http://m.prajavani.net/article/2016_09_03/435591

*ಶಿಕ್ಷಕ ವೃತ್ತಿಗೆ ಬೇಕಿದೆ ಆಕರ್ಷಣೆ*

3 Sep, 2016

ಡಾ. ಎಚ್.ಬಿ.ಚಂದ್ರಶೇಖರ್

<https://www.facebook.com/sharer/sharer.php?u=http%3A%2F%2Fgoo.gl%2FuolGNc>
<https://twitter.com/intent/tweet?text=%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95+%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF%E0%B2%97%E0%B3%86+%E0%B2%AC%E0%B3%87%E0%B2%95%E0%B2%BF%E0%B2%A6%E0%B3%86+%E0%B2%86%E0%B2%95%E0%B2%B0%E0%B3%8D%E0%B2%B7%E0%B2%A3%E0%B3%86+http%3A%2F%2Fgoo.gl%2FuolGNc>
<whatsapp://send?text=%E0%B2%B5%E0%B3%87%E0%B2%A4%E0%B2%A8+%E0%B2%B9%E0%B2%BE%E0%B2%97%E0%B3%82+%E0%B2%B8%E0%B3%8C%E0%B2%B2%E0%B2%AD%E0%B3%8D%E0%B2%AF+%E0%B2%B9%E0%B3%86%E0%B2%9A%E0%B3%8D%E0%B2%9A%E0%B2%B3%E0%B2%A6+%E0%B2%A8%E0%B2%A1%E0%B3%81%E0%B2%B5%E0%B3%86%E0%B2%AF%E0%B3%82+%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95+%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF+%E0%B2%AC%E0%B2%B9%E0%B3%81%E0%B2%AA%E0%B2%BE%E0%B2%B2%E0%B3%81+%E0%B2%9C%E0%B2%A8%E0%B2%B0+%E0%B2%86%E0%B2%AF%E0%B3%8D%E0%B2%95%E0%B3%86%E0%B2%AF%E0%B2%BE%E0%B2%97%E0%B2%A6%E0%B2%BF%E0%B2%B0%E0%B3%81%E0%B2%B5%E0%B3%81%E0%B2%A6%E0%B2%B0+%E0%B2%95%E0%B2%BE%E0%B2%B0%E0%B2%A3%E0%B2%97%E0%B2%B3%E0%B2%A8%E0%B3%8D%E0%B2%A8%E0%B3%81+%E0%B2%AA%E0%B2%B0%E0%B2%BE%E0%B2%AE%E0%B2%B0%E0%B3%8D%E0%B2%B6%E0%B2%BF%E0%B2%B8%E0%B2%AC%E0%B3%87%E0%B2%95%E0%B2%BE%E0%B2%97%E0%B2%BF%E0%B2%A6%E0%B3%86.%0D%0Ahttp%3A%2F%2Fgoo.gl%2FuolGNc>
<https://plus.google.com/share?url=http%3A%2F%2Fgoo.gl%2FuolGNc>
<http://www.pinterest.com/pin/find/?url=http%3A%2F%2Fgoo.gl%2FuolGNc>
<http://www.linkedin.com/shareArticle?mini=true&title=%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95+%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF%E0%B2%97%E0%B3%86+%E0%B2%AC%E0%B3%87%E0%B2%95%E0%B2%BF%E0%B2%A6%E0%B3%86+%E0%B2%86%E0%B2%95%E0%B2%B0%E0%B3%8D%E0%B2%B7%E0%B2%A3%E0%B3%86+&url=http%3A%2F%2Fgoo.gl%2FuolGNc>

ಒಂದು ತರಗತಿಯಲ್ಲಿನ ಮಕ್ಕಳಿಗೆ ‘ನೀವು ಮುಂದೇನಾಗಬೇಕೆಂದು ಬಯಸುವಿರಿ’ ಎಂದು ಪ್ರಶ್ನಿಸಿದರೆ
ಹೆಚ್ಚಿನ ಮಕ್ಕಳ ಉತ್ತರ ಡಾಕ್ಟರ್, ಎಂಜಿನಿಯರ್, ಐಎಎಸ್ ಅಧಿಕಾರಿ ಎಂದಿದ್ದರೆ, ಎಲ್ಲೋ
ಒಬ್ಬಿಬ್ಬರು ಮಾತ್ರ ಶಿಕ್ಷಕರಾಗುತ್ತೇವೆ ಎನ್ನುತ್ತಾರೆ.

ಅದರಲ್ಲೂ ಗ್ರಾಮೀಣ ಪ್ರದೇಶದ ವಿವಿಧ ವೃತ್ತಿಗಳ ಪರಿಚಯವಿಲ್ಲದ ಹೆಚ್ಚಿನ ಮಕ್ಕಳ ಆಯ್ಕೆ
ಶಿಕ್ಷಕ ವೃತ್ತಿಯಾಗಿದ್ದರೆ, ವಿವಿಧ ವೃತ್ತಿಗಳ ಜ್ಞಾನವಿರುವ ಮಕ್ಕಳ ಆಯ್ಕೆ ಬೇರೆಯದೇ
ಆಗಿರುವ ಸಾಧ್ಯತೆಯಿರುತ್ತದೆ.

ಇನ್ನು ತಮ್ಮ ಮಕ್ಕಳು ಶಿಕ್ಷಕರಾಗಬೇಕೆಂದು ಬಯಸುವ ಪೋಷಕರ ಸಂಖ್ಯೆಯೂ ಹೆಚ್ಚಿಲ್ಲ. ಇದು
ಶಿಕ್ಷಕ ವೃತ್ತಿಯೆಡೆಗೆ ಇರುವ ಸಾಮಾಜಿಕ ಮನ್ನಣೆಯ ಪ್ರತಿಫಲನವಲ್ಲವೇ? ಮತ್ತೊಂದು ಶಿಕ್ಷಕ
ದಿನಾಚರಣೆಯ ವೇಳೆ ಶಿಕ್ಷಕ ವೃತ್ತಿಯ ಸ್ಥಾನ, ಗೌರವಗಳ ಕುರಿತು ಒಂದಷ್ಟು ಚಿಂತಿಸುವುದು
ಔಚಿತ್ಯಪೂರ್ಣವೆನಿಸುತ್ತದೆ.

ಕೊಠಾರಿ ಶಿಕ್ಷಣ ಆಯೋಗವು (1964) ‘ಶಿಕ್ಷಣದ ಗುಣಮಟ್ಟವನ್ನು ಪ್ರಭಾವಿಸುವ ಅನೇಕ ಅಂಶಗಳಲ್ಲಿ
ಶಿಕ್ಷಕರ ಗುಣಮಟ್ಟ, ಸಾಮರ್ಥ್ಯ ಮತ್ತು ಚಾರಿತ್ರ್ಯಗಳು ಸಂಶಯಾತೀತವಾಗಿ ಅತ್ಯಂತ
ಮಹತ್ವಪೂರ್ಣವಾಗಿವೆ’ ಎಂದಿದೆ.

ಈ ನಿಟ್ಟಿನಲ್ಲಿನ ಪ್ರಥಮ ಹೆಜ್ಜೆಯೆಂದರೆ ಅತ್ಯುತ್ತಮ ವಿದ್ಯಾರ್ಹತೆ ಹಾಗೂ ಅಗಾಧ
ಪ್ರತಿಭೆಯಿರುವವರನ್ನು ಶಿಕ್ಷಣ ಕ್ಷೇತ್ರವು ಸೆಳೆಯಬೇಕು. ಹೆಚ್ಚಿನ ವೇತನ ನೀಡಿಕೆಯಿಂದ
ಮಾತ್ರ ಪ್ರತಿಭಾವಂತರನ್ನು ಶಿಕ್ಷಣ ಕ್ಷೇತ್ರದೆಡೆಗೆ ಸೆಳೆಯಲು ಸಾಧ್ಯ ಎನ್ನಲಾಗದು.

