂಶಾವಳಿಯಲ್ಲಿ >> ಹಿಂದೆ-ಹಿಂದಕ್ಕೆ ಹೋದರೆ ಎಲ್ಲೋ ಒಂದು ಕಡೆ ಆ ಮಗು ಜೆಂಗಿಸ್ ಖಾನನಿಗೆ >> ರಕ್ತಸಂಬಂಧಿಯಾಗಿರುವುದು ಸಾಧ್ಯ - ಎಂಬ ಮಾತಿದೆ. ಇದನ್ನೇ ಬೇರೆ ರೀತಿಯಲ್ಲಿ, ನಮ್ಮ >> ದೇಹದೊಳಗೆ ಜೆಂಗಿಸ್ ಖಾನನ ರಕ್ತದ ಒಂದು ತೊಟ್ಟು ಇದೆ ಎಂದು ಹೇಳುತ್ತಾರೆ. ಇನ್ನು ನಾವು >> ಬರೆದಿಡುವ ವಂಶಾವಳಿಯ ಚರಿತ್ರೆಯಾದರೂ ನಿಜವೇ? ಅಲ್ಲಿ ಬೂಟಿನ ಲೇಸ್‌ನಂತೆ ಅದೆಷ್ಟು >> ಸಂಬಂಧಗಳು ಚಕ್ಕಳಮಕ್ಕಳ ಹೋಗಿವೆಯೋ ಯಾರು ಬಲ್ಲರು? ವಂಶವೃಕ್ಷದ ಶ್ರೋತ್ರಿಗಳಂತೆ >> ಸತ್ಯದರ್ಶನವಾಗುವುದು ಕೆಲವರಿಗೆ ಮಾತ್ರ. ಉಳಿದವರೆಲ್ಲರೂ ನಮ್ಮ ವಂಶಾವಳಿಯ ಕತೆ ಹೀಗೆ ಎಂದು >> ನೂರೆಂಟು ಸುಳ್ಳುಗಳನ್ನೇ ಸತ್ಯವೆಂದು ನಂಬಿ ತಮ್ಮ ಜೀವನ ಮುಗಿಸಿಬಿಡುತ್ತಾರೆ. ಹೆರಿಗೆ >> ಆಸ್ಪತ್ರೆಗಳಲ್ಲಿ ಅದಲುಬದಲಾಗುವ ಮಕ್ಕಳಿಗೇನು ಕಡಿಮೆಯೇ? ಒಂದು ಪ್ರಸಿದ್ಧ ಕತೆ >> ಉಲ್ಲೇಖಿಸಬೇಕೆಂದರೆ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಹುಟ್ಟಿದಾಗ ದಾದಿ ಆತನನ್ನು ಇನ್ನಾವುದೋ >> ತಾಯಿಯ ಪಕ್ಕದಲ್ಲಿ ಮಲಗಿಸಿ, ಮತ್ಯಾವುದೋ ಮಗುವನ್ನು ಗಾವಸ್ಕರ್‌ನ ತಾಯಿಯ ಪಕ್ಕದಲ್ಲಿಟ್ಟು >> ಹೋಗಿಬಿಟ್ಟಿದ್ದಳಂತೆ! ಕೊನೆಗೆ, ನವಜಾತ ಗಾವಸ್ಕರನ ದೇಹದಲ್ಲಿದ್ದ ಮಚ್ಚೆಯೊಂದನ್ನು ನೋಡಿದ್ದ >> ಮಾವ, ಈ ತಪ್ಪನ್ನು ಪತ್ತೆಹಚ್ಚಿ ಸುನೀಲನನ್ನು ಗಾವಸ್ಕರ್ ಕುಟುಂಬಕ್ಕೆ ಮರಳಿತಂದರಂತೆ! >> ಹೀಗೆಲ್ಲ ಎಡವಟ್ಟುಗಳಾಗಿ ಅಬ್ದುಲ್ಲನ ಮನೆಯಲ್ಲಿ ಬೆಳೆದ ನಾರಾಯಣರೆಷ್ಟು! ಅವಧಾನಿಗಳ >> ಮನೆಯಲ್ಲಿ ಬೆಳೆದ ಅಂಥೋಣಿಗಳೆಷ್ಟು! >> >> ಅವನ್ನೆಲ್ಲ ಬಿಟ್‌ಹಾಕಿ. ನೀವೇ ನಿಜವಾಗಿಯೂ ನೀವೋ ಎಂಬ ಪ್ರಶ್ನೆಯನ್ನು ನೀವಾಗಿ >> ನಿಮ್ಮನ್ನೇ ಕೇಳಿಕೊಳ್ಳಿ! ಥಿಸಿಯಸ್ಸನ ಹಡಗು ಎಂಬ ಮಾತನ್ನು ನೀವು ಕೇಳಿರಬಹುದು. ಥಿಸಿಯಸ್ >> ಎಂಬಾತ ಒಂದು ಹಡಗನ್ನು ನಿರ್ಮಿಸಿ ಸಮುದ್ರಯಾನ ಹೊರಟನಂತೆ. ಕೆಲವು ವರ್ಷಗಳ ನಂತರ ಅದರಲ್ಲಿ >> ಯಾವುದೋ ಭಾಗ ಕೆಟ್ಟು, ಅದನ್ನು ತೆಗೆದು ಹೊಸಭಾಗ ಜೋಡಿಸಬೇಕಾಗಿ ಬಂತು. ಹೀಗೆ ಒಂದಷ್ಟು >> ವರ್ಷಗಳು ಕಳೆವಷ್ಟರಲ್ಲಿ ಹಡಗಿನ ಪ್ರತಿಯೊಂದು ಭಾಗವನ್ನೂ - ನಟ್ಟು ಬೋಲ್ಟುಗಳ ಸಹಿತ - >> ಬದಲಾಯಿಸಬೇಕಾಗಿ ಬಂತು. ಇಷ್ಟಾಗಿ ಹೊಚ್ಚಹೊಸದಾದ ಮೇಲೂ ಅದು ಥಿಸಿಯಸ್ಸನ ಹಡಗು ಎಂದೇ >> ಕರೆಸಿಕೊಳ್ಳುತ್ತದೆಯೇ ಎಂಬೊಂದು ಫಿಲಸಾಫಿಕಲ್ ಪ್ರಶ್ನೆ ಇದೆ. ಮನುಷ್ಯನ ದೇಹ ಕೂಡ ನೂರಕ್ಕೆ >> ನೂರರಷ್ಟು ಥಿಸಿಯಸ್ಸನ ಹಡಗು ಎಂದರೆ ನಿಮಗೆ ಅಚ್ಚರಿಯಾಗಬಹುದು. ಪ್ರತಿದಿನ, ಪ್ರತಿಕ್ಷಣ >> ಒಂದಲ್ಲ ಎರಡಲ್ಲ ಹಲವು ನೂರು ಕೋಟಿಗಳ ಸಂಖ್ಯೆಯಲ್ಲಿ ಪರಮಾಣುಗಳು ಮಾನವ ದೇಹವನ್ನು ತೊರೆದು >> ಹೊಸದಕ್ಕೆ ಜಾಗ ಮಾಡಿಕೊಡುತ್ತಿವೆ. ನಂಬಿದರೆ ನಂಬಿ, ಕೇವಲ ಐದು ವರ್ಷಗಳಲ್ಲಿ ಮನುಷ್ಯನ >> ದೇಹದಲ್ಲಿ ಪ್ರತಿಯೊಂದು ಪರಮಾಣುವೂ ಬದಲಾಗಿ ಹೊಸದು ಬಂದು ಕೂತಿರುತ್ತದೆ. ಇನ್ನೊಂದು >> ರೀತಿಯಲ್ಲಿ ಹೇಳಬೇಕೆಂದರೆ, ನಿಮ್ಮ ದೇಹದಲ್ಲಿರುವ ಪರಮಾಣುಗಳ ಆಧಾರದ ಮೇಲೆ ನಿಮ್ಮ ವಯಸ್ಸು >> ಹೇಳುವುದಾದರೆ ಅದು ಐದು ವರ್ಷಕ್ಕಿಂತಲೂ ಕಡಿಮೆ! ನಿಮ್ಮ ದೇಹ ಥಿಸಿಯಸ್ಸನ ಹಡಗು ಎಂದಾದರೆ >> ಅದರೊಳಗಿರುವ ಪ್ರತಿಯೊಂದು ಹಲಗೆ, ಹಾಯಿ, ಮೊಳೆ ಕೂಡ ಐದು ವರ್ಷಗಳಿಗಿಂತ ಈಚಿನವು. ಅದಕ್ಕಿಂತ >> ಹಿಂದೆ ನಿಮ್ಮ ದೇಹದಲ್ಲಿದ್ದ ಒಂದೇ ಒಂದು ಪರಮಾಣುವೂ ಈಗ ಅಲ್ಲಿಲ್ಲ. >> >> ಮನುಷ್ಯನ ದೇಹದಲ್ಲಿ ಅದೆಷ್ಟು ಪರಮಾಣುಗಳಿವೆ ಎಂಬ ಲೆಕ್ಕಕ್ಕಿಳಿದರೆ ಸುಸ್ತು ಹೊಡೆದು >> ಹೋಗುತ್ತೀರಿ. ಉದಾಹರಣೆಗೆ ನೂರು ಕೋಟಿ ಸೋಡಿಯಂ ಪರಮಾಣುಗಳನ್ನು ತೆಗೆದುಕೊಂಡಿರೆನ್ನಿ. ಅದರ >> ತೂಕ ೦.೦೦೦೦೦೦೦೦೦೦೦೦೦೩೮ ಗ್ರಾಂಗಳು, ಅಷ್ಟೆ! ಹಾಗಾದರೆ ಸರಾಸರಿ ೬೦ ಕೆಜಿ ತೂಗುವ ಮನುಷ್ಯನ >> ದೇಹದಲ್ಲಿರುವ ಪರಮಾಣುಗಳೆಷ್ಟು? ಇಡೀ ವಿಶ್ವದಲ್ಲಿರುವ ಒಟ್ಟು ನಕ್ಷತ್ರಗಳ ಸಂಖ್ಯೆ >> (ಇನ್ನೂರು ಬಿಲಿಯನ್‌ಗೆ ಇನ್ನೂರು ಬಿಲಿಯನ್‌ನಿಂದ ಗುಣಿಸಿದರೆಷ್ಟೋ ಅಷ್ಟು!)