ಅತಿ ಕಡಿಮೆ ಬೆಲೆಯ, ಕೀ ಬೋರ್ಡ್ ಇರುವ, ಎಲ್ಲಾ ಲಕ್ಷಣಗಳಿರುವ ಟ್ಯಾಬ್ ಯಾವುದು ತಿಳಿಸಿರಿ
ಪ್ಲೀಸ್

On Sep 6, 2016 11:40 AM, "HAREESHKUMAR K Agasanapura" <[email protected]>
wrote:

> http://www.ejnana.com/2016/09/blog-post.html?m=1
>
> *ಗ್ಯಾಜೆಟ್ ಜಗತ್ತಿಗೂ ಬಂದ ಟೂ-ಇನ್-ಒನ್*
>
> *ಟಿ. ಜಿ. ಶ್ರೀನಿಧಿ*
>
>
> <https://4.bp.blogspot.com/-dTczKCC5JG4/V810cFh_BhI/AAAAAAAAfcg/bNy-cj3P7QEIFFDMMFyc8K8acfCLDx8CgCLcB/s1600/1-P_20160728_142547.jpg>
>
> ಹಿಂದಿನ ಕಾಲದಲ್ಲಿ ರೇಡಿಯೋ ಪ್ರತಿಷ್ಠೆಯ ಸಂಕೇತವಾಗಿತ್ತಂತೆ. ಇಷ್ಟು ದೊಡ್ಡ ರೇಡಿಯೋ
> ಮನೆಯಲ್ಲಿದೆ ಎನ್ನುವುದೇ ಅಂದಿನ ಮಟ್ಟಿಗೆ ವಿಶೇಷವಾದ ಸಂಗತಿಯಾಗಿದ್ದಿರಬೇಕು.
>
> ಆಮೇಲೆ ಯಾವಾಗಲೋ ಟೇಪ್ ರೆಕಾರ್ಡರ್ ಮಾರುಕಟ್ಟೆಗೆ ಬಂತು. ಅದರೊಡನೆ ರೇಡಿಯೋ
> ಸ್ಟೇಶನ್ನಿನವರು ಪ್ರಸಾರ ಮಾಡುವ ಹಾಡನ್ನಷ್ಟೇ ಕೇಳಬೇಕಾದ ಅನಿವಾರ್ಯತೆಯೂ ಹೋಯಿತು;
> ನಮಗಿಷ್ಟವಾದ ಹಾಡನ್ನು ಬೇಕಾದಾಗ ಬೇಕಾದಷ್ಟು ಸಲ ಕೇಳುವುದು ಸಾಧ್ಯವಾಯಿತು.
>
> ರೇಡಿಯೋ ಜೊತೆಗೆ ಈ ಹೊಸ ಸಾಧನವನ್ನೂ ಮನೆಯಲ್ಲಿಟ್ಟುಕೊಳ್ಳುವುದು ಒಂದಷ್ಟು ದಿನದ ಮಟ್ಟಿಗೆ
> ಫ್ಯಾಶನಬಲ್ ಅನಿಸಿತೇನೋ ಸರಿ; ಆದರೆ ಕೊಂಚ ಸಮಯದ ನಂತರ ಎರಡೆರಡು ಪೆಟ್ಟಿಗೆಗಳೇಕಿರಬೇಕು
> ಎನ್ನುವ ಯೋಚನೆ ಶುರುವಾಯಿತು. ಆಗ ಬಂದದ್ದು ರೇಡಿಯೋ ಸೌಲಭ್ಯವೂ ಇರುವ ಟೇಪ್‌ರೆಕಾರ್ಡರ್,
> ಅರ್ಥಾತ್ 'ಟೂ-ಇನ್-ಒನ್'.
