Thank u sir.....intresting.....
On Jun 23, 2016 6:36 AM, "HAREESHKUMAR K Agasanapura" <[email protected]>
wrote:

> http://www.ejnana.com/2016/06/blog-post_21.html?m=1
>
> *ಮೀನಿನ ಬ್ಯಾಟರಿ!*
>
> *ಕೊಳ್ಳೇಗಾಲ ಶರ್ಮ*
>
>
> <https://4.bp.blogspot.com/-83rBhxk0l58/V2lVRDRv_6I/AAAAAAAAfAk/YmrPKK9QhSwXNP4rWJUznf4rwnVT6RnrgCLcB/s1600/narkejaponica.jpg>
>
> ಈ ವಾರ ಮೀನಿನದ್ದೇ ಸುದ್ದಿ. ಮೊನ್ನೆ ನಮ್ಮೂರ ಐಯಂಗಾರ್ ಬೇಕರಿಯಲ್ಲಿಯೂ ಮಂಗಳೂರಿನಿಂದ
> ಮೀನಿನ ಸರಬರಾಜು ಕಡಿಮೆಯಾಗಿರುವ ಬಗ್ಗೆ ಭಯಂಕರ ಚರ್ಚೆ ನಡೆದಿತ್ತು. ಈ ವರ್ಷ ಮಳೆರಾಯ
> ಕಾಲಿಡಲು ಹಿಂಜರಿಯುತ್ತಿರುವ ಕಾರಣ ಕಡಲಮೀನಿನ ಸಂತತಿಯೂ ಕಡಿಮೆಯಾಗಿದೆ ಎನ್ನುವುದು ಚರ್ಚೆ.
> ಇದರ ಬೆನ್ನಲ್ಲೇ ಇನ್ನೊಂದು ಸುದ್ದಿ. ಮೀನುಗಳು ಮನುಷ್ಯರ ಮುಖಚರ್ಯೆಯನ್ನು
> ಗುರುತಿಸಬಲ್ಲುವಂತೆ. ಅಂದರೆ ಅವು ನಮ್ಮನ್ನೂ, ನಿಮ್ಮನ್ನೂ ಬೇರೆ ಬೇರೆ ವ್ಯಕ್ತಿಗಳೆಂದು
> ಗುರುತಿಸಬಲ್ಲವು ಎನ್ನುವ ಸುದ್ದಿ. ಇದಷ್ಟೇ ಸಾಲದು ಎನ್ನುವಂತೆ ಇನ್ನೊಂದು ಸುದ್ದಿಯೂ
> ಬಂದಿದೆ. ಅದೆಂದರೆ ನಮ್ಮ, ನಿಮ್ಮ ಮೊಬೈಲು ಫೋನುಗಳನ್ನು ಚಾಲಿಸುವಂತಹ ಬ್ಯಾಟರಿ
> ತಯಾರಿಸುವುದು.
>
> ಷಾಕ್ ಆಯಿತೇ! ಇದೇನು ‘ನಾನ್-ವೆಜ್’ ಬ್ಯಾಟರಿ ಎಂದಿರಾ?
> ಹೌದು. ಇದು ಮೀನಿನ ಮಾಂಸವಿರುವ ಬ್ಯಾಟರಿ. ಆದರೆ ಅಪ್ಪಟ ಪರಿಸರಸ್ನೇಹಿ. ಗಾಳಿ ಸೇರಿದರೆ
> ನಮ್ಮ ಉಸಿರುಗಟ್ಟಿಸುವ ಸೀಸ, ಇದ್ದಕ್ಕಿದ್ದ ಹಾಗೆ ಸ್ಫೋಟಿಸುವ ನಿಕ್ಕಲ್-ಕ್ಯಾಡ್ಮಿಯಂ, ಅಥವಾ
> ಅಪಾಯಕಾರಿ ಆಮ್ಲಗಳಾವುವು ಇಲ್ಲದ ಅಪ್ಪಟ ನೈಸರ್ಗಿಕ ಬ್ಯಾಟರಿ. ಸಮುದ್ರಜೀವಿ, ವಿದ್ಯುತ್-ರೇ
> ಮೀನಿನ ಅಂಗದಿಂದ ಮಾಡಿದ ಬ್ಯಾಟರಿ. ಈಗ ನೀವು ಊಹಿಸಿದ್ದು ನಿಜ. ಸಮುದ್ರದಿಂದಲೇ ಎಲ್ಲವನ್ನೂ
> ಪಡೆಯಬೇಕಾದ ಅನಿವಾರ್ಯತೆ ಇರುವ ಪುಟ್ಟ ದ್ವೀಪಗಳ ದೇಶ, ತಂತ್ರಜ್ಞಾನದ ಮುಂದಾಳು
> ಜಪಾನಿನಲ್ಲದೆ ಬೇರಾರು ಈ ರೀತಿಯ ಸಾಧನೆ ಮಾಡುತ್ತಾರೆ ಹೇಳಿ. ಜಪಾನಿನ ಒಸಾಕಾದಲ್ಲಿರುವ
> ಕ್ವಾಂಟಿಟೇಟಿವ್ ಬಯಾಲಜಿ ಸೆಂಟರ್ ನ ವಿಜ್ಞಾನಿ ಯೊ ತನಾಕ ಟೋಕಿಯೊ ದಂಕಿ ಹಾಗೂ ಟೋಕಿಯೋ
> ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಜೊತೆಗೂಡಿ ಇಲೆಕ್ಟ್ರಿಕ್ ರೇ ಕುಟುಂಬಕ್ಕೆ ಸೇರಿದ ನಾರ್ಕೆ
> ಜಪಾನಿಕ (Narke japonica) ವಿದ್ಯುತ್ ಮೀನುಗಳ ವಿಶೇಷ ಅಂಗಗಳನ್ನು ಬಳಸಿ ಬ್ಯಾಟರಿಗಳನ್ನು
> ರೂಪಿಸಿದ್ದಾರೆ. ಈ ರೀತಿಯಲ್ಲಿಯೂ ವಿದ್ಯುತ್ತನ್ನು ತಯಾರಿಸುವ ಸಾಧ್ಯತೆಗಳತ್ತ ಬೆರಳು
> ತೋರಿದ್ದಾರೆ. ಇವರ ಸಂಶೋಧನೆಯ ವಿವರಗಳು ನೇಚರ್ ಸೈಂಟಿಫಿಕ್ ರಿಪೋರ್ಟರ್ ಪತ್ರಿಕೆಯ
> ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿವೆ.
>
> ವಿದ್ಯುತ್ ಉತ್ಪಾದಿಸುವ ಜೀವಿಗಳೇ ಎಂದು ಅಚ್ಚರಿಯಾಗಬೇಕಿಲ್ಲ. ನಮ್ಮ, ನಿಮ್ಮಲ್ಲೂ
> ವಿದ್ಯುತ್ ಉತ್ಪಾದನೆಯಾಗುತ್ತಲೇ ಇರುತ್ತದೆ. ಈ ಲೇಖನವನ್ನು ನೀವು ನೋಡುವಾಗಲೂ ನಿಮ್ಮ
> ಕಣ್ಣಿನಿಂದ ಮಿದುಳಿಗೆ ಒಂದು ವಿದ್ಯುತ್ ಹರಿವು ಇದ್ದೇ ಇರುತ್ತದೆ. ಪುಟ ತಿರುವುವಾಗಲೂ
> ನಿಮ್ಮ ಮಿದುಳಿನಿಂದ ಪುಟ ತಿರುವುವ ಬೆರಳಿನವರೆಗೆ ವಿದ್ಯುತ್ ಹರಿದು ಕೈಯನ್ನು
> ಚಾಲಿಸುತ್ತದೆ. ನರಕೋಶಗಳೆಂದರೆ ಒಂದು ರೀತಿ ವಿದ್ಯುತ್ ಬ್ಯಾಟರಿಗಳೇ. ಅವುಗಳೊಳಗಿನ ಲವಣಗಳು
> ಹೊರ ಹರಿದೋ, ಒಳ ಹರಿದೋ ವಿದ್ಯುತ್ ಆವೇಶವುಂಟಾಗುತ್ತದೆ. ಇದು ಒಂದು ಕೋಶದಿಂದ ಇನ್ನೊಂದು
> ಕೋಶಕ್ಕೆ ಹರಿದು ವಿದ್ಯುತ್ ಪ್ರವಾಹವಾಗುತ್ತದ. ಆದರೆ ಈ ವಿದ್ಯುತ್ತಿನ ಪ್ರಮಾಣ ಅತ್ಯಲ್ಪ.