ಗಿಂತಲೂ >> ನರಪ್ರಾಣಿಯೊಳಗಿನ ಪರಮಾಣುಗಳ ಸಂಖ್ಯೆ ಹೆಚ್ಚು. ಹಾಗಿದ್ದರೂ ಐದು ವರ್ಷಗಳ ಅವಧಿಯಲ್ಲಿ >> ಇವಿಷ್ಟೂ ಪರಮಾಣುಗಳು ಒಬ್ಬ ಮನುಷ್ಯನ ದೇಹವನ್ನು ತೊರೆದು ವಿಶ್ವಕ್ಕೆ ಸೇರುತ್ತವೆ; ಪ್ರಪಂಚದ >> ಉಳಿದ ಪ್ರಾಣಿಪಕ್ಷಿಗಳ ದೇಹಗಳನ್ನು ಹೊಗುತ್ತವೆ. ದೃಗ್ಗೋಚರವಲ್ಲದ ಈ ಕೊಡು-ಕೊಳುವಿಕೆ >> ನಿತ್ಯನಿರಂತರ. ಹಾಗಾಗಿ ಈ ಲೇಖನವನ್ನು ಓದುತ್ತಿರುವ ನಿಮ್ಮೊಳಗಿನ ಕನಿಷ್ಠ (ಮತ್ತು ತಲಾ) >> ನೂರು ಕೋಟಿ ಪರಮಾಣುಗಳು ನನ್ನವು, ಷೇಕ್ಸ್‌ಪಿಯರನವು, ಹಿಟ್ಲರನವು, ವ್ಯಾಸ ಮಹರ್ಷಿಗಳವು, >> ಗೌತಮ ಬುದ್ಧನವು. ಪ್ರಪಂಚದಲ್ಲಿ ಈಗ ಉಸಿರಾಡುತ್ತಿರುವ ಪ್ರತಿಯೊಬ್ಬನ ದೇಹದೊಳಗೂ ಪ್ರತಿ >> ಇನ್ನೊಬ್ಬ ವ್ಯಕ್ತಿಯ ಕನಿಷ್ಠ ನೂರು ಕೋಟಿ ಪರಮಾಣುಗಳಿವೆ. ಇನ್ನು ನೂರಿನ್ನೂರು ವರ್ಷಗಳಲ್ಲಿ >> ಮನುಷ್ಯ ತಾಂತ್ರಿಕವಾಗಿ ಮುಂದುವರಿದು ಸೌರವ್ಯೂಹದಾಚೆ ಇರುವ ಅನ್ಯಗ್ರಹವನ್ನು >> ಸಂದರ್ಶಿಸಿದನೆನ್ನಿ. ಹಾಗೆ ಅಲ್ಲಿ ಕಾಲೂರುವ ಮೊದಲ ಮನುಷ್ಯನೊಳಗೂ ಈಗ ಇಲ್ಲಿರುವ ನಿಮ್ಮ >> ಕನಿಷ್ಠ ನೂರು ಕೋಟಿ ಪರಮಾಣುಗಳು ಇರುತ್ತವೆ! ಒಟ್ಟಿನಲ್ಲಿ, ಈ ಜಗತ್ತೇ ಒಂದು ಮಹಾಕುಟುಂಬ. >> ಮಹಾಮನೆ. ಈ ಅರಿವು ಬಂದ ದಿನವೇ ನಾವೂ ನೀವೂ ವಿಶ್ವಮಾನವರು. >> >> -- >> 1. If a teacher wants to join STF, visit >> http://karnatakaeducation.org.in/KOER/en/index.php/Become_a_STF_groups_member >> 2. For STF training, visit KOER - >> http://karnatakaeducation.org.in/KOER/en/index.php >> 4. For Ubuntu 14.04 installation, visit >> http://karnatakaeducation.org.in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequently_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
