Super writings
On 08-Sep-2016 7:04 am, "csm cbpur" <[email protected]> wrote:

>
>
> *** This message has been sent using GIONEE M2 ***
>
> -------- Original Message --------
> Subject: ಬದುಕಿನೊಳಗೊಂದಾಗಿ ಬೆರೆತ ಮಂಕುತಿಮ್ಮನ ಕಗ್ಗದ ಸೊಬಗು: ಸುರೇಶ್ ಮಡಿಕೇರಿ |
> ಪಂಜು
> From: csm cbpur <[email protected]>
> To: csm cbpur <[email protected]>
> CC:
>
> ಬದುಕಿನೊಳಗೊಂದಾಗಿ ಬೆರೆತ ಮಂಕುತಿಮ್ಮನ ಕಗ್ಗದ ಸೊಬಗು: ಸುರೇಶ್ ಮಡಿಕೇರಿ
> October 13th, 2014  editor
>
> ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ
> ಕೊರತೆಯೊಂದನು  ನೀನು ನೆನೆನೆನೆದು ಕೆರಳಿ
> ಧರೆ ಎಲ್ಲವನು ಶಪಿಸಿ ಮನದಿ ನರಕವ ನಿಲಿಸಿ
> ನರಳುವುದು ಬದುಕೇನೋ? ಮಂಕುತಿಮ್ಮ
>
> ಇದೇನೋ ಸೂರಿ ಏನೋ ಬಡಬಡಿಸ್ತಾ ಇದ್ದೀಯಾ? ಯಾರೀ ಮಂಕುತಿಮ್ಮ? ಎಂದು ಪ್ರಶ್ನಿಸಿದ ಸ್ನೇಹಿತನ
> ಮೇಲೆ ಕೋಪ ಬಂದರೂ ತೋರ್ಪಡಿಸಿಕೊಳ್ಳದೆ ಏನೂ ಇಲ್ಲ ಕಣೋ ಅದು ಡಿ.ವಿ.ಜಿ ಅವರ ಕಗ್ಗ ಎಂದೆ.
> ಹೌದಾ, ಏನಿದರ ಅರ್ಥ ಎಂದ ಅವನಿಗೆ ನನಗೆ ತಿಳಿದ ಮಟ್ಟಿಗೆ ವಿವರಿಸಿದೆ.  ಮಂಗ ತನ್ನ ಮೈಮೇಲೆ
> ಸ್ವಲ್ಪ ಗಾಯವಾದರೂ ಅದನ್ನು ಕೆರೆದು ಕೆರೆದು ಹೇಗೆ ದೊಡ್ಡದು ಮಾಡುತ್ತದೆಯೋ ಹಾಗೆ
> ಮನುಷ್ಯರಾದ ನಾವು ನಮ್ಮ ಸಣ್ಣ ಸಣ್ಣ ದು:ಖ ನೋವನ್ನು ಮತ್ತೆ ಮತ್ತೆ ನೆನೆದು ನರಳುತ್ತೇವಲ್ಲ.
> ಅಂತಹ ಬದುಕಿನ ಬಗ್ಗೆ ಡಿ.ವಿ.ಜಿಯವರು ಪ್ರಶ್ನಿಸುತ್ತಾರೆ.
>
> ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
> ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
> ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
> ಎಲ್ಲರೊಳಗೊಂದಾಗು- ಮಂಕುತಿಮ್ಮ
>
> ಜೀವನವನ್ನು ನಾವು ಬಂದ ಹಾಗೆ ಎದುರಿಸಬೇಕು. ಕಷ್ಟ ಸುಖ ಬಂದಾಗ ಅದನ್ನು ಸಮಾನವಾಗಿ
> ಸ್ವೀಕರಿಸಬೇಕು.  ಬೆಟ್ಟದ ಕೆಳಗಿನ ಹುಲ್ಲಿನಂತೆ ವಿನಯ, ವಿಧೇಯತೆಯನ್ನು ಅಳವಡಿಸಿಕೊಂಡು
> ಮನೆಗೆ ಸುವಾಸನೆ ಬೀರುವ ಮಲ್ಲಿಗೆಯಂತೆ ಮೃದು ನಡೆ-ನುಡಿಯಿಂದ ಬಾಳಬೇಕು. ಜೀವನದಲ್ಲಿ ವಿಧಿ
> ನೀಡುವ ಕಷ್ಟಗಳೆಂಬ ಮಳೆಗೆ ಹೆದರದೆ. ವಿಚಲಿತನಾಗದೆ ಕಲ್ಲಿನಂತಿರಬೇಕು, ನೊಂದವರಿಗೆ,
> ಬಡವರಿಗೆ ಬೆಲ್ಲ ಸಕ್ಕರೆಯಂತೆ ಸಿಹಿಯಾಗಿ, ಪ್ರೀತಿಯನ್ನು ತೋರಬೇಕು. ಬಡವ-ಬಲ್ಲಿದರೆನ್ನದೆ
> ಎಲ್ಲರಲ್ಲಿ ಒಂದಾಗಿ ಬಾಳಬೇಕು ಎಂಬ ಜೀವನತತ್ವವನ್ನು ಡಿ.ವಿ.ಜಿ ಅವರು ಸಾರುತ್ತಾರೆ.
