let me know  how many of us work promptly . our supervision by higher
outhority is not up to the mark

2016-09-03 21:34 GMT+05:30 HAREESHKUMAR K Agasanapura <[email protected]
>:

> http://m.prajavani.net/article/2016_09_03/435591
>
> *ಶಿಕ್ಷಕ ವೃತ್ತಿಗೆ ಬೇಕಿದೆ ಆಕರ್ಷಣೆ*
>
> 3 Sep, 2016
>
> ಡಾ. ಎಚ್.ಬಿ.ಚಂದ್ರಶೇಖರ್
>
> <https://www.facebook.com/sharer/sharer.php?u=http%3A%2F%2Fgoo.gl%2FuolGNc>
> <https://twitter.com/intent/tweet?text=%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95+%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF%E0%B2%97%E0%B3%86+%E0%B2%AC%E0%B3%87%E0%B2%95%E0%B2%BF%E0%B2%A6%E0%B3%86+%E0%B2%86%E0%B2%95%E0%B2%B0%E0%B3%8D%E0%B2%B7%E0%B2%A3%E0%B3%86+http%3A%2F%2Fgoo.gl%2FuolGNc>
> <https://plus.google.com/share?url=http%3A%2F%2Fgoo.gl%2FuolGNc>
> <http://www.pinterest.com/pin/find/?url=http%3A%2F%2Fgoo.gl%2FuolGNc>
> <http://www.linkedin.com/shareArticle?mini=true&title=%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95+%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF%E0%B2%97%E0%B3%86+%E0%B2%AC%E0%B3%87%E0%B2%95%E0%B2%BF%E0%B2%A6%E0%B3%86+%E0%B2%86%E0%B2%95%E0%B2%B0%E0%B3%8D%E0%B2%B7%E0%B2%A3%E0%B3%86+&url=http%3A%2F%2Fgoo.gl%2FuolGNc>
>
> ಒಂದು ತರಗತಿಯಲ್ಲಿನ ಮಕ್ಕಳಿಗೆ ‘ನೀವು ಮುಂದೇನಾಗಬೇಕೆಂದು ಬಯಸುವಿರಿ’ ಎಂದು
> ಪ್ರಶ್ನಿಸಿದರೆ ಹೆಚ್ಚಿನ ಮಕ್ಕಳ ಉತ್ತರ ಡಾಕ್ಟರ್, ಎಂಜಿನಿಯರ್, ಐಎಎಸ್ ಅಧಿಕಾರಿ
> ಎಂದಿದ್ದರೆ, ಎಲ್ಲೋ ಒಬ್ಬಿಬ್ಬರು ಮಾತ್ರ ಶಿಕ್ಷಕರಾಗುತ್ತೇವೆ ಎನ್ನುತ್ತಾರೆ.
>
> ಅದರಲ್ಲೂ ಗ್ರಾಮೀಣ ಪ್ರದೇಶದ ವಿವಿಧ ವೃತ್ತಿಗಳ ಪರಿಚಯವಿಲ್ಲದ ಹೆಚ್ಚಿನ ಮಕ್ಕಳ ಆಯ್ಕೆ
> ಶಿಕ್ಷಕ ವೃತ್ತಿಯಾಗಿದ್ದರೆ, ವಿವಿಧ ವೃತ್ತಿಗಳ ಜ್ಞಾನವಿರುವ ಮಕ್ಕಳ ಆಯ್ಕೆ ಬೇರೆಯದೇ
> ಆಗಿರುವ ಸಾಧ್ಯತೆಯಿರುತ್ತದೆ.
>
> ಇನ್ನು ತಮ್ಮ ಮಕ್ಕಳು ಶಿಕ್ಷಕರಾಗಬೇಕೆಂದು ಬಯಸುವ ಪೋಷಕರ ಸಂಖ್ಯೆಯೂ ಹೆಚ್ಚಿಲ್ಲ. ಇದು
> ಶಿಕ್ಷಕ ವೃತ್ತಿಯೆಡೆಗೆ ಇರುವ ಸಾಮಾಜಿಕ ಮನ್ನಣೆಯ ಪ್ರತಿಫಲನವಲ್ಲವೇ? ಮತ್ತೊಂದು ಶಿಕ್ಷಕ
> ದಿನಾಚರಣೆಯ ವೇಳೆ ಶಿಕ್ಷಕ ವೃತ್ತಿಯ ಸ್ಥಾನ, ಗೌರವಗಳ ಕುರಿತು ಒಂದಷ್ಟು ಚಿಂತಿಸುವುದು
> ಔಚಿತ್ಯಪೂರ್ಣವೆನಿಸುತ್ತದೆ.
