Keep in short pl On Jun 23, 2016 7:33 AM, "DORA CARMINE D'SILVA" <[email protected]> wrote:
> Thank u sir.....intresting..... > On Jun 23, 2016 6:36 AM, "HAREESHKUMAR K Agasanapura" < > [email protected]> wrote: > >> http://www.ejnana.com/2016/06/blog-post_21.html?m=1 >> >> *ಮೀನಿನ ಬ್ಯಾಟರಿ!* >> >> *ಕೊಳ್ಳೇಗಾಲ ಶರ್ಮ* >> >> >> <https://4.bp.blogspot.com/-83rBhxk0l58/V2lVRDRv_6I/AAAAAAAAfAk/YmrPKK9QhSwXNP4rWJUznf4rwnVT6RnrgCLcB/s1600/narkejaponica.jpg> >> >> ಈ ವಾರ ಮೀನಿನದ್ದೇ ಸುದ್ದಿ. ಮೊನ್ನೆ ನಮ್ಮೂರ ಐಯಂಗಾರ್ ಬೇಕರಿಯಲ್ಲಿಯೂ ಮಂಗಳೂರಿನಿಂದ >> ಮೀನಿನ ಸರಬರಾಜು ಕಡಿಮೆಯಾಗಿರುವ ಬಗ್ಗೆ ಭಯಂಕರ ಚರ್ಚೆ ನಡೆದಿತ್ತು. ಈ ವರ್ಷ ಮಳೆರಾಯ >> ಕಾಲಿಡಲು ಹಿಂಜರಿಯುತ್ತಿರುವ ಕಾರಣ ಕಡಲಮೀನಿನ ಸಂತತಿಯೂ ಕಡಿಮೆಯಾಗಿದೆ ಎನ್ನುವುದು ಚರ್ಚೆ. >> ಇದರ ಬೆನ್ನಲ್ಲೇ ಇನ್ನೊಂದು ಸುದ್ದಿ. ಮೀನುಗಳು ಮನುಷ್ಯರ ಮುಖಚರ್ಯೆಯನ್ನು >> ಗುರುತಿಸಬಲ್ಲುವಂತೆ. ಅಂದರೆ ಅವು ನಮ್ಮನ್ನೂ, ನಿಮ್ಮನ್ನೂ ಬೇರೆ ಬೇರೆ ವ್ಯಕ್ತಿಗಳೆಂದು >> ಗುರುತಿಸಬಲ್ಲವು ಎನ್ನುವ ಸುದ್ದಿ. ಇದಷ್ಟೇ ಸಾಲದು ಎನ್ನುವಂತೆ ಇನ್ನೊಂದು ಸುದ್ದಿಯೂ >> ಬಂದಿದೆ. ಅದೆಂದರೆ ನಮ್ಮ, ನಿಮ್ಮ ಮೊಬೈಲು ಫೋನುಗಳನ್ನು ಚಾಲಿಸುವಂತಹ ಬ್ಯಾಟರಿ >> ತಯಾರಿಸುವುದು. >> >> ಷಾಕ್ ಆಯಿತೇ! ಇದೇನು ‘ನಾನ್-ವೆಜ್’ ಬ್ಯಾಟರಿ ಎಂದಿರಾ? >> ಹೌದು. ಇದು ಮೀನಿನ ಮಾಂಸವಿರುವ ಬ್ಯಾಟರಿ. ಆದರೆ ಅಪ್ಪಟ ಪರಿಸರಸ್ನೇಹಿ. ಗಾಳಿ ಸೇರಿದರೆ >> ನಮ್ಮ ಉಸಿರುಗಟ್ಟಿಸುವ ಸೀಸ, ಇದ್ದಕ್ಕಿದ್ದ ಹಾಗೆ ಸ್ಫೋಟಿಸುವ ನಿಕ್ಕಲ್-ಕ್ಯಾಡ್ಮಿಯಂ, ಅಥವಾ >> ಅಪಾಯಕಾರಿ ಆಮ್ಲಗಳಾವುವು ಇಲ್ಲದ ಅಪ್ಪಟ ನೈಸರ್ಗಿಕ ಬ್ಯಾಟರಿ. ಸಮುದ್ರಜೀವಿ, ವಿದ್ಯುತ್-ರೇ >> ಮೀನಿನ ಅಂಗದಿಂದ ಮಾಡಿದ ಬ್ಯಾಟರಿ. ಈಗ ನೀವು ಊಹಿಸಿದ್ದು ನಿಜ. ಸಮುದ್ರದಿಂದಲೇ ಎಲ್ಲವನ್ನೂ >> ಪಡೆಯಬೇಕಾದ ಅನಿವಾರ್ಯತೆ ಇರುವ ಪುಟ್ಟ ದ್ವೀಪಗಳ ದೇಶ, ತಂತ್ರಜ್ಞಾನದ ಮುಂದಾಳು >> ಜಪಾನಿನಲ್ಲದೆ ಬೇರಾರು ಈ ರೀತಿಯ ಸಾಧನೆ ಮಾಡುತ್ತಾರೆ ಹೇಳಿ. ಜಪಾನಿನ ಒಸಾಕಾದಲ್ಲಿರುವ >> ಕ್ವಾಂಟಿಟೇಟಿವ್ ಬಯಾಲಜಿ ಸೆಂಟರ್ ನ ವಿಜ್ಞಾನಿ ಯೊ ತನಾಕ ಟೋಕಿಯೊ ದಂಕಿ ಹಾಗೂ ಟೋಕಿಯೋ >> ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಜೊತೆಗೂಡಿ ಇಲೆಕ್ಟ್ರಿಕ್ ರೇ ಕುಟುಂಬಕ್ಕೆ ಸೇರಿದ ನಾರ್ಕೆ >> ಜಪಾನಿಕ (Narke japonica) ವಿದ್ಯುತ್ ಮೀನುಗಳ ವಿಶೇಷ ಅಂಗಗಳನ್ನು ಬಳಸಿ ಬ್ಯಾಟರಿಗಳನ್ನು >> ರೂಪಿಸಿದ್ದಾರೆ. ಈ ರೀತಿಯಲ್ಲಿಯೂ ವಿದ್ಯುತ್ತನ್ನು ತಯಾರಿಸುವ ಸಾಧ್ಯತೆಗಳತ್ತ ಬೆರಳು >> ತೋರಿದ್ದಾರೆ. ಇವರ ಸಂಶೋಧನೆಯ ವಿವರಗಳು ನೇಚರ್ ಸೈಂಟಿಫಿಕ್ ರಿಪೋರ್ಟರ್ ಪತ್ರಿಕೆಯ >> ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿವೆ. >> >> ವಿದ್ಯುತ್ ಉತ್ಪಾದಿಸುವ ಜೀವಿಗಳೇ ಎಂದು ಅಚ್ಚರಿಯಾಗಬೇಕಿಲ್ಲ. ನಮ್ಮ, ನಿಮ್ಮಲ್ಲೂ >> ವಿದ್ಯುತ್ ಉತ್ಪಾದನೆಯಾಗುತ್ತಲೇ ಇರುತ್ತದೆ. ಈ ಲೇಖನವನ್ನು ನೀವು ನೋಡುವಾಗಲೂ ನಿಮ್ಮ >> ಕಣ್ಣಿನಿಂದ ಮಿದುಳಿಗೆ ಒಂದು ವಿದ್ಯುತ್ ಹರಿವು ಇದ್ದೇ ಇರುತ್ತದೆ. ಪುಟ ತಿರುವುವಾಗಲೂ >> ನಿಮ್ಮ ಮಿದುಳಿನಿಂದ ಪುಟ ತಿರುವುವ ಬೆರಳಿನವರೆಗೆ ವಿದ್ಯುತ್ ಹರಿದು ಕೈಯನ್ನು >> ಚಾಲಿಸುತ್ತದೆ. ನರಕೋಶಗಳೆಂದರೆ ಒಂದು ರೀತಿ ವಿದ್ಯುತ್ ಬ್ಯಾಟರಿಗಳೇ. ಅವುಗಳೊಳಗಿನ ಲವಣಗಳು >> ಹೊರ ಹರಿದೋ, ಒಳ ಹರಿದೋ ವಿದ್ಯುತ್ ಆವೇಶವುಂಟಾಗುತ್ತದೆ. ಇದು ಒಂದು ಕೋಶದಿಂದ ಇನ್ನೊಂದು >> ಕೋಶಕ್ಕೆ ಹರಿದು ವಿದ್ಯುತ್ ಪ್ರವಾಹವಾಗುತ್ತದ. ಆದರೆ ಈ ವಿದ್ಯುತ್ತಿನ ಪ್ರಮಾಣ ಅತ್ಯಲ್ಪ. >> ನರಕೋಶಗಳ ಈ ಶಕ್ತಿಯನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡಿರುವ ಹಲವು ಜೀವಿಗಳಿವೆ. >> >> ಇವುಗಳೆಲ್ಲವೂ ಜಲಜೀವಿಗಳೆನ್ನುವುದು ಒಂದು ವಿಚಿತ್ರವಾದರೂ ಸತ್ಯ. ಅದರಲ್ಲೂ ಟಾರ್ಪೆಡೋ >> ಕುಟುಂಬದ ಮೀನುಗಳು ವಿದ್ಯುತ್ ಉತ್ಪಾದನೆಯಲ್ಲಿ ವಿಶೇಷಜ್ಞರು. ಇವುಗಳಲ್ಲಿ ವಿದ್ಯುತ್ >> ಉತ್ಪಾದಿಸಲೆಂದೇ ವಿಶೇಷ ಅಂಗವೊಂದಿದೆ. ಈ ಅಂಗದಲ್ಲಿ ಜೀವಕೋಶಗಳು ತೆಳು ಹಾಳೆಗಳಂತೆ >> (ಇಲೆಕ್ಟ್ರೊಸೈಟ್) ಜೋಡಣೆಯಾಗಿವೆ. ಸಾವಿರಾರು ಇಂತಹ ಇಲೆಕ್ಟ್ರೊಸೈಟ್ ಗಳು ಒಂದಿನ್ನೊಂದರ >> ಮೇಲೆ ಜೋಡಿಸಲ್ಪಟ್ಟಿವೆ. ಇವೆಲ್ಲವೂ ಒಟ್ಟಾಗಿ ವಿದ್ಯುತ್ ಅಂಗವಾಗುತ್ತದೆ. ಇಲೆಕ್ಟ್ರೊಸೈಟ್ >> ಗಳ ನಡುವಿರುವ ರಸವೇ ಈ ಜೈವಿಕ ಬ್ಯಾಟರಿಯಲ್ಲಿನ ಆಮ್ಲ. ಮೀನಿಗೆ ಚುರುಕು ತಾಗಿದಾಗ ಈ >> ಇಲೆಕ್ಟ್ರೊಸೈಟ್ ಗಳೊಳಗಿಂದ ಲವಣಗಳು ಹೊರ ಹರಿದು ಒಂದು ಬದಿ ಧನ ಧ್ರುವವಾಗಿಯೂ, ಮತ್ತೊಂದು >> ಬದಿ ಋಣವಾಗಿಯೂ ರೂಪುಗೊಳ್ಳುತ್ತವೆ. ಆ ಕ್ಷಣದಲ್ಲಿ ಇದನ್ನು ಮುಟ್ಟಿದಿರೆನ್ನಿ ಭಯಂಕರ ಷಾಕ್ >> ಹೊಡೆಯುವುದು ಗ್ಯಾರಂಟಿ. ಇಲೆಕ್ಟ್ರಿಕ್ ರೇಗಳು ಸುಮಾರು ಎಂಟು ವೋಲ್ಟ್ ನಿಂದ 200 ವೋಲ್ಟ್ >> ವರೆಗಿನ (ನಮ್ಮ ಮನೆಯೊಳಗೆ ಹರಿಯುವ ವಿದ್ಯುತ್)ಷ್ಟು ವಿದ್ಯುತ್ತನ್ನು ಬೇಕೆಂದ ಹಾಗೆ >> ಸೂಸಬಲ್ಲವು. >> >> ಮೀನುಗಳ ಈ ಷಾಕ್ ಮನುಷ್ಯರನ್ನು ಕೊಂದ ಬಗ್ಗೆ ಇದುವರೆಗೂ ಯಾವ ವರದಿಯೂ ಇಲ್ಲ. ಆದರೆ >> ಮೀನುಗಳು ಷಾಕ್ ನೀಡಿ ತಮ್ಮ ಬೇಟೆಗಳನ್ನು ದಂಗುಬಡೆಸುತ್ತವೆ. ಆಹಾರ ಸಂಪಾದಿಸಿಕೊಳ್ಳುತ್ತವೆ. >> ಅಥವಾ ವೈರಿಗಳನ್ನು ಬಡಿದೋಡಿಸುತ್ತವೆ. ಇಂತಹ ವಿದ್ಯುತ್ ಅಂಗಗಳನ್ನು ನಮ್ಮ ಅನುಕೂಲಕ್ಕೆ >> ಬಳಸಿಕೊಳ್ಳುವುದು ಸಾಧ್ಯ ಎನ್ನುತ್ತಾರೆ ತನಾಕ. ಇದಕ್ಕಾಗಿ ಇವರು ಮಾಡಿರುವುದು ಇಷ್ಟೆ. >> ಇಲೆಕ್ಟ್ರೊಸೈಟ್ ಗಳನ್ನು ಸಣ್ಣ ತುಣುಕುಗಳನ್ನಾಗಿ ಮಾಡಿ, ಬ್ಯಾಟರಿಗಳಂತೆ ಜೋಡಿಸಿದ್ದಾರೆ. >> ತದನಂತರ ಅವುಗಳನ್ನು ಪ್ರಚೋದಿಸಿದ್ದಾರೆ. ಈ ಪ್ರಚೋದನೆಗೆ ಪ್ರತಿಯಾಗಿ ಇಲೆಕ್ಟ್ರೊಸೈಟುಗಳು >> ವಿದ್ಯುತ್ ಉತ್ಪಾದಿಸಿವೆ. ಈ ವಿದ್ಯುತ್ ಪ್ರಮಾಣ ಕಡಿಮೆ ಇರುವುದರಿಂದ ಅದನ್ನು ಸಂಗ್ರಹಿಸಲು >> ಕೆಪ್ಯಾಸಿಟರ್ ಗಳನ್ನು ಜೋಡಿಸಿದ್ದಾರೆ. ಹೀಗೆ ಮಾಡಿದ ವಿದ್ಯುತ್ ಸರ್ಕೀಟಿನಲ್ಲಿ >> ಟಾರ್ಚಿನಲ್ಲಿರುವ ಒಂದು ಎಲ್ ಇ ಡಿ ದೀಪವನ್ನು ಬೆಳಗಿಸುವಷ್ಟು ವಿದ್ಯುತ್ ಉತ್ಪಾದಿಸಿದ್ದಾರೆ. >> ನಾನು ಹೇಳಿದ್ದು ಬಲು ಸರಳ ವಿಧಾನ. ವಾಸ್ತವವಾಗಿ ಇಲೆಕ್ಟ್ರೊಲೈಟುಗಳನ್ನು ಅಡ್ಡಾದಿಡ್ಡಿ >> ಪ್ರಚೋದಿಸಿದರೆ ವಿದ್ಯುತ್ ಪ್ರವಾಹವೂ ಹಾಗೆಯೇ ಇರುತ್ತದೆ. ಅವಶ್ಯಕವಾದಷ್ಟು ವಿದ್ಯುತ್ >> ಉತ್ಪಾದನೆಯಾಗಬೇಕಾದರೆ ಎಲ್ಲ ಇಲೆಕ್ಟ್ರೊಲೈಟುಗಳೂ ಏಕತಾನದಂತೆ ಒಮ್ಮೆಲೇ ತುಡಿಯಬೇಕು. >> ಇದಕ್ಕಾಗಿ ತನಾಕ ಇಲೆಕ್ಟ್ರೊಲೈಟುಗಳ ನಡುವೆ ಇರುವ ದ್ರವದ ಒತ್ತಡವನ್ನು