ಜೊತೆಗೆ ಶಿಕ್ಷಕ ವೃತ್ತಿಯನ್ನು ಆಕರ್ಷಕ ಹಾಗೂ ಸಂತೃಪ್ತಿಯ ಉದ್ಯೋಗವನ್ನಾಗಿ
ಪರಿವರ್ತಿಸಿದಲ್ಲಿ ಮಾತ್ರ ಪ್ರತಿಭಾವಂತರು ಈ ಕ್ಷೇತ್ರದೆಡೆಗೆ ಆಕರ್ಷಿತರಾಗಬಹುದು.

ಶಿಕ್ಷಕ ವೃತ್ತಿಯ ಕುರಿತಾಗಿ ಇರುವ ಸ್ಥಾನ, ಗೌರವಗಳೇನು ಎಂಬ ಬಗ್ಗೆ 2013ರಲ್ಲಿ ವಿಶ್ವದ 21
ರಾಷ್ಟ್ರಗಳಲ್ಲಿ ನಡೆದ ಸಮೀಕ್ಷೆಯು ಕುತೂಹಲಕಾರಿಯಾಗಿದೆ.

ಪ್ರತಿಷ್ಠಿತ ಹುದ್ದೆಗಳಿಗೆ ಹೋಲಿಸಿದಲ್ಲಿ ಶಿಕ್ಷಕ ಹುದ್ದೆಗಿರುವ ಸ್ಥಾನ, ಶಿಕ್ಷಕರಿಗೆ
ನೀಡಬಹುದಾದ ವೇತನದ ಸ್ವರೂಪ, ತಮ್ಮ ಮಕ್ಕಳನ್ನು ಶಿಕ್ಷಕ ಹುದ್ದೆಗೆ ಕಳುಹಿಸಲು
ಇಚ್ಛಿಸಲಾಗುತ್ತದೆಯೇ ಇತ್ಯಾದಿಗಳ ಬಗ್ಗೆ ಆ ದೇಶಗಳ ನಾಗರಿಕರನ್ನು ಪ್ರಶ್ನಿಸಲಾಯಿತು.

ಚೀನಾ ಶಿಕ್ಷಕರಿಗೆ ಅತ್ಯುನ್ನತ ಸ್ಥಾನ ನೀಡಿದ್ದರೆ, ದಕ್ಷಿಣ ಕೊರಿಯಾ, ಈಜಿಪ್ಟ್, ಟರ್ಕಿ,
ಸಿಂಗಪುರಗಳು ನಂತರದ ಸ್ಥಾನದಲ್ಲಿವೆ. ಇಸ್ರೇಲ್, ಬ್ರೆಜಿಲ್ ಕೊನೆಯ ಸ್ಥಾನದಲ್ಲಿದ್ದರೆ,
ಇಂಗ್ಲೆಂಡ್, ಅಮೆರಿಕ ಮಧ್ಯದಲ್ಲಿವೆ. ಶಿಕ್ಷಣ ಕ್ಷೇತ್ರದಲ್ಲಿ ಅಗ್ರಗಣ್ಯ ರಾಷ್ಟ್ರ
ಫಿನ್ಲೆಂಡ್ 13ನೇ ಸ್ಥಾನದಲ್ಲಿದೆ. ಚೀನಾದ ಜನರು ಶಿಕ್ಷಕ ಹುದ್ದೆಯನ್ನು ವೈದ್ಯರ ಹುದ್ದೆಗೆ
ಸರಿಸಮನಾಗಿ ಪರಿಗಣಿಸುತ್ತಾರೆ.

ಚೀನಾ, ದಕ್ಷಿಣ ಕೊರಿಯಾ, ಈಜಿಪ್ಟ್, ಟರ್ಕಿ ದೇಶಗಳ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಕ
ಉದ್ಯೋಗಕ್ಕೆ ಕಳುಹಿಸಲು ಇಚ್ಛೆ ವ್ಯಕ್ತಪಡಿಸುತ್ತಾರೆ.