>
> ಬದುಕಿನ ಬವಣೆಗಳನ್ನು ಧನಾತ್ಮಕವಾಗಿ ಸ್ವೀಕರಿಸಬೇಕೆಂದು ಸೂಚ್ಯವಾಗಿ ತಿಳಿಸುತ್ತಾರೆ. ಹೌದು
> ಸೂರಿ ನೀನು ಇಷ್ಟೆಲ್ಲ ಹೇಳಿದ ಮೇಲೆ ಶಾಲೆಯಲ್ಲಿ ಓದಿದ ಕಗ್ಗಗಳ ನೆನಪಾಯಿತು. ಹಾಗಿದ್ದರೆ
> ಅವರ ಬಗ್ಗೆ ನಿನಗೆ ಇನ್ನೇನು ಗೊತ್ತಿದೆ ಹೇಳು ನೋಡೋಣ ಎಂದೆ. ಇಲ್ಲಪ್ಪ ಅದೆಲ್ಲ ಮರೆತು
> ಹೋಗಿದೆ. ಈಗೆಲ್ಲಿ ನೆನಪು, ನಿನಗೆ ಗೊತ್ತಿರುವುದನ್ನು ಹೇಳು ಅಂದ ನನ್ನ ಸ್ನೇಹಿತ. ನನಗೂ
> ಡಿ.ವಿ.ಜಿ ಅವರೆಂದರೆ ಬಹಳ ಅಚ್ಚುಮೆಚ್ಚು. ಅವರ ಕಗ್ಗವೆಂದರೆ ಅತಿ ಪ್ರೀತಿ. ಅವರ ಬಗ್ಗೆ
> ಹೇಳಲು ತುಂಬಾ ವಿಷಯಗಳಿವೆ. ಸಂಕ್ಷಿಪ್ತವಾಗಿ ಕೆಲವು ವಿಷಯಗಳನ್ನು ಹೇಳುತ್ತೇನೆ ಕೇಳು.
>
> ಡಿ.ವಿ.ಜಿ ಅವರ ಪೂರ್ಣ ಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ. ೧೮೮೭ರ ಮಾರ್ಚ್
> ೧೭ರಂದು ಈಗಿನ ಕೋಲಾರ ಜಿಲ್ಲೆಯ ಮುಳಿಬಾಗಿಲು ತಾಲೂಕಿ( ಅಗಿನ ಮೈಸೂರು ರಾಜ್ಯ) ನಲ್ಲಿ  ಅವರ
> ಜನನವಾಯಿತು. ವೆಂಕಟರಮಣಯ್ಯ ಹಾಗೂ ಅಲಮೇಲಮ್ಮ ಅವರ ಮಾತಾಪಿತರು. ಅವರ ಮಾವ ತಿಮ್ಮಪ್ಪ ಹಾಗೂ
> ಅಜ್ಜಿ ಸಾಕಮ್ಮ (ತಾಯಿಯ ತಾಯಿ) ಬಾಲ್ಯದಲ್ಲಿ ಇವರ ಮೇಲೆ ಗಾಢವಾದ ಪ್ರಭಾವ
> ಬೀರಿದವರು.ಮೈಸೂರಿನ ಮಹಾರಾಜ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆದರು. ಮೆಟ್ರಿಕ್
> ಪರೀಕ್ಷೆಯಲ್ಲಿ ಅವರು ತೇರ್ಗಡೆಯಾಗಲಿಲ್ಲ. ಮುಂದೆ ಶಾಲೆಯಲ್ಲಿ ತನ್ನ ಶಿಕ್ಷಣವನ್ನು
> ಮುಂದುವರಿಸಲಿಲ್ಲ. ಆದರೆ ಅವರು ಎಂದಿಗೂ ನಿರಾಶವಾದಿಯಲ್ಲ. ಅವರು ಮುಂದೆ ಕಠಿಣ ಪರಿಶ್ರಮದಿಂದ
> ಖಾಸಗಿಯಾಯಾಗಿ ವೇದ, ವೇದಾಂತ, ಸಂಸ್ಕ್ರತ, ರಾಮಾಯಣ, ಮಹಾಭಾರತ, ರಾಜ್ಯಶಾಸ್ತ್ರ,
> ತತ್ವಶಾಸ್ತ್ರಗಳೊಂದಿಗೆ ದೇಶದ ಇತರ ಭಾಷೆಗಳನ್ನು ಕಲಿತುಕೊಂಡರು. ಇದರಿಂದ ಅಪಾರವಾದ
> ಜ್ಞಾನವನ್ನು ಗಳಿಸಿಕೊಂಡರು. ಆದ್ದರಿಂದಲೇ ಡಿ.ವಿ.ಜಿಯವರು ಅಧ್ಯಯನಶೀಲ ಮನಸ್ಸು
> ನಮ್ಮದಾಗಬೇಕೆಂದು ಹೇಳುತ್ತಿದ್ದರು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವಂತೆ ಅವರು ಸಲಹೆ
> ನೀಡುತ್ತಿದ್ದರು.