ಏರಿಳಿಸಿದ್ದಾರೆ. >> ದ್ರವದ ಒತ್ತಡ ಏರಿದಾಗ ಇಲೆಕ್ಟ್ರೊಲೈಟುಗಳು ವಿದ್ಯುತ್ ಸೂಸುತ್ತವೆ. >> >> ಈ ಇಲೆಕ್ಟ್ರೊಲೈಟುಗಳ ನಡುವಣ ದ್ರವವಾದರೂ ಎಷ್ಟಿರುತ್ತದೆ? ಅದುವೂ ಜೀವಕೋಶಗಳಂತೆಯೇ ಅತಿ >> ಅಲ್ಪ ಪ್ರಮಾಣದಲ್ಲಿರುವಂಥದ್ದು. ಅದನ್ನು ಅತಿಯಾಗಿ ಒತ್ತಿದರೂ, ಕಡಿಮೆ ಒತ್ತಿದರೂ ಬೇಕಿದ್ದ >> ಕೆಲಸ ಆಗುವಂತಿಲ್ಲ. ಈ ಕಾರಣದಿಂದ ತನಾಕ ಇಲೆಕ್ಟ್ರೊಲೈಟುಗಳ ಮೇಲೆ ಅತಿ ಸೂಕ್ಷ್ಮವಾದ >> ಸೂಜಿಗಳ ಮೊನೆಯ ಚಾಪೆಯನ್ನು ಹಾಸಿದ್ದಾರೆ. ಈ ಸೂಜಿಗಳೊಳಗೆ ಅಸಿಟೈಲ್ ಕೋಲಿನ್ ಎನ್ನುವ >> ರಾಸಾಯನಿಕವಿರುವ ದ್ರವವನ್ನು ತುಂಬಿದ್ದಾರೆ. ಅಸಿಟೈಲ್ ಕೋಲಿನ್ ನರಕೋಶಗಳು ಸೂಸುವ ಒಂದು >> ವಿಶೇಷ ವಸ್ತು. ಇದು ಇತರೆ ಜೀವಕೋಶಗಳನ್ನು, ಅದರಲ್ಲೂ ವಿಶೇಷವಾಗಿ ನರಕೋಶಗಳನ್ನು, >> ಪ್ರಚೋದಿಸುತ್ತದೆ. ಇಲೆಕ್ಟ್ರೊಲೈಟುಗಳಲ್ಲಿ ಇದುವೇ ವಿದ್ಯುತ್ ಉತ್ಪಾದನೆಗೆ ಪ್ರೇರಕ. >> >> ಮುಳ್ಳಿನ ಚಾಪೆಯನ್ನು ಪ್ಲಾಸ್ಟಿಕ್ ಡಬ್ಬಿಯೊಂದರ ಮುಚ್ಚಳದ ತಳದಲ್ಲಿ ಹುದುಗಿಸಿ, >> ಡಬ್ಬಿಯೊಳಗೆ ಇಲೆಕ್ಟ್ರೊಸೈಟುಗಳ ತುಣುಕನ್ನು ಇರಿಸಿದ್ದಾರೆ. ಡಬ್ಬಿಯೊಳಗೆ >> ಇಲೆಕ್ಟ್ರೊಸೈಟುಗಳಿಗೆ ಶಕ್ತಿಯೊದಗಿಸುವ ಸಕ್ಕರೆಭರಿತ ದ್ರವವಿರುತ್ತದೆ. ಡಬ್ಬಿಯ ತಳ ಹಾಗೂ >> ಮುಚ್ಚಳವನ್ನು ವಿದ್ಯುತ್ ಹರಿಯುವ ತಂತಿಗಳಿಂದ ಕೂಡಿಸಿದರೆ ಸರ್ಕೀಟು ಪೂರ್ಣವಾಗುವಂತೆ ಈ >> ಡಬ್ಬಿಯನ್ನು ರಚಿಸಲಾಗಿದೆ. ಟಾರ್ಚಿನಲ್ಲಿ ಹಲವು ಬ್ಯಾಟರಿಗಳನ್ನು ಜೋಡಿಸಿ ಹೆಚ್ಚು >> ವಿದ್ಯುತ್ ಪಡೆಯುವಂತೆ, ಇವರೂ ಹಲವು ಇಂತಹ ಡಬ್ಬಿಗಳನ್ನು ಸರಣಿಯಲ್ಲಿ ಜೋಡಿಸಿದ್ದಾರೆ. ಈ >> ವಿಧಾನವನ್ನು ಬಳಸಿದಾಗ ಡಬ್ಬಿಯೊಳಗೆ ತುಸು ಹೆಚ್ಚು