>
> ಗ್ಯಾಜೆಟ್ ಜಗತ್ತಿನ ಸದ್ಯದ ಪರಿಸ್ಥಿತಿಯೂ ಹೆಚ್ಚೂಕಡಿಮೆ ಹೀಗೆಯೇ ಇದೆ. ನಮ್ಮ ಬಹಳಷ್ಟು
> ಕೆಲಸಗಳು ಇದೀಗ ಮೊಬೈಲ್ ಮೂಲಕವೇ ಆಗುತ್ತಿವೆ. ಮೊಬೈಲಿಗಿಂತ ಕೊಂಚ ದೊಡ್ಡ ಪರದೆ ಬೇಕಾದರೆ
> ಟ್ಯಾಬ್ಲೆಟ್ ಇದೆ. ಒಟ್ಟಿನಲ್ಲಿ ಟಚ್‌ಸ್ಕ್ರೀನ್ ಸಾಧನಗಳಿಗೆ ನಾವು ಚೆನ್ನಾಗಿಯೇ
> ಒಗ್ಗಿಕೊಂಡಿದ್ದೇವೆ. ವಾಟ್ಸಾಪ್‌ನಲ್ಲಿ ಟೈಪಿಸಲಿಕ್ಕೆ, ಬ್ರೌಸಿಂಗ್ ಮಾಡಲಿಕ್ಕೆಲ್ಲ
> ಸ್ಮಾರ್ಟ್‌ಫೋನ್ ಉಪಯೋಗ ನಮಗೆ ಬಹಳ ಸಲೀಸು. ಸೋಫಾಗೆ ಒರಗಿಕೊಂಡೋ ಮಂಚದ ಮೇಲೆ ಮಲಗಿಕೊಂಡೋ
> ಯೂಟ್ಯೂಬ್ ನೋಡುವುದಕ್ಕೆ-ಕತೆಪುಸ್ತಕ ಓದುವುದಕ್ಕೂ ಸರಿಯೇ, ಟ್ಯಾಬ್ಲೆಟ್ಟುಗಳು ಹೇಳಿ
> ಮಾಡಿಸಿದ ಜೋಡಿ. ಪ್ರತ್ಯೇಕ ಟ್ಯಾಬ್ಲೆಟ್ ಇಲ್ಲದಿದ್ದರೂ ಪರವಾಗಿಲ್ಲ, ದೊಡ್ಡ ಪರದೆಯ
> ಫೋನುಗಳೇ ಇವೆಯಲ್ಲ!
>
> ಆದರೆ ಉದ್ದನೆಯದೊಂದು ಇಮೇಲ್ ಬರೆಯಬೇಕೆಂದೋ, ಆಫೀಸಿನ ಕಡತಗಳನ್ನು ಸಿದ್ಧಪಡಿಸಬೇಕೆಂದೋ
> ಹೇಳಿ ನೋಡಿ, ಮೊಬೈಲು-ಟ್ಯಾಬ್ಲೆಟ್ಟುಗಳ ಕಟ್ಟಾ ಅಭಿಮಾನಿಗಳಿಗೂ ಒಂದು ಕೀಬೋರ್ಡ್ ಇದ್ದರೆ
> ಚೆನ್ನಾಗಿತ್ತಲ್ಲ ಎನ್ನಿಸಲು ಶುರುವಾಗುತ್ತದೆ.
>
> ನಿಜ, ಹೆಚ್ಚಿನ ಟೈಪಿಂಗ್ ನಿರೀಕ್ಷಿಸುವ ಕೆಲಸಗಳಿಗೆ ಮೊಬೈಲು-ಟ್ಯಾಬ್ಲೆಟ್ಟುಗಳನ್ನು
> ಬಳಸುವುದು ಎಷ್ಟೇ ಪರಿಣತ ಬಳಕೆದಾರರಿಗಾದರೂ ಕಿರಿಕಿರಿಯ ಕೆಲಸವೇ ಸರಿ. ಹಾಗಾಗಿಯೇ ಬಹಳಷ್ಟು
> ಜನ ಅವುಗಳ ಜೊತೆಗೆ ಲ್ಯಾಪ್‌ಟಾಪನ್ನೂ  ಬಳಸುತ್ತಾರೆ: ಇಂತಿಷ್ಟು ಕೆಲಸಕ್ಕೆ ಫೋನು (ಅಥವಾ
> ಟ್ಯಾಬೆಟ್ಟು), ಮಿಕ್ಕಿದ್ದಕ್ಕೆ ಲ್ಯಾಪ್‌ಟಾಪು ಎನ್ನುವುದು ಅನೇಕರು ಪಾಲಿಸುವ ಸೂತ್ರ.
> ಹಿಂದಿನಕಾಲದ ರೇಡಿಯೋ-ಟೇಪ್ ರೆಕಾರ್ಡರ್ ಜೋಡಿಯಂತೆ.
>
> ರೇಡಿಯೋ-ಟೇಪ್‌ರೆಕಾರ್ಡರುಗಳಾದರೆ ಮನೆಯ ಮೂಲೆಯಲ್ಲೊಂದು ಕಡೆ ಕುಳಿತಿರುತ್ತಿದ್ದವು. ಆದರೆ
> ಇಂದಿನ ಗ್ಯಾಜೆಟ್‌ಗಳು ಹಾಗಲ್ಲವಲ್ಲ - ನಾವು ಹೋದಕಡೆಗೆಲ್ಲ ಅವನ್ನೂ ಕೊಂಡೊಯ್ಯುವುದು ನಮಗೆ
> ಅಭ್ಯಾಸವಾಗಿಬಿಟ್ಟಿದೆ. ಬರಿಯ ಗ್ಯಾಜೆಟ್‌ಗಳನ್ನಷ್ಟೇ ಏಕೆ, ಅವುಗಳ ಚಾರ್ಜರುಗಳನ್ನೂ
> ಹೊತ್ತುಕೊಂಡು ಹೋಗಬೇಕು. ಮೊಬೈಲಿನ ಚಾರ್ಜರ್ ಆದರೇನೋ ಸರಿ, ಲ್ಯಾಪ್‌ಟಾಪಿನ ಚಾರ್ಜರ್ ಅಂತೂ
> ಹೆಚ್ಚೂಕಡಿಮೆ ಅರ್ಧ ಲ್ಯಾಪ್‌ಟಾಪಿನಷ್ಟೇ ಭಾರವಿರುತ್ತದೆ. ಒಂದುಸಮಯ ಮೊಬೈಲಿನ ಚಾರ್ಜರನ್ನು
> ಬೇರೆಯವರಿಂದ ಕೇಳಿಕೊಂಡು ಬಳಸಬಹುದು; ಆದರೆ ಲ್ಯಾಪ್‌ಟಾಪಿಗೆ ಅದರದೇ ಚಾರ್ಜರ್ ಆಗಬೇಕು!
>
> ಪ್ರತ್ಯೇಕ ರೇಡಿಯೋ ಹಾಗೂ ಟೇಪ್ ರೆಕಾರ್ಡರುಗಳನ್ನು ಬಳಸುವ ಅನಿವಾರ್ಯತೆಯನ್ನು
> 'ಟೂ-ಇನ್-ಒನ್' ತಪ್ಪಿಸಿತಲ್ಲ, ಅಂಥದ್ದೇನಾದರೂ ಗ್ಯಾಜೆಟ್ ಲೋಕದಲ್ಲೂ ಬಂದರೆ ಈ ಸಮಸ್ಯೆ
> ಪರಿಹಾರವಾಗಬಹುದೇ?
>
> *ಹೈಬ್ರಿಡ್ ಕಂಪ್ಯೂಟರ್ *
>
>
> <https://2.bp.blogspot.com/-vZ5giuS-L4c/V8100VStTEI/AAAAAAAAfck/lEtjdiFpPiA3q5qDx_zdy7SBwnmTMdBnQCEw/s1600/able%2Bsq.jpg>
>
> ಖಂಡಿತಾ. ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನವಾಗಿ ಟೂ-ಇನ್-ಒನ್‌ಗಳು ಗ್ಯಾಜೆಟ್
> ಜಗತ್ತಿಗೆ ಈಗಾಗಲೇ ಪ್ರವೇಶಿಸಿಬಿಟ್ಟಿವೆ. ಹೈಬ್ರಿಡ್ ಕಂಪ್ಯೂಟರ್ ಅಥವಾ
> 'ಟ್ಯಾಬ್ಲೆಟ್-ಲ್ಯಾಪ್‌ಟಾಪ್ ಹೈಬ್ರಿಡ್'ಗಳೆಂದೂ ಕರೆಸಿಕೊಳ್ಳುವ ಈ ಸಾಧನಗಳು ಟ್ಯಾಬ್ಲೆಟ್
> ಹಾಗೂ ಲ್ಯಾಪ್‌ಟಾಪ್ ಕಂಪ್ಯೂಟರುಗಳ ನಡುವಿನ ವ್ಯತ್ಯಾಸವನ್ನು ನಿಧಾನಕ್ಕೆ ಹೋಗಲಾಡಿಸುತ್ತಿವೆ.
>
> ಲ್ಯಾಪ್‌ಟಾಪ್ ಕಂಪ್ಯೂಟರಿನಲ್ಲಿ ಅನುಕೂಲಕರ ಗಾತ್ರದ (ಸುಮಾರು ೧೦ರಿಂದ ೧೫ ಇಂಚು)
> ಪರದೆಯಿರುತ್ತದೆ, ಕೀಲಿಮಣೆಯೂ ಇರುತ್ತದೆ. ಇವೆರಡನ್ನೂ ಬೇಕೆಂದಾಗ ಬೇರೆಮಾಡುವಂತಿದ್ದರೆ?
> ಸಿನಿಮಾ ನೋಡುವಾಗ ಪರದೆಯನ್ನಷ್ಟೆ (ಟ್ಯಾಬ್ಲೆಟ್ಟಿನಂತೆ) ಬಳಸಿ ಇಮೇಲ್ ಟೈಪಿಸುವಾಗ
> ಕೀಲಿಮಣೆಯನ್ನು ಜೋಡಿಸಿಕೊಳ್ಳಬಹುದು. ಇಮೇಲ್ ಮುಗಿಸಿದ ಮೇಲೆ ಕೀಲಿಮಣೆ ಕಿತ್ತಿಟ್ಟರಾಯಿತು,
> ಆವರೆಗೂ ಲ್ಯಾಪ್‌ಟಾಪ್ ಆಗಿದ್ದದ್ದು ಟ್ಯಾಬ್ಲೆಟ್ ಆಗಿ ಬದಲಾಗಿಬಿಡುತ್ತದೆ! ಅಷ್ಟೇ ಅಲ್ಲ,
> ಸಾಮಾನ್ಯವಾಗಿ ಲ್ಯಾಪ್‌ಟಾಪ್‌ಗಳಲ್ಲಷ್ಟೆ ಇರುವ ಸಂಸ್ಕರಣಾ ಸಾಮರ್ಥ್ಯ, ಮತ್ತು ಅವುಗಳಲ್ಲಿ
> ನಾವು ಬಳಸುವ ತಂತ್ರಾಂಶದ ಸವಲತ್ತುಗಳು ಟ್ಯಾಬ್ಲೆಟ್ಟಿನಲ್ಲೂ ದೊರಕುವುದು ಸಾಧ್ಯವಾಗುತ್ತದೆ.
>
> ಟೂ-ಇನ್-ಒನ್ ಕಂಪ್ಯೂಟರುಗಳ ಸೃಷ್ಟಿಯ ಹಿಂದಿರುವುದು ಇದೇ ಆಲೋಚನೆ. ಇಂತಹ
> ಕಂಪ್ಯೂಟರುಗಳಲ್ಲಿ ಸಾಮಾನ್ಯ ಟ್ಯಾಬ್ಲೆಟ್ಟುಗಳಿಗಿಂತ ಕೊಂಚ ದೊಡ್ಡ ಗಾತ್ರದ (ಹಾಗೂ
> ಲ್ಯಾಪ್‌ಟಾಪ್‌ಗಿಂತ ಕೊಂಚ ಸಣ್ಣದಾದ) ಪರದೆ ಇರುವುದು ಸಾಮಾನ್ಯ. ಕೆಲವು ಮಾದರಿಗಳಲ್ಲಿ
> ಪ್ರತ್ಯೇಕ ಕೀಲಿಮಣೆ ಇದ್ದರೆ ಇನ್ನು ಕೆಲವು ಮಾದರಿಗಳಲ್ಲಿ ಪರದೆಯನ್ನು ಮುಚ್ಚುವ ಕವಚದಲ್ಲೇ
> (ಟ್ಯಾಬ್ಲೆಟ್ ಕವರ್) ಕೀಲಿಮಣೆಯೂ ಅಡಕವಾಗಿರುತ್ತದೆ. ಪ್ರತ್ಯೇಕ ಕೀಲಿಮಣೆ ಇರುವ
> ಮಾದರಿಗಳಲ್ಲಿ ಟ್ಯಾಬ್ಲೆಟ್‌ನಂತೆ ಬಳಸುವ ಭಾಗವನ್ನು ಕೀಲಿಮಣೆಯ ಮೇಲೆ (ಲ್ಯಾಪ್‌ಟಾಪ್
> ಪರದೆಯಂತೆ) ಜೋಡಿಸಿಕೊಳ್ಳುವುದು ಸಾಧ್ಯ. ಕವಚದಲ್ಲಿ ಅಡಕವಾಗಿರುವ ತೆಳುವಾದ ಕೀಲಿಮಣೆಗೆ ಈ
> ಸಾಮರ್ಥ್ಯವಿರುವುದಿಲ್ಲವಲ್ಲ, ಅಂತಹ ಮಾದರಿಗಳಲ್ಲಿ ಟ್ಯಾಬ್ಲೆಟ್‌ಗೊಂದು ಪ್ರತ್ಯೇಕ ಸ್ಟಾಂಡ್
> ಇರುತ್ತದೆ.
>
> *ನೋಶನ್ ಇಂಕ್ ಏಬಲ್*
>
>
> <https://2.bp.blogspot.com/-ndHpEVLSWQ4/V811R1dELzI/AAAAAAAAfcs/VLe12zpl_14OsRIbYibm6MgoKSKNSEokwCLcB/s1600/able%2B2.jpg>
>
> ಟೂ-ಇನ್-ಒನ್ ಪರಿಕಲ್ಪನೆ ಬಹಳಷ್ಟು ಬಳಕೆದಾರರಿಗೆ ಇಷ್ಟವಾಗಲಿದೆ ಎನ್ನುವ ನಿರೀಕ್ಷೆಯಲ್ಲಿ
> ಯಂತ್ರಾಂಶ ತಯಾರಕರೆಲ್ಲ ಇಂತಹ ಕಂಪ್ಯೂಟರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.
> ವಿಶ್ವವಿಖ್ಯಾತ ಸಂಸ್ಥೆಗಳಿಂದ ಪ್ರಾರಂಭಿಸಿ ಪ್ರಾದೇಶಿಕ ಉತ್ಪಾದಕರವರೆಗೆ ಎಲ್ಲ ಬಗೆಯ
> ಸಂಸ್ಥೆಗಳ ಉತ್ಪನ್ನಗಳನ್ನೂ ನಾವು ಟೂ-ಇನ್-ಒನ್ ಮಾರುಕಟ್ಟೆಯಲ್ಲಿ ಇದೀಗ ಕಾಣಬಹುದು.
>
> ಈ ಪೈಕಿ ಭಾರತೀಯ ಸಂಸ್ಥೆಗಳೂ ಇವೆ. ನಮ್ಮ ಬೆಂಗಳೂರಿನ ನೋಶನ್ ಇಂಕ್ ಡಿಸೈನ್ ಲ್ಯಾಬ್ಸ್
> ಕೆಲವು ವಿಶಿಷ್ಟ ಮಾದರಿಯ ಟೂ-ಇನ್-ಒನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ
> ಗಮನಸೆಳೆದಿದೆ.
>
> ಈ ಸಂಸ್ಥೆ ಇತ್ತೀಚೆಗಷ್ಟೆ ಬಿಡುಗಡೆಗೊಳಿಸಿದ ಮಾದರಿಯೇ 'ನೋಶನ್ ಇಂಕ್ ಏಬಲ್'. ರೂ. ೨೪,೯೯೦
> ಬೆಲೆಯ ಈ ಟೂ-ಇನ್-ಒನ್ ಹಲವು ಆನ್‌ಲೈನ್ ತಾಣಗಳ ಮೂಲಕ ಲಭ್ಯವಿದೆ.