>
> ನಂತರ ಇವರು ಶಿಕ್ಷಕರಾಗಿ, ತದನಂತರ ಕೋಲಾರ ಚಿನ್ನದ ಗಣಿಯಲ್ಲಿ ಜೀವನ ನಿರ್ವಹಣೆಗಾಗಿ ಕೆಲಸ
> ಮಾಡುತ್ತಿದ್ದರು. ಬೆಂಗಳೂರಿಗೆ ಬಂದ ಡಿ.ವಿ.ಜಿಯವರು ’ಸೂರ್ಯೋದಯ’ ಪತ್ರಿಕೆಯಲ್ಲಿ
> ವರದಿಗಾರರಾಗಿ ಕಾರ್ಯ ನಿರ್ವಹಿಸಿದರು. ಆದರೆ ಕಾರಣಾಂತರದಿಂದ ಆ ಪತ್ರಿಕೆ ಮುಚ್ಚಿಹೋಯಿತು.
> ಹಲವಾರು ಪತ್ರಿಕೆಗಳಿಗೆ ಅವರು ಆಗ ಲೇಖನಗಳನ್ನು ಬರೆಯುತ್ತಿದ್ದರು. ಆಂಗ್ಲ ಪತ್ರಿಕೆಗೂ
> ಲೇಖನಗಳನ್ನು ಬರೆದರು. ’ಮೈಸೂರು ಟೈಮ್ಸ್’ ಎಂಬ ಆಂಗ್ಲ ಪತ್ರಿಕೆಯಲ್ಲಿ ಸಹ ಸಂಪಾದಕರಾಗಿ
> ಕಾರ್ಯನಿರ್ವಹಿಸಿದ್ದರು. ದಿವಾನ್ ರಂಗಾಚಾರ್ಯರ ಬಗ್ಗೆ ಅವರು ಬರೆದ ಲೇಖನದಿಂದ ಅವರ
> ಜೀವನಕ್ಕೆ ಹೊಸ ತಿರುವು ದೊರೆಯಿತು. ನಂತರ ಬರವಣಿಗೆಯನ್ನು ಕೇವಲ ಹವ್ಯಾಸವನ್ನಾಗಿ
> ಸ್ವೀಕರಿಸದೆ ವೃತ್ತಿಯನ್ನಾಗಿಸಿಕೊಂಡು ಸತತವಾಗಿ ಅಧ್ಯಯನ, ಬರವಣಿಗೆಯಲ್ಲಿ ತಮ್ಮನ್ನು
> ತೊಡಗಿಸಿಕೊಂಡಿಸಿಕೊಂಡರು. ಅನುವಾದ, ಪ್ರಬಂಧ, ರಾಜಕೀಯ ವಿಶ್ಲೇಷಣೆ, ತತ್ವಶಾಸ್ತ್ರ,
> ಧಾರ್ಮಿಕ ವಿಚಾರಗಳು, ಮಕ್ಕಳ ಕಥೆ, ಕಾವ್ಯ, ನಾಟಕ, ಧರ್ಮಜಿಜ್ಞಾಸೆ ಮೊದಲಾದ ವಿಷಯಗಳಲ್ಲಿ
> ಅಧ್ಯಯನಪೂರ್ಣ ಬರವಣಿಗೆಗೆಳು, ಪುಸ್ತಕಗಳು ಪ್ರಕಟವಾದವು. ’ಬಾಳಿಗೊಂದು ನಂಬಿಕೆ, ದೇವರು,
> ರಾಜ್ಯಶಾಸ್ತ್ರ, ಮ್ಯಾಕ್‌ಬೆತ್, ಭಗವದ್ಗೀತಾ ತಾತ್ಪರ್ಯ, ಈಸೋಪನಿಷತ್, ಮಂಕುತಿಮ್ಮನ ಕಗ್ಗ,
> ಮರುಳಮುನಿಯನ ಕಗ್ಗ, ಓಮರನ ಹೊಸಗೆ ಮುಂತಾದವು ಪ್ರಮುಖ ಕೃತಿಗಳು. ಮಂಕುತಿಮ್ಮನ ಕಗ್ಗ ಅವರಿಗೆ
> ಪ್ರಸಿದ್ಧಿಯನ್ನು ತಂದುಕೊಟ್ಟಿತು. ಇಂತಹ ಮನಸ್ಸನ್ನು ಮುಟ್ಟುವ, ಬುದ್ದಿಯನ್ನು ತಟ್ಟುವ,
> ಹೃದಯದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲುವ ಶಕ್ತಿಯನ್ನೊಳಗೊಂಡ ಕಗ್ಗ ರಚಿಸಿದ ಕೀರ್ತಿ
> ಡಿ.ವಿ.ಜಿ ಅವರದ್ದು. ತಾವು ನಂಬಿದ್ದನ್ನು ಅನುಭವಿಸಿದ್ದನ್ನು ಹಾಗೂ ಓದಿ ಕೇಳಿ,
> ತಿಳಿದಿದ್ದನ್ನು ತಿಳಿಯಾಗಿ ಎಲ್ಲರಿಗೂ ತಿಳಿಯುವಂತೆ ತಿಳಿಸಿದ ಅವರ ಕಗ್ಗಗಳು
> ವಿಶಿಷ್ಟವಾದದ್ದು. ಇವುಗಳ ತುಂಬ ಸ್ಪುರಿಸುವ ಅಧ್ಯಾತ್ಮಿಕ ಹಾಗೂ ಅನುಭಾವಗಳ ಸಂಚಾರ ನೇರವಾಗಿ
> ಮನಸ್ಸಿಗೆ ತಟ್ಟುತ್ತವೆ. ಆದ್ದರಿಂದಲೇ ಅದು ಓದುಗನಿಗೆ ಇಷ್ಟವಾಗುತ್ತದೆ.