> ನರಕೋಶಗಳ  ಈ ಶಕ್ತಿಯನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡಿರುವ ಹಲವು ಜೀವಿಗಳಿವೆ.
>
> ಇವುಗಳೆಲ್ಲವೂ ಜಲಜೀವಿಗಳೆನ್ನುವುದು ಒಂದು ವಿಚಿತ್ರವಾದರೂ ಸತ್ಯ. ಅದರಲ್ಲೂ ಟಾರ್ಪೆಡೋ
> ಕುಟುಂಬದ ಮೀನುಗಳು ವಿದ್ಯುತ್ ಉತ್ಪಾದನೆಯಲ್ಲಿ ವಿಶೇಷಜ್ಞರು. ಇವುಗಳಲ್ಲಿ ವಿದ್ಯುತ್
> ಉತ್ಪಾದಿಸಲೆಂದೇ ವಿಶೇಷ ಅಂಗವೊಂದಿದೆ. ಈ ಅಂಗದಲ್ಲಿ ಜೀವಕೋಶಗಳು ತೆಳು ಹಾಳೆಗಳಂತೆ
> (ಇಲೆಕ್ಟ್ರೊಸೈಟ್) ಜೋಡಣೆಯಾಗಿವೆ. ಸಾವಿರಾರು ಇಂತಹ ಇಲೆಕ್ಟ್ರೊಸೈಟ್ ಗಳು ಒಂದಿನ್ನೊಂದರ
> ಮೇಲೆ ಜೋಡಿಸಲ್ಪಟ್ಟಿವೆ. ಇವೆಲ್ಲವೂ ಒಟ್ಟಾಗಿ ವಿದ್ಯುತ್ ಅಂಗವಾಗುತ್ತದೆ. ಇಲೆಕ್ಟ್ರೊಸೈಟ್
> ಗಳ ನಡುವಿರುವ ರಸವೇ ಈ ಜೈವಿಕ ಬ್ಯಾಟರಿಯಲ್ಲಿನ ಆಮ್ಲ. ಮೀನಿಗೆ ಚುರುಕು ತಾಗಿದಾಗ  ಈ
> ಇಲೆಕ್ಟ್ರೊಸೈಟ್ ಗಳೊಳಗಿಂದ ಲವಣಗಳು ಹೊರ ಹರಿದು ಒಂದು ಬದಿ ಧನ ಧ್ರುವವಾಗಿಯೂ, ಮತ್ತೊಂದು
> ಬದಿ ಋಣವಾಗಿಯೂ ರೂಪುಗೊಳ್ಳುತ್ತವೆ. ಆ ಕ್ಷಣದಲ್ಲಿ ಇದನ್ನು ಮುಟ್ಟಿದಿರೆನ್ನಿ ಭಯಂಕರ ಷಾಕ್
> ಹೊಡೆಯುವುದು ಗ್ಯಾರಂಟಿ. ಇಲೆಕ್ಟ್ರಿಕ್ ರೇಗಳು ಸುಮಾರು ಎಂಟು ವೋಲ್ಟ್ ನಿಂದ 200 ವೋಲ್ಟ್
> ವರೆಗಿನ (ನಮ್ಮ ಮನೆಯೊಳಗೆ ಹರಿಯುವ ವಿದ್ಯುತ್)ಷ್ಟು ವಿದ್ಯುತ್ತನ್ನು ಬೇಕೆಂದ ಹಾಗೆ
> ಸೂಸಬಲ್ಲವು.