>
> ಕೊಠಾರಿ ಶಿಕ್ಷಣ ಆಯೋಗವು (1964) ‘ಶಿಕ್ಷಣದ ಗುಣಮಟ್ಟವನ್ನು ಪ್ರಭಾವಿಸುವ ಅನೇಕ
> ಅಂಶಗಳಲ್ಲಿ ಶಿಕ್ಷಕರ ಗುಣಮಟ್ಟ, ಸಾಮರ್ಥ್ಯ ಮತ್ತು ಚಾರಿತ್ರ್ಯಗಳು ಸಂಶಯಾತೀತವಾಗಿ ಅತ್ಯಂತ
> ಮಹತ್ವಪೂರ್ಣವಾಗಿವೆ’ ಎಂದಿದೆ.
>
> ಈ ನಿಟ್ಟಿನಲ್ಲಿನ ಪ್ರಥಮ ಹೆಜ್ಜೆಯೆಂದರೆ ಅತ್ಯುತ್ತಮ ವಿದ್ಯಾರ್ಹತೆ ಹಾಗೂ ಅಗಾಧ
> ಪ್ರತಿಭೆಯಿರುವವರನ್ನು ಶಿಕ್ಷಣ ಕ್ಷೇತ್ರವು ಸೆಳೆಯಬೇಕು. ಹೆಚ್ಚಿನ ವೇತನ ನೀಡಿಕೆಯಿಂದ
> ಮಾತ್ರ ಪ್ರತಿಭಾವಂತರನ್ನು ಶಿಕ್ಷಣ ಕ್ಷೇತ್ರದೆಡೆಗೆ ಸೆಳೆಯಲು ಸಾಧ್ಯ ಎನ್ನಲಾಗದು.
>
> ಜೊತೆಗೆ ಶಿಕ್ಷಕ ವೃತ್ತಿಯನ್ನು ಆಕರ್ಷಕ ಹಾಗೂ ಸಂತೃಪ್ತಿಯ ಉದ್ಯೋಗವನ್ನಾಗಿ
> ಪರಿವರ್ತಿಸಿದಲ್ಲಿ ಮಾತ್ರ ಪ್ರತಿಭಾವಂತರು ಈ ಕ್ಷೇತ್ರದೆಡೆಗೆ ಆಕರ್ಷಿತರಾಗಬಹುದು.
>
> ಶಿಕ್ಷಕ ವೃತ್ತಿಯ ಕುರಿತಾಗಿ ಇರುವ ಸ್ಥಾನ, ಗೌರವಗಳೇನು ಎಂಬ ಬಗ್ಗೆ 2013ರಲ್ಲಿ ವಿಶ್ವದ
> 21 ರಾಷ್ಟ್ರಗಳಲ್ಲಿ ನಡೆದ ಸಮೀಕ್ಷೆಯು ಕುತೂಹಲಕಾರಿಯಾಗಿದೆ.
>
> ಪ್ರತಿಷ್ಠಿತ ಹುದ್ದೆಗಳಿಗೆ ಹೋಲಿಸಿದಲ್ಲಿ ಶಿಕ್ಷಕ ಹುದ್ದೆಗಿರುವ ಸ್ಥಾನ, ಶಿಕ್ಷಕರಿಗೆ
> ನೀಡಬಹುದಾದ ವೇತನದ ಸ್ವರೂಪ, ತಮ್ಮ ಮಕ್ಕಳನ್ನು ಶಿಕ್ಷಕ ಹುದ್ದೆಗೆ ಕಳುಹಿಸಲು
> ಇಚ್ಛಿಸಲಾಗುತ್ತದೆಯೇ ಇತ್ಯಾದಿಗಳ ಬಗ್ಗೆ ಆ ದೇಶಗಳ ನಾಗರಿಕರನ್ನು ಪ್ರಶ್ನಿಸಲಾಯಿತು.