>
> ಇದು ಅವರ ಸಾಹಿತ್ಯ ಪರಿಚಾರಿಕೆಯಾದರೆ ಅವರೊಬ್ಬ ಉತ್ತಮ ಸಮಾಜಸೇವಕರೂ ಅಗಿದ್ದರು ಎನ್ನುವುದು
> ಬಹುಶ: ನಿನಗೆ ಗೊತ್ತಿರಲಿಕ್ಕಿಲ್ಲ. ಅವರು ೧೯೩೫ರಲ್ಲಿ ’ಗೋಖಲೆ ಸಾರ್ವಜನಿಕ ವಿಚಾರ
> ಸಂಸ್ಥೆ’ಯನ್ನು ಆರಂಭಿಸಿದರು. ತಮ್ಮ ಪುಸ್ತಕದಿಂದ ಬಂದ ಆದಾಯ, ತಮಗೆ ದೊರೆತ ಪುರಸ್ಕಾರದ ಹಣ,
> ಜೊತೆಗೆ ತಮ್ಮ ಪುಸ್ತಕದ ಹಕ್ಕನ್ನು ತನ್ನ ಪರಿವಾರಕ್ಕೆ ನೀಡದೆ ಅವರು ಈ ಸಂಸ್ಥೆಗೆ ನೀಡಿದ್ದು
> ಸಣ್ಣ ಮಾತಲ್ಲ. ಹೌದೇನು? ತನ್ನ ಸರ್ವಸ್ವವನ್ನು ಧಾರೆಯೆರೆದ ಇವರನ್ನು ಸರಕಾರ
> ಗೌರವಿಸಲಿಲ್ಲವೇ? ಎಂದು ನನ್ನ ಸ್ನೇಹಿತ ಮತ್ತೆ ಮಧ್ಯೆ ಬಾಯಿ ಹಾಕಿದ. ನೋಡು ಗೆಳೆಯ
> ಡಿ.ವಿ.ಜಿ ಅವರು ಎಂದಿಗೂ ಪ್ರಶಸ್ತಿ, ಪುರಸ್ಕಾರದ ಹಿಂದೆ ಬಿದ್ದವರಲ್ಲ. ಅವರ ಮುಖ್ಯ ಧ್ಯೇಯ
> ಉನ್ನತ ಜೀವನಾದರ್ಶಗಳೇ ಆಗಿತ್ತು. ಅದನ್ನೇ ಅವರು ತಮ್ಮ ಕಗ್ಗದಲ್ಲಿ ಪಡಿಮೂಡಿಸಿದ್ದಾರೆ.
> ಬದುಕಿನಲ್ಲಿ ಉಲ್ಲಾಸ ತುಂಬುವುದು, ಕಷ್ಟದಲ್ಲಿರುವವರಿಗೆ ಸಾಂತ್ವನ ಹೇಳುವುದು, ಧೈರ್ಯ
> ತುಂಬುವುದು ಅವರ ಕಗ್ಗದ ಮೂಲ ಉದ್ದೇಶವಾಗಿತ್ತು. ಅದನ್ನು ಜನರು ಪ್ರೀತಿಯಿಂದ ಸ್ವೀಕರಿಸಿದರು
> ಕೂಡಾ. ಆದ್ದರಿಂದಲೇ ಅವರನ್ನು ’ಆಧುನಿಕ ಬೃಹ್ಮ’ ಎಂದು ಕರೆದರು.
>
> ಡಿ.ವಿ.ಜಿ ಅವರು ೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ
> ಅಧ್ಯಕ್ಷರಾಗಿದ್ದರು. ೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾಲಯ ಡಿ.ವಿ.ಜಿ ಅವರ ಸಾಹಿತ್ಯ ಮತ್ತು
> ಪತ್ರಿಕೋದ್ಯಮದಲ್ಲಿನ ವಿಶಿಷ್ಟ ಸೇವೆಯನ್ನು ಗುರುತಿಸಿ ಡಿ.ಲಿಟ್ ಪದವಿ ನೀಡಿ ಗೌರವಿಸಿತು.