ದ್ರವವನ್ನು ಒತ್ತಿದರೆ ಸಾಕು >> ಇಲೆಕ್ಟ್ರೊಲೈಟುಗಳನ್ನು ಪ್ರಚೋದಿಸಬಹುದು. ವಿದ್ಯುತ್ ಉತ್ಪಾದಿಸಬಹುದು. >> >> ತನಾಕ ಮತ್ತು ತಂಡದವರು ನಾರ್ಕೆ ಜಪಾನಿಕಾದ ಇಲೆಕ್ಟ್ರೊಸೈಟುಗಳನ್ನು ಈ ರೀತಿಯ >> ಬ್ಯಾಟರಿಯಲ್ಲಿ ಬಳಸಿ ಎಲ್ ಇ ಡಿ ದೀಪವನ್ನು ಬೆಳಗಿಸುವುದಷ್ಟೆ ಅಲ್ಲ ಪುಟ್ಟ ಆಟಿಕೆ ಕಾರು >> ಓಡಿಸಿಯೂ ತೋರಿಸಿದ್ದಾರೆ. ಒಟ್ಟಾರೆ ಸಂಪೂರ್ಣ ಜೈವಿಕ, ನೈಸರ್ಗಿಕ, ಪರಿಸರಸ್ನೇಹಿ ವಿದ್ಯುತ್ >> ಒದಗಿಸುವುದು ಸಾಧ್ಯ. ವಿದ್ಯುತ್ ಉತ್ಪಾದನೆಯಾದ ನಂತರ ಈ ಜೀವಕೋಶಗಳನ್ನು ಬಿಸಾಡಿ ಹೊಸ >> ಇಲೆಕ್ಟ್ರೊಸೈಟುಗಳನ್ನು ಹಾಕಿದರೆ ರೀಛಾರ್ಜ್ ಮಾಡಿದಂತೆಯೇ ಸರಿ. >> >> ಎಲ್ಲಾ ಓಕೆ? ಯಾವಾಗಲೂ ಸಿಗುವುದೇ ಈ ನಾರ್ಕೆ? ಇದು ತಾನೇ ಪ್ರಶ್ನೆ. ತನಾಕ ಅವರು ಈ >> ಪ್ರಶ್ನೆಯನ್ನೂ ಪರೀಕ್ಷಿಸಿದ್ದಾರೆ. ಜಪಾನಿನಲ್ಲಿ ಬೇಸಿಗೆಯ ಕೆಲವು ತಿಂಗಳುಗಳ ಹೊರತಾಗಿ >> ಉಳಿದೆಲ್ಲ ತಿಂಗಳುಗಳಲ್ಲೂ ಮೀನುಗಾರರ ಬಲೆಯಲ್ಲಿ ಈ ಮೀನು ಸಿಲುಕಿಕೊಳ್ಳುವುದನ್ನು ಇವರು >> ಕಂಡಿದ್ದಾರೆ. ಅರ್ಥಾತ್, ಈ ಮೀನು ವರ್ಷದ ಎಲ್ಲ ದಿನಗಳಲ್ಲೂ ದೊರೆಯುತ್ತದೆ. ಇಲ್ಲದಿದ್ದರೆ >> ಇದನ್ನು ಸಾಕಲೂ ಪ್ರಯತ್ನಿಸಬಹುದು ಎನ್ನುವುದು ಇವರ ತರ್ಕ. >> >> ಆದರೆ ಎಲ್ಲ ಜೀವಿಗಳಂತೆ ಈ ಇಲೆಕ್ಟ್ರೋಸೈಟುಗಳೂ ನಶ್ವರವಾದ್ದರಿಂದ ಇದೇ ವಿದ್ಯಮಾನವನ್ನು >> ಬಳಸುವಂತಹ ಕೃತಕ ಇಲೆಕ್ಟ್ರೊಸೈಟುಗಳು, ದ್ರವಗಳನ್ನು ಬಳಸಿ ನೂತನ ರೀತಿಯ ಬ್ಯಾಟರಿಗಳನ್ನು >> ನಿರ್ಮಿಸಬಹುದು ಎನ್ನುತ್ತಾರೆ ತನಾಕ. “ಲಕ್ಷಾಂತರ ವರ್ಷಗಳ ವಿಕಾಸದಿಂದ ಪುಟಗೊಂಡ ಇದರಷ್ಟು >> ಪರಿಪೂರ್ಣವಾದ ಬ್ಯಾಟರಿ ಮತ್ತೊಂದು ಇಲ್ಲ,” ಎನ್ನುವುದು