>
> ಮೀನುಗಳ ಈ ಷಾಕ್ ಮನುಷ್ಯರನ್ನು ಕೊಂದ ಬಗ್ಗೆ ಇದುವರೆಗೂ ಯಾವ ವರದಿಯೂ ಇಲ್ಲ. ಆದರೆ
> ಮೀನುಗಳು ಷಾಕ್ ನೀಡಿ ತಮ್ಮ ಬೇಟೆಗಳನ್ನು ದಂಗುಬಡೆಸುತ್ತವೆ. ಆಹಾರ ಸಂಪಾದಿಸಿಕೊಳ್ಳುತ್ತವೆ.
> ಅಥವಾ ವೈರಿಗಳನ್ನು ಬಡಿದೋಡಿಸುತ್ತವೆ. ಇಂತಹ ವಿದ್ಯುತ್ ಅಂಗಗಳನ್ನು ನಮ್ಮ ಅನುಕೂಲಕ್ಕೆ
> ಬಳಸಿಕೊಳ್ಳುವುದು ಸಾಧ್ಯ ಎನ್ನುತ್ತಾರೆ ತನಾಕ. ಇದಕ್ಕಾಗಿ ಇವರು ಮಾಡಿರುವುದು ಇಷ್ಟೆ.
> ಇಲೆಕ್ಟ್ರೊಸೈಟ್ ಗಳನ್ನು ಸಣ್ಣ ತುಣುಕುಗಳನ್ನಾಗಿ ಮಾಡಿ, ಬ್ಯಾಟರಿಗಳಂತೆ ಜೋಡಿಸಿದ್ದಾರೆ.
> ತದನಂತರ ಅವುಗಳನ್ನು ಪ್ರಚೋದಿಸಿದ್ದಾರೆ. ಈ ಪ್ರಚೋದನೆಗೆ ಪ್ರತಿಯಾಗಿ ಇಲೆಕ್ಟ್ರೊಸೈಟುಗಳು
> ವಿದ್ಯುತ್ ಉತ್ಪಾದಿಸಿವೆ. ಈ ವಿದ್ಯುತ್ ಪ್ರಮಾಣ ಕಡಿಮೆ ಇರುವುದರಿಂದ ಅದನ್ನು ಸಂಗ್ರಹಿಸಲು
> ಕೆಪ್ಯಾಸಿಟರ್ ಗಳನ್ನು ಜೋಡಿಸಿದ್ದಾರೆ. ಹೀಗೆ ಮಾಡಿದ ವಿದ್ಯುತ್ ಸರ್ಕೀಟಿನಲ್ಲಿ
> ಟಾರ್ಚಿನಲ್ಲಿರುವ ಒಂದು ಎಲ್ ಇ ಡಿ ದೀಪವನ್ನು ಬೆಳಗಿಸುವಷ್ಟು ವಿದ್ಯುತ್ ಉತ್ಪಾದಿಸಿದ್ದಾರೆ.
> ನಾನು ಹೇಳಿದ್ದು ಬಲು ಸರಳ ವಿಧಾನ. ವಾಸ್ತವವಾಗಿ ಇಲೆಕ್ಟ್ರೊಲೈಟುಗಳನ್ನು ಅಡ್ಡಾದಿಡ್ಡಿ
> ಪ್ರಚೋದಿಸಿದರೆ ವಿದ್ಯುತ್ ಪ್ರವಾಹವೂ ಹಾಗೆಯೇ ಇರುತ್ತದೆ. ಅವಶ್ಯಕವಾದಷ್ಟು ವಿದ್ಯುತ್
> ಉತ್ಪಾದನೆಯಾಗಬೇಕಾದರೆ ಎಲ್ಲ ಇಲೆಕ್ಟ್ರೊಲೈಟುಗಳೂ ಏಕತಾನದಂತೆ ಒಮ್ಮೆಲೇ ತುಡಿಯಬೇಕು.
> ಇದಕ್ಕಾಗಿ ತನಾಕ ಇಲೆಕ್ಟ್ರೊಲೈಟುಗಳ ನಡುವೆ ಇರುವ ದ್ರವದ ಒತ್ತಡವನ್ನು ಏರಿಳಿಸಿದ್ದಾರೆ.
> ದ್ರವದ ಒತ್ತಡ ಏರಿದಾಗ ಇಲೆಕ್ಟ್ರೊಲೈಟುಗಳು ವಿದ್ಯುತ್ ಸೂಸುತ್ತವೆ.
>
> ಈ ಇಲೆಕ್ಟ್ರೊಲೈಟುಗಳ ನಡುವಣ ದ್ರವವಾದರೂ ಎಷ್ಟಿರುತ್ತದೆ? ಅದುವೂ ಜೀವಕೋಶಗಳಂತೆಯೇ ಅತಿ
> ಅಲ್ಪ ಪ್ರಮಾಣದಲ್ಲಿರುವಂಥದ್ದು. ಅದನ್ನು ಅತಿಯಾಗಿ ಒತ್ತಿದರೂ, ಕಡಿಮೆ ಒತ್ತಿದರೂ ಬೇಕಿದ್ದ
> ಕೆಲಸ ಆಗುವಂತಿಲ್ಲ.  ಈ ಕಾರಣದಿಂದ ತನಾಕ ಇಲೆಕ್ಟ್ರೊಲೈಟುಗಳ ಮೇಲೆ ಅತಿ ಸೂಕ್ಷ್ಮವಾದ
> ಸೂಜಿಗಳ ಮೊನೆಯ ಚಾಪೆಯನ್ನು ಹಾಸಿದ್ದಾರೆ. ಈ ಸೂಜಿಗಳೊಳಗೆ ಅಸಿಟೈಲ್ ಕೋಲಿನ್ ಎನ್ನುವ
> ರಾಸಾಯನಿಕವಿರುವ ದ್ರವವನ್ನು ತುಂಬಿದ್ದಾರೆ. ಅಸಿಟೈಲ್ ಕೋಲಿನ್ ನರಕೋಶಗಳು ಸೂಸುವ ಒಂದು
> ವಿಶೇಷ ವಸ್ತು. ಇದು ಇತರೆ ಜೀವಕೋಶಗಳನ್ನು, ಅದರಲ್ಲೂ ವಿಶೇಷವಾಗಿ ನರಕೋಶಗಳನ್ನು,
> ಪ್ರಚೋದಿಸುತ್ತದೆ. ಇಲೆಕ್ಟ್ರೊಲೈಟುಗಳಲ್ಲಿ ಇದುವೇ ವಿದ್ಯುತ್ ಉತ್ಪಾದನೆಗೆ ಪ್ರೇರಕ.