> ೧೯೬೭ರಲ್ಲಿ ಶ್ರೀಮದ್ಭಾಗವತಾ ಗೀತಾ ತಾತ್ಪರ್ಯ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ
> ಪ್ರಶಸ್ತಿ ನೀಡಿ ಗೌರವಿಸಿತು. ೧೯೭೪ರಲ್ಲಿ ಭಾರತ ಸರಕಾರ ಪದ್ಮಭೂಷಣ ಪ್ರಸಸ್ತಿ ನೀಡಿ
> ಗೌರವಿಸಿತು. ೧೯೮೮ರಲ್ಲಿ ಡಿ.ವಿ.ಜಿ ಅವರ ಅಂಚೆಚೀಟಿಯೂ ಬಿಡುಗಡೆಗೊಂಡಿತು. ಬ್ಯೂಗಲ್
> ಪಾರ್ಕಲ್ಲಿ ಅವರ ಪ್ರತಿಮೆಯೂ ಇದೆ. ೧೯೭೦ರಲ್ಲಿ ಆಗಿನ ಕರ್ನಾಟಕದ ಮುಖ್ಯಮಂತ್ರಿ ವೀರೇಂದ್ರ
> ಪಾಟೀಲ್ ಅವರು  ೯೦,೦೦೦ರೂ ನಗದು ಬಹುಮಾನವನ್ನು ಅವರ  ಸಾಹಿತ್ಯ ಸೇವೆಗೆ ಪುರಸ್ಕಾರವಾಗಿ
> ನೀಡಿದ್ದರು. ಆದರೆ ಉದಾರಿಯಾದ ಡಿ.ವಿ.ಜಿಯವರು ಆ ಮೊತ್ತವನ್ನು ತಾನು ಸ್ಥಾಪಿಸಿದ ’ಗೋಖಲೆ
> ಟ್ರಸ್ಟ್’ಗೆ ದಾನವಾಗಿ ನೀಡಿದ್ದರು.
>
> ಡಿ.ವಿ.ಜಿ ಅವರ ನಾಲ್ಕು ಸಾಲಿನ ಕಗ್ಗಗಳಲ್ಲಿ ಅಗಾಧವಾದ ಅರ್ಥಗಳು ಅಡಗಿವೆ.
>
> ಅಕ್ಕಿಯೊಳಗನ್ನವನು ಮೊದಲಾರು ಕಂಡವರು
> ಅಕ್ಕರದ ಬರಹಕ್ಕೆ ಮೊದಲಿಗನದಾರು
> ಲಿಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ
> ದಕ್ಕುವುದೇ ಜಸ ನಿನಗೆ ’ಮಂಕುತಿಮ್ಮ’
>
> ಈ ಕಗ್ಗವನ್ನೇ ನೋಡು. ನಾವು ಆಲೋಚಿಸದ ವಿಷಯಗಳ ಕುರಿತು ಅವರು ಬೆಳಕು ಚೆಲ್ಲುತ್ತಾರೆ.
> ಅಕ್ಕಿಯನ್ನು ಬೇಯಿಸಿದರೆ ಅದು ಅನ್ನವಾಗಿ ಮಾರ್ಪಡುತ್ತದೆ ಎಂದು ಮೊದಲು ಯಾರು ಕಂಡು
> ಹಿಡಿದವರೆಂದು ಯಾರಿಗಾದರೂ ಗೊತ್ತಿದೆಯೋ?, ಅಥವಾ ನಾವು ಬರೆಯುವಂತಹ ನಮ್ಮ ಪ್ರೀತಿಯ
> ಅಕ್ಷರಗಳನ್ನು ಮೊದಲು ಬರೆದವನಾರು ಎಂದೇನಾದರೂ ಗೊತ್ತಿದೆಯೇ?, ಈ ಜಗತ್ತಿನಲ್ಲಿ ತನ್ನ
> ಬಂಧುಗಳು ಯಾರು ಎಷ್ಟು ಎಂಬುದನ್ನು ಲೆಕ್ಕವಿರಿಸಿದವರು ಎಷ್ಟು ಜನರಿದ್ದಾರೆ ಹೇಳು? ಕೆಲವರು
> ಹೆಸರು, ಕೀರ್ತಿಗಾಗಿ ಏನನ್ನೂ ಬೇಕಾದರೂ ಮಾಡಲು ಹಿಂಜರಿಯುವುದಿಲ್ಲ. ಅಂತಹವರಿಗೆ ಡಿ.ವಿ.ಜಿ
> ಅವರು ಸೂಚ್ಯವಾಗಿ ಬುದ್ಧಿವಾದವನ್ನು ಹೇಳುತ್ತಾರೆ. ಕೀರ್ತಿ ಎನ್ನುವುದು ನಿನಗೆ ಬೇಕೇ? ಅದು
> ದೊರೆಯುವುದೂ ಅಷ್ಟು ಸುಲಭವಲ್ಲ. ಅದಕ್ಕಾಗಿ ಸತತ ಪ್ರಯತ್ನ ಮಾಡಬೇಕು ಎಂಬ ತತ್ವ
> ಅಡಗಿರುವುದನ್ನು  ಎಂದು ನಾವು ಅರ್ಥೈಸಿಕೊಳ್ಳಬಹುದು.