ಇವರ ವಿಶ್ವಾಸ. ಅಂದ ಹಾಗೆ >> ಮೀನುಗಾರರಿಗೆ ಇದು ಅನಗತ್ಯ ಮೀನು. ಹಾಗಾಗಿ ಮೀನುಗಾರಿಕೆಯ ತ್ಯಾಜ್ಯ. ಬ್ಯಾಟರಿಯನ್ನಾಗಿ >> ಬಳಸಿದರೆ ಈ ತ್ಯಾಜ್ಯದ ಸದ್ಬಳಕೆಯಾಗಬಹುದು ಎನ್ನೋಣವೇ? ಹಾಂ. ಇಲೆಕ್ಟ್ರೊಲೈಟುಗಳು >> ರುಚಿಕರವಾಗಿದ್ದರೆ, ಬಳಸಿದ ಬ್ಯಾಟರಿಗಳು ಸ್ವಾದಿಷ್ಟ ಭೋಜನವೂ ಆಗಬಹುದು. >> >> ಹೆಚ್ಚಿನ ಓದಿಗೆ: Tanaka, Y. et al. *An electric generator using living >> Torpedo electric organs controlled by fluid pressure-based alternative >> nervous systems* <http://www.ncbi.nlm.nih.gov/pmc/articles/PMC4886531/> >> >> *ಜೂನ್ ೧೩, ೨೦೧೬ರ **ಸಂಯುಕ್ತ ಕರ್ನಾಟಕ* >> <http://epaper.samyukthakarnataka.com/c/11005093>*ದಲ್ಲಿ ಪ್ರಕಟವಾದ ಲೇಖನ* >> >> Hareeshkumar K >> GHS HUSKURU >> MALAVALLI TQ >> MANDYA DT >> MOB 9880328224 >> >> -- >> 1. If a teacher wants to join STF, visit >> http://karnatakaeducation.org.in/KOER/en/index.php/Become_a_STF_groups_member >> 2. For STF training, visit KOER - >> http://karnatakaeducation.org.in/KOER/en/index.php >> 4. For Ubuntu 14.04 installation, visit >> http://karnatakaeducation.org.in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequently_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