>
> ಚೀನಾ ಶಿಕ್ಷಕರಿಗೆ ಅತ್ಯುನ್ನತ ಸ್ಥಾನ ನೀಡಿದ್ದರೆ, ದಕ್ಷಿಣ ಕೊರಿಯಾ, ಈಜಿಪ್ಟ್, ಟರ್ಕಿ,
> ಸಿಂಗಪುರಗಳು ನಂತರದ ಸ್ಥಾನದಲ್ಲಿವೆ. ಇಸ್ರೇಲ್, ಬ್ರೆಜಿಲ್ ಕೊನೆಯ ಸ್ಥಾನದಲ್ಲಿದ್ದರೆ,
> ಇಂಗ್ಲೆಂಡ್, ಅಮೆರಿಕ ಮಧ್ಯದಲ್ಲಿವೆ. ಶಿಕ್ಷಣ ಕ್ಷೇತ್ರದಲ್ಲಿ ಅಗ್ರಗಣ್ಯ ರಾಷ್ಟ್ರ
> ಫಿನ್ಲೆಂಡ್ 13ನೇ ಸ್ಥಾನದಲ್ಲಿದೆ. ಚೀನಾದ ಜನರು ಶಿಕ್ಷಕ ಹುದ್ದೆಯನ್ನು ವೈದ್ಯರ ಹುದ್ದೆಗೆ
> ಸರಿಸಮನಾಗಿ ಪರಿಗಣಿಸುತ್ತಾರೆ.
>
> ಚೀನಾ, ದಕ್ಷಿಣ ಕೊರಿಯಾ, ಈಜಿಪ್ಟ್, ಟರ್ಕಿ ದೇಶಗಳ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಕ
> ಉದ್ಯೋಗಕ್ಕೆ ಕಳುಹಿಸಲು ಇಚ್ಛೆ ವ್ಯಕ್ತಪಡಿಸುತ್ತಾರೆ.
>
> ಎಲ್ಲಾ ದೇಶಗಳ ಬಹುಪಾಲು ಜನರು ಶಿಕ್ಷಕ ವೃತ್ತಿಗೆ ಇನ್ನೂ ಹೆಚ್ಚಿನ ವೇತನ ನೀಡಬೇಕು ಹಾಗೂ
> ನೀಡಬೇಕಾದ ವೇತನವು ಮಕ್ಕಳ ಕಲಿಕೆಯನ್ನು ಅವಲಂಬಿಸಿರಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ.
> ನಮ್ಮ ದೇಶವು ಸಮೀಕ್ಷೆಯಲ್ಲಿ ಒಳಗೊಳ್ಳದಿದ್ದರೂ ಶಿಕ್ಷಕ ವೃತ್ತಿಯು ನಮ್ಮಲ್ಲಿ ಆದ್ಯತೆಯ
> ವೃತ್ತಿಯೆನಿಸುವುದಿಲ್ಲ.
>
> ಶಿಕ್ಷಕ ವೃತ್ತಿಯನ್ನು ಉನ್ನತ ಹಂತಕ್ಕೇರಿಸುವುದು ಹೇಗೆ? ನೂರಿನ್ನೂರು ವರ್ಷಗಳ ಹಿಂದೆ
> ಗುರು ಸ್ಥಾನವನ್ನು ಪೂಜ್ಯವಾಗಿ ಪರಿಗಣಿಸಲಾಗಿತ್ತು. ಆಧುನಿಕ ಕಾಲದಲ್ಲಿ ಶಿಕ್ಷಕರ ವೇತನ
> ಹಾಗೂ ಸೌಲಭ್ಯಗಳನ್ನು ಹೆಚ್ಚಿಸಿದಾಗ್ಯೂ ಶಿಕ್ಷಕ ವೃತ್ತಿಯು ಬಹುಪಾಲು ಜನರ ಆಯ್ಕೆಯಾಗದಿರಲು
> ಕಾರಣಗಳೇನು ಎಂಬ ಬಗ್ಗೆ ಪರಾಮರ್ಶಿಸಬೇಕಾಗುತ್ತದೆ.
>
> ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ವೇತನವು ಅತ್ಯುತ್ತಮವಿದ್ದಾಗ್ಯೂ ಸಮಾಜದಲ್ಲಿನ
> ವೈದ್ಯ, ಎಂಜಿನಿಯರ್, ಐಎಎಸ್ ಹುದ್ದೆಗಳಂತೆ ಮೇಧಾವಿ ವಿದ್ಯಾರ್ಥಿಗಳ ನೆಚ್ಚಿನ ಆಯ್ಕೆ
> ಶಿಕಕ್ಷ ಹುದ್ದೆಯಾಗಿಲ್ಲ.