>
> ಪುಟಾಣಿ ಲ್ಯಾಪ್‌ಟಾಪ್‌ನಂತೆ ಕಾಣುವ ಈ ಕಂಪ್ಯೂಟರ್ ತನ್ನ ಆಕರ್ಷಕ ವಿನ್ಯಾಸದಿಂದ ಮೊದಲ
> ನೋಟದಲ್ಲೇ ಗಮನಸೆಳೆಯುತ್ತದೆ. ಹತ್ತಿಂಚಿನ ಟಚ್‌ಸ್ಕ್ರೀನ್ ಪರದೆ, ವಿಂಡೋಸ್ ಕಾರ್ಯಾಚರಣ
> ವ್ಯವಸ್ಥೆ, ೧.೮೪ ಗಿಗಾಹರ್ಟ್ಸ್ ಸಾಮರ್ಥ್ಯದ ಇಂಟೆಲ್ ಚೆರಿ ಟ್ರೇಲ್ ಕ್ವಾಡ್ ಕೋರ್
> ಪ್ರಾಸೆಸರ್, ೪ ಜಿಬಿ ರ್‍ಯಾಮ್, ೬೪ ಜಿಬಿ ಶೇಖರಣಾ ಸಾಮರ್ಥ್ಯ, ಹೆಚ್ಚುವರಿಯಾಗಿ ೧೨೮
> ಜಿಬಿವರೆಗಿನ ಮೆಮೊರಿ ಕಾರ್ಡ್ ಬಳಸುವ ಅವಕಾಶ, ಅಂತರಜಾಲ ಸಂಪರ್ಕ ಪಡೆದುಕೊಳ್ಳಲು ತ್ರೀಜಿ
> ಸಿಮ್ ಬಳಸುವ ಸೌಲಭ್ಯ - ಇದಿಷ್ಟು ಈ ಸಾಧನದ ಮುಖ್ಯಾಂಶಗಳು. ೮೧೦೦ ಎಂಎಎಚ್ ಬ್ಯಾಟರಿ
> ಸಾಕಷ್ಟು ದೀರ್ಘಕಾಲ ಬಾಳುತ್ತದೆ.
>
> ಇಲ್ಲಿ ಟ್ಯಾಬ್ಲೆಟ್ ಭಾಗ ಅಯಸ್ಕಾಂತ ಆಧರಿತ ಜೋಡಣೆ ಬಳಸಿ ಕೀಲಿಮಣೆಯ ಭಾಗಕ್ಕೆ
> ಸೇರಿಕೊಂಡಿರುತ್ತದೆ; ಈ ಜೋಡಣೆ ಭದ್ರವಾದದ್ದೇ ಆದರೂ ಬೇಕಾದಾಗ ಸುಲಭಕ್ಕೆ
> ಬಿಡಿಸಿಕೊಳ್ಳುವುದೂ ಸಾಧ್ಯ. ಯುಎಸ್‌ಬಿ ಹಾಗೂ ಎಚ್‌ಡಿಎಂಐ ಪೋರ್ಟ್‌ಗಳು - ಸಿಮ್ ಹಾಗೂ
> ಮೆಮೊರಿ ಕಾರ್ಡ್ ಕಿಂಡಿ ಎಲ್ಲವೂ ಪರದೆಯ ಭಾಗದಲ್ಲೇ ಇರುವುದರಿಂದ ಅವನ್ನು ಕೀಲಿಮಣೆ
> ಕಿತ್ತಿಟ್ಟಾಗಲೂ ಸುಲಭಕ್ಕೆ ಬಳಸಬಹುದು. ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ಆದ್ದರಿಂದ
> ನುಡಿ-ಬರಹ ಇತ್ಯಾದಿಗಳನ್ನು ಸುಲಭವಾಗಿ ಬಳಸಬಹುದು.
>
> ಕ್ಯಾಮೆರಾ ಸಾಮರ್ಥ್ಯ ಸಾಧಾರಣ, ಹಾಗೂ ಸ್ಪೀಕರಿನಿಂದ ಹೊರಬರುವ ಧ್ವನಿ ಅಷ್ಟಕ್ಕಷ್ಟೇ
> ಎನ್ನುವುದನ್ನು ಕೊರತೆಗಳ ಪಟ್ಟಿಗೆ ಸೇರಿಸಬಹುದು. ಈ ಸಾಧನದ ಗಾತ್ರಕ್ಕೆ ಹೋಲಿಸಿದಾಗ ೬೫೫
> ಗ್ರಾಮ್ ತೂಕ ಕೊಂಚ ಹೆಚ್ಚು ಎನ್ನಿಸಬಹುದು.