>
> ’ಮಂಕುತಿಮ್ಮನ ಕಗ್ಗ’ ಎನ್ನುವುದು ಬಹಳ ವಿಸ್ತಾರವಾದ ವಿಷಯ. ಅದರ ಬಗ್ಗೆ ಹೇಳುವುದು,
> ಬರೆಯುವುದು ಎಂದರೆ ಅದು ದುಸ್ಸಾಹಸವೇ ಸರಿ. ಅವರು ಬರೆದ ಎಲ್ಲ ಕಗ್ಗಗಳೂ ಸುಲಭದಲ್ಲಿ
> ಅರ್ಥವಾಗುವುದಿಲ್ಲ. ಅದರಲ್ಲಿ ಅನೇಕ ಗೂಡಾರ್ಥಗಳೂ ಇವೆ. ಅದನ್ನು ಸರಿಯಾಗಿ ಓದಿ ಮನನ
> ಮಾಡಿಕೊಂಡಾಗ ಅರ್ಥೈಸಿಕೊಳ್ಳಬಹುದು. ಇಂದು ಕನ್ನಡ ಓದುವವರು, ಮಾತನಾಡುವವರು
> ಕಡಿಮೆಯಾಗುತ್ತಿದ್ದಾರೆ. ಕಗ್ಗದ ಮರ್ಮವನ್ನು ನಮ್ಮ ಮುಂದಿನ ಪೀಳಿಗೆಗೂ ಅರ್ಥೈಸುವಂತೆ
> ಮಾಡಬೇಕಾಗಿದೆ. ಕಗ್ಗವನ್ನು ಎಲ್ಲರೂ ಸುಲಭವಾಗಿ ತಿಳಿದುಕೊಳ್ಳುವಂತೆ ಮಾಡುವಲ್ಲಿ ಹಿರಿಯ
> ಸಾಹಿತಿಗಳು, ಕವಿಗಳು, ಮೇಧಾವಿಗಳು ಮಾಡಬೇಕಾಗಿದೆ. ನಾವು ಕರ್ನಾಟಕದವರು. ನಾವೇ ಕನ್ನಡ
> ಓದಲಿಲ್ಲಾಂದ್ರೆ, ಇಂಥ ಅಮೂಲ್ಯ ಕೃತಿಗಳನ್ನು ಓದುವವರಾರು? ನಮ್ಮಲ್ಲಿ ಇಂದು ಆಂಗ್ಲ ವ್ಯಾಮೋಹ
> ಹೆಚ್ಚುತ್ತಿದ್ದು ಕನ್ನಡ ಪರ ಕಾಳಜಿ ಕಡಿಮೆಯಾಗುತ್ತಿರುವುದು ಖೇದನೀಯ ಸಂಗತಿ ಅಲ್ಲವೇನೋ?
> ಕನ್ನಡವನ್ನು ಕಲಿಯದೇ ಇದ್ದರೆ ನಮ್ಮ ಕನ್ನಡ ಸಾಹಿತ್ಯದ ಅಮೂಲ್ಯ ಕೃತಿಗಳನ್ನು ಓದುವುದರಿಂದ
> ನಾವು ವಂಚಿತರಾದಂತೆಯೇ. ಮಂಕುತಿಮ್ಮನ ಕಗ್ಗವಂತೂ ಕನ್ನಡದ ಭಗವದ್ಗೀತೆ ಅಂತಾರೆ. ಇದು
> ಅರ್ಥೈಸಲು ಕಠಿಣ ಅನಿಸಿದರೆ ಶಿಕ್ಷಕರು ಮಕ್ಕಳಿಗೆ ಅದರ ಸಾರವನ್ನು ತಿಳಿಯಪಡಿಸಬೇಕು. ಆ ಮೂಲಕ
> ಅವರಲ್ಲಿ ಸಾಹಿತ್ಯಾಭಿರುಚಿಯನ್ನು ಮೂಡಿಸಬೇಕು. ಅಷ್ಟೇ ಅಲ್ಲ ನಾವು ಓದಿದ ಒಳ್ಳೆಯ ಪುಸ್ತಕದ
> ಬಗ್ಗೆ ಸ್ನೇಹಿತರ,  ಕುಟುಂಬದವರ ಜೊತೆ ಚರ್ಚಿಸಬೇಕು. ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿದಂತೆ
> ನಮ್ಮಲ್ಲಿ ಜ್ಞಾನಶಕ್ತಿ ಹೆಚ್ಚುತ್ತದೆ. ನಮ್ಮಲ್ಲಿ ಧನಾತ್ಮಕ ಅಂಶಗಳು ಹೆಚ್ಚಾಗುತ್ತದೆ.