ಎಲ್ಲಾ ದೇಶಗಳ ಬಹುಪಾಲು ಜನರು ಶಿಕ್ಷಕ ವೃತ್ತಿಗೆ ಇನ್ನೂ ಹೆಚ್ಚಿನ ವೇತನ ನೀಡಬೇಕು ಹಾಗೂ
ನೀಡಬೇಕಾದ ವೇತನವು ಮಕ್ಕಳ ಕಲಿಕೆಯನ್ನು ಅವಲಂಬಿಸಿರಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ.
ನಮ್ಮ ದೇಶವು ಸಮೀಕ್ಷೆಯಲ್ಲಿ ಒಳಗೊಳ್ಳದಿದ್ದರೂ ಶಿಕ್ಷಕ ವೃತ್ತಿಯು ನಮ್ಮಲ್ಲಿ ಆದ್ಯತೆಯ
ವೃತ್ತಿಯೆನಿಸುವುದಿಲ್ಲ.

ಶಿಕ್ಷಕ ವೃತ್ತಿಯನ್ನು ಉನ್ನತ ಹಂತಕ್ಕೇರಿಸುವುದು ಹೇಗೆ? ನೂರಿನ್ನೂರು ವರ್ಷಗಳ ಹಿಂದೆ ಗುರು
ಸ್ಥಾನವನ್ನು ಪೂಜ್ಯವಾಗಿ ಪರಿಗಣಿಸಲಾಗಿತ್ತು. ಆಧುನಿಕ ಕಾಲದಲ್ಲಿ ಶಿಕ್ಷಕರ ವೇತನ ಹಾಗೂ
ಸೌಲಭ್ಯಗಳನ್ನು ಹೆಚ್ಚಿಸಿದಾಗ್ಯೂ ಶಿಕ್ಷಕ ವೃತ್ತಿಯು ಬಹುಪಾಲು ಜನರ ಆಯ್ಕೆಯಾಗದಿರಲು
ಕಾರಣಗಳೇನು ಎಂಬ ಬಗ್ಗೆ ಪರಾಮರ್ಶಿಸಬೇಕಾಗುತ್ತದೆ.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ವೇತನವು ಅತ್ಯುತ್ತಮವಿದ್ದಾಗ್ಯೂ ಸಮಾಜದಲ್ಲಿನ
ವೈದ್ಯ, ಎಂಜಿನಿಯರ್, ಐಎಎಸ್ ಹುದ್ದೆಗಳಂತೆ ಮೇಧಾವಿ ವಿದ್ಯಾರ್ಥಿಗಳ ನೆಚ್ಚಿನ ಆಯ್ಕೆ
ಶಿಕಕ್ಷ ಹುದ್ದೆಯಾಗಿಲ್ಲ.

ಇನ್ನು ಪ್ರಾಥಮಿಕ ಮತ್ತು ಪ್ರೌಢಹಂತದ ಶಿಕ್ಷಕ ಹುದ್ದೆಯನ್ನು ಪಡೆಯಲು ವಿಪರೀತ
ಬೇಡಿಕೆಯಿದ್ದರೂ ಶಿಕ್ಷಕರ ಶಿಕ್ಷಣದ ಕೋರ್ಸ್‌ಗಳನ್ನು ಪೂರೈಸಿದವರಲ್ಲಿ ವೈದ್ಯ,
ಎಂಜಿನಿಯರಿಂಗ್, ಸಿ.ಎ.ಗಳಂತಹ ಕೋರ್ಸ್‌ಗಳಿಗೆ ದಾಖಲಾತಿ ಸಿಗದವರೇ ಹೆಚ್ಚಿನ
ಪ್ರಮಾಣದಲ್ಲಿರುತ್ತಾರೆ.

