Very useful information sir thanks for sharing On 24 Aug 2016 12:54, "HAREESHKUMAR K Agasanapura" <[email protected]> wrote:
> http://m.vijaykarnataka.com/edit-oped/columns/net-nota- > sudhindra-haldodderi/articleshow/53827378.cms > > *ನೆಟ್ ನೋಟ: ತಟ್ಟೆ, ಚಮಚೆ, ತಿಂಡಿ ಪೊಟ್ಟಣವನ್ನೂ ಮೆಲ್ಲಬಹುದು!* > > Aug 24, 2016, 04.00 AM IST > > WhatsappFacebookGoogle PlusTwitterEmailSMS > > bng-2308-2-2-food > > AAA > > ನೆಟ್ ನೋಟ: ಸುಧೀಂದ್ರ ಹಾಲ್ದೊಡ್ಡೇರಿ ಮೊನ್ನೆ ಮದುವೆ ಮನೆಯೊಂದರಲ್ಲಿ ಊಟ > ಮಾಡುತ್ತಿದ್ದಾಗ, ಬದನೆಕಾಯಿಯ ದಪ್ಪನೆಯ ಹೋಳೊಂದನ್ನು ಪ್ಲಾಸ್ಟಿಕ್ ಚಮಚೆಯಿಂದ ನಾನು > ತುಂಡರಿಸುವಷ್ಟರಲ್ಲಿ ಅದು ಮುರಿದುಬಿತ್ತು. ತಟ್ಟೆಯಲ್ಲಿಯೇ ಗಟ್ಟಿಯಾಗಿದ್ದ ಹಲಸಿನ ಹಪ್ಪಳದ > ಚೂರುಗಳೆರಡು ನನ್ನ ಊಟಕ್ಕೆ ಚಮಚೆಯ ನೆರವು ನೀಡಿತು. ಪಕ್ಕದಲ್ಲಿದ್ದ ಭೌತವಿಜ್ಞಾನ > ಪ್ರಾಧ್ಯಾಪಕರು ಇನ್ನು ಮುಂದೆ ಊಟದ ಜತೆಗೆ ತಿಂದು ಮುಗಿಸಬಲ್ಲ ಚಮಚೆಗಳು ಬಳಕೆಗೆ > ಬರಬೇಕೆಂದರು. ಕಳೆದ ವಾರವಷ್ಟೇ ಔತಣಕೂಟವೊಂದರಲ್ಲಿ ತಟ್ಟೆಯೊಂದಿಗೆ ಸಿಕ್ಕ ಸ್ಟೇನ್ಲೆಸ್ > ಸ್ಟೀಲ್ ಲೇಪನವಿದ್ದ ಪ್ಲಾಸ್ಟಿಕ್ ಚಮಚ ನನ್ನನ್ನು ಬೇಸ್ತು ಬೀಳಿಸಿತ್ತು. ಸಮೋಸ ತಿಂದು > ಮುಗಿಸುವಷ್ಟರಲ್ಲಿ ಚಮಚೆಯ ಮೇಲಿನ ಬಣ್ಣದ ಲೇಪನದ ಅರ್ಧ ಭಾಗ ನನ್ನ ಹೊಟ್ಟೆಯನ್ನು ಸೇರಿತ್ತು. > ಪರಿಸರ ಕಾಳಜಿಯ ಊಟದ ಮನೆಗಳಲ್ಲಿ ಇದೀಗ ಅಡಿಕೆ ಹಾಳೆಯ ತಟ್ಟೆ ಮತ್ತು ದೊನ್ನೆಗಳು ಪ್ರವೇಶ > ಮಾಡಿವೆ. ಆದರೆ ಪ್ಲಾಸ್ಟಿಕ್ ಚಮಚೆಯ ಸ್ಥಾನವನ್ನು ಪಲ್ಲಟಗೊಳಿಸಲು ಸಾಧ್ಯವಾಗಿಲ್ಲ. ದಿನಸಿ > ಮಳಿಗೆಗೆ ನೀವು ಭೇಟಿ ಕೊಟ್ಟಾಗ ಗಮನಿಸಿರಬಹುದು. ಬೆಣ್ಣೆ, ಗಿಣ್ಣು, ಚೀಸ್, ಮಾಂಸ, > ಬ್ರೆಡ್, ಕತ್ತರಿಸಿದ ಹಣ್ಣು, ಚಾಕೊಲೇಟ್ ಸೇರಿದಂತೆ ಬಹುತೇಕ ಆಹಾರ ಸಾಮಗ್ರಿಗಳನ್ನು > ತೆಳುವಾದ ಪಾರದರ್ಶಕ ಪ್ಲಾಸ್ಟಿಕ್ ಹಾಳೆಗಳಿಂದ ಸುತ್ತಿರಲಾಗುತ್ತದೆ. ಮರುಬಳಸಲಾಗದ ಈ ತೆಳು > ಪ್ಲಾಸ್ಟಿಕ್ ಹಾಳೆಗಳು ಎಂದಿಗೂ ಕೊಳೆಯದ ಕಸದ ರಾಶಿಗಳಲ್ಲಿ ಸೇರ್ಪಡೆಯಾಗುತ್ತವೆ. ಹಾಗೆಯೇ > ತೀರಾ ತೆಳುವಾದ ಇದರ ಮೇಲ್ಮೈಗೆ ಮೆತ್ತಿಕೊಳ್ಳುವ ಆಹಾರ ಪದಾರ್ಥಗಳು ಬಳಕೆಯಾಗದೆಯೇ > ವ್ಯರ್ಥವಾಗುತ್ತವೆ. ಕರ್ನಾಟಕದಲ್ಲಿ ಈ ಹಿಂದೆ ನಲವತ್ತು ಮೈಕ್ರಾನ್‌ಗಿಂತಲೂ ಕಡಿಮೆ ದಪ್ಪದ > ಪ್ಲಾಸ್ಟಿಕ್ ಬಳಸುವಂತಿರಲಿಲ್ಲ. ಇದೀಗ ಕರ್ನಾಟಕವು ಪ್ಲಾಸ್ಟಿಕ್ ಮುಕ್ತ ರಾಜ್ಯವಾಗುವತ್ತ > ಹೆಜ್ಜೆ ಹಾಕುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ತೆಳು ಪ್ಲಾಸ್ಟಿಕ್ ಹಾಳೆಗಳು ಸಹಾ > ಕೆಲವೊಮ್ಮೆ ತಮ್ಮೊಡಲೊಳಗಿನ ವಿಷ ಪದಾರ್ಥಗಳನ್ನು ಆಹಾರಕ್ಕೆ ನಿಧಾನಗತಿಯಲ್ಲಿ > ರವಾನಿಸುತ್ತಿರುತ್ತವೆ. ಇದು ಕೇವಲ ಭಾರತಕ್ಕಷ್ಟೇ ಸೀಮಿತವಾದ ಸಮಸ್ಯೆಯಲ್ಲ. ಜನಸಂಖ್ಯೆ > ಕಡಿಮೆಯಿದ್ದರೂ ತಲಾ ಪ್ಲಾಸ್ಟಿಕ್ ಬಳಕೆ ಹೆಚ್ಚಿರುವ ಅಮೆರಿಕ ಹಾಗೂ ಯುರೋಪ್ ದೇಶಗಳಲ್ಲಿ > ಇದು ಉಲ್ಬಣಗೊಳ್ಳುತ್ತಿರುವ ತೊಂದರೆಯಾಗಿದೆ. ಆಹಾರ ಪದಾರ್ಥಗಳು ಕೆಡಲು ಮುಖ್ಯ ಕಾರಣ > ವಾತಾವರಣದ ಆಮ್ಲಜನಕೊಂದಿಗಿನ ಅವುಗಳ ಸಂಯೋಗ. ಗಾಳಿ ಅದರಲ್ಲೂ ವಿಶೇಷವಾಗಿ ಆಮ್ಲಜನಕದೊಂದಿಗಿನ > ಸಂಪರ್ಕ ತಪ್ಪಿಸಲೆಂದೇ ಪ್ಲಾಸ್ಟಿಕ್ ಹಾಳೆ ಸೇರಿದಂತೆ ಅನೇಕ ಸಾಮಗ್ರಿಗಳ ಕವಚಗಳನ್ನು ಆಹಾರದ > ಮೇಲೆ ಹೊದಿಸಲಾಗುತ್ತದೆ. ಇವುಗಳ ಬದಲಾಗಿ ನಿರ್ಮಾಣಗೊಳ್ಳುವ ಯಾವುದೇ ಕವಚವು ಆಹಾರವನ್ನು > ಕೆಡದಂತೆ ಕಾಪಾಡಬೇಕು, ಕಾಲಾಂತರದಲ್ಲಿ ಪರಿಸರಕ್ಕೆ ತ್ಯಾಜ್ಯದ ಹೊರೆಯಾಗಬಾರದು, ಬಳಸಲು ಸುಲಭ > ಹಾಗೂ ತಯಾರಿಸಲು ಅಗ್ಗವಾಗಿರಬೇಕು. ಅಮೆರಿಕದ ಕೃಷಿ ಇಲಾಖೆಯ ವಿಜ್ಞಾನಿಗಳು ಆಹಾರ ಬಳಕೆಯ > ನಂತರ ಅದಕ್ಕೆ ಹೊದಿಸಿದ ಹಾಳೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ಕುರಿತು ಅನೇಕ > ಸಂಶೋಧನೆಗಳನ್ನು ನಡೆಸಿದ್ದಾರೆ. ಕಳೆದ ಗುರುವಾರ 'ಅಮೆರಿಕನ್ ಕೆಮಿಕಲ್ ಸೊಸೈಟಿ'ಯ > ವಾರ್ಷಿಕ ವಿಜ್ಞಾನ ಮೇಳದಲ್ಲಿ ಆ ವಿಜ್ಞಾನಿಗಳು ಮಂಡಿಸಿರುವ ಪ್ರೌಢ ಪ್ರಬಂಧ ಆಹಾರ ತಜ್ಞರ > ಗಮನ ಸೆಳೆದಿದೆ. ಅವರ ಸಂಶೋಧನೆಗಳ ಪ್ರಕಾರ ಪ್ರೊಟೀನ್-ಆಧರಿತ ತೆಳು ಹಾಳೆಗಳು ಆಮ್ಲಜನಕದ > ಪ್ರವೇಶವನ್ನು ಸಮರ್ಥವಾಗಿ ತಡೆಗಟ್ಟಬಲ್ಲವು. ಇದರಿಂದಾಗಿ ಪ್ರೊಟೀನ್-ಆಧರಿತ ಹಾಳೆಗಳೊಳಗೆ > ಅಡಕವಾಗಿರುವ ಆಹಾರ ಪದಾರ್ಥಗಳು ಹೆಚ್ಚು ಕಾಲ ಕೆಡಲಾರವು. ಈ ಸಂಶೋಧನಾ ತಂಡದ ನೇತೃತ್ವ > ವಹಿಸಿರುವ ಡಾ. ಪೆಗ್ಗಿ ಟೊಮಸುಲ ಅವರ ಪ್ರಕಾರ ಇಂಥ ತೆಳು ಹಾಳೆಗಳ ಬಳಕೆಯಿಂದ ಆಹಾರ ಸಂರಕ್ಷ > ಣೆಯಾಗುವುದರ ಜತೆಗೆ ಪೆಟ್ರೋಲಿಯಂ-ಆಧರಿತ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ > ಹಾಕಿದಂತಾಗುತ್ತದೆ. ಬಹುತೇಕ ಸ್ತನಿಗಳ ಹಾಲಿನಲ್ಲಿ ಲಭ್ಯವಿರುವ ಕೆಸೀನ್ ಎಂಬ ಪ್ರಮುಖ > ಪ್ರೊಟೀನ್ ಬಗ್ಗೆ ನೀವು ಕೇಳಿರಬಹುದು. ಆಕಳ ಹಾಲಿನ ಪ್ರತಿಶತ ಎಂಬತ್ತರಷ್ಟು ಭಾಗ ಈ > ಪ್ರೊಟೀನ್ ಅಂಶವಿರುತ್ತದೆ. ಮೊಲೆಯೂಡಿಸುವ ತಾಯಂದಿರ ಹಾಲಿನಲ್ಲಿ ಇದರ ಪ್ರಮಾಣ > ಇಪ್ಪತ್ತರಿಂದ ನಲವತ್ತೈದು ಪ್ರತಿಶತವಿರುತ್ತದೆ. ಆಕಳ ಹಾಲಿನ ಕೆಸೀನ್ ಅನ್ನು 'ಚೀಸ್' > ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ಕೆಲವೊಂದು ಆಹಾರಗಳಲ್ಲಿ ಪೌಷ್ಠಿಕಾಂಶದ ಸೇರ್ಪಡೆಗೂ > ಇದೇ ಪ್ರೊಟೀನ್ ಉಪಯುಕ್ತವಾಗಿದೆ. ಈ ಪ್ರೊಟೀನಿನ ಮುಖ್ಯ ಅಂಶಗಳೆಂದರೆ ಅಮೈನೊ ಆಮ್ಲಗಳು, > ಕಾರ್ಬೊಹೈಡ್ರೇಟ್‌ಗಳು, ಕ್ಯಾಲ್ಶಿಯಂ ಮತ್ತು ಪೊಟಾಶಿಯಂ. ಹೀಗಾಗಿ ಮಕ್ಕಳ ಬೆಳವಣಿಗೆಯಲ್ಲಿ > ಈ ಪ್ರೊಟೀನಿನ ಪಾತ್ರ ಮಹತ್ವದ್ದು. ವಿಶೇಷ ಸಂಗತಿಯೆಂದರೆ ಬಣ್ಣ ಮತ್ತು ಅಂಟುಗಳ > ತಯಾರಿಕೆಯಲ್ಲಿ ಯೂ ಈ ಪ್ರೊಟೀನನ್ನು ಬಹಳ ಬಳಸಲಾಗುತ್ತಿದೆ. ಕಲಾವಿದರು ಬಳಸುವ ನೀರಿನಲ್ಲಿ > ಕರಗುವ ಬಣ್ಣಗಳಲ್ಲಿ ಕೆಸೀನ್ ಸೇರಿಸಿದಲ್ಲಿ, ಬಣ್ಣದ ಬರಹ ಅಥವಾ ಲೇಪನ ಅತ್ಯಂತ ಶೀಘ್ರವಾಗಿ > ಒಣಗುತ್ತದೆ. ಅಕ್ರಿಲಿಕ್ ಹೊಳಪಿನ ಬಣ್ಣಗಳು ಬಳಕೆಗೆ ಬಂದಂತೆ ಕೆಸೀನ್ ಮಿಶ್ರಣದ ಬಣ್ಣಗಳ > ಉಪಯೋಗ ಕಡಿಮೆಯಾಯಿತು. ಆದರೆ ಮರಗೆಲಸದಲ್ಲಿ ಬಳಸುವ ಅಂಟಿನಲ್ಲಿ, ವಿಶೇಷವಾಗಿ > ಪ್ರಯೋಗಾಲಯಗಳಲ್ಲಿ ನಿರ್ಮಿಸುವ ವಿಮಾನ ಮಾದರಿಗಳ ಬಿಡಿಭಾಗಗಳ ಜೋಡಣೆಯ ಗೋಂದಿನಲ್ಲಿ ಕೇಸಿನ್ > ಪ್ರೊಟೀನಿನ ಉಪಯೋಗ ಹೆಚ್ಚು. ಅಷ್ಟೇಕೆ, ನಮ್ಮ ನಿತ್ಯ ಬಳಕೆಯ ಬೆಂಕಿ ಕಡ್ಡಿಗಳಲ್ಲಿ > ಮದ್ದಿನಂಶವನ್ನು ಕೂರಿಸುವಲ್ಲಿಯೂ ಕೇಸಿನ್ ನೆರವಾಗುತ್ತದೆ. ಬಹಳ ಹಿಂದೆ ಹಲ್ಲಿನ ರಿಪೇರಿ > ಕಾರ್ಯದಲ್ಲಿಯೂ ಇದೇ ಪ್ರೊಟೀನ್ ಅನ್ನು ಬಳಸಲಾಗುತ್ತಿತ್ತು. ಆರಂಭದ ದಿನಗಳ ಪ್ಲಾಸ್ಟಿಕ್ > ನೂಲುಗಳು ಮತ್ತು ಹಾಳೆಗಳ ತಯಾರಿಕೆಯಲ್ಲಿಯೂ ಇದರ ಉಪಯೋಗವಿತ್ತು. ಮತ್ತೆ, ನಮ್ಮ ಆಹಾರ > ಹೊದಿಕೆಯ ವಿಷಯಕ್ಕೆ ಬರುವುದಾದರೆ, ಡಾ. ಟೊಮಸುಲ ಅವರ ನೇತೃತ್ವದ ತಂಡವು ಹಾಲಿನ ಕೇಸಿನ್ > ಅನ್ನು ಬಳಸಿಕೊಂಡ ತೆಳು ಹಾಳೆಗಳ ಮೇಲೆ ಸುದೀರ್ಘ ಕಾಲದ ಪ್ರಯೋಗಗಳನ್ನು ನಡೆಸಿದೆ. ಸಾಮಾನ್ಯ > ಬಳಕೆಯ ಪ್ಲಾಸ್ಟಿಕ್ ತೆಳು ಹಾಳೆಗೊಳೊಂದಿಗಿನ ತುಲನಾತ್ಮಕ ಅಧ್ಯಯನದಲ್ಲಿ ಅದು ಕಂಡುಕೊಂಡ > ವಿಷಯವೇನೆಂದರೆ, ಆಮ್ಲಜನಕವನ್ನು ತಡೆಗಟ್ಟುವ ಸಾಮರ್ಥ್ಯದಲ್ಲಿ ಕೇಸಿನ್ ಹಾಳೆಗಳು ಐದು ನೂರು > ಪಟ್ಟು ಹೆಚ್ಚು ಉತ್ತಮ. ಹಾಲು ಮೂಲ ದ್ರವ್ಯವಾಗಿರುವುದರಿಂದ ಈ ಹಾಳೆಗಳು ಪರಿಸರದಲ್ಲಿ > ಸುಲಭವಾಗಿ ಲೀನವಾಗಬಲ್ಲವು. ಎಲ್ಲಕ್ಕೂ ಮಿಗಿಲಾಗಿ ಇವು ಖಾದ್ಯ ಪದಾರ್ಥಗಳಾಗಿರುವುದರಿಂದ, > ಬಿಸುಡುವ ಬದಲು ಇವನ್ನು ನೇರವಾಗಿ ತಿನ್ನಲೂಬಹುದು. ಸದ್ಯಕ್ಕೆ ಬಳಕೆಯಲ್ಲಿರುವ ತಿನ್ನಬಹುದಾದ > ಹೊದಿಕೆಗಳನ್ನು ಪಿಷ್ಟದಿಂದ ನಿರ್ಮಿಸಲಾಗುತ್ತಿದೆ. ಕೇಸಿನ್‌ಗೆ ಹೋಲಿಸಿದರೆ ಪಿಷ್ಟವು > ಹೆಚ್ಚು ಜಾಳು ಜಾಳಾಗಿರುತ್ತದೆ. ಅಂದರೆ ಪಿಷ್ಟದಿಂದ ತಯಾರಿಸಿದ ಹಾಳೆಯಲ್ಲಿನ ಸೂಕ್ಷ ್ಮ > ರಂಧ್ರಗಳು ಆಮ್ಲಜನಕದ ಹರಿದಾಟಕ್ಕೆ ಅನುವು ಮಾಡಿಕೊಡುತ್ತದೆ. ಆದರೆ, ಕೇಸಿನ್‌ನ ಹಾಳೆಯಲ್ಲಿ > ರಂಧ್ರಗಳ ಗಾತ್ರ ಅತ್ಯಂತ ಕಿರಿದಾಗಿರುವುದರಿಂದ ಆಮ್ಲಜನಕವು ಸುಲಭವಾಗಿ ಪ್ರವೇಶಿಸಲು > ಸಾಧ್ಯವಿಲ್ಲ. ಕೇಸಿನ್ ಬಳಸಿ ನಿರ್ಮಿಸಿದ ಹಾಳೆಗಳು ಮೊದಲ ಮಾದರಿ ಪರೀಕ್ಷೆಗಳಲ್ಲಿ ಸಾಕಷ್ಟು > ಸವಾಲುಗಳನ್ನು ಒಡ್ಡಿದ್ದವು. ಉದಾಹರಣೆಗೆ, ಆಮ್ಲಜನಕದ ಹರಿದಾಟಕ್ಕೆ ಅನುವು > ಮಾಡಿಕೊಡದಿದ್ದರೂ, ತೇವಾಂಶ ಹೆಚ್ಚಿದ್ದ ಕಡೆ ಅವು ಕರಗಿ ಹೋಗುತ್ತಿದ್ದವು. ಹೆಚ್ಚಿನ > ತಾಪಮಾನವನ್ನು ತಡೆದುಕೊಳ್ಳಲು ಅವುಗಳಿಗೆ ಆಗುತ್ತಿರಲಿಲ್ಲ. ಹಾಗೆಯೇ ತಿನ್ನಲು ಬಹಳ > ಗಟ್ಟಿಯಾಗಿರುತ್ತಿದ್ದವು. ಈ ನ್ಯೂನತೆಗಳನ್ನು ಮನಗಂಡ ವಿಜ್ಞಾನಿ ತಂಡವು, ಕೇಸಿನ್ > ಪ್ರೊಟೀನಿನ ಜತೆಗೆ ಕುಸುಮಭರಿತ ಫಲಗಳಲ್ಲಿ ಸಿಗುವಂಥ ಸಿಟ್ರಸ್ ಪೆಕ್ಟಿನ್ ಎಂಬ ಪ್ರೊಟೀನ್ > ಪೌಷ್ಟಿಕಾಂಶವನ್ನು ಸೂಕ್ತ ಪ್ರಮಾಣದಲ್ಲಿ ಬೆರೆಸಿ ಪರೀಕ್ಷೆಗಳನ್ನು ನಡೆಸಿತು. ಇಂಥ > ಸಮ್ಮಿಶ್ರ ಪದಾರ್ಥಗಳಿಂದ ನಿರ್ಮಿಸಿದ ಹಾಳೆಗಳು ಕೇಸಿನ್ ಹಾಳೆಗಳಿಗಿಂತಲೂ ಸದೃಢವಾಗಿದ್ದವು. > ಹಾಗೆಯೇ ವಾತಾವರಣದ ತೇವಾಂಶ, ಹೆಚ್ಚಿನ ತಾಪಮಾನವನ್ನು ತಾಳಿಕೊಳ್ಳುವ ಸಾಮರ್ಥ್ಯಗಳನ್ನೂ > ಹೊಂದಿದ್ದವು. ಈ ಫಲಿತಾಂಶಗಳಿಂದ ಉತ್ತೇಜಿತರಾದ ವಿಜ್ಞಾನಿಗಳು, ತೆಳು ಹಾಳೆಗಳಿಗೆ > ಮತ್ತಷ್ಟು ಮಾರ್ಪಾಡುಗಳನ್ನು ಮಾಡಿದರು. ಇದೀಗ ಡಾ. ಟೊಮಸುಲ ಅವರ ತಂಡವು ಮಾರುಕಟ್ಟೆಗೆ > ತರಲಿಚ್ಚಿಸಿರುವ ಹಾಳೆಗಳು ಥೇಟ್ ನಮ್ಮ ನಿತ್ಯ ಬಳಕೆಯ ಪ್ಲಾಸ್ಟಿಕ್ ಹಾಳೆಗಳಂತೆಯೇ > ತೋರುತ್ತವೆ. ಎಲಾಸ್ಟಿಕ್ ಗುಣಗಳು ಅಷ್ಟಿರದಿದ್ದರೂ, ಆಮ್ಲಜನಕದ ಪ್ರವೇಶವನ್ನು > ತಡೆಗಟ್ಟುವಲ್ಲಿ ಹೆಚ್ಚು ಸಮರ್ಥವಾಗಿವೆ. ಸಂಪೂರ್ಣವಾಗಿ ಪ್ರೊಟೀನುಗಳಿಂದಲೇ ಇವುಗಳನ್ನು > ತಯಾರಿಸಿರುವುದರಿಂದ ಮಕ್ಕಳೂ ಸಹಾ ಸುಲಭವಾಗಿ ಇವುಗಳನ್ನು ಜೀರ್ಣಿಸಿಕೊಳ್ಳಬಹುದು. ಈ ಬಗೆಯ > ಉತ್ಪನ್ನಕ್ಕೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಬೇಡಿಕೆಯಿರುವುದನ್ನು ಮನಗಂಡಿರುವ > ವಿಜ್ಞಾನಿಗಳ ತಂಡವು, ಅತಿ ಶೀಘ್ರದಲ್ಲಿಯೇ ತಂತ್ರಜ್ಞಾನ ವರ್ಗಾವಣೆಗೆ ಸಜ್ಜಾಗುತ್ತಿದೆ. > ಒಮ್ಮೆಲೆ ಸೇವಿಸಬಲ್ಲ ಆಹಾರ ಪೊಟ್ಟಣಗಳು ಅಂದರೆ ಒಬ್ಬರು ತಮ್ಮ ಮುಂಜಾನೆಯ ಉಪಾಹಾರಕ್ಕೆ > ಸೇವಿಸಬಲ್ಲಷ್ಟೇ ಪ್ರಮಾಣದ ಪೊಟ್ಟಣಗಳ ಮಾರುಕಟ್ಟೆ ದೊಡ್ಡದಾಗಿದೆ. ಈ ಬಗೆಯ ಹಾಳೆಗಳನ್ನು > ಪೊಟ್ಟಣಗಳ ತಯಾರಿಕೆಗೆ ಬಳಸುವುದರಿಂದ ಆಹಾರವು ಸೇವನೆಯ ಮುನ್ನ ಹೆಚ್ಚು ತಾಜಾ ಆಗಿರಬಲ್ಲದು. > ಕೇಸಿನ್ ಅನ್ನು ಹಾಳೆಗಳಾಗಿ ಪರಿವರ್ತಿಸುವ ಬದಲು ಸಿಂಚನದ ದ್ರವವನ್ನಾಗಿ ಬಳಸಬಹುದೆ? ಎಂಬ > ಪರಿಶೀಲನೆಯೂ ನಡೆಯುತ್ತಿದೆ. ಉದಾಹರಣೆಗೆ ಕಾರ್ನ್ ಫ್ಲೇಕ್ಸ್ ಸೇರಿದಂತೆ > ಸೀರಿಯಲ್‌ಗಳನ್ನು ಹಾಲಿನೊಂದಿಗೆ ಸೇವಿಸುವ ಪರಿಪಾಠ ಹೆಚ್ಚುತ್ತಿದೆಯಲ್ಲವೆ? ವಿವಿಧ ಸ್ವಾದದ > ಕಾರ್ನ್ ಫ್ಲೇಕ್ಸ್‌ಗಳನ್ನು ಗರಿಮುರಿಯಾಗಿಡಲು, ಅವುಗಳ ಮೇಲೆ ಸಕ್ಕರೆಯ ಲೇಪನ ಮಾಡುವ > ವಾಡಿಕೆಯಿದೆ. ಸಕ್ಕರೆಯನ್ನು ವರ್ಜಿಸುವವರಿಗಾಗಿ, ಕಾರ್ನ್ ಫ್ಲೇಕ್ಸ್ ತುಣಕುಗಳ ಮೇಲೆ > ಕೇಸಿನ್ ಸಿಂಚನ ಮಾಡುವ ಬಗ್ಗೆ ಪರಿಶೀಲನೆಗಳು ನಡೆಯುತ್ತಿವೆ. ಪೀಡ್ಝಾ ಸೇರಿದಂತೆ ಅನೇಕ > ಎಣ್ಣೆ-ಬೆಣ್ಣೆ-ತುಪ್ಪ-ಚೀಸ್ ಲೇಪಿತ ಆಹಾರಗಳ ಮೇಲೂ ಕೇಸಿನ್ ಅನ್ನು ಸಿಂಚನ ಮಾಡಬಹುದು. > ಅಮೆರಿಕದ ಆಹಾರ ಮತ್ತು ಔಷಧ ಪ್ರಾಧಿಕಾರವು ಇಂಥ ಆಹಾರಗಳಲ್ಲಿ ಸದ್ಯಕ್ಕೆ ಬಳಕೆಯಲ್ಲಿರುವ > ಪರ್-ಫ್ಲೋರಿನೇಶನ್ ಸಿಂಚನಕ್ಕೆ ನಿಷೇಧ ಹೇರಿದೆ. ಅತ್ಯಂತ ಸುರಕ್ಷ ಹಾಗೂ ಪರಿಸರಕ್ಕೆ > ಹಾನಿಯುಂಟು ಮಾಡದ ಜತೆಗೆ ಆಹಾರದೊಂದಿಗೇ ಸೇವಿಸಬಹುದಾದ ಕೇಸಿನ್ ಸಿಂಚನಕ್ಕೆ ಅನುಮೋದನೆ > ಸಿಗಬಹುದು. ಮುಂದಿನ ಮೂರು ವರ್ಷಗಳಲ್ಲಿ ಕೇಸಿನ್ ಹಾಳೆಗಳು ಮತ್ತು ಸಿಂಚನಗಳು ನಮ್ಮ ಊಟದ > ಮೇಜಿನ ಮೇಲೆ ರಾರಾಜಿಸುವ ನಿರೀಕ್ಷೆಯಿದೆ. > > Hareeshkumar K > GHS HUSKURU > MALAVALLI TQ > MANDYA DT > MOB 9880328224 > > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