>
> ಇರಲಿ ಬಿಡು ಈಗ ನಾವು ಮತ್ತೆ ಕಗ್ಗದ ಕಡೆ ಬರೋಣ. ನಾನು ನಿನ್ನಲ್ಲಿ ಹೇಳಿದೆನಲ್ಲ
> ಮಂಕುತಿಮ್ಮನ ಕಗ್ಗ ಅದು ಆದಿ ಪ್ರಾಸದಲ್ಲಿ ಬರೆದಿರೋದು. ಸುಮಾರು ೯೪೫ ಪದ್ಯಗಳು ಅಥವಾ ನಾವು
> ಕಗ್ಗ ಅಂತ ಏನು ಕರೆಯುತ್ತೇವೆಯೋ ಅದು ಇದರಲ್ಲಿ ಇದೆ. ಇದನ್ನು ಮುಕ್ತಕಗಳು, ಚೌಪದಿ ಅಂತಾನು
> ಅನ್ನುತ್ತಾರೆ. ಡಿ.ವಿ.ಜಿ ಅವರು ಒಂದು ಕಡೆ
>
> ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ
> ಅವನರಿವಿಗೆಟುಕುವೊಲೊಂದಾತ್ಮನಯವ
> ಹವಣಿಸಿದನಿದನು ಪಾಮರಜನರ ಮಾತಿನಲಿ
> ಕವನ ನೆನಪಿಗೆ ಸುಲಭ-ಮಂಕುತಿಮ್ಮ
>
> ನಾನು ಕವಿಯಲ್ಲ. ವಿಶೇಷವಾದ ಜ್ಞಾನವುಳ್ಳವನಲ್ಲ. ಈ ಕಗ್ಗವನ್ನು ನಾನು ಸಾಮಾನ್ಯ ಜನರಿಗಾಗಿ
> ಬರೆದಿರುವೆನು. ಇದರಲ್ಲಿ ಜೀವನ ಸತ್ಯ, ಸತತ ಓದು ಹಾಗೂ ಅನುಭವದ ಸಾರವಿದೆ ಎಂದು
> ಹೇಳಿಕೊಂಡಿದ್ದಾರೆ. ಈ ರೀತಿ ನಾಲ್ಕು ಸಾಲುಗಳಲ್ಲಿ ಬರೆದುದು ಓದಿ ನೆನಪಿಡುವುದು ಕೂಡಾ ಸುಲಭ
> ಎಂದು ತಾನು ಆರಿಸಿಕೊಂಡ ಕಗ್ಗದ ಶೈಲಿಯ ಬಗ್ಗೆಯೂ ಹೇಳಿದ್ದಾರೆ.
>
> ನೋಡು ಈ ನಾಲ್ಕೇ ಸಾಲಿನ ಕಗ್ಗದಲ್ಲಿ ಬಹಳ ಅರ್ಥವ್ಯಾಪ್ತಿ ಅಡಗಿದೆ. ನಾವು ಮತ್ತೆ ಮತ್ತೆ
> ಓದಿದಾಗ ಹೊಸ ಹೊಸ  ಅರ್ಥಗಳು  ಹೊಳೆಯುತ್ತದೆ. ಅಥವಾ ಬೇರೆ ಬೇರೆ ಓದುಗರು ಅದನ್ನು
> ಭಿನ್ನವಾಗಿ ಅರ್ಥೈಸಿಕೊಳ್ಳಬಹುದು. ನಮ್ಮ ಅನುಭವ, ಚಿಂತನೆಯನ್ನೇ ಈ ಕಗ್ಗಗಳು
> ಬಿಂಬಿಸುತ್ತವೆ. ಈ ಕಗ್ಗವನ್ನೇ ನೋಡು
>
> ಗಿಡದಿ ನಗುತ್ತಿರುವ ಹೂವು ಪ್ರಕೃತಿಸಖನಿಗೆ ಚಂದ
> ಮಡದಿ ಮುಡಿದಿರುವ ಹೂವು ಯುವಕಂಗೆ ಚಂದ
> ಗುಡಿಯೊಳಗೆ ಕೊಡುವ ಹೂವು ದೈವಭಕ್ತಗೆ ಚಂದ
> ಬಿಡಿಗಾಸು ಹೂವಳಿಗೆ -ಮಂಕುತಿಮ್ಮ
>
> ಇಲ್ಲಿ ಪ್ರತಿಮೆ ಕೇವಲ ಒಂದು ಹೂವು. ಅದೇ ಹೂವು ಒಂದೊಂದು ಕಡೆಯಲ್ಲಿ ಒಬ್ಬೊಬ್ಬರಿಗೆ ಚಂದ.