ಶಿಕ್ಷಕರ ಶಿಕ್ಷಣದ ಕೋರ್ಸ್‌ಗೆ ಪ್ರತಿಭಾವಂತರನ್ನು ಆಯ್ಕೆ ಮಾಡುವ ಕ್ರಮ ಇದ್ದಾಗ್ಯೂ ಶಿಕ್ಷಕ
ವೃತ್ತಿಗೆ ಬೇಕಾದ ಸೆಳೆತ, ಪ್ರೀತಿಗಳು ಅವರಲ್ಲಿವೆಯೇ ಎಂಬುದನ್ನು ಕಂಡುಕೊಂಡು, ಅವರಿಗೆ
ಪ್ರವೇಶ ನೀಡುವ ಕ್ರಮ ರೂಢಿಯಲ್ಲಿಲ್ಲ.

ಈ ಕಾರಣದಿಂದ ಕೋರ್ಸ್ ಪೂರೈಸಿದ ಪ್ರತಿಭಾವಂತರು ಪರಿಣಾಮಕಾರಿ ಶಿಕ್ಷಕರಾಗಿ ಮಾರ್ಪಾಡಾಗದೆ
ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ.

ಉತ್ತಮ ಬೋಧಕರನ್ನು ರೂಪಿಸಲು ಇರುವ ವ್ಯವಸ್ಥೆಯು ಇನ್ನೂ ಸಾಕಷ್ಟು ಬಲಿಷ್ಠವಾಗದೇ ಇರುವುದು
ಸಹ ಪ್ರಮುಖ ತೊಡಕೆನ್ನಬಹುದು. ಪ್ರಸ್ತುತ ಶಿಕ್ಷಕರಿಗೆ ನೀಡುವ ತರಬೇತಿಗಳೇ ಅವರಿಗಿರುವ
ವೃತ್ತಿಪರ ಬೆಳವಣಿಗೆಯ ಪ್ರಮುಖ ವಿಧಾನವಾಗಿವೆ.

ಇದನ್ನು ಹೊರತುಪಡಿಸಿ, ಶಿಕ್ಷಕರು ಪಡೆಯುವ ಹೆಚ್ಚುವರಿ ವಿದ್ಯಾರ್ಹತೆ, ನಾವೀನ್ಯ, ಅವರ
ವೃತ್ತಿ ನೈಪುಣ್ಯಕ್ಕೆ ಮನ್ನಣೆ ಇಲ್ಲವೆಂದೇ ಹೇಳಬೇಕಾಗುತ್ತದೆ.

ಇನ್ನು ಶಿಕ್ಷಕರ ಸ್ಥಾನಮಾನ ಕುರಿತಂತೆ ಯುನೆಸ್ಕೊ 1966ರಲ್ಲಿ ಮಾಡಿರುವ ಶಿಫಾರಸುಗಳು ಈಗಲೂ
ಪ್ರಸ್ತುತವಿದ್ದು, ಅನುಷ್ಠಾನ ಯೋಗ್ಯವಾಗಿವೆ. ಶಿಕ್ಷಕ ಕ್ಷೇತ್ರ  ಪ್ರವೇಶಿಸುವವರಿಗೆ
ಇರಬೇಕಾದ ಅರ್ಹತೆ, ಶಿಕ್ಷಕರ ಕರ್ತವ್ಯ, ವೃತ್ತಿ ಬೆಳವಣಿಗೆಗೆ ಇರುವ ಅವಕಾಶ ಕುರಿತ
ಅತ್ಯುತ್ತಮ ಅಂಶಗಳು ಈ ಶಿಫಾರಸಿನಲ್ಲಿವೆ.

ಶಿಕ್ಷಕರು ಮೌಲ್ಯಯುತವಾದ ತಜ್ಞರಾದ ಕಾರಣ ಅವರ ಶ್ರಮ ಮತ್ತು ಸಮಯ ವ್ಯರ್ಥವಾಗದಂಥ ವ್ಯವಸ್ಥೆ
ರೂಪಿಸಬೇಕೆಂಬ ಮಹತ್ವದ ಅಂಶ ಇದೆ. ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ
ಉತ್ತಮ ವಸತಿ ವ್ಯವಸ್ಥೆ ಹಾಗೂ ವಿಶೇಷ ಭತ್ಯೆಗಳನ್ನು ನೀಡುವ ಪ್ರಸ್ತಾವವಿದೆ.

ಶಿಕ್ಷಕರ ಪರಿಣಾಮಕಾರಿ ಕಲಿಕೆಯನ್ನು ಉತ್ತೇಜಿಸಲು ಹಾಗೂ ಅವರು ವೃತ್ತಿಸಂಬಂಧಿ ಕಾರ್ಯಗಳಲ್ಲಿ
ಸಮರ್ಥವಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸುವ
ಪರಿಸರವಿರಬೇಕೆಂಬ ಪ್ರಮುಖ ಅಂಶವು ಈ ಶಿಫಾರಸಿನಲ್ಲಿರುವುದು ಗಮನಾರ್ಹ.

ಯುನೆಸ್ಕೊ ಶಿಫಾರಸಿನ ಬಹುಪಾಲು ಅಂಶಗಳು ನಮ್ಮ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಇಲ್ಲದಿರುವುದು
ಶಿಕ್ಷಕರ ಸ್ಥಾನದ ಕುಸಿತಕ್ಕೆ ಕಾರಣವೆನ್ನಬಹುದು.

ಶಿಕ್ಷಣ ಕ್ಷೇತ್ರದೆಡೆಗೆ ತುಡಿತ, ಆಕರ್ಷಣೆಗಳಿರುವ ಮೇಧಾವಿಗಳನ್ನು ಸೆಳೆದು, ಪರಿಣಾಮಕಾರಿ
ಶಿಕ್ಷಕರ ಶಿಕ್ಷಣ ರೂಪಿಸುವುದು ಅಗತ್ಯವಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭಗೊಂಡು
ಉನ್ನತ ಹಂತದವರೆಗೆ ಶಿಕ್ಷಕರ ವಿದ್ಯಾರ್ಹತೆ, ಪರಿಣತಿಯ ಮಟ್ಟವನ್ನು ಉನ್ನತೀಕರಿಸಿ ವೇತನ,
ಭತ್ಯೆ ಹಾಗೂ ಸೌಲಭ್ಯಗಳನ್ನು ಉತ್ತಮಪಡಿಸಬೇಕು.

ಶಿಕ್ಷಕರು ವೃತ್ತಿ ನೈಪುಣ್ಯ ಉತ್ತಮಪಡಿಸಿಕೊಳ್ಳಲು ಅಗತ್ಯವಾದ ಅನುಕೂಲಗಳನ್ನು ಕಲ್ಪಿಸಿ,
ಅವರು ವೃತ್ತಿಯಲ್ಲಿ ಪಡೆಯುವ ಪದವಿ, ಕೈಗೊಳ್ಳುವ ನಾವೀನ್ಯತೆಗಳಿಗೆ ಉತ್ತೇಜಕಗಳಿರುವುದರ
ಜೊತೆಗೆ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಫಲಿತಗಳ ಆಧಾರದ ಮೇಲೆ ವೇತನ, ಭತ್ಯೆ
ಪರಿಷ್ಕರಣೆಯಾಗುವ ಉತ್ತರದಾಯಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.

ಶಿಕ್ಷಕ ವೃತ್ತಿಸಂಬಂಧಿತ ಕಾರ್ಯಗಳನ್ನು ಹೊರತುಪಡಿಸಿ, ಇತರ ಕಾರ್ಯಗಳ ನಿರ್ವಹಣೆಗೆ ಪರ್ಯಾಯ
ವ್ಯವಸ್ಥೆ ಕೈಗೊಳ್ಳಬೇಕು.

Hareeshkumar K
GHS HUSKURU
MALAVALLI TQ
MANDYA DT
MOB 9880328224

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to