>
> *ಟ್ಯಾಬ್ಲೆಟ್ಟಿಗೊಂದು ಕೀಬೋರ್ಡ್*
> ಹೊಸದಾಗಿ ಟ್ಯಾಬ್ಲೆಟ್ ಕೊಳ್ಳುವವರಿಗೆ ಇದೀಗ ಟೂ-ಇನ್-ಒನ್ ಕಂಪ್ಯೂಟರಿನತ್ತ ಹೋಗುವ
> ಆಯ್ಕೆಯೂ ಲಭ್ಯವಿದೆ ಸರಿ, ಆದರೆ ಈಗಾಗಲೇ ಟ್ಯಾಬ್ಲೆಟ್ ಕೊಂಡವರು ಏನುಮಾಡಬೇಕು? ಚಿಂತಿಸುವ
> ಅಗತ್ಯವಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಹಲವು ಟ್ಯಾಬ್ಲೆಟ್ಟುಗಳಿಗೆ ಹೊಂದುವಂತಹ
> ಕೀಲಿಮಣೆಗಳು ಇದೀಗ ದೊರಕುತ್ತಿವೆ. ಇಂತಹ ಕೀಲಿಮಣೆಗಳ ಬೆಲೆ ಕೆಲವು ನೂರು ರೂಪಾಯಿಗಳಿಂದ
> ಕೆಲವು ಸಾವಿರಗಳವರೆಗೆ ಇರುತ್ತದೆ (ಅವುಗಳ ಗುಣಮಟ್ಟ ಕೂಡ ಕೊಟ್ಟ ಬೆಲೆಗೆ ತಕ್ಕುದಾಗಿಯೇ
> ಇರುತ್ತದೆ ಎನ್ನಬಹುದು). ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್ ಜೊತೆಗೆ ಬ್ಲೂಟೂತ್ ಸಂಪರ್ಕದ
> ಮೂಲಕ ಬಳಸಬಹುದಾದ ಉತ್ತಮ ಗುಣಮಟ್ಟದ ಕೀಲಿಮಣೆಗಳೂ ಬಂದಿವೆ - ಇದರಲ್ಲಿ ಕೆಲ ಮಾದರಿಗಳು
> ಪ್ರತಿಷ್ಠಿತ ಸಂಸ್ಥೆಗಳ ಉತ್ಪನ್ನಗಳೇ.
>
> ಪ್ರತ್ಯೇಕ ಕೀಲಿಮಣೆ ಕೊಳ್ಳುವುದಿಲ್ಲ ಎನ್ನುವವರು ಯುಎಸ್‌ಬಿ ಆನ್-ದ-ಗೋ (ಓಟಿಜಿ) ಕೇಬಲ್
> ಬಳಸಿ ಡೆಸ್ಕ್‌ಟಾಪ್ ಕಂಪ್ಯೂಟರಿನ ಕೀಬೋರ್ಡನ್ನೇ ಮೊಬೈಲಿಗೆ-ಟ್ಯಾಬ್ಲೆಟ್ಟಿಗೆ ಹೊಂದಿಸಲು
> ಪ್ರಯತ್ನಿಸಬಹುದು. ನಿಮ್ಮ ಬಳಿ ವೈರ್‌ಲೆಸ್ ಕೀಬೋರ್ಡ್-ಮೌಸ್ ಜೋಡಿ ಇದ್ದರೆ ಮೊಬೈಲಿನೊಡನೆ
> ಮೌಸ್ ಕೂಡ ಕೆಲಸಮಾಡೀತು, ಪ್ರಯತ್ನಿಸಿ ನೋಡಿ!
>
> *ಸೆಪ್ಟೆಂಬರ್ ೨೦೧೬ರ ತುಷಾರದಲ್ಲಿ ಪ್ರಕಟವಾದ ಲೇಖನ*
>
>
> Hareeshkumar K
> GHS HUSKURU
> MALAVALLI TQ
> MANDYA DT
> MOB 9880328224
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to