> ಪ್ರಕೃತಿಪ್ರಿಯರಿಗೆ ಅದು ಗಿಡದಲ್ಲಿ ಚಂದ ಕಂಡರೆ, ಯುವಕ ಅದನ್ನು ತನ್ನ ಮಡದಿಯ ಮುಡಿಯಲ್ಲಿ
> ಕಂಡು ಆ ಸಂತೋಷವನ್ನು ಕಾಣುತ್ತಾನೆ. ದೇವರ ಅರ್ಚನೆಯ ನಂತರ ಆ ದೇವರ ಮುಡಿಯಲ್ಲಿನ ಹೂವನ್ನು
> ದೈವಭಕ್ತರು ಭಕ್ತಿ ಶ್ರದ್ಧೆಯಿಂದ ಕಾಣುತ್ತಾರೆ. ಆದರೆ ಆ ಹೂವನ್ನು ಮಾರುವ ಹೂವಾಡಗಿತ್ತಿಗೆ
> ಅದರಿಂದ ಬರುವ ಬಿಡಿಗಾಸು ಮಾತ್ರ ಮುಖ್ಯವಾಗಿರುತ್ತದೆ. ಅದು ಆಕೆಯ ಜೀವನ ನಿರ್ವಹಣೆಯ
> ಮಾರ್ಗವಾಗಿರುತ್ತದೆ.ಇಂತಹ ತುಂಬ ಅರ್ಥ ಕೊಡುವ ನಾಲ್ಕೇ ಸಾಲಿನ ಕಗ್ಗಗಳು ಪ್ರತಿಯೊಬ್ಬರ
> ಪ್ರೀತಿಯನ್ನು ಗಳಿಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ನೀನು ನಿನ್ನ ಜೀವನದ ಜಂಜಾಟದಲ್ಲಿ
> ಅದನ್ನು ಮರೆತಿರಬಹುದು. ಆದರೆ ಅದರಲ್ಲಿನ ತತ್ವಗಳನ್ನು ನೀನು, ನಾನು, ಪ್ರತಿಯೊಬ್ಬರೂ
> ಅನುಭವಿಸುತ್ತಾರೆ. ನಾನು ಹೇಳಿದ ಈ ಎಲ್ಲಾ ವಿಷಯಗಳಲ್ಲಿ ತಪ್ಪು ಕಂಡರೆ ಕ್ಷಮೆ ಇರಲಿ. ಆ
> ತಪ್ಪುಗಳನ್ನು ಮತ್ತೆ ಮತ್ತೆ ಸರಿಪಡಿಸುವ ಭಾಗ್ಯ ದೊರೆಯಲಿ. ಕನ್ನಡ ಸಾಹಿತ್ಯದ ಇಂತಹ ಅಮೂಲ್ಯ
> ಕೃತಿಗಳನ್ನು, ಕೃತಿಕಾರರನ್ನು ಸದೈವ ನೆನೆಯುವುದು ನಮ್ಮ ಕರ್ತವ್ಯ.  ಒಬ್ಬ ಮಹಾನ್
> ತತ್ವಜ್ಞಾನಿ, ಪತ್ರಕರ್ತ, ಸಾಹಿತಿ, ಸಮಾಜಸೇವಕರಾಗಿದ್ದ  ಡಿವಿ.ಜಿ ಅವರು ೧೯೭೫ರ ಅಕ್ಟೋಬರ್
> ೭ರಂದು ಇಹಲೋಕ ತ್ಯಜಿಸಿದರು.
>
> ನನಗೆ ಏನಾದರೂ ಬೇಸರ ಆದರೆ ನಾನು ಈ ಕಗ್ಗಗಳನ್ನು ನೆನಪಿಸಿಕೊಳ್ಳುತ್ತೇನೆ. ಮನಸ್ಸಿಗೆ
> ನೋವಾದಾಗ ಕಗ್ಗಗಳನ್ನು ಮೆಲುಕು ಹಾಕುತ್ತಾ ಅದರಲ್ಲಿ ಅಡಗಿರುವ ತತ್ವವನ್ನು  ಜೀವನದಲ್ಲಿ
> ಅಳವಡಿಸುವ ಪ್ರಯತ್ನ ಮಾಡುತ್ತೇನೆ. ಹಾಗೆ ಇಂದು ನಿನ್ನಲ್ಲಿ ಈ ಎಲ್ಲಾ ವಿಷಯಗಳನ್ನು
> ಹೇಳಿಕೊಂಡೆ ಕಣೋ. ಸಮಯದ ಅರಿವೇ ಆಗಲಿಲ್ಲ. ನಡಿ, ನಮ್ಮ ಕೆಲಸದ ಸಮಯವಾಯಿತು. ನನಗೆ ಸಮಯ
> ಸಿಕ್ಕಾಗ ಓದುತ್ತೇನೆ. ನೀನು ಕೂಡಾ ಓದು. ಕನ್ನಡವನ್ನು, ಕನ್ನಡದ ಮಹಾನ್ ಸಾಹಿತಿಗಳನ್ನು
> ಮರೆಯದೇ ನೆನಪಿಸಬೇಕಾದುದು ನಮ್ಮ ಕರ್ತವ್ಯ. ಸಿರಿಗನ್ನಡಂ
> ಗೆಲ್ಗೆ.
>
> *****
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to