>
> ಮುಳ್ಳಿನ ಚಾಪೆಯನ್ನು ಪ್ಲಾಸ್ಟಿಕ್ ಡಬ್ಬಿಯೊಂದರ ಮುಚ್ಚಳದ ತಳದಲ್ಲಿ ಹುದುಗಿಸಿ,
> ಡಬ್ಬಿಯೊಳಗೆ ಇಲೆಕ್ಟ್ರೊಸೈಟುಗಳ ತುಣುಕನ್ನು ಇರಿಸಿದ್ದಾರೆ. ಡಬ್ಬಿಯೊಳಗೆ
> ಇಲೆಕ್ಟ್ರೊಸೈಟುಗಳಿಗೆ ಶಕ್ತಿಯೊದಗಿಸುವ ಸಕ್ಕರೆಭರಿತ ದ್ರವವಿರುತ್ತದೆ. ಡಬ್ಬಿಯ ತಳ ಹಾಗೂ
> ಮುಚ್ಚಳವನ್ನು ವಿದ್ಯುತ್ ಹರಿಯುವ ತಂತಿಗಳಿಂದ ಕೂಡಿಸಿದರೆ ಸರ್ಕೀಟು ಪೂರ್ಣವಾಗುವಂತೆ ಈ
> ಡಬ್ಬಿಯನ್ನು ರಚಿಸಲಾಗಿದೆ.  ಟಾರ್ಚಿನಲ್ಲಿ ಹಲವು ಬ್ಯಾಟರಿಗಳನ್ನು ಜೋಡಿಸಿ ಹೆಚ್ಚು
> ವಿದ್ಯುತ್ ಪಡೆಯುವಂತೆ, ಇವರೂ ಹಲವು ಇಂತಹ ಡಬ್ಬಿಗಳನ್ನು ಸರಣಿಯಲ್ಲಿ ಜೋಡಿಸಿದ್ದಾರೆ. ಈ
> ವಿಧಾನವನ್ನು ಬಳಸಿದಾಗ ಡಬ್ಬಿಯೊಳಗೆ ತುಸು ಹೆಚ್ಚು ದ್ರವವನ್ನು ಒತ್ತಿದರೆ ಸಾಕು
> ಇಲೆಕ್ಟ್ರೊಲೈಟುಗಳನ್ನು ಪ್ರಚೋದಿಸಬಹುದು. ವಿದ್ಯುತ್ ಉತ್ಪಾದಿಸಬಹುದು.
>
> ತನಾಕ ಮತ್ತು ತಂಡದವರು ನಾರ್ಕೆ ಜಪಾನಿಕಾದ ಇಲೆಕ್ಟ್ರೊಸೈಟುಗಳನ್ನು ಈ ರೀತಿಯ
> ಬ್ಯಾಟರಿಯಲ್ಲಿ ಬಳಸಿ ಎಲ್ ಇ ಡಿ ದೀಪವನ್ನು ಬೆಳಗಿಸುವುದಷ್ಟೆ ಅಲ್ಲ ಪುಟ್ಟ ಆಟಿಕೆ ಕಾರು
> ಓಡಿಸಿಯೂ ತೋರಿಸಿದ್ದಾರೆ. ಒಟ್ಟಾರೆ ಸಂಪೂರ್ಣ ಜೈವಿಕ, ನೈಸರ್ಗಿಕ, ಪರಿಸರಸ್ನೇಹಿ ವಿದ್ಯುತ್
> ಒದಗಿಸುವುದು ಸಾಧ್ಯ. ವಿದ್ಯುತ್ ಉತ್ಪಾದನೆಯಾದ ನಂತರ ಈ ಜೀವಕೋಶಗಳನ್ನು ಬಿಸಾಡಿ ಹೊಸ
> ಇಲೆಕ್ಟ್ರೊಸೈಟುಗಳನ್ನು ಹಾಕಿದರೆ ರೀಛಾರ್ಜ್ ಮಾಡಿದಂತೆಯೇ ಸರಿ.