>
> ಇನ್ನು ಪ್ರಾಥಮಿಕ ಮತ್ತು ಪ್ರೌಢಹಂತದ ಶಿಕ್ಷಕ ಹುದ್ದೆಯನ್ನು ಪಡೆಯಲು ವಿಪರೀತ
> ಬೇಡಿಕೆಯಿದ್ದರೂ ಶಿಕ್ಷಕರ ಶಿಕ್ಷಣದ ಕೋರ್ಸ್‌ಗಳನ್ನು ಪೂರೈಸಿದವರಲ್ಲಿ ವೈದ್ಯ,
> ಎಂಜಿನಿಯರಿಂಗ್, ಸಿ.ಎ.ಗಳಂತಹ ಕೋರ್ಸ್‌ಗಳಿಗೆ ದಾಖಲಾತಿ ಸಿಗದವರೇ ಹೆಚ್ಚಿನ
> ಪ್ರಮಾಣದಲ್ಲಿರುತ್ತಾರೆ.
>
> ಶಿಕ್ಷಕರ ಶಿಕ್ಷಣದ ಕೋರ್ಸ್‌ಗೆ ಪ್ರತಿಭಾವಂತರನ್ನು ಆಯ್ಕೆ ಮಾಡುವ ಕ್ರಮ ಇದ್ದಾಗ್ಯೂ
> ಶಿಕ್ಷಕ ವೃತ್ತಿಗೆ ಬೇಕಾದ ಸೆಳೆತ, ಪ್ರೀತಿಗಳು ಅವರಲ್ಲಿವೆಯೇ ಎಂಬುದನ್ನು ಕಂಡುಕೊಂಡು,
> ಅವರಿಗೆ ಪ್ರವೇಶ ನೀಡುವ ಕ್ರಮ ರೂಢಿಯಲ್ಲಿಲ್ಲ.
>
> ಈ ಕಾರಣದಿಂದ ಕೋರ್ಸ್ ಪೂರೈಸಿದ ಪ್ರತಿಭಾವಂತರು ಪರಿಣಾಮಕಾರಿ ಶಿಕ್ಷಕರಾಗಿ ಮಾರ್ಪಾಡಾಗದೆ
> ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ.
>
> ಉತ್ತಮ ಬೋಧಕರನ್ನು ರೂಪಿಸಲು ಇರುವ ವ್ಯವಸ್ಥೆಯು ಇನ್ನೂ ಸಾಕಷ್ಟು ಬಲಿಷ್ಠವಾಗದೇ ಇರುವುದು
> ಸಹ ಪ್ರಮುಖ ತೊಡಕೆನ್ನಬಹುದು. ಪ್ರಸ್ತುತ ಶಿಕ್ಷಕರಿಗೆ ನೀಡುವ ತರಬೇತಿಗಳೇ ಅವರಿಗಿರುವ
> ವೃತ್ತಿಪರ ಬೆಳವಣಿಗೆಯ ಪ್ರಮುಖ ವಿಧಾನವಾಗಿವೆ.
>
> ಇದನ್ನು ಹೊರತುಪಡಿಸಿ, ಶಿಕ್ಷಕರು ಪಡೆಯುವ ಹೆಚ್ಚುವರಿ ವಿದ್ಯಾರ್ಹತೆ, ನಾವೀನ್ಯ, ಅವರ
> ವೃತ್ತಿ ನೈಪುಣ್ಯಕ್ಕೆ ಮನ್ನಣೆ ಇಲ್ಲವೆಂದೇ ಹೇಳಬೇಕಾಗುತ್ತದೆ.
>
> ಇನ್ನು ಶಿಕ್ಷಕರ ಸ್ಥಾನಮಾನ ಕುರಿತಂತೆ ಯುನೆಸ್ಕೊ 1966ರಲ್ಲಿ ಮಾಡಿರುವ ಶಿಫಾರಸುಗಳು ಈಗಲೂ
> ಪ್ರಸ್ತುತವಿದ್ದು, ಅನುಷ್ಠಾನ ಯೋಗ್ಯವಾಗಿವೆ. ಶಿಕ್ಷಕ ಕ್ಷೇತ್ರ  ಪ್ರವೇಶಿಸುವವರಿಗೆ
> ಇರಬೇಕಾದ ಅರ್ಹತೆ, ಶಿಕ್ಷಕರ ಕರ್ತವ್ಯ, ವೃತ್ತಿ ಬೆಳವಣಿಗೆಗೆ ಇರುವ ಅವಕಾಶ ಕುರಿತ
> ಅತ್ಯುತ್ತಮ ಅಂಶಗಳು ಈ ಶಿಫಾರಸಿನಲ್ಲಿವೆ.
>
> ಶಿಕ್ಷಕರು ಮೌಲ್ಯಯುತವಾದ ತಜ್ಞರಾದ ಕಾರಣ ಅವರ ಶ್ರಮ ಮತ್ತು ಸಮಯ ವ್ಯರ್ಥವಾಗದಂಥ ವ್ಯವಸ್ಥೆ
> ರೂಪಿಸಬೇಕೆಂಬ ಮಹತ್ವದ ಅಂಶ ಇದೆ. ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ
> ಉತ್ತಮ ವಸತಿ ವ್ಯವಸ್ಥೆ ಹಾಗೂ ವಿಶೇಷ ಭತ್ಯೆಗಳನ್ನು ನೀಡುವ ಪ್ರಸ್ತಾವವಿದೆ.
>
> ಶಿಕ್ಷಕರ ಪರಿಣಾಮಕಾರಿ ಕಲಿಕೆಯನ್ನು ಉತ್ತೇಜಿಸಲು ಹಾಗೂ ಅವರು ವೃತ್ತಿಸಂಬಂಧಿ
> ಕಾರ್ಯಗಳಲ್ಲಿ ಸಮರ್ಥವಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಶಿಕ್ಷಕರು ಕಾರ್ಯ
> ನಿರ್ವಹಿಸುವ ಪರಿಸರವಿರಬೇಕೆಂಬ ಪ್ರಮುಖ ಅಂಶವು ಈ ಶಿಫಾರಸಿನಲ್ಲಿರುವುದು ಗಮನಾರ್ಹ.
>
> ಯುನೆಸ್ಕೊ ಶಿಫಾರಸಿನ ಬಹುಪಾಲು ಅಂಶಗಳು ನಮ್ಮ ದೇಶದ ಶಿಕ್ಷಣ ಕ್ಷೇತ್ರದಲ್ಲಿ
> ಇಲ್ಲದಿರುವುದು ಶಿಕ್ಷಕರ ಸ್ಥಾನದ ಕುಸಿತಕ್ಕೆ ಕಾರಣವೆನ್ನಬಹುದು.
>
> ಶಿಕ್ಷಣ ಕ್ಷೇತ್ರದೆಡೆಗೆ ತುಡಿತ, ಆಕರ್ಷಣೆಗಳಿರುವ ಮೇಧಾವಿಗಳನ್ನು ಸೆಳೆದು, ಪರಿಣಾಮಕಾರಿ
> ಶಿಕ್ಷಕರ ಶಿಕ್ಷಣ ರೂಪಿಸುವುದು ಅಗತ್ಯವಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭಗೊಂಡು
> ಉನ್ನತ ಹಂತದವರೆಗೆ ಶಿಕ್ಷಕರ ವಿದ್ಯಾರ್ಹತೆ, ಪರಿಣತಿಯ ಮಟ್ಟವನ್ನು ಉನ್ನತೀಕರಿಸಿ ವೇತನ,
> ಭತ್ಯೆ ಹಾಗೂ ಸೌಲಭ್ಯಗಳನ್ನು ಉತ್ತಮಪಡಿಸಬೇಕು.
>
> ಶಿಕ್ಷಕರು ವೃತ್ತಿ ನೈಪುಣ್ಯ ಉತ್ತಮಪಡಿಸಿಕೊಳ್ಳಲು ಅಗತ್ಯವಾದ ಅನುಕೂಲಗಳನ್ನು ಕಲ್ಪಿಸಿ,
> ಅವರು ವೃತ್ತಿಯಲ್ಲಿ ಪಡೆಯುವ ಪದವಿ, ಕೈಗೊಳ್ಳುವ ನಾವೀನ್ಯತೆಗಳಿಗೆ ಉತ್ತೇಜಕಗಳಿರುವುದರ
> ಜೊತೆಗೆ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಫಲಿತಗಳ ಆಧಾರದ ಮೇಲೆ ವೇತನ, ಭತ್ಯೆ
> ಪರಿಷ್ಕರಣೆಯಾಗುವ ಉತ್ತರದಾಯಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
>
> ಶಿಕ್ಷಕ ವೃತ್ತಿಸಂಬಂಧಿತ ಕಾರ್ಯಗಳನ್ನು ಹೊರತುಪಡಿಸಿ, ಇತರ ಕಾರ್ಯಗಳ ನಿರ್ವಹಣೆಗೆ ಪರ್ಯಾಯ
> ವ್ಯವಸ್ಥೆ ಕೈಗೊಳ್ಳಬೇಕು.
>
> Hareeshkumar K
> GHS HUSKURU
> MALAVALLI TQ
> MANDYA DT
> MOB 9880328224
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>



-- 
chidambara swamy .m
Asst master
GPC [high school section]
Devarakotta
Hiriyur taluk
Chitradurga  dist -577546

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to