>
> ಎಲ್ಲಾ ಓಕೆ? ಯಾವಾಗಲೂ ಸಿಗುವುದೇ ಈ ನಾರ್ಕೆ? ಇದು ತಾನೇ ಪ್ರಶ್ನೆ. ತನಾಕ ಅವರು ಈ
> ಪ್ರಶ್ನೆಯನ್ನೂ ಪರೀಕ್ಷಿಸಿದ್ದಾರೆ. ಜಪಾನಿನಲ್ಲಿ ಬೇಸಿಗೆಯ ಕೆಲವು ತಿಂಗಳುಗಳ ಹೊರತಾಗಿ
> ಉಳಿದೆಲ್ಲ ತಿಂಗಳುಗಳಲ್ಲೂ ಮೀನುಗಾರರ ಬಲೆಯಲ್ಲಿ ಈ ಮೀನು ಸಿಲುಕಿಕೊಳ್ಳುವುದನ್ನು ಇವರು
> ಕಂಡಿದ್ದಾರೆ. ಅರ್ಥಾತ್, ಈ ಮೀನು ವರ್ಷದ ಎಲ್ಲ ದಿನಗಳಲ್ಲೂ ದೊರೆಯುತ್ತದೆ. ಇಲ್ಲದಿದ್ದರೆ
> ಇದನ್ನು ಸಾಕಲೂ ಪ್ರಯತ್ನಿಸಬಹುದು ಎನ್ನುವುದು ಇವರ ತರ್ಕ.
>
> ಆದರೆ ಎಲ್ಲ ಜೀವಿಗಳಂತೆ ಈ ಇಲೆಕ್ಟ್ರೋಸೈಟುಗಳೂ ನಶ್ವರವಾದ್ದರಿಂದ ಇದೇ ವಿದ್ಯಮಾನವನ್ನು
> ಬಳಸುವಂತಹ ಕೃತಕ ಇಲೆಕ್ಟ್ರೊಸೈಟುಗಳು, ದ್ರವಗಳನ್ನು ಬಳಸಿ ನೂತನ ರೀತಿಯ ಬ್ಯಾಟರಿಗಳನ್ನು
> ನಿರ್ಮಿಸಬಹುದು ಎನ್ನುತ್ತಾರೆ ತನಾಕ. “ಲಕ್ಷಾಂತರ ವರ್ಷಗಳ ವಿಕಾಸದಿಂದ ಪುಟಗೊಂಡ ಇದರಷ್ಟು
> ಪರಿಪೂರ್ಣವಾದ ಬ್ಯಾಟರಿ ಮತ್ತೊಂದು ಇಲ್ಲ,” ಎನ್ನುವುದು ಇವರ ವಿಶ್ವಾಸ. ಅಂದ ಹಾಗೆ
> ಮೀನುಗಾರರಿಗೆ ಇದು ಅನಗತ್ಯ ಮೀನು. ಹಾಗಾಗಿ ಮೀನುಗಾರಿಕೆಯ ತ್ಯಾಜ್ಯ. ಬ್ಯಾಟರಿಯನ್ನಾಗಿ
> ಬಳಸಿದರೆ ಈ ತ್ಯಾಜ್ಯದ ಸದ್ಬಳಕೆಯಾಗಬಹುದು ಎನ್ನೋಣವೇ? ಹಾಂ. ಇಲೆಕ್ಟ್ರೊಲೈಟುಗಳು
> ರುಚಿಕರವಾಗಿದ್ದರೆ, ಬಳಸಿದ ಬ್ಯಾಟರಿಗಳು ಸ್ವಾದಿಷ್ಟ ಭೋಜನವೂ ಆಗಬಹುದು.
>
> ಹೆಚ್ಚಿನ ಓದಿಗೆ: Tanaka, Y. et al. *An electric generator using living
> Torpedo electric organs controlled by fluid pressure-based alternative
> nervous systems* <http://www.ncbi.nlm.nih.gov/pmc/articles/PMC4886531/>
>
> *ಜೂನ್ ೧೩, ೨೦೧೬ರ **ಸಂಯುಕ್ತ ಕರ್ನಾಟಕ*
> <http://epaper.samyukthakarnataka.com/c/11005093>*ದಲ್ಲಿ ಪ್ರಕಟವಾದ ಲೇಖನ*
>
> Hareeshkumar K
> GHS HUSKURU
> MALAVALLI TQ
> MANDYA DT
> MOB 